ಒಡಲಧ್ವನಿ
दिल कि बात...ಮನಸ್ಸಿನಲ್ಲಿ ಬಚ್ಚಿಡಲಾಗದ ಭಾವನೆಗಳ ಮಹಾಪೂರ .
ಗುರುವಾರ, ಜುಲೈ 30, 2026
ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಗೆದ್ದಿದೆ... ಆದರೆ ಅಭಿಮಾನಿಗಳ ಆತಂಕ ಇನ್ನೂ ದೂರವಾಗಿಲ್ಲ!!
ಅಂತೂ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ನೆಮ್ಮದಿಯನ್ನು ಮೂಡಿಸಿದೆ. ವಿಶ್ವ ಚಾಂಪಿಯನ್ ತಂಡವೊಂದು ಜಿಂಬಾಬ್ವೆಯಂತಹ ದುರ್ಬಲ ತಂಡವನ್ನು ಸೋಲಿಸಿದರೆ ಅದರಲ್ಲಿ ವಿಶೇಷವೇನು? ಗೆಲುವು ನಿರೀಕ್ಷಿತವೇ ಅಲ್ಲವೇ? ಎಂಬ ಪ್ರಶ್ನೆಯನ್ನು ಹಲವರಲ್ಲಿ ಮೂಡುವುದು ಸ್ವಾಭಾವಿಕ! ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಾ ?ಮೇಲ್ನೋಟಕ್ಕೆ ಈ ಪ್ರಶ್ನೆ ಹಾಸ್ಯಾಸ್ಪದವಾಗಿ ಕಂಡರೂ, ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್ ಕಂಡ ಏರಿಳಿತದ,ಬೆಳವಣಿಗೆಯನ್ನು ಗಮನಿಸಿದವರಿಗೆ ಅದರ ಹಿಂದಿನ ಆತಂಕ ಅರ್ಥವಾಗುತ್ತದೆ.
ಗಂಭೀರ ಸ್ವರೂಪದ ಹೆಡ್ ಕೋಚ್ ಗೌತಮ್ ಗಂಭೀರ್ ಯೋಚನೆಯ, ಅಜಿತ್ ಅಗರ್ಕರ್ ಯೋಜನೆಯ ಟೀಮ್ ನಲ್ಲಿ ಏನೇನು ಪ್ರಯೋಗ ಆಗುತ್ತಿದೆ ಎಂದು ಬಲ್ಲವರಿಗೆ ಗೊತ್ತಿರುವ ವಿಚಾರ.
ಸೂರ್ಯಕುಮಾರ್ ಯಾದವ್ ನ್ನು ಎತ್ತಂಗಡಿ ಮಾಡಿ ಶ್ರೇಯಸ್ ಅಯ್ಯರಿಗೆ ಕ್ಯಾಪ್ಟನ್ ಶಿಪ್ ಕೊಟ್ಟು ಟೀಮ್ ಇಂಡಿಯಾವನ್ನು ಆತನ ಹೆಗಲ ಮೇಲೆ ಇರಿಸಿದ್ದರು.ಅಯ್ಯರ್ ನಾಯಕನ ಸ್ಥಾನಕ್ಕೆ ಅರ್ಹನೇ ಆದರೂ, ಉತ್ತಮ ನಾಯಕತ್ವವನ್ನು ಹೊಂದಿ ಸಾಕಷ್ಟು ಐಸಿಸಿ ಟ್ರೋಪಿಗಳನ್ನು ತಂದುಕೊಟ್ಟ sky ಯನ್ನು ವಿನಾಕಾರಣ ಬದಿಗೆ ಸರಿಸಿದ್ದು ಕ್ರಿಕೆಟ್ ಪ್ರೇಮಿಗಳಿಗೆ ನುಂಗಲಾರದ ತುತ್ತೇ ಆಗಿತ್ತು .
ಐಪಿಎಲ್ ಪಂದ್ಯಾಟದಲ್ಲಿ ಆಟಗಾರರ ಆಳ-ಅಗಲವನ್ನು ಅಳೆಯುವ ಹಳೆಯ ಚಾಳಿ ಕ್ರಿಕೆಟ್ ಮಂಡಳಿಯವರು ಇನ್ನೂ ಬಿಟ್ಟಿಲ್ಲ.ಆ ಆಟವೇ ಬೇರೆ ಈ ಫಾರ್ಮೆಟ್ ಯೇ ಬೇರೆ., ಅಲ್ಲಿ ಕ್ಲಿಕ್ ಆದವರು ಇಲ್ಲಿ ಹಿಟ್ ಆಗಬೇಕು ಅಂತಿಲ್ಲ. ಒಬ್ಬ ಆಟಗಾರನ ಮೌಲ್ಯವನ್ನು ಕೇವಲ ಐಪಿಎಲ್ ಪ್ರದರ್ಶನದಿಂದಲೇ ಅಳೆಯುವುದು ಎಷ್ಟು ಸೂಕ್ತ ? ಐಪಿಎಲ್ ಒಂದು ವಿಭಿನ್ನ ವೇದಿಕೆ . ಐಪಿಎಲ್‌ನಲ್ಲಿ ಮಿಂಚಿದವರೆಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗುತ್ತಾರೆ ಎನ್ನುವ ನಿಯಮವಿಲ್ಲ. ಅದೇ ರೀತಿ ಐಪಿಎಲ್‌ನಲ್ಲಿ ವಿಫಲರಾದ ಹಲವರು ಭಾರತ ಪರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದಿದ್ದಾರೆ ಸಾಲು- ಸಾಲು ಉದಾಹರಣೆಗಳು ಸಾಕಷ್ಟಿವೆ.
ಸೂರ್ಯ ಕುಮಾರ್ ಯಾದವ್ ಫಾರ್ಮ್ ನಲ್ಲಿಲ್ಲ :ನಿಜ! ಐಪಿಎಲ್ ನಲ್ಲಿ ಹಾಗೂ ಐಪಿಎಲ್ ಗಿಂತ ಮುಂಚೆ ನಡೆದ ಕೆಲವೊಂದು ಮ್ಯಾಚ್ ನಲ್ಲಿ ದಿ sky ಖ್ಯಾತಿಯ ಸೂರ್ಯಕುಮಾರ್ ಯಾದವ್ ಫಾರ್ಮ್ ನಲ್ಲಿ ಇರಲಿಲ್ಲ.ಅಂದ ಮಾತ್ರಕ್ಕೆ ಆತನನ್ನು ಕ್ಯಾಪ್ಟನ್ ನಿಂದ ಕಿತ್ತು ಬಿಸಾಕುವುದೇ ? ಸಮಯ ಸರಿ ಇಲ್ಲ ಅದೃಷ್ಟ ಕೈಗೂಡುತ್ತಿಲ್ಲ.ಬ್ಯಾಟಿಂಗ್ ನಲ್ಲಿ ವೈಫಲ್ಯತೆ ಕಾಣುತ್ತಿರುವುದು ನಿಜವೇ ಆದರೂ , ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳಿದ್ದರೂ, ಅವರ ನಾಯಕತ್ವ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಅನುಮಾನಗಲಿಲ್ಲ. ಆತ ಒಬ್ಬ ಒಳ್ಳೆಯ ನಾಯಕ.ಟೀಮ್ ಲೀಡಿಂಗ್ ನ ತಾಳ್ಮೆ-ಜಾಳ್ಮೆ ಅತ್ಯುತ್ತಮವಾಗಿದೆ. ಆತನಿಗೆ ಕ್ಯಾಪ್ಟನ್ಸಿ ಯಿಂದ ಕೊಕ್ ನೀಡಿದ್ದರ ವಿರುದ್ಧ ಹಲವಾರು ಕ್ರಿಕೆಟ್ ಲೆಜೆಂಡ್ ಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ , ಅಭಿವ್ಯಕ್ತಿಯನ್ನು ಹೊರಹಾಕಿದ್ದಾರೆ.
ಐರ್ಲೆಂಡ್ ಪ್ರವಾಸದಲ್ಲಿ ಮೂರು ಟಿ20ಗೆ ಸೂರ್ಯ ನಾಯಕನಲ್ಲದಿದ್ದರೂ ,ತಂಡದಲ್ಲೂ ಸ್ಥಾನ ಸಿಗಲಿಲ್ಲ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲಾಯಿತು. ಐಪಿಎಲ್ ಕಿಲಾಡಿಗಳನ್ನು ಭಟ್ಟಿ ಇಳಿಸಲಾಯಿತಾದರೂ ,ರಾಯಲ್ ಚಾಂಲೆಜರ್ಸ್ ಬೆಂಗಳೂರು ಆಟಗಾರರು ಯಾವ ಪಾಪ ಮಾಡಿದ್ರೂ ಗೊತ್ತಿಲ್ಲ ಯಾವೊಬ್ಬ ಆಟಗಾರನೂ ಟೀಮ್ ನಲ್ಲಿ ಸೆಲೆಕ್ಟ್ ಆಗಲೇ ಇಲ್ಲ.ಸತತ ಎರಡೆರಡು ಬಾರಿ ಚಾಂಪಿಯನ್ ಪಟ್ಟ ಧರಿಸದ್ದರೂ ,ಅಲ್ಲಿನ ಆಟಗಾರರನ್ನು ಕಡೆಗಣಿಸಲಾಯಿತು.ಕ್ರಿಕೆಟ್ ಜಗತ್ತಿನ ಕೂಸು ಐರ್ಲೆಂಡ್ ಗೆ ಟಾಪ್ ಪ್ಲೇಯೆರ್ ಗಳ ಅಗತ್ಯವಿಲ್ಲದಿದ್ದರೂ, ಅವರ ನೆಲ ಎಂಬ ಕಿಂಚಿತ್ ಆಲೋಚನೆ ಟೀಮ್ ಸೇಲೆಕ್ಟ್ರ್ ಗಳಿಗೆ ಇರಲಿಲ್ಲ.
ಸೆಲೆಕೆಟ್ರ್ ಅಜಿತ್ ಅಗರ್ಕರ್ ರ ಟೀಮ್ ನಲ್ಲಿ ವಿದೇಶಕ್ಕಿಂತ ತವರಿನ ಪಿಚ್ಚಿನಲ್ಲಿ ಆಡಿದವರೇ ಅಧಿಕ ಸಂಖ್ಯೆಯಲ್ಲಿದ್ದರು.ಐರ್ಲೆಂಡ್ ಪಿಚ್ ಕಂಡವರು ಯಾರೊಬ್ಬರೂ ಟೀಮಿನಲ್ಲಿ ಜಾಗ ಪಡೆಯಲಿಲ್ಲ. ಇದೇನೋ ಸಣ್ಣ ಟೀಮ್ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂಕಾರ ಒಂದೆಡೆಯಾದರೇ ಸಹಜತೆಯ ನೆಗ್ಲೆಜೆನ್ಸ್ ಭಾವ ಇನ್ನೊಂದೆಡೆ ! ಕ್ರಿಕೆಟ್ ದುನಿಯಾವೇ ಅಚ್ಚರಿ ಪಡುವಂತೆ ಐರ್ಲ್ಯಾಂಡ್, ವಿಶ್ವ ಚಾಂಪಿಯನ್ ಇಂಡಿಯಾವನ್ನು ವಾಶ್ ಔಟ್ ಮಾಡಿ ಬಿಟ್ಟಿತು . ಒಂದೂ ಮ್ಯಾಚ್ನ್ನು ಬಿಟ್ಟು ಕೊಡದ ಕ್ರಿಕೆಟ್ ಶಿಶುಗಳ ಸಾಂಘಿಕ ಆಟ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿತ್ತು. ಮರ್ಯಾದೆ, ಗೌರವಕ್ಕೆ ಒಂದಾದರೂ ಗೆಲ್ಲಬಹುದಿತೇನೋ ಆದರೆ ಕೋಚ್ ಗಂಭೀರ್ ನವ -ನವೀನ ಸಂಶೋಧನೆಯಡಿಯಲ್ಲಿ ಕೈಕೊಟ್ಟು ಬಿಟ್ಟಿದ್ದು. ಇಲ್ಲ ಸಲ್ಲದ ಕೆಟ್ಟ ದಾಖಲೆಗಳನ್ನು ಬರೆಸಿಕೊಂಡಿತು. ಶತ್ರು ರಾಷ್ಟ್ರ್ರಗಳ ಹೀಯಾಳಿಕೆ ನುಡಿಗಳಿಗೆ ಒಳಗಾಗಬೇಕಾಯಿತು .
