ಮಂಗಳವಾರ, ಅಕ್ಟೋಬರ್ 18, 2011

ನನ್ನೂರು ನಂಗಿಷ್ಟ

ಮೆಟ್ಕಲ್ ಗುಡ್ಡೆ
ಹಚ್ಚ-ಹಸುರಿನ  ಪ್ರಕೃತಿ ಸೌಂದರ್ಯದ  ಸೊಬಗಿನ ನನ್ನೂರು ಹೊಸಂಗಡಿ ..ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಪುರ್ವಾಭಿಮುಖ  ವಾಗಿ ೩೫ ಕಿ.ಮೀ . ಚಲಿಸಿದರೆ, ಪಶ್ಚಿಮ ಘಟ್ಟದ ಪುಟ್ಟ ಪ್ರಾಂತ್ಯದ ದಿಗ್ದರ್ಶನ  ವಾಗುತ್ತದೆ ..ಇದು ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸೀಮಾ ರೇಖೆ ಯಲ್ಲಿ ಕಂಡು ಬಂದರೂ ,ಹೆಚ್ಚಿನ ಪ್ರಮಾಣದಲ್ಲಿ ಉಡುಪಿ ಜಿಲ್ಲೆಗೆ ಸೇರಿರುದರಿಂದ , ಇದನ್ನು ಉಡುಪಿ ಗೆ ಸೇರಿಸಲಾಗಿದೆ.. ಶಿವಮೊಗ್ಗ ಮತ್ತು ಸಾಗರದಂಥ ಊರುಗಳಿಗೆ ಪ್ರಯಾಣಿಸಲು ಸಿದ್ದಾಪುರ ದಿಂದ ಹೊಸಂಗಡಿ  ಮಾರ್ಗವು  ಸುಲಭ 'ಹೊಸ ಗಡಿ' ಯಂತೆ ಕರೆಯುತಿದ್ದೂ . ಕ್ರಮೇಣ ಹೊಸಂಗಡಿ ಆಯಿತು ಎಂಬ ಪ್ರತೀತಿ ಒಂದಡೆಯಾದರೆ, ಪ್ರದೇಶದಲ್ಲಿ ಮೊಟ್ಟ ಮೊದಲು ಒಂದೇ -ಒಂದು  ಅಂಗಡಿ ಸ್ಥಾಪಿಸಲ್ಪಟ್ಟಿದ್ದೂ ,ಇದಕ್ಕೆ "ಹೊಸ ಅಂಗಡಿ "ಎಂದು ಕರೆಯುತ್ತಿದ್ದು ,ನಂತರ ಹೊಸಂಗಡಿ  ಎಂಬ ನಾಮಕಿಂತ ಗೊಂಡಿತು  ಎಂಬ ಪ್ರತೀತಿ ಇದೆ.  .................................

