ಕ್ರೀಡಾ ಕಣಿ -ನಮ್ಮೂರ ಕಣ್ಮಣಿ -ಬಂಗಾರದ ರಾಣಿ :ಅಶ್ವಿನಿ
ಗ್ರಾಮೀಣ ಪ್ರತಿಬೆ ಗಳೇ ಹಾಗೆ ,ಕೈ ತುಂಬಾ ಕೆಲಸ ..ಮೈ ತುಂಬಾ ನಿದ್ರೆ ..ಕಷ್ಟ ದಿಂದ ಸುಖವನ್ನು ಕಾಣುವ ಮುಗ್ದ ಜೀವಿಗಳು .ಬಾಲ್ಯತನದಿಂದಲೇ ಕಷ್ಟ ವನ್ನು ಇಷ್ಟವಾನ್ನಗಿಸಿಕೊಂದವರು ಹಲವಾರು ಜನ .ಬೆಳಿಗ್ಗೆ ೮ ಗಂಟೆಗೆ ಶಾಲೆಯ ಚೀಲ ಬೆನ್ನಿಗಿದ್ದರೆ ,ಸಾಯಂಕಾಲ ೫ ಗಂಟೆ ನಂತರ ತೋಟದಲ್ಲಿ ,ಬುಟ್ಟಿ ತಲೆಯ ಮೇಲಿರುತ್ತದೆ .ಇದು ಹೆಚ್ಚಿನವರ ದಿನಚರಿ .ಇಂಥಹ ದಿನಗಳ ನಡುವೆಯೂ,ಮನಸ್ಸಿನಲ್ಲಿ ಒಂದೊಂದು ಕನಸು ಇದ್ದೆ ಇರುತದೆ ..ಆ ಕನಸು ನನಸೂ ಆಗಬಹುದೂ ,ಇಲ್ಲ ಕನಸು ಕನಸಾಗಿಯೇ ಇರಬಹುದು .ಎಲ್ಲ ಮಾನವ ಜೀವಿಗಳಿಗೆ ಒಂದೊಂದು ಬಯಕೆ ಇದ್ದೆ ಇರುತ್ತದೆ ಒಬ್ಬರುಓದುದರಲ್ಲಿ ಮುಂದೆ ಇದ್ದರೆ,ಇನ್ನೊಬ್ಬರು ಕ್ರೀಡೆಯಲ್ಲಿ ,ಮನೋರಂಜನೆಯಲ್ಲಿ,ಇನ್ನೂ ಮುಂತಾದ ..ವಿವಿಧ ಕಾರ್ಯದಲ್ಲಿ ಆಸಕ್ತಿ ಯನ್ನೂ ಹೊಂದಿರುತ್ತಾರೆ .ಅದೆಲ್ಲ ಅವರವರ ಬಾವಕ್ಕೆ -ಬಕುತಿಗೆ ಸಂಬಂದ ಪಟ್ಟ ವಿಚಾರ .ಇವತ್ತಿನ ಅಪರಿಚಿತ ಬಾಲಕ ಯಾ ಬಾಲಕಿ ನಾಡಿನ ಪ್ರಧಾನಿಯೂ ಆಗಬಹುದೂ ,ಇಲ್ಲವೇ ಒಸಮಾ-ಬಿನ್ -ಲಾಡೆನ್ನೂ ಆಗಬಹುದು ..ಅದು ಮುಂದಿನ ಭವಿಷ್ಯದಲ್ಲಿ ಏನಿದೆ ಎಂದು ತಕ್ಷಣ ತಿಳಿಯದಿದ್ದರೂ ಸುಧೀರ್ಘ ಸಮಯದ ನಂತರ ಮನವರಿಕೆ ಯಾಗುತ್ತದೆ .ಇದಕ್ಕೊಂದು ಉದಾಹರಣೆ ಅಂದರೆ ಉಡುಪಿ ಜಿಲ್ಲೆಯ ಸಿದ್ದಾಪುರದ ಅಶ್ವಿನಿ ಯಾನೆ ಅಶುವನ್ನು ತೆಗೆದು ಕೊಳ್ಳ ಬಹುದು ..ಸಿದ್ದಾಪುರ ಸಮೀಪದ ಅಕ್ಕುಂಜೆ ಯನ್ನುವ ಸಾದಾರಣ ಒಂದು ಪುಟ್ಟಹಳ್ಳಿಯಲಿ ಹುಟ್ಟಿ ಹತ್ತಿರದೆಲ್ಲೆಲ್ಲೂ ಕೆಳಿಸುವಂತಿಲ್ಲದ ಪ್ರದೇಶವನ್ನು ಇವಳು ಇಡೀ ವಿಶ್ವ ,ದೇಶಕ್ಕೆ ಹತ್ತಿರದಂದ ಕಾಣಿಸುವಂತೆ ಮಾಡಿದ್ದಾಳೆ
