ಬುಧವಾರ, ಮಾರ್ಚ್ 7, 2012

ಇದ್ ಕುಂದಾಪ್ರ ಕಸ್ತೂರಿ ಕನ್ನಡ ಮರ್ರೆ ..



(ಒಂದ್ ಕವನ )
ಹಿಂದೆ ನಿಂತ್ರೆ ಹೇಳ್ತ್ರ್ ಮುಂದ್ ಹೋಗ್
ಮುಂದ್
ನಿಂತ್ರ್ ಹೇಳ್ತ್ರ್ ಹಿಂದ್ ಹೋಗ್
ಮಧ್ಯ
ನಿಂತ್ರ್ ಹೇಳ್ತ್ರ್ ಬದೀಗ್ ಹೋಗ್
ನಿಲ್ಲುದ್
ಹ್ಯಾಂಗೆ ಕೆನ್ಡ್ರ ಹೇಳ್ತ್ರ್ ಇಳ್ದ್ ಹೋಗ್
..................................................
 ನಮ್ಮ ಕುಂದಾಪುರ ಬದೀಯಾಗೆ ತಿಂಗಳಗಳನ್ನು ನಮ್ಮ ಹಳಿಯರ್ ಸುಲಭವಾಗಿ ಹೆಸರಿಟ್ಟಿದ್ದು ಹೀಗೆ :
ಭಾರತ್
,ಸುಗ್ಗಿ

ಕಾತಿ

,ಹಗ್ಗ್
,ಬ್ಯಾಸಗಿ
 ,ಕಾರ್
 ,ಆಶಾಡಿ
,ಸ್ವಾಣಿ,
ಕನ್ನಿ
,
ದಿವಾಳಿ

 ,ಕೊಡಿ
 ,ಹಂಚಸಿ ..
.................................................................................................
 ತಮಾಷಿಗೆ
english word hai  ಇದರ ಮೂಲ ರೂಪ  ಹೊಯ್ ಇದು ಕುಂದಾಪುರ ದಿಂದ ಬಂದ ಶಬ್ದ india ಕೆ ಬಂದ
ಬ್ರಿಟಿಷರು  ಗಂಗೊಳ್ಳಿಯಲ್ಲಿ east india company ಸ್ಥಾಪಿಸಿ ,ಕುಂದಾಪುರ ಭಾಷೆ ಹೊಯ್ ,ಹೊಯ್ ಕಲಿತು ಸಂತೋಷ 
ಗೊಂಡು ಅದನ್ನು ಹಾಯ್ ಹಾಯ್  ಕಲಿತು ಸಂತೋಷ ಗೊಂಡು ಅದನ್ನು hai ,hai ಆಗಿ ಪರಿವರ್ತಿಸಿ ಕೊಂಡರು.. the great kundapur  ಅಲ್ವಾ?
......................................................................................... 