ಕೋಟೆ ಕೆರೆ 

ಇಲ್ಲಿನ ಗ್ರಾಮ ಪಂಚಾಯತ್ ಗೆ ಸಂಭಂದ ಪಟ್ಟಂತೆ ಅರ್ಧ ಎಡಮೊಗ್ಗೆ ಇಂದ ಹಿಡಿದು ಅರ್ಧ ಹೆನ್ನಾಬೈಲು ವರೆಗೆ ವಿವಿಧ ನಾಮಧೇಯದೊಂದಿಗೆ  ಹಲವಾರು  ಪುಟ್ಟ -ಪುಟ್ಟ ಪ್ರದೇಶವನ್ನು ಹೊಂದಿದೆ .ಇದರಲ್ಲಿ ಮುಖ್ಯವಾಗಿ ..ಅರೆಮನೆ ,ಬಾಗಿಮನೆ,ಗೆರ್ಸಿಕಲ್ಲು ,ಹೊನಕನಬೈಲು ,ಗೆದ್ದಿಮನೆ ,ಕೋಣನ ಬೈಲು,ಕಲ್ಲುಗುಡ್ಡೆ,ಕಾರೂರು,ಬೆದ್ರಳ್ಳಿ ,ಕೆರೆಕಟ್ಟೆ ,ಹೆನ್ನಾಬೈಲು ,ಬಾಳೆಜೆಡ್ದು,ಹುನ್ಸಿ ಯಾಡಿ,ಹಾಡಿಮನೆ,ಕೆಪ್ಪೆಹೊಂಡ,ಬದ್ರಾಪುರ,ಮುಲ್ಲಿಗೆದ್ದಿಜಂಬೆ,ಬಂಗ್ಲಿ ಗುಡ್ಡೆ ,ಇನ್ನು ಮುಂತಾದ ಪ್ರದೇಶಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.ಒಟ್ಟಾರೆ ಸರಾಸರಿ ಸುಮಾರು 12 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಯನ್ನು ಹೊಂದಿದರೆ ,ಇನ್ನು 2 ಸಾವಿರಕ್ಕೂ ಹೆಚ್ಚು ನಿವಾಸಿಗಳು  ನನ್ನೂರಿನ ಉತ್ತರ ಭಾಗದಲ್ಲಿ ನಿರ್ಮಿಸಲ್ಪಟ್ಟ ಕಾಲೋನಿಯಲ್ಲಿ ನೆಲೆಸಿದ್ದಾರೆ.ನಾನ್ನುರಿನ ಜನರು ಶ್ರಮ ಜೀವಿಗಳು ಇಲ್ಲಿ ಹೆಚ್ಚಾಗಿ ಕೃಷಿಯನ್ನೇ ತಮ್ಮ ಬದುಕಿನ ಬಂಡವಾಳ ವಲವನ್ನಗಿಸಿಕೊಂಡಿದ್ದಾರೆ .ಇಲ್ಲಿ ತೆಂಗು ,ಅಡಿಕೆ ,ಬಾಳೆ,ತರಕಾರಿ ಮುಂತಾದ ಬೆಳೆಗಳನ್ನು ಕಾಲಕ್ಕೆ ಬೆಳೆಯಲಾಗುತ್ತಿದೆ .ಇನ್ನು ಪರ್ಯಾಯ ಬೆಳೆಯಾಗಿ ಗೇರು ಮತ್ತು ರಬ್ಬರ್ ಕೂಡ ಅವಲಂಬಿತ ವಾಗಿದೆ.ಕೆ.ಪಿ .ಸಿ ಯಲ್ಲಿ   ಬಹಳ ವಿಶಾಲವಾದ ಕ್ರೀಡಾಂಗಣ ವನ್ನು ಹೊಂದಿದ್ದು ,ಇತ್ತೀಚಿಗೆ ಪುನರ ದುರಸ್ತಿ ಕಾರ್ಯವನ್ನು ಕೊಳ್ಳಲಾಗಿದೆ .ವರ್ಷವೀಡಿ  ಇಲ್ಲಿ ವಿವಿಧ ಕ್ರೀಡಾ ಕೂಟ ಗಳು ನಡೆಯತ್ತದೆ .ಹೊಸನಗರ ಮತ್ತು ಕುಂದಾಪುರ ತಾಲೂಕ ಮಟ್ಟದ  ವಾಲಿ ಬಾಲ್ ಮತ್ತು ಕ್ರಿಕೆಟ್ ಪಂಧ್ಯಾಟ  ಹಗಲು ರಾತ್ರಿ ವರ್ಷದಲ್ಲಿ ಒಮ್ಮೆ ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ

ಭೂ -ಗರ್ಭ ವಿದ್ಯುದಾಗಾರದ  ಸ್ವಾಗತ ಬಾಗಿಲು

ಹೆಮ್ಮೆಯ ಪ್ರತೀಕ : ನನ್ನೂರಿನ ಹೆಮ್ಮೆಯ ಪ್ರತೀಕ ವೆಂಬಂತೆ ,ಸರ್ .ಎಂ .ವಿಶ್ವೇಶ್ವರಯ್ಯ ನಿರ್ಮಿತ ರಾಜ್ಯದಲ್ಲಿಯೇ ಪ್ರ-ಪ್ರಥಮ ವೆಂಬಂತೆ 115*4 ಮೆಗಾ ವ್ಯಾಟ್  ಸಾಮರ್ಥ್ಯದ ಭೂ ಗರ್ಭ ವಿದ್ಯುದಾಗರವನ್ನು (under  ground  power house ) ಹೊಂದಿದೆ .
ನಂತರ ಇಲ್ಲಿಂದ ಸ್ವಲ್ಪ ದೂರ ಬಗೀಮನೆ ಎಂಬಲ್ಲಿ ಇತ್ತೀಚಿಗೆ 22*5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲವಿದ್ಯುತ್ ಸ್ಥಾಪಿಸಲ್ಪಟ್ಟಿದೆ .ಇದು ನನ್ನುರಿಗಲ್ಲದೆ, ರಾಜ್ಯಕ್ಕೆ ಕತ್ತಲೆ ಬೆಳಕಿಗೆ ಸಂಜೀವಿನಿ ದೊರೆತಂತಾಗಿದೆ .ಜನಪ್ರಿಯ ನದಿ ವಾರಾಹಿ ಉಗಮಿಸಿರುದು ,ನೆಲೆನಿಂತಿರುವದು ನನ್ನುರಿನಲ್ಲಿಯೇ.ಇಲ್ಲಿನ ಹೃದಯ ಭಾಗದಿಂದ 3 ಕಿ ಮಿ .ದೂರದಲ್ಲಿ 'ಮೆಟ್ಕಲ್  ಗುಡ್ಡೆ ' ಎಂಬ ಸುಮಾರು ಎರಡು ಸಾವಿರಕ್ಕೂಅಡಿ  ಎತ್ತರದ ಬೆಟ್ಟವಿದ್ದೂ, ಇಲ್ಲಿ ಗಣಪತಿ ದೇವಸ್ಥಾನ

ವಿದೆ.ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆ ಇಂದ ಜಾತ್ರ ಮಹೋತ್ಸವ ಆಚರಿಸಿಕೊಳ್ಳಲಾಗುತ್ತಿದೆ .ಅಬಲ ರಿಂದ ವ್ರದ್ಧರ ವರೆಗೆ ಭಕ್ತಿ ಪೂರ್ವಕವಾಗಿ . ಬೆಟ್ಟವನ್ನೇರಿ ಶ್ರೀ ದೇವರ ಭಕ್ತಿ ಗೆ ಪಾತ್ರರಗುತ್ತಿರುದು ಸೋಜಿಗವೇ ಸರಿ .ಪುರಾಣ ,ಪ್ರಾಚೀನ ಕಾಲದಲ್ಲಿಯೂ ನನ್ನೂರು ಬಹಳ ಉತ್ತುಂಗದಲ್ಲಿ ತೇಲಾಡಿತ್ತು, ಬ್ರಿಟಿಷರ ಆಳ್ವಿಕೆ ಯೂ ಇಲ್ಲಿ ಜೋರಾಗಿತ್ತು ,ಶಿವಪ್ಪ ನಾಯಕ ,ಭದ್ರರಾಜರು ಗಳು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಹಲವಾರು ಕುರುಹು ಗಳು ಕಾಣಸಿಗುತ್ತಿದೆ .ಶತಮಾನಗಳ ಹಿಂದೆ ಇಲ್ಲಿಶಿವಪ್ಪ ನಾಯಕನ ಕೊಟ್ಟೆ ಇದ್ದೂ  ,ಬ್ರಿಟಿಷರು ಮೆಟ್ಕಲ್ ಗುಡ್ಡ ದಿಂದ ಪಿರಂಗಿಯ ಮೂಲಕ ಕೋಟೆಯನ್ನು ,ದ್ವಂಸ ಮಾಡಿದ್ದರು ಬ್ರಹತ್ ಗಾತ್ರದ ಕೆರೆಯಾಗಿ ರೂಪುಕೊಂಡು ,ಇದಕ್ಕೆ "ಕೋಟೆಕೆರೆ "ಎಂಬ ಎಂಬ ನಾಮಾಂಕಿತ ದೊಂದಿಗೆ ವರ್ಷವಿಡೀ ನೀರು ನಿಂತು,ನೆರೆಯ ರೈತರಿಗೆ ,ಕೃಷಿಗೆ ಜೀವದನವಾಗಿದೆ.ಹಾಗೆಯೆ ಇಲ್ಲಿಂದ 7 ಕಿ.ಮಿ .ದೂರದಲ್ಲಿರುವ ಯೆದಮೊಗ್ಗೆ ಎಂಬ ಗ್ರಾಮವು ,ತಾಲೋಕಿನದ್ಯಂತ ಕೆಂಪು ಕಲ್ಲು ಉತ್ಪಾದನೆಗೆ ಹೆಸರುವಾಸಿಯಾಗಿದೆ .ಸಾವಿರಾರು ಲೋಡ್ ಗಳು ಕೆಂಪು ಕಲ್ಲು ಗಳು ಪ್ರತಿದಿನ ಇಲ್ಲಿ ಉತ್ಪತಿಯಾಗುತ್ತದೆ.

