ಭಾನುವಾರ, ನವೆಂಬರ್ 13, 2011

ಚಿನ್ನ ಕ್ಕಿಂತ ಬೆಲೆ ಬಾಳುವ ದ್ರವ ಪೆಟ್ರೋಲ್ ?!


ಚಿನ್ನ ಕ್ಕಿಂತ ಬೆಲೆ ಬಾಳುವ ದ್ರವ ಪೆಟ್ರೋಲ್ ?!
ಹೌದು ನಿಜಕ್ಕೂ ಇದು ಅರಗಿಸಿಕೊಳ್ಳಲಾಗದ ಬವಣೆ ಅಂತಲೇ ಹೇಳಬಹುದು ..ಕೇಂದ್ರ ಸರ್ಕಾರ ಜನ ಸಾಮಾನ್ಯರ              ಯನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ .ದಿನೇ ದಿನೇ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ .ಮೊದಲೇ ಹಗ್ಗ ಕಂಡರೆ ಹೆದರುವವನ ಮೇಲೆ ಪ್ರಸ್ತುತ ಪರಿಸ್ತಿತಿಯಲ್ಲಿ ಹಾವನ್ನೇ ಎಸದಂತೆ ಮಾಡಿದೆ .ಏನಿದು ಉದ್ದಟತನ? ಏನಿದು ಕರ್ತವ್ಯ ಶೀಲತೆ ?ಮೊದಲೆಲ್ಲ  ತೈಲ 

 ಬೆಲೆ  ಕೇವಲ ಪೈಸೆ ಗಳಷ್ಟೇ  ಕಾಣುತ್ತಿತ್ತು .ಆದರೆ ಅಧುನಿಕ ದಿನಗಳಲ್ಲಿ ರೂಪಾಯ ಗಟ್ಟಲೆ ಅದೂ,ಕೇವಲ - ತಿಂಗಳ ಅಂತರದಲ್ಲಿ ಮನಸ್ಸಿಗೆ ಬಂದ ರೀತಿಯಲ್ಲಿ ನಾಗರಿಕರ ಮೇಲೆ ಹೊರಿಸುತ್ತಿರುದು ಅಕ್ಷಮ್ಯ ಕೃತ್ಯ ಕೇಂದ್ರಕ್ಕೆ ಅವ್ಯಾಹತ ಸಂಹಿತೆ  ಇಲ್ಲದೆ ಇರುದು ಬೇಸರದ ವಿಚಾರ .ಇದ್ದನ್ನು ಪ್ರಜ್ಞಾವಂತ ಪ್ರಜೆಗಳು ಅಲ್ಲ ಗೆಳೆಯ ಬೇಕಾಗಿದೆ .ದೇಶಾದ್ಯಂತ ಉಗ್ರ ಹೋರಾಟವನ್ನೇ ಅಸ್ತ್ರ ವನ್ನಾಗಿಸಿ ಫುಲ್ ಸ್ಟಾಪ್ ಇಡಬೇಕಾಗಿದೆ . ನಿಟ್ಟಿನ ಒಂದು ಸುಸಂದರ್ಭಕ್ಕೆ ನೆರೆಯ ರಾಜ್ಯ ಕೇರಳ ಸ್ವಲ್ಪ ಎಚ್ಚೆತ್ತು ಗೊಂಡಿದೆ .ಕಳೆದ ಬಾರಿ ತೈಲ ಬೆಲೆ ಏರಿಕೆ ಕಂಡ ಕೂಡಲೇ ಒಂದಷ್ಟು ಪ್ರತಿಭಟನೆ ಹಾದಿಯನ್ನು ಹಿಡಿದಿತ್ತು .ಆದ್ರೆ ಒಂದೇ ಕೈ ಇಂದ ಚಪ್ಪಾಳೆ ತಟ್ಟಲು ಸಾದ್ಯವೇ? ಬಾರಿಯೂ ಬೆಲೆ ಏರಿಕೆ ಯಾ ವಿರುದ್ದ ಸೂಕ್ತ ಉತ್ತರವನ್ನು ಕೊಡುತ್ತಿದೆ ..ಇದು ಸ್ವಾಗತಾರ್ಹ ಇವರ ನೀತಿಯ ರೀತಿಯನ್ನು ಉಳಿದ ರಾಜ್ಯಗಳು ಅವಲಂಭಿಸಬೇಕಾಗಿದೆ . ಎಲ್ಲ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ವಲ್ಪ ತುಟ್ಟಿಯೇ ಆದ್ರೆ ಇದರ ವಿರುದ್ದ ಕಿಡಿಕಾರುವ ಅಭಿವ್ಯಕ್ತಿಯ ವೈಖರಿಯ ಶಕ್ತಿ ಇನ್ನು ಎದ್ದು ಬರುವ ಲಕ್ಷಣ ಕಾಣುತ್ತಿಲ್ಲ ಹತ್ತು ಹಲವು ಸಂಘ -ಸಂಸ್ಥೆ ಗಳಿದ್ದರೂ ಕಾರ್ಯಕ್ಕೆ ಬಾರದ ಸ್ಥಿತಿಯಲ್ಲಿದೆ ಇನ್ನೂ ,ಕೇವಲ ಬಣ -ಬಣ ಗಳ ನಡುವೆ ಕುರ್ಚಿ ಕದನ ರಾಜಕೀಯ ರಂಗಿನಾಟದಲ್ಲಿಯೇ ತೇಲಿ ಹೋಗಿದೆ ಬದಿಗಿರಿಸಿ ಹೊರಡಬೇಕಾಗಿದೆ ..ನೋವಿನೋಲೆಯ ದಾವಗ್ನಿಯನ್ನು ತಣಿಸಬೇಕಾಗಿದೆ ... 

