ಶುಕ್ರವಾರ, ಆಗಸ್ಟ್ 26, 2011

ನನ್ನ ಸ್ನೇಹಿತನಿಗೆ ಮನಸ್ಸು ಏನೇನೂ ಹೇಳಿತು ನೋಡೋಣ ಬನ್ನಿ ..

net
ಮನಸ್ಸು ಕೇಳಿತು, ನೀನು ಯಾರು ಎಂದು ?
ನಾನು ಹೇಳಿದೆ, ಅದು ನಾನೆ ಎಂದು..
ಮನಸ್ಸು ಕೇಳಿತು, ನಾನು ಯಾರು ಎಂದು ?
ನಾನು ಹೇಳಿದೆ, ಅದು ನೀನೆ ಎಂದು..
ಮನಸ್ಸು ಕೇಳಿತು, ನಿನ್ನ ಸ್ನೇಹಿತರು ಯಾರು ಎಂದು ?

ನಾನು ಹೇಳಿದೆ, ಒಳ್ಳೆಯ ಮನಸ್ಸು ಇರುವವರು ಎಂದು..
ಮನಸ್ಸು ಕೇಳಿತು, ನನ್ನ ಸ್ನೇಹ ಮಾಡುತ್ತಿಯ ಎಂದು....
ನಾನು ಹೇಳಿದೆ, ಒಳ್ಳೆಯ ಮನಸ್ಸಿದ್ದರೆ ಸರಿ ಎಂದು....
ಮನಸ್ಸು ಹೇಳಿತು, ಮನಸ್ಸುಗಳ ಮಾತೇ ಮಧುರ....
ನಾನು ಕೇಳಿದೆ, ಮಧುರವಾದ ಮಾತುಗಳನ್ನು....
ಮಾತನಾಡುವವರು ಯಾರಿದ್ದಾರೆ ಇಲ್ಲಿ ಎಂದು....
ಮನಸ್ಸು ಹೇಳಿತು, ಒಳ್ಳೆಯ ಮನಸ್ಸಿರುವವರು....
ಹುಡುಕಿದರೆ ಖಂಡಿತವಾಗಿಯೂ ಸಿಗುತ್ತಾರೆ ಎಂದು..
ನಾನು ಈಗ ಒಳ್ಳೆಯ ಮನಸ್ಸಿರುವವರನ್ನು....
ಹುಡುಕುತಿದ್ದೇನೆ. ನಿಮಗೆ ನನ್ನೊಡನೆ ಮತ್ತು....
ನನ್ನ ಮನಸ್ಸಿನೊಡನೆ ಮಾತನಾಡುವ ಮನಸ್ಸು..
ಇದ್ದರೆ ನನ್ನ ಸ್ನೇಹ ಮಾಡಿ. ಮನಸ್ಸಿನ ಮಧುರ..
ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನೊಡನೆ..
ಮತ್ತು ನನ್ನ ಮನಸ್ಸಿನೊಡನೆ ಮಾತನಾಡಿ. ನನ್ನ ..
ಮಧುರ ಮನಸ್ಸಿನ ಸ್ನೇಹ ಮಾಡಿ. ಮನಸ್ಸನ್ನು ಗೆದ್ದು..
ಮನಸ್ಸಿನಲ್ಲಿ ಮನೆ ಮಾಡಿ ಎಂದು ನಿಮ್ಮ ಮನಸ್ಸನ್ನು..
ಕೇಳುವ ಒಂದು ಒಳ್ಳೆಯ ಮನಸ್ಸಿನ  ನಾನು..
ನನ್ನ ಮನಸ್ಸಿನ್ನ ಸ್ನೇಹ ಮಾಡುವ ಮನಸ್ಸು ಯಾರಿಗಿದೆ ?
ಒಳ್ಳೆಯ ಮನಸ್ಸಿದ್ದರೆ ಸ್ನೇಹ ಮಾಡಿ. ಇಲ್ಲವಾದರೆ ಮರೆತುಬಿಡಿ
.
ಮನಸ್ಸಿನೊಡನೆ ಸ್ನೇಹ ಮಾಡಿ .
---------------------------------------------

                                                                       -  ಸಂಗ್ರಹ 

ಈ ಕವನ ನಂಗಿಷ್ಟ ಆಯಿತು ......