ಹೌದು ಇದು ಅಶ್ವಿನಿ ಗೆ ಬಂದ ಅದೃಷ್ಟ ವಲ್ಲ ..ಅವಳಲ್ಲಿರುವ ಪ್ರತಿಭೆ ಇಂದ ಕುಂದಾಪುರ ತಾಲೋಕಿನಸಿದ್ದಾಪುರ ಸಮೀಪದ ಜನ್ಸಾಲೆ ಇಂದ ಕೂಗಳತೆಯ ದೂರದಲ್ಲಿರುವ ಅಕ್ಕುಂಜೆಯ ಕೃಷಿಕರಾದ ಚಿದಾನಂದ ಶೆಟ್ಟಿ ,ಮತ್ತು ಯಶೋದ ಶೆಟ್ಟಿಯವರ ಹೆಮ್ಮೆಯ ಮಗಳಾದ ಇವಳು ಹೊಸಂಗಡಿಯ ಇಂಗ್ಲಿಷ್ ಮಾದ್ಯಮದ ಪ್ರಾಥಮಿಕ ಶಾಲಾ ಜೀವನದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಯಾದ,ಛಾಪನ್ನು ಮೂಡಿಸಿದವಳು ,ವಲಯ ,ತಾಲೂಕು ,ಜಿಲ್ಲಾ,ರಾಜ್ಯ ಮಟ್ಟದಲ್ಲಿ ಚಿರತೆಯ ಓಟದಲ್ಲಿ ಸಕ್ರಿಯವದವಳು,ಜನಪ್ರಿಯದಉತ್ತುಂಗದಲ್ಲಿ ಪ್ರಶಸ್ತಿಯನ್ನು ಬಾಚಿ ಕೊಂದವಳು .ಮುಂದೆ ನಿನಗೆ ಉಜ್ವಲ ಭವಿಷ್ಯ ವಿದೆ ಎಂದು ಶಾಲಾ ಜೇವನದಲ್ಲಿ ಪೀಟಿ ಉಷಾ ಎಂದೇ ಪ್ರಶಂಷೆಗೆ ಪಾತ್ರಳದವಳು .. ಕಾಲೇಜ್ ಜೀವನಕ್ಕೆ ವಿದಾಯ ಹೇಳಿ ,ಊದ್ಯೋಗ ಜಗತ್ತಿನಲ್ಲಿ ತೇಲಿದರೂ,ತನ್ನಲ್ಲಿನ ಕ್ರೀಡಾ ಹುಮ್ಮಸ್ಸನ್ನು ಬದಿಗಿರಸಲಿಲ್ಲ.ಇದಕ್ಕೆ ತಂದೆ-ತಾಯಿ ,ಬಂಧು ಬಳಗದವರು ಬಹಳಷ್ಟು ಪ್ರೊಸ್ಥಾವವನ್ನು ಕೊಡುತ್ತಿದ್ದರು .ಕಷ್ಟ -ಪಟ್ಟು ಕಠಿಣ ತರಬೇತಿಯನ್ನು ಹೊಂದುತ್ತಿದ್ದಳು
ಪ್ರಯತ್ನಕ್ಕೆ ಫಲ ಸಿಗುತ್ತದೆ ಎನ್ನುವ ಲೋಕ ರೂಢಿ ಯನ್ನು ವಾಸ್ತವಕ್ಕೆ ತಂದಳು .ಇದರ ಫಲವೇ ಇಲ್ಲಿದೆ ನೋಡಿ ,೨೦೦೮ ರ ಹಾಂಕಾಂಗ್ ನಲ್ಲಿ ನಡೆದ 'ಸೌತ್ ಎಷ್ಯಡ್ ಇಂಡೋರ್ ಐತ್ಲೆತಿಕ್' ಗಳಲ್ಲಿ ದೇಶಕ್ಕೆ ಹೆಸರನ್ನು ತಂದು ಕೊಟ್ಟಳು .ಕಳೆದ ಅಕ್ಟೋಬರ್ ನಲ್ಲಿ ದೆಹಲಿ ಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ೪*೪೦೦ ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನವನ್ನು ತನ್ನ ಇತರ ಮೂರುಜನ ಸಹ ಆಟಗಾರ್ತಿಯರೊಂದಿಗೆ ಯಾರೂ ಊಹಿಸದ ರೀತಿಯಲ್ಲಿ ಚಿನ್ನದ ಪದಕವನ್ನು ತಂದು ವಿಶ್ವ ಮಟ್ಟದಲ್ಲಿ ,ಇತಿಹಾಸದ ಪುಟದಲ್ಲಿ ಮುದ್ರಿಸಿದಳು .