ಗುರುವಾರ, ಡಿಸೆಂಬರ್ 31, 2020

ಎಲ್ಲಿಗೆ ಬಂತು ಡ್ರಗ್ಸ್ ಡ್ರಿಲ್ ?

ಹೌದು ! ಇತ್ತೀಚಿಗೆ ಡ್ರಗ್ಸ್ ಬಗೆಗಿನ ವಿಶ್ಲೇಷಣೆ ಕೇಳಿ ಬರುತ್ತಿಲ್ಲ. ಒಂದು ಹಂತದಲ್ಲಿ ಗಾಂಧೀನಗರವನ್ನು ನಡುಗಿಸಿದ್ದ ಸುದ್ದಿ. ಬೆಚ್ಚಿ ಬೀಳಿಸುತ್ತಿತ್ತು ದಿನಾ -ಕ್ಷಣ . ದೊಡ್ಡ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ದಿನ ದಿಂದ ದಿನಕ್ಕೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರುತ್ತಿತ್ತು . ಪ್ರಸ್ತುತ, ಪ್ರಕರಣದಲ್ಲಿನ ವೈವಿಧ್ಯತೆಯ ಕಳೆ ಕುಂದಿದೆ. ಅಷ್ಟಕ್ಕೂ, ಡ್ರಗ್ಸ್ ವಿಚಾರಣೆ ಎಲ್ಲಿಗೆ ಬಂತು ?ಹಳ್ಳ ಹಿಡಿಯಿತೇ ಎಂಬ ಪ್ರಶ್ನೆ ಮೂಡದೇ ಇರದು . ರೆಡ್ ಹ್ಯಾಂಡ್ ಆಗಿ ಡ್ರಗ್ಸ್ ಸಪ್ಲೆಯರ್ ಅನಿಕಾ ಸಿಕ್ಕಿ ಬಿದ್ದ ಬಳಿಕ ಮಾದಕ ಜಾಲವನ್ನು ಬಯಲಿಗೆ ತಂದ ಕೀರ್ತಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಯವರಿಗೆ ಸಲ್ಲಬೇಕು . ಮುನ್ನೆಲೆಗೆ ಬಂದು ಬಹಿರಂಗವಾಗಿ ಹೇಳಿಗೆ ಕೊಡಲು ಪ್ರಾರಂಭಿಸಿದ್ದರು .ಈರ್ವರ ಕೃಪಾಕಟಾಕ್ಷ ದಿಂದ ಸ್ಯಾಂಡಲ್ ವುಡ್ ನ ಕೆಲವು ತಾರೆಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು . ಇಬ್ಬರು ಹೀರೋಯಿನ್ ಹಾಗೂ ಕೆಲವು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಯಿತು . ಇನ್ನಷ್ಟು ಮತ್ತಷ್ಟು ಮಿಕಗಳು ಬಲೆಗೆ ಬೀಳಲಿದೆ ಎಂದೇ ಭಾವಿಸಲಾಗಿತ್ತು. ಸಿಸಿಬಿ ಕೂಡಾ ಫುಲ್ ಪವರ್ ನೊಂದಿಗೆ ನೋಟಿಸ್ ಜಾರಿ ಮಾಡುವುದು ಹಾಗೂ ಮನೆ ಮೇಲೆ ರೈಡ್ ಮಾಡುವ ಕಾಯಕ ,ಕಾರ್ಯಕ್ರಮಗಳನ್ನು ರೂಪಿಸಿ ಬಿಟ್ಟಿದ್ದವು .ಹೊಸ ಮನ್ವಂತರ ಸ್ರಷ್ಟಿಯಾಗಿ ಬಿಡುತ್ತದೆ . ಕೆಲವು ಫೇಮಸ್ ಸಿನಿಮಾ ಮಂದಿ ಸೇರಿದಂತೆ ಕೆಲವು ರಾಜಕಾರಣಿಗೆ ಹಾಗೂ ಅವರ ಮಕ್ಕಳು,ಉದ್ಯಮಿಗಳು ಇನ್ನೇನು ಅರೆಸ್ಟ್ ಆಗ್ತಾರೆ ಎಂದೇ ನಂಬಲಾಗಿತ್ತು .