ಬುಧವಾರ, ಅಕ್ಟೋಬರ್ 3, 2018
ಕೋರ್ಟ್ ಆದೇಶ ಬಂದರೇನಂತೆ ಕತ್ತು ಹಿಡಿದು ನೂಕಿದರು ಸುಳಿಯಲಾರರು ಸಂಸ್ಕಾರಯುತ ನಾರಿಯರು
ಇತ್ತೀಚಿಗೆ ದಿನಗಳಲ್ಲಿ ಸುಪ್ರಿಂ ಕೋರ್ಟ್ ತೀರ್ಪು ಜನರ ಭಾವನೆಗೆ ದಕ್ಕೆ ತರುವಂತ, ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಪೂರ್ಣ ನಂಬಿಕಾನರ್ಹಗೊಳಿಸುವಂತ,ಮನದಲ್ಲಿ ಕಿಚ್ಚು ಹಚ್ಚಿಸುವಂತಹ ಬೆಳೆವಣಿಗೆಗೆ ಕಾರಣವಾಗುತ್ತಿದೆ ಇದಕ್ಕೆ ಉದಾಹರಣೆ ಸಾಕಷ್ಟಿದೆ . ಇಂದಿನ ಈ ತಾಜಾ ಆದೇಶವನ್ನು ಗಮನಿಸುದಾದರೆ ನಿಜಕ್ಕೂ ರೋಷ ಉಕ್ಕಿ ಹರಿಯುತ್ತಿದೆ .
ಕಲಿಯುಗದಲ್ಲಿ ಕಾಣ ಸಿಗುವ ದೇವ ಆಸ್ತಿಕರ ಪಾಲಿಗೆ ಆರಾಧ್ಯ ದೇವವಾಗಿರುವ ಬ್ರಹ್ಮಚೈರ್ಯ ಅಯ್ಯಪ್ಪ ಸ್ವಾಮೀಯ ವಿಚಾರ .! ಶಬರಮಲೆಯಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿಯನ್ನು ಕೊಟ್ಟಂತ ತೀರ್ಪು .!!
ಸಾಕಷ್ಟು ವರ್ಷಗಳ ಹಿಂದೆ ಕೆಲವು ಎರಡಂಕಿಯ ಎಡಬಿಡ೦ಗಿಗಳು ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಾತಿ ಯನ್ನು ಒದಗಿಸಿಕೊಡಬೇಕು ಎಂದು ವಿವಿಧ ರೀತಿಯಲ್ಲಿ ಸರ್ಕಸ್ ಮಾಡಿ ಕೋರ್ಟ್ ಮೆಟ್ಟಿಲೇರಿದವು ಒಂದಷ್ಟು ದಿನ ಕೋರ್ಟ್ ಕಟ್ಟಲೆಯಲ್ಲಿ ವಿವಾದ ಸುತ್ತಿತ್ತಾದರೂ , ತೀರ್ಪು ಶಬರಿಮಲೆಯಲ್ಲಿ ಹಿಂದಿನಿಂದ ನಡೆದು ಕೊಂಡು ಬಂದ ಆಚರಣೆಗೆ ಅನುಗುಣವಾಗಿ ಕುಂಟುತ್ತಾ ಬಂದಿದ್ದರೂ, ತಟ್ಟನೆ ಇಂದು ಆರು ಜನ ನ್ಯಾಯದೀಶರ ಪೀಠದಲ್ಲಿ ಮಹಿಳೆಯರು ಪ್ರವೇಶಿಸಬಹುದು ಎಂದು ಕಡಾಕ್ ಆವೇಶದ ಆದೇಶವನ್ನು ಹೊರಡಿಸಿದೆ . ಒಂದಷ್ಟು ಎಡಬಿಡಂಗಿಗಳಿಗೆ ಸಂತೋಷದ ವಿಚಾರವಾದರೂ ಅಷ್ಟೇ ದುಃಖ ಎಲ್ಲಾ ಸಭ್ಯಸ್ಥ ಆಸ್ತಿಕರ ಮನದಲ್ಲಿ ಮುಡುಗುಟ್ಟಿದೆ.