 ಕಂಡ ಮನದ ಮಾತಿಗೆ ! ಮೌನದಲೇ ಒಪ್ಪಿಗೆ !
ಅರಿತುಕೊಂಡ ಮನ ! ಸೋತಿದೆ ನಿನ್ನ ಸ್ನೇಹದ ಪ್ರೀತಿಗೆ !
ಇಷ್ಟಪಟ್ಟು ಕಂಡ ಕನಸದು ! ಸ್ನೇಹವೆಂಬ ದೀವಿಗೆ !
ಬೆಳಗಲಿ ಇಬ್ಬರ ಮನವ ! ನಿರ್ಮಲ ಸ್ನೇಹದ ರೀತಿಗೆ !
ಬದುಕು ಒಂದೇ ! ಭರವಸೆ ಬೇಕು !
ಆದರೆ ಹೃದಯ ವೆರಡು ಬೆಳಗಬೇಕು !
ಸ್ನೇಹದ ಹೊಸ ಕಾವ್ಯವ ಬರೆಯಬೇಕು !
ಹೊಸ ರೀತಿಯಲಿ ಸ್ನೇಹದ ಲೋಕ ಕಟ್ಟಬೇಕು !
ನಾನು ಹೆಚ್ಚು , ನೀನು ಹೆಚ್ಚು ಎಂಬುದೆಲ್ಲ ಮುಖ್ಯವಲ್ಲ !
ನಿರ್ಮಲ ಮನದ ಸ್ನೇಹ ಇದ್ದರೆ ಚಿಂತೆಯಿಲ್ಲ !
ನೀನು ನಾನು ಒಂದೇ ಇಲ್ಲಿ ಸ್ನೇಹದ ಲೋಕದಿ !
                                                                       
ತೊಳೆದು ಹಾಕುವ ದುಃಖ ಮನಸಿನ ಬೇಗುದಿ !
                           ಕಟ್ಟಿಕೊಂಡರೆ ಕನಸಾಗುತ್ತದೆ ಸ್ನೇಹ ! ಇಬ್ಬರ ನಡುವಿನಲ್ಲಿ !
                                                              ಹಚ್ಚಿಕೊಂಡರೆ ಬದುಕಾಗುತ್ತದೆ ! ಇಬ್ಬರ ಹೃದಯದಲ್ಲಿ !
                                                                  ಬೆಳಗುತಿರಲಿ ! ಅರಳುತಿರಲಿ ಸ್ನೇಹದ ಸುಮಗಳು !
                                                                 ಬಾಡದಿರಲಿ !ಕಾಡದಿರಲಿ ! ಸ್ನೇಹದ ಭಾವಗಳು !
                                                    ಒಪ್ಪಿಕೊಂಡು , ಅಪ್ಪಿಕೊಂಡರೆ ಎಂತಹ ಸುಂದರ ಬಾಳು !
                                                         ನಗುತಿರಲಿ ಸ್ನೇಹದಲಿ ! ಇಬ್ಬರ ಹೃದಯಗಳು !
                                                             ಬದುಕು ಕರೆದ ಹಾಗೆ ಹೋಗೋಣ ಇಬ್ಬರು !
                                                  ಸಂದಿಸಬೇಕಲ್ಲವೇ ! ಎಂದಾದರೂ ಒಂದು ದಿನ ಒಬ್ಬರನ್ನೊಬ್ಬರು

                                                                                                  - ಸಂಗ್ರಹಿಸಿದ್ದು  

ಮರೆತನೆಂದರೂ ಮರೆಯಲಿ ನಾ ಹೆಂಗೆ ?

                           ದೀಪಾವಳಿ ಯ ಆ ದಿನ .....
ನನ್ನ ಜೀವನದಲ್ಲಿ ಮರೆತನೆಂದರೂ ,ಮರೆಯಲಾಗದ, ಅದೂ ದೀಪಾವಳಿ ಹಬ್ಬ 0ದರಂತೂ, ಮನಸನ್ನು ಆಕ್ರಮಿಸಿ ಕೊಳ್ಳುವ ಘಟನೆ ಇಂದಿಗೂ ಹಚ್ಹ -ಹಸಿರು . ಘಟನೆ ನಡೆದ ತುಂಬಾ ವರ್ಷಗಳು ಕಳೆದು  ಹೋಗಿದೆ. ನಾನಾಗ ಐದನೇ ತರಗತಿಯಲ್ಲಿ ಕಲಿಯುತಿದ್ದೆ .ಶಾಲೆಗೆ ರಜೆ ಸಿಕ್ಕಿದ್ರೆ ಸಾಕು ,ನಮ್ಮದು ಕಳ್ಳ -ಪೋಲಿಸ್ ಆಟ ! ಆಟ ಎಸ್ಟೊಂದು ಜನಪ್ರಿಯ ವಾಗಿತಂದ್ರೆ ಶಾಲೆಯ ಆಟದ ಪಿರಿಡಿಗೂ,ಅದೇ ಆಟ!ರಜೆಯ ದಿನವು ಅದೇ !!ಅಮನ್ ,ಮಂಜೂ ,ರಾಜೇಶ್ ,ರಾಘು,ರವಿ ,ಹೀಗೆ ನಮ್ಮ ಏರಿಯದ್ - ಸ್ನೇಹಿತರ ಬಳಗ ಒಂದು ಖೇಲ್ ನಲ್ಲಿ ಪಾಲ್ಗೊಂಡರೆ ಇನ್ನಷ್ಟು ಜನ ಸೇರಿಕೊಲ್ಳುತಿದ್ದರು. ಇಂಥ ಹೊತ್ತಿನಲ್ಲಿ ನಮೆಗೆ ದೀಪಾವಳಿ ಹಬ್ಬಕ್ಕೆ ಮೂರೂ ದಿನ ರಜೆ ಕೊಟ್ಟಿದ್ದರು .
net
ರಜೆ ಅಂದ್ರೆ ಕೇಳಬೇಕೆ ? ಅನ್ನ-ನೀರು ಇಲ್ಲದೆ ಬರಿ ಆಟದಲ್ಲಿ ಬ್ಯುಸಿ ..ಆ ದಿನ ನನ್ನದೇ ಆದ ಹೊಸತೊಂದು  ಕಲ್ಪನೆಯಲ್ಲಿ ಹೊಸ ಐದಿಯಾದಲ್ಲಿ ಆಟ ಆಡಲು ಮುಂದಾದೆವು .ಕಳ್ಳರ ಕೈಲಲ್ಲಿ ಬಾಂಬ್, ಪೋಲೀಸರ ಕೈಲಲ್ಲಿ ಪಿಸ್ತೋಲ್ .ಬಾಂಬ್ ಅಂದರೆ ಪಟಾಕಿಯ ಗರ್ನಲ್ .ಪಿಸ್ತೂಲ್ ಅನದ್ರೆ ಕೇಪು ,(ರೀಲ್ ಪಟಾಕಿ ಬಿಡುವ ಆಟಿಕೆಯ ಪಿಸ್ತೂಲ್ ).
ಆ ಒಂದು ದುರಾದ್ರಷ್ಟದ ಹೊತ್ತಿನಲ್ಲಿ ನಾನೆ ಕಳ್ಳನಾಗಿದ್ದೆ, ಕಳ್ಳರ ತಂಡದಲ್ಲಿದ್ದ 'ಮಂಜು'ವನ್ನು ,ಪೊಲೀಸರು ಬೆನ್ನಟ್ಟುತಿದ್ದಾಗ, ನಾನು ಮರದಡಿಯಲ್ಲಿ ಅವಿತಿದ್ದೆ ."ಅವನ್ನನ್ನು ಬಚಾವ್ ಮಾಡೋ "ಎಂಬ 'ಅಮನ್'  ನ ಕರೆಗೆ ಓಗೊಟ್ಟು ,ನಾನು ಕೈಲಿರುವ ಗರ್ನಲ್ ಅನ್ನು ಅಗರಬತ್ತಿಯ ಮೂಲಕ ಬೆಂಕಿ ಹಚ್ಚಿ ಬೆನ್ನತ್ತುತ್ತಿದ್ದ,ಪೊಲೀಸರ ಕಡೆಗೆ ಎಸೆದು ಬಿಟ್ಟೆ .ನಾನು ಅವರು ಬರುವ ದಾರಿಗೆ ಅದನ್ನು ಯೆಸಯಬೇಕಿತ್ತು .ನಮ್ಮ ಆಟ ದ ಉದ್ದೇಶ ಕೇವಲ ಹೆದರಿಸುದಕ್ಕಾಗಿ ಮಾತ್ರ ಪಟಾಕಿ ಬಳಕೆ ..ಆದ್ರೆ ದುರದ್ರಷ್ಟವಷತ್, ಅದು ಹೋಗಿ ಬಿದ್ದಿದ್ದು ,ಪೋಲಿಸ್ ಪಾತ್ರದಲ್ಲಿದ್ದ ,'ರವಿ '
ಮೇಲೆ. ಅವನು ಆ ದಿನ ಹಬ್ಬಕ್ಕಾಗಿ ಹೊಸ ಬಟ್ಟೆಯನ್ನು ಧರಿಸ್ಸಿದ್ದ.ಅದು ಸುತ್ತು ಹೊದ್ದದ್ದಲ್ಲದೆ ,ಬೆನ್ನಿನ ಮೇಲೆ ಸುಟ್ಟಗಾಯ ಗಳಾಗಿತ್ತು .ರವಿಯ ಚೀರಾಟ  ಮುಗಿಲು ಮುಟ್ಟಿತ್ತು..ಕ್ಷಣ ಮಾತ್ರದಲ್ಲಿ ಎಲ್ಲ ಪೋಲಿಸ್ -ಕಳ್ಳ ಪಾತ್ರದಾರಿಗಳು ಒಂದಾಗಿದ್ದರು ಇಡಿ ಊರೇ ಒಟ್ಟಾಗಿತ್ತು .ನಾನು ಮಾತ್ರ ಮರದ ಹಿಂಬದಿಯಲ್ಲಿ , ಅವಿತು ಕೊಂಡಿದ್ದೆ .ಆಗ 'ಅಮನ್ ',ನನ್ನ ಬಳಿ ಬಂದು" ಅವನಿಗೆ ತುಂಬಾ ಗಾಯವಾಗಿದೆ ಯಾಕೆ ನೀನ್ ಹಂಗೆ ಮಾಡ್ದೆ ಮಾರಾಯ " ಎಂದು ಒಂದಷ್ಟು ಬೈತಾ ಇದ್ರೆ ,ಜನರ ಬೈಗುಳವೂ ಮುಗಿಲು ಮುತ್ತ್ತುತಿತ್ತು .ನನ್ನ ಮನಸ್ಸು ಮುಮ್ಮಲ ಮಲಗಿತ್ತು .ನಿಜಕ್ಕೂ ನಾನು ರೌಡಿ (ಕಳ್ಳ )ನಾಗಿ ಬಿಟ್ಟನಲ್ಲ .ಎಂಬ ಪಾಪ ಪ್ರಜ್ಞೆ ನನ್ನು ಕಾಡುತ್ತಿತ್ತು . ಇಂಥ ಹೊತ್ತಿನಲ್ಲಿ ಮನೆಗೆ ಹೋಗಲು ಸಾದ್ಯವೇ? ಮನೆಯಲ್ಲಿ  ಹಬ್ಬದ ತಿಂಡಿ ತಿನಿಸು ಬೇಕಾದಷ್ಟಿದ್ದ್ರೂನಾನು ಮಾತ್ರ ಉಪವಾಸ ..ಬೆಳಿಗ್ಗಿನಿಂದ ಸಂಜೆ ತನಕ ಮನೆ ಬಿಟ್ಟಿದ್ದ ನಾನು ಸೂರ್ಯ ಮನೆಗೆ ನಡೆದ ನಂತರ ,ನನ್ನ ಕಾಲೂಗಳು ಮನೆಯ ಕಡೆ ಜಾರಿತ್ತು ಆಟ ದ ಆಪಘಾತ ಒಂದೆಡೆ ಯಾದರೆ ,ಬೆಳಿಗ್ಗೆ ಇಂದ ಮನೆ ಬಿಟ್ಟ ಕಾರಣ ,ಎಲ್ಲ ಒಟ್ಟು ಸೇರಿ ಬಿಸಿ -ಬಿಸಿ ಹೋಳಿಗೆ ಪಾಯಸ ಕಾದಿತ್ತು .....
                                                                 - ಎಸ್ .ಕೆ 

