ಸೋಮವಾರ, ಜೂನ್ 13, 2016
ಟಿಪ್ಪು –ತಪ್ಪು! ಏನೀದು ಟಿಪ್ಪು ಸುಲ್ತಾನ್ ಜಯಂತಿ.?
ಸ್ವಾಭಿಮಾನ, ಸಾಹಸ, ಶೌರ್ಯಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್ !ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಟಿಪ್ಪು ಸುಲ್ತಾನ್ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ, ನರಿಯಂತೆ ನೂರು ವರ್ಷ ಬದುಕುವ ಬದಲು ಹುಲಿಯಂತೆ ಮೂರು ವರ್ಷ ಬದುಕುತ್ತೇನೆ ಎಂದು ಗರ್ಜಿಸಿದ ಸಾಹಸಿ ಮೈಸೂರು ಹುಲಿ !
ಟಿಪ್ಪು ಸುಲ್ತಾನ್ ಅವರ ಜನ್ಮ ವಾರ್ಷಿಕೋತ್ಸವವನ್ನು ನಾಡಿನೆಲ್ಲೆಡೆ ಆಚರಿಸಲು ಕರ್ನಾಟಕ ಸರ್ಕಾರ ಇತ್ತೀಚಿಗೆ ನಿರ್ಧರಿಸಿತ್ತು ಇದರಿಂದ ಉಂಟಾದ ಗೊಂದಲ, ಗಲಭೆ, ಸಾವು ಎಲ್ಲವೂ ತಮಗೆ ಗೊತ್ತಿರುವುದೇ .. ಟಿಪ್ಪು ಜಯಂತಿ ಆಚರಿಸಬೇಕು ಬೇಡ ಎ೦ಬ ಪರ –ವಿರೋಧ ದ ಅಲೆಗಳ ಮಧ್ಯೆ ಅಂತೂ ಕೆಲೆವೆಡೆ ನೆರವೆರಿದ್ದು ಬೇರೆ ವಿಚಾರ .
ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಈ ವರ್ಷ ರಾಜ್ಯ ಸರ್ಕಾರ ತಕರಾರು ತೆಗೆದು ಬಹಳಷ್ಟು ಸಾವು ನೋವು ಗೊಂದಲಕ್ಕೆ ಕಾರಣವಾಯಿತು ,,ಕೋಮು ಸಾಮರಸ್ಯ ಕ್ಕ ಕೂಡಾ ಕಾರಣ ವಾಯಿತು .. ಟಿಪ್ಪು ಜನಿಸಿ ,ಮರಣ ಹೊಂದಿ ಅದೆಷ್ಟು ವರ್ಷಗಳು ಗತಿಸಿ ಹೋಗಿದೆ ಅದೆಷ್ಟೋ ಸರಕಾರ ಬಂದೂ ಹೋಗಿವೆ. ಆದರೆ ಈ ವರ್ಷ ಮಾತ್ರ ಸರಕಾರಕ್ಕೆ ಟಿಪ್ಪು ಸುಲ್ತಾನ್ ನೆನಪು ಆಗಿದ್ದೋ ಯಾಕೋ ?ಟಿಪ್ಪು ಜಯಂತಿ ಆಚರಣೆ ಒಳ್ಳೆದೇ ..ಮಾಡಬೇಕಾದ್ದು ನಮ್ಮ ಕರ್ತವ್ಯ ..ಎಲ್ಲದಕ್ಕೂ ,ಎಲ್ಲಾರಿಗೂ ಒನೊಂದು ದಿನ ಆಚರಣೆ ಇದೆ .. ಹಲವು ಧರ್ಮೀಯರ ನಾಡು ಭಾರತ ದೇಶ ಯಾವತ್ತೂ ಧರ್ಮ ಜನಾಂಗ ಎಂಬ ಬೇಧ ಭಾವನ್ನು ತೋರುವಂತಿಲ್ಲ ಸ೦ವಿಧಾನದ ನಿಯಮ .. ಆದರೆ ಇಷ್ಟು ದಿನ ಮಮ್ಮಲ ಮಲಗಿದ್ದ ಸರ್ಕಾರ ಈಗ ತಟ್ಟನೆ ನನೆಪಾಗಿದ್ದು ಯಾಕೆ ? ಇದು ಟಿಪ್ಪುಗೆ ಗೌರವ ಕ್ಕಿಂತ ಅಗೌರವ ಜಾಸ್ತಿ ಎನ್ನುವುದು ನನ್ನ ಕಲ್ಪನೆ . ಇನ್ನು ಟಿಪ್ಪು ಅಭಿಮಾನಿಗಳು ಟಿಪ್ಪು ಜಯಂತಿ ಆಚರಣೆ ಸರಿಯಾದದ್ದೆ ಎ೦ದು ಹೋರಾಟಕ್ಕೆ ಇಳಿದರೇ ವಿರೋಧಿಗಳು ಸಹಾ ಅಷ್ಟೇ ಹುಟ್ಟಿ ಕೊಂಡಿದ್ದ೦ತೂ ಸುಳ್ಳಲ್ಲ .. ಟಿಪ್ಪು ಮುಸಲ್ಮಾನನಾಗಿದ್ದು ಆತನ ಆಡಳಿತದಲ್ಲಿ ಸಾಕಷ್ಟು ನಡತೆ ಕೆಟ್ಟ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಶೀಲ ಹರಣ ಸೇರಿದಂತೆ , ಇಸ್ಲ್ಲಾಂ ಧರ್ಮಕ್ಕೆ ಆತ ಇತರ ಧರ್ಮೀಯರನ್ನು ಮತಾಂತರಗೊಳಿಸುತ್ತಿದ್ದ .. ಕ್ರೂರತನ ಸರ್ವಾದಳಿತ ಆತನಲಿತ್ತು ,ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಹಾಗಾಗಿ ಆತನ ಜನ್ಮ ದಿನವನ್ನು ಆಚರಿಸುವುದು ತಪ್ಪು ಎಂದು ಕಿರಿಕಾರಿದ್ದವು .. ಒಟ್ಟಾರೆ ಕೆಲವೆಡೆ ಆತನ ಬಗೆಗೆ ಉತ್ತಮ ಪ್ರಶಂಸೆ ಬಂದರೆ ಹಲವೆಡೆ ಗೊಂದಲ ಹರತಾಳಗಳೂ ಉ೦ಟಾಗಿದ್ದವು .
ಏನೆ ಇರಲಿ ಟಿಪ್ಪು ಬಗ್ಗೆ ಒಂದ್ಚೂರು :ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬಂದೂಕಿನ ಶಕ್ತಿಯಿಂದ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಬ್ರಿಟಿಷರ ವಿರುದ್ದ ಹೋರಾಡಿದವರಲ್ಲಿ ಪ್ರಮುಖ ಹೆಸರು ಟಿಪ್ಪು ಸುಲ್ತಾನ್. ತಮ್ಮ ನಿಜನಾಮಧೇಯ ಶೇರ್-ಎ-ಮೈಸೂರ್ !ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ನಿಂತು ಅವರ ಆಕ್ರಮಣವನ್ನು ಎದುರಿಸಿ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯತ್ನಿಸಿದ ಮಹಾನ್ ಪರಾಕ್ರಮಿಗಳಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲ ರಾಜರ ಮತ್ತು ಸಾಮಂತರಲ್ಲಿ ಒಗಟ್ಟು ಮೂಡಿಸಿ ಇಡಿಯ ದಕ್ಷಿಣ ಭಾರತವನ್ನೇ ಬ್ರಿಟಿಷರ ತೆಕ್ಕೆಯಿಂದ ರಕ್ಷಿಸಿಕೊಂಡ ಕಾರಣಕ್ಕಾಗಿಯೇ ಅವರಿಗೆ ಶೇರ್-ಎ-ಹಿಂದ್ (ಭಾರತದ ಹುಲಿ) ಎಂದು ಕರೆಯಲಾಗುತ್ತದೆ .
1750ರಲ್ಲಿ ಬೆಂಗಳೂರು ದೇವನಹಳ್ಳಿಯಲ್ಲಿ ಹೈದರಾಲಿ ಮತ್ತು ಫಾತಿಮಾ ಫಖರುನ್ನೀಸಾ ದಂಪತಿಯ ಮಗನಾಗಿ ಹುಟ್ಟಿದರು. ಆ ದಿನಗಳಲ್ಲಿ ಹೈದರಾಲಿ ಮೈಸೂರು ಸಂಸ್ಥಾನದ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹುಟ್ಟಿದಾಗ ಟಿಪ್ಪೂ ಸುಲ್ತಾನರಿಗೆ ಫತೇಹ್ ಅಲಿ ಎಂದು ನಾಮಕರಣವಾಗಿತ್ತು. ಬಳಿಕ ಹೈದರಾಲಿ ನಂಬುವ ಸಂತರಾದ ಸಂತ ಟಿಪ್ಪೂ ಮಸ್ತಾನ್ ಔಲಿಯಾರವರ ಗೌರವಾರ್ಥ ತಮ್ಮ ಮಗನನ್ನೂ ಟಿಪ್ಪೂ ಸುಲ್ತಾನ್ ಎಂದು ಕರೆಯತೊಡಗಿದರು. ವಾಸ್ತವವಾಗಿ ಟಿಪ್ಪೂ ಸುಲ್ತಾನ್ ಎಂಬುದು ಅವರನ್ನು ಕರೆಯುವ ಹೆಸರಾಗಿದೆ, ಅವರ ನಿಜನಾಮಧೇಯ ಸುಲ್ತಾನ್ ಫತೇಹ್ ಅಲಿ ಖಾನ್ ಶಹಾಬ್ ಎಂದಾಗಿದೆ.
