ಏನ್ ಜನರೋ ಯಾಕಿಂಗ್ ಆಡ್ತಾರೋ ...?
ಮೊನ್ನೆ ನಮ್ಮೂರಿನ ಸಮೀಪ ಯಕ್ಷಗಾನ ಬಯಲಾಟ ಇದ್ದಿತ್ತು .ಯಕ್ಷಗಾನ ಪ್ರಿಯನಾಗಿದ್ದ ನನಗೆ ಆ ದಿನ ಮಾತ್ರ ಯಕ್ಷಗಾನ ನೋದುದಕ್ಕೆ ಹೋಗಲು ಮನಸ್ಸೇ ಇರಲ್ಲಿಲ್ಲ .."ಈ ವರ್ಷದ ಕೊನೆಯ ಆಟ ಆಗುದು ನಮ್ಮೂರಿನಲ್ಲಿ ,ಅದು ಅಲ್ಲದೆ ಬಹಳ ಜನಪ್ರಿಯ ಅತಿಥಿ ಕಲಾವಿದರು ಆಗಮಿಸುತ್ತಾರೆ" ಎನ್ನುವ ನನ್ನ ಸ್ನೇಹಿತನ ಒತ್ತ್ಯದ ಮೇರೆಗೆ ಯಕ್ಷಗಾನ ನೋಡುದಕ್ಕೆ ನಾವೀಬ್ಬರು ಹೊರೆಟೆವು . ಬಹಳಷ್ಟು ಪ್ರೇಕ್ಷಕರ ನಡುವೆ ಎರಡು ಕುರ್ಚಿ ಖಾಲಿ ಇದ್ದಿತು . ನಾವೀಬ್ಬರು ಹೋಗಿ ಕುಳಿತು ಕೊಂಡೆವು ನನ್ನ ಎದುರಿನ ಸ್ವಲ್ಪ ದೂರದಲ್ಲಿ ಒಂದು ಕುರ್ಚಿ ಖಾಲಿ ಇದ್ದಿತು ಒಬಬ್ಬರಾದಿಯಾಗಿ ಬಂದು ೫ ನಿಮಿಷದಲ್ಲಿ ಜಾಗ ಖಾಲಿ ಮಾಡುತ್ತಿದ್ದರು .ಸಾದಾರಣ ನನ್ನ ಅಂದಾಜಿನ ಪ್ರಕಾರ ೧ ಗಂಟೆಗೆ ಸುಮಾರು ೨೫ ಕಿಂತ ಹೆಚ್ಚು ಮಂದಿ ಅಲ್ಲಿ ಕುಳಿತು ಜಾಗ ಖಾಲಿ ಮಾಡಿದ್ದರು .ನನಗಂತೂ ಬಹಳ ವಿಚಿದ್ರವಾಗಿ ಕಾಣುತ್ತಿತ್ತು ..ತನಗೇನೂ ಆಗಿಲ್ಲದಂತೆ ಬಹಳಷ್ಟು ಕುತೂಹಲಭರಿತನಾಗಿ ಯಕ್ಷಗಾನವನ್ನು ನೋಡುತ್ತಿದ್ದ ಸ್ನೇಹಿತನ್ನು ಒಮ್ಮೆ ಎಚ್ಚರಿ ,ನನಗೆ ಉಂಟಾದ ಸಮಸ್ಸೆಯನ್ನು ಅವನಲ್ಲಿ ಪ್ರಸ್ತಾಪಿಸಿದಾಗ ,"ಕುಮಾರ ಸ್ವಾಮಿಯೇ ಎಷ್ಟು ಕಷ್ಟ ಪಟ್ಟರೂ ಕುರ್ಚಿ ಯನ್ನು ಗಟ್ಟಿಮಾಡಿಕೊಳ್ಳುದಕ್ಕೆ ಆಗ್ಲಿಲ್ಲ ಇನ್ನು ಇವರೆದ್ದೇನು ಮಹಾ ? ಸುಮ್ನೆ ಊರಿಗಿಲ್ಲದ ಉಸಾಬರಿ ನಿನಗ್ಯಾಕೆ ಸುಮ್ನೆ ಆಟ ನೋಡು ' ಎಂದು ವಂಗ್ಯ ಮಾಡಿದ.. ಸ್ವಲ್ಪ ಹೊತ್ತು ಬಿಟ್ಟು ಮತ್ತದೇ ಸರದಿಯನ್ನು ನೋಡಿದಾಗ ನನಗೆ ತಲೆ ಬಿಸಿ ಇಮ್ಮಡಿ ಆಯಿತು .ಇದರಲ್ಲಿ ಏನೋ ರಹಸ್ಯ ಇದೆ ಪತ್ತೆ ಹಚ್ಚ ಬೇಕು ಅಂತ ನಾನು ನನಗಿಂತ ೫ ಮೀ ದೂರದಲ್ಲಿರುವ ಆ ಕುರ್ಚಿ ಯಲ್ಲಿ ನಾನೇ ಹೋಗಿ ಕುಳಿತು ಕೊಂಡೆ .