ಇಂಗ್ಲೆಂಡ್ ಸೀರೀಸ್ ನಲ್ಲೂ ಅದೇ ಹಾಡು: ಬೆರಳಣಿಕೆಯ ದಿನಗಳಲ್ಲಿ ಇನ್ನೊಂದು ಸೀರಿಯಸ್ ಶುರುವಾಯಿತು ಅದು ಇಂಗ್ಲೆಂಡ್ ಪ್ರವಾಸ.ಐದು T20 ಹಾಗೂ 3 ಒಂಡೇ ಮ್ಯಾಚ್ .ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರತೆ ಕಾಣಿಸಲಿಲ್ಲ. ಅದೇ ರಾಗ ಅದೇ ಹಾಡು ಎಂಬಂತೆ ಮತ್ತದೇ ತರಹನಾದ ಟೀಮ್ ನ ಸೆಲೆಕ್ಟ್ ಮಾಡಿದರು ಈ ಮಹಾನುಭಾವರು . ಐರ್ಲ್ಯಾಂಡ್ ನಿಂದ ಪಾಠ ಕಲಿಯದ ಮ್ಯಾನೇಜ್ಮೆಂಟ್, ಕ್ರಿಕೆಟ್ ರೂವಾರಿಗಳ ತವರು ನಾಡಿನಲ್ಲಿ ಸರಿಯಾಗಿ ಬುದ್ಧಿ ಕಲಿತರು. ಐದು T20 ಯಲ್ಲಿ ಒಂದು ಮಳೆಯಿಂದ ರದ್ದಾಗಿದ್ದರೇ ,ಮಾತೆಲ್ಲವೂ ಗೋನ್ ಪಚಕ್ ! ಹೋಗಲಿ Onday ನಲ್ಲಿಯಾದರೂ,ಪ್ರತಿಕಾರ ತೀರಿಸಿಕೊಳ್ಳುತ್ತಾರೆ ಅಂದು ಎಣಿಸಿದರೆ ಲೆಕ್ಕ ಚುಕ್ತಾ ಆಗದೇ ಹೋಯಿತು. ಅದ್ಯಾವುದೋ ಅದೃಷ್ಟವೋ ,ಪುಣ್ಯವೋ ಕ್ಲೀನ್ ಸ್ವೀಪ್ ಆಗ್ಲಿಲಿಲ್ಲ.ಅಟ್ಲಿಸ್ಟ್ ಒಂದು ಮಾಯ್ಚ್ ಗೆದ್ದು ಮರ್ಯಾದೆ ಉಳಿಸಿಕೊಂಡಿತು. ಕೋಚ್ ಗಂಭೀರ್ ಇಂಪ್ಲಿಮೆಂಟೇಶನ್ ಯಾವುದು ಕೈಗೂಡುವುದಿಲ್ಲ, ಆತ ಬಿಡುವುದಿಲ್ಲ.ಒಂಡೇ ಯಲ್ಲಿ ಟೀಮ್ ಕೊಂಚ ಚೇಂಜ್ ಆಗಿದ್ದರೂ , ಬೋಲಿಂಗ್ ನಲ್ಲಿ ಮಾತ್ರ full ಪ್ಲಾಪ್ !.
ಮಹಮ್ಮದ್ ಶಮಿ ,ಮೊಹಮ್ಮದ್ ಸಿರಾಜ್ ,ಭುವನೇಶ್ವರ್ ಕುಮಾರ್, ಅಂತಹ ಅನುಭವಿ ಬೋಲರ್ಗಳಿದ್ದರೂ ಅವರೆನ್ನೆಲ್ಲಾ ಸೈಡ್ ಲೈನ್ ಮಾಡಿ ,ಇಂಥವರುಗಳಿಗೆ ಚಾನ್ಸ್ ಕೊಟ್ಟು ಟೀಮ್ ನ್ನು ಸರ್ವನಾಶ ಮಾಡಲು ಹೊರಟಿದ್ದರು. ಇನ್ನು ಕುಲದೀಪ್ ಯಾದವ್ ಟೀಮ್ ಗೆ ಸೆಲೆಕ್ಟ್ ಆಗಿದ್ದರೂ ,ಆತ ನೀರು ತಂದು ಕೊಡುವ ಕಾಯಕಕಷ್ಟೆ ಸೀಮಿತವಾಗಿದ್ದರು.
ಕ್ರಿಕೇಟ್ ಪಂಡಿತರ ಅಭಿಪ್ರಾಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶದ ಫಲಶೃತಿಯೇನೋ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ರೆಸ್ಟ್ ಕೊಟ್ಟ ಬಿಸಿಸಿಐ , ಜಿಂಬಾಬ್ಬೆ ವಿರುದ್ಧದ ಸೀರೀಸ್ ಗೆ ವಿವಿಎಸ್ ಲಕ್ಷ್ಮಣ್ ಗೆ ಮಣೆ ಹಾಕಿದ್ದರು. ನಗು ಮುಖದ ಸುಂದರ ಸರದಾರ ಲಕ್ಶಣ್, ಅಷ್ಟೊಂದು ಬಲಶಾಲಿ ಅಲ್ಲದ ಟೀಮ್ ತನ್ನ ಕೈಲ್ಲಿದ್ದರೂ ,ಹೆಚ್ಚಿನ ಒತ್ತಡ ,ಕಠಿಣವಲ್ಲದ ಹರಾರೆ ಪಿಚ್ ನಲ್ಲಿ ಸುಲಭವಾಗಿ ಜಿಂಬಾಬ್ಬೆ ಬಾಯ್ಸ್ ಗಳನ್ನು ಕಾಡಿ ಮೂರಕ್ಕೆ ಮೂರೂ T20 ಯನ್ನು ಕೈವಶ ಪಡಿಸಿಕೊಂಡು ಕೊಂಚ ನಿಟ್ಟಿಸಿರು ಬಿಡುವಂತೆ ಮಾಡಿದರು.ನಿರೀಕ್ಷೆಯಂತೆ ಜಿಂಬಾಬ್ಬೆ ಹೇಳಿಕೊಳ್ಳುವಂತ ದೊಡ್ಡ ಟೀಮ್ ಅಲ್ಲದಿದ್ದರೂ, ಟೀಮ್ ಇಂಡಿಯಾದ ಈಗಿನ ಪರಿಸ್ಥಿತಿಗೆ ದೊಡ್ಡದೇ !! ಶುಭಾಶಯಗಳು.
ಕೊನೆ ಮಾತು:ಮುಂದೆ ಶ್ರೀಲಂಕಾ ಫ್ಲೈಟ್ ಹತ್ತುವುದಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ.ಎರಡು ಟೆಸ್ಟ್ ಮ್ಯಾಚ್ ಗೆಲುವಿಗೆ ಎದುರು ನೋಡುತ್ತಿದೆ. ಪ್ರತಿಭಾವಂತ ಆಟಗಾರರನ್ನು ಅವರ ಸಹಜ ಕ್ರಮಾಂಕದಲ್ಲೇ ಆಡಿಸುವುದು, ಅನುಭವ ಮತ್ತು ಯುವ ಪ್ರತಿಭೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ತಂಡದ ಯಶಸ್ಸಿನ ಗುಟ್ಟುಇನ್ನು ,ಅತಂತ್ರ ಪರಿಸ್ಥಿಯಲ್ಲಿರುವ kl ರಾಹುಲ್ ಕ್ರಿಕೆಟ್ ಕ್ಯಾರಿಯರ್ ಜೊತೆ ಆಟವಾಡುತ್ತಿರುವ ಮೆನೇಜೆಮೆಂಟ್ ಉಪನಾಯಕನ ಸ್ಥಾನವನ್ನು ಕೊಟ್ಟಿದೆ. ಯಾರೇ ಕೋಚ್ ಆದರೂ ಸರಿಯಾಗಿ use ಮಾಡಿ ಕೊಳ್ಳಿ ತನ್ನ ಕ್ರಮಾಂಕದಲ್ಲೇ ಆಡುವುದಕ್ಕೆ ಸ್ವತಂತ್ರತೆ ನೀಡಿ.ಇನ್ನೇನು ICC ವಿಶ್ವ ಕಪ್ ಪ್ರಾರಂಭವಾಗಲಿದೆ .ಭಾರತೀಯ ಕ್ರಿಕೆಟ್ ಮತ್ತೆ ವಿಶ್ವದ ನಂ.1 ತಂಡದ ಮಟ್ಟವನ್ನು ತಲುಪಬೇಕಾದರೆ, ಪ್ರಯೋಗಗಳಿಗಿಂತ ಸ್ಥಿರತೆ, ಸ್ಪಷ್ಟ ಯೋಜನೆ ಮತ್ತು ಸರಿಯಾದ ತಂಡದ ಆಯ್ಕೆಯೇ ಯಶಸ್ಸಿನ ದಾರಿ.
ಶನಿವಾರ, ಏಪ್ರಿಲ್ 4, 2026
ಭಟ್ಟರು ಕೆಟ್ಟರು ಈ ನಡೆತೆಯಿಂದ : ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ಟರ 'ಸಿಲ್ಲಿ' ಹೇಳಿಕೆ ಸುತ್ತಾ ಒಂದು ಸುತ್ತು !
ಹೇಳಿ-ಕೇಳಿ ನಾನು ಯಕ್ಷಗಾನ ಪ್ರೇಮಿ ಅದೂ ಅಲ್ಲದೇ ನನ್ನ ಪಕ್ಕದ ಊರಿನಲ್ಲಿ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ನಡೆದ ಘಟನೆ ಇದೀಗ ರಾಜ್ಯದಾದ್ಯಂತ ಸುದ್ದಿ ಆಗುತ್ತಿದೆ.ಈ ಸುದ್ದಿ ಕಾಡುತ್ತಿರುವುದರಿಂದ ನನ್ನ ಒಡಲ ಧ್ವನಿಯಲ್ಲಿ ಹರಡಲೇಬೇಕಾಗಿದೆ ನಾನು ಊರಿನಲ್ಲಿದ್ದಿದ್ದರೆ ಖಂಡಿತವಾಗಿಯೂ 10-15 ಕಿ.ಮೀ ದೂರದಲ್ಲಿ ಎಲ್ಲೇ ಆಟ ಇದ್ದಾರೂ ಆಮಂತ್ರಣ ಇಲ್ಲದಿದ್ದರೂ,ರಾತ್ರಿ ಬೈಕ್ ಸ್ಟಾರ್ಟ್ ಆಗದೇ ಇರುತ್ತಿರಲಿಲ್ಲ ಇದು ಬಜಪನ್ ನಿಂದ ನೆಡೆದುಕೊಂಡು ಬಂದ ರೀತಿ.