ಅಡ್ವಾಣಿ ಯಾತ್ರೆ ಸ್ವಾಗತಾರ್ಹ ?!


                                           ಅಡ್ವಾಣಿ ಯಾತ್ರೆ ಸ್ವಾಗತಾರ್ಹ ?! 

84 ಹರೆಯದ ಬಿ ,ಜೆ .ಪಿ ರಾಷ್ಟ್ರಧ್ಯಕ್ಷ ಎಲ್ .ಕೆ ಅಡ್ವಾಣಿ ೩೮ ದಿನಗಳ ಕಾಲ ದೇಶಾದ್ಯಂತ ಸುಮಾರು 75೦೦ ಕಿ .ಮಿ ಸಂಚಾರದ ಮುಖೇನ ಮೌಲ್ಯ ಧರಿತ ರಾಜಕಾರಣಕ್ಕಾಗಿ ,ಸ್ವಚ್ಹ ಆಡಳಿತ ಬ್ರಷ್ಟ ಮುಕ್ತ ಪಾರದರ್ಶಕ ಆಡಳಿತ ಕ್ಕಾಗಿ ಜನ ಚೇತನ ಯಾತ್ರೆ ಯನ್ನು ಕೈ ಗೊಂಡರು .1952 ರಿಂದ ನಡೆದ ಎಲ್ಲ ಬಿ .ಜೆ .ಪಿ ಚುನಾವಣೆಯಲ್ಲಿ ಕೆಲಸ ನಿರ್ವಹಿಸಿದ ಸಕ್ರಿಯ ಕಾರ್ಯಕರ್ತ,ಬಿ ಜೆ .ಪಿ ಯಾ ಬೆನ್ನೆಲುಬು ಆಗಿದ್ದ ಆಡ್ವಾಣಿ ಯಾ ತುರಂತ್ ಯಾತ್ರೆಗೆ ದೇಶಾದ್ಯಂತ ಜನತಾ ಪಾರ್ಟಿಗೆ ಒಂದಷ್ಟು ಸಾಥ್,ಉತ್ಶದ ಅಲೆ ಸಿಕ್ಕಿದರೆಇನ್ನು ಹಲವೆಡೆ ತಣ್ಣೀರ್ಎರಚಿದಂತಾಗಿದೆ . ಕಪ್ಪು ಭಾವುಟ ಪ್ರದರ್ಶನ ಉಂಟಾಗಿದೆ .ಅಡ್ವಾಣಿ ಯಾತ್ರೆ ಯು. ಪಿ. .ಸರ್ಕಾರದ ವಿರುದ್ದ ಹೋರಾಟ ವೆಂಬ ಹಣೆಪಟ್ಟಿ ಯಲ್ಲಿದ್ದರೂ, ಯಾರೇ ಆಗಲಿ, ಉಪಯೋಗ ವಿಲ್ಲದೆ ಯಾವುದೇ ಕಾರ್ಯಕ್ಕೂ ಕೈ ಹಾಕುದಿಲ್ಲ .. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ವನ್ನು ಪೂರ್ಣ ಗೊಳಿಸಲು ಅಡ್ವಾಣಿ ಸ್ಚೆಚ್ ಎಂದು ರಾಜಕೀಯ ಪಂಡಿತ ಅಭಿವ್ಯಕ್ತಿ ..