ಮಂಗಳವಾರ, ಅಕ್ಟೋಬರ್ 18, 2011

ಅಥ್ಲೀಟ್ ಪೃಥ್ವಿ ಸಾವಿಗೆ ಕಾರಣ ???


     ಅಥ್ಲೀಟ್ ಪೃಥ್ವಿ ಸಾವಿಗೆ ಕಾರಣ ???

ಅಂತಾರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಬೆಳಗಬೇಕಿದ್ದ ಭರವಸೆಯ ಕ್ರೀಡಾಪಟು ಕುಂದಾಪುರ ತಾಲೂಕಿನ ಎಸ್. ಪಿ. ಪೃಥ್ವಿ ಅಂಪಾರು (18) ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ೨೭ ಸೆ.ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಥ್ವಿ ಬಗ್ಗೆ ಒಂದ್ಚೂರು :
ಬ್ರಹ್ಮವಾರ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ಕಾಮರ್ಸ್) ಯಲ್ಲಿ ಕಲಿಯುತ್ತಿದ್ದ ಪೃಥ್ವಿ ಶಾಲಾ ದಿನಗಳಿಂದಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದ ಪ್ರತಿಭಾನ್ವಿತ ಕ್ರೀಡಾಪಟು. ಸೆ. 24ರಿಂದ 26ರವರೆಗೆ ಮಂಡ್ಯದಲ್ಲಿ ನಡೆದ ಮೈಸೂರು ವಲಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಹಿಳೆಯರ ಜಾವೊಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ತನ್ನ ಹಾಸ್ಟೆಲ್ ರೂಮಿಗೆ ವಾಪಸಾಗಿದ್ದರು. ಮಧ್ಯಾಹ್ನದ ವೇಳೆ ಕೋಣೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಂಪಾರಿನ ಬಡಕುಟುಂಬದಿಂದ ಬಂದ ಪೃಥ್ವಿಯ ತಂದೆ ಶೇಖರ ಪೂಜಾರಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅಂಪಾರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಪ್ರತಿಭಾವಂತ ಕ್ರೀಡಾಪಟುವಾಗಿದ್ದ ಈಕೆ, ಅಂಪಾರಿನ ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ತನ್ನ ಸಾಮರ್ಥ್ಯವನ್ನು ಮೊದಲ ಬಾರಿ ಪ್ರದರ್ಶಿಸಿದ್ದಳು. ಸೂಕ್ತ ಜಾವೊಲಿನ್ ಲಭ್ಯವಿಲ್ಲದ್ದರಿಂದ ಆಕೆ ಬಿದಿರಿನ ಕೋಲನ್ನು ಬಳಸಿ ಶಾಲೆ ಮತ್ತು ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದಳು. ಬಿದಿರಿನ ಕೋಲನ್ನು 40 ಮೀ. ದೂರ ಎಸೆಯುತ್ತಿದ್ದ ಈಕೆ ಕೊನೆಗೆ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದಿದ್ದಳು.
ಆತ್ಮಹತ್ಯೆಗೆ  ಕಾರಣ: ಆಕೆಯ ರೂಮ್‌ಮೇಟ್ ಆಗಿದ್ದ ಮತ್ತೊಬ್ಬ ಕ್ರೀಡಾಪಟು ದಿವ್ಯಾ ಎಂಬಾಕೆ ಬಟ್ಟೆ ಒಗೆಯಲೆಂದು ಹೋಗಿದ್ದಾಗ ಆಕೆ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ. ಪೃಥ್ವಿಯಂತೆ ಬಸ್ರೂರು ಸಮೀಪದ ಅಂಪಾರಿನವರೇ ಆದ ದಿವ್ಯಾ ಸುಮಾರು 15-20 ನಿಮಿಷಗಳ ಬಳಿಕ ರೂಮಿಗೆ ಮರಳಿದಾಗ, ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಕರೆದರೂ ಬಾಗಿಲು ತೆರೆಯದಿದ್ದಾಗ ಕಿಟಕಿಯಿಂದ ನೋಡಿದಾಗ ಫ್ಯಾನಿಗೆ ನೇಣು ಬಿಗಿದಿರುವುದು ಕಂಡು ಬಂತು.
ಕೂಡಲೇ ವಾರ್ಡನ್ ಸೇರಿದಂತೆ ಹಾಸ್ಟೆಲ್‌ನ ಎಲ್ಲರೂ ಸೇರಿ ಬಾಗಿಲು ಮುರಿದು ಒಳಗೆ ಬಂದು ಆಕೆಯನ್ನು ಸಮೀಪದ ಮಹೇಶ್ ಆಸ್ಪತ್ರೆಗೆ ಕರೆತಂದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು.
23ರಂದು ಮೈಸೂರಿಗೆ ತೆರಳಿದ್ದ ಪೃಥ್ವಿ, ಮಂಗಳವಾರ ಬೆಳಗ್ಗೆ 9 ಗಂಟೆಗೆ ಲವಲವಿಕೆಯಿಂದಲೇ ಮೈಸೂರಿನಿಂದ ಮರಳಿದ್ದರು. ಸ್ನೇಹಿತೆಯರಿಗೆಲ್ಲ ಸಿಹಿ ನೀಡಿ ಅವರೊಂದಿಗೆ ಖುಷಿಯನ್ನು ಹಂಚಿ ಕೊಂಡಿದ್ದರೆಂದು ಎಸ್‌ಎಂಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಹೆಗ್ಡೆ ತಿಳಿಸಿದರು.


