ಭಾನುವಾರ, ಜುಲೈ 4, 2021

ವೈದ್ಯರನ್ನು /ವ್ಯವಸ್ಥೆಯನ್ನು ದೂರುವ ಮೊದಲು ಇದನ್ನು ಆಲೋಚಿಸಿ !

ಮೊನ್ನೆ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡ್ತಾ ಇದ್ದೆ ಅದರಲ್ಲೊಂದು ತೀರಾ ಬಾವುಕತೆ ಯಿಂದ ತನ್ನ ನೋವಿನ ವಿಚಾರ ಹೇಳುತ್ತಿದ್ದ ತಮಿಳು ನಾಡಿನ ನರ್ಸ್ ಒಬ್ಬಳ ಮಾತು ನಿಜಕ್ಕೂ ಮನಸ್ಸಿಗೆ ನಾಟುವಂತಿತ್ತು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ ಅದರಲ್ಲಿ ತುಂಬಿತ್ತು ಕೋವಿಡ್ ಸಂದರ್ಭದಲ್ಲಿ ಜನ ಸಾಮನ್ಯರು ಪ್ರದರ್ಶಿಸುವವರ ಉದ್ದಟತನಕ್ಕೆ ಬುದ್ದಿ ಹೇಳುವ ಸಂದೇಶ ಗಮನ ಸೆಳೆಯಿತು. ಸಾಮಾಜಿಕ ಅಂತರ ಒಂದೇ ಮಾರ್ಗ ಕೋವಿಡ್ ನಿಯಂತ್ರವನ್ನು ತರಬಹುದೇ ವಿನಾ: ಸಧ್ಯಕ್ಕೆ ಯಾವುದೇ ಮೆಡಿಸಿನ್ ಇಲ್ಲ ವ್ಯಾಕ್ಸಿನ್ ಇದ್ದರೂ, ಅದು ಅಷ್ಟು ಫಲಪ್ರಧ ಅಲ್ಲ ., ಇನ್ನು ನಮ್ಮ ದೇಶದ ಜನ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಗೆ, ಪೂರೈಕೆ ಮತ್ತು ಲಭ್ಯತೆ ಅಷ್ಟಕಷ್ಟೇ !ಇದನ್ನೆಲ್ಲವನ್ನು ಮನಗೊಂಡು ನಮ್ಮ ಸುರಕ್ಷತೆ ಹಾಗೂ ನಮ್ಮವರ ರಕ್ಷಣೆಗಾಗಿ ಒಂದಷ್ಟು ದಿನ ಮನೆಯಲ್ಲೇ ಇದ್ದು ,ಸಾಮಾಜಿಕ ಅಂತರ ಕಾಪಾಡಿದ್ದೇಯಾದರೇ ಖಂಡಿತವಾಗಿಯೂ ಕರೋನ ವೈರಸ್ ನಿಂದ ಗೆಲ್ಲಬಹುದು ಜೊತೆಗೆ ದೇಶವನ್ನೂ ! ಆದರೆ ಜನ ಸಾಮನ್ಯರು ಯಾಕೆ ಇದರ ಬಗ್ಗೆ ಆಲೋಚಿಸುತ್ತಿಲ್ಲ ? ಬುದ್ದಿ ಹೀನ ರಾಗಿದ್ದಾರೆ .ನಿರ್ಲಕ್ಷತೆ ,ನಿರ್ಲಜ್ಜತೆ ,ಉದ್ದತನದಿಂದಲೇ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡೂ ,ಪ್ರಾಣ ಹಾನಿಗೆ ಕಾರಣವಾಗಿರುವುದು .ಕೋವಿಡ್ ನಿಯಮ ಪಾಲನೆ ,ಸರಕಾರದ ಮಾರ್ಗ ಸೂಚಿಯನ್ನು ಗಾಳಿಗೆ ತೋರಿ ಮಾಸ್ಕ್ ಉಪಯೋಗಿಸದೇ ಎಲ್ಲೆಂದರಲ್ಲಿ ತಿರುಗಾಡುವುದು ,ಇದೆಲ್ಲವೂ ಕೋವಿಡ್ ಹರಡುವುದಕ್ಕೆ ರಹದಾರಿಯಾಗಿದೆ . ರೋಗ ಉಲ್ಭಣ ಗೊಂಡ ನಂತರ ಆಸ್ಪತ್ರೆಗೆ ದಾಖಲಾಗುವುದು ಬೆಡ್ ,ಆಕ್ಸಿಜನ್ ಸಿಗದೇ ಇರುವುದು ಸಾವಿನ ಕದ ತಟ್ಟುತ್ತಿರುವವರ ಬಗ್ಗೆ ಉತ್ತಮ ಹೇಳುತ್ತಿದ್ದ ಆ ನರ್ಸ್ “ಜನಸಸಂಖ್ಯೆ ಅನುಗುಣವಾಗಿ ಅಷ್ಟೊಂದು ಆಸ್ಪತ್ರೆ ,ಬೆಡ್ ,ವೈದ್ಯಕೀಯ ಪರಿಕರ ,ಆಸ್ಪತ್ರೆಯ ಸಿಬ್ಬಂದಿಗಳು ನಮ್ಮಲ್ಲಿ ಇಲ್ಲ ,ಎಲ್ಲವನ್ನೂ ಒಮ್ಮತದಲ್ಲಿ ಸಮತೋಲನಕ್ಕೆ ತರುವುದು ಕೂಡಾ ಕಷ್ಟ ಸಾಧ್ಯ ,ರೋಗ ಲಕ್ಷಣ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದೌಡಾಯಿಸುವ ರೋಗಿಗಳು ಬೆಡ್ ,ಆಕ್ಸಿಜನ್ ಗೆ ಪರದಾಡುವುದು ,ವೈದ್ಯರ ಮೇಲೆ ರೇಗಾಡುವದು ಎಷ್ಟು ಸರಿ ?
ರೋಗಿಗಳು ತುಂಬಾ ಸೀರಿಯಸ್ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಅವರುಗಳ ಪ್ರಾಣ ಆ ಸಂದರ್ಭದಲ್ಲಿ ಉಳಿಯುವುದು ,ಮತ್ತು ಉಳಿಸುವುದು ತುಂಬಾನೇ ಕಷ್ಟ . ವೈದ್ಯರುಗಳು ಸಾಕಷ್ಟು ಪ್ರಯತ್ನ ಪಡುತ್ತಾರೆ ,ಇನ್ನು ನರ್ಸ್ಗಳು ಲ್ಯಾಬ್ ಟೆಕ್ನಿಷಿಯನ್ ಗಳು ತಮ್ಮ ಪ್ರಾಣದ ಹಂಗು ತೊರೆದು ಹೊರಡುತ್ತಾರೆ . 4 ಜನರನ್ನು ಆರೈಕೆ ಮಾಡುವ ಸಹಜ ಸ್ಥಿತಿಯಲ್ಲಿ 10-15 ಜನರನ್ನು ಕಷ್ಟ ಪಟ್ಟು ಇಷ್ಟದಿಂದಲೇ ರೆಸ್ಟ್ ಗಳನ್ನೆಲ್ಲಾ ಬಿಟ್ಟು ನಾವು ಪ್ರಯತ್ನ ಪಡುತ್ತವೆ ,ನಮಗೂ ಗಂಡ -ಹೆಂಡತಿ, ಮಕ್ಕಳು ಒಟ್ಟಾರೆ ಫ್ಯಾಮಿಲಿ ಇಲ್ಲವೇ ? ಪ್ರತಿಕ್ಷಣವೂ ಅವುಗಳನ್ನು ಮರೆತು,ಬದಿಗೊತ್ತಿ ಕೋವಿಡ್ ವೈರಸ್ ನಮ್ಮ ಸುತ್ತಲೂ ಇದ್ದರೂ ,ಅದರ ಭಯವನ್ನು ಬಿಟ್ಟಾಕಿ ,ರೋಗಿಗಳು ರಿಕಾವರಿಯಾಗಿ ಹೊರ ಹೋಗ್ಬೇಕು ಎಂದು 12-14 ಗಂಟೆಗಳ ಕಾಲ ನಿರಂತರವಾಗಿ ಪಿಪಿಈ ಕಿಟ್ ಧರಿಸಿ ಕೊಂಡು ರೋಗಿಗಳ ಉಪಚಾರವನ್ನು ಮಾಡುತ್ತೇವೆ , ಒಂದು ರೋಗಿ ನಮ್ಮ ಕಣ್ಣ ಮುಂದೆ ಮರಣ ಒಪ್ಪಿದಾಗ ಅವರ ಕುಟುಂಬ ಕ್ಕಿಂತ ಜಾಸ್ತಿ ನಮಗೆ ದುಃಖದ ಕಟ್ಟೆ ಒಡಿಯುತೇ ನಾವು ಕಲ್ಲು ಹೃದಯಿಗಳಲ್ಲ ,ನಾವು ಮನುಷ್ಯರೇ ಅಲ್ವೇ ?ಯಾವೊಬ್ಬ ಡಾಕ್ಟರ್ ,ನರ್ಸ್ ಅಥವಾ ಟೆಕ್ನಿಷಿಯನ್ ಗಳಾಗಲಿ ರೋಗಿಗಳ ಆದಷ್ಟು ಬೇಗ ಗುಣ ಮುಖರಾಗಿ ಹೊರ ಹೋಗ್ಬೇಕು ಅನ್ನುವ ಮನಸ್ಥಿಯನ್ನೇ ಹೊಂದಿರುತ್ತಾರೆ ತಮ್ಮ ಕಾರ್ಯಕ್ಕೆ ಪ್ರತಿಫಲ ಸಿಕ್ಕಾಗ ಅದಕ್ಕಿಂತ ಜಾಸ್ತಿ ಆನಂದ ಇನ್ನೊಂದಿರುವುದಿಲ್ಲ , ಆದರೆ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ,ಮರಣ ಹೊಂದಿದಾಗ ರೋಗಿಗಳ ಸಂಬಂದಿಕರು ವೈದ್ಯರ ಮೇಲೇ ಹರಿಹಾಯುವುದು,ಹಲ್ಲೆ ಮಾಡುವದು ಆಸ್ಪತ್ರೆ ಧ್ವ೦ಸ ಮಾಡುವ ಕಾರ್ಯ ಚುಟವಟಿಕೆಯನ್ನು ಬೆಳಿಸಿಕೊಂಡಿದ್ದಾರೆ ! ವೈದ್ಯರುಗಳು ಕೇವಲ ಸ್ವಾರ್ಥ ಸಾಧನೆಗಾಗಿ ಹಂಬಲಿಸುತ್ತಾರೆ .ಅನವಶ್ಯಕವಾಗಿ ರೋಗಿಗಳನ್ನು ಸಾಯಿಸುತ್ತಾರೆ ಎಂಬಲ್ಲಾ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎಲ್ಲೂ ಬೆರಳೆಣಿಕೆ ಮಂದಿ ಮಾತ್ರ ಇಂಥ ಅಹಿತಕರ ಕಾರ್ಯಕ್ಕೆ ಕೈ ಹಾಕಿರಬಹುದು ಆದರೆ ಎಲ್ಲರನ್ನೂ ಅದೇ ದ್ರಷ್ಟಿ ಯಿಂದ ನೋಡುವ ಜಾಯಮಾನ ನಮ್ಮಲ್ಲಿ ಬೇರೂರಿದೆ . ನಮ್ಮನ್ನು ತೀರಾ ಕೀಳು ಮಟ್ಟದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ ಕಷ್ಟ ಪಟ್ಟು ಹಗಲು ಇರಳು ರೋಗಿಗಳನ್ನು ಈ ಸಮಯದಲ್ಲಿ ಪ್ರಾಣವನ್ನು ಒತ್ತಿ ಇಟ್ಟು ಜಾಕರಿ ಮಾಡುವ ನಮಗೆ ನೀಡುವ ಬಹುಮಾನ ಇದೇನಾ ? ಸುಮಾರು ಎಂಟನೂರಕ್ಕೂ ಅಧಿಕ ಮಂದಿ ದೇಶದಲ್ಲಿ ವೈದ್ಯರು ಅದೆಷ್ಟು ಜಾಗ್ರತೆ ವಹಿಸಿಯೂ ಕೋವಿಡ್ ರೋಗಿಗಳಿಗೆ ಟ್ರೀಟ್ಮೆಂಟ್ ಕೊಟ್ಟು ಸಾನೊಪ್ಪಿದ್ದಾರೆ. ವೈದ್ಯಕೀಯ ಸಿಬಂದಿಗಳ ಮೇಲೆ ಅನೂ ಕ್ಷಣವೂ ತೂಗುಗತ್ತಿ ನೇತಾಡುತ್ತಿರುತ್ತದೆ .” ನಿಜಕ್ಕೂ ಆ ನರ್ಸ್ ಮಾತಿನಲ್ಲಿ ಅರ್ಥವಿತ್ತು, ಸಾಮಾಜಿಕ ಕಳಕಳಿ ಇದ್ದೇ ಇತ್ತು . ಹೌದು ! ವೈದ್ಯರುಗಳ ಬಗ್ಗೆ ಆಸ್ಪತ್ರೆಗಳ ಬಗ್ಗೆ ಉದ್ದುದ್ದ ದೂರುಗಳ ಸರಮಾಲೆಯನ್ನು ಹರಿಸುವ ನಾವುಗಳು ಯಾಕೆ ಆಲೋಚನಾ ಭಗ್ನರಾಗುತ್ತೇವೆ?.ಮೊದಲೇ ಪ್ರಿಕಾಶನ್ ನ್ನು ತಂದು ಕೊಂಡಿದ್ದರೇ ವೈದ್ಯರನ್ನು ,ವ್ಯವಸ್ಥೆಗೆ ಬೆಟ್ಟು ತೋರಿಸುವ ಅಗತ್ಯವಿರುವುದಿಲ್ಲ