ಮುಂದೊಂದು ದಿನ ಜನತಾ ಪಾರ್ಟಿ ಬಹುಮತ ಪಡೆದಲ್ಲಿ ಪ್ರಧಾನ ಮಂತ್ರಿ ಹುದ್ದೆಯನ್ನು ಸದ್ದಿಲ್ಲದೇ ಏರುವಲ್ಲಿ ಯಾತ್ರೆ ಕೊಂಚ ಉಪಕಾರಿ ಯಾಗಬಹುದು ಎನ್ನುವ ಲೆಕ್ಕಚಾರವೋ ಗೊತ್ತಿಲ್ಲ ,ಒಟ್ಟಾರೆ ಒಂದಷ್ಟು ಕಹಿ -ಒಂದಷ್ಟು ಸಿಹಿ ಯೊಂದಿಗೆ ಮುಕ್ತಾಯ ಗೊಳಿಸಿದೆ .ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಜನತಾ ಪಾರ್ಟಿ ಸರ್ಕಾರ ಸೆಟ್ಟೇರಿದ್ದು ಕರ್ನಾಟಕದಲ್ಲಿ .ಬಹುನಿರೀಕ್ಷೆಯ ಆಡಳಿತ ಪಕ್ಷದಲ್ಲಿ ಮುಸುಕಿನಲ್ಲಿ ಹಗೆ -ಹೋಗೆ ಮುಗಿಲು ಮುಟ್ಟುತ್ತಿತ್ತು,
 ಬ್ರಷ್ಟಾಚಾರ ಮುಕ್ತ ರಾಜಕೀಯಕ್ಕಾಗಿ ಯಾತ್ರೆ ಕೈ ಗೊಂಡಿರುವ ಅಡ್ವಾಣಿ ಇಲ್ಲಿ ಅದರ ವಿರುದ್ದಾರ್ಥಕ ರೀತಿಯ ಸಮಾಜದ ಸಮತೋಲನ ಕೈ ಕೊಟ್ಟಿತ್ತು ..ವಿರೋದ ಪಕ್ಷಗಳ ಅಟ್ಟಹಾಸ ಒಂದೆಡೆಯಾದರೆ , ಕರ್ನಾಟಕದಲ್ಲಿ ಸರ್ಕಾರವನ್ನು ಕಟ್ಟಿ ಬೆಳೆಸಿದ್ದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಇತರ ಕೆಲ ಶಾಶಕ ,ಸಚಿವರು ಜೈಲು ಸೇರಿಕೊಂಡಿದ್ದರು ..ಒಳೊಳಗೆ ಬಣಬಣ ಗಳ ನಡುವೆ ಗುದ್ದಾಟ .. ಇಂಥಹ ತುಡಿತ -ಮಿಡಿತ ಗಳ ನಡುವೆ ಅಡ್ವಾಣಿಯ ಕರ್ನಾಟ ಯಾತ್ರೆ ಅಷ್ಟೊಂದು ಸಂತೋಷವನ್ನು ತರದಿದ್ದರೂ ,ಬಂದ ಕಾರ್ಯವನ್ನು ನೆಮ್ಮದಿ ಇಂದ ಮುಗಿಸಿ ತೆರಳಿದರು. ಏನೆ ಇರಲಿ ಅಡ್ವಾಣಿ ಯಾತ್ರೆಗೆ ಕೆಲೆವಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ . ಯಾತ್ರೆ ಅವಶ್ಯಕತೆ ಇತ್ತೇ ? ಇದು ಸ್ವಾಗತಾರ್ಹವೇ ? ಗೊತ್ತಿಲ್ಲ !