   ಹಿಂಗಿಂದೆಲ್ಲ ಮಾತ್  ನಮ್ಮಲ್ಲಿತ್  ಕಾಣಿ ..
*ಮಳಿ ಬಂತ್  ಮಳಿ  ಬಂತ್  ಮಲ್ಲ  ಓಡಿಯರೇ  ಕೊಡಿ ಕೋಲ್  ಹಿಡಿನಿ  ಕೊಚ್ಹ್  ಓಡಿಯರೇ ...
 *  ಮಾಣಿ ಮಾಣಿ  ಗೆಂದ್ಯ  ಸುಕಿನುಂಡಿ ತಿಂದ್ಯಾ
 *   ನಾನಲ್ಲ ಅಪ್ಪಯ್ಯ ಆಚಿ ಮನಿ ಕುಪ್ಪಯ್ಯ
 *   ಬಿ ಸಿ ಡಿ ಗ್ವಾಡಿ ಸೇಡಿ, ಮಾಸ್ಟರ್  ಕೈಂಗೆ ಮುಂಡ್   ಬೀಡಿ
 * ನಾನೂ ನೀನು ಜೋಡಿ ಕೋಳಿ ಮಟ್ಟ ಒಡಿ
  * ವಾಟ್ ಇಸ್ ದಿಸ್  ಕ್ವಾಟಿಬಾಗ್ಳಗೆ  ಅಟ್ಟಿಜಗ್ ಆಣಿಗಾರ್.
 *   ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ ಹದಿನಾರಮ್ಮ ಕಾಸಲಾರೆ ಬೈಟ್ ಗುಬ್ಬಿ ಬೈಟ್ .
 *  ನಗೊಂದು ಹೆಸಾರಿತು ಕೆಪ್ಪಿ ಕಾಲ್  ಕೆಸಾರೈತ್ 
 *  ನಾನು ನೀನೂ ಜೋಡಿ ಜೋಡೆತ್ತಿನ್  ಗಾಡಿ
 *  ಹೊಗ್ ಅಂದ್ರೆ ಬೇಜಾರತ್  ನಿವಳ್ಸ್
 *  ಓದುದ್  ಬ್ಯಾಡ ಗಂಟಿ ಮೈಸಿ .
  *  ವಾಟ್ ಇಸ್  ಸೆ oಟೆನ್ಸ್ ?    ಸೆ oಟೆನ್ಸ್  ಇಸ್  ಶುಂಟಿ  ಪುಡಿ ತಂಡಿ ಆರೇ ಹೈಕಂಡ್  ಕುಡಿ ..
 * ಮಕ್ಕಳ್  ಉಣ್ಕ್ ತಿನ್ಕ್ ಪನ್ಕ್ ಮಾಡುಕಾಗ .
  * ಸುಮ್ಮನ್  ತೀನ್ ಮಾಣಿಯ ಅಂದ್ರೆ ಒಣಿಬಕ್ಕಿ  ಹಣ್ಣ ಆಯ್ಲ ಅಪ್ಪಯ್ಯ ಅಂದ ಅಂಬ್ರ್ .
                 ........................................................
 ಕುಂದ ಕನ್ನಡದ "ಭತ್ತ ಕುಟ್ಟು ಹಾಡು "' ಅಶೋಕ್ ಕೊಡ್ಲಾಡಿ ' ಯವರ ಮಾತಿನಿಂದ ...

ಭತ್ತ ಕುಟ್ಟೊ ಹಾಡು 
ಒಂದ್
ಮಲ್ಲಿಗಿ ಮಿಟ್ಟಿ ಅಲ್ಲಿಟ್ಟಿ ಇಲ್ಲಿಟ್ಟಿ

ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ..
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ
ಮಂದರ್ತಿ ತೇರ ಮೇಲಿಟ್ಟಿ ಕೈ ಮುಗ್ದ
..
ಹ್ಯಾಂ ಹ್ಞೂ ...ಹ್ಯಾಂ ಹ್ಞೂ .....
ಅಕ್ಕ ಸಾಕಿದ ಕೋಳಿ ಅಂಕದಲರ್ಜುನಾ
ನಾ ಸಾಕಿದ ಕೋಳಿ ಉರಿ ಹುಂಜಾ...
ನಾ ಸಾಕಿದ ಕೋಳಿ ಉರಿ ಹುಂಜಾ
ಕೂಗಿದರೆ ಮುಂಬೈ ಪಟ್ಟಣವು ಬೆಳಗೈತು
....
ಹ್ಯಾ ಹ್ಞೂ ಹ್ಯಾ ಹ್ಞೂ ......
ಭತ್ತ ತೊಳು ಕೈಗೆ ಬಯ್ಣಿ ಮುಳ್ಳ ಹೆಟ್ಟಿತ ಮದ್ದಿಗ್ ಹ್ವಾದಣ್ಣ ಬರಲಿಲ್ಲಾ
ಮದ್ದಿಗ್ ಹ್ವಾದಣ್ಣ ಬರಲಿಲ್ಲಾ ಬಸ್ರುರ್ ಸೂಳಿ ಕಂಡಲ್ಲೇ ಒರಗಿದಾ
....
ಹ್ಯಾ ಹ್ಞೂ ಹ್ಯಾ ಹ್ಞೂ .....

