ಶುಕ್ರವಾರ, ಮೇ 31, 2013

ಉಡುಪಿ ಶ್ರೀಕೃಷ್ಣಮಠ ಮುಜರಾಯಿ ಇಲಾಖೆಗೆ ಒಳಪಡಿಸಬಾರದು .

ಮುಖ್ಯ ಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಉಡುಪಿ ಶ್ರೀಕೃಷ್ಣ ಮಠವನ್ನು ರಾಜ್ಯದ  ಮುಜರಾಯಿ ಇಲಾಖೆಗೆ ಸೇರ್ಪಡೆ ಗೊಳಿಸಬೇಕೆಂಬ ತೀರ್ಮಾನ ಕೈಗೊಂಡಿದ್ದರ ಬಗ್ಗೆ ಯಾರೂ ಚಾಕರವೆತ್ತದಿವುದು ಬೇಸರದ ವಿಚಾರ.  

ಮದ್ವ ಕ್ಷೇತ್ರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ 8 ಮಠಗಳಿದ್ದೂ ಎಲ್ಲವೂ ಮಠಧೀಶರ ಉಪಸ್ತಿತಿಯಲ್ಲಿ ಪೂಜಾ -ಪುನಸ್ಕಾರ ಅನುರಣಿಸುತ್ತದೆ . ಮಠದಲ್ಲಿ ಅತೀ ಹೆಚ್ಚು ದೇಣಿಗೆ ಸಂಗ್ರಹ ವಾಗುತ್ತಿರುವುದು ಸತ್ಯ .ಇದು ಸಾಕಷ್ಟು ಜನಪಯೋಗಿ ಕಾರ್ಯದಲ್ಲಿ ತೊಡುಗುತ್ತಿದೆ . ದಿನಕ್ಕೆ ಸುಮಾರು 56 ,000 ವಿಧ್ಯಾರ್ಥಿಗಳಿಗೆ ಮಠದ ಅಧೀನ ದಿಂದ ಮಧ್ಯಾಹ್ನ ಊಟ ದೊರಕುತ್ತಿದೆ . ಇದು ಒಂದು ಲೆಕ್ಕದಲ್ಲಿ ಮುಜರಾಯಿ ಇಲಾಖೆಗೆ  ಸೇರ್ಪಡೆಗೊಂಡಿದ್ದೆಯಾದರೇ  ಇದ್ದಕ್ಕೆಲ್ಲ ಕಡಿವಾಣ ಬೀಳದೇ ಇರದು . ಈಗಾಗಲೇ ನಾವು ಗಮನಿಸಿದಂತೆ ಧಾರ್ಮಿಕ ದತ್ತಿ ಕಾನೂನಿನನ್ವಯದಡಿ  ಇಲಾಖೆಗೆ ಒಳಪಟ್ಟ ಕಲವು ಧಾರ್ಮಿಕ ಕ್ಷೇತ್ರಗಳ  ವಸ್ತು ಸ್ಥಿತಿ ಕಣ್ಮುಂದೆ ಗೋಚರಿಸುತ್ತಿದೆ , ಹಲವೆಡೆ ಸಮಯಕ್ಕೆ ಸರಿಯಾಗಿ ಸ್ವಚ್ಛ ಕಾರ್ಯವೂ ಸಹಾ  ನಡೆಯದೇ ನೆನೆಗುದಿಗೆ ಬಿದ್ದಿದ್ದುನ್ನು ವರ್ಣಿಸುವ ಅವಶ್ಯಕತೆಯೇ ಇಲ್ಲ .ಆದ ಕಾರಣ ಇದನ್ನು ಇಲಾಖೆಗೆ ಸೇರಿಸ ಬಾರದೆಂಬ ಗಟ್ಟಿ  ಕೂಗು ಮೊಳಗುತ್ತಿದ್ದರೂ , ಬಲವಾದ ಧ್ವನಿ ಅಡಗಿ ಕುಳಿತು ಸಾಥ್ ನೀಡದಿರವುದು ಅಚ್ಚರಿ .ಅಸಮಾಧಾನಕ್ಕೆ ಕಾರಣವಾಗಿದೆ . ಪ್ರಸ್ತುತ ಆಡಳಿತ ಪಕ್ಷ ತಮ್ಮದೆಯಾದರೂ , ವೈಯಕ್ತಿಕ ಸಪೋರ್ಟ್ ನ  ವರ್ಚಸ್ಸನ್ನು ಬದಿಗಿಟ್ಟು ಕಾಂಗ್ರೆಸ್ ನ ಹಿರಿಯ ಮುಖಂಡ ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೂಸಂತೋಷ / ಸುತ್ತರ್ಹವಾದರೂ , ಮೊನ್ನೆ ಮೊನ್ನೆ ಅಧಿಕಾರದ ಗದ್ದುಗೆ ಏರಿದ ಉಡುಪಿಯ ಶಾಸಕ ಪ್ರಮೋದ್ ಮದ್ವರಾಜ್ ತಮ್ಮ ಭಕ್ತಿ ಪರಕಾಷ್ಟೆಯ ಅಭಿಮಾನದಿಂದ  ಶ್ರೀಕೃಷ್ಣನ  ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೂ ಸಹಾ ಶ್ರೀಕೃಷ್ಣ ಮಠದ ಉಳಿವಿಗೆ ಶ್ರಮಿಸದಿರವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದೆ.