ಸೋಮವಾರ, ಮಾರ್ಚ್ 19, 2012

ಮಮತಾ ತುಜ್ಹೆ ಸಲಾಂ ..


ಕನ್ನಡತಿ ಮಮತಾ ಪೂಜಾರಿ ನೇತೃತ್ವದ ಭಾರತದ ವನಿತೆಯರ ಕಬಡ್ಡಿ ತಂಡ, ಮಾರ್ಚ್ 4 ,2012 ರಂದು ಬಿಹಾರ ಪಾಟಲಿಪುರ ಕ್ರೀಡಾ ಸಂಕಿರಣದಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಇರಾನ್ ತಂಡವನ್ನು 25 -19 ಅಂಕ ಗಳ ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು.ಭಾರತ ವನಿತೆಯರ ತಂಡದ ಕಪ್ತಳಳಾಗಿ,ತಂಡ ಗೆಲವುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಮತಾ ಪೂಜಾರಿ ನಮ್ಮ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನ ,ಎಣ್ಣೆ ಹೊಳೆ ಬೋಜಪೂಜಾರಿ  ಹಾಗು ,ಕಿಟ್ಟಿ ಪೂಜಾರ್ತಿ  ಎಂಬ ಕ್ರಷಿ ಕರ  ಮಗಳು.ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳದ ಮಮತಾ ,ಬಾಲ್ಯದಿಂದಲೇ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದವಳು ...ಒನ್ ಸೆಕೆಂಡ್  ಮಮತಾ  ತುಜ್ಹೆ ಸಲಾಂ ..


ಕಾನೂನು ಹೇಳುವವರು ಕಾನೂನನ್ನು ಕೈಗೆತ್ತಿಕೊಂಡರೆ ?!


ಮಾರ್ಚ್ 2 ,2012  ಪತ್ರಕರ್ತರ ಪಾಲಿಗೆ ಕರಳ ದಿನ ಈ ದಿನವನ್ನು ದಯಪಾಲಿಸಿದವರು ಬೆಂಗಳೂರಿನ ಕೆಲ ಗೂಂಡ ವಕೀಲರು .ಪತ್ರಿಕೋದ್ಯಮದ ಇತಿಹಾಸವನ್ನು ಬರೆದ ಈ ದಿನ ವನ್ನು ಎಂದಿಗೂ ಮರೆಯಲಾಗದು .ಪ್ರಜಬ್ರಭುತವ ವ್ಯವಸ್ಥೆಯನ್ನು ಅನುಕಿಸುವಂತೆ ವಕೀಲರು ಗೂಂಡ ಸಂಸೃತಿಯನ್ನು ಪ್ರದರ್ಶಿಸಿದರು. ಕಾನೂನನ್ನು ಹೇಳಬೇಕಾಗಿದ್ದ ವಕೀಲರು ಕಾನೂನು ಕಟ -ಕಟ ಯನ್ನೆಲ್ಲ ಗಾಳಿಗೆ ತೋರಿ .ವಕೀಲ ಸಮುದಾಯಕ್ಕೆ ಕೆಲ ಗೂಡ ವಕೀಲರಿಂದ ತಲೆತಗ್ಗಿಸುವಂತಿತು.ಅಷ್ಟಕ್ಕೂ ವಕೀಲರು ಮದ್ಯಮದವರ ಮೇಲೆ ದಾಳಿಗೆ ಕಾರಣ, ಅದು ಇತ್ತಚೆಗೆ ವಕೀಲರು ಬೆಂಗಳೂರ್ನಲ್ಲಿ ನಡೆಸಿದ 8 ಗಂಟೆಗಳ ರಸ್ತೆ ತಡೆ .ಇದರಿಂದ ಇಡಿ ಬೆಂಗಳೂರು ಟ್ರಾಪಿಕ್ ಜಾಮ್ ನಿಂದ ಅಲ್ಲೋಲಕೊಲ್ಲೊವಾಗಿತ್ತು,ಅದೆಷ್ಟೋ ಜನರು ಇವರುಗಳ ಆತಟೋಪದಿಂದ  ಆದಿನ ನೊಂದು ನೀರಾಗಿದ್ದರು.ಇದನ್ನು ಮಾದ್ಯಮದವರು ಉತ್ತಮ ರೀತಿಯಲ್ಲಿ ಪ್ರಸಾರವನ್ನು ಸಮಾಜದ ಒಳಿತಿಗಾಗಿ ವಕೀಲರನ್ನು ಆ ಸಮಯದಲ್ಲಿ ಎದುರು ಹಾಕಿಕೊಂಡಿದ್ದರು. ಇದರಿಂದ ಕೆರಳಿದ ಗಾಯಗೊಂಡ ಹುಲಿಯಂತಾಗಿದ್ದ ವಕೀಲರು ಮದ್ಯಮದವರ ಮೇಲೆ ವಿರುದ್ದ ಕತ್ತಿಮಸೆಯುತ್ತಿದ್ದರು .ಅಂತೂ ಮಾರ್ಚ್ 2 ನೆ ತಾರೀಕು ಮದ್ಯಮದವರ ಮೇಲೆ ದಾಳಿ ಮಾಡಲು ಮುಹೂರ್ತ ಕೂಡಿ ಬಂತು .
          ಪತ್ರಕರ್ತರಿಗೆ ಕರಾಳ ದಿನ ಮಾರ್ಚ್ 2 ,2012

