ಬದಲಾವಣೆ ಜಗದ ನಿಯಮ .ಪರಿಸ್ಥಿತಿ ಗೆ ತಕ್ಕಂತೆ ಬದಲಾವಣೆ ಬಯಸುವದು ಸಾಮಾನ್ಯ ,ಸಹಜ ಮತ್ತು
ಅಗತ್ಯವೂ ಕೂಡ ಹೌದು .ಅದಕ್ಕೂ ಒಂದಿಷ್ಟು ನೀತಿ -ನಿಯತ್ತು -ರೂಪು -ರೇಷೆ ಇರುವಿಕೆಯೂ ಅಷ್ಟೇ ಅಗತ್ಯ
.ಅಂದ ಮಾತ್ರಕ್ಕೆ ಎಲ್ಲರೂ ,ಎಲ್ಲಾ ಸಂದರ್ಭದಲ್ಲಿ ಗಡಿ ದಾಟಿ ಬದಲಾವಣೆ ಮಾರ್ಗ ತುಳಿಯಲು ಲಾಯಕ್ಕಿರವುದಿಲ್ಲ.
ಇಷ್ಟೆಲ್ಲಾ ಪಿಟಿಕೆ ಇಡಲೂ ಕಾರಣವೂ ಇದೆ .ಪ್ರಸ್ತುತ ಸ್ವರ್ಧಾತ್ಮಕ ಯುಗದಲ್ಲಿ ದಿನದ 24 ಗಂಟೆಯೂ ಕರ್ನಾಟಕದಲ್ಲಿ
ಸುದ್ದಿ ಪ್ರಸಾರ ಮಾಡುವ ಸುಮಾರು 7 ಸುದ್ದಿ ವಾಹಿನಿ ಗಳಲ್ಲಿ ಒಂದಾದ್ದು ಸುವರ್ಣ ನ್ಯೂಸ್ 24 *7 ರ
ಬಗ್ಗೆ ಎರಡು ಮಾತು ಹೇಳಲೇ ಬೇಕೆನಿಸುತ್ತದೆ .ಕನ್ನಡ ಸುದ್ದಿವಾಹಿನಿ ಗಳಲ್ಲಿ ಸುಮಾರಾಗಿ ಒಂದು
ಮಟ್ಟದಲ್ಲಿ ಜನಪ್ರಿಯ ಪಡೆದ ವಾಹಿನಿ ಎಂದರೆ ಸುವರ್ಣ ನ್ಯೂಸ್ 24 *7 ಎಂತಲೇ ಹೇಳಬಹುದು .ಇತ್ತೀಚೆಗಷ್ಟೇ
ತನ್ನ ಕಚೇರಿ ಯನ್ನು ಬದಲಾವಣೆ ಮಾಡಿತ್ತು ,ಸ್ವಾಗತರ್ಹ .ನಂತರ ಮೊದಲಿನ ಕಾರ್ಯಕ್ರಮದ ವೇಳಾ ಪಟ್ಟಿಯನ್ನೇ
ಅದಲು -ಬದಲು ಮಾಡಿಬಿಟ್ಟಿತು .ಅದು ಅವರ ತಂಡಕ್ಕೆ ಬಿಟ್ಟ ವಿಚಾರ.ಆದರೆ ಮೊದಲು ಪ್ರಸಾರ ಕಾಣುತ್ತಿದ್ದ
ಹಚ್ಚ ಕನ್ನಡದ ಶಬ್ದದ ತುಳುಕುಗಳು ಮಂಗ ಮಾಯಾವಾಗಿ ಆ ಜಾಗಕ್ಕೆ ಆಂಗ್ಲ ಪದ ಬಳಕೆ ಯಾಗಲ್ಪಟ್ಟಿರುವದು
ಖೇದಕರ .
'ದೊಡ್ಡ ಸುದ್ದಿ 'ಎಂಬ ಅಚ್ಚ ಕನ್ನಡ ರೂಪ ಇದೀಗ' ಬಿಗ್ನೆವ್ಸ್' ಎಂದೂ ,'ನೇರಪ್ರಸಾರ'
ಹೋಗಿ' ಲೈವ್' .'ಸುದ್ದಿ ಸ್ಪೋಟ' ಕ್ಕೆ 'breaking news ' ಎಂಬ ಶಬ್ದ ಬಂದಿದೆ .ಜನ ಹಿತಕ್ಕಾಗಿ
,ಸಮಾಜ ಮುಖಿಯಾಗಿ ಉತ್ತಮ ಸಂದೇಶ ನೀಡುವ ಸಾರುವ ಈ ನ್ಯೂಸ್ ಚಾನೆಲ್ ಗಳು ಕನ್ನಡ ಉಳಿಸು ವಿಕೆ ಕನ್ನಡ
ಬೆಳೆಸುವಿಕೆಗೆ ಒಂದಿಷ್ಟು ಅಳಿಸು ಸೇವೆ ಯನ್ನು ಮಾಡಬೇಕೇ ವಿನಹಾ, ಈ ತರಹದ ಬದಲಾವಣೆಗೆ ಮುನ್ನುಡಿ
ಬರೆಯುತ್ತಿರುವದು ನಿಜಕ್ಕೂ ಕಳವಳಕಾರಿ .'ಕನ್ನಡ ಜನಗಳಲ್ಲದೆ ಕನ್ನಡವನ್ನು ಉಳಿಸುವವರರಾರೈ ,ಬೆಳೆಸುವವರಾರರೈ'
ಎಂಬ ಕವಿ ವಾಣಿಯಂತೆ ಕನ್ನಡ ಉಳಿಸುವ ಅವಕಾಶ/ಸೇವೆ ಮಾಧ್ಯಮಕ್ಕೆ ಸಿಕ್ಕಿದೆ ಅದನ್ನು
ಪಾಲಿಸಿ ಕೊಂಡುಹೊಗಬೇಕಾದದ್ದು ಧರ್ಮ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