ಬುಧವಾರ, ಮಾರ್ಚ್ 21, 2012

ಯಕ್ಷಗಾನದ ಆ ದಿನ ..

ಆದಿನ ಯಕ್ಷಗಾನ ಬಯಲಾಟ ವಿದ್ದಿತ್ತಿತು .ಅದು " ಶ್ರೀ ಸಂಪೂರ್ಣ ದೇವಿ ಮಹಾತ್ಮೆ " ಪ್ರಸಂಗ .ದೇವಿ ಮಹಾತ್ಮೆ ಆಟ ಅಂದರೆ ಕೇಳಬೇಕೇ, ವಿಕ್ಷಕರ ಸಂಖ್ಯೆಗೆ ಮೀತಿಯೇ ಇರೂದಿಲ್ಲ.ಅದರಲ್ಲಿ ಬರುವ ದೇವತೆ /ದಾನವರ ಪಾತ್ರದಾರಿ ಗಳನ್ನೂ ನೋಡುದೆ ಚೆಂದ..ನಿದ್ರೆ ಯಲ್ಲಿದ್ದವರೂ ,ಒಂದ್ಚೂರು ಎದ್ದು ನೋಡುವಷ್ಟು ಕುತೂಹಲಕಾರಿಯಾಗಿರುತ್ತಾರೆ.ಕಲಾವಿದರೂ ಅಷ್ಟೇ ,ಈ ಪ್ರಸಂಗದ ದಿನದಂದು,ಎಂದಿನಂತೆ ಸ್ವಲ್ಪ ಹೆಚ್ಚೇ ತಮ್ಮ ವಯಕ್ತಿಕ ಎನರ್ಜಿ ಯನ್ನು ಪ್ರದಶಿಸುತ್ತಾರೆ.ವಿಕ್ಷಕರದ್ದೂ ಅಷ್ಟೇ ತಮಗೆ ಅರಿವಿಲ್ಲದಂತೆ ಚಪ್ಪಾಳೆ ,ಶಿಳ್ಳೆ ,ಪೊಂಖಾನು -ಪುಂಖ ವಾಗಿ ಹೊರಹೊಮ್ಮುತ್ತದೆ .ಆದಿನ ಮಾತ್ರ ಎಣಿಕೆಗೂ ಮೀರಿ ಚಪ್ಪಾಳೆ ,ಶಿಳ್ಳೆ ಸದ್ದುಮಾಡಿತ್ತು..ನಡೆದದ್ದು ಇಷ್ಟೇ .ಇದು ಬಹಳ ಅಪೂರುಪವೇನೋ ಅನ್ನಬಹುದು .ಈ ಪ್ರಸಂಗದ ಬೆಳಗ್ಗಿನ ಜಾವದ ಸಮಯ 'ಮಹಿಷಾಸುರ' ವೇಷ ಧಾರಿ ಯ ಆಗಮನ ವಾಗುದು ವಾಡಿಕೆ .ಆದರೆ ಆ ದಿನ ಮಾತ್ರ ಮಹಿಷಾಸುರನ ವೇಷ ಧಾರಿ  ಬಹಳ ಬೇಗ ರೆಡಿ ಆಗಿ ಬಂದಿದ್ದರು.
 ಹೀಗೂ ಆಗ್ತದೆ..
.ರಂಗಸ್ಥಳಕ್ಕೆ ಆಗಮಿಸಲು ಇನ್ನು ಸಾಕಷ್ಟು ಸಮಯವಿರುದರಿಂದ ಆತ ಹೊರವಲಯದಲ್ಲಿ ನಿಲ್ಲಿಸಿದ್ದ ಒಂದು ಬಾಡಿಗೆ ಕಾರಿನಲ್ಲಿ (ಮಾರುತಿ ಒಮ್ನಿ ) ಸ್ವಲ್ಪ ಸುಧಾರಿಸಿಕೊಳ್ಳುವ ಅಂತ ನಿದ್ರಗೆ ಜಾರಿದ್ದರು .ಆ ಬಾಡಿಗೆ ಕಾರಿನ ಚಾಲಕ ಬಾಡಿಗೆ ದಾರರನ್ನು ಬಿಳ್ಕೋಟ್ಟು ಸ್ವಲ್ಪ ಆಟ ನೋಡುವ ಬಯಕೆ ಇಂದ ಯಕ್ಷಗಾನ ನೋಡುದರಲ್ಲಿ ಮಗ್ನ ವಾಗಿದ್ದ. ಸುದೀರ್ಘ ಸಮಯದ ನಂತರ ನಿದ್ದ್ರೆಯ ಮಪ್ಪರು ಕವಿದಿದ್ದರಿಂದ ,ಹೊರಡಲು ಅಣಿಯಾದ .ಹಿಂದೂ -ಮುಂದೆ ನೋಡದೆ ಕಾರನ್ನು ಸ್ಟಾರ್ಟ್  ಮಾಡಿ ಹೊರಟ.ಹಳ್ಳಿ ರಸ್ತೆ ,ದುರ್ಗಮ ಹಾದಿ,ನೀರಾಳ ಮೌನ ..ಅದಾಗಲೇ ಯಕ್ಷಗಾನದ ಲೋಕೇಶನ್ ಇಂದ ಮೂರು ಕೀ.ಮೀ .ಬಂದಾಗಿತ್ತು .ಹಿಂದೆ ಮಲಗಿದ್ದ ಮಹಿಷಾಸುರ ಪಾತ್ರ ಧಾರಿಗೆ  ತಟ್ಟನೆ ಎಚ್ಚರ ವಾಗಿಬಿಟ್ಟಿತ್ತು.'ಹೊಇ ,ಹೊಇ ಗಾಡಿ ನಿಲ್ಸಿ' ಎಂದು ಬೋಬ್ಬಿಟಾಗ ಬೆಚ್ಚಿಬಿದ್ದ ಕಾರಿನ ಚಾಲಕ ಮೂರ್ಚೆ ಹೋಗುದೊಂದೇ ಬಾಕಿ .! ನಡುರಾತ್ರಿ,'ಹಗ್ಗ ಕಂಡರೆ ಹೆದರುವವನ ಮೇಲೆ ಹಾವೇ ಎಸೆದಂತೆ ' ಪರಿಸ್ತಿತಿ ಉದ್ಭವ ವಾಗಿತ್ತು ಆತನಿಗೆ .ರಂಗಸ್ಥಳದಲ್ಲಿ ಅವರ ವೇಷ -ಭೂಷಣ ,ಹಾವ-ಭಾವ ವನ್ನು ಒಂದು ಕ್ಷಣ ದಿಗಿಲು ಹಾರುವ ಸನ್ನಿವೇಶದಲ್ಲಿ ,ಈ ಸಮಯದಲ್ಲಿ ಆ ಚಾಲಕನ ಮನಸ್ಥಿತಿ ಹೇಗಾಗಿರಬೇಡ ?ಹೆದರಿ ಹೆಬ್ಬಂಡೆ ಯಾಗಿದ್ದ ,ಚಾಲಕನ ಹಿಡಿತ ತಪ್ಪಿ ಕಾರು ಎತ್ತೆತ್ತಲೋ ಹರಿದಾಡಿದರೂ,ಕೊನೆಗೂ ಉತ್ತಮ ರೀತಿಯಲ್ಲಿ ನಿಲುಗಡೆ ಗೊಂಡಿತು .ಮಹಿಷಾಸುರನ ವೇಷಧಾರಿ , ನಡೆದ ಘಟನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದಾಗ, ಭಯದ ನಡುವೆಯೂ ಹೊಟ್ಟೆ ತುಂಬಾ ನಗದೇ ಇರಲಾರ .' ಅಂತೂ ನನ್ನ  ಹೇಗಾದರೂ ಮಾಡಿ ಯಕ್ಷಗಾನ ನಡೆಯುವ ಸ್ಥಳಕ್ಕೆ ಬಿಟ್ಟು ಬಿಡಿ .ನನ್ನ ಪಾತ್ರದ ರಂಗ ಪ್ರವೇಶದ ವೇಳೆ ಯಾಯಿತು ,ದಯಮಾಡಿ ಸಹಕರಿಸಿ 'ಎಂದು ಅಂಗಲಾಚಿದಾಗ,ಚಾಲಕನೇನೋ ಆದಷ್ಟು ಬೇಗ ಕರೆತoದನಾದರೂ,ಸಮಯ ಬಹಳಷ್ಟು ಮೀರಿಯಾಗಿತ್ತು ,ಇತ್ತ ಮಹಿಷಾಸುರನ ತಾಯಿ ಪಾತ್ರಧಾರಿ "ಮಗನೇ,ಮಗನೇ ಮಹಿಷಾಕ್ಯ ಎಂದು ಬೋಬ್ಬಿಡುತ್ತಿದ್ದರೆ, ಮಹಿಷಾಸುರ ನಾಪತ್ತೆ ......