ಬುಧವಾರ, ಆಗಸ್ಟ್ 19, 2020

ಇವರುಗಳಿಗೆ ಯಾಕೆ ತಾರತಮ್ಯ ?

ಕರೋನ ದಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿರುವುದು ನಿಜ.,ಅದರಲ್ಲೂ ಜಗತ್ತಿನ ಎರಡನೇ ಅತೀ ದೊಡ್ಡ ಜನ ಸಂಖ್ಯೆಯನ್ನು ಹೊಂದಿರುವ ಆರ್ಥಿಕತೆಯಲ್ಲಿ ಅಷ್ಟೊಂದು ಸಧೃಢ ವಾಗಿರದ ಭಾರತಕ್ಕೆ ಸವಾಲೇ ಸರಿ. ತನ್ಮಧ್ಯೆ ಕೆಲವೊಂದು ರಾಜ್ಯಗಳು ಸರ್ಕಾರದ ವತಿಯಿಂದ ಒಂದಷ್ಟು ಯೋಜನೆಗಳನ್ನು ದಯಪಾಲಿಸಿವೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವು ಹೊರತಾಗಿಲ್ಲ.ನಿರ್ಗತಿಕರಿಗೆ,ವ್ಯಾಪಾರಿಗಳಿಗೆ,ಕಲಾವಿದರು ,ಹೋಟೆಲ್ ಕಾರ್ಮಿಕರು ಇನ್ನಿತರ ದಿನ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಇದೆಲ್ಲಾ ಅರಿತ ಸರ್ಕಾರವು ಒಂದಷ್ಟು ಯೋಜನಾ ನೀತಿಯನ್ವಯ ಆಟೋ ,ಟಾಕ್ಸಿ ಚಾಲಕರಿಗೆ, ಅಗಸಿಗರಿಗೆ, ಕ್ಷೌರಿಕರಿಗೆ ಸಹಾಯಧನವನ್ನು ಕಲ್ಪಿಸಲಾಗಿದೆ . ಒಳ್ಳೆಯ ಬೆಳವಣಿಗೆ ಕೂಡಾ .,ಆದರೆ ಆದ್ಯಾಕೋ ತಾರತಮ್ಯವಾದಂತ ವಿಚಾರ ಮೂಡುತ್ತದೆ. ದಿನದ ಒಂದು ಹೊತ್ತಿನ ತುತ್ತಿಗಾಗಿ ಕೂಲಿ ಮಾಡುವವರ ಪೈಕಿ ಯಕ್ಷಗಾನ ಕಲಾವಿದರುಗಳು ಹೋಟೆಲ್ ನೌಕರುಗಳೂ ಸೇರಿದ್ದಾರೆ ಇವರುಗಳು ಆ ಯೋಜನೆಯಲ್ಲಿ ಸ್ಥಾನ ಪಡೆಯದಿರುವುದು ವಿಪರ್ಯಾಸ .
ಕೆಲವೊಂದು ಯಕ್ಷಗಾನ ಮೇಳಗಳು ದೇವಸ್ಥಾನದ ವತಿಯಿಂದ ಅದರಲ್ಲೂ ,ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವುದರಿಂದ ಅದಕ್ಕೆ ಒಳಪಡುವ ಯಕ್ಷಗಾನ ಮೇಳಗಳಿಂದ ಕಲಾವಿದರುಗಳಿಗೆ ಕಿಂಚಿತ್ ಸಹಾಯಕವಾಗುತ್ತದೆ.ಧಾರ್ಮಿಕ ದತ್ತಿಯಿಂದ ಹೊರತಾಗಿರುವ ಯಕ್ಷಗಾನ ಮೇಳಕ್ಕೆ ಇದು ಲಭ್ಯತೆ ಇಲ್ಲ. ಡೇರೆ ಮೇಳಗಳು ಸೇರಿದಂತೆ ಕೆಲವು ಮೇಳಗಳು ದೇವಳದ ವತಿಯಿಂದ ನಡೆಯಲ್ಪಡುವ ಯಕ್ಷಗಾನ ಕಲಾವಿದರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಯೋಚಿಸುವುದರ ಜೊತೆಗೆ ಹೋಟೆಲ್ ಕಾರ್ಮಿಕರ ಬಗ್ಗೆನೂ ಗಮನ ಹರಿಸಬೇಕಾಗಿದೆ .ಲಾಕ್ ದೌನ್ ಪರಿಣಾಮ ಅದೆಷ್ಟೋ ಹೋಟೆಲ್ ಗಳು ಮುಚ್ಚಿವೆ .ಹೋಟೆಲ್ ಕಟ್ಟಡಗಳ ಬಾಡಿಗೆ ಕಟ್ಟಲು ಸಹಾಯಕರಾದ ಸಾಕಷ್ಟು ಮಾಲೀಕರು ಹೋಟೆಲ್ ಗಳನ್ನೂ ಮಾರಾಟ ಮಾಡಿದ್ದಾರೆ. ಅದರಲ್ಲೂ ಅದನ್ನೇ ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ವಿಲ್ಲದಂತಾಗಿದೆ ಇನ್ನು ಅನ್ಲಾಕ್ ಆಗಿ ಹೋಟೆಲ್ ತೆರೆದರೂ, ವ್ಯಾಪಾರಿಗಳಿಲ್ಲದೇ ಬಿಕೋ ಎನ್ನುತ್ತಿದೆ . ತರುವಾಯ ಹೋಟೆಲ್ ನಲ್ಲಿ ದುಡಿಯುವವ ಕಾರ್ಮಿಕರ ಸಂಖ್ಯೆನ್ನು ಕೂಡಾ ತಗ್ಗಿಸಲಾಗಿದೆ . ಇನ್ನೊಂದೆಡೆ ಪಾರ್ಸೆಲ್ ಕೊಡುವ ಪದ್ದತಿ ಜಾರಿಯಾದ್ದರಿಂದ ಕಾರ್ಮಿಕರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವು ಮಾಡಿಟ್ಟ ಸಾಲ ಕಟ್ಟಲಾಗದೇ,ಮಾಸಿಕ ಬಾಡಿಗೆ ಪಾವತಿಸಲಾಗದೇ ,ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೇ ಹೋಟೆಲ್ ಮಾಲೀಕರಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ದಿನೇ -ದಿನೇ ಈ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಕ್ಕೆ ತುಸು ಕಷ್ಟವೇ ಆದರೂ ಪರಿಹಾರ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಇಂತವರಿಗೆ ಸಹಾಯವಾಗಬೇಕಿದೆ .ಇಂತಹ ಯೋಜನೆಗಳ ಮೂಲಕ ಬೇಧ -ಭಾವ ಮಾಡದೇ ಇದ್ದರೇ ಕಿಂಚಿತ್ ಉಪಕಾರವಾಗಬಲ್ಲದು.