ಅಂತೂ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಆ ಕುರ್ಚಿಯ ಪಕ್ಕದಲ್ಲಿ ಒಬ್ಬ ಪುಣ್ಯಾತ್ಮ ಏನ್ ೭೨ ಮೊಬೈಲ್ ಹಿಡ್ಕೊಂಡು ವಿಡಿಯೋ ಸೊಂಗನ್ನು ,ಅದರಲ್ಲಿ ಎಷ್ಟು ಸೌಂಡ್ ಇದೆಯೋ ಅಷ್ಟನ್ನು ಪ್ಲೇ ಮಾಡಿ ಯಕ್ಷಗಾನವನ್ನು ವನ್ನು ನೋಡುದು ಬಿಟ್ಟು ಅದನ್ನು ಕೇಳ್ತಾ ,ನೋಡ್ತಾ ,ಮಸ್ತ್ -ಮಜಾ ಮಾಡ್ತಾ ಇದ್ದ .,ಆದ್ರೆ ಅವನ ಪಕ್ಕದವರಿಗೆ ಸಕತ್ ತೊಂದರೆ ಆಗುತ್ತದೆ ಅವನಿಗೆ ಗೊತಿರಲಿಲ್ಲ ಇತ್ತು .ನಾನು ಹೋಗಿ "ಸ್ವಾಮಿ ಮೊಬೈಲ್ ನ ಬಂದ್ ಮಾಡಿ ಅಥವಾ ಸೌಂಡ್ ನ ಸ್ವಲ್ಪ ಕಮ್ಮಿ ಮಾಡಿ ಬೇರೆಯವರಿಗೆ ಉಪದ್ರವ ಆಗುತ್ತೆ "ಅಂದೆ."ನನ್ನ ಮೊಬೈಲ್ ,ಯಾರಿಗೂ ಇದರ ಬಗ್ಗೆ ಕೇಳಲು ಹಕ್ಕಿಲ್ಲ ,ನಾನು ಏನು ಬೇಕಾದ್ರು ಮಾಡಬಹುದು " ಎಂದು ರೌದ್ರ ಮುಖ ಭಾವದೊಂದಿಗೆ ನನ್ನ ಕಡೆಗೆ ತಿರುಗಿದಾಗ ಹಲವು ವರ್ಷಗಳ ಹಿಂದೆ ನೋಡಿದ ಚಿತ್ರದ್ದಲ್ಲಿ 'ವಜ್ರ ಮುನಿ 'ಯನ್ನೇ ನೋಡಿದ ಹಾಗೆ ಆಗಿತ್ತು .

'ಕತ್ತೆ ಎಂದಾದರೂ ನಿನ್ನನ್ನು ಒದ್ದರೆ ಮರಳಿ ನೀನ್ ಒದಯದಿರದಕೆ ಕತ್ತೆಯ ವದೆಯನ್ನು ಹಿಂತುರಿಗಿಸಿದರೆ ,ನೋವಿನ ಬಹುಪಾಲು ನಿನಗೆ ' ಎನ್ನುವ ಕವಿ ವಾಣಿ ಪಕ್ಕನೆ ನನ್ನ ಮನಸಿನ ಪುಟದಲ್ಲಿ ಹರಿದು ಬಂತು .ನನಲ್ಲಿಂದ ಕಾಲ್ಕಿತ್ತೆ .ಸುಮಾರು ಹೊತ್ತು ಕಳೆದ ನಂತರ ಆ ಕುರ್ಚಿ ಯಲ್ಲಿ ಒಬ್ಬ ಮಹಾನುಭಾವ ಬಂದು ಕುಳಿತು ಕೊಂಡರು ಮೊಬೈಲ್ ಮನುಷ್ಯ ಮತ್ತು ಅವರುಗಳ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯುತ್ತಿತ್ತು ,ನಾನಂತೂ ಬಹಳ ಕುತೂಹಲ ಭರಿತನಾಗಿ ನೋಡುತ್ತಾ ಕುಳಿತ್ತಿದ್ದೆ ,
ಯಕ್ಷಗಾನ ದಲ್ಲಿ ,ಅಸುರ -ದೇವತೆ ಗಳ ನಡುವೆ ಯುದ್ದ ಪ್ರಾರಂಭ ವಗಿದ್ದೆ ತಡಾ, ಇವರುಗಳ ನಡುವೆ ಜಗಳ ತಾರಕಕ್ಕೇರಿತ್ತು ,ಯಕ್ಷಗಾನದಲ್ಲಿ ಆಸುರ ಅರು ಓಡಿ ಹೋದ ಹಾಗೆ ಇಲ್ಲಿ ಮೊಬೈಲ್ ಮನುಷ್ಯನೂ ಮಾಯವಾಗಿದ್ದ ...............!
ಯಕ್ಷಗಾನ ದಲ್ಲಿ ,ಅಸುರ -ದೇವತೆ ಗಳ ನಡುವೆ ಯುದ್ದ ಪ್ರಾರಂಭ ವಗಿದ್ದೆ ತಡಾ, ಇವರುಗಳ ನಡುವೆ ಜಗಳ ತಾರಕಕ್ಕೇರಿತ್ತು ,ಯಕ್ಷಗಾನದಲ್ಲಿ ಆಸುರ ಅರು ಓಡಿ ಹೋದ ಹಾಗೆ ಇಲ್ಲಿ ಮೊಬೈಲ್ ಮನುಷ್ಯನೂ ಮಾಯವಾಗಿದ್ದ ...............!
------- ಶಿವಕುಮಾರ್ ,ಹೊಸಂಗಡಿ