ಟಿಪ್ಪು ಸುಲ್ತಾನನ ಜನನದ ಬಳಿಕ ಹೈದರಾಲಿಯ ವೃತ್ತಿಜೀವನದಲ್ಲಿ ಏಳ್ಗೆ ಕಾಣುತ್ತಾ ಹೋಗಿತ್ತು. ಮುಂದಿನ ಹನ್ನೊಂದು ವರ್ಷಗಳಲ್ಲಿ ಹಂತಹಂತವಾಗಿ ಮೇಲೇರಿದ ಅವರು 1761ರಲ್ಲಿ ಮೈಸೂರು ಸಂಸ್ಥಾನದ ಆಡಳಿತಗಾರರಾಗಿ ನೇಮಕಗೊಂಡರು. ಅಂದಿನ ದಿನಗಳಲ್ಲಿ ಹೈದರಾಲಿ ಫ್ರೆಂಚ್ ಸರ್ಕಾರದೊಂದಿಗೆ ಹೆಚ್ಚು ವ್ಯವಹಾರ ನಡೆಸುತ್ತಿದ್ದರು. ಇದೇ ಮೈತ್ರಿಯಿಂದ ಟಿಪ್ಪೂ ಸುಲ್ತಾನರಿಗೆ ಫ್ರೆಂಚ್ ವಿಶ್ವವಿದ್ಯಾಲಯದಲ್ಲಿ ರಾಜತಾಂತ್ರಿಕ ಮತ್ತು ರಾಜ್ಯಾಡಳಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ದೊರಕಿತು.
ಮುಂದಿನ ನಾಲ್ಕು ವರ್ಷಗಳ ಕಾಲ ಅಂದಿನ ದಿನಗಳಲ್ಲಿ ಲಭ್ಯರಿದ್ದ ಅತ್ಯಂತ ದಕ್ಷರಾದ ಶಿಕ್ಷಕರಿಂದ ಅವರು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆದರು. ರಾಜತಾಂತ್ರಿಕ ವಿಷಯದ ಜೊತೆಗೇ ಕುದುರೆಸವಾರಿ, ಕತ್ತಿವರಸೆ, ಬಂದೂಕು ಚಲಾಯಿಸುವಿಕೆ ಮೊದಲಾದ ವಿದ್ಯೆಗಳಲ್ಲೂ ಪಾರಾಂಗತರಾದರು. 1765ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಟಿಪ್ಪೂ ಸುಲ್ತಾನ್ ಮಾಡಿದ ಮೊದಲ ಕೆಲಸವೆಂದರೆ ಮಲಬಾರ್ ಪ್ರಾಂತದ ಸಾಮಂತರ ವಿರುದ್ಧ ಯುದ್ಧ ಮಾಡಿ ಸಾಮಂತ ಮತ್ತು ಅವರ ಕುಟುಂಬವನ್ನು ವಶಕ್ಕೆ ಪಡೆದುಕೊಂಡಿದ್ದು. ಆಗ ಅವರ ವಯಸ್ಸು ಕೇವಲ ಹದಿನೈದು ವರ್ಷ!ಅಪ್ಪಟ ಕನ್ನಡ ಭಾಷಾಭಿಮಾನಿ ಯಾದ, ಮಾತೃಭೂಮಿ ರಕ್ಷಣೆಗಾಗಿ ಸ್ವಂತ ಮಕ್ಕಳನ್ನು ಬ್ರಿಟೀಷರಲ್ಲಿ ಒತ್ತೆಯಿಟ್ಟಿ ಟಿಪ್ಪು ಸುಲ್ತಾನ್ ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಎ೦ದು ಇತಿಹಾಸ ಕಾರರಲ್ಲಿ ಕೆರೆಯಿಸಿ ಕೊಂಡಿದ್ದಾನೆ ಬಹು ಸಂಸ್ಕೃತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು. ತನ್ನ ಸಾಮ್ರಾಜ್ಯದಲ್ಲಿದ್ದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದವರಿಗೆ ಶಿಕ್ಷಣ ಕೊಡಿಸಿದ ಮಹಾನುಭಾವ ಎನ್ನಲಾಗುತ್ತಿದೆ .ಹದಿನೆಂಟನೆಯ ಶತಮಾನದ ಇತಿಹಾಸವನ್ನು ಪರಿಗಣಿಸಿದರೆ ಭಾರತದಾದ್ಯಂತ ರಾಜರ, ಸಾಮಂತರ ಆಳ್ವಿಕೆ ಜಾರಿಯಲ್ಲಿತ್ತು. ವೈರತ್ವ ಮತ್ತು ಮಿತೃತ್ವಗಳನ್ನು ನಿಭಾಯಿಸಲು ಯುದ್ಧಗಳು ನಡೆಯುವುದು ಸಾಮಾನ್ಯವಾಗಿತ್ತು. ಇಬ್ಬರು ಸ್ನೇಹಿತರ ನಡುವೆ ವೈರತ್ವ ಹುಟ್ಟುಹಾಕಿ ಇಬ್ಬರ ಜಗಳದಿಂದ ಲಾಭ ಪಡೆಯುವ 'ಒಡೆದು ಆಳುವ ನೀತಿ'ಯನ್ನು ಅನುಸರಿಸಿದ ಬ್ರಿಟಿಷರು ತಮ್ಮ ಯೋಜನೆಯಲ್ಲಿ ಬಹುತೇಕ ಯಶಸ್ವಿಯೂ ಆದರು. ಆದರೆ ಉತ್ತರ ಭಾರತವನ್ನು ಸುಲಭವಾಗಿ ಆಕ್ರಮಿಸಿದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಟಿಪ್ಪೂ ಸುಲ್ತಾನನ್ನು ಎದುರಿಸಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಟಿಪ್ಪು ಸಾಹೇಬ್ ಎಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಅಂದಿನ ದಕ್ಷಿಣದ ಪ್ರಾಂತಗಳಾದ ಮದ್ರಾಸ್ ಮತ್ತು ಮಂಗಳೂರು ಪ್ರಾಂತಗಳನ್ನು ಮೊದಲ ಮತ್ತು ಎರಡು ಅಂಗ್ಲೋ ಮೈಸೂರ್ ವಾರ್ (ಅಥವಾ ಅಂಗ್ಲ-ಮೈಸೂರು ಯುದ್ದ) ಗಳಲ್ಲಿ ಬ್ರಿಟಿಷರ ವಿರುದ್ಧ ಸೆಣೆಸಿ ಉಳಿಸಿದ್ದರು.1782ರ ಡಿಸೆಂಬರ್ ಆರರಂದು ಹೈದರಾಲಿ ಚಿತ್ತೂರಿನಲ್ಲಿ ವಿಧಿವಶರಾದರು. ನಂತರ ತಂದೆಯ ಸ್ಥಾನವನ್ನು ಅಲಂಕರಿಸಿದ ಟಿಪ್ಪು ಮೈಸೂರಿನ ರಾಜರಾಗುವ ಮೊದಲೇ ಮೊದಲ ಮತ್ತು ಎರಡನೇ ಅಂಗ್ಲೋ ಮೈಸೂರು ಯುದ್ಧಗಳನ್ನು ಜಯಿಸಿದ ಅನುಭವ ಪಡೆದಿದ್ದರು. ಆದರೆ ಇಡಿಯ ಭಾರತವನ್ನೇ ಜಯಿಸುವ ಮಹತ್ವಾಕಾಂಕ್ಷೆಯಿಂದ ಆಗಮಿಸಿದ್ದ ಬ್ರಿಟಿಷರ ವಿರುದ್ದ ಹೋರಾಡುವುದು ಬಹಳ ಕಷ್ಟ ಎಂದು ಅವರು ಅರಿತಿದ್ದರು. ಹೈದರಾಲಿಯ ಸಮಯದಲ್ಲಿಯೇ ಈ ಕ್ಷಿಪಣಿಗಳನ್ನು ಉಪಯೋಗಿಸಲಾಗಿದ್ದರೂ ತಂತ್ರಜ್ಞಾನದಲ್ಲಿ ಮತ್ತು ಕ್ಷಮತೆಯಲ್ಲಿ ಹಿಂದಿದ್ದವು. ಟಿಪ್ಪುಸುಲ್ತಾನ ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿಗಳು ತಮ್ಮೊಂದಿಗೆ ಚೂಪಾದ ಬಾಣಗಳಂತಿರುವ ಲೋಹದ ತುಂಡುಗಳನ್ನೂ ಕೊಂಡೊಯ್ದು ವೈರಿಗಳ ತಲೆ ಅಥವಾ ಶರೀರವನ್ನು ಸೀಳಿ ಬಿಡುತ್ತಿದ್ದವು.ಈ ಕ್ಷಿಪಣಿಗಳನ್ನು ಸೂಕ್ತವಾಗಿ ಬಳಸಲು ಇಡಿಯ ಮೈಸೂರು ಸಂಸ್ಥಾನದಲ್ಲಿ ಇಪ್ಪತ್ತನಾಲ್ಕು ಕುಶೂನ್ (cushoon) ಎಂಬ ಕ್ಷಿಪಣಿಪಡೆಗಳನ್ನು ರಚಿಸಿ ಪ್ರತಿ ಪಡೆಯಲ್ಲಿಯೂ ಈ ಕ್ಷಿಪಣಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇನ್ನೂರು ನುರಿತ ಮತ್ತು ತರಬೇತಿ ಪಡೆದ ನಂಬಿಗಸ್ತ ಸೈನಿಕರನ್ನು ನಿಯೋಜಿಸಿದ. ಅಲ್ಲದೇ ಈ ಕ್ಷಿಪಣಿಗಳನ್ನು ಹೇಗೆ ಬಳಸಬೇಕು, ಯಾವ ತಂತ್ರವನ್ನು ಹೂಡಬೇಕು ಎಂದು ವಿವರಿಸುವ ಯುದ್ಧತಂತ್ರದ ವಿವರಗಳನ್ನು 'ಫತಹುಲ್ ಮುಜಾಹಿದೀನ್' ಎಂಬ ಗ್ರಂಥದಲ್ಲಿ ಸ್ವತಃ ಬರೆದು ಪ್ರಕಟಿಸಿದ್ದರು. ಈ ಗ್ರಂಥದಲ್ಲಿ ವಿವರಿಸಿದ ಯುದ್ಧತಂತ್ರಗಳನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪೂವಿನ ಸೈನ್ಯ ಸಮರ್ಥವಾಗಿತ್ತು. ಆದರೆ ದುರಾದ್ರಷ್ಟವಷತ್ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿ ಮೋಸ ದಿಂದ ಟಿಪ್ಪು ವೀರ ಮರಣ ವನ್ನು ಒಪ್ಪಬೇಕಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ಬುಧವಾರ, ಮೇ 25, 2016
ಓದುದರ್ಲ್ಲೂ ಪಶ್ಟ್ ! ಓಡುವುದರ್ಲೂ ಪಶ್ಟ್ !-ಕುಗ್ರಾಮದ ಕುಹರಿ ಶ್ರೀದೇವಿಯ ಕಹಾನಿ !