ಅದು ಮಾರ್ಚ್ 25ನೇ ತಾರೀಕು ನಾನು ಊರಿನಲ್ಲಿ ಇರಲಿಲ್ಲ ಆಟ ಮಿಸ್ ಮಾಡ್ಕೊಂಡಿದ್ದೆ.ಹೆನ್ನಾಬೈಲುವಿನ ಬಕ್ರ ಮನೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರಿಂದ ಹರಕೆ ಬಯಲಾಟ ಇದ್ದಿತ್ತು 'ಶ್ರೀ ಕೃಷ್ಣ ಪಾರಿಜಾತ' ಪ್ರಸಂಗ.ಅದರ ನೇರ ಪ್ರಸಾರ ಕ್ಷೇತ್ರದ ಮೇಳದವರ ಅಧೀಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿತ್ತು.ಸಮಯ ರಾತ್ರಿ 11 ಗಂಟೆ ಆಗಿರಬಹುದೇನೋ,? ಧರ್ಮಸ್ಥಳ ಮೇಳದವರ ಆಟ ಆಗುವುದು ನಮ್ಮ ಆ ಪ್ರದೇಶದಲ್ಲಿ ಬಹಳ ಅಪರೂಪ!ತೆಂಕುತಿಟ್ಟು ಅಪರೂಪದಲ್ಲಿ ಅಪರೂಪವೇ ಎಂದರು ತಪ್ಪಲ್ಲ.ಇನ್ನು ಕ್ಷೇತ್ರದ ಮೇಳವೆಂದ ಮೇಲೆ ಹೇಳಬೇಕೇ ಅಕ್ಕಪಕ್ಕದ ಗ್ರಾಮದವರು ಅದೂ ಇತ್ತೀಚಿಗೆ ಹೆಚ್ಚಿನ ಎಲ್ಲಾ ಮೇಳಗಳು ಕಾಲಮಿತಿಗೆ ಒಗ್ಗಿಕೊಂಡಿರುವುದರಿಂದಲೋ ಏನೋ ಪ್ರೇಕ್ಷಕರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು., ಸ್ವಾಭಾವಿಕ ಈಗಾಗಲೇ ಹೇಳಿದಂತೆ !! ಕೃಷ್ಣನ ವೇಷಧಾರಿಯಾಗಿ ಪ್ರಸಿದ್ಧ ಅರ್ಥ ಧಾರಿಯಾಗಿರುವ ಹಿರಿಯ ಕಲಾವಿದರಾದ ಉಜಿರೆ ಅಶೋಕ್ ಭಟ್ಟರು ರಂಗಸ್ಥಳದಲ್ಲಿದ್ದರು ಭಾಗವತರಾದ ಸಿರಿಮನೆ ರಾಮಕೃಷ್ಣ ಮಯ್ಯರ ಸೊಗಸಾದ ಆಲಾಪನೆಗೆ ಶಿಳ್ಳೆ,ಚಪ್ಪಾಳೆಗಳು ಧಾರಾಳವಾಗಿ ಬೀಳುತ್ತಿದ್ದವು.ಅದೇನಾಯ್ತೋ ಗೊತ್ತಿಲ್ಲ ಕೃಷ್ಣನ ವೇಷಧಾರಿಯಾಗಿದ್ದ ಅಶೋಕ್ ಭಟ್ಟರ ಮೇಲೆ ಭೂತದ ಆವೇಶವಾಯಿತೆನೋ ಎಂಬಂತೆ ಭಾಗವತರ ಪದ ಮುಗಿದು ಚಂಡೆ ಪೆಟ್ಟು ನಿಲ್ಲುವುದಕ್ಕಿಂತ ಮೊದಲೇ
"ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ ಡೊಂಬರಾಟ ಅಲ್ಲ ಇದು ನಾನು ಆಗನಿಂದ ಗಮನಿಸುತ್ತಿದ್ದೇನೆ ಚೌಕಿಯಲ್ಲಿದ್ದೇನೆ ಸಭ್ಯ ಸಭೆಯನ್ನು ಬಯಸುತ್ತೇನೆ ನನಗೆ ದಾಕ್ಷಿಣ್ಯ ಯಾರದ್ದು ಇಲ್ಲ. ಇಲ್ಲಿ ಯಾಕೆ ಕುಣಿಯುತ್ತೇವೆ ಗೊತ್ತುಂಟ ನಿಮಗೆ? ಯಾರು ಆಟ ಆಡಿಸುವರು ಏನಂತ ಆಲೋಚನೆ ಮಾಡಿದ್ದೀರಿ ?ನಿಮಗೆ ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಅಂತ ಗೊತ್ತುಂಟಾ? ಎಂತದ್ದು ಅದು ಶಿಳ್ಳೆ ಏನದು ಶಿಳ್ಳೆ ? ಕೋಳಿಕಟ್ಟವ? ಇಲ್ಲಿ ಕಂಬಳವಾ ? ಯಾರದು ಏನು ಆಲೋಚನೆ ಮಾಡಿದ್ದೀರಿ? ರೆಕಾರ್ಡ್ ಆಗಿದೆ ನನಗೆ ಯಾರ ದಾಕ್ಷಿಣ್ಯ ಇಲ್ಲ ಯಾರದು ಶಿಳ್ಳೆ ಹಾಕಿದವ ?ಆಗದಿದ್ದರೆ ಹೋಗು ಬನ್ಸ್ ತಿಂದು ಭಾಗವತರ ಕಂಠವನ್ನು ತೆಗಿತೀರಾ ? ಸಭ್ಯ ಸಭೆಯನ್ನು ಬಯಸ್ತೇನೆ ಅರ್ಥ ಮಾಡಿಕೊಳ್ಳಬೇಕು ಹುಚ್ಚರನ್ನು ಬೆಳೆಸಬೇಡಿ ಕಲಾಪ್ರೇಕ್ಷಕರನ್ನು ಬೆಳೆಸಿ., ಒಂದು ಕಲಾ ಸೇವೆ ನಡೆಯುತ್ತಿರುವುದು ಇಲ್ಲಿ ನಾವು ಕೆಲಸ ಇಲ್ಲದೇ ಇರೋದಕ್ಕೆ ಕುಣಿಯುವುದಲ್ಲ ಬೆವರು ಇಳಿಸುವುದಲ್ಲ ಆಯ್ತಾ ವಿಶಿಲ್ ಕೊಟ್ಟವ್ರ್ಯಾರು ದುಡ್ಡು ಕೊಟ್ಟವ್ರ್ಯಾರು ಧಾರ್ಮಿಕ ಭಾಷಣ ಮಾಡಬೇಕಾ ಒಂದು ಗಂಟೆ ಆಟ ಮಾಡಬೇಕಾ ?ಹೇಳಿ ಏನ್ ಹೇಳ್ತೀರಿ ಹಿರಿಯರೇ? ಎಂದು ಒಂದೇ ಸಮನೆ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಅವಮಾನ ರೀತಿಯಲ್ಲಿ ರಂಗಸ್ಥಳದಲ್ಲಿ ಹೇಳಿದ್ದರು.
ಆ ವಿಡಿಯೋ ಕ್ಷಣಮಾತ್ರದಲ್ಲಿ ಯಕ್ಷಗಾನ ಪ್ರೇಮಿಗಳಿಂದ ವೈರಲ್ ಆಗಿತ್ತು. ಪರ -ವಿರೋಧ ಚರ್ಚೆಗೆ ಗ್ರಾಸವಾಯಿತು. ಪರಕಿಂತಲೂ ಅಶೋಕ್ ಭಟ್ಟರ ಈ ಹೇಳಿಕೆ ಕಲಾರಂಗ, ಕಲಾ ಅಭಿಮಾನಿಗಳು, ಕಲಾವಿದರು, ಕಲಾಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಯಿತು.ಪತ್ರಿಕೆ,ಟಿವಿ ಮಾಧ್ಯಮಗಳಲ್ಲಿ ಬಿಸಿ -ಬಿಸಿ ಪ್ರಚಾರ ಪಡೆಯಿತು. ಹಿರಿ-ಕಿರಿಯ ಕಲಾವಿದರುಗಳು ಇವರ ಈ ಹೇಳಿಕೆ ವಿರುದ್ಧ ಹರಿಹಾಯ್ದರು.ಟ್ರೊಲ್ ಪೇಜ್ ಗೆ ಕೂಡಾ ಆಹಾರವಾಯಿತು.
ಇನ್ನು ಹಿರಿಯ ಜನಪ್ರಿಯ ಯಕ್ಷಗಾನ ಕಲಾವಿದ ಸರಪಾಡಿ ವಿಶ್ವನಾಥ ಶೆಟ್ಟಿ ಅವರು ಮುಖ್ಯವಾಹಿನಿಗೆ ಬಂದು ಇದನ್ನು ಖಂಡಿಸಿದರು ಅಂತಹ ಕಲಾವಿದರಿಗೆ ಬುದ್ಧಿವಾದ ಹೇಳಿದರು ಹಾಗೂ ಕಲಾ ಪ್ರೇಮಿಗಳ ಪರವಾಗಿ ಕ್ಷಮೆಯನ್ನೂ ಯಾಚಿಸಿದರು. ಇನ್ನು ಸಾಕಷ್ಟು ಪ್ರಸಿದ್ಧ ಕಲಾವಿದರುಗಳು ರಂಗಸ್ಥಳದಲ್ಲಿ ಕಥೆ ಸಾಗುವ ಮಧ್ಯದಲ್ಲಿ ನೇರಾ -ನೇರ ಟಾಂಗ್ ನೀಡಿದರು.ಹಾಸ್ಯಾಸ್ಪದವಾದ ರಂಜಿಸಿದರು.ಕಂಬಳದ ಆಯೋಜಕರು ಕಂಬಳ ಪ್ರೇಮಿಗಳು ಸಹಾ ಭಟ್ಟರ ವಿರುದ್ಧ ಕಿಡಿ ಕಾರಿದರು.ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಯಕ್ಷಗಾನ ಎಂಬುದು ಗಂಡು ಕಲೆ, ದೈವಿಕಲೆ, ರಾಜಕಲೆ ಎಂದು ಪ್ರಸಿದ್ಧಿ ಪಡೆದಿದೆ ನೂರಾರು ವರ್ಷಗಳ ಇತಿಹಾಸವಿದೆ. ಆಧುನಿಕ ವಿಜ್ಞಾನ ತಂತ್ರಜ್ಞಾನ ಟಿವಿ ಕಂಪ್ಯೂಟರ್ ಗಳ ನಡುವೆಯೂ ಸಹಾ ಈ ಕಲೆ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆಧುನಿಕ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕುಂಠಿತಗೊಳ್ಳುತ್ತಿದ್ದರೂ ,ಕಾಲಕ್ಕೆ ತಕ್ಕಂತೆ ವಿವಿಧತೆಗಳನ್ನು ಅಳವಡಿಸಿಕೊಂಡು ಕಾಲಮಿತಿ ಆಟಗಳಿಂದ ಪ್ರೇಕ್ಷಕರನ್ನು ಇನ್ನು ಹಿಡಿದಿಟ್ಟುಕೊಂಡಿದೆ.ಆದರೆ ಇಂತಹ ಕಲಾವಿದರುಗಳಿಂದ ಈ ಅಸಹ್ಯತನದಿಂದ ಆಟಕ್ಕೆ ಬರುವವರ ಸಂಖ್ಯೆ ಕುಂಠಿತಗೊಂಡರೂ ಅಚ್ಚರಿ ಪಡಬೇಕಿಲ್ಲ.ಕಲಾವಿದರನ್ನು ಬೆಳೆಸಿರುವುದು, ಬೆಳೆಸಿದ್ದು ,ಬೆಳೆಸುವುದು ಪ್ರೇಕ್ಷಕರಲ್ಲವೇ ? ಪ್ರೇಕ್ಷಕರ ಚಪ್ಪಾಳೆ ಶಿಳ್ಳೆಗಳೇ ಕಲಾವಿದರಿಗೆ ಶ್ರೀ ರಕ್ಷೆ ಅದೇ ಅವರ ಹುಮ್ಮಸ್ಸು, ಉತ್ಸಾಹ, ಪ್ರೋತ್ಸಾಹಕ್ಕೆ ದಾರಿ ದೀಪ !ಅಂತಹ ಪ್ರೇಕ್ಷಕರನ್ನು ಆ ಭವ್ಯ, ದಿವ್ಯ ವೇದಿಕೆಯಲ್ಲಿ ಅವಮಾನಿಸಿರುವುದು ಸಹ್ಯವೇ ?
ಉಜಿರೆ ಅಶೋಕ್ ಭಟ್ಟರಿಗೆ ಶಿಳ್ಳೆ ,ಚಪ್ಪಾಳೆಗಳ ಪ್ರೋತ್ಸಾಹ ಅಗತ್ಯವಿಲ್ಲದಿದ್ದರೆ ಅಥವಾ ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಅಲ್ಲಗಳೆಯಲು ಹತ್ತು- ಹಲವು ಉಪಾಯಗಳಿದ್ದವು ,ಕಥಾ ಪ್ರಸಂಗದ ಸಂಭಾಷಣೆ ನಡುವೆ ಅದನ್ನು ಪ್ರಸ್ತಾವಿಸಿ ಶಿಳ್ಳೆ ಚಪ್ಪಾಳೆ ಗೆ ಕಡಿವಾಣ ಹಾಕಬಹುದು.ಆಟ ಆಡಿಸುವವರನ್ನು ,ಸಂಯೋಜಕರನ್ನು ಬರ ಹೇಳಿ ಅವರಿಗೆ ವಿಷಯ ಪ್ರಸ್ತಾಪಿಸಿ ಅಲ್ಲಿಂದ ಸಂದೇಶ ರವಾನಿಸುವ ಅವಕಾಶಗಳಿತ್ತು., ಭಾಗವತರ ಮೈಕಿನಲ್ಲಿ ವಿನಂತಿ ಪಡಿಸಬಹುದಿತ್ತು, ಇನ್ನು ಆಟದ ಮಧ್ಯ ಕೃತಜ್ಞತೆ ಕೋರಲು ಬರುವ ಕಲಾವಿದರಿಗೆ ಈ ವಿಷಯವನ್ನು ಕೊಟ್ಟು ಸೌಜನ್ಯವಾಗಿ ವಿವೇಚನಾ ರೀತಿಯಲ್ಲಿ ಸಾರಬಹುದಿತ್ತು. ಅದನ್ನು ಬಿಟ್ಟು ರಂಗಸ್ಥಳದಲ್ಲಿಯೇ ಏಕಾಏಕಿ ಪ್ರೇಕ್ಷಕರಿಗೆ,ಆಟ ಆಡಿಸುವವರಿಗೆ ಅವಮಾನ ಮಾಡುವುದರ ಜೊತೆಗೆ ಜನಪ್ರೀಯ ಜಾನಪದ ಕ್ರೀಡೆಗಳಲ್ಲಿ ಒಂದಾದ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ,ಕೋಳಿ ಅಂಕಕ್ಕೆ ಹೋಲಿಸಿದ್ದು ,ಹೀಯಾಳಿಸಿದ್ದು ಎಷ್ಟು ಸರಿ ?ಇನ್ನು ಡೊಂಬ ಸಮುದಾಯದವರು ಆಚರಿಸುವ ಡೊಂಬರಾಟ ಬಗ್ಗೆ ಲಘುವಾಗಿ ಉದಾಹರಿಸಿದ್ದು ನಿಜಕ್ಕೂ ಜೀರ್ಣಿಸಿಕೊಳ್ಳಲಾರದ ವಿಚಾರ. ಉಜಿರೆ ಆಶೋಕ ಭಟ್ಟರ ಬಗ್ಗೆ ಒಳ್ಳೆಯ ಅಭಿಮಾನವಿದೆ ಹಿರಿಯ ಕಲಾವಿದ ಯಾವುದೇ ಪಾತ್ರವಾದರೂ ಜೀವತುಂಬವ ಅದ್ಬುತ ವೇಷಧಾರಿ, ತಾಳಮದ್ಧಲೆಯ ಮಹಾರಥ ಅವರ ಅರ್ಥಗಾರಿಕೆಗೆ ಮಾರೋ ಹೋಗದೆ ಇರುವವರೇ ಇಲ್ಲ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದ ಇವರು ಒಂದೇ ಒಂದು ದಿನ ಎಲ್ಲವನ್ನೂ ಹಾಳು ಮಾಡಿಕೊಂಡರು .
ಈ ಹೇಳಿಕೆಗೆ ಬೇರೆ ಯಾವುದೇ ಪ್ರದೇಶದಲ್ಲಾದರೂ ಅಲ್ಲಿನ ಚಿತ್ರಣ ಬದಲಾಗುತ್ತಿತ್ತು ಅದಕ್ಕೆ ತಕ್ಕ ಉತ್ತರ ಅದೇ ಸಮಯದಲ್ಲಿ ಅಲ್ಲಿನ ಕಲಾಪ್ರೇಮಿಗಳು ನೀಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯ .ಕುಂದಾಪುರ ಭಾಗದ ಜನರು ಮುಗ್ಧ ಜೀವಿಗಳು ಅದೇ ಹೇಳಿಕೆಯನ್ನು ಬೇರೆ ಡೆ ನೀಡುತ್ತಿದ್ದರೆ ಆ ಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕಿತ್ತು ಯಾಕೆಂದರೆ ಈ ಹಿಂದಿಂದ ಘಟನೆಗಳನ್ನು ನೆನಪು ಮಾಡಿಕೊಂಡರೇ, ಈ ಹಿಂದಿನ ಶಿರಸಿಯ ಘಟನೆಯಾಗಿರಬಹುದು ಅಥವಾ ಬೆಳ್ತಂಗಡಿ ನಡೆದ ಅಹಂಕಾರಿತನಕ್ಕೆ ಬೆಲೆತೆತ್ತಿದ್ದರು ಆದರೂ ಅದರಿಂದ ಇನ್ನೂ ಬುದ್ಧಿ ಕಲಿತಿಲ್ಲ ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಅಲ್ಲವೇ ಅಲ್ಲ ಈಗಾಗಲೇ ವ್ರತಿ ಜೀವನದ ಕೊನೆ ಹಂತದಲ್ಲಿರುವ ಇವರು ಉಳಿದಿರುವ ದಿನಗಳಲ್ಲಿ ಕಲಾ ಪ್ರೌಢತ್ವವನ್ನು ಬೆಳೆಯಿಸಿಕೊಂಡು ಪ್ರೇಕ್ಷಕರ ವಲಯದಿಂದ ಕಲೆಗೆ ಬೆಲೆ ಸಿಗಲಿ ಎಂದೆಷ್ಟೇ ಹೇಳಬಹುದು.
ಬುಧವಾರ, ಮಾರ್ಚ್ 11, 2026
ಅವಮಾನಿಸಿದವರೇ ಮಾಡಿದರು ಸನ್ಮಾನ ! ಅಂಜದೇ ಸಾಧನೆಗೈದ ಸಂಜು !!
ಎಸ್ !ಅಂತೂ ಎಲ್ಲರ ನಿರಿಕ್ಷೆಯಂತೆ ಮ್ಯಾನ್ ಇನ್ ಬ್ಲೂ ಹುಡುಗರು ಪ್ರತಿಷ್ಠಿತ ಟಿ ಟ್ವೆಂಟಿ 2026ರ ಕ್ರಿಕೆಟ್ ವಿಶ್ವ ಕಪ್ ನ್ನು ಗೆದ್ದು ವಿಶ್ವ ಚಾಂಪಿಯನ್ ಆಗಿ ಮತ್ತೊಮ್ಮೆ ಹೊರಹೊಮ್ಮಿದ್ದಾರೆ . ಎರಡು ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್ ಪಂದ್ಯಾಟವು ಪ್ರಾರಂಭಿಕ ಪಂದ್ಯ ಧೋನಿ ನೇತೃತ್ವದಲ್ಲಿ 2007ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಮೂಡಿಗೆರೆಸಿಕೊಂಡಿತು. ಸಾಕಷ್ಟು ವಿರಾಮದ ಬಳಿಕ ಇಂಡಿಯನ್ ಟೀಮ್ 2024ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮತ್ತೆ ಕಪ್ ಗೆ ಮುತ್ತಿಕ್ಕಿತ್ತು .
ಇದೀಗ ಗೆದ್ದು ಬೀಗಿ ಸತತ ಎರಡು ಬಾರಿ ಒಟ್ಟು ಮೂರು ಬಾರಿ ವಿಶ್ವಕಪ್ ಗೆದ್ದ ತಂಡವಾಗಿ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿ ಕೊಂಡಿದೆ.
ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಇರುವಷ್ಟು ಅತ್ತ್ಯುತ್ತಮ ಆಟಗಾರರು ಬೇರೆಯಲ್ಲೂ ಸಿಗಲಿಕ್ಕೆ ಇಲ್ಲ ಒಬ್ಬರಿಗಿಂತ ಒಬ್ಬರು ಬಲಿಷ್ಠರು ಇಂತಹ ಪ್ಲೇಯರ್ಗಳನ್ನು ಅರಸಿ ಆರಿಸಿ ಆಯ್ಕೆ ಮಾಡೋದು ಸುಲಭದ ಮಾತು ಅಲ್ಲವೇ ಅಲ್ಲ ಅದೊಂದು ದೊಡ್ಡ ಸವಾಲು !. ಈ ಬಾರಿ ಹದಿನೈದು ಸದಸ್ಯರುಳ್ಳ ಒಳ್ಳೆಯ ಟೀಮನ್ನು ಆಡಳಿತ ಮಂಡಳಿ ಸೆಲೆಕ್ಟ್ ಮಾಡಿದಾಗಲೇ ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದರು ಈ ಬಾರಿ ಕಪ್ ಇಂಡಿಯಾದ ಮಡಿಲಿಗೆ ಎಂದು.ಅಂತೆಯೇ ಗ್ರೂಪ್ ಹಂತದಲ್ಲಿ ಒಂದು ಪಂದ್ಯ ಸೋತಿದ್ದು ಹೊರತು ಪಡಿಸಿದರೇ ಮತ್ತೆಲ್ಲವೂ ಗೆಲುವಿನ ಪತಾಕೆಯನ್ನು ಹಾರಿಸಿದ್ದೆವು .ಇದೆಲ್ಲವನ್ನೂ ಒತ್ತಿಟ್ಟಿಗಿಟ್ಟು ಬೊಟ್ಟು ಮಾಡಿ ಹೇಳಬಯಸಿದ್ದು ನಮ್ಮ ಸಂಜು ಸ್ಯಾಮ್ಸನ್ ಬಗ್ಗೆ
ವಿಕೆಟ್ ಕೀಪರ್ ಕಮ್ ಓಪನಿಂಗ್ ಬ್ಯಾಟರ್ ಆಗಿರುವ ಕೇರಳದ ಮೂಲದ ಸಂಜು ICC ಟ್ರೊಫಿಯಲ್ಲಿ ಆತನ ಬ್ಯಾಟ್ ನಿಂದ ರನ್ ನಿರೀಕ್ಷಿಸಲು ಸಾಧ್ಯವಿಲ್ಲ ಈತ ಕೇವಲ ಐಪಿಎಲ್ ಪ್ಲೇಯರ್ ಎಂಬ ಕುಹಕದ ಮಾತುಗಳು ಕೇಳಿ ಬರುತ್ತಿತ್ತು. ದುರಾದೃಷ್ಟವೇಬಂತೆ ಆತನ ಬ್ಯಾಟ್ ನಿಂದ ರನ್ ಕೂಡಾ ಹರಿಯುತ್ತಿರಲಿಲ್ಲ. ಮೊದಲೇ ಮೇನೇಜ್ಮೆಂಟ್ ರಾಜಕೀಯ ,ಆಯ್ಕೆಯ ಒತ್ತಡ... ಈತನ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುತ್ತಿತ್ತು . ಫಲಶ್ರುತಿ ಎಂಬಂತೆ ಸಾಕಷ್ಟು ಸೀರೀಸ್ ನಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸೋಶಿಯಲ್ ಮೀಡಿಯಾವು ಸಂಜು ಪರವಾಗಿ ಆಯ್ಕೆಯ ಪ್ರಕ್ರಿಯೆಗೆ ಮ್ಯಾನೇಜ್ಮೆಂಟ್ ಗೆ ಚಾಟಿ ಬೀಸುತ್ತಿದ್ದವು.ಅದೇನೋ 2024 ರ ಟಿ20 ವಿಶ್ವಕಪ್ 15ರ ಬಳಗದಲ್ಲಿ ಸ್ಥಾನ ಪಡೆದಿದ್ದರೂ ಲಾಸ್ಟ್ ವರೆಗೆ ಬೆಂಚ್ ಬಿಸಿ ಮಾಡುವ ಕಾಯಕ ಮಾತ್ರ ಈತನದಾಗಿತ್ತು. ಒಂದೇ ಒಂದು ಮ್ಯಾಚ್ ನಲ್ಲಿ ಚಾನ್ಸ್ ಸಿಗಲೇ ಇಲ್ಲ .
ತದನಂತರ ಕೆಲವೊಂದು ಸೀರಿಸ್ ನಲ್ಲಿ ಸ್ಥಾನ ಸಿಕ್ಕರೂ,ಕಳಪೆ ಪ್ರದರ್ಶನ ದಿಂದ ಹೊರಗೆ ಉಳಿಯಬೇಕಾಯಿತು.ಅಂತೂ 2026ರಲ್ಲಿ ಸೆಲೆಕ್ಟ್ ಆಗಿದ್ದೆ ರೋಚಕ ! ಹದಿನೈದು ಸದಸ್ಯರ ಟೀಮ್ ನಲ್ಲಿ ಇಬ್ಬರು ಕೀಪರ್ಸ್ ಗಳನ್ನ ಸೇರಿಸಿ ಕೊಳ್ಳುವ ಅವಕಾಶದಲ್ಲಿ ಮೊದಲಿಗೆ ಇಶಾನ್ ಕಿಶನ್ ಹೆಸರು ಕೇಳಿಬಂದಿತ್ತು ಯಾಕೆಂದರೆ ಇತ್ತೀಚಿಗೆ ನಡೆದ ಸೈಯದ್ ಮುಸ್ತಾಕ್ ಆಲಿ ಹಾಗೂ ರಣಜಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವುದರಿಂದ ಕಣ್ಣು ಮುಚ್ಚಿ ಸೆಲೆಕ್ಟ್ ಮಾಡಲಾಗಿತ್ತು . ಇನ್ನು ಹಿರಿಯ ಅನುಭವಿ ಆಟಗಾರ 31ರ ಹರೆಯದ ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿಗೆ ಉತ್ತಮ ಲಯ ಕಂಡು ಕೊಳ್ಳುತ್ತಿರುವ ಜಿತೇಶ್ ಶರ್ಮ ನಡುವೆ ಪೈಪೋಟಿ ಯಲ್ಲಿ ಕೊನೆಗೆ ಸಂಜು ಸ್ಥಾನ ಗಿಟ್ಟಿಸಿ ಕೊಳ್ಳುವಲ್ಲಿ ಸಫಲತೆಯನ್ನು ಸಾಧಿಸಿದ್ದರು .
ಸಂಜುವಿನ ಅದೃಷ್ಟ ಪುನಹ ಕೈ ಕೊಡುತ್ತಿತ್ತು ಗ್ರೂಪ್ ಹಂತದ ಎರಡೆರಡು ಪಂದ್ಯದಲ್ಲಿ ಒಂದಂಕಿ ಸುತ್ತಿ ಪೆವಿಲಿಯನ್ ಸೇರುತ್ತಿದ್ದು ಅಭಿಮಾನಿಗಳಿಗೆ ಬಾರಿ ನಿರಾಸೆ ಜೊತೆಗೆ ಕೋಚ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಟಿ20 ವಿಶ್ವ ರ್ಯಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಅಭಿಷೇಕ್ ಶರ್ಮ ನಿಂದ ಕಳಪೆ ಪ್ರದರ್ಶನ ಬರುತ್ತಿದ್ದರೂ, ಆತನಿಗೆ ಸಿಗುತ್ತಿದ್ದ ಅವಕಾಶ ಸಂಜುಗೆ ಸಿಕ್ಕಿರಿಲಿಲ್ಲ ಪುನಃ ಪುನಃ ಬೆಂಚ್ ಕಾಯುವ ಪರಿಸ್ಥಿತಿ ಬಂದೊದಗಿತು ಒಂದೆರಡು ಮ್ಯಾಚ್ ನಲ್ಲಿ ಇಶಾನ್ ಕಿಶನ್ ನ್ನು ಸಂಜು ಬದಲಿಗೆ ವಿಕೆಟ್ ಕೀಪರ್ ಆಗಿ ನೇಮಿಸಲಾಯಿತು .