ಮುಂದೆ ನಡೆಯುವ ಏಷ್ಯನ್ ಮತ್ತು ಒಲಂಪಿಕ್ಸ್ ನಲ್ಲಿ ತನ್ನ ಕ್ರೀಡಾ ಜ್ಯೋತಿಯನ್ನು ಬೆಳಗಿಸಲು ಬಹಳಷ್ಟು ತರಬೇತಿಯನ್ನು ಪಡೆಯುತ್ತಿದ್ದಾಳೆ .ತನ್ನಲ್ಲಿ ಧೈರ್ಯ ವಿದೆ ,ಛಲವಿದೆ,ತಾಕ್ಕತಿದೆ ಎದುರಿಗೆ ಯಾರೇ ಇದ್ದರೂ ಕ್ಯಾರೆ ಮಾಡದ ಅಶ್ವಿನಿಗೆ ಮೊನ್ನೆ ೨೫ ರ ಗುರುವಾರದಂದು ದೇಶಕ್ಕೆ ಇನ್ನೊಂದು ಬಂಗಾರದ ಪದಕವನ್ನು ತಂದು ಕೊಟ್ಟಳು .ಎಷ್ಯಡ್ ಗೇಮ್ಸ್ ನ ಮಹಿಳೆಯರ ೪೦೦ ಮೀ .ಹರಡ್ಸಲ್ ಫೈನಲ್ಸ್ ನಲ್ಲಿ ,ವೈಕ್ತಿಕ ಶ್ರೇಷ್ಠ ೫೬.೧೫ ಸೆ. ಅವಧಿ ಯಲ್ಲಿ, ದಾಖಲಿಸಿದಳು .ಕ್ರೀಡಾ ತಾರೆಗಳಾದ ಎಂ .ಡೀ .ವಲ್ಸಮ್ಮ .ಪೀ .ಟೇ.ಉಷಾ ಮುಂತಾದವರ ಸಾಲಿಗೆ ಅಶ್ವಿನಿ ಶೆಟ್ಟಿಯ ಹೆಸರು ಗಿನ್ನಿಸ್ ಪುಸ್ತಕದಲ್ಲಿ ,ಸೇರಿಸಲ್ಪಟ್ಟಿರುದು ಹೆಮ್ಮೆಯ ವಿಚಾರ ಇನ್ನು ಮುಂಬರುವ ಒಲಂಪಿಕ್ಸ್ ನಲ್ಲಿ ಅಶ್ವಿನಿ ಸಾಧನೆಗೆ ತಯಾರಾಗಿದ್ದಾಳೆ .ಈಗಾಗಲೇ 'ರಷ್ಯನ್ ' ಹರ್ಡ್ಸಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದು ,ಅವಳ ಆಸೆ ಈಡೇರಲಿ ಈಡಿ ದೇಶದ ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಉತ್ಸಾಹ -ಉಲ್ಲಾಸದ ಕಿಚ್ಚನ್ನು ಹಚ್ಚಿದ ಅಶ್ವಿನಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಗುರುತಿಸಲಿ ,ಗೌರವ ಸನ್ಮಾನ ಸಿಗಲಿ ನಮ್ಮೂರ ರಾಣಿಗೆ ಒಳ್ಳೆದಾಗಲಿ ಎಂದು ಹೃದಯ ತುಂಬಿ ಹಾರೈಸೋಣ ..
.. ಶಿವಕುಮಾರ್ ,ಹೊಸಂಗಡಿ
ಚಿತ್ರ ಕೃಪೆ : ನೆಟ್



