ಶನಿವಾರ, ಏಪ್ರಿಲ್ 4, 2026

ಭಟ್ಟರು ಕೆಟ್ಟರು ಈ ನಡೆತೆಯಿಂದ : ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ಟರ 'ಸಿಲ್ಲಿ' ಹೇಳಿಕೆ ಸುತ್ತಾ ಒಂದು ಸುತ್ತು !

ಹೇಳಿ-ಕೇಳಿ ನಾನು ಯಕ್ಷಗಾನ ಪ್ರೇಮಿ ಅದೂ ಅಲ್ಲದೇ ನನ್ನ ಪಕ್ಕದ ಊರಿನಲ್ಲಿ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ನಡೆದ ಘಟನೆ ಇದೀಗ ರಾಜ್ಯದಾದ್ಯಂತ ಸುದ್ದಿ ಆಗುತ್ತಿದೆ.ಈ ಸುದ್ದಿ ಕಾಡುತ್ತಿರುವುದರಿಂದ ನನ್ನ ಒಡಲ ಧ್ವನಿಯಲ್ಲಿ ಹರಡಲೇಬೇಕಾಗಿದೆ ನಾನು ಊರಿನಲ್ಲಿದ್ದಿದ್ದರೆ ಖಂಡಿತವಾಗಿಯೂ 10-15 ಕಿ.ಮೀ ದೂರದಲ್ಲಿ ಎಲ್ಲೇ ಆಟ ಇದ್ದಾರೂ ಆಮಂತ್ರಣ ಇಲ್ಲದಿದ್ದರೂ,ರಾತ್ರಿ ಬೈಕ್ ಸ್ಟಾರ್ಟ್ ಆಗದೇ ಇರುತ್ತಿರಲಿಲ್ಲ ಇದು ಬಜಪನ್ ನಿಂದ ನೆಡೆದುಕೊಂಡು ಬಂದ ರೀತಿ. ಅದು ಮಾರ್ಚ್ 25ನೇ ತಾರೀಕು ನಾನು ಊರಿನಲ್ಲಿ ಇರಲಿಲ್ಲ ಆಟ ಮಿಸ್ ಮಾಡ್ಕೊಂಡಿದ್ದೆ.ಹೆನ್ನಾಬೈಲುವಿನ ಬಕ್ರ ಮನೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರಿಂದ ಹರಕೆ ಬಯಲಾಟ ಇದ್ದಿತ್ತು 'ಶ್ರೀ ಕೃಷ್ಣ ಪಾರಿಜಾತ' ಪ್ರಸಂಗ.ಅದರ ನೇರ ಪ್ರಸಾರ ಕ್ಷೇತ್ರದ ಮೇಳದವರ ಅಧೀಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿತ್ತು.ಸಮಯ ರಾತ್ರಿ 11 ಗಂಟೆ ಆಗಿರಬಹುದೇನೋ,? ಧರ್ಮಸ್ಥಳ ಮೇಳದವರ ಆಟ ಆಗುವುದು ನಮ್ಮ ಆ ಪ್ರದೇಶದಲ್ಲಿ ಬಹಳ ಅಪರೂಪ!ತೆಂಕುತಿಟ್ಟು ಅಪರೂಪದಲ್ಲಿ ಅಪರೂಪವೇ ಎಂದರು ತಪ್ಪಲ್ಲ.ಇನ್ನು ಕ್ಷೇತ್ರದ ಮೇಳವೆಂದ ಮೇಲೆ ಹೇಳಬೇಕೇ ಅಕ್ಕಪಕ್ಕದ ಗ್ರಾಮದವರು ಅದೂ ಇತ್ತೀಚಿಗೆ ಹೆಚ್ಚಿನ ಎಲ್ಲಾ ಮೇಳಗಳು ಕಾಲಮಿತಿಗೆ ಒಗ್ಗಿಕೊಂಡಿರುವುದರಿಂದಲೋ ಏನೋ ಪ್ರೇಕ್ಷಕರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು., ಸ್ವಾಭಾವಿಕ ಈಗಾಗಲೇ ಹೇಳಿದಂತೆ !! ಕೃಷ್ಣನ ವೇಷಧಾರಿಯಾಗಿ ಪ್ರಸಿದ್ಧ ಅರ್ಥ ಧಾರಿಯಾಗಿರುವ ಹಿರಿಯ ಕಲಾವಿದರಾದ ಉಜಿರೆ ಅಶೋಕ್ ಭಟ್ಟರು ರಂಗಸ್ಥಳದಲ್ಲಿದ್ದರು ಭಾಗವತರಾದ ಸಿರಿಮನೆ ರಾಮಕೃಷ್ಣ ಮಯ್ಯರ ಸೊಗಸಾದ ಆಲಾಪನೆಗೆ ಶಿಳ್ಳೆ,ಚಪ್ಪಾಳೆಗಳು ಧಾರಾಳವಾಗಿ ಬೀಳುತ್ತಿದ್ದವು.ಅದೇನಾಯ್ತೋ ಗೊತ್ತಿಲ್ಲ ಕೃಷ್ಣನ ವೇಷಧಾರಿಯಾಗಿದ್ದ ಅಶೋಕ್ ಭಟ್ಟರ ಮೇಲೆ ಭೂತದ ಆವೇಶವಾಯಿತೆನೋ ಎಂಬಂತೆ ಭಾಗವತರ ಪದ ಮುಗಿದು ಚಂಡೆ ಪೆಟ್ಟು ನಿಲ್ಲುವುದಕ್ಕಿಂತ ಮೊದಲೇ "ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ ಡೊಂಬರಾಟ ಅಲ್ಲ ಇದು ನಾನು ಆಗನಿಂದ ಗಮನಿಸುತ್ತಿದ್ದೇನೆ ಚೌಕಿಯಲ್ಲಿದ್ದೇನೆ ಸಭ್ಯ ಸಭೆಯನ್ನು ಬಯಸುತ್ತೇನೆ ನನಗೆ ದಾಕ್ಷಿಣ್ಯ ಯಾರದ್ದು ಇಲ್ಲ. ಇಲ್ಲಿ ಯಾಕೆ ಕುಣಿಯುತ್ತೇವೆ ಗೊತ್ತುಂಟ ನಿಮಗೆ? ಯಾರು ಆಟ ಆಡಿಸುವರು ಏನಂತ ಆಲೋಚನೆ ಮಾಡಿದ್ದೀರಿ ?ನಿಮಗೆ ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಅಂತ ಗೊತ್ತುಂಟಾ? ಎಂತದ್ದು ಅದು ಶಿಳ್ಳೆ ಏನದು ಶಿಳ್ಳೆ ? ಕೋಳಿಕಟ್ಟವ? ಇಲ್ಲಿ ಕಂಬಳವಾ ? ಯಾರದು ಏನು ಆಲೋಚನೆ ಮಾಡಿದ್ದೀರಿ? ರೆಕಾರ್ಡ್ ಆಗಿದೆ ನನಗೆ ಯಾರ ದಾಕ್ಷಿಣ್ಯ ಇಲ್ಲ ಯಾರದು ಶಿಳ್ಳೆ ಹಾಕಿದವ ?ಆಗದಿದ್ದರೆ ಹೋಗು ಬನ್ಸ್ ತಿಂದು ಭಾಗವತರ ಕಂಠವನ್ನು ತೆಗಿತೀರಾ ? ಸಭ್ಯ ಸಭೆಯನ್ನು ಬಯಸ್ತೇನೆ ಅರ್ಥ ಮಾಡಿಕೊಳ್ಳಬೇಕು ಹುಚ್ಚರನ್ನು ಬೆಳೆಸಬೇಡಿ ಕಲಾಪ್ರೇಕ್ಷಕರನ್ನು ಬೆಳೆಸಿ., ಒಂದು ಕಲಾ ಸೇವೆ ನಡೆಯುತ್ತಿರುವುದು ಇಲ್ಲಿ ನಾವು ಕೆಲಸ ಇಲ್ಲದೇ ಇರೋದಕ್ಕೆ ಕುಣಿಯುವುದಲ್ಲ ಬೆವರು ಇಳಿಸುವುದಲ್ಲ ಆಯ್ತಾ ವಿಶಿಲ್ ಕೊಟ್ಟವ್ರ್ಯಾರು ದುಡ್ಡು ಕೊಟ್ಟವ್ರ್ಯಾರು ಧಾರ್ಮಿಕ ಭಾಷಣ ಮಾಡಬೇಕಾ ಒಂದು ಗಂಟೆ ಆಟ ಮಾಡಬೇಕಾ ?