ಕುಂದಾಪುರ : ತಾಲೋಕಿನ ಹೊಸಂಗಡಿ ಪ್ರೌಢ ಶಾಲೆ ವಿಧ್ಯಾರ್ಥಿನಿ ಶ್ರೀದೇವಿ ಆಟ -ಓಟ -ಪಾಠವೂ ಸೇರಿದಂತೆ ಸಾಂಸ್ಕ್ರತಿಕ ಚಟುವಟಿಕೆಯಲ್ಲೂ ಕೈಯಾಡಿಸಿ ಸಕ್ಸಸ್ ಕಂಡ ಸಾಹಸಿಗಳ ಪೈಕಿ ಒಬ್ಬಳಾಗಿದ್ದಾಳೆ !
ಕಲಿಕೆಯಲ್ಲೂ ಹಿಂದಿರದ ಜಾಣೆ ..ಗ್ರಾಮೀಣ ಪರಿಸರದ ಈ ಬಹುಮುಖ ಪ್ರತಿಭೆ :
ಶೈಕ್ಷಣಿಕವಾಗಿ ಪ್ರಾಥಮಿಕ ಶಾಲೆಯಿಂದ ಉನ್ನತ ಸ್ತರದಲ್ಲೇ ವ್ಯಾಸಂಗ ಮಾಡುತ್ತಾ ಬಂದಿರುವ ಈಕೆ ಎಂದಿನ ಎಣಿಕೆಯ೦ತೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 93ಫಲಿತಾಂಶವನ್ನು ಪಡೆದು ಹೊಸಂಗಡಿ ಪ್ರೌಢ ಶಾಲೆಗೆ ಮೊದಲಿಗಳಾಗಿದ್ದಾಳೆ . ಪ್ರತಿಭಾ ಕಾರಂಜಿ ಎಂಬ ಸಾಂಸ್ಕ್ರತಿಕ ಸ್ವರ್ಧೆಯಲ್ಲಿ ಪ್ರಶಸ್ತಿಗಳ ಮಹಾಪೂರವನ್ನು ಬಾಚಿ ಕೊಂಡು ಸೈ ಯೇನಿಸಿಕೊಂಡು ಜನ ಮೆಚ್ಚುಗೆ ಗಳಿಸಿದ್ದಲ್ಲದೇ,ಕ್ರೀಡಾರಂಗದಲ್ಲೂ ಎತ್ತಿದ ಕೈ ! ಕಳೆದ ಕೆಲವು ಸಮಯಗಳ ಹಿಂದೆ ನಡೆದ 100/ 200 ಮೀ . ಹಡ್ಸಲ್ ಓಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಳು . ಜಿಲ್ಲಾ ಮಟ್ಟದಲ್ಲಿ ಸೆಣೆಸಿದ ಖೋ ಖೋ ಮತ್ತು ಕಬ್ಬಡಿ ಹೊಸಂಗಡಿ ಪ್ರೌಢ ಶಾಲೆಯ ಟೀಮ್ ಕ್ಯಾಪಟನ್ ಕೂಡ ಆಗಿ ಚಾಂಪಿಯನ್ ಪಟ್ಟವನ್ನೂ ಗಿಟ್ಟಿಸಿ ಕೊಂಡವಳು ..ಹಾಗೂ ಕರಾಟೆ ಪಟುವೂ ಹೌದು !!
ಕುಗ್ರಾಮದ ಕುಹರಿ ಶ್ರೀದೇವಿ:ತನ್ನ ಅಪಾರಿಮಿತ ಸ್ಪರ್ಧಾತ್ಮಕ ಬಹು ಪ್ರತಿಭೆಯನ್ನು ಹೊಂದಿರುವ ಶ್ರೀದೇವಿ
ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ‘ಮುತ್ತಿನಕಟ್ಟೆ’ ಎಂಬ ಕುಗ್ರಾಮದಲ್ಲಿ ನೆಲೆಸಿರುವ ಕ್ರಷಿ ಕುಟುಂಬದ ಶ್ರೀಕಾಂತ್ ಗೊಲ್ಲ ಹಾಗೂ ಶಿಲ್ಪಾ ದಂಪತಿಯ ಪುತ್ರಿ. ಯಾವುದೇ ಪ್ರೋತ್ಸಾಹ ವಿಲ್ಲದೇ ಪೋಷಕರ ಬೆಂಬಲದಿಂದ ತನ್ನ ಪ್ರತಿಭೆಯನ್ನು ತೋರ್ಪಡಿಸುತ್ತಾ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಿ ಗುರು ವಿಲ್ಲದೇ ಗುರಿಯತ್ತ ದ್ರಷ್ಟಿಯನ್ನಿಟ್ಟಿ ಶ್ರೀದೇವಿಯ ಆಕಾಂಕ್ಷೆಗೆ ನೆರವಾಗಿದ್ದೂ , ಹೊಸಂಗಡಿಯ ಸಾಕಷ್ಟು ಕ್ರೀಡಾಳುಗಳನ್ನ ರಾಜ್ಯಕ್ಕೆ ಪರಿಚಯಿಸಿದ ಕೀರ್ತಿಯನ್ನು ಹೊಂದಿರುವ ಕ್ರೀಯಾಶೀಲ ವ್ಯಕ್ತಿ ದೈಹಿಕ ಶಿಕ್ಷಕರಾಗಿರುವ ಶ್ರೀ ಸುಕುಮಾರ್ ಶೆಟ್ಟಿಯವರು. ಆಸೆಗೆ ನೀರೆರದು ತರಬೇತಿಯನ್ನು ನೀಡಿದರು . ಕೇವಲ ಕ್ರೀಡೆಯನ್ನೇ ಬಂಡವಾಳ ವಾಗಿಸಿಕೊಳ್ಳ ಶ್ರೀದೇವಿ ಓದಿಗೂ ಕೊಂಚ ಬ್ರೇಕ್ ಕೊಡದೇ ಕಲಿಕೆಯನ್ನೂ ಸಮತೋಲನದಲ್ಲಿ ಇಟ್ಟುಕೊಂದ್ಡಿದ್ದೆ ಭವಿಷ್ಯ ಎಸೆ ಎಸ್ ಎಲ್ ಸಿ ಯಲ್ಲಿ ತಮ್ಮ ಶಾಲೆಯೇ ತಾಪರ್ ಆಗಿದ್ದನ್ನು ನೆನಪಿಸ ಬಹುದಾಗಿದೆ! ಒಟ್ಟಾರೆ ಮೂರುವರ್ಷಗಳ ಇವಳ ಸಾಧನೆಯ ಸಾಹಸಿಹಾದಿ ಇಲ್ಲಿ ಇದೆ ನೋಡಿ
ಯ :
2013-2014 ಸಾಲಿನ 8ನೇ ತರಗತಿಯಲ್ಲಿ ವಿಧ್ಯಾಭಾಸ್ಯ ಮಾಡುತ್ತಿರುವ ಸಂದರ್ಭ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಿದ್ದಳು . ಹಾಗೆಯೇ ಸಿದ್ದಾಪುರ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿ ನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದರೆ ,ಭಾಷಣ ಮತ್ತು ಕೋಲಾಟದಲ್ಲಿ ತ್ರತಿಯ ಸ್ಥಾನ ಪಡೆದ್ದಿದ್ದಳು . ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200ಮೀ . ಹರ್ಡ್ಸಲ್ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ . ಹಾಗೂ 4* 100 ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ ಕೀರ್ತಿಗೆ ಭಾಜನಳಾಗಿದ್ದಳು.ಅಂತೆಯೇ ಕೊಲ್ಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 100ಮೀ .ಮತ್ತು ಹರ್ಡ್ಸಲ್ ಸ್ಪರ್ದೆಯಲ್ಲಿ ತ್ರತಿಯ ಹಾಗೂ 200 ಮೀ . ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಳು .
2014 -15 ರ ಸಾಲಿನ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ 100ಮೀ .ಓಟದಲ್ಲಿ ದ್ವಿತೀಯ ಸ್ಥಾನ 4* 100 ಮೀ. 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ 4*100 ಮೀ. 200 ಮೀ. ಓಟದಲ್ಲಿ ತ್ರತಿಯ ಸ್ಥಾನ ಹಾಗೂ 4*400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ .ಹಾಗೆಯೇ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟದಲ್ಲಿ 100ಮೀ ಓಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಜೊತೆಗೆ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಹಾಗೂ ತ್ರತಿಯ ಸ್ಥಾನ ಪಡೆದಿದ್ದಾಳೆ . ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ನಾಟಕ ಸ್ಪರ್ದೆ ಯಲ್ಲಿ ಪ್ರಥಮ ಹಾಗೂ ಕನ್ನಡ ಭಾಷಣದಲ್ಲಿ ಧ್ವಿತಿಯ ಸ್ಥಾನ ಪಡೆದಿದ್ದಳು
ಹಾಗೆಯೇ ತೆಕ್ಕೆಟ್ಟೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕ್ಯಾಪ್ಟನ್ ಸ್ಥಾನದಲಿದ್ದು ,ದ್ವಿತೀಯ ಸ್ಥಾನವನ್ನೂ ಪಡೆದು ಉತ್ತಮ ದಾಂಡುಗಾರ್ತಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದ್ದಳು ,ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ. ಹರ್ಡ್ಸಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ್ದಳು .
2015-16 ನೆ ಸಾಲಿನ ಕುಂದಾಪುರದಲ್ಲಿ ನಡೆದ ಪೈಕಾ ಕ್ರೀಡಾ ಕೂಟದಲ್ಲಿ 100ಮೀ . 4*400 ಮೀ. 4*400 ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪೈಕಾ ಕ್ರೀಡಾ ಕೂಟದಲ್ಲಿ 100 ಮೀ. ಓಟದಲ್ಲಿ ಪ್ರಥಮ 4*400 ಮೀ . ರಿಲೆಯಲ್ಲಿ ದ್ವಿತೀಯ ಸ್ಥಾನ 4*100ಮೀ. ರಿಲೆಯಲ್ಲಿ ತ್ರತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಹಾಗೆಯೇ ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ , ಭಾಷಣಾ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು , ವಲಯ ಮಟ್ಟದ ನಾಟಕ ಸ್ಪ್ರರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ . ಹಾಗೇಯೇ ಕುಂದಾಪುರ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ . 4*400 ಮೀ ರಿಲೆಯಲ್ಲಿ ಪ್ರಥಮ ಹಾಗೂ ಹರ್ಡ್ಸಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ ಅಲ್ಲದೇ ಬೈಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ ಹರ್ಡ್ಸಲ್ ನಲ್ಲಿ 100 ಮೀ. ಪ್ರಥಮ 200 ಮೀ. ಹರ್ಡ್ಸಲ್ 4*400 ಮೀ ರಿಲೆ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಶಂಕರನಾರಾಯಣ ದಲ್ಲಿ ನಡೆದ ತಾಲೋಕು ಮಟ್ಟದ ಖೋ ಖೋ ಪಂದ್ಯಾಟ ಕ್ಯಾಪ್ಟನ್ ಆಗಿ ಪ್ರಥಮ ಸ್ಥಾನ ಪಡೆದು ಹೆಬ್ರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಚಿಕ್ಕ ಮಗಳೂರಿನಲ್ಲಿ ನಡೆದ ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ ಹಾಗೂ ತಾಲೋಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಾಳೆ ಇಷ್ಟು ಮಾತ್ರ ವಲ್ಲದೇ ಶಾಲಾ ವಾರ್ಷಿಕ ಕ್ರೀಡಾ ಕೂಟದ ಚಾಂಪಿಯನ್ ಆಗಿ ಮೂಡಿ ಬಂದಿದ್ದಾಳೆ.
ಏನೆ ಇರಲಿ ಅದ್ಭುತ ಪ್ರತಿಬೆ ಗೆ ಪ್ರೋತ್ಸಾಹ ದೊರಕಲಿ , ಮುಂದು ಸಹಾ ಈ ಕೀರ್ತಿ ಪತಾಕೆ ಹಾರುತ್ತಿರಲಿ . ಉಜ್ವಲ ಭವಿಷ್ಯದಲ್ಲಿ ಬಯಸಿದ್ದೆಲ್ಲ ಸಿಗಲಿ ಎಂಬ ಹಾರೈಕೆ ನಮ್ಮದು .
ಶನಿವಾರ, ನವೆಂಬರ್ 28, 2015
ಜನ ಪ್ರತಿನಿಧಿಗಳೇ ಶೇಮ್ ! ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ !
ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬರ್ಭರವಾಗಿ ಹಾಡು ಹಗಲೇ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು . ಆಡಳಿತ ರೂಢ ಕಾಂಗ್ರೆಸ್ ಪಾಳಯದ ಸರ್ಕಾರಕ್ಕೆ ಪ್ರಶಾಂತ್ ಪೂಜಾರಿ ಕೊಲೆ ಎಂಬುದು ಬೀದಿ ನಾಯಿ ಸತ್ತಂತ ಬುದ್ದಿ ಮತ್ತೆಯನ್ನು ಹೊಂದಿದೆ , ಶೇಮ್ ಎನ್ನಬೇಕು ಕರಾವಳಿಯ ಕಾಂಗ್ರೆಸ್ ತನ್ನನ್ನು ತಾನೇ ನಡುಬೀದಿಯಲ್ಲಿ ನಗ್ನವಾಗಿಸಿ ಜನರಿಂದ ಶೇಮ್ ಎನಿಸಿಕೊಳ್ಳುತ್ತಿದೆ. ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ , ಕರಾವಳಿಯ ಐದು ಜನರ ಪೈಕಿ ಯಾವೊಬ್ಬನೋ ಸಹಾ ಅತ್ತ ತಲೆ ಹಾಕಿ ಮಲಗಿಲ್ಲ ಮೂಡಬಿದಿರೆಯ ಕಾಂಗ್ರೆಸ್ ಶಾಸಕ ಮತ್ತು ಸಚಿವ ಅಭಯಚಂದ್ರ ಜೈನ್ ಕೊಲೆಯಾದ ಪ್ರಶಾಂತ್ ಮನೆಗೆ ಭೇಟಿಯೂ ನೀಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ಸೌಜನ್ಯಕ್ಕೂ ಈ ಘಟನೆಯನ್ನು ಖಂಡಿಸಿಲ್ಲ ಮತ್ತು ಪ್ರಶಾಂತ್ ತಂದೆ ತಾಯಿಯನ್ನು ಮಾತಾಡಿಸಿಲ್ಲ. ಇದು ನಿಜಕ್ಕೂ ಅಮಾನವೀಯ. ಕೊಲೆಯಾದವನ ಸಿದ್ಧಾಂತ ಏನೇ ಇರಲಿ ತನ್ನೂರಿನ ಒಬ್ಬ ಹುಡುಗ ಕೊಲೆಯಾಗಿದ್ದಾನೆ, ಕಾನೂನು ಬಾಹಿರ ಕೃತ್ಯವೊಂದು ನಡೆದಿದೆ. ಅದನ್ನು ಶಾಸಕ ಮತ್ತು ಮಂತ್ರಿ ಖಂಡಿಸಬೇಕಿತ್ತು. ತಂದೆತಾಯಿಗೆ ಸಾಂತ್ವನ ಹೇಳಬೇಕಿತ್ತು. ಅಟ್ ನೀಸ್ಟ್ ತಮ್ಮ ಎಂದಿನ ಮೊಸಳೆ ಕಣ್ಣೀರನ್ನದರೂ ಹಾಕಿ ಕೈ ತೊಳೆದು ಕೊಳ್ಳ ಬಹುದಾಗಿತ್ತು .. ಛೆ !ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ !.. ರಾಜಕೀಯ, ಸಿದ್ಧಾಂತ ಭೇದ ಏನೇ ಇರಲಿ ಓರ್ವ ಸರ್ಕಾರದ ಮತ್ತು ಜನರ ಪ್ರತಿನಿಧಿಯಾಗಿದರೂ ಪ್ರಶಾಂತ್ ಮನೆಗೆ ಹೋಗಲೇಬೇಕಿತ್ತು. ಎಂತೆಂತಹ ರೌಡಿ ಶೀಟರ್‌ಗಳು, ಕೊಲೆಗಡುಕರೆಲ್ಲ ಸತ್ತಾಗ ಕಾಂಗ್ರೆಸಿಗರು ಅವರ ಮನೆಗೆ ಹೋಗಿಲ್ಲವೆ? ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲವೆ? ಕುಟುಂಬದವರಿಗೆ ಸಾಂತವನ ಹೇಳಿಲ್ಲವೆ? ಹಾಗಾದರೆ ಪ್ರಶಾಂತ್ ಪೂಜಾರಿಯ ಮನೆಗೆ ಹೋಗಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ,ತನಿಖೆಯ ಭರವಸೆ ನೀಡಬಹುದದಿತ್ತು? ದನಗಳ್ಳ ಕಬೀರ್ ಕ್ಕಿಂತಲೂ ಈತ ಕಡೇಯಾದನೇ ?! ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮಾತಾಡಬೇಕಿದೆ !
ಯಕ್ಷಗಾನಕ್ಕೆ ಉಳಿವಿದೆ .. ಅಳಿವಿಲ್ಲ !!!
ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಯಕ್ಷಗಾನ ಸ್ಥಿರವಲ್ಲ ಎಂಬ ಹಲವರ ಬಾವುಕತೆಯ ಆಲೋಚನೆಗೆ ನಿಜಕ್ಕೂ ವರ್ತಮಾನದ ವಾತಾವರಣ ಧೈರ್ಯ ತುಂಬುತ್ತಿದೆ . ಟೆಂಟ್ ಆಟ ಗಳ ಜೊತೆಗೆ ಬಯಲಾಟ ತನ್ನದೆಯಾದ ಛಾಪನ್ನು ಇಂದಿಗೂ ಇರಿಸಿಕೊಂಡು ಬಂದಿದೆ . ಜೊತೆಗೆ ಇನ್ನಷ್ಟು ಮತ್ತಷ್ಟು ಮೊಗದಷ್ಟು ಜನಪ್ರಿಯತೆ ಮಳೈಸಿ ಕೊಂಡು ನಾಗಾಲೋಟದಲ್ಲಿ ಮಿಂಚುತ್ತಿದೆ ಅಂದರೆ ಅತಿಶಯೋಕ್ತಿಯಾಗಲಾರದು 'ಕಾಲಕ್ಕೆ ತಕ್ಕಂತೆ ಕೋಲ' ಎಂಬ ಆಡು ನುಡಿಯಂತೆ ವೈವಿಧ್ಯಮಯವಾಗಿ ವಿವಿಧತೆಯನ್ನು ಪೋಣಿಸುತ್ತಿದೆ . ಸ್ವರ್ದಾತ್ಮಕತೆ ಎಷ್ಟೇ ಇದ್ದರೂ ಕಲೆಗೆ ಬೆಲೆ ಕೊಡುತ್ತಾ ಬಂದಿರುವ ಗಂಡು ಕಲೆ ಯಕ್ಷಗಾನ ತನ್ನದೆಯಾದ ಅಂಗ-ಆಕಾರ, ಗಟ್ಟಿತನವನ್ನು ಉಳಿಸಿ ,ಬೆಳಿಸಿ ,ಕಾಯ್ದಿರಿಕೊಂಡು ಬನ್ದಿದೆ. ಸಮಯಕ್ಕನುಗುಣವಾಗಿ ಕಾಲಮಿತಿಯ ಪ್ರದರ್ಶನ ತೋರುವುದರ ಜೊತೆಗೆ ಮನೋರಂಜನಾತ್ಮಕವಾಗಿ ಸಾಕಷ್ಟು ಅಭಿರುವುದ್ಧಿ ಪಥದತ್ತ ಮುನ್ನುಗ್ಗುತ್ತಿದೆ . ಅಟ್ಟಣಿಗೆ , ಜೋಡಾಟ , ಕೂಡಾಟಗಳ ಮೂಲಕ ಮನೋರಂಜನಾತ್ಮಕವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ. ವರ್ಷಕ್ಕೊಂದು ನವನವೀನ ಕಥಾನಕ ಗಳಿಂದ ಟೆಂಟ್ ಆಟಗಳು ಯಕ್ಷ ಪ್ರೇಮಿಗಳನ್ನು ಹಿಡಿದಿಟ್ಟು ಕೊಳ್ಳುತ್ತಿದೆ . ಇನ್ನು ಬಯಲಾಟಗಳಿಗೆ ಬರಗಾಲವೇ ಇಲ್ಲ ಬೆಳಕಿನ ಸೇವೆ ಅದೆಷ್ಟು ಭಕ್ತಿ ಪ್ರಧಾನ ದಿಂದ ನಡೆಯುತ್ತಿದೆ ಎಂದರೆ ಆಸ್ತಿಕರು ,ಆಸಕ್ತದಾರ ಪ್ರಮಾಣವೇ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ ವರ್ಷಪ್ರತಿಯಂತೆ ಒಂದೊಂದು ಸನ್ನಿಧಾನ ದಿಂದ ಹೊಸ ಹೊಸ ಯಕ್ಷಗಾನ ಮೇಳಗಳು ಉದಯವಾಗುತ್ತಿರುವುದರ ಜೊತೆಗೆ ಸಾಕಷ್ಟು ವರ್ಷಗಳ ವರೆಗಿನ ಬುಕ್ಕಿಂಗ್ ಕಾಣತ್ತಿರುವುದಕ್ಕೆ ಯಕ್ಷ ಅಭಿಮಾನಿಗಳ ಕ್ರಪಾ ಕಟಾಕ್ಷವಲ್ಲದೇ ಇನ್ನೇನು ?. ಕಟೀಲು ಆರು ಮೇಳಗಳನ್ನು ಹೊಂದಿದ್ದರೂ, ಮಂದಾರ್ತಿಯಲ್ಲಿ ಐದು ಮೇಳಗಳಿದ್ದರೂ , ಸುಮಾರು ಹದಿಮೂರು ವರ್ಷಗಳವರೆಗೆ ಬುಕ್ಕಿಂಗ್ !!!.ಹೆಚ್ಚುವರಿ ಮೇಳಗಳ ಅಗತ್ಯವಿದ್ದರೂ ಕಲಾವಿದರುಗಳ ಕೊರತೆಯಿಂದ ಇದ್ದದ್ದರಲ್ಲಿಯೇ ನಿಭಾಯಿಸಬೇಕಾದ ಅಗತ್ಯತೆಯನ್ನು ಅನುಭವಿಸಬೆಕಾಗಿದೆ. ಮಾರಣಕಟ್ಟೆ ಮೇಳವೂ ಸಹಾ ಹಲವಾರು ವರ್ಷಗಳಿಂದ ಎರಡು ಮೇಳಗಳನ್ನು ಕಟ್ಟಿಕೊಂಡು ತಿರುಗಾಟದಲ್ಲಿದೆ ಹರಕೆ ಆಟಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ .. ಈ ಸಾಲಿಗೆ ಇನ್ನೊಂದು ಸೇರ್ಪಡೆ ಕಮಶಿಲೆ ಮೇಳ . ಕುಂದಾಪುರ ದಿಂದ ಪೂರ್ವಾಭಿಮುಖವಾಗಿ ೩೦ ಕಿಲೋ ಸಾಗಿದರೆ ಸಹ್ಯಾದ್ರಿ ತಪ್ಪಲಿ ಸ್ವಚ್ಛ ಪರಿಸರದ ಕುಬ್ಜಾ ನದಿ ತೀರದಲ್ಲಿ ನೆಲೆ ನಿಂತಿರುವ ಶಕ್ತಿದಾಯಿನಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ದಿಗ್ದರ್ಶನವಾಗುತ್ತದೆ. ಭಕ್ತರ ಸಕಲ ಇಷ್ಟರ್ಥವನ್ನು ನೀಗಿಸುತ್ತಾಳೆ ಎನ್ನುವುದಕ್ಕೆ ಬೆಳಕಿನ ಸೇವೆ ಯಕ್ಷಗಾನಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಒಂದು ಮೇಳವನ್ನು ಕಟ್ಟಿಕೊಂಡು ಎರಡು ದಶಕಕ್ಕೂ ಅಧಿಕ ಕಾಲದಿಂದ ನಡೆದು ಕೊಂಡು ಬರುತ್ತಿದ್ದ ಮಂಡಳಿ ಇದೀಗ ಹರಕೆ ಆಟವನ್ನು ತೀರಿಸಲು ಇನ್ನೊಂದು ಮೇಳವನ್ನು ಕಟ್ಟಬೇಕಾದ ಅನಿವಾರ್ಯತೆ ಉದ್ಬವಿಸಿದ್ದರಿಂದ ಈ ವರ್ಷದಿಂದ ಎರಡು ಮೇಳಗಳೊಂದಿಗೆ ತಿರುಗಾಟಕ್ಕೆ ಹೊರಟಿದೆ .ನ್ನೇನು ಬೇಕು ?ಯಕ್ಷಗಾನಕ್ಕೆ ಉಳಿವಿದೆ.. ! ಕಲಾವಿದರ ಕೊರೆತೆ ಕೊಂಚ ತಲ್ಲಣವನ್ನು ತರುತ್ತಿರುವುದನ್ನು ಬಿಟ್ಟರೆ, ಯಕ್ಷ ಪ್ರೇಮಿಗಳ ಸಂಖ್ಯೆ ಒಂದಿನಿತು ಕಡಿಮೆಯಾಗಿಲ್ಲ ಗುಣಮಟ್ಟವಲ್ಲದ (ಸಿನಿಮಾ ಶೈಲಿ ) ಕಥಾನಕ ಎಲ್ಲೋ ತುಸು ಮುನಿಸು ಕೆಲೆವೆಡೆ ಕೇಳಿ ಬರುತ್ತಿರುವುದು ಹೊರತು ಪಡಿಸಿದರೆ ,ಯಕ್ಷಗಾನಕ್ಕೆ ಬಾಳ್ವೆ ಇದೆ. ಬಗ್ಗೆ ಪ್ರಸಂಗ ಕರ್ತರು ಯೋಚಿಸಿದರೆ ಯಕ್ಷಗಾನಕ್ಕೆ ಯಾವುದೇ ಕಳಂಕಬಾರದು .
ಗುರುವಾರ, ಆಗಸ್ಟ್ 20, 2015
ಭಜರಂಗಿ ಭಾಯ್ ಜಾನ್; ನನಗೆ ಇಷ್ಟ ಆದ ಒಂದೊಳ್ಳೆ ಸಿನಿಮಾ ..
ಸಾಕಷ್ಟು ಸಮಯಗಳ ನಂತರ ಬಾಲಿವುಡ್ ನಿನಿಮಾಂಗಳದಲ್ಲಿ ಒoದೊಳ್ಳೆ ಸಿನಿಮಾ ನೋಡಿದ ಸಂತ್ರಪ್ತಿ , ಸಂತೋಷ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಹಿಟ್ ಮೇಲೆ ಹಿಟ್ ನಿನಿಮಾ ಕೊಡುತ್ತಾ ಬಂದಿರುವ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ..ನಿಜಕ್ಕೂ ಇದುವರೆ ಅಭಿನಯಿಸಿದ ಎಲ್ಲಾ ಸಿನಿಮಾಗಳಿಗಿಂತ ಇದು ಅದ್ಭುತ,ಆಮೋಘ ಎನ್ನುವುದರಲ್ಲಿ ಎರಡು ಮಾತಿಲ್ಲ.ನಿರ್ದೇಶಕ ಕಭೀರ್ ಖಾನ್ ಗೆದ್ದಿದ್ದಾರೆ, ಒಂದೊಳ್ಳೆ ಸಿನಿಮಾವನ್ನು ಈದ್ ಗೆ ಉಣಬಡಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಿರ್ಮಾಪಕರೊಬ್ಬರು ಬಾಲಿವುಡ್ ನಿನಿಮಾಕ್ಕೆ ಬಂಡವಾಳ ಸುರಿಸಿ ಸದಭಿರುಚಿಯ ಸಿನಿಮಾ ಕೊಟ್ಟ ಧೀರ ರಾಕ್ ಲೈನ್ ವೆಂಕಟೇಶ್ ಧನ್ಯರು . ಕಾಲ್ಪನಿಕ ಕಥಾಹ0ದರವನ್ನು ಹೊಂದಿರುವ ಚಿತ್ರ ನಿಜಕ್ಕೂ ವಾಸ್ತವದ ಜಗತ್ತಿನ ಒಳ ಹೊರಣವನ್ನು ತಂದು ಕಣ್ಮು0ದೆನಿಲ್ಲಿಸುತ್ತದೆ. ಒಂದೆ ಎಳೆ ಯಲ್ಲಿ ಹೇಳಬೇಕೆಂದರೆ ಹಿಂದೂಸ್ಥಾನದ ನೆಲದಲ್ಲಿ ಪಾಕಿಸ್ಥಾನದ ದಂಪತಿಯ 6 ವರ್ಷದ ಮುಗ್ದೆ ಮುಖಿ ಬಾಲೆ ಶಾಯಿದಾ ಟ್ರೈನ್ ನಲ್ಲಿ ಮಿಸ್ ಆದವಳನ್ನು ಅವಳ ಹುಟ್ಟೂರು ಪಾಕಿಸ್ತಾನಕ್ಕೆ ಆವಳ ತಾಯಿಯ ಮಡಿಲಿಗೆ ಸೇರಿಸುವಲ್ಲಿ ನಾಯಕ ಪಡಬೇಕಾದ ಶ್ರಮ ಇಕ್ಕಟ್ಟು– ಬಿಕ್ಕಟ್ಟು, ಕಷ್ಟ –ನಷ್ಟ, ಛಲ- ಬಲ ಒತ್ತಡದ ಹಿಂದಿರುವ ಸಂಪೂರ್ಣ ಕಹಾನಿ ಇದು. ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರ ನಡುವಿನ ಭಾವನಾತ್ಮಕ ಸನ್ನಿವೇಶಗಳು ಮನಮುಟ್ಟುತ್ತದೆ , ತಾಯಿ-ಮಗಳ ಅನುಬಂಧ ಒಳಗೊಂಡ ಒಂದೊಳ್ಳೆ ಸುಂದರ ಸಾಂಸಾರಿಕ ಸಾಮಾಜಿಕ ಚತ್ರ ಭಜರಂಗಿ ಭಾಯ್ ಜಾನ್ !