ಶಬರಿಮಲೆ ಅಂದಾಕ್ಷಣ ಇಂದು ಹುಟ್ಟಿದ ಮಗುವಿಗೂ ಗೊತ್ತು ಆಳ ಅಂತರಾಳ ಎಷ್ಟು ಎಂಬುದು ,ಒಂದು ಕ್ಷಣ ಕಿವಿ ನಿಮಿರುತ್ತದೆ ,ಮೈ ರೋಮ ನೆಟ್ಟಗಾಗುತ್ತದೆ .ಕಾರಣ ಕಠಿಣ ವ್ರತಾಚರಣೆ ಮಾಡಿ ಪಾದಸ್ಪರ್ಶದ ಯಾತ್ರೆಯೊಂದಿಗೆ ಇರುಮುಡಿ ಹೊತ್ತು 18 ಮೆಟ್ಟಿಲುಗಳನ್ನು ಸ್ಪರ್ಶಿಸಿ ಸ್ವಾಮಿಯ ದರ್ಶನ ಪಡೆಯುವುದು ಅಷ್ಟು ಸುಲಭ ಅಲ್ಲವೇ ಅಲ್ಲ .ಉತ್ತರ ಭಾರತದಲ್ಲಿ ಪರಿಚಯದ ಕೊರತೆ ಇದ್ದರೂ, ಅದೇ ದಕ್ಷಿಣ ಭಾರತದ ಗಲ್ಲಿ-ಗಲ್ಲಿಗೂ ಗೊತ್ತು ಮಣಿಕಂಠನ ವಿಚಾರಧಾರೆ 48 ದಿನಗಳ ಕಾಲ ವ್ರತಾಚರಣೆ (ಈ ವ್ರತಾಚರಣೆ ಯಾವ ವಿಧದಲ್ಲಿ ಇರುತ್ತದೆ ಎಂದು ಹೇಳುವ ಅಗತ್ಯ ಇಲ್ಲ .ಸಾಮಾನ್ಯವಾಗಿ ಸಮಸ್ತರಿಗೂ ಅರಿವು ಇರುವುದೇ )ಮಾಡವುದೇ ದೊಡ್ಡ ಸಾಹಸ ಎಂದರೂ ತಪ್ಪಾಗಲಾರದು .ಬ್ರಹ್ಮ ಚರ್ಯನಾದ ಮಣಿ ಕಂಠನ ಸನ್ನಿಧಿಗೆ ಮಹಿಳೆಯರು ಎಂದರೆ ,ಋತಿಮತಿಗೂ ಮೊದಲು ಹಾಗೂ ೪೦ ವರ್ಷ ದಾಟಿದ ಮಹಿಳೆಯರು ಮಾತ್ರ ಕಟ್ಟು ನಿಟ್ಟಾಗಿ ವ್ರತಾಚರಣೆಯನ್ನು ಕೈಗೊಂಡು ಸ್ವಾಮಿಯ ದರುಶನ ಪಡೆಯುವುದು ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಪರಂಪರೆ .ನಂಬಿಕೆಯ ತಳಹದಿಯಲ್ಲಿ ರೂಢಿಸಿ ಕೊಂಡು ಬಂದ ವಿಚಾರ . ಇದಕ್ಕೆ ಅಷ್ಟೇ ಸಹಮತವನ್ನು ಮಹಿಳೆಯರು ಸಹ ಕೊಡುತ್ತಿರುವುದನ್ನು ಹೇಳುವ ತಳ್ಳಿ ಹಾಕುವಂತಿಲ್ಲ .ತಮ್ಮ ಕುಟುಂಬದ ವ್ಯಕ್ತಿ ಶಬರಿಮಲೆ ಸ್ವಾಮಿ ಕ್ಷೇತ್ರಕ್ಕೆ ತೆರಳಲು ವ್ರತಚಾರಣೆ ಯಲ್ಲಿದ್ದರೆ ,ಮಹಿಳೆಯರು ಅವರ ಮೇಲೆ ತೋರಿಸುತ್ತಿವರ ಭಾವ ಭಕ್ತಿಯನ್ನು ಹೇಳತೀರದು .