ಕೆರೆಕಟ್ಟೆ ಸಂತ ಅನ್ತೋನಿಯವರ ಚರ್ಚ


ಕೆ.ಪಿ.ಸಿ .ಗಣಪತಿ ದೇವಸ್ಥಾನ


ಧಾರ್ಮಿಕ ,ಕಲೆ ,ಸಾಂಸೃತಿಕ: ನನ್ನೂರಿನ ಜನರು ಸ್ನೇಹ  ಜೀವಿಗಳು ಹೌದು ..ಹಲವು ಧರ್ಮೀಯರ ನೆಲೆಬೀಡಾದ  ನನ್ನೂರಿನಲ್ಲಿ ಹಿಂದೂ ,ಕ್ರೈಸ್ತ ,ಮುಸ್ಲಿಂ ,ಹೀಗೆ ಪ್ರತಿಯೊಂದು ಧರ್ಮಿಯರನ್ನು ಹೊಂದಿದ್ದರೂ ,ಗಲಭೆ ,ಘರ್ಷಣೆ ರಹಿತ ಒಗ್ಗಟ್ಟಿನಲ್ಲಿ ಬಲ ವಿದೆ ವೆಂಬಂತೆ ಕಾಪಾಡಿದೆ .
ಕೆ.ಪಿ.ಸಿ .ಕ್ರೀಡಾಂಗಣ
 .ಕೆರೆಕಟ್ಟೆ ಶಾಂತೇಶ್ವರ ದೇವಸ್ಥಾನ ,ಗುಂಡುಮಣಿ ಗಣಪತಿ ,ಹುನ್ಸಿಯಾಡಿ ವಿರೂಪಾಕ್ಷ ದೇವಸ್ಥಾನ ,ಎಡಮೊಗ್ಗ ವ್ರದ್ದಿಕಾನು ,ಕೆ.ಪಿ .ಸಿ ಗಣಪತಿ ,ಆಂಜನೇಯ ,ವೀರ ವಿಠಲ,ಕಲ್ಲುಗುಡ್ಡೆ ಕಲ್ಲು ಕುಟಿಕ,ಹೀಗೆ ಹತ್ತಾರು ದೇವಸ್ಥಾನಗಳಲ್ಲಿ ದಿನ ನಿತ್ಯ ಪೂಜಾ-ಪುನಸ್ಕಾರದೊಂದಿಗೆ ವರ್ಷಕ್ಕೊಮ್ಮೆ ಜಾತ್ರ ಮಹತ್ಸೋವ ಅದ್ದೂರಿಯಾಗಿ ನೆರವೇರುತ್ತಿದೆ .ಶನಿವಾರ ಆಂಜನೇಯ ದೇವಸ್ಥಾನ ,ಸೋಮವಾರ ಶಾಂತೇಶ್ವರ ದೇವಸ್ಥಾನಕ್ಕೆ ಹಣ್ಣು -ಕಾಯಿ ಯೊಂದಿಗೆ ,ತೆರಳುವ ಇಲ್ಲಿನ ಭಕ್ತರನ್ನು ,ನೋಡಲು ಎರಡು ಕಣ್ಣುಗಳು  ಸಾಲದೆಂಬಂತೆ ಭಾಸವಾಗುತ್ತದೆ.
ಹಾಗೆಯೆ ಕೆರೆಕಟ್ಟೆ ಯಲ್ಲಿ  ಸಂತ ಅಂತೊನಿಯವರ ಚರ್ಚ  ನ್ನು ಇತ್ತೀಚಿಗೆ ಕೋಟಿ ರೂಪಾಯಿ  ವೆಚ್ಚದಲ್ಲಿ ಪುನರ ನವೀಕರಣ ಮಾಡಲಾಗಿದೆ .ವರ್ಷಕ್ಕೆರಡು ಬರಿ ಬಾರಿ ಮಹೋತ್ಸವ ಇಲ್ಲಿ ನಡೆಯುತ್ತದೆ .ಪರ ಊರಿನಿಂದಲೂ ಕ್ರೈಸ್ತ ಬಾಂಧವರು ,ನನ್ನೂರಿಗೆ ಕಾಲಿಡುತ್ತಿರುದು ಹೆಮ್ಮೆಯ ಹೆಗ್ಗಳಿಕೆ .
ಕಾಲೇಜ್