ಹೇಳಿ ಏನ್ ಹೇಳ್ತೀರಿ ಹಿರಿಯರೇ? ಎಂದು ಒಂದೇ ಸಮನೆ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಅವಮಾನ ರೀತಿಯಲ್ಲಿ ರಂಗಸ್ಥಳದಲ್ಲಿ ಹೇಳಿದ್ದರು. ಆ ವಿಡಿಯೋ ಕ್ಷಣಮಾತ್ರದಲ್ಲಿ ಯಕ್ಷಗಾನ ಪ್ರೇಮಿಗಳಿಂದ ವೈರಲ್ ಆಗಿತ್ತು. ಪರ -ವಿರೋಧ ಚರ್ಚೆಗೆ ಗ್ರಾಸವಾಯಿತು. ಪರಕಿಂತಲೂ ಅಶೋಕ್ ಭಟ್ಟರ ಈ ಹೇಳಿಕೆ ಕಲಾರಂಗ, ಕಲಾ ಅಭಿಮಾನಿಗಳು, ಕಲಾವಿದರು, ಕಲಾಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಯಿತು.ಪತ್ರಿಕೆ,ಟಿವಿ ಮಾಧ್ಯಮಗಳಲ್ಲಿ ಬಿಸಿ -ಬಿಸಿ ಪ್ರಚಾರ ಪಡೆಯಿತು. ಹಿರಿ-ಕಿರಿಯ ಕಲಾವಿದರುಗಳು ಇವರ ಈ ಹೇಳಿಕೆ ವಿರುದ್ಧ ಹರಿಹಾಯ್ದರು.ಟ್ರೊಲ್ ಪೇಜ್ ಗೆ ಕೂಡಾ ಆಹಾರವಾಯಿತು.
ಇನ್ನು ಹಿರಿಯ ಜನಪ್ರಿಯ ಯಕ್ಷಗಾನ ಕಲಾವಿದ ಸರಪಾಡಿ ವಿಶ್ವನಾಥ ಶೆಟ್ಟಿ ಅವರು ಮುಖ್ಯವಾಹಿನಿಗೆ ಬಂದು ಇದನ್ನು ಖಂಡಿಸಿದರು ಅಂತಹ ಕಲಾವಿದರಿಗೆ ಬುದ್ಧಿವಾದ ಹೇಳಿದರು ಹಾಗೂ ಕಲಾ ಪ್ರೇಮಿಗಳ ಪರವಾಗಿ ಕ್ಷಮೆಯನ್ನೂ ಯಾಚಿಸಿದರು. ಇನ್ನು ಸಾಕಷ್ಟು ಪ್ರಸಿದ್ಧ ಕಲಾವಿದರುಗಳು ರಂಗಸ್ಥಳದಲ್ಲಿ ಕಥೆ ಸಾಗುವ ಮಧ್ಯದಲ್ಲಿ ನೇರಾ -ನೇರ ಟಾಂಗ್ ನೀಡಿದರು.ಹಾಸ್ಯಾಸ್ಪದವಾದ ರಂಜಿಸಿದರು.ಕಂಬಳದ ಆಯೋಜಕರು ಕಂಬಳ ಪ್ರೇಮಿಗಳು ಸಹಾ ಭಟ್ಟರ ವಿರುದ್ಧ ಕಿಡಿ ಕಾರಿದರು.ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಯಕ್ಷಗಾನ ಎಂಬುದು ಗಂಡು ಕಲೆ, ದೈವಿಕಲೆ, ರಾಜಕಲೆ ಎಂದು ಪ್ರಸಿದ್ಧಿ ಪಡೆದಿದೆ ನೂರಾರು ವರ್ಷಗಳ ಇತಿಹಾಸವಿದೆ. ಆಧುನಿಕ ವಿಜ್ಞಾನ ತಂತ್ರಜ್ಞಾನ ಟಿವಿ ಕಂಪ್ಯೂಟರ್ ಗಳ ನಡುವೆಯೂ ಸಹಾ ಈ ಕಲೆ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆಧುನಿಕ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕುಂಠಿತಗೊಳ್ಳುತ್ತಿದ್ದರೂ ,ಕಾಲಕ್ಕೆ ತಕ್ಕಂತೆ ವಿವಿಧತೆಗಳನ್ನು ಅಳವಡಿಸಿಕೊಂಡು ಕಾಲಮಿತಿ ಆಟಗಳಿಂದ ಪ್ರೇಕ್ಷಕರನ್ನು ಇನ್ನು ಹಿಡಿದಿಟ್ಟುಕೊಂಡಿದೆ.ಆದರೆ ಇಂತಹ ಕಲಾವಿದರುಗಳಿಂದ ಈ ಅಸಹ್ಯತನದಿಂದ ಆಟಕ್ಕೆ ಬರುವವರ ಸಂಖ್ಯೆ ಕುಂಠಿತಗೊಂಡರೂ ಅಚ್ಚರಿ ಪಡಬೇಕಿಲ್ಲ.ಕಲಾವಿದರನ್ನು ಬೆಳೆಸಿರುವುದು, ಬೆಳೆಸಿದ್ದು ,ಬೆಳೆಸುವುದು ಪ್ರೇಕ್ಷಕರಲ್ಲವೇ ? ಪ್ರೇಕ್ಷಕರ ಚಪ್ಪಾಳೆ ಶಿಳ್ಳೆಗಳೇ ಕಲಾವಿದರಿಗೆ ಶ್ರೀ ರಕ್ಷೆ ಅದೇ ಅವರ ಹುಮ್ಮಸ್ಸು, ಉತ್ಸಾಹ, ಪ್ರೋತ್ಸಾಹಕ್ಕೆ ದಾರಿ ದೀಪ !ಅಂತಹ ಪ್ರೇಕ್ಷಕರನ್ನು ಆ ಭವ್ಯ, ದಿವ್ಯ ವೇದಿಕೆಯಲ್ಲಿ ಅವಮಾನಿಸಿರುವುದು ಸಹ್ಯವೇ ? ಉಜಿರೆ ಅಶೋಕ್ ಭಟ್ಟರಿಗೆ ಶಿಳ್ಳೆ ,ಚಪ್ಪಾಳೆಗಳ ಪ್ರೋತ್ಸಾಹ ಅಗತ್ಯವಿಲ್ಲದಿದ್ದರೆ ಅಥವಾ ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಅಲ್ಲಗಳೆಯಲು ಹತ್ತು- ಹಲವು ಉಪಾಯಗಳಿದ್ದವು ,ಕಥಾ ಪ್ರಸಂಗದ ಸಂಭಾಷಣೆ ನಡುವೆ ಅದನ್ನು ಪ್ರಸ್ತಾವಿಸಿ ಶಿಳ್ಳೆ ಚಪ್ಪಾಳೆ ಗೆ ಕಡಿವಾಣ ಹಾಕಬಹುದು.ಆಟ ಆಡಿಸುವವರನ್ನು ,ಸಂಯೋಜಕರನ್ನು ಬರ ಹೇಳಿ ಅವರಿಗೆ ವಿಷಯ ಪ್ರಸ್ತಾಪಿಸಿ ಅಲ್ಲಿಂದ ಸಂದೇಶ ರವಾನಿಸುವ ಅವಕಾಶಗಳಿತ್ತು., ಭಾಗವತರ ಮೈಕಿನಲ್ಲಿ ವಿನಂತಿ ಪಡಿಸಬಹುದಿತ್ತು, ಇನ್ನು ಆಟದ ಮಧ್ಯ ಕೃತಜ್ಞತೆ ಕೋರಲು ಬರುವ ಕಲಾವಿದರಿಗೆ ಈ ವಿಷಯವನ್ನು ಕೊಟ್ಟು ಸೌಜನ್ಯವಾಗಿ ವಿವೇಚನಾ ರೀತಿಯಲ್ಲಿ ಸಾರಬಹುದಿತ್ತು. ಅದನ್ನು ಬಿಟ್ಟು ರಂಗಸ್ಥಳದಲ್ಲಿಯೇ ಏಕಾಏಕಿ ಪ್ರೇಕ್ಷಕರಿಗೆ,ಆಟ ಆಡಿಸುವವರಿಗೆ ಅವಮಾನ ಮಾಡುವುದರ ಜೊತೆಗೆ ಜನಪ್ರೀಯ ಜಾನಪದ ಕ್ರೀಡೆಗಳಲ್ಲಿ ಒಂದಾದ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ,ಕೋಳಿ ಅಂಕಕ್ಕೆ ಹೋಲಿಸಿದ್ದು ,ಹೀಯಾಳಿಸಿದ್ದು ಎಷ್ಟು ಸರಿ ?