ಆತ /ಆಕೆ ಸ್ವಾಮೀ ಸನ್ನಿಧಾನ ಕ್ಕೆ ಹೋಗಿ ಬರುವಲ್ಲಿ ಯವರೆಗೆ ಅವರೂ ಕೂಡಾ ವಿಧಿ- ವಿಧಾನಗಳಂತೆ ವ್ರತಾಚರನೆಯಲ್ಲಿ ತೊಡಗುತ್ತಾರೆ . ಭಗವಂತನ ಮೇಲೆ ನಂಬಿಕೆಯನ್ನೂ , ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮರೆತ ಕೆಲವು ಎಡಬಿಡಂಗಿಗಳು ಇದರ ತದ್ವಿರುದ್ಧ ಹೋರಾಟ ಮಾಡುತ್ತ ಬಂದಿದ್ದಾರೆ ನಾವುಗಳು ಕ್ಷೇತ್ರಕ್ಕೆ ತೆರಳಬೇಕು ಎಂಬುದು ಅವರ ಮೂಲ ಮಂತ್ರ ! ಅಯ್ಯಪ್ಪನ ದರ್ಶನ ಪಡೆಯಬೇಕೆಂಬುದು ಹೆಚ್ಚಿನ ಜನರಿಗೆ ಆಸಕ್ತಿ ಹಾಗೂ ಆಸೆ ಹಾಗೂ ದೈವತಾ ಭಾವನೆ ಇರುವುದು ತಪ್ಪಲ್ಲ ಆದರೆ ಅದಕ್ಕೊಂದು ಸಮಯ ,ನಿಯತ್ತು, ನಿಯಮ ಇರುತ್ತದೆ ಎನ್ನುವುದನ್ನು ಮರೆಯಬಾರದು 40 ವರ್ಷ ದಾಟಿದ ನಂತರ ಅವಕಾಶ ಸ್ವಾಮಿ ಕ್ಷೇತ್ರದಲ್ಲಿದೆ .ಅಲ್ಲಿಯವರೆಗೆ ತಾಳ್ಮೆಯಿಂದ ಇರಬಹುದು ಅಲ್ವೇ ? ಬೆರಳೆಣಿಕೆಯ ಮಂದಿ ಶಬರಿಮಲೆ ಪ್ರವೇಶ ಕೋರಿ ಹಾರಾಟ ನಡೆಸಿದ ಪಟಿoಗರು ,ಇನ್ನೂ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ರೂಧಿಯಲ್ಲಿರುವಂತೆ ಮಹಿಳೆಯರಿಗೆ ಎಂದೂ ಯಾವ ಕಾಲಕ್ಕೂ ಬಿಲ್ ಕುಲ್ ಎಂಟ್ರಿ ಇಲ್ಲವೇ ಇಲ್ಲ ಇದು ಇವರ ಗಮನಕ್ಕೆ ಬಂದಿಲ್ಲವೇ ? ಹೋರಾಡುವ ತಾಕತ್ತಿಲ್ಲವೆ ?ಧೈರ್ಯವಿದ್ದರೆ ಅವುಗಳ ವಿರುದ್ದ ಹೋರಾಟವನ್ನು ಮುಂದುವರಿಸಿ ಆದರೆ ಕೋಟ್ಯಂತರ ಆಸ್ತಿಕರ ಭಾವನೆಗೆ ಧಕ್ಕೆ ತರುವುದು ಲಜ್ಜೆಗೇಡಿತನ. ಒಂದಂತು ಸತ್ಯ ಇಂಥವರು ಎಷ್ಟೇ ಹೆಣಗಾಟ ಮಾಡಿ ದರೂ ಸ್ವಾಮಿ ಕ್ಷೇತ್ರದ ಮೆಟ್ಟಿಲನ್ನು ಹತ್ತಲು ಖಂಡಿತವಾಗಿಯೂ ಸಾಧ್ಯವಿಲ್ಲ .ಹೆಚ್ಚಿನವರು ಸ್ವಾಮಿ ಮಣಿ ಕಂಠನ ಮಹಿಮೆಯನ್ನು ಅರಿತಿದ್ದಾರೆ ಕೋರ್ಟ್ನ ಆವೇಶದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ನಮ್ಮಲ್ಲಿ ಇಲ್ಲ. ಕತ್ತು ಹಿಡಿದು ನೂಕಿದರೂ ಅತ್ತ ತಲೆ ಹಾಕಿ ಮಲಗದ ಸಂಸ್ಕಾರಯುತ ಮಹಿಳೆಯರು ಜೊತೆಗಿದ್ದಾರೆ ಅಷ್ಟೇ ಸಾಕು !! ಸ್ವಾಮಿಯೇ ಶರಣಂ ಅಯ್ಯಪ್ಪ !!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