ಹಿರಿಯ ಪ್ರಾಥಮಿಕ ಶಾಲೆ
ಹಿಂದೂ -ಮುಸ್ಲಿಂ -ಕ್ರಿಸ್ತ .ಹೀಗೆ ಪ್ರತಿಯೊಂದು ಧರ್ಮೀಯರನ್ನು , ಹೊಂದಿದ್ದೂ ಹಲವು ಧರ್ಮೀಯರ ನೆಲೆಬೀಡದರೂ ,ಸ್ನೇಹಜೀವಿ ಯಂತೆ ಕಾಪಾಡಿದೆ ..ಹಾಗೆ ಕೆರೆಕಟ್ಟೆ ಶಾಂತೇಶ್ವರ ,ಯೆದಮೊಗ್ಗೆ ವ್ರದ್ದಿಕಾನು ,ಗುಂಡು ಮಾಣಿ  ಗಣಪ ,ಕಲ್ಲುಗು ಡ್ಡೆ ವೀರ ಕಲ್ಲು ಕುಟಿಕ, ಕೆ.ಪಿ .ಸಿ .ಗಣಪತಿ ,ಆಂಜನೇಯ ,ಹುನ್ಸಿಯಾಡಿ ವಿರೂಪಾಕ್ಷ ,ಹೀಗೆ ವರ್ಷಕೊಮ್ಮೆ ವಿಜ್ರಮ್ಬನೆ ಇಂದ ಆಚರಿಸಿಕೊಂಡರೆ, ಕೆರೆಕಟ್ಟೆ ಸಂತ ಅನ್ತೊನಿಯವರ ಚರ್ಚ ,ಹೊಸಂಗಡಿ ಮೆಲ್ಪ ಟೆ ಯಲ್ಲಿ ಇನ್ನೊಂದು ಚರ್ಚ್ ನ್ನು ಹೊಂದಿದೆ ಇನ್ನು ಒಂದು ಜುಮ್ಮಾ ಮಸಿದಿ ಮತ್ತು ಪುಟ್ಟ ಉರ್ಧುಶಾಲೆ ಯನ್ನು ಅಲ್ಲಿಯೇ ನಿರ್ಮಿಸಲಾಗಿದೆ ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಗೆ ಎಡಮೊಗ್ಗೆ,ಕೆ.ಪಿ.ಸಿ ವಸಾಹತು ಮತ್ತು ಗ್ರಾಮೀಣ ಎಂಬ ಮೂರು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ದಿನಗಳವರೆ ವಿವಿದ ಸಂಸೃತಿಕ ,ಚಟುವಟಿಕೆ ಗಳೊಂದಿಗೆ ಆಚರಿಸಲಾಗುತ್ತಿದೆ .ಎಲ್ಲ ಕಡೆಗಳಲ್ಲಿರುವಂತೆ ನಮ್ಮಲ್ಲಿಯೂ ಸಹಾ ಅವರವರ ಭಾವ ಅವರವ ಭಕುತಿಗೆ ತಕ್ಕಂತೆ ಸಂಪ್ರದಾಯಕ್ಕನುಗುಣವಾಗಿ ಧಾರ್ಮಿಕ ಪ್ರಪಂಚ ಜಗಮಗಿಸುತ್ತಿದೆ .
ಸಾರ್ವಜನಿಕ ಗಣೇಶೋಸ್ಥವ
ಕಲೆ ಸಾಂಸೃತಿಕ ಚಟುವಟಿಕೆ ಬಗ್ಗೆ ಹೇಳಲು ಹೊರಟರೆ ಅದು ಸಂಪತ್ಭರಿತ.lkg ,ukg ಅಂಗನವಾಡಿ ,ಹಿರಿಯಪ್ರಾಥಮಿಕ ,ಹೈಸ್ಕೂಲ್ ,ಕಾಲೇಜ್ (puc ) ಹಿರಿಯ ಪ್ರಾಥಮಿಕ ಇಂಗ್ಲಿಷ್ ಮದ್ಯಮ ವನ್ನು  ಹೊಂದಿದೆ .ಕಾಲೇಜ್ ವಿದ್ಯಾಭ್ಯಸಕ್ಕಾಗಿ ದೂರದ ನೆರೆಯ ಊರುಗಳಾದ ತೊಂಬಟ್ಟು,ಹಳ್ಳಿಹೊಳೆ ,ಆಜ್ರಿ ,ಸಿದ್ದಾಪುರ ,ಮುಂದಾದ ಊರು ಗಳಿಂದ ವಿದ್ಯಾರ್ಥಿಗಳು ,ಇಲ್ಲಿಗೆ ಬರುತ್ತಾರೆ ,ಒದೂದರಿಂದ ಹಿಡಿದು ಆಟೋಟ ವಿಭಾಗದಲ್ಲಿಯೂ ನನ್ನ ಊರಿನ ಹೆಸರು ಆಗಲೇ ಇತಿಹಾಸ ವನ್ನು ಸೇರಿದೆ . ....2010 -2011  ಸಾಲಿನ sslc  ವಾರ್ಷಿಕ ಪರೀಕ್ಷೆ ಯಲ್ಲಿ  ನನ್ನೂರಿನ ಕುಹರಿ  'ಕೀರ್ತನಾ ಪೈ' 618  ಅಂಕಗಳೊಂದಿಗೆ ನಮ್ಮೂರಿನ  ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದು ನಮ್ಮೂರಿಗೆ ಹೆಸರನ್ನು ತಂದು ಕೊಟ್ಟಿದ್ದಾಳೆ ..
ಅಶ್ವಿನಿ ಶಾಲಾ ಸನ್ಮಾನದಲ್ಲಿ ..