ಆತನ್ನು ಬೌಂಡರಿ ಲೈನ್ ನಲ್ಲಿ ಫೀಲ್ಡ್ ಗೆ ಕಳುಹಿಸುತ್ತಿದ್ದರು. ನತದೃಷ್ಟ ಸಂಜು ವಿನ ಬ್ಯಾಟ್ ನಿಂದ ರನ್ ಬಾರದೇ ಇದ್ದರೂ ವಿಕೆಟ್ ಕೀಪಿಂಗ್ ನಲ್ಲಿಏನೂ ಮೋಸ ಇರಲಿಲ್ಲ ಎತ್ತಿದ ಕೈ. ಇಶಾನ್ ಕಿಶನ್ ಗಿಂತ ಉತ್ತಮವಾಗಿಯೇ ಕೀಪಿಂಗ್ ಮಾಡ ಬಲ್ಲ ಸಾಮರ್ಥ್ಯದ ಸಂಜು ಬೌಂಡರಿ ಲೈನ್ ನಲ್ಲಿ ನಿಲ್ಲಬೇಕಾಯಿತು. ಪ್ರೆಸ್ ಮೀಟ್ ನಲ್ಲಿ ಹೊರಹೊಮ್ಮುತ್ತಿದ್ದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ವ್ಯಂಗ್ಯ ಮಾತುಗಳನ್ನು ಅದು ಹೇಗೋ ಅರಗಿಸಿ ಕೊಂಡರೂ ಗೊತ್ತಿಲ್ಲ.
ಒಂದೇ ಒಂದು ಚಾನ್ಸ್ ಗೆ ಕಾಯುತ್ತಿದ್ದ ಸಂಜುಗೆ ಆದಿನ ಅವಕಾಶ ಸಿಗುತ್ತದೆ.ಇದು ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ಮ್ಯಾಚ್ ಸೂಪರ್ 8 ಗೆ ಸ್ಥಾನ ಪಡೆಯುವುದಕ್ಕೂ ಸಂಜುಗೆ ಕೂಡ ಮುಂದಿನ ಸ್ಥಾನ ಭದ್ರ ಪಡಿಸಲು ಈ ಮ್ಯಾಚ್ important ಆಗಿತ್ತು. ಮುಂದೆ ನಡೆದಿದ್ದೇ ಇತಿಹಾಸ !! ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 50 ಬಾಲ್ ಗೆ ಬರೋಬ್ಬರಿ 97 ರನ್ ಚಚ್ಚಿದ ಸಂಜು ನಾಟ್ ಔಟ್ ! ಇಂಡಿಯಾವನ್ನು ಗೆಲ್ಲಿಸುವುದರ ಜೊತೆಗೆ ನಿರ್ಲಕ್ಷ್ಯೆ ಮಾಡಿದವರಿಗೆ ಬ್ಯಾಟ್ ನಿಂದ ಉತ್ತರ ಕೊಟ್ಟು ಮ್ಯಾನ್ ಆ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಜೊತೆಗೆ ಕೀಪರ್ ಸ್ಥಾನವೂ ಭದ್ರವಾಯಿತು.ಸಂಜುವಿನ ಬ್ಯಾಟ್ ಆರ್ಭಟ ಕಡಿಮೆ ಯಾಗಲಿಲ್ಲ ಸೆಮಿ ಫೈನಲ್ ನಲ್ಲೂ ಇಂಗ್ಲೆಂಡ್ ಬಾಲರ್ ಗಳನ್ನೂ ಇಲ್ಲಿಲ್ಲದಂತೆ ಕಾಡಿದರು ಬೌಂಡರಿಗಳ ಮೇಲೆ ಬೌಂಡರಿ! ಚೆಂಡು ಸೀಮಾ ಗೆರೆ ದಾಟುತ್ತಿತ್ತು.46 ಬಾಲ್ ಗೆ 89 ರನ್ ಗಳಿಸಿ ತಂಡ ಫೈನಲ್ ತಲುಪಲು ಮುಖ್ಯಪಾತ್ರ ಮಾತ್ರವಹಿಸಿದ ಸಂಜುವಿನ ಈ ಹೋರಾಟ ಕಡಿಮೆಯಾಗಲಿಲ್ಲ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ನಲ್ಲಿ 89ರನ್ 46 ಬಾಲಿಗೆ ಜಾಣ್ಮೆ,ತಾಳ್ಮೆಯ ಆಟಕ್ಕೆ ಇಡೀ ಕ್ರಿಕೇಟ್ ಜಗತ್ತು ಬೆಕ್ಕಸ ಬೆರಗಾಯಿತು. ಟೀಮ್ ಕೋಚ್ ಸೇರಿದಂತೆ ಕ್ಯಾಪ್ಟನ್ ಎಲ್ಲರೂ ತಲೆತಗ್ಗಿಸಿದರು, ತಲೆಬಾಗಿ ವಂದಿಸಿದರು. ಎಷ್ಟೆಲ್ಲಾ ಅವಮಾನವನ್ನು ಉಂಡ ಸಂಜು 2 ಬಾರಿ ಮಾನ್ ಒಫ್ ದಿ ಮ್ಯಾಚ್ ಕೊನೆಗೆ ಮ್ಯಾನ್ ಆಫ್ ದಿ ಸೀರೀಸ್ ನ್ನು ಪಡೆದರು ಇದು ನಿಜಕ್ಕೂ ಅದ್ಭುತ!! ಅವಮಾನಿಸಿದವರೇ ಮುಂದೆ ಸನ್ಮಾನ ಸ್ವೀಕರಿಸಿದ ಪರಿ ನಿಜಕ್ಕೂ ಗ್ರೇಟ್! ಪ್ರತಿಭೆ ಇದ್ದರೂ ವೇದಿಕೆ ಸಿಗದೇ ಹೋಗುವುದು ಬೇಸರ ಸರಿಸುವ ವಿಚಾರ ಒಂದೆರಡು ಮ್ಯಾಚ್ ನಲ್ಲಿ ಕಳಪೆ ಯಾದರೂ ಇನ್ನೊಂದೆರೆಡು ಚಾನ್ಸ್ ಕೊಟ್ಟರೇ ಖಂಡಿತ ಫಲ ಸಿಗುತ್ತದೆ ಪ್ರತಿಭೆ ಇದ್ದರೇ ಸಾಲದು ಅದೃಷ್ಟ ಕೂಡ ಬೇಕು ಅಲ್ಲವೇ?
ಸೋಮವಾರ, ನವೆಂಬರ್ 24, 2025
ಇದಕ್ಕೆ ಮಟ್ಟ ಹಾಕುವವರು ಯಾರು ??
ಇದೇ ನವೆಂಬರ್ ತಿಂಗಳಲ್ಲಿ ಎರಡು ಅತೀ ದೊಡ್ಡ ದೇಶ ದ್ರೋಹಿ ಘಟನೆ ನಮ್ಮ ದೇಶದಲ್ಲಿ ನಡೆಯಿತು. ಒಂದು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದರೇ ಇನ್ನೊಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದು ಹೋಯಿತು.
ಆಗಾಗ ಬೆಳಕಿಗೆ ಬಂದು ಸದ್ದು ಮಾಡಿ ಸುದ್ದಿಯಾಗಿ ಸೈಡ್ ಗೆ ಸರಿಯುವ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನರುವ ಖೈದಿಗಳಿಗೆ ರಾಜಾತಿಥ್ಯ! ಈ ಬಾರಿ ಇನ್ನು ಹೊಸತಾಗಿಯೇ ನವನವೀನ ರೀತಿಯಲ್ಲಿ ಪ್ರಸಾರಕ್ಕೆ ಬಂತು.ಕೈದಿಗಳ ಎಣ್ಣೆ ಪಾರ್ಟಿ ಡಾನ್ಸ್ ,ಪಾತಕಿಗಳ ಕೈಯಲ್ಲಿ ಸ್ಮಾರ್ಟ್ ಫೋನ್,ಟಿವಿ ,ಉಗ್ರ ಗ್ರಾಮಿ ಜುಹಾದ್ ಹಮೀದ್ ಶಕೀಲ್ ಮನ್ನಾ ,ವಿಕ್ರತ ಕಾಮಿ ಉಮೇಶ್ ರೆಡ್ಡಿಗಳ ರಾಜ ಭೋಗ ವೈಭವಗಳ ಚಿತ್ರಣ ವೈರಲ್ ಆದವು. ಇದು ಕ್ಯಾಮರಾದ ಕಣ್ಣಿಗೆ ಸಿಕ್ಕ ಕೆಲವು ಸ್ಯಾಂಪಲ್ ಉದಾಹರಣೆಗಳಾದರೇ, ಇನ್ನು ತೆರೆ ಮರೆಯಲ್ಲಿ ಅದೆಷ್ಟೋ ಆ ದೇವರೇ ಬಲ್ಲ !ಇವರುಗಳು ಕೈದಿಗಳೋ ಎಂಬುದೇ ಅರ್ಥವಾಗದ ಪ್ರಶ್ನೆ! ಜೈಲಿಗೆ ಬಂದು ಶಿಕ್ಷೆ ಅನುಭವಿಸ ಬೇಕಾದ ಆರೋಪಿಗಳು ಇಲ್ಲಿ ರಾಜಾಥಿತ್ಯವನ್ನು ಪಡೆಯುತ್ತಿದ್ದಾರೆ.ನಿಜಕ್ಕೂ ಈ ಪರಿಯ ಎಂಜೋಯ್ಮೆಂಟ್ ಅವರ ಮನೆಯಲ್ಲಿ ಅಥವಾ ಇನ್ಯಾವುದೋ ಪಾರ್ಟಿಯಲ್ಲಿ ಸಿಗಲಿಕ್ಕೆ ಇಲ್ಲವೇನೋ ಅಂತ ಮಜಾ,ಮೋಜು ,ಮಸ್ತಿ ಮನೋರಂಜನೆ ಜೈಲಿನಲ್ಲಿ ಸಿಗುತ್ತಿದೆ! ಇದನ್ನೆಲ್ಲಾ ಕಂಡೇ ಪ್ರಸ್ತುತ ಅಪರಾಧ ಜಗತ್ತು ಬೆಳೆಯುತ್ತಿರುವುದು, ಆರೋಪಿಗಳಿಗೆ ಶಿಕ್ಷೆ ನೀಡುವ ಬದಲು ಮಜಾ ಉಡಾಯಿಸುವ ಅಡ್ಡಗಳಾಗುತ್ತಿರುವ ಇಂತಹ ಉಚ್ಚ ಸ್ಥಿತಿಯ ಜೈಲ್ ಗಳ ಸ್ಥಿತಿ ಇಂತಿದ್ದರೇ ಇನ್ನುಳಿದವೋ ?? ಹೀಗಾಗಿಯೇ ಅಪರಾಧಗಳು ಹೆಚ್ಚುತ್ತಿವೆ ಪಾತಕಿಗಳು ಸಲೀಸ್ ಆಗಿ ಎಂಟ್ರಿ ಕೊಡುತ್ತಾರೆ.
ಇದಕ್ಕೆ ಹೊಣೆ ಯಾರು ? ನಮ್ಮ ವ್ಯವಸ್ಥೆ ಅಲ್ಲದೆ ಮತ್ತಿನ್ನೇನು ? ಈ ವ್ಯವಸ್ಥೆಗಳು ಲೀಲಾಜಾಲವಾಗಿ ಜರುಗುತ್ತಿದೆ ಅಂದ್ರೆ ಜೈಲ್ ಅಧಿಕಾರಿಗಳ ಪಾತ್ರವಲ್ಲದೆ ಮತ್ತಿನ್ನೇನು ?ಕೇವಲ ಹಣದ ದಾಹಕ್ಕೆ ಬಲಿಯಾಗೆ ಇಂತ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವ ಅಧಿಕಾರಿಗಳೇ ದೊಡ್ಡ ಕ್ರಿಮಿನಲ್ ಗಳು ಈ ಕ್ರಿಮಿಗಳನ್ನು ಕಿತ್ತು ಹೊಸಕಿ ಹಾಕುವವರು ಯಾರು ? ಗೊತ್ತಿಲ್ಲ !!ಗ್ರಹ ಮಂತ್ರಿಗಳದ್ದು ಅದೇ ಡೈಲಾಗ್ ವಿಚಾರಣೆ ಮಾಡುತ್ತೇವೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ,ಜನಾಕ್ರೋಶ ಹೆಚ್ಚಾದ ಕೂಡಲೇ ತಪ್ಪಿತಸ್ಥರನ್ನು ಒಂದಷ್ಟು ದಿನ ಸಸ್ಪೆಂಡ್ ಮಾಡಿ ಮತ್ತೆ ಬೇರೆ ಕಡೆ ಟ್ರಾನ್ಸ್ಫರ್ ಮಾಡಿ ಕೊಳ್ಳುದು ಬಿಟ್ಟರೇ ಬೇರೇನೂ ಇಲ್ಲ , ಅವರನ್ನು ಡಿಸ್ಮಿಸ್ ಮಾಡುವ ಯೋಗ್ಯತೆ ಅಥವಾ ಪವರ್ ನಮ್ಮಲ್ಲಿ ಇಲ್ಲವೇ ? ಅದಕ್ಕಾಗಿ ಈ ಪರಿಯಲ್ಲಿ ಈ ಘಟನೆಗಳು ಆಗಾಗ ಮರುಕಳಿಸುತ್ತಿರವುದು.
