ಮಂಗಳವಾರ, ಏಪ್ರಿಲ್ 2, 2019
ಲೋಕಾ ಸಮರ :ಮಂಡ್ಯಕ್ಷೇತ್ರವೂ ,ಕುಮಾರ ಸ್ವಾಮೀ ಕಿತಾಪತಿಯೂ !
ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ ,ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಭ್ಯರ್ಥಿಗಳ ಭವಿಷ್ಯಕ್ಕೆ ಸಾಕ್ಷಿ ಬರೆಯಲು ಹೊರಟಿರುವ ಲೋಕ ಸಭಾ ಚುನಾವಣೆಯ ಮೈತ್ರಿ ಸರ್ಕಾರದ ಸೀಟು ಹಂಚಿಕೆ ವಿಚಾರದಲ್ಲಿ ಬಹಳಷ್ಟು ರಂಗಿನಾಟ ನಡೆಯುತ್ತಿದೆ.ಕುಟುಂಬ ರಾಜಕೀಯಕ್ಕೆ ಹೆಸರಾಗಿರುವ ದೇವೇಗೌಡರ ತಾಳ್ಮೆ ಕಿಂಚಿತ್ ಕಡಿಮೆ ಆದಂತೆ ಇಲ್ಲ ಎಂದೇ ಹೇಳಬಹುದು ಈ ಬಾರಿ ಚುನಾವಣೆಗೆ ತಮ್ಮ ಕುಟುಂಬದ ಇನ್ನೆರೆಡು ಹೊಸ ಮುಖವನ್ನು ಕಣಕ್ಕಿಳಿಸಿದೆ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಹಾಗೂ ರೇವಣ್ಣ ಪುತ್ರ ಪ್ರಜ್ವಲ್ ! ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಘಟಾಘಟಾನಿ ಮುಖಂಡರು ಕಾರ್ಯಕರ್ತರು ,ಗೆಲ್ಲುವ ಕುದುರೆಗಳಿದ್ದರೂ ಅವ್ರೇರಿಗೂ ಬಿ ಫಾರ್ಮ್ ಇಲ್ಲ . ಅವರುಗಳೆಲ್ಲರೂ ಕೇವಲ ಪಾರ್ಟಿ ಪಕ್ಷಕ್ಕಾಗಿ ಹಗಲಿರುಳು ಬೆವರು ಸುರಿಸಿ ದುಡಿಯುವುದಕ್ಕೆ ಮಾತ್ರ ಸೀಮಿತ .
ಇದು ಜೆಡಿಎಸ್ ನಲ್ಲಿ ಹೊಸತು ಅಲ್ಲ ಬಿಡಿ ಆದರೆ ಹೊಸದಾಗಿ ಕಾಣುವುದು ಸದ್ಯದ ಪರಿಸ್ಥಿತಿ ಮಂಡ್ಯ ಕ್ಷೇತ್ರ. ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಾದ್ಯಂತ ಪ್ರತಿಷ್ಟೆಯ ಕಣವಾಗಿ ಮೂಡಿ ಬಂದಿದೆ. ದಿವಂಗತ ನಟ ಅಂಬರೀಷ್ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಗೆದ್ದು ಎಂಪಿ ಆಗಿದ್ದರು. ಜನಪ್ರತಿನಿಧಿಯಾಗಿ ತಮ್ಮ ಕೈಲಾದ ಜನೋಪಯೋಗಿ ಕೆಲಸವನ್ನು ನಿರ್ವಹಿಸಿದರು ಕಾವೇರಿ ನೀರಿನ ವಿಚಾರದ ಬಗ್ಗೆ ತಮ್ಮ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಗಮನ ವಹಿಸಿಲ್ಲ ಎಂದು ತಮ್ಮ ರಾಜೀನಾಮೆ ಸಲ್ಲಿಸಿದವರು .ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಅಂಬರೀಶ್ ಅವರ ಪರವಾಗಿ ಅವರ ಸ್ಥಾನ ತುಂಬಲು ಪತ್ನಿ ಸುಮಲತಾ ಅಂಬರೀಶ್ ಅವರಿಗೆ ಜನರ ಒತ್ತಾಯದ ಮೇರೆಗೆ ಮಂಡ್ಯ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ದಿಸಿದ್ದಾರೆ .ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ರಾಜ್ಯದಲ್ಲಿ ಪ್ರತಿಫಲಿತವಾಗಿದೆ .ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಸ್ನಿಂದ ಸುಮಲತಾಗೆ ಟಿಕೆಟ್ ಕೊಡವುದರ ಬಗ್ಗೆ ಸುದ್ದಿ ಕೇಳಿಬಂದಿತ್ತದರೂ ತಮ್ಮ ಕುಟುಂಬ ರಾಜಕೀಯ ಯಕ್ಕೆ ಹೆಸರು ವಾಸಿ ಯಾದ ದೇವೇಗೌಡರು ಬಿಡಬೇಕಲ್ಲ ಅದು ಸುದ್ದಿಗೆ ಮಾತ್ರ ಸೀಮಿತವಾಗಿತ್ತು ಕೊನೆಗೂ ಕುಮಾರ ಸ್ವಾಮೀ ಅವರು ತನ್ನ ಮಗನನ್ನೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿಬಿಟ್ಟರು . ಎಲ್ಲೂ ಸಣ್ಣ ಅನುಮಾನ ಖಂಡಿತ ಕುಮಾರ ಸ್ವಾಮಿಗೆ ಇತ್ತು ಸುಮಲತಾ ವಿರುದ್ಧ ಮಗ ಜಯ ಸಾಧಿಸುವುದು ಕಷ್ಟವೇ ಸರಿ ಅಂತಾ ,ಸುಮಲತಾ ವರನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಿಲ್ಲದ ಕಸರತ್ತುನ್ನು ಮಾಡುತ್ತಾ ಬಂದಿದ್ದಾರೆ .ಆದರೂ ಧೈರ್ಯ ಗುಂದದ ಸುಮಲತಾ ಅಖಾಡಕ್ಕೆ ಮುನ್ನುಗಿದ್ದಾರೆ . ತನ್ನ ಮಗನನ್ನು ಮಂಡ್ಯ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಕುಮಾರಸ್ವಾಮಿ. ತಮ್ಮ ಸ್ವಂತ ಕ್ಷೇತ್ರದಂತೆ ಇರುವ ಎಲ್ಲಿ ಒಂದಷ್ಟು ತನ್ನ ಪ್ರಾಬಲ್ಯತೆಯನ್ನು ಹೊಂದಿದ್ದವುದು ಸುಳ್ಳಲ್ಲ . ರೈತರ ಸಾಲ ಮನ್ನಾ ಎಂಬ ನಾಟಕಗಳನ್ನು ಜಾರಿಗೆ ತಂದು ,ಮೊಸಳೆ ಕಣ್ಣೀರು ಹಾಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಕ್ಕೆ ಏಳು ಜೆಡಿಎಸ್ ಪಾಳಯಕ್ಕೆ ಒಲಿದು ಬಂದಿತ್ತು., ಅದೇ ಹುಮ್ಮಸ್ಸು ಹಾಗೂ ತನ್ನದೇ ಆಡಳಿತ ಪಕ್ಷ ಎಂಬ ಬಿಗುಮಾನ ಅವರಿಗೆ ಪ್ಲಸ್ ಪಾಯಿಂಟ್ . ಆದರೆ ಸುಮಲತಾ ಅವರಿಗೆ ಮಂಡ್ಯದ ಗಂಡು ಅಂಬರೀಶ್ ವರ್ಚಸ್ಸು . ಸಿಂಪತಿ ಹಾಗೂ ಕುಮಾರ ಸ್ವಾಮೀ ಕುಟುಂಬ ರಾಜಕಾರಣ ದ್ವೇಷ ಇದೆಲ್ಲಾ ಸುಮಲತಾ ಅವರಿಗೆ ಹೆಲ್ಪ್ ಆಗಬಹುದು.ಸುಮಲತಾರನ್ನು ಸೋಲಿಸಬೇಕು ಹಾಗೂ ಕಣಕ್ಕೆ ಇಳಿಯದಂತೆ ಗಮನಹರಿಸಬೇಕೆಂದು ಕುಮಾರ ಸ್ವಾಮೀ ಮತ್ತು ರೇವಣ್ಣ ಸಾಕಷ್ಟು ಸರ್ಕಸ್ ಮಾಡಿದರೂ ಏಳ್ಳ ಷ್ಟೂ ಪ್ರಯೋಜನ ಕಂಡಿಲ್ಲ ಇಲ್ಲ ಸಲ್ಲದ ಹೇಳಿಕೆ ,ನಾಮಪತ್ರ ಸಲ್ಲಿಸುವ ವೇಳೆ ಪವರ್ ,ಕೇಬಲ್ ಕಟ್ ಹೀಗೆ ನಾನಾ ಸಮಸ್ಯೆನ್ನು ತಂದು ಒಡ್ಡಿದರೂ ,ಜನರ ಆಶೋತ್ತರಕ್ಕೆ ಹಿಂದೆ ಸರಿಯದೇ ಮುಂದಡಿ ಇಟ್ಟಿದ್ದಾರೆ .ಉತ್ತಮ ಪ್ರಶಂಸೆಯ ಮಾತು ಮತ್ತು ಆಶೀರ್ವಾದ ಮಂಡ್ಯ ಜನತೆಯಿಂದ ಕೇಳಿಬರುತ್ತಿದೆ ಬೇಕು ಬೇಡದ ಹೇಳಿಕೆಗಳನ್ನು ಕೊಡುತ್ತಾ ಬಂದಿರುವ ಕುಮಾರಸ್ವಾಮಿ ಬ್ರದರ್ಸ್ ಇದುವರಿಗೂ ಏನೂ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಇನ್ನೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಮತದಾರರಲ್ಲಿ ಒಂದಷ್ಟು ಗೊಂದಲ ಮೂಡಿಸಲು ಕೃತಕ ಮೂರು ಮಂದಿ ಸುಮಲತಾ ಕ್ಯಾಂಡಿಡೇಟ್ ಅನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ .ಏನೆನೆಲ್ಲಾ ಕಸರತ್ತು ನಡೆಸುತ್ತಿರುವಇವರುಗಳು ಮುಂದೆ ಎಷ್ಟು ತಲೆ ಓಡಿಸಿದರೂ ಪ್ರಯೋಜನಕಾರಿ ಆಗದು ಮತದಾರರು ಪ್ರಜ್ಞಾವಂತರು ಕೆಲವೇ ದಿನಗಳಲ್ಲಿ ಫಲಿತಾಂಶ ಉತ್ತರ ನೀಡಬಲ್ಲದು !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