ಆಂಧ್ರ ಜೈಲಿನಲ್ಲಿರುವ ಜನಾರ್ಧನ ರೆಡ್ಡಿಯನ್ನು  ಸಿಬಿಇ ಬೆಂಗಳೂರಿಗೆ ಕರೆತಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ತನಿಖೆಗೆ ಒಳಪಡಿಸಿತ್ತು .ಅಂದು ಎಲ್ಲ ಮಾದ್ಯಮದವರು ಬಂದೆ ಬರುತ್ತಾರೆ ಅನ್ನುದು ದಾಳಿ ಕೊರ ವಕೀಲರ ಗುಂಪಿಗೆ ತಿಳಿದಿತ್ತು .ದಾಳಿಗಾಗಿ ಮೊದಲೇ ಪೂರ್ವ ಸಿದ್ದತೆ ಮಾಡಿಕೊಂಡಿದ್ದರು .ಸಂಕ ಮುರಿದಲ್ಲೇ ಸ್ನ್ಹಾನ ಎನ್ನುವಂತೆ ,ಕನಿಷ್ಠ ಬುದ್ದಿ ಇರುವ ನಾಗರಿಕನೂ ಕೂಡ ತಲೆತಗ್ಗಿಸುವಂತೆ ,ವಕೀಲರು ಮದ್ಯಮದವರ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದರು .ಅಟ್ಟಾ ಡಿಸಿಕೊಂಡು ಹೊಡೆದರು .ಕೈ ಗೆ ಸಿಕ್ಕ ಆಯುದಗಳಿಂದ ಚಚ್ಚಿದರು .ಕೋರ್ಟ್ ಆವರಣ ದಲ್ಲಿ ರಕ್ತದೋಕುಳಿ ಹರಿತು.ವೃತ್ತಿಪರ ವಕೀಲರು ನಾಚಿಸುವಷ್ಟು ಮಟ್ಟಿಗೆ ವಕೀಲರ ದಾಂದಲೆ ನಡೆಯಿತು.

ಗುಂಪು -ಗುಂಪು ಪೊಲೀಸರು ಇರುವಾಗಲೇ ಅವರ ಎದುರೇ ಪತ್ರಕರ್ತರ ಮೇಲೆ ವಕೀಲರ ಮೇಲೆ ದಾಳಿ ನಡೆಯಿತು .ಪೊಲೀಸರು ಕೈಲಾಗದವರಂತೆ ಯಾರದ್ದೋ ಆಜ್ಞೆಗೆ ಕಡು ದಾಳಿ ಕೋರರನ್ನು,ಮೌನವಾಗಿಯೇ  ನೋಡುತ್ತಿದ್ದರು .ಆರಂಭದಲ್ಲೇ ದಾಳಿಯನ್ನು ನಿಲ್ಲಿಸುವ ಅವಕಾಶ ಪೊಲೀಸರಿಗೆ ಇತ್ತಾದರೂ ,ಅದನ್ನು ಅವರು ಪಾಲಿಸಲಿಲ್ಲ.ಯಾವಾಗ ವಕೀಲರು ಪೊಲೀಸರ ಮೇಲೆ ದಾಳಿಗೆ ಮುಂದಾದರೂ ,ಅಲ್ಲಿಗೆ ಪೊಲೀಸರಿಗೆ ಬಿಸಿ ಮುಟ್ಟಿತು .ಆದ್ರೆ ಉನ್ನತ ಅಧಿಕಾರಿಗಳು  ಆಜನೆ ಇಲ್ಲದೇ ಪೊಲೀಸರಿಗೆ ಕೈ ಕಟ್ಟಿ ಹಾಕಿದನ0ತಿತ್ತು .. ನೋಡಿ ಇದು ನಮ್ಮಲ್ಲಿಯ ಭದ್ರತಾ ವ್ಯವಸ್ತೆ  ಯಾದರೆ,ಮೇಲಿನದ್ದು  ಕಾನೂನು ಹೇಳುವವರೇ ಕಾನೂನನ್ನು ತಾವೇ ತಿದ್ದಿರುದು ...ಬೇಲಿಯೇ ಎದ್ದು ಹೊಲ ಮೆಯದ್ರೆ ? ಸಮಾಜ ಕಾಪಾಡುವ ಒಂದು  ಅಂಗವಾಗಿರುವ ಮದ್ಯಮ ,ಪೊಲೀಸರಿಗೆ  ಈ ಗತಿ ಬಂದರೆ,  ಇನ್ನು ಸಾಮಾನ್ಯ ಜನರ ದಿಕ್ಕು ಎತ್ತ ಏನು ?