ಭಜರಂಗಿ(ಹನುಮಂತನ) ಭಕ್ತನಾಗಿ ಸಲ್ಮಾನ್ (ಪವನ್ ) ಉತ್ತಮವಾಗಿ ಅಭಿನಯಿಸಿದ್ದಾರೆ. ಇಂತಹ ಶಿಸ್ತು ಶ್ರದ್ಧೆ,ಯೋಗ್ಯತೆಯ ಆಳ್ತನಕ್ಕೆಈ ಪಾತ್ರ ಸಲ್ಮಾನ್ ಗೆ ಬಿಟ್ಟರೇ ಬೇರೆ ಯಾರೂ ಸಹಾ ಜೀವಕಳೆ ತುಂಬಲಾರರು ಎಂಬ0ತೆ ಅಭಿನಯದ ನವರಸ ಧಾರೆ ಹರಿದು ಬಂದಿದೆ ಎಂದರೂ ಅತಿಶಯೋಕ್ತಿಯಾಗಲಾರದು . ನಾಯಕಿ ಕರೀನಾ ಕಪೂರ್ ಪಾತ್ರಕ್ಕೆ ಮೋಸ ಮಾಡಿಲ್ಲ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗೆಯೇ ತೋರಿದ್ದಾರೆ ಎಲ್ಲಾಕ್ಕಿಂತಾ ಹೆಚ್ಚಾಗಿ ಪಾಕಿಸ್ಥಾನದ ಟಿವಿ ರಿಪೋರ್ಟರ್ ನ ಪಾತ್ರ
(ನವಾಜುದ್ದಿನ್ ಸಿದ್ದಿಕಿ ) ನಿಜಕ್ಕೂ ಮನ:ಪಟಲದಲ್ಲಿ ಹಚ್ಚಳಿಯದೇ ಉಳಿಯುವಂತೆ ಮಾಡುತ್ತದೆ. ಪ್ರಜಾ ಪ್ರಭುತ್ವದ ನಾಲ್ಕನೇ ಅoಗವಾಗಿರುವ ಪತ್ರಿಕೋದ್ಯಮದಲ್ಲಿ ಇಂತವರು ಸಿಗುವುದು ಸಿನಿಮಾದಲ್ಲಿ ಮಾತ್ರವೇನೋ ಎಂಬಂತೆ ಬಾಸವಾಗದೇ ಇರದು ಏನೇ ಇರಲಿ ಪ್ರಜೆಗಳಿಗೆ ನ್ಯಾಯ ಒದಗಿಸಿ ಪ್ರಭುಗಳ ಕಿವಿ ಹಿಂಡುವ ಪ್ರತಿಪಾದಕನಂತೆ ಕಂಡುಬರುವ ಚಾನಲ್ ಒಂದರ ಪತ್ರಕರ್ತ ನಿಜಕ್ಕೂ ಪಾಕಿಸ್ತಾನ ಭುವಿಯಲ್ಲಿ ಗೊಂದಲದಲ್ಲಿ ಸಿಲುಕುವ ನಾಯಕನಿಗೆ ಉಪಕಾರಿಯಾಗಿ ಪುಟಾಣಿ ಬಾಲೆಯನ್ನು ಅಮ್ಮನ ಮಡಿಲಿಗೆ ಸೇರಿಸುವರಿ0ದ ಹಿಡಿದು ನಾಯಕನ ವ್ಯಕ್ತಿತ್ವ ಜಾಗಜಾಹಿತಾಗುವಲ್ಲಿ ಕಾರಣಿ ಬೂತನಾಗುತ್ತಾನೆ.ಭಜರಂಗಿ ಭಕ್ತನಾಗಿ ಹೋದಲ್ಲೆಲ್ಲಾ ಸತ್ಯವನ್ನೇ ಹೇಳತ್ತಾ ನೇರ ನಿಲುಮೆಯ ಛಲದ ಪಥದಲ್ಲಿ ಸಾಧನೆಯ ದಿಕ್ಕನ್ನು ಅರಸುವ ಈತನ ಸೇವೆ ಸಾರ್ಥಕತೆ ಸ್ವಾರ್ಥಪರತೆಯ ಸರಳ ಸಜ್ಜನಿಕೆಗೆ ಉಭಯ ದೇಶದ ಪ್ರಜೆಗಳು ಕ್ಲೀನ್ ಬೋಲ್ಡ್ ಆಗುವುದರ ಜೊತೆಗೆ ಸಹಾಯ ಹಸ್ತದ ಬೆಂಬಲ , ಮಾತು ಬಾರದ ಪುಟಾಣಿ ಕ್ಲೆಮೆಕ್ಸ್ ನಲ್ಲಿ ಅಂಕಲ್ ಎಂದು ಕೆರೆದು ಜೈ ಶ್ರೀ ರಾಮ್ ಎನ್ನುವ ಉಕ್ತಿ ಹೊರ ಹಾಕುವ ದ್ರಶ್ಯ ಅತ್ತ ಕಡೆ ಬೇಸರದಿಂದ ಬೀಳ್ಕೊಡುವ ಪಾಕಿಸ್ತಾನಿಗಳು ಇತ್ತ ಈತನ ಸಾಹಸಕ್ಕೆ ಸಂಬ್ರಮದಿಂದ ಸ್ವಾಗತ ಬಯಸಲು ನಿಂತಿರುವ ಹಿಂದೂಸ್ಥಾನಿಗಳು.ನಾಯಕಿ ಆನಂದ ಬಾಷ್ವ ಕ್ಲೆಮೆಕ್ಸ್ ಕೊನೆಗೊಳ್ಳುತ್ತದೆ. ಗಡಿ ಪ್ರದೇಶದಲ್ಲಿನ ತಲ್ಲಣ ತಟ–ವಟ, ಕಾಶ್ಮೀರದ ಸುಂದರ ಪ್ರಕ್ರತಿಯ ಹಸಿರು ಹೊದಿಕೆ ಚಿತ್ರಣ ,ಬಿಳಿ ಮೋಡಗಳ ಗ್ರಾಫಿಕ್ಸ್ ಉತ್ತಮ ಸ್ಕ್ರಿಪ್ಟ್, ಲೋಕೆಶನ್, ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ.
ಫಸ್ಟ್ ಹಾಪ್ಹ್ ಹಾಸ್ಯದ ಹೊನಲಿನಲ್ಲಿ ನಕ್ಕು ನಕ್ಕು ಸುಸ್ತಾದ ಚಿತ್ರಪ್ರೇಮಿಗಳಿಗೆ ಸೆಕೆಂಡ್ ಹಾಫ್ ಕಣ್ಣಂಚಿನಲ್ಲಿ ಕಣ್ಣೀರು ತನಗರಿಯದ೦ತೆ ಜಿನಿಗಿಸುವುದರಲ್ಲಿ ನಿರ್ದೇಶಕ ಕಬೀರ್ ಜಾಕಚಕ್ಯತೆಯನ್ನು ಮರೆದಿದ್ದಾರೆ. ಓಟ್ತಾರೆ ಹೊಡಿ,ಬಡಿ,ಕಡಿ,ರಕ್ತಪಾತ,ಬಿಚ್ಚಾಟ –ಕಚ್ಚಾಟಗಳಿಲ್ಲದ, ಸಂಸಾರ ಸಮೇತರಾಗಿ ಕುಳಿತು ನೋಡ ಬಹುದಂತ ,ಯಾವುದೇ ಒಂದು ಸಮುದಾಯದ,ಸಂಬಂದ ಸಾಮರಸ್ಯಕ್ಕೆ ಎಡೆಮಾಡಿ ಕೊಡದೇ ಮೂಡಿ ಬಂದ ಭಜರಂಗಿ ಭಾಯ್ ಜಾನ್ ಚಿತ್ರ ನಂಗೆ ಇಷ್ಟವಾಗಿದೆ.
.
ಅಣ್ಣನಿಗೆ ಊಟ ತಮ್ಮನಿಗೆ ಉಪವಾಸ !!