ಅಕ್ಷತಾಗೆ ಅಬಿನಂದನೆಗಳ ಮಹಾಪೂರ
.ತ್ರೋಬಾಲ್ ,ಖೋ ಖೋ, ಶಟ್ಲ  ಬ್ಯಾಡ್ಮಿಟನ್,ರಿಂಗ್ ,ಇನ್ನು ಮುಂತಾದ ಕ್ರೀಡೆ ಯಲ್ಲಿ ವರ್ಷದಿಂದ ವರ್ಷಕ್ಕೆ ವಲಯ ,ತಾಲೂಕು ,ರಾಜ್ಯ ,ರಾಷ್ಟ್ರ ,ಮಟ್ಟದಲ್ಲಿ ಸಹಾ ಬಾಚಿ ಕೊಳ್ಳುತ್ತಾ ಬಂದಿದೆ .ಬಂಗಾರದ ರಾಣಿ  ,ಅಶ್ವಿನಿ ಅಕ್ಕುಂಜೆ ನನ್ನೂರಿನ ಶಾಲೆಯಲ್ಲಿಯೇ ವಿಧ್ಯಾಭ್ಯಾಸ ಮಾಡಿದ್ದು.ಶೈಲ ,ಅನಿತಾ ಶೆಟ್ಟಿ ರಾಜ್ಯ ಮಟ್ಟದ ಓಟದಲ್ಲಿ ನನ್ನೂರಿಗೆ ಹೆಸರು ತಂದು ಕೊಟ್ಟಿದ್ದಾರೆ
rj ಪ್ರಸನ್ನ

