ಮಂಗಳವಾರ, ಏಪ್ರಿಲ್ 4, 2023
ಕಬ್ಜ ಸಿನಿಮಾ ನೋಡಿ ಮನಸ್ಸು ಕುಬ್ಜ ಆಗದೇ ಇರದು
ಪ್ರಸ್ತುತ ಸೌತ್ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾದ್ದೇ ಕಾರುಬಾರು ಅದರಲ್ಲೂ ,ಕನ್ನಡವೂ ತಾವೇನೂ ಕಮ್ಮಿ ಇಲ್ಲವೆಂಬಂತೆ ಇತ್ತೀಚಿಗೆ ದಿನಗಳಲ್ಲಿ ಸುಗ್ಗಿ ಕಾಲ ಶುರುವಾಗಿದೆ. ಚಾರ್ಲಿ 777,ಕೆಜಿಎಫ್ ಭರ್ಜರಿ ಹಿಟ್ ಪಡೆದುಕೊಂಡರೇ ಕಾಂತಾರ ಕನ್ನಡದಲ್ಲಿ ಸೂಪರ್ ಡೂಪರ್ ಆದ ಬಳಿಕ ಇತರ ಭಾಷೆಯಲ್ಲಿ ಅನಿವಾರ್ಯವಾಗಿ ಡಬ್ಬಿಂಗ್ ಪಡೆದು,ಪ್ಯಾನ್ ಇಂಡಿಯಾ ಸಿನಿಮಾವಾಗಿ ಭರ್ಜರಿ ಹಿಟ್ ಪಡೆದಿದ್ದು ಇತಿಹಾಸ. ಇದರ ತನ್ಮಧ್ಯೆ ಕಬ್ಜ ಎನ್ನುವ ಸಿನಿಮಾ ರಿಲೀಜ್ ಗೆ ಮೊದಲೇ ಉತ್ತಮವಾದ ಪ್ರಚಾರವನ್ನು ಪಡೆದುಕೊಂಡಿತ್ತು., ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಒಂದೆಡೆಯಾದರೇ ಇನ್ನೊಂದೆಡೆ ಕಿಚ್ಚ ಸುದೀಪ್ ,ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ,ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡ ಮೂರು ಅದ್ಭುತ ನಾಯಕ ನಟರ ಜೊತೆಗೆ ಇತರ ಭಾಷೆಯ ದೊಡ್ಡ ದೊಡ್ಡ ಹೆಸರಾಂತ ಕಲಾವಿದರ ದಂಡನ್ನೇ ಹೊಂದಿತ್ತು. ಹೌದು ! ಆರ್. ಚಂದ್ರು
ನಿರ್ದೇಶನದಲ್ಲಿ ನೂರಾ ಇಪ್ಪತ್ತು ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿ ಚಿತ್ರೀಕರಣ ಮುಗಿಸಿ ಅಪ್ಪು ದಿ. ಡಾ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದೇ ಬಿಡುಗಡೆಗೊಳಿಸಲಾಯಿತು . ಸಿನಿಮಾದ ಬಗ್ಗೆ ಅಪಾರವಾದ ಅಪೇಕ್ಷೆ ಎಲ್ಲರಲ್ಲೂ ಇತ್ತು.ಆದರೆ ಸಿನಿಮಾ ನೋಡಿದವರು ಮಾತ್ರ ಟಾಕೀಸ್ ನಿಂದ ಸಪ್ಪೆ ಮೊರೆ ಹಾಕಿ ಹೊರಗೆ ಬಂದರೇ ,ಇನ್ನು ಒಂದಷ್ಟು ಪ್ರೇಕ್ಷಕರು ಅರ್ಧ ಸಿನಿಮಾಕ್ಕೆ ಎದ್ದು ಬಂದವರು ಇದ್ದರಂತೆ.(ನನ್ನ ಕಣ್ಣ ಮುಂದೆ ನಡೆದಿದೆ ಕೂಡಾ.) ಇನ್ನು ಕೆಲವರು ಶಿವರಾಜ್ ಕುಮಾರ್ ಎಂಟ್ರಿ ಸೀನ್ ನ ನೋಡ್ಕೊಂಡು ಹೋಗೋಣಾ ಎಂದು ಕಾದು ಕಾದೂ ,ಕೊನೆಗೆ ಸಿನಿಮಾ ಮುಗಿಸಿಯೇ ಹೋರಾಡಬೇಕಾದ ಅನಿವಾರ್ಯತೆ ವ್ಯಕ್ತವಾಗಿದ್ದು ಸುಳ್ಳಲ್ಲ ಯಾಕೆಂದರೆ ಶಿವಣ್ಣನ ಪಾತ್ರ ತೆರೆಯ ಮೇಲೆ ಮೂಡಿ ಬಂದಿದ್ದೆ ಫಿಲಂ ಮುಗಿಯೋ 1 ನಿಮಿಷದ ಮೊದಲು. ಸಿನಿಮಾದ ಬಗ್ಗೆ ಒಂದೇ ಲೈನ್ ನಲ್ಲಿ ಹೇಳಬೇಕೆಂದರೇ ಕೆಜಿಎಫ್ ನ ಮುಂದುವರಿದ ಭಾಗ ಅನ್ನಬೇಕೋ ಅಥವಾ ಈ ಸಿನಿಮಾವನ್ನು ಹಿಂದೆ ಎಲ್ಲೊ ನೋಡಿದ ರೀತಿಯಲ್ಲೇ ಇದೆ ಅಲ್ವೇ ಅನ್ನಬೇಕೋ ಒಂದೂ ಅರ್ಥವಾಗುತ್ತಿಲ್ಲ.ಅದೇ ರೀತಿಯಲ್ಲಿ ಭಾಸವಾದರೂ ಅಚ್ಚರಿ ಪಡಬೇಕಿಲ್ಲ ಸೇಮ್ ಟು ಸೇಮ್ ಕೆಜಿಎಫ್ ನ ಜೆರಾಕ್ಸ್ ಕಾಪಿ .!ಆಕ್ಷನ್ ,ಥ್ರಿಲ್ಲರ್ ,ಗುಂಡು ,ಸೌಂಡು ಎಲ್ಲವೂ ಅದೇ ಅದೇ.. ಅದೇನೇ !!!ಸಿನಿಮಾದಲ್ಲಿ ಉಪೇಂದ್ರ ಡಾನ್ ಆಗಿದ್ದರೆ ,ಸುದೀಪ್ ಕಥೆ ಹೇಳೋ ನಿರೂಪಕ ,ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣ ಸಿಗುತ್ತಾರೆ. ಸಿನಿಮಾ ನೋಡ್ತಾ ನೋಡ್ತಾ ಹೋದಂತೆ ಶಿವರಾಜ್ ಕುಮಾರ್ ಪಾತ್ರದ ಸುಳಿವೇ ಸಿಗೋದಿಲ್ಲ .ಸಿನಿಮಾದ ಕೊನೆಯ ದ್ರಶ್ಯ ಮುಗಿಯುವ ಸಮಯದಲ್ಲಿ ದೊಡ್ಡ ಸೈನ್ಯದೊಂದಿಗೆ ಶಿವಣ್ಣನ ಎಂಟ್ರಿ ಆಗುತ್ತದೆ .ಅದೇನೋ ಡೈಲಾಗ್ ಹೇಳುತ್ತಿದಂತೆ ಪರೆದೆ ಮೇಲೆ ಕಬ್ಜ ೨ ಎಂದು ಮುದ್ರಿತ ಗೊಳ್ಳುತ್ತದೆ. ಅಲ್ಲಿಗೆ ಸಿನಿಮಾದ ಪಾರ್ಟ್1ರ ಖೇಲ್ ಖತಂ ನಾಟಕ್ ಬಂದ್ ! ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕರೇ ಇಲ್ಲಿ ಕೂಡಾ ಮ್ಯೂಸಿಕ್ ಕೈಗೆತ್ತಿಕೊಂಡಿದ್ದಾರೆ ,ಅದೇ ಎದೆ ನಡುಗಿಸುವ ಸೌಂಡು .ಒಮ್ಮೊಮ್ಮೆ ಕಿವಿ ಮುಚ್ಚಿ ಕೊಳ್ಳಬೇಕಾದ ಅನಿವಾರ್ಯತೆಯೂ ಉದ್ಭವಿಸುತ್ತದೆ.ಒಂದೇ ಒಂದು ಸಾಂಗ್ 'ರಾಧೇ ರಾಧೆ ' ಎನ್ನುವ ಹಾಡನ್ನು ಕೇಳಿಸಿ ಕೊಳ್ಳಬಹುದು., ಇಂಪಾದ ಹಾಡು ಕಿವಿ ತಂಪಾದರೇ ಮತ್ತೆಲ್ಲವೂ ಅಟ್ಟರ್ ವೆಸ್ಟ್. ಕಲಾವಿದರುಗಳಿಗೆ ಬರವಿಲ್ಲ.ಕಥೆಗೆ ಅವಶ್ಯಕತೆ ಇಲ್ಲದಿದ್ದರೂ ಬಹುಬಾಷಾ ತಾರೆಯರು ಒಟ್ಟುಗೂಡಿದ್ದಾರೆ. ಯಾರಿಗೂ ಹೆಚ್ಚು ಕೆಲಸ ವಿಲ್ಲಾ. ಕಥೆಗೆ ಅರ್ಥವಿಲ್ಲಾ ಮುಂದಿನ ಭಾಗಕ್ಕೆ ವೈಟ್ ಮಾಡದೇ ವಿಧಿ ಇಲ್ಲ.ಯಾಕೆಂದರೆ ಈಗಾಗಲೇ ಮತ್ತದೇ ಪ್ರಚಾರದ ಗೀಳು ಶುರುವಾಗಿದೆ ಕಬ್ಜ2 ನಲ್ಲಿ ತೆಲುಗಿನ ಪವನ್ ಕಲ್ಯಾಣ್ ಹಾಗೂ ಕೆಜಿಎಫ್ ನ ಯಶ್ ಇರುತ್ತಾರೆ ಎಂಬ ಸುದ್ದಿ ಹರಡುತ್ತಿದೆ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)