ಇನ್ನು ಡೊಂಬ ಸಮುದಾಯದವರು ಆಚರಿಸುವ ಡೊಂಬರಾಟ ಬಗ್ಗೆ ಲಘುವಾಗಿ ಉದಾಹರಿಸಿದ್ದು ನಿಜಕ್ಕೂ ಜೀರ್ಣಿಸಿಕೊಳ್ಳಲಾರದ ವಿಚಾರ. ಉಜಿರೆ ಆಶೋಕ ಭಟ್ಟರ ಬಗ್ಗೆ ಒಳ್ಳೆಯ ಅಭಿಮಾನವಿದೆ ಹಿರಿಯ ಕಲಾವಿದ ಯಾವುದೇ ಪಾತ್ರವಾದರೂ ಜೀವತುಂಬವ ಅದ್ಬುತ ವೇಷಧಾರಿ, ತಾಳಮದ್ಧಲೆಯ ಮಹಾರಥ ಅವರ ಅರ್ಥಗಾರಿಕೆಗೆ ಮಾರೋ ಹೋಗದೆ ಇರುವವರೇ ಇಲ್ಲ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದ ಇವರು ಒಂದೇ ಒಂದು ದಿನ ಎಲ್ಲವನ್ನೂ ಹಾಳು ಮಾಡಿಕೊಂಡರು . ಈ ಹೇಳಿಕೆಗೆ ಬೇರೆ ಯಾವುದೇ ಪ್ರದೇಶದಲ್ಲಾದರೂ ಅಲ್ಲಿನ ಚಿತ್ರಣ ಬದಲಾಗುತ್ತಿತ್ತು ಅದಕ್ಕೆ ತಕ್ಕ ಉತ್ತರ ಅದೇ ಸಮಯದಲ್ಲಿ ಅಲ್ಲಿನ ಕಲಾಪ್ರೇಮಿಗಳು ನೀಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯ .ಕುಂದಾಪುರ ಭಾಗದ ಜನರು ಮುಗ್ಧ ಜೀವಿಗಳು ಅದೇ ಹೇಳಿಕೆಯನ್ನು ಬೇರೆ ಡೆ ನೀಡುತ್ತಿದ್ದರೆ ಆ ಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕಿತ್ತು ಯಾಕೆಂದರೆ ಈ ಹಿಂದಿಂದ ಘಟನೆಗಳನ್ನು ನೆನಪು ಮಾಡಿಕೊಂಡರೇ, ಈ ಹಿಂದಿನ ಶಿರಸಿಯ ಘಟನೆಯಾಗಿರಬಹುದು ಅಥವಾ ಬೆಳ್ತಂಗಡಿ ನಡೆದ ಅಹಂಕಾರಿತನಕ್ಕೆ ಬೆಲೆತೆತ್ತಿದ್ದರು ಆದರೂ ಅದರಿಂದ ಇನ್ನೂ ಬುದ್ಧಿ ಕಲಿತಿಲ್ಲ ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಅಲ್ಲವೇ ಅಲ್ಲ ಈಗಾಗಲೇ ವ್ರತಿ ಜೀವನದ ಕೊನೆ ಹಂತದಲ್ಲಿರುವ ಇವರು ಉಳಿದಿರುವ ದಿನಗಳಲ್ಲಿ ಕಲಾ ಪ್ರೌಢತ್ವವನ್ನು ಬೆಳೆಯಿಸಿಕೊಂಡು ಪ್ರೇಕ್ಷಕರ ವಲಯದಿಂದ ಕಲೆಗೆ ಬೆಲೆ ಸಿಗಲಿ ಎಂದೆಷ್ಟೇ ಹೇಳಬಹುದು.