ಇನ್ನು ಯಕ್ಷಗಾನ ಕಲಾವಿದರ ದಂಡೆ ನನ್ನುರಿನಲ್ಲಿದೆರಂಗನಾಯಕಿ -ಬಾಗಿಮನೆ ರಾಜು ಶೆಟ್ಟಿ ,ಜೂನಿಯರ್ ಕಳಿಂಗ ನಾವುಡರೆಂದು ಹೆಸರು ಪಡೆದರವಿ ಶೆಟ್ಟಿ ,ಅಭಿಮನ್ಯು-ಕೊಳಲಿ ಕೃಷ್ಣ ,ಯಕ್ಷ ಖಳನಾಯಕ -'ಭದ್ರಾಪುರ ಶ್ರೀಧರ್ ',ಹಾಸ್ಯ ಚಕ್ರವರ್ತಿ -ಬೇದ್ರಳ್ಳಿ ಚಂದ್ರ ಶೆಟ್ಟಿ ,ಮಾತಿನ ಮಲ್ಲಿಕೃಷ್ಣ,  ಹೆನ್ನಬೈಲು ಸಂಜು ಶೆಟ್ಟಿ ,  ಹೀಗೆ ಇನ್ನು ಹತ್ತು ಹಲವು ಕಲಾವಿದರು ಬಡಗು ಮತ್ತು ತೆಂಕುತಿಟ್ಟು ಉಭಯ ಯಕ್ಷಗಾನ ರಂಗದಲ್ಲಿ   ಯಕ್ಷ ಲೋಕದ ರಂಗ ಮಂಚ ದ ದಿಗ್ವಿಜಯ ಕ್ಕೆ ದಾಂಗುಡಿ ಇಡುತ್ತಿದ್ದಾರೆ .ಮಂಗಳೂರ 93.5 ನಲ್ಲಿ ರಜ್ "ರೆಟ್ರೋ ರಾತ್ರಿ""ನೆನಪಿನ ನಾವಿಕ " ಯಾಗಿರುವ ಪ್ರಸನ್ನ ನನ್ನುರಿನವರೆ .. ನನ್ನೂರಿನ ಬಗ್ಗೆ ನಂಗೆ ಹೇಳುದಕ್ಕೆ ಹೊರಟರೆ ಬಹಳಷ್ಟು ಹೆಮ್ಮೆ ಅನ್ನಿಸುತ್ತದೆ ..ನನ್ನೂರಿನ ವೈಶಿಷ್ಟ್ಯದ ಬಗ್ಗೆ ನಡು -ನುಡಿ ಯ ನಿರೂಪಣೆ 1  ಅಧ್ಯಾಯವೇ ಆಗಬಹುದು ..ಮುಗಿಲಿನಲ್ಲಿ ಹೊಳೆಯುವ ಚಂದ್ರನನ್ನು ಹಿಡಿದು ಆಟವಾಡಿದಂತೆ ..ಸಪ್ತ ಸಮುದ್ರದಾಚೆಗೆ ಚೆಂಗನೆ ನೆಗೆದೇನು ಎನ್ನುವಂತೆ ...ಏನೆ ಇರಲಿ ನನ್ನೂರು ಉತ್ತುಂಗಕ್ಕೆ ಏರಿದೆ .ಇದು ನಿರಂತರವಾಗಿರಲಿ  .ಇನ್ನಷ್ಟು ಮುಂದುವರಿಲಿ ಎನ್ನುದು ನನ್ನ ಒಡಲಧ್ವನಿ  ಯ ಆಶಯ ..ಅಭಿರುದ್ದಿ ಪಥದತ್ತ ಸಾಗುತ್ತಿರುವ ನನ್ನೂರಿಗೆ ಅಭಿಮಾನದ ಅಭಿವಂದನೆ..


----------ಶಿವಕುಮಾರ್ ಹೊಸಂಗಡಿ.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