ಜನರು ದಂಗೆ ಏಳಬೇಕಾಗಿದೆ ಅಷ್ಟೇ ಇದಕ್ಕಿರುವ ಉಪಾಯ .
ಇದಕ್ಕೆ ಹೊಂದಿಕೆ ಯಾಗುವ ಇನ್ನೊಂದು ಘಟನೆ ನಡೆಯಿತು. ಅದು 10ನೇ ತಾರೀಕು ,ನವೆಂಬರ್ 2025, ಸರಿಸುಮಾರು ಸಂಜೆ 6:52ರ ಸಮಯ. ಸ್ಥಳ ದೆಹಲಿಯ ರೆಡ್ ಫೋರ್ಟ್ ಸಮೀಪ, Metro Gate No.1 ಬಳಿ ಹೈಂಡೈ i20 ಕಾರಿನಲ್ಲಿ ಸ್ಫೋಟ. ಅದು ಕಾರಿನಲ್ಲಿ ಆಕಸ್ಮಿಕವಾಗಿ ತಾಂತ್ರಿಕ ದೋಷದಿಂದ ಉಂಟಾದ ಸ್ಪೋಟವಲ್ಲ ಅದರ ಒಳಗಡೆ ತುಂಬಿತ್ತು ಬಾಂಬ್ !ಆತ್ಮಹತ್ಯೆ ದಾಳಿ. ಅದರ ಒಳಗಿದ್ದ ಚಾಲಕನಾಗಿ ಉಗ್ರ, ಡಾಕ್ಟರ್ ಪದವಿ ಪಡೆದ ಉಮರ್ ನಬಿ ಎಂಬ ದೇಶ ದ್ರೋಹಿ.ಸ್ಪೋಟದ ತೀವೃತೆ ಎಷ್ಟು ಇತ್ತೆಂದರೆ 8 ಮಂದಿ ಸಾವಿಗೀಡಾಗಿದ್ದರು ೨೦ ಕ್ಕೂ ಅಧಿಕ ಬಂದಿ ಗಂಭೀರ ಸ್ಥಿತಿಗೆ ತಲುಪಿದ್ದರು. ಸ್ಥಳದಲ್ಲಿದ್ದ ಇತರ ವಾಹನಗಳೂ ಸೇರಿದಂತೆ ಅಕ್ಕ ಪಕ್ಕದ ಹಲವಾರು ಸಂಪತ್ತುಗಳು ನಷ್ಟವಾದವು.ನಾಶ ಗೊಂಡವು.
ಇದು ಭಯೋತ್ಪಾದಕ ದಾಳಿ ಎಂಬುದನ್ನು ಒತ್ತಿ ಹೇಳಬೇಕಿಗಿಲ್ಲ.ಇದನ್ನು ಉಗ್ರರಲ್ಲದೇ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.ಇದು ದೇಶದ ಅನ್ನ ತಿಂದ ರಕ್ತ ಪಿಪಾಸುಗಳ ಸಂಚಿನ ಕ್ರತ್ಯ.ದೇಶದ ಹೊರಗಿನ ಉಗ್ರರನ್ನು ಹೇಗೋ ಸದೆಬಡಿಯಬಹುದು ಆದ್ರೆ ಇಲ್ಲಿನ ಅನ್ನ ತಿಂದು ಜಲ ನೆಲದ ಋಣವನ್ನು ಮರೆತ ಪಾತಾಕಿಗಳನ್ನು ಪತ್ತೆಹಚ್ಚುವುದು ಹರ ಸಾಹಸ.ಇದೇನೂ ಹೊಸತಲ್ಲ ಆಗಾಗ ಶತ್ರು ರಾಷ್ಟ್ರಗಳಿಗಿಂತ ನಮ್ಮವರೇ ನಮಗೆ ದ್ರೋಹ ಬಗೆಯವ ಕೆಲಸವನ್ನು ಕಂಡಿರುತ್ತೇವೆ . ದೇಶದಲ್ಲಿನ ಒಂದೊಳ್ಳೆ ಆಡಳಿತ ಚುಕ್ಕಾಣಿ ಬಂದ ಪರಿಣಾಮ ಸುಮಾರು ಸಮಯವೇ ಕಳೆದಿದೆ ಈ ತರಹದ ಅಹಿತಕರ ಘಟನೆ ನಡೆಯದೇ.ಅಂತೂ ಮೊನ್ನೆ ಮೊನ್ನೇ ಬಾಂಬ್ ಸ್ಫೋಟ ಗೊಂಡೇ ಬಿಟ್ಟಿತು.ಇದನ್ನು ಮಟ್ಟ ಹಾಕುವುದು ಹೇಗೆ ಮಿಲಿಯನ್ ಡಾಲರ್ ಪ್ರಶ್ನೆ !
ಮಂಗಳವಾರ, ನವೆಂಬರ್ 4, 2025
ದರ್ಶನ್ ನ ಬೆಂಬಿಡದ ಕಾನೂನು ಕುಣಿಕೆ !
ರೇಣುಕಾ ಸ್ವಾಮಿಯ ಭೀಕರ ಕೊಲೆಗೆ ಸಂಬಂಧ ಪಟ್ಟಂತೆ ಸುಮಾರು ಒಂದೂವರೆ ವರ್ಷ ಕಳೆಯುತ್ತಾ ಬಂತು ಚಾಲೇಂಗಿಂಗ್ ಸ್ಟಾರ್ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ಸೆರೆ ಮನೆ ಸೇರಿ .ಇನ್ನೂ ಬಿಡುಗಡೆ ಭಾಗ್ಯ ಕೂಡಿ ಬಂದಿಲ್ಲ ಅಷ್ಟಕ್ಕೂ ಹಾಗೆ ಬಿಡುಗಡೆ ಹೊಂದಲಿಕ್ಕೆ ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಕ್ರತ್ಯ ಸಣ್ಣದಲ್ಲ.
ಕಾನೂನಿನ ಮೇಲೆ ಗೌರವ ಇಮ್ಮಡಿಯಾಗುತ್ತಿದೆ ! ಉಳ್ಳವರ ಕಪಿ ಮುಷ್ಠಿಯಲ್ಲಿ ಕಾನೂನು ಬಂಧಿಯಾಗಿರುತ್ತದೆ ಎನ್ನುವುದನ್ನು ತಳ್ಳಿ ಹಾಕಿದ್ದು ಈ ದರ್ಶನ್ ಕೇಸ್ !
ಕಾನೂನು ಎಲ್ಲರಿಗೂ ಒಂದೇ ಕಾನೂನು ಕಾಯ್ದೆಯನ್ನು ಕೈ ತೆಗೆದು ಕೊಳ್ಳುವ ,ಅದನ್ನು ತಮಗೆ ಇಷ್ಟ ಪಟ್ಟಂತೆ ಬಳಿಸಿ ಕೊಳ್ಳುವವರ ನೈಜ ಉದಾರಹಣೆಗಳ ಮಧ್ಯೆ ಇದೊಂದು ದಿಫ್ಫ್ರೆಂಟ್ ಆಗಿ ಕಾಣ ಸಿಕ್ಕಿದ್ದು ಸುಳ್ಳಲ್ಲ. ಅಪರೂಪದ ಘಟನೆ !
ಸಿನಿಮಾ ಹೀರೊ ಆಗಿ ಮೆಜೆಸ್ಟಕ್ ಸಿನಿಮಾದ ಮೂಲಕ ತೆರೆಯ ಮೇಲೆ ಪರಿಚಯಗೊಂಡ ದರ್ಶನ್ ತೂಗುದೀಪ್ ಸಾಕಷ್ಟು ಫಿಲಂಗಳು ಹಿಟ್ ಮೇಲೆ ಹಿಟ್ ಕೊಟ್ಟು ಸ್ಯಾಂಡಲ್ವೋಡ್ ಸಿನಿ ಅಂಗಳದ ಬೆಳ್ಳಿತೆರೆಯ ರೀಲ್ ನಲ್ಲಿ ಉತ್ತಮ ನಾಯಕ ನಟನಾಗಿ ಕಾಣಿಸಿಕೊಂಡು, ರಿಯಲ್ ನಲ್ಲಿ ಅಕ್ಷರಸಃ ಖಳ ನಾಯಕನೇ .! ಅದನ್ನು ಒತ್ತಿ ಹೇಳುವ ಅಗತ್ಯವಿಲ್ಲಾ ನಾಡಿನ ಪ್ರಜ್ಞಾವಂತ ಜನೆತೆಗೆ ಗೊತ್ತಿರುವಂತದ್ದೇ. ಸುಮಾರು ಘಟನೆಗಳು ಅಚ್ಚರಿಸಿ ಮೂಡಿಸಿವೆ . ಕೆಲವೊಂದು ಬೆಳಕಿಗೆ ಬಂದರೇ ಹಲವೊಂದು ಅಲ್ಲಿಯೇ ಮುದುಡಿ ಹೋಗಿದೆ. ಸ್ವತಃ ಕಟ್ಟಿಕೊಂಡವಳಿಗೆ ಈತ ಕೊಟ್ಟ ಕಾಟ ಅಂತಿಂತ್ತದ್ದಲ್ಲ ಆ ವಿಚಾರದಲ್ಲಿ ಕಂಬಿ ಎಣಿಸಿಯೂ ಬಂದಿದ್ದ.
ತನ್ನ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಕಾರಣದಿಂದ ದರ್ಶನ್ ಜೊತೆ ಆತನ ಸ್ನೇಹಿತರೊಂದಿಗೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್ ನಲ್ಲಿ ಚಿತ್ರ ಹಿಂಸೆ ನೀಡಿ ಭಯಾನಕ, ಭೀಕರ, ಭೀಬತ್ಸವಾಗಿ ಕೊಲೆಗೈದು ಅದನ್ನು ತನ್ನ ಸ್ನೇಹಿತರಿಗೆ ತಾವೇ ಮಾಡಿದ್ದೂ ಎಂದು ಪೊಲೀಸರ ಮುಂದೆ ಶರಣಾಗುವಂತೆ ಮಾಡಿ ,ಒಳಸಂಚು, ಸಾಕ್ಷ್ಯನಾಶ ಎಂಬ ವಿಚಾರವನ್ನು ಇಟ್ಟುಕೊಂಡು 2024ರ ಜೂನ್ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಎಷ್ಟೋ ಹರ ಸಾಹಸ ಪಟ್ಟರೂ ಬೇಲ್ ಮರೀಚಿಕೆ ಯಾದಾಗ ಒಂದಷ್ಟು ದಿನ ನಾಟಕ ಅದೂ ಇದೂ ಮಾಡಿ ಆ ಜೈಲ್ ನಿಂದ ಇಲ್ಲಿಗೆ ಈ ಜೈಲ್ ನಿಂದ ಅಲ್ಲಿಗೆ ಶಿಫ್ಟ್ ಆಗಿ ಅಂತೂ ಒಂದಷ್ಟು ಸಮಯ, ಅನಾರೋಗ್ಯದ ಕಾರಣ ಒಡ್ಡಿ ಹೊರಗಡೆ ಬಂದಿದ್ದ ದರ್ಶನ್ ,ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇತ್ತ ಜಾಮೀನಿಗೆ ಅದೆಷ್ಟು ಅರ್ಜಿ ಗುಜರಾಯಿಸಿದರೂ ದರ್ಶನ್ ಗೆ ಬೆಲ್ ಸಿಗುತ್ತಿಲ್ಲ ಕಾನೂನು ನಿಜಕ್ಕೂ ಕಠಿಣವಾಗಿದ್ದು ಖಂಡಿತ ಸತ್ಯ. ಇದು ಎಲ್ಲರಿಗೂ ಮಾದರಿಯಬೇಕು.
ಹಲವರ ಅಭಿಪ್ರಾಯದಂತೆ ರೇಣುಕಾ ಸ್ವಾಮಿಯ ಈ ಪ್ರಕರಣವೂ ಸಹಾ ಎಲ್ಲೊ ಹಳ್ಳ ತಪ್ಪಿ ಹೋಗುತ್ತಿತ್ತು ಒಂದೊಳ್ಳೆ ನಾಣ್ಣುಡಿಯಂತೆ ಹತ್ತು ಸರಿ ಕದ್ದ ಕಳ್ಳ ಒಂದು ಸಾರಿ ಸಿಕ್ಕಿ ಹಾಕಿಕೊಳ್ಳೆಲೇ ಬೇಕು ಎನ್ನುವ ಹಾಗೆ ! ಹಾಗಂತ ಆತ ತುಂಬಾನೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶವನ್ನು ನಾನು ಪ್ರಸ್ತಾಪ ಮಾಡುತ್ತಿಲ್ಲ, ಯಾವುದಾರಲ್ಲೂ ಸಿಕ್ಕಿ ಹಾಕಿ ಕೊಳ್ಳುತ್ತಿರಲಿಲ್ಲ ಎಂದೂ ನಾನು ಹೇಳುತ್ತಿಲ್ಲ ಹಲವರ ಬಾಯಿಯಲ್ಲಿ ಉದುರಿದ ಮಾತು ಅಷ್ಟೇ . ಅದಕ್ಕೆ ಪುಷ್ಟಿ ನೀಡುವಂತ ಘಟನೆಗಳು ನಡೆದಿವೆ ಬಿಡಿ ಅದು ಇಲ್ಲಿ ಅಪ್ರಸ್ತುತ .