ಹಾಗಾಗಲಿಲ್ಲ., ಕಾದ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ .,ಸಿಗುತ್ತಿಲ್ಲ. ಡ್ರಗ್ಸ್ ಜಾಲದ ಬಗ್ಗೆ ಸಿನಿಮಾ ಕಲಾವಿದರರುಗಳ ಬಗ್ಗೆ ಬಾಂಬ್ ಸಿಡಿಸಿದ್ದ ಇಂದ್ರಜಿತ್ ಲಂಕೇಶ್ ಮುಖ್ಯವಾಹಿನಿಗೆ ಬಂದು ಒಂದೊಳ್ಳೆ ಹೇಳಿಕೆಯನ್ನು ಕೊಟ್ಟಿದ್ದರು."ಸಿಸಿಬಿ ತನಿಖೆ ಪಾರದರ್ಶಕ ವಾಗಿರುತ್ತದೆ ಎಂದೇ ಭಾವಿಸಿದ್ದೆ ನನ್ನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೆ. ಆದರೆ ನಾನು ಕೊಟ್ಟ ಲಿಸ್ಟ್ ನಲ್ಲಿರುವ ವ್ಯಕ್ತಿಗಳನ್ನ ಇದುವರೆಗೂ ತನಿಖೆ ನಡೆಸಿಲ್ಲ ,ಬಂಧಿಸಿಲ್ಲ" ಎಂದು ನಿರಾಶೆ ವ್ಯಕ್ತಪಡಿಸಿದ್ದರು , ನಿಜ ! ಇದಕ್ಕಿಂತ ಸರಳ ಉದಾಹರಣೆ ಬೇಕಿಲ್ಲ .ಕಾನೂನಾತ್ಮಕವಾಗಿ ಅದೆಷ್ಟು ಉತ್ತಮ ರೀತಿಯಲ್ಲಿ ತನಿಖೆ ನೆಡೆಯುತಿದೆ ಎಂಬುದನ್ನು ಇದು ರುಜುವಾತು ಗೊಳಿಸುತ್ತಿದೆ.
ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈಯನ್ನು ವಿಚಾರಣೆ ಒಳಪಡಿಸಿ ಕಳಿಸಲಾಗಿತ್ತು . ಶೂಟಿಂಗ್ ಸಂದರ್ಭ ಕಣ್ಣು ಗಾಯಕ್ಕೊಳಕ್ಕಾಗಿ ಅದರ ನೋವು ನಿವಾರಣೆಗೆ ತುಸು ಡ್ರಗ್ಸ್ ಮೊರೆ ಹೋಗಿದ್ದು ಸತ್ಯ ಎಂದು ದಿಗಂತ್ ಹೇಳಿದ್ದರಂತೆ . ತಗೆದು ಕೊಂಡಿದ್ದನ್ನು ಒಪ್ಪಿಕೊಂಡ ನಂತರ ಅವರನ್ನು ಮನೆಗೆ ಕಳುಹಿಸಿ ಮತ್ತೆ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಮುಚ್ಚಳಿಕೆ ಬರೆಯಿಸಿ ಕೊಂಡು ಕಳುಹಿಸಿ ಕೊಟ್ಟಿದ್ದರಂತೆ ಸಿಸಿಬಿ . ಮತ್ತೆ ಆ ಗೌಜಿಗೆ ಹೋಗಿಲ್ಲ ತನಿಖಾಧಿಕಾರಿಗಳು ! ತನ್ಮಧ್ಯೆ ಡ್ಯಾನ್ಸ್ ಮಾಸ್ಟರ್ ಕಿಶೋರ್ ನ ಬಂಧನ ವಾಗುತ್ತದೆ . ವಿಚಾರಣೆ ವೇಳೆ ಸ್ಟಾರ್ ಆಂಕರ್ ಕಮ್ ನಟಿ ಮಂಗಳೂರು ಬೆಡಗಿ ಅನುಶ್ರೀ ಹೆಸರು ಹೇಳುತ್ತಾನೆ. ಅನುಶ್ರೀ ವಿಚಾರಣೆ ಕೂಡಾ ಆಗುತ್ತದೆ ವಿಚಾರಣೆ ಬಳಿಕ ದೊಡ್ಡ ಸುದ್ದಿ ಹರಡಲಾರಂಭಿಸುತ್ತದೆ . ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅನುಶ್ರೀ ರಕ್ಷಣೆಗೆ ಶುಗರ್ ಡ್ಯಾಡಿ ಪಾತ್ರವಿದೆ ಎಂದು ಹೇಳಿಕೆ ಕೊಡುತ್ತಾರೆ. ಅನುಶ್ರೀಯನ್ನು ವಿಚಾರಣೆ ಮಾಡಿದ್ದ ಸಿಸಿಬಿ ಪೊಲೀಸ್ ಒಬ್ಬರನ್ನು ಎತ್ತಂಗಡಿ ಮಾಡಲಾಗಿತ್ತಂತೆ . ವಿಚಾರಣೆಗೆ ತೆರಳುವ ಮುನ್ನ ದಿನ ಅನುಶ್ರೀ ದೊಡ್ಡ ದೊಡ್ಡ ರಾಜಕಾರಣಿಗಳಿಗೆ ಫೋನ್ ಮಾಡಿದರಂತೆ ಕಾರಣ ಸಿಸಿಬಿ ಯವರ ಬಂಧನದಿಂದ ಬಚಾವಾಗಲು . ಇತ್ಯಾದಿ ಇತ್ಯಾದಿ ಸುದ್ದಿಗಳೆಲ್ಲಾ ಸುದ್ದಿ ಮನೆಯಲ್ಲಿ ಹರಿದಾಡಿದ್ದವು . ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ! ಏನೇ ಇರಲಿ ಇತ್ತೀಚಿಗೆಗಂತೂ ಯಾರೊಬ್ಬರ ವಿಚಾರಣೆ ನಡೆಯಲಿಲ್ಲ ಎಂಬುದಂತೂ ದಿಟ . ಎಲ್ಲಿಗೆ ಬಂತು ವಿಚಾರಣೆ ಎಂಬ ಪ್ರಶ್ನೆಯನ್ನು ಇರಿಸಿಕೊಳ್ಳದೇ ವಿಧಿ ಇಲ್ಲ ಕೊನೆಯದಾಗಿ ,ಜೈಲಿನಲ್ಲಿರುವ ರಾಗಿಣಿ ,ಸಂಜನಾಗೆ ಇನ್ನೂ ಬಿಡುಗಡೆ ಭಾಗ್ಯ ಮಾತ್ರ ಕಂಡು ಬಂದಿಲ್ಲ . ಇದೀಗ ಸಂಜನಾ ಆರೋಗ್ಯ ಸಮಸ್ಯೆ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಅವರ ಬೆನ್ನಿಗೆ ನಟಿ ರಾಗಿಣಿ ಕೂಡಾ ಆಸ್ಪತ್ರೆಗೆ ಸೇರಿದ್ದಾರೆ ಎಂಬ ಸುದ್ದಿ ಬಂದಿದೆ. ಇದೊಂದು ಹೊಸ ನಮೂನೆಯ ನಾಟಕವು ಗೊತ್ತಿಲ್ಲ ಒಟ್ಟಾರೆ ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ದೊಡ್ಡ ನಟ -ನಟಿಯರು ಸಿಲುಕಿದ್ದಾರೆ ಎಂಬಂತಿದ್ದ ಸ್ಥಿತಿ ಕೇವಲ ಇಬ್ಬರು ಹೀರೋಯಿನ್ ಗೆ ಮುಕ್ತಾಯ ಕಾಣತ್ತೋ ಗೊತ್ತಿಲ್ಲ . ಪಟ್ಟಭಧ್ರ ಹಿತಾಸಕ್ತಿಗಳು ಮುಚ್ಚಿ ಹಾಕಿದವೋ ಅದಕ್ಕೂ ಉತ್ತರ ಇಲ್ಲ .