ಹೊಸ ನೆಂಟ್ರ ಬಂದೀರ್, ಹಸಿ ಹಾಕಿ ನೀರ್ ಕೊಡಿ
ಹಸಿನ್ ಹಾಲೆಗ್ ಎಸರಿಡಿ
ಹಸಿನ್ ಹಾಲೆಗೆ ಎಸರಿಡಿ ನಮ್ಮನಿ
ಹೆಸರು ಹತ್ತುರೇ ನೆನೆಯಲಿ.....ಹ್ಯಾಂ ಹ್ಞೂ ಹ್ಯಾಂ ಹ್ಞೂ
ಭತ್ತ ತೊಳು ಹೆಣ್ಮಕ್ಳೆ ಅತ್ತಿತ್ತ ಕಾಣ್ಬೇಡಿ
ಬರ್ತಾರೆ ನಿಮ್ಮ ಬಗಿಯರ್
ಬರ್ತಾರೆ ನಿಮ್ಮ ಬಗಿಯರ್ ಹೆಣ್ಮಕ್ಳೆ
ತರ್ತಾರೆ ನಿಮಗೆ ತೌಡ್ ಹಿಟ್ಟ
.....
ಹ್ಯಾಂ ಹ್ಞೂ ಹ್ಯಾಂ ಹ್ಞೂ
ಅಕ್ಕಿಯ ತೊಳಸುದ ಚೊಕ್ಕು ಮುತ್ತಿನ ಹಂಗೆ
ಅಕ್ಕ ನಿನ್ನ ಕೊರಳ ಪದಕವು
ಅಕ್ಕ ನಿಮ್ಮ ಕೊರಳ ಪದಕವು ಪಾವನ ಸರ
ಒಪ್ಪಿತ ಅಕ್ಕಮ್ಮನ ಕೊರಳಿಗೆ....ಹ್ಯಾಂ ಹ್ಞೂ ಹ್ಯಾಂ ಹ್ಞೂ..
ಒಂದಕ್ಕಿ ಬೆಂದಿತ್ ಒಂದಕ್ಕಿ ಬೈಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚೆಕ್ಕಿ ಒಡಕ್ಕೋಡ
...
ಹ್ಯಾಂ ಹ್ಞೂ...ಹ್ಯಾಂ ಹ್ಞೂ...
ಬತ್ತಿಲ್ಲ ಅಂದರೂ,ಬಪ್ಪುಕೆ ಹೇಲ್ಕಂಡ್
ಬಂದರು ಒಂದೂ ಹುಳ ಇಲ್ಲ
ಬಂದರು ಒಂದೂ ಹುಳ ಇಲ್ಲ ಅಶೋಕಣ್ಣ
ನಾಳಿಂದ ಬಪ್ಪುಕೆ ನಂಗೆಡ್ಯ
.....
ಹ್ಜ್ಹಾಂ ಹ್ಜ್ಹೂಹ್ಜ್ಹಾಂ ಹ್ಜ್ಹೂ
ಬೊಂಬಾಯಿ ಅಶೋಕಣ್ಣ ಬಾಯಿ ಬಿಟ್ರೇ..ಮಕ್ಕಳ್..
ಓಡ್ ಬತ್ತೋ ಏಲ್ಲಿದ್ರೊ.....ಆದರೇ,
ಪದ ಕೇಂಡ್ರೇ....ಯಕೊ ಕಣ್ಣ್-ಕೂರ್ತೋ......
ಹ್ಯಾಂ ಹ್ಜ್ನೂ
ಸತ್ಯವುಳ್ಳ ಹೈಗುಳಿಯ ಸತ್ಯ ಕಾಣಕೆಂದು
ಬತ್ತಿ ಇಲ್ಲದೆ ದೀಪ ಉರಿದಾವು
ಬತ್ತಿ ಇಲ್ಲದೆ ದೀಪ ಉರಿದಾವು ಹೈಗುಳಿಯಲ್ಲಿ
ಸತ್ಯ ತೋರಿದವು ಜನರಿಗೆ ....                              











(ಯಾರೋ ಹೇಳದ್ದ್ )
ಮದುವೆ ಆದ ಮೇಲೆ ಕುಂದಾಪುರ ದ ಹುಡುಗಿ ಗಂಡನ್ನು ಕರೆಯುವ ರೀತಿ ;
1yr - ನಮ್ಮ್ ಯೆಜಮಾನ್ರ್,
2yr -ನಮ್ಮ್ ಮನಿಯರ್,
3 yr - ನಮ್ಮ್ ಮನಿ ಗಂಡಿನ ಅಪ್ಪ ,
4 yr -ನಮ್ಮ್ ಮನಿದೊಂದ್ ,
5 yr -ಹೆಕ್ಕಂತಿಮ್ಬುದ್ ,