ಹೀಗೊಂದು ನ್ಯಾಯದ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಣುತ್ತಿರುವುದು ನಮಗೆ ಅಚ್ಚರಿ ಅನ್ನಿಸಿದರೂ ಇದನ್ನು ಅರಗಿಸಿ ಕೊಳ್ಳಲೇ ಬೇಕು. ನ್ಯಾಯಾಲಯ ಅಂದ ಕೂಡಲೇ ಮನಸ್ಸಿನ ಮೂಲೆಯಲ್ಲಿ ಮೊಳಕೆ ಒಡೆಯುತ್ತದೆ , ನ್ಯಾಯ ಮರಿಚಿಕೆ ಅಸತ್ಯ. ಅನ್ಯಾಯ !!.. ರಾಜಕೀಯದ ಪ್ರಭಾವಿಗಳಿಗೆ , ಹಣವಂತರಿಗೆ ಮಾತ್ರ ಎಂಬೀತ್ಯಾದಿ ವಿಷಯಗಳು ಹಾದು ಹೊಗುತ್ತದೆ. ವಾಸ್ತವಕ್ಕೆ ಅರ್ಹವೂ ಕೂಡಾ ಹೌದು.. ಆದರೆ ಇಂತಹ ವಿಚಾರಗಳು ವ್ಯಕ್ತಿಗತ ವಯಕ್ತಿಕ ವಿಚಾರಗಳಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯವಾದರೂ , ಸಾಮಾಜಿಕವಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಸಮಾಜಕ್ಕೆ ಸಹಾಯವಾಗುವಂತಹ ನಾಲ್ಕಕ್ಕೆ ಮೂರು ಅನುಪಾತದಲ್ಲಿರುವ ವಿಚಾರಕ್ಕೆ ಸಾಮಾಜಿಕ ಬದ್ದತೆಗೆನುಗುಣವಾಗಿ ತೀರ್ಪುನೀಡಬೇಕು ,ನೀಡತಕ್ಕದ್ದು ಕೂಡಾ,ಭಾರತೀಯ ಸಂವಿಧಾನದ ಪ್ರಕಾರಗಳಲ್ಲಿದೆ ಆದರೆ ಆಧುನಿಕ ದಿನಗಳಲ್ಲಿ ಕೆಲವೋಂದು ವಿಚಾರಗಳಲ್ಲಿ ಕೋರ್ಟ್ ತೀರ್ಪು ಎಷ್ಟು ಕುಲಕೆಟ್ಟು ಹೋಗಿದೆ ಎಂದರೆ .. ?ನಿಜಕ್ಕೂ ಅಸಹ್ಯ.. ಇಲ್ಲದಿದ್ದರೆ ಕಂಬಳವನ್ನು ನಿಷೇಧಿಸುದೆಂದರೆ ? ಕಂಬಳ ನಿಷೇಧಿಸಲಿ ಇದರಿಂದ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಮಿತಿಯ ಸದಸ್ಯರಂತೆವಾದ ಮಾಡುವ ವಕೀಲ ಮಹಾಪ್ರಭುಗಳಿಗೆ ಗೋಹತ್ಯೆ ಕಾಣಿಸುತ್ತಿಲ್ಲವೇ..? ಕುದುರೆ ಸವಾರಿ ಪ್ರಾಣಿ ಬಲಿ ಇವುಗಳೆಲ್ಲಾ ಸವೋಚ್ಚನ್ಯಾಯಲಯದ ಕಣ್ಣಿಗೆ ಬಿದ್ದಿಲ್ಲವೇ ? ಕೇವಲ ಕಂಬಳವನ್ನು ನಿಷೇಧಿಸುವುದರ ಗುಟ್ಟೀನು ? ಕರಾವಳಿಯ ತಲೆ ತಲಾಂತರ ದಿಂದ ನಡೇದು ಕೊಂಡು ಬರುತ್ತಿರುವ ಇತಿಹಾಸಭರಿತ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಅದರದ್ದೇಯಾದ ಒಂದು ಘನತೆ ಗೌರವ ವಿದೆ ವೈಶಿಷ್ಟತೆ ಇದೆ. ಭಾರತೀಯ ಸಂಸ್ಕ್ರತಿಯ ಕಣಜದಲ್ಲಿ ಸ್ಥಾನವನ್ನು ಪಡೆದು ಕೊಂಡಿರುವ ಇದರಲ್ಲಿ ಸ್ಪರ್ದಾತ್ಮಕತೆ ಬಂದಾಗ ಕೊಂಚ ಕೋಣಗಳು ನೋವನ್ನು ಉಣ್ಣುವುದು ಸಹಜ.. ಅದು ಅದನ್ನು ಒಡಿಸುವವವ ಪ್ರೀತಿಯ ಮಾರ್ಗದರ್ಶನದ ನೋವಾಗಿರುತ್ತದೇಯೆ ವಿನಾ: ಇದು ಹಿಂಸೆ ಎಂದು ಬಿಂಬಿತವಾಗಲ್ಲ. ಹೆತ್ತ ಮಕ್ಕಳಿಗೆ ಪೊಷಕರುಗಳು,ಗುರುಗಳು ಹೇಗೆ ತಿದ್ದಿತೀಡಿ ಆತ/ಆಕೆಯನ್ನು ಸಮಾಜದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡುತ್ತಾರೋ ಅದೇ ಅರ್ಥವನ್ನು ಕಂಬಳದಲ್ಲ್ಲಿ ಕೋಣವನ್ನು ಒಡಿಸುವವದ್ದು ಆಗಿರುತ್ತದೆಅದೇನೇ ಇರಲಿ ಕಂಬಳ ನಿಷೀಧಿಸಲಿ ಅದರ ಬಗ್ಗೆ ನನ್ನ ನೇರನಿಲುವು ಇದೆ ಆದರೆ ಅದರ ಅಣ್ಣನಂತಿರುವ ಗೋಹತ್ಯೆಯನ್ನು ನಿಷೀಧಿಸಲಿ.. ಅದನ್ನು ಬಿಟ್ಟು ಅಣ್ಣನಿಗೆ ಬಾಳೆ ಎಲೆ ನೀಡಿ ತಮ್ಮನಿಗೆ ಉಪವಾಸ ಕೆಡುಹುವ ನ್ಯಾಯಲಯದ ಅನ್ಯಾಯದ ವ್ಯವಸ್ತೆಗೆ ನನ್ನ ದಿಕ್ಕಾರ .... ದಿಕ್ಕಾರ ಇದೆ!!!
ಶುಕ್ರವಾರ, ನವೆಂಬರ್ 7, 2014
ನ್ಯಾಯ ಸತ್ತು ಹೋಗಿದೆ ?!
ಹೌದು ಇಂತದ್ದೊಂದು ಆತಂಕಕಾರಿ ಕೋಪದ ಕಿಡಿ ಒಡಲಲ್ಲಿ ಉರಿಯುತ್ತಿದೆ . ಬೇಲಿ ಕಾಯುವವರೇ ಎದ್ದು ಹೊಲ ಮೆಯ್ದರೆ ಇನ್ನೇನಾಗುತ್ತದೆ ? ವರ್ಷದ ಹಿಂದೆ ಸೌಜನ್ಯ ಮೊನ್ನೆ ಪ್ರಥ್ವಿ ನಿನ್ನೆ ರತ್ನ ಇಂದು ನಂದಿತಾ ನಾಳೆ ? ಏನೂ ಅರಿಯದ ಮುಗ್ದ ಕಂದಮ್ಮಗಳು ಅರಳುವ ಮೊದಲೇ ಮುದುಡಿ ಹೋಗುತ್ತಿದ್ದಾರೆ . ಅಮಾಯಕರು ಕಟ್ಟಿ ಕೊಂಡ ಬಗೆ ಬಗೆಯ ಕನಸ್ಸುಗಳೆಲ್ಲಾ ರಕ್ಕಸುರುಗಳ ತೆಕ್ಕೆಯಲ್ಲಿ ಕರಗಿ ಹೊಗುತ್ತಿದೆ. ಶಾಲೆ ಬಿಟ್ಟ ಹೆಣ್ಣು ಮಗಳೊಬ್ಬಳು ಮರಳಿ ನೇರವಾಗಿ ಮನೆಗೆ ಬರುತ್ತಾಳೆ ಎಂಬ ಯಾವುದೇ ನಿರೀಕ್ಷಣಾ ಭಾವವನ್ನು ಮನೆಯವರು ಇಟ್ಟು ಕೊಳ್ಳದಂಥಹ ಪರಿಸ್ಥಿತಿ ಆಧುನಿಕ ದಿನದಲ್ಲಿ ಮೆಳೈಸುತ್ತಿದೆ . ಇದು ನಮ್ಮ ದೌರ್ಭಗ್ಯ..! ಮುಗ್ದತೆ ಬಡತನವನ್ನು ಬಂಡವಾಳ ಮಾಡಿಕೊಂಡು ತಮ್ಮ ಕಾಮತ್ರಷೆ ಯನ್ನು ತೀರಿಸಿಕೊಳ್ಳುವ ಕಾಮ ಪಿಪಾಸುಗಳ ಹಾಗೂ ಅದನ್ನು ಪೋಷಿಸುವ ಪಾಪಿಗಳ ಲೋಕದಲ್ಲಿ ನ್ಯಾಯ ಸತ್ತೆ ಹೋಗುತ್ತಿದೆ ಅನ್ನುದು ಅತಿಶಯೋಕ್ತಿಯಾಗಲಾರದು . ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ವಿಧ್ಯಾರ್ಥಿನಿ ಸೌಜನ್ಯ (ಇದಕ್ಕೂಮೊದಲು ಕಾಮಂಧರ ಗರ್ಭ ಗುಡಿಯಲ್ಲಿ ಅದೆಷ್ಟೋ ಲೆಕ್ಕಕ್ಕೆ ಸಿಗದ ಸೌ.. ಜನ್ಯರು ) ತಮ್ಮ ಮಾನ - ಪ್ರಾಣವನ್ನು ಬಲಿಕೊಡುವಂತಾಯಿತು. ಯಾರ್ಯಾರು ಸೌಜನ್ಯಳನ್ನು ಇಲ್ಲವಾಗಿಸಿದ್ದಾರೆ ಎಂಬ ವಾತ್ಸವ ಕುರುಹುಗಳು ಇದ್ದರೂ , ಹೋರಾಟದ ಬಲವಿದ್ದರೂ ಇಂದಿಗೂ ಸಹಾ ನ್ಯಾಯದ ಬಾಗಿಲು ತೆರಲೇ ಇಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗಲೇ ಇಲ್ಲ. ನಂತರ ಬ್ರಹ್ಮಾವರ ದ ಎಸ್ ಎಂ ಎಸ್ ಕಾಲೇಜ್ ವಿಧ್ಯಾರ್ಥಿನಿ ಪ್ರಥ್ವಿಯ ನಿಗೂಢ ಸಾವು ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಸತ್ಯ ವಿಚಾರ ಎಂತಾ ಹುಂಬರಿಗೂ ಸಹಾ ತಿಳಿದಿದೆ ಆದರೆ ನ್ಯಾಯ ಎಲ್ಲಿ ? ಮೊನ್ನೆ -ಮೊನ್ನೆ ಇನ್ನೊಬ್ಬ ನತ ದ್ರಷ್ಟ ಹೆಣ್ಣುಮಗಳು ರತ್ನಾಳ ಸಾವು ಕೂಡಾ ರಹಸ್ಯವಾಗಿಯೇ ಉಳಿದಿದೆ. ಒಂದಷ್ಟೂ ಹೋರಾಟ , ಹಾರಾಟ ಮತ್ತೆದು ಮೂಲೆ ಗುಂಪು..! ಇದು ನಮ್ಮಕಾನೂನು , ಸಮಾಜ ,ರಕ್ಷಣೆ. ನ್ಯಾಯದ ಸ್ಥಿತಿ ಗತಿ ! ನೈಜ ವಿಚಾರ ಏನು ಎತ್ತ ಎಂಬುದು ಎಲ್ಲಾರಿಗೂ ಗೊತ್ತಿದೆ . ಆದರೆ ಸಂಗತಿ ಬಯಲಾಗುತ್ತಿಲ್ಲ.. ಅಪರಾಧಿಗಳು ಪತ್ತೆ ಯಾಗುತ್ತಿಲ್ಲ . ಯಾಕೆ ? ನ್ಯಾಯ ಸಿಗುತ್ತಿಲ್ಲ ಯಾಕೆ ? ಯಾಕೆ ? ತಪಿಸ್ತಿತರಿಗೆ ರಕ್ಷಣೆ ನೀಡಲು ಮಹಾನ್ ಕುಳಗಳ ಚಳಕ ಸದ್ದಿಲ್ಲದೇ ನಡೆಯುತ್ತಿರುವಾಗ ಪ್ರಕರಣ ಬೆಳಕಿಗೆ ಬರುವುದಾದರೂ ಹೇಗೆ ? ಮಹಾನ್ ಅತಿರಥರು ಮಹಾರಥರು ಆರೋಪಿ ಅಪರಾಧಿಗಳಿಗೆ ನೆರಳು ನೀಡುವಾಗ ನ್ಯಾಯದ ಜೊತೆಗೆ ಹೆಣ್ಣು ಮಕ್ಕಳ ಬಲಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಲ್ಲಿಯವರೆಗೆ ನಮ್ಮಲ್ಲಿ ಅನ್ಯಾಯ ಅ ನೀತಿ ತಾಂಡವ ವಾಡುತ್ತಿದೆ ಎಂದರೆ ಥೇಟ್ ಸಿನಿಮಾ ಶೈಲಿಯಂತೆ .. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ನಿನ್ನೆ ತೀರ್ಥಹಳ್ಳಿ ನಡೆದ ಘಟನೆಯೇ ಸಾಕ್ಷಿ ನುಡಿಯುತ್ತಿದೆ . ೮ನೇ ತರಗತಿ ವಿಧ್ಯಾರ್ಥಿನಿ ನಂದಿತಾಳನ್ನು ನಾಲ್ಕು ಜನ ಯುವಕರು ಕಾರಿನಲ್ಲಿ ಹೊತ್ತ್ಯೋದು ಗುಡ್ಡದ ಮೇಲೆ ಅತ್ಯಾಚಾರ ನಡೆಸಿ ನಂತರ ಬಹಿರಂಗವಾದರೆ ನಮಗೆ ತೊಂದರೆ ಎ೦ದಾಲೋಚಿಸಿ ಬಲತ್ಕಾರವಾಗಿ ವಿಷ ಕುಡಿಸಿ ಸಾಯುವ ಮೊದಲೇ ಅಲ್ಲಿಂದ ಕಾಲ್ಕಿತ್ತಿದ್ದ ಆರೋಪಿಗಳ ಸಂಪೂರ್ಣ ಚಿತ್ರಣವನ್ನು ಅಲ್ಲಿನ ಕೆಲ್ವಂದಿಷ್ಟು ಕಣ್ಣುಗಳು ನೋಡಿವೆ . ಆದರೆ ನಮ್ಮಲ್ಲಿನ ಕಾನೂನು ವ್ಯವಸ್ತೆ ಎಲ್ಲಿಯವರೆ ಹದಗೆಟ್ಟಿದೆ ಎಂದರೆ ? ನ್ಯಾಯ ದೊರಕಿಸಿ ಕೊಡುವ ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈ ಗೊಂಡು ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಗಮನ ವಹಿಸಿಯ ಬೇಕಾದ ಆರಕ್ಷಕ ಹಾಗೂ ಸಂಬ೦ದ ಪಟ್ಟ ಮಾಹಾ ಪ್ರಭುಗಳು ನಿಜಕ್ಕೂ ನಾಚಿಕೆಗೇಡು , ಹೇಸಿಗೆ ತರುವಂತೆ ರೀತಿಯಾಗಿ ನಡೆದು ಕೊಳ್ಳುವುದೇ ? ಎಲ್ಲೋ ಬೆರಳಣಿಕೆ ಮಂದಿಗಷ್ಟೇ ಸೀಮಿತವಾಗಿದ್ದ ಗೌರವಗಳು ಇಂತವರುಗಳಿಂದ ಎಲ್ಲಾರಿಗೂ ಸಹಾ ಕೆಟ್ಟ ಹೆಸರು . '' ನಾನು ಓದಿನಲ್ಲಿ ಹಿಂದಿದ್ದೆ ಅದರಿಂದ ನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೊಲೀಸರು ಹೀಗೊಂದು ಪತ್ರವನ್ನು ತಾವೇ ಮೂರು ದಿನಗಳ ಬಳಿಕ ಮುದ್ರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೇ ? ಇವರ ಜನ್ಮಕ್ಕಿಷ್ಟು ಬೆಂಕಿ ಹಾಕಾ ? ಹೇಳಿದರೆ ಸತ್ಯದ ತಲೆ ಮೇಲೆ ಹೊಡೆದ ರೀತಿ ಇರಬೇಕೆ೦ತೆ. ಬಾರಿ ಬುದ್ದಿ ಉಪಯೋಗಿಸಿದ ಈ ಸೇವಕ ಭಟರಿಗೆ ಅವಳ ಪೂರ್ಣ ಹೆಸರನ್ನೂ ಮುದ್ರಿಸಲು ಸಾಧ್ಯವಾಗಲಿಲ್ಲ. ನಾಚಿಕೆಯಾಗುದಿಲ್ಲವೇ ? ಯಾವ ಮುಖ ಹೊತ್ತು ಇದ್ದಾರೆ ? ಕ್ಯಾಕರಿಸಿ ಉಗಿಬೆಕು ! ಇನ್ನು ಇದನ್ನೇ ಕೆಲವು ಮಾಧ್ಯಮಗಳು ವಾಸ್ತವ ವೆಂಬಂತೆ ಪ್ರಸಾರ ಮಾಡಿದ ಇವುಗಳಿಗೆ ಯಾವ ನೈತಿಕತೆ ಇದೆ .. ಸಮಾಜ ಕಾಯುವರೆಂಬ ಹಣೆಪಟ್ಟಿ ಬೇರೆ ಇವುಗಳಿಗೆ !! ಕಾನೂನು -ಕಾಯ್ದೆ -ಕಟ ಕಟೆಗಳೆಲ್ಲಾ ಸುಟ್ಟು ಸುಡುಗಾಡು ಸೇರಿದೆ .. ! ಓದಿನಲ್ಲಿ ಸಾಕಾಷ್ಟು ಉತ್ತಮ ತನವನ್ನು ಕಾಯ್ದುಕೊಂಡು ಬಂದಿದ್ದಾಳೆ ಎಂದು ಅವಳ ಪ್ರೋಗ್ರೆಸ್ ಕಾರ್ಡ್ ಹೇಳುತ್ತಿದೆ , ಸಹಪಾಟಿಗಳು , ಪ್ರಾಚಾರ್ಯರು ನುಡಿಯುತ್ತಿದ್ದಾರೆ.
ಅನ್ಯಾಯ ಕಂಡಾಗ ನ್ಯಾಯ ದೊರಕಿಸಿ ಕೊಟ್ಟು ಅಪರಾಧಿಗಳನ್ನು ಶಿಕ್ಷಿಸುವದನ್ನು ಬಿಟ್ಟು ,ಅಪರಾಧಿಗಳನ್ನು ರಕ್ಷಣೆ ಮಾಡುತ್ತಿರುವ ಇಂತವರುಗಳಿಂದಲೇ ಇಂದು ಮಹಿಳೆಯರ ಸ್ಥಿತಿ ಡೋಲಾಯಮಾನವಾಗಿದೆ ದಿನಕ್ಕೊಂದು ಹೆಣ್ಣು ಮಾನ -ಪ್ರಾಣವನ್ನು ಕೆಳೆದು ಕೊಂಡು ಮಣ್ಣು ಪಾಲಾಗುತ್ತಿದ್ದಾಳೆ . ಅಪರಾಧಿಗಳನ್ನು ರಕ್ಷಿಸಿ ಎಂಜಲು ಕಾಸಿಗೆ ಕೈ ಚಾಚುವ ಇವರುಗಳ ಹೆಣ್ಣು ಮಕ್ಕಳಿಗೆ ಇಂಥ ಸ್ಥಿತಿ ಬಂದೊದಗಿದರೆ ಆಗ ಏನು ಮಾಡುತ್ತಾರೆ ? ಹೀಗೆ ಮುಂದು ವರಿಯುತ್ತಿದ್ದರೆ ಅದೇನು ಕಷ್ಟ ವಲ್ಲ !!
ಕೊನೆಯದಾಗಿ ಒಂದು ಮಾತು ಪ್ರಿಯರೆ ಎಂಜಲು ಕಾಸಿಗೆ ಕೈ ಒಡ್ಡ ಬೇಡಿ .. ನ್ಯಾಯ ದೊರಕಿಸಿ ಕೊಡಿ ಹಾಗೂ ಇಂತಹ ಘಟನೆಗಳು ಸಂಬವಿಸಿದಂತೆ ನೋಡಿಕೊಳ್ಳಿ ನಿಮ್ಮಿ೦ದ ಅದು ಸಾಧ್ಯ ವಾಗದೇ ಇದ್ದರೂ ಗಂಟೇನೂ ಹೋಗದು ಆದರೆ ಅಪರಾಧಿಗಳಿಗೆ ಮಾತ್ರ ರಕ್ಷಣೆ ಕೊಡಬೇಡಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)