ಯಾರು ಏನ್ ಹೇಳ್ತಾರೆ :
ಆತ್ಮಹತ್ಯೆ ಮಾಡಿಕೊಂಡ ಪೃಥ್ವಿಯವರ ದೇಹದ ಪೋಸ್ಟ್ ಮಾರ್ಟಮ್ ಪ್ರಕಾರ , ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ  ಆದರೆ ಆಕೆಯ ಸಂಬಂಧಿಕರು ಕಾಲೇಜಿನವರ ಕಿರುಕುಳವೇ ಆಕೆಯ ಆತ್ಯಹತ್ಯೆಗೆ ಕಾರಣ ಎಂದು ಆರೋಪಿಸುತ್ತಾರೆ. ಹಾಸ್ಟೆಲ್ನಲ್ಲಿ ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಯನ್ನು ದತ್ತು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಆಕೆಯಿಂದ ಕೆಲಸವನ್ನು ಮಾಡಿಸಲಾಗುತ್ತಿತ್ತು. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಆಕೆಯ ಪೂರ್ಣ ಖರ್ಚನ್ನು ಕಾಲೇಜು ಭರಿಸುತ್ತಿರಲಿಲ್ಲ. ಸಾವಿರಾರು ರೂ.ಗಳನ್ನು ನಾವು ಕೈಯಿಂದ ನೀಡುತ್ತಿದ್ದೆವು ಎಂದು ಆಕೆಯ ಮಾವ ದಿನೇಶ್ ಪೂಜಾರಿ ಆರೋಪಿಸಿದರು. ಹಾಸ್ಟೆಲ್ ವಾರ್ಡನ್ ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದೂ ಅವರು ಹೇಳಿದರು.ಆದರೆ ಆರೋಪವನ್ನು ನಿರಾಕರಿಸಿದ ಎಸ್ಎಂಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸಾಲ್ವಡೋರ್ ನರೋನ್ಹ, ಆಕೆ ಕಾಲೇಜಿನಲ್ಲಿ ಚೆನ್ನಾಗಿಯೇ ಇದ್ದಳು. ಕಲಿಯುವಿಕೆಯಲ್ಲಿ ಚುರುಕಾಗಿಲ್ಲದಿದ್ದರೂ, ಕ್ರೀಡೆಯಲ್ಲಿ ಒಳ್ಳೆಯ ಸಾಧನೆ ತೋರಿಸುತ್ತಿದ್ದಳು. ನಾವು ಆಕೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದೇವೆ. ಆಕೆಯ ಖರ್ಚನ್ನೆಲ್ಲಾ ನಾವೇ ಭರಿಸುತ್ತಿದ್ದೆವು ಎನ್ನುತ್ತಾರೆ .
ಪ್ರಥ್ವಿ ಆತ್ಮಹತ್ಯೆಗೆ ಹತ್ತಾರು ವೆಕ್ತಿಗಳ ಕಿರುಕುಳ ಕಾರಣವೆನ್ನುದು ಪ್ರಜ್ಞಾವಂತರ ಅಭಿವ್ಯಕ್ತಿ .ಆಡಳಿತ ಮಂಡಳಿಯ , ಸತ್ಯನಾರಾಯಣ ,ಫಾದರ ,ಕೋಚ್ ಚಂದ್ರಶೇಖರ್ ಹೆಗ್ಡೆ ..ಇವರುಗಳ ಹೆಅರುಗಳ ಮಧ್ಯ ಮಿಸ್ಭಾನ ಹೆಸರನ್ನು ತಾಳೆ ಹಾಕಲಾಗುತ್ತಿದೆ .
ಯಾರೀತ ಮಿಸ್ಭಾನ್ ?
ಈತನ ಮನೆ ಬ್ರಹ್ಮವಾರ ಆಕಾಶವಾಣಿ ಸಮೀಪದಲ್ಲಿದೆ .ಈತನ ತಂದೆ ಜಾಕಿರ್ ಹುಸೇನ್ . ಮಿಸ್ಭಾನ್ ಕಳೆದ ವರ್ಷವಷ್ಟೇ ಉಡುಪಿ MGM ಕಾಲೇಜ್ ನಲ್ಲಿ BCM ವ್ಯಾಸಂಗ ಮಾಡಿದ್ದೂ ,ಅದರಲ್ಲಿ ಗೋತಾ ಹೊಡೆದು ನಂತರ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡುವ ವ್ಯವಹಾರವನ್ನು ಮಾಡಿಕೊಂಡಿದ್ದ ..ಈತನೇನೂ ಸಾಚ ನಲ್ಲ.. ಮಿಸ್ಭಾನ್ ಮತ್ತು ಪ್ರಥ್ವಿ ಪರಿಚಯ ಹೇಗಾಯ್ತು ? ಅದೊಂದು ದಿನ ಪ್ರಥ್ವಿ ಮೈದಾನದಲ್ಲಿ ಕ್ರೀಡಾ ತರಬೇತಿ ಪಡೆಯುತಿದ್ದ ಸಂದರ್ಭ ಕ್ರಿಕೆಟ್ ಆಡಲು ಬರುತ್ತಿದ್ದ ..ಹೀಗೆ ಅಲ್ಲಿ ಕಣ್ಣು-ಕಣ್ಣು ,ಮನಸು -ಮನಸು ಒಂದಾಗಿ ಪ್ರೀತಿ ಮೊಳೆಕೆ ಒಡೆದು ಪ್ರೀತಿಯ ದ್ಯೋತಕವಾಗಿ ಚಿನ್ನದ ಸರ ,ಮೊಬೈಲ್ ,ಇನ್ನಿತರ ವಸ್ತುಗಳನ್ನು ಕೊಡುತಾನೆ .ಆದ್ರೆ ಕ್ರಮೇಣ ಅವನ ನೀತಿ ಇಲ್ಲದ ಪ್ರೀತಿಯನ್ನು ಗಮನಿಸಿ ದೂರವಾಗಲು ಪ್ರಯತ್ನ ಪಟ್ಟಿದ್ದಳು .ಇದರಿಂದ ಕುಪಿತ ಕೊಂಡ ಮಿಸ್ಭಾನ್ ದಿನಾಲೂ ಅವಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ..ಇದರಿಂದ ನೊಂದು  ಆತ್ಮಹತ್ಯೆಗೆ ಶರಣದಾಳೇ? ಪುಟದ ಡೆತ್ ನೋಟನ್ನು ಯಾರಿಗೂ ತಿಳಿಯದಂತೆ ಹರಿದು ಹಾಕಿದ್ದೂ ,ಪೋಲಿಸ್ ರಿಗೆ ವಿಷಯ ಗೊತ್ತು ಪಡಿಸುವ ಮೊದಲೇ ಆಡಳಿತ ಮಂಡಳಿ ನೇಣಿನ ಕುಣಿಕೆಇಂದ ಪ್ರಥ್ವಿ ಯನ್ನು ಇಳಿಸಿದ್ದು ಯಾಕೋ ಇದೆಲ್ಲ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಏನೆ ಇರಲಿ ಸತ್ಯ ಗೊತ್ತಿದ್ದ ಪ್ರಥ್ವಿ ಸತ್ತು ಸ್ವರ್ಗ ಸೇರಿದ್ದಾಳೆ ..ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಬೇಕಷ್ಟೇ ..
                                                                         
                                                                                                  *  ಶಿವಕುಮಾರ್,ಹೊಸಂಗಡಿ