ಶುಕ್ರವಾರ, ನವೆಂಬರ್ 7, 2014

ನ್ಯಾಯ ಸತ್ತು ಹೋಗಿದೆ ?!

ಹೌದು ಇಂತದ್ದೊಂದು ಆತಂಕಕಾರಿ ಕೋಪದ ಕಿಡಿ ಒಡಲಲ್ಲಿ ಉರಿಯುತ್ತಿದೆ . ಬೇಲಿ ಕಾಯುವವರೇ ಎದ್ದು ಹೊಲ ಮೆಯ್ದರೆ ಇನ್ನೇನಾಗುತ್ತದೆ ? ವರ್ಷದ ಹಿಂದೆ ಸೌಜನ್ಯ ಮೊನ್ನೆ ಪ್ರಥ್ವಿ ನಿನ್ನೆ ರತ್ನ ಇಂದು ನಂದಿತಾ ನಾಳೆ ? ಏನೂ ಅರಿಯದ ಮುಗ್ದ ಕಂದಮ್ಮಗಳು ಅರಳುವ ಮೊದಲೇ ಮುದುಡಿ ಹೋಗುತ್ತಿದ್ದಾರೆ . ಅಮಾಯಕರು ಕಟ್ಟಿ ಕೊಂಡ ಬಗೆ ಬಗೆಯ ಕನಸ್ಸುಗಳೆಲ್ಲಾ ರಕ್ಕಸುರುಗಳ ತೆಕ್ಕೆಯಲ್ಲಿ ಕರಗಿ ಹೊಗುತ್ತಿದೆ. ಶಾಲೆ ಬಿಟ್ಟ ಹೆಣ್ಣು ಮಗಳೊಬ್ಬಳು ಮರಳಿ ನೇರವಾಗಿ ಮನೆಗೆ ಬರುತ್ತಾಳೆ ಎಂಬ ಯಾವುದೇ ನಿರೀಕ್ಷಣಾ ಭಾವವನ್ನು ಮನೆಯವರು ಇಟ್ಟು ಕೊಳ್ಳದಂಥಹ ಪರಿಸ್ಥಿತಿ ಆಧುನಿಕ ದಿನದಲ್ಲಿ ಮೆಳೈಸುತ್ತಿದೆ . ಇದು ನಮ್ಮ ದೌರ್ಭಗ್ಯ..! ಮುಗ್ದತೆ ಬಡತನವನ್ನು ಬಂಡವಾಳ ಮಾಡಿಕೊಂಡು ತಮ್ಮ ಕಾಮತ್ರಷೆ ಯನ್ನು ತೀರಿಸಿಕೊಳ್ಳುವ ಕಾಮ ಪಿಪಾಸುಗಳ ಹಾಗೂ ಅದನ್ನು ಪೋಷಿಸುವ ಪಾಪಿಗಳ ಲೋಕದಲ್ಲಿ ನ್ಯಾಯ ಸತ್ತೆ ಹೋಗುತ್ತಿದೆ ಅನ್ನುದು ಅತಿಶಯೋಕ್ತಿಯಾಗಲಾರದು . ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ವಿಧ್ಯಾರ್ಥಿನಿ ಸೌಜನ್ಯ (ಇದಕ್ಕೂಮೊದಲು ಕಾಮಂಧರ ಗರ್ಭ ಗುಡಿಯಲ್ಲಿ ಅದೆಷ್ಟೋ ಲೆಕ್ಕಕ್ಕೆ ಸಿಗದ ಸೌ.. ಜನ್ಯರು ) ತಮ್ಮ ಮಾನ - ಪ್ರಾಣವನ್ನು ಬಲಿಕೊಡುವಂತಾಯಿತು. ಯಾರ್ಯಾರು ಸೌಜನ್ಯಳನ್ನು ಇಲ್ಲವಾಗಿಸಿದ್ದಾರೆ ಎಂಬ ವಾತ್ಸವ ಕುರುಹುಗಳು ಇದ್ದರೂ , ಹೋರಾಟದ ಬಲವಿದ್ದರೂ ಇಂದಿಗೂ ಸಹಾ ನ್ಯಾಯದ ಬಾಗಿಲು ತೆರಲೇ ಇಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗಲೇ ಇಲ್ಲ. ನಂತರ ಬ್ರಹ್ಮಾವರ ದ ಎಸ್ ಎಂ ಎಸ್ ಕಾಲೇಜ್ ವಿಧ್ಯಾರ್ಥಿನಿ ಪ್ರಥ್ವಿಯ ನಿಗೂಢ ಸಾವು ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಸತ್ಯ ವಿಚಾರ ಎಂತಾ ಹುಂಬರಿಗೂ ಸಹಾ ತಿಳಿದಿದೆ ಆದರೆ ನ್ಯಾಯ ಎಲ್ಲಿ ? ಮೊನ್ನೆ -ಮೊನ್ನೆ ಇನ್ನೊಬ್ಬ ನತ ದ್ರಷ್ಟ ಹೆಣ್ಣುಮಗಳು ರತ್ನಾಳ ಸಾವು ಕೂಡಾ ರಹಸ್ಯವಾಗಿಯೇ ಉಳಿದಿದೆ. ಒಂದಷ್ಟೂ ಹೋರಾಟ , ಹಾರಾಟ ಮತ್ತೆದು ಮೂಲೆ ಗುಂಪು..! ಇದು ನಮ್ಮಕಾನೂನು , ಸಮಾಜ ,ರಕ್ಷಣೆ. ನ್ಯಾಯದ ಸ್ಥಿತಿ ಗತಿ ! ನೈಜ ವಿಚಾರ ಏನು ಎತ್ತ ಎಂಬುದು ಎಲ್ಲಾರಿಗೂ ಗೊತ್ತಿದೆ . ಆದರೆ ಸಂಗತಿ ಬಯಲಾಗುತ್ತಿಲ್ಲ.. ಅಪರಾಧಿಗಳು ಪತ್ತೆ ಯಾಗುತ್ತಿಲ್ಲ . ಯಾಕೆ ? ನ್ಯಾಯ ಸಿಗುತ್ತಿಲ್ಲ ಯಾಕೆ ? ಯಾಕೆ ? ತಪಿಸ್ತಿತರಿಗೆ ರಕ್ಷಣೆ ನೀಡಲು ಮಹಾನ್ ಕುಳಗಳ ಚಳಕ ಸದ್ದಿಲ್ಲದೇ ನಡೆಯುತ್ತಿರುವಾಗ ಪ್ರಕರಣ ಬೆಳಕಿಗೆ ಬರುವುದಾದರೂ ಹೇಗೆ ? ಮಹಾನ್ ಅತಿರಥರು ಮಹಾರಥರು ಆರೋಪಿ ಅಪರಾಧಿಗಳಿಗೆ ನೆರಳು ನೀಡುವಾಗ ನ್ಯಾಯದ ಜೊತೆಗೆ ಹೆಣ್ಣು ಮಕ್ಕಳ ಬಲಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಲ್ಲಿಯವರೆಗೆ ನಮ್ಮಲ್ಲಿ ಅನ್ಯಾಯ ಅ ನೀತಿ ತಾಂಡವ ವಾಡುತ್ತಿದೆ ಎಂದರೆ ಥೇಟ್ ಸಿನಿಮಾ ಶೈಲಿಯಂತೆ .. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ನಿನ್ನೆ ತೀರ್ಥಹಳ್ಳಿ ನಡೆದ ಘಟನೆಯೇ ಸಾಕ್ಷಿ ನುಡಿಯುತ್ತಿದೆ . ೮ನೇ ತರಗತಿ ವಿಧ್ಯಾರ್ಥಿನಿ ನಂದಿತಾಳನ್ನು ನಾಲ್ಕು ಜನ ಯುವಕರು ಕಾರಿನಲ್ಲಿ ಹೊತ್ತ್ಯೋದು ಗುಡ್ಡದ ಮೇಲೆ ಅತ್ಯಾಚಾರ ನಡೆಸಿ ನಂತರ ಬಹಿರಂಗವಾದರೆ ನಮಗೆ ತೊಂದರೆ ಎ೦ದಾಲೋಚಿಸಿ ಬಲತ್ಕಾರವಾಗಿ ವಿಷ ಕುಡಿಸಿ ಸಾಯುವ ಮೊದಲೇ ಅಲ್ಲಿಂದ ಕಾಲ್ಕಿತ್ತಿದ್ದ ಆರೋಪಿಗಳ ಸಂಪೂರ್ಣ ಚಿತ್ರಣವನ್ನು ಅಲ್ಲಿನ ಕೆಲ್ವಂದಿಷ್ಟು ಕಣ್ಣುಗಳು ನೋಡಿವೆ . ಆದರೆ ನಮ್ಮಲ್ಲಿನ ಕಾನೂನು ವ್ಯವಸ್ತೆ ಎಲ್ಲಿಯವರೆ ಹದಗೆಟ್ಟಿದೆ ಎಂದರೆ ? ನ್ಯಾಯ ದೊರಕಿಸಿ ಕೊಡುವ ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈ ಗೊಂಡು ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಗಮನ ವಹಿಸಿಯ ಬೇಕಾದ ಆರಕ್ಷಕ ಹಾಗೂ ಸಂಬ೦ದ ಪಟ್ಟ ಮಾಹಾ ಪ್ರಭುಗಳು ನಿಜಕ್ಕೂ ನಾಚಿಕೆಗೇಡು , ಹೇಸಿಗೆ ತರುವಂತೆ ರೀತಿಯಾಗಿ ನಡೆದು ಕೊಳ್ಳುವುದೇ ? ಎಲ್ಲೋ ಬೆರಳಣಿಕೆ ಮಂದಿಗಷ್ಟೇ ಸೀಮಿತವಾಗಿದ್ದ ಗೌರವಗಳು ಇಂತವರುಗಳಿಂದ ಎಲ್ಲಾರಿಗೂ ಸಹಾ ಕೆಟ್ಟ ಹೆಸರು . '' ನಾನು ಓದಿನಲ್ಲಿ ಹಿಂದಿದ್ದೆ ಅದರಿಂದ ನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೊಲೀಸರು ಹೀಗೊಂದು ಪತ್ರವನ್ನು ತಾವೇ ಮೂರು ದಿನಗಳ ಬಳಿಕ ಮುದ್ರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೇ ? ಇವರ ಜನ್ಮಕ್ಕಿಷ್ಟು ಬೆಂಕಿ ಹಾಕಾ ? ಹೇಳಿದರೆ ಸತ್ಯದ ತಲೆ ಮೇಲೆ ಹೊಡೆದ ರೀತಿ ಇರಬೇಕೆ೦ತೆ. ಬಾರಿ ಬುದ್ದಿ ಉಪಯೋಗಿಸಿದ ಈ ಸೇವಕ ಭಟರಿಗೆ ಅವಳ ಪೂರ್ಣ ಹೆಸರನ್ನೂ ಮುದ್ರಿಸಲು ಸಾಧ್ಯವಾಗಲಿಲ್ಲ. ನಾಚಿಕೆಯಾಗುದಿಲ್ಲವೇ ? ಯಾವ ಮುಖ ಹೊತ್ತು ಇದ್ದಾರೆ ? ಕ್ಯಾಕರಿಸಿ ಉಗಿಬೆಕು ! ಇನ್ನು ಇದನ್ನೇ ಕೆಲವು ಮಾಧ್ಯಮಗಳು ವಾಸ್ತವ ವೆಂಬಂತೆ ಪ್ರಸಾರ ಮಾಡಿದ ಇವುಗಳಿಗೆ ಯಾವ ನೈತಿಕತೆ ಇದೆ .. ಸಮಾಜ ಕಾಯುವರೆಂಬ ಹಣೆಪಟ್ಟಿ ಬೇರೆ ಇವುಗಳಿಗೆ !! ಕಾನೂನು -ಕಾಯ್ದೆ -ಕಟ ಕಟೆಗಳೆಲ್ಲಾ ಸುಟ್ಟು ಸುಡುಗಾಡು ಸೇರಿದೆ .. ! ಓದಿನಲ್ಲಿ ಸಾಕಾಷ್ಟು ಉತ್ತಮ ತನವನ್ನು ಕಾಯ್ದುಕೊಂಡು ಬಂದಿದ್ದಾಳೆ ಎಂದು ಅವಳ ಪ್ರೋಗ್ರೆಸ್ ಕಾರ್ಡ್ ಹೇಳುತ್ತಿದೆ , ಸಹಪಾಟಿಗಳು , ಪ್ರಾಚಾರ್ಯರು ನುಡಿಯುತ್ತಿದ್ದಾರೆ. ಅನ್ಯಾಯ ಕಂಡಾಗ ನ್ಯಾಯ ದೊರಕಿಸಿ ಕೊಟ್ಟು ಅಪರಾಧಿಗಳನ್ನು ಶಿಕ್ಷಿಸುವದನ್ನು ಬಿಟ್ಟು ,ಅಪರಾಧಿಗಳನ್ನು ರಕ್ಷಣೆ ಮಾಡುತ್ತಿರುವ ಇಂತವರುಗಳಿಂದಲೇ ಇಂದು ಮಹಿಳೆಯರ ಸ್ಥಿತಿ ಡೋಲಾಯಮಾನವಾಗಿದೆ ದಿನಕ್ಕೊಂದು ಹೆಣ್ಣು ಮಾನ -ಪ್ರಾಣವನ್ನು ಕೆಳೆದು ಕೊಂಡು ಮಣ್ಣು ಪಾಲಾಗುತ್ತಿದ್ದಾಳೆ . ಅಪರಾಧಿಗಳನ್ನು ರಕ್ಷಿಸಿ ಎಂಜಲು ಕಾಸಿಗೆ ಕೈ ಚಾಚುವ ಇವರುಗಳ ಹೆಣ್ಣು ಮಕ್ಕಳಿಗೆ ಇಂಥ ಸ್ಥಿತಿ ಬಂದೊದಗಿದರೆ ಆಗ ಏನು ಮಾಡುತ್ತಾರೆ ? ಹೀಗೆ ಮುಂದು ವರಿಯುತ್ತಿದ್ದರೆ ಅದೇನು ಕಷ್ಟ ವಲ್ಲ !! ಕೊನೆಯದಾಗಿ ಒಂದು ಮಾತು ಪ್ರಿಯರೆ ಎಂಜಲು ಕಾಸಿಗೆ ಕೈ ಒಡ್ಡ ಬೇಡಿ .. ನ್ಯಾಯ ದೊರಕಿಸಿ ಕೊಡಿ ಹಾಗೂ ಇಂತಹ ಘಟನೆಗಳು ಸಂಬವಿಸಿದಂತೆ ನೋಡಿಕೊಳ್ಳಿ ನಿಮ್ಮಿ೦ದ ಅದು ಸಾಧ್ಯ ವಾಗದೇ ಇದ್ದರೂ ಗಂಟೇನೂ ಹೋಗದು ಆದರೆ ಅಪರಾಧಿಗಳಿಗೆ ಮಾತ್ರ ರಕ್ಷಣೆ ಕೊಡಬೇಡಿ