ಸೊ ಇದೂ ಕೂಡಾ ಹಾಗೆ ಆಗುತ್ತಿತ್ತೇನೋ ಹೇಗೋ ಪೊಲೀಸರು ಪತ್ತೆ ಹಚ್ಚವಲ್ಲಿ ಯಶಸ್ವಿಯಾದರು. ಒಂದೊಳ್ಳೆ ಕಾಪ್ ಆ ತಂಡದಲ್ಲಿ ಇದ್ದುದ್ದರಿಂದ ಇದೀಗ ದರ್ಶನ ಮುದ್ದೆ ಮುರಿಯ ಬೇಕಾಗಿ ಬಂತು .
ರೇಣುಕಾ ಸ್ವಾಮೀ ಮಾಡಿದ್ದು ತಪ್ಪು ಅಲ್ವೇ ? ತಪ್ಪು ಮಹಾ ತಪ್ಪೇ! ಆದರೆ ಅದಕ್ಕೆ ಶಿಕ್ಷೆ ನೀಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ? ಅದನ್ನು ಬಿಟ್ಟು ತಾವೇ ಕಾನೂನು ಕೈಗೆತ್ತಿ ಕೊಂಡರೇ ಪ್ರತಿಫಲ ಇಷ್ಟೇ. ! ಮಾಡಿದ್ದುಣ್ಣೋ ಮಹರಾಯ !! ಹಣ,ಜನ ಬಲ ರಾಜಕೀಯ ಬೆಂಬಲ ,ಇದೆ ಎಂಬ ಕಾರಣಕ್ಕೆ ಇಲ್ಲ ಸಲ್ಲದ ವಿಚಾರಕ್ಕೆ ಕೈ ಹಾಕುವ ಮುಂಚೆ ಆಲೋಚನೆ ಮುಖ್ಯ.ಸೆಲೆಬ್ರೆಟಿಯಾಗಿ ಸಮಾಜದಲ್ಲಿ ಮುನ್ನೋಟದಲ್ಲಿರುವವರು ಈ ತರಹದ ಕ್ರತ್ಯದಲ್ಲಿ ಭಾಗಿಯಾದರೇ ಯುವ ಪೀಳಿಗೆಗಳು ಯಾರನ್ನು ಮಾದರಿಯಾಗಿ ತೆಗದು ಕೊಳ್ಳಬೇಕು? ದರ್ಶನ್ ಉತ್ತಮ ವ್ಯಕ್ತಿ ಸಮಾಜದ ಹಿತಚಿಂತಕ ಸಾಕಷ್ಟು ಸಹಾಯ ಹಸ್ತವನ್ನು ಚಾಚಿದವರು ಎಂಬ ವಿಚಾರವಿದ್ದರೂ ಈ ಒಂದು ತಪ್ಪಿನಿಂದ ಅದ್ಯಾವುದು ಲೆಕ್ಕಕ್ಕೆ ಬರುವುದು ಇಲ್ಲ.ಮೊದಲಾಗಿ ಸಹವಾಸ ದಿಂದ ದೂರ ಇರುವುದೇ ಇದಕ್ಕಿರುವ ದೊಡ್ಡ ಮದ್ದು ಎನ್ನಬಹುದೇನೋ ? ಮಾಡಿದಕ್ಕೆ ಶಿಕ್ಷೆ ಅನುಭವಿಸಲಿ ಆದಷ್ಟು ಬೇಗ ಹೊರಬಂದು ತನ್ನ ತಪ್ಪಿನ ಅರಿವಾಗಿ ಮುಂದೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲಿ ಎಂಬ ಆಶಯದೊಂದಿಗೆ.
ಶನಿವಾರ, ಜೂನ್ 21, 2025
ಆನೆ ಬಂತೊಂದು ಆನೆ ..!!
ಸಿದ್ದಾಪುರ ವಾರದ ಸಂತೆ ಬಂದ್ ! ಶಾಲಾ ಕಾಲೇಜುಗಳಿಗೆ 3 ದಿನ ರಜೆ ! ಯಾರೂ ಮನೆಯಿಂದ ಹೊರಗೆ ಬರಬೇಡಿ ,ವಾಹನ ಸವಾರರೇ ಎಚ್ಚರ ವಹಿಸಿ,ಆನೆ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಭಯಬೇಡ ಎನ್ನುವ ಅನ್ವಾಂಸ್ಮೆಂಟ್..!!
ಎಲ್ಲರಲ್ಲೂ ಆತಂಕ, ಕುತೂಹಲ ಊರಿಗೆ ಊರೇ ಭಯದ ವಾತಾವರಣದಲ್ಲಿತ್ತು. ಅಂತೂ ಮೂರು ದಿನಗಳ ಬಳಿಕ ಎಲ್ಲವೂ ಸಹಜ ಸ್ಥಿತಿ! ಸ್ಥಳೀಯರಲ್ಲಿ ಬೇಸರ, ಸಪ್ಪೆ ಮೊರೆ !
ಇದು ಕಾಡಿನ ಆನೆ ನಾಡಿಗೆ ಬಂದ ಕಥೆ
ಹಾಸನ ಜಿಲ್ಲೆಯ ದಟ್ಟ ಅರಣ್ಯವೊಂದರಲ್ಲಿ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದರು. ಅದಕ್ಕೆ ಜಿಪಿಎಸ್ ನ್ನು ಅಳವಡಿಸಿ, 'ಹಡ್ಕ ಬಡ್ಕ' ಎಂಬ ನಾಮಧೆಯವನ್ನು ಮಾಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.
ಅದೇನೋ ಗೊತ್ತಿಲ್ಲ ಒಂದೆರಡು ದಿನ ಅಷ್ಟೇ ತನ್ನ ಕಾಡು, ಬಂಧು-ಬಳಗದವರ ನೆನಪು ಆಯಿತೋ ಏನೋ ಹಡ್ಕ ಬಡ್ಕ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟ.ತನ್ನ ಕಾಡನ್ನು ಅರಸುತ್ತಾ,ಅರಸುತ್ತಾ ಬಾಳೆಬರೆ ಘಾಟಿ ಇಳಿದ.ಘಾಟಿ ಇಳಿಯುತ್ತಿದ್ದ ಸಂದರ್ಭ ಒಂದಶ್ಟು ವಾಹನ ಸವಾರರು ಅದನ್ನು ನೋಡಿದ್ದರು. ವೀಡಿಯೋ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟದ್ದರು.
ಯಾರಿಗೂ ತೊಂದರೆ ಮಾಡದೇ ತನ್ನ ಪಾಡಿಗೆ ರಾಜ್ಯ ಹೆದ್ದಾರಿಯಲ್ಲೇ ತೆರಳುತ್ತಿದ್ದ ಹಡ್ಕ ಬಡ್ಕ, ಸಿದ್ದಾಪುರ ಸಮೀಪದ ಕೂಗಳತೆಯ ದೂರದಲ್ಲಿರುವ ಹೆನ್ನಾಬೈಲು ಅರಣ್ಯ ಸೇರಿ ಬಿಟ್ಟಿದ್ದ.ಇತ್ತ ಅರಣ್ಯ ಇಲಾಖೆಗೆ ಮಾಹಿತಿಯೂ ಹೋಗಿತ್ತು ಹಾಗೆ ಜಿಪಿಎಸ್ ತಂತ್ರಜ್ಞನ ಅಳವಡಿಸಿದ್ದರಿಂದ ಸ್ಥಳೀಯರ ನೆರವಿನಿಂದ ಆನೆಯನ್ನು ಅರಸುವಲ್ಲಿ ಹೆಚ್ಚಿನ ಸಮಯವೂ ಬೇಕಾಗಿಲ್ಲ.
ಒಂಟಿ ಸಲಗ ಬಹಳ ಅಪಾಯಕಾರಿ ಎನ್ನುವ ಮಾತನ್ನು ಸುಳ್ಳಾಗಿಸಿದ್ದ ಈ ಹಡ್ಕ ಬಡ್ಕ ಆನೆ ಸುಮಾರು 150 ಕಿಮೀ ದೂರ ಒಂದೇ ಸಮನೆ ನಡೆದು ಕೊಂಡು ಬಂದರೂ ಯಾರಿಗೂ,ಯಾವುದಕ್ಕೂ ಅನಾಹುತ ಮಾಡಿರಲಿಲ್ಲ. ಆತನ ಮೈಂಡ್ ನಲ್ಲಿ ಇದ್ದಿದ್ದು ತನ್ನ ಕಾಡು ಹಾಗೂ ಪರಿವಾರ ಮಾತ್ರ. ಎಲ್ಲೂ ಕೂಡಾ ವಿಶ್ರಾಂತಿ ಪಡೆಯದೇ ಹಸಿವು,ನಿದ್ರೆ ಬಾಯಾರಿಕೆಯನ್ನೂ ಬದಿಗೆ ಒತ್ತಿ ಆತ ಹಗಳು ಇರುಳು ಸಂಚಾರ ಮಾಡಿ ಸೇರಿದ್ದು ಹೆನ್ನಾ ಬೈಲು ಕಾಡನ್ನು ಅಲ್ಲಿ ಮಾತ್ರ ಆತ ಎರಡು ದಿನ ತಂಗಿದ್ದ ಬಟ್ ರೆಸ್ಟ್ ತೆಗೆದು ಕೊಳ್ಳಲು ನಮ್ಮವರು ಬಿಟ್ಟಿಲ್ಲ!
ಆನೆ ಬಂತು ಆನೆ ಎಂಬ ಕೂಗು ರಾಜ್ಯಾಧ್ಯಂತ ಹರಡಿತ್ತು. ಭಯದ ವಾತಾವರಣ ಮಡುಗಟ್ಟಿತ್ತು.ಆನೆಯನ್ನು ಮರಳಿ ಬಂಧಿಸುವ ಯೋಜನೆ ಸಿದ್ಧವಾಯಿತು.ಮಂಗಳೂರು ಚಿಕ್ಕಮಗಳೂರು ಶಿವಮೊಗ್ಗದ ಸೇರಿದಂತೆ ವಿವಿಧ ಸ್ಥಳಗಳಿಂದ ಸುಮಾರು 150 ಅರಣ್ಯ ಇಲಾಖೆ ಅಧಿಕಾರಿಗಳು,ಪಶು ವೈದ್ಯರು,15 ಜನ ಮಾವುತರು, ಏಕಲವ್ಯ,ಭೀಮ,ಮಹೇಂದ್ರ, ಸೊಮ್ಮಣ್ಣ ,ಬಾಬಣ್ಣ,ಬಹಾದ್ದೂರ್ ಎಂಬ 6 ಸಾಕು ಆನೆಗಳ ನೇತೃತ್ವದ ಕಾರ್ಯಾಚರಣೆ ಪ್ರಾರಂಭವಾಯಿತು.ಅಂತೂ ಹಡ್ಕ ಬಡ್ಕನಿಗೆ ಪಶು ವೈದ್ಯರು ಅರವಳಿಕೆ ಚುಚ್ಚುಮದ್ದು ಕೊಟ್ಟು ಪ್ರಜ್ಞೆ ತಪ್ಪಿಸಿದರು. ಕ್ರೇನ್ ಮೂಲಕ ದೊಡ್ಡ ಟ್ರಕ್ ಗೆ ಆನೆಯನ್ನು ಲೋಡ್ ಮಾಡಿ ಶಿವಮೊಗ್ಗ ಜಿಲ್ಲೆಯ ಸಕ್ರೀಬೈಲ್ ಆನೆ ಶಿಬಿರಕ್ಕೆ ಕೊಂಡುವಯ್ದ್ ಬಿಟ್ಟರು.ಮೊದ ಮೊದಲು ಆತಂಕ ,ಭಯದಲ್ಲಿದ್ದ ಅಲ್ಲಿನ ಸ್ಥಳೀಯರು ಆನೆಯನ್ನು ಲಾರಿಗೆ ಏರಿಸಿದ್ದು ಆನೆಯನ್ನು ಹಿಡಿದು ಇಂಜೆಕ್ಷನ್ ಕೊಟ್ಟುದ್ದನ್ನು ನೋಡಿ ಕೆಲವರ ದುಃಖ ಹೇಳ ತೀರದಾಗಿತ್ತು.ಗಳ ಗಳನೆ ಅತ್ತವರು ಕೂಡ ಇದ್ದಾರೆ.ಯಾರಿಗೂ ಯಾವುದಕ್ಕೂ ಏನೂ ಉಪದ್ರವ ತೊಂದರೆ ಕೊಡದ ಆನೆಯನ್ನು ಹೊತ್ತುವೊಯ್ದು ಮತ್ತೆ ಪಂಜರದಲ್ಲಿ ಕೂಡಿ ಹಾಕುತ್ತರಲ್ಲ ಆನೆಯ ತಪ್ಪಾದರೂ ಏನು ? ಹೆಚ್ಚಿನವರ ಸವಾಲ್ ಗೆ ಜವಾಬ್ ಇಲ್ಲದಾಗಿ ತ್ತು.ಆನೆಯ ಕಣ್ಣಿರು ಧಾರಾಕಾರವಾಗಿ ಇಳಿಯುತ್ತಿತ್ತು ಆನೆ ಮಾವುತ ಅದನ್ನು ಕರ್ಚಿಪ್ ನಿಂದ ಮುಚ್ಚಿಯೂ ಬಿಟ್ಟಿದ್ದ.!!
-shiವು
ಸೋಮವಾರ, ಮಾರ್ಚ್ 10, 2025
ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ : ಕೀಪಿಂಗ್ ಗೂ ಸೈ.. ಫಿನಿಶಿಂಗ್ ಗೂ..... ನಮ್ಮ ಕೆ ಎಲ್ !
ಟೀಮ್ ಇಂಡಿಯಾ ಕ್ರಿಕೆಟ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಕಳೆದ ವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಸ್ವತಃ ನೇತೃತ್ವ ವಹಿಸಿಕೊಂಡ ವಿಶ್ವಕಪ್ ಒಂಡೇ ಫೈನಲ್ ಪಂದ್ಯದಲ್ಲಿ ಅಹಮದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಕಣ್ಣೇರಿಟ್ಟ ಭಾರತಡಾ ಕಿಲಾಡಿಗಳು ತನ್ನ ತಪ್ಪನ್ನೆಲ್ಲಾ ಮನವರಿಕೆ ಮಾಡಿಕೊಂಡು ನಂತರ ಎಲ್ಲಾ ಮ್ಯಾಚ್ ನಲ್ಲೂ ಗೆಲುವಿನ ನಗೆ ಬೀರುತ್ತಾ ಬಂದಿದ್ದಾರೆ ಐಸಿಸಿ ಆಯೋಜನೆಯಲ್ಲಿ ಕೆಲವು ತಿಂಗಳ ಮೊದಲು ನಡೆದ ವರ್ಲ್ಡ್ ಕಪ್ ಟೀ20ಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ಗೆ ಮುತ್ತಿಟ್ಟಿತ್ತು.ಅದೇ ಸತತ ಗೆಲುವಿನ ನಾಗಲೋಟ ಮುಂದುವರೆದು ವಿಶ್ವದಲ್ಲಿ ನಾವೇ ಬಲಶಾಲಿ ಎಂದು ಉಳಿದ ರಾಷ್ಟ್ರಗಳು ಒಪ್ಪಿಕೊಳ್ಳುವಂತೆ ಮಾಡಿತು. ಅಂತೂ ಇತ್ತೀಚಿಗೆ ಪ್ರಾರಭಗೊಂಡು ಐಸಿಸಿ ಆಯೋಜನೆಯ ಪಾಕಿಸ್ತಾನ ನೇತೃತ್ವದಲ್ಲಿ ಸುಮಾರು 12 ವರ್ಷಗಳ ಬಳಿಕ ನಡೆದ ಮಿನಿ ವಿಶ್ವಕಪ್ ಎಂದು ಕರೆಯಿಸಿ ಕೊಳ್ಳುವ ಚಾಂಪಿಯನ್ ಟ್ರೋಫಿಯನ್ನು ಇಂದು ನ್ಯೂಜಿಲ್ಯಾಂಡ್ ವಿರುದ್ದ ದುಬೈನಲ್ಲಿ ನಡೆದ ಜಿದ್ದಾ ಜಿದ್ದಿ ರೋಮಾಂಚನಕಾರಿ ಪಂದ್ಯಾಟದಲ್ಲಿ ಕಪ್ನ್ನ ಎತ್ತಿಕೊಂಡಿದೆ.
ಐದೂ ಮ್ಯಾಚ್ನಲ್ಲೂ ಸೋಲಿಲ್ಲಿದ ಸರದಾರರಂತೆ ಎದುರಾಳಿ ಬಾಂಗ್ಲಾದೇಶ ದಿಂದಲೇ ಮೊದಲ್ ಗೊಂಡು ಕಪ್ ಎತ್ತಿಕೊಳ್ಳುವವರೆಗೂ ಮುಂದುವರೆಯಿತು.ಬಾಲಿಂಗ್ ,ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಟೀಮ್ ಇಂಡಿಯಾದಲ್ಲಿ ಎಲ್ಲಾ ಆಟಗಾರರ ಪಾತ್ರವೂ ಪ್ರಮುಖ ವಾಗಿ ಕಾಣಿಸಿತು . ಒಂದೊಂದು ಮ್ಯಾಚ್ನಲ್ಲಿ ಒಬ್ಬೊಬ್ಬರು ಹೀರೊಗಳಾಗಿ ಕಂಡು ಬಂದರು. ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಗೆಲುವಿನ ರೂವಾರಿಯಾಗಿ ಸೆಂಚುರಿ ಸಿಡಿಸಿದರೇ ,ಅತಿಮೂಲ್ಯವಾದ ಇಂದಿನ ಪಂದ್ಯದಲ್ಲಿ ಒಂದಕ್ಕಿಗೆ ಸುತ್ತಿ ಹಿಂತುರಿಗಿದರು.ಯಾವುದೇ ಮ್ಯಾಚ್ ನಲ್ಲೂ ಅಷ್ಟೊಂದು ಕಾಣಿಕೆ ನೀಡದ ಕ್ಯಾಪ್ಟನ್ ರೋಹಿತ್ ಶರ್ಮಾ ಇಂದಿನ ಮ್ಯಾಚ್ ನಲ್ಲಿ ಹಿಟ್ ಮ್ಯಾನ್ ಆಗಿ ಅಕ್ಷರಸ ಕಂಡು ಬಂದರು,ಗೆಲುವಿಗೆ ಪ್ರಮುಖ ಕಾರಣರಾದರು.ಜೊತೆಗೆ ಮ್ಯಾನ್ ಆಪ್ ದಿ ಮಾಚ್ ಪ್ರಶಸ್ತಿಗೆ ಕೂಡ ಭಾಜನರಾದರು.ಇನ್ನು ಬಿಸಿಸಿಐ ಸೈಡ್ ಲೈನ್ ಮಾಡಿದ್ದ ಶ್ರೇಯಸ್ ಅಯ್ಯರ್ಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿ ಕೊಂಡರು ಪಂದ್ಯದ್ದುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಈತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಸ್ಕೋರ್ ಲಿಸ್ಟ್ನಲ್ಲಿ ಟೀಮ್ ಇಂಡಿಯದ ಪರವಾಗಿ ಪ್ರಥಮ ಹಾಗೂ ಓವರ್ ಆಲ್ ಆಗಿ ಎರಡನೇ ಸ್ಥಾನನ್ನು ತಮ್ಮದಾಗಿಸಿಕೊಂಡರು.ಪ್ರಥಮ ಸ್ಥಾನ ನ್ಯೂಜಿಲ್ಯಾಂಡ್ ನ ರಚಿನ್ ರವೀಂದ್ರ 263 ರನ್ ಸಂಪಾದಿಸಿದ್ದರು ಹಾಗೂ 3 ವಿಕೆಟ್ ಪಡೆದು ಸರಾಸರಿ 4.6ನಲ್ಲಿ ಮ್ಯಾನ್ ಒಫ್ ದಿ ಸೀರಿಸ್ ಪಡೆದುಕೊಂಡರು.ನಮ್ಮ ಕನ್ನಡಿಗ ವರುಣ್ ಚಕ್ರವರ್ತಿ ವಿಕೆಟ್ ಪಡೆದ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ಕಂಡು ಬಂದರು.,ಮೊದಲ ಸ್ಥಾನ ನ್ಯೂಜಿಲ್ಯಾಂಡ್ ನ ಹೆನ್ರಿಯ ಪಾಲ್ ಆಗಿದ್ದರೇ ಎರಡನೇದು ನಮ್ಮ ಸ್ಪಿನ್ನಿಂಗ್ ಮಾಂತ್ರಿಕ ಚಕ್ರವರ್ತಿ. ಒಂದೇ ಮ್ಯಾಚ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 10 ಓವರ್ ಗೆ 42 ರನ್ ನೀಡಿ ಅಮೂಲ್ಯ ಐದು ವಿಕೆಟ್ ಕಬಳಿಸಿದ್ದರು ಇನ್ನು ಅದೇ ಮ್ಯಾಚ್ನಲ್ಲಿ ನ್ಯೂಜಿಲ್ಯಾಂಡ್ ನ ಫಾಸ್ಟ್ ಬೌಲರ್ ಹೆನ್ರಿ ಕೂಡ ಸೇಮ್ ಟು ಸೇಮ್ ದಾಖಲೆ ನಿರ್ಮಾಣ ಮಾಡಿದ್ದರು .
ಇನ್ನು ಎಲ್ಲಕಿಂತ ಹೆಚ್ಚಾಗಿ ನನ್ನ ಒಡಲಧ್ವನಿಗೆ ಕಾಡಿದ್ದು, ಬೇಡಿದ್ದು ನಮ್ಮ ಕೆ ಎಲ್ ರಾಹುಲ್!ಈತ ಮಾತ್ರ ಅದ್ಬುತ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ ಪೊಲಿಟಿಕ್ಸ್ ಹಾಗೂ ಮತ್ತಿತ್ಯಾದಿ ಕಾರಣಗಳಿಗೆ ತನ್ನನ್ನು ತ್ಯಾಗ ಮಾಡುವ ಕೆಎಲ್ಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳದೇ ಇರಲಾರರು ಇದರ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ.ಕ್ರಿಕೆಟ್ ನೋಡುಗರು ಕ್ರಿಕೆಟ್ ಪ್ರೇಮಿಗಳು ಖಂಡಿತವಾಗಿಯೂ ಅರಿತುಕೊಂಡಿರುತ್ತಾರೆ. ಟೀಮ್ ಇಂಡಿಯಾದ ಮೆನೇಜ್ಮೆಂಟ್ ಯಾವ ತರಹ ಅವರನ್ನು ಬಳಸಿ ಕೊಳ್ಳುತ್ತಿದ್ದಾರೆ ,ಬಲಿ ಕೊಡುತ್ತಿದ್ದಾರೆ ಎಂದು.! ಆದರೂ ಕಿಂಚಿತ್ ಅಸಮಾಧಾನ ತೋರದೇ ತನ್ನ ಪಾಡಿಗೆ ತಾನು ನ್ಯಾಯ ಒದಗಿಸುತ್ತಾ ಬರುತ್ತಿದ್ದಾರೆ.ನಿಜಕ್ಕೂ ಕ್ರಿಕೆಟ್ ಇತಿಹಾಸದಲ್ಲಿ ಈತನ ಸರಿ ಸಾಟಿ ಬೇರೆ ಯಾರು ಇರಲಿಕ್ಕಿಲ್ಲವೇನೋ ?ಓಪನಿಂಗ್ಗೂ ಸೈ . ಫಿನಿಶಿಂಗ್ಗೂ ಜೈ!! ಓಪನರ್ ಆಗಿ ಬ್ಯಾಟ್ ಬೀಸಬಲ್ಲರು ಐದನೇ,ಎಂಟನೇ ಕ್ರಮಾಂಕದಲ್ಲೂ ಕೂಡ ಬ್ಯಾಟ್ ಮಾಡಬಲ್ಲರು.ಎಲ್ಲಕಿಂತ ಹೆಚ್ಚಾಗಿ ಉತ್ತಮ ಕೀಪರ್ ! ಮೆನೇಜೆಮೆಂಟ್ ಅಪ್ಪಣೆಗನುಗುಣವಾಗಿ ಆಗಾಗ ಕೀಪರ್ , ಮ್ಯಾಚ್ ಫಿನಿಶರ್ ಆಗಿ ಕೂಡ ಕರ್ತವ್ಯ ನಿಭಾಯಿಸುವ ಕೆಲ್ ಉತ್ತಮ ಕ್ರಿಕೆಟಿಗ.ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಿನಿಶರ್ ಆಗಿ ತಮ್ಮ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕೆಎಲ್ಲ್ ನಮ್ಮ ಹೆಮ್ಮೆ. ದಯಮಾಡಿ ಮೆನೇಜ್ಮೆಂಟ್ ಗಮನಹರಿಸಬೇಕು ಆತನ ಜೊತೆ ಬಿಟ್ಟ ಸ್ಥಳ ಭರ್ತಿ ಮಾಡಲು ಅಥವಾ ಕೆರೆಯರ್ ಹಾಳುಗೆಡುವ ರಾಜಕೀಯದಾಟ ಆಡದೇ ಆತನ ಸಾಮರ್ಥ್ಯವನ್ನು ಮನಗಾಣಿ.
-shiವು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)