ಇದು ನನ್ನ ಹನಿ ಕವನ ...

ಪ್ರೀತಿ
ಕಂಡಾಗ ಕಣ್ಣಲ್ಲಿ
ಕರೆದು  ಕಣ್ಣಾಡಿಸಿದಾಗ
ಮನದಲ್ಲಿ ನೆನೆದು
ಕಂಡರೂ ಕಂಡಿರುವ ಹಾಗೆ
ನರ್ತಿಸುವ ಹೆಣ್ಣಿನ
ವರ್ತನೆಯೇ ಪ್ರೀತಿ

ಮುಳ್ಳು
ಅವನ ಕಲ್ಪನೆಗೆ ಹೂವಾದೆರೇನು?
ಮುಳ್ಳಾದರೇನು?
ಕಲ್ಪಿಸುವ ಹೃದಯ ಮೃದುವಾಗಿದ್ದರೆ
ಮುಳ್ಳು ಕೂಡ ಮೃದುವಾಗಿ
ಹೂವಾಗುತ್ತದೆ

ಗೆಳತಿ
ಪ್ರಿಯೆ ಏನೆಂದು ಬರೆಯಲಿ
ನಾ ನಿನ್ನ ಕುರಿತು
ಪ್ರಿತಿಸಿದೆನು ನಾ ನಿನ್ನ
ಸಂಪೂರ್ಣ ಅರಿತು
ಜೋತೆಯಗಿರುವೆ ನೋವಲಿ
ಕಣ್ಣಿರೊಂದಿಗೆ ಬೆರೆತು
ಹೃದಯದಲ್ಲಿ ಇನ್ನೊಂದಿಲ್ಲ
ನಿನ್ನ ಹೊರತು
ಎಂದಿಗೂ ಇರಲಾರೆ
ನಾ ನಿನ್ನ ಮರೆತು ..

ಪ್ರೀತಿ -ನೀತಿ
ಪ್ರೀತಿ ಇದು ಜಗದ ಜೀವ
  ಜ್ಯೋತಿ
ಪ್ರೀತಿ ಇಂದಲೇ ಏನೆಲ್ಲ ಉಂಟಾಗುತದೆ
ಇದೆ ಲೋಕದ ನೀತಿ