ಗುರುವಾರ, ಜುಲೈ 30, 2026

ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಗೆದ್ದಿದೆ... ಆದರೆ ಅಭಿಮಾನಿಗಳ ಆತಂಕ ಇನ್ನೂ ದೂರವಾಗಿಲ್ಲ!!

ಅಂತೂ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ನೆಮ್ಮದಿಯನ್ನು ಮೂಡಿಸಿದೆ. ವಿಶ್ವ ಚಾಂಪಿಯನ್ ತಂಡವೊಂದು ಜಿಂಬಾಬ್ವೆಯಂತಹ ದುರ್ಬಲ ತಂಡವನ್ನು ಸೋಲಿಸಿದರೆ ಅದರಲ್ಲಿ ವಿಶೇಷವೇನು? ಗೆಲುವು ನಿರೀಕ್ಷಿತವೇ ಅಲ್ಲವೇ? ಎಂಬ ಪ್ರಶ್ನೆಯನ್ನು ಹಲವರಲ್ಲಿ ಮೂಡುವುದು ಸ್ವಾಭಾವಿಕ! ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಾ ?ಮೇಲ್ನೋಟಕ್ಕೆ ಈ ಪ್ರಶ್ನೆ ಹಾಸ್ಯಾಸ್ಪದವಾಗಿ ಕಂಡರೂ, ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್ ಕಂಡ ಏರಿಳಿತದ,ಬೆಳವಣಿಗೆಯನ್ನು ಗಮನಿಸಿದವರಿಗೆ ಅದರ ಹಿಂದಿನ ಆತಂಕ ಅರ್ಥವಾಗುತ್ತದೆ. ಗಂಭೀರ ಸ್ವರೂಪದ ಹೆಡ್ ಕೋಚ್ ಗೌತಮ್ ಗಂಭೀರ್ ಯೋಚನೆಯ, ಅಜಿತ್ ಅಗರ್ಕರ್ ಯೋಜನೆಯ ಟೀಮ್ ನಲ್ಲಿ ಏನೇನು ಪ್ರಯೋಗ ಆಗುತ್ತಿದೆ ಎಂದು ಬಲ್ಲವರಿಗೆ ಗೊತ್ತಿರುವ ವಿಚಾರ. ಸೂರ್ಯಕುಮಾರ್ ಯಾದವ್ ನ್ನು ಎತ್ತಂಗಡಿ ಮಾಡಿ ಶ್ರೇಯಸ್ ಅಯ್ಯರಿಗೆ ಕ್ಯಾಪ್ಟನ್ ಶಿಪ್ ಕೊಟ್ಟು ಟೀಮ್ ಇಂಡಿಯಾವನ್ನು ಆತನ ಹೆಗಲ ಮೇಲೆ ಇರಿಸಿದ್ದರು.ಅಯ್ಯರ್ ನಾಯಕನ ಸ್ಥಾನಕ್ಕೆ ಅರ್ಹನೇ ಆದರೂ, ಉತ್ತಮ ನಾಯಕತ್ವವನ್ನು ಹೊಂದಿ ಸಾಕಷ್ಟು ಐಸಿಸಿ ಟ್ರೋಪಿಗಳನ್ನು ತಂದುಕೊಟ್ಟ sky ಯನ್ನು ವಿನಾಕಾರಣ ಬದಿಗೆ ಸರಿಸಿದ್ದು ಕ್ರಿಕೆಟ್ ಪ್ರೇಮಿಗಳಿಗೆ ನುಂಗಲಾರದ ತುತ್ತೇ ಆಗಿತ್ತು . ಐಪಿಎಲ್ ಪಂದ್ಯಾಟದಲ್ಲಿ ಆಟಗಾರರ ಆಳ-ಅಗಲವನ್ನು ಅಳೆಯುವ ಹಳೆಯ ಚಾಳಿ ಕ್ರಿಕೆಟ್ ಮಂಡಳಿಯವರು ಇನ್ನೂ ಬಿಟ್ಟಿಲ್ಲ.ಆ ಆಟವೇ ಬೇರೆ ಈ ಫಾರ್ಮೆಟ್ ಯೇ ಬೇರೆ., ಅಲ್ಲಿ ಕ್ಲಿಕ್ ಆದವರು ಇಲ್ಲಿ ಹಿಟ್ ಆಗಬೇಕು ಅಂತಿಲ್ಲ. ಒಬ್ಬ ಆಟಗಾರನ ಮೌಲ್ಯವನ್ನು ಕೇವಲ ಐಪಿಎಲ್ ಪ್ರದರ್ಶನದಿಂದಲೇ ಅಳೆಯುವುದು ಎಷ್ಟು ಸೂಕ್ತ ? ಐಪಿಎಲ್ ಒಂದು ವಿಭಿನ್ನ ವೇದಿಕೆ . ಐಪಿಎಲ್‌ನಲ್ಲಿ ಮಿಂಚಿದವರೆಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗುತ್ತಾರೆ ಎನ್ನುವ ನಿಯಮವಿಲ್ಲ. ಅದೇ ರೀತಿ ಐಪಿಎಲ್‌ನಲ್ಲಿ ವಿಫಲರಾದ ಹಲವರು ಭಾರತ ಪರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದಿದ್ದಾರೆ ಸಾಲು- ಸಾಲು ಉದಾಹರಣೆಗಳು ಸಾಕಷ್ಟಿವೆ. ಸೂರ್ಯ ಕುಮಾರ್ ಯಾದವ್ ಫಾರ್ಮ್ ನಲ್ಲಿಲ್ಲ :ನಿಜ! ಐಪಿಎಲ್ ನಲ್ಲಿ ಹಾಗೂ ಐಪಿಎಲ್ ಗಿಂತ ಮುಂಚೆ ನಡೆದ ಕೆಲವೊಂದು ಮ್ಯಾಚ್ ನಲ್ಲಿ ದಿ sky ಖ್ಯಾತಿಯ ಸೂರ್ಯಕುಮಾರ್ ಯಾದವ್ ಫಾರ್ಮ್ ನಲ್ಲಿ ಇರಲಿಲ್ಲ.ಅಂದ ಮಾತ್ರಕ್ಕೆ ಆತನನ್ನು ಕ್ಯಾಪ್ಟನ್ ನಿಂದ ಕಿತ್ತು ಬಿಸಾಕುವುದೇ ? ಸಮಯ ಸರಿ ಇಲ್ಲ ಅದೃಷ್ಟ ಕೈಗೂಡುತ್ತಿಲ್ಲ.ಬ್ಯಾಟಿಂಗ್ ನಲ್ಲಿ ವೈಫಲ್ಯತೆ ಕಾಣುತ್ತಿರುವುದು ನಿಜವೇ ಆದರೂ , ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳಿದ್ದರೂ, ಅವರ ನಾಯಕತ್ವ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಅನುಮಾನಗಲಿಲ್ಲ. ಆತ ಒಬ್ಬ ಒಳ್ಳೆಯ ನಾಯಕ.ಟೀಮ್ ಲೀಡಿಂಗ್ ನ ತಾಳ್ಮೆ-ಜಾಳ್ಮೆ ಅತ್ಯುತ್ತಮವಾಗಿದೆ. ಆತನಿಗೆ ಕ್ಯಾಪ್ಟನ್ಸಿ ಯಿಂದ ಕೊಕ್ ನೀಡಿದ್ದರ ವಿರುದ್ಧ ಹಲವಾರು ಕ್ರಿಕೆಟ್ ಲೆಜೆಂಡ್ ಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ , ಅಭಿವ್ಯಕ್ತಿಯನ್ನು ಹೊರಹಾಕಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಮೂರು ಟಿ20ಗೆ ಸೂರ್ಯ ನಾಯಕನಲ್ಲದಿದ್ದರೂ ,ತಂಡದಲ್ಲೂ ಸ್ಥಾನ ಸಿಗಲಿಲ್ಲ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲಾಯಿತು. ಐಪಿಎಲ್ ಕಿಲಾಡಿಗಳನ್ನು ಭಟ್ಟಿ ಇಳಿಸಲಾಯಿತಾದರೂ ,ರಾಯಲ್ ಚಾಂಲೆಜರ್ಸ್ ಬೆಂಗಳೂರು ಆಟಗಾರರು ಯಾವ ಪಾಪ ಮಾಡಿದ್ರೂ ಗೊತ್ತಿಲ್ಲ ಯಾವೊಬ್ಬ ಆಟಗಾರನೂ ಟೀಮ್ ನಲ್ಲಿ ಸೆಲೆಕ್ಟ್ ಆಗಲೇ ಇಲ್ಲ.ಸತತ ಎರಡೆರಡು ಬಾರಿ ಚಾಂಪಿಯನ್ ಪಟ್ಟ ಧರಿಸದ್ದರೂ ,ಅಲ್ಲಿನ ಆಟಗಾರರನ್ನು ಕಡೆಗಣಿಸಲಾಯಿತು.ಕ್ರಿಕೆಟ್ ಜಗತ್ತಿನ ಕೂಸು ಐರ್ಲೆಂಡ್ ಗೆ ಟಾಪ್ ಪ್ಲೇಯೆರ್ ಗಳ ಅಗತ್ಯವಿಲ್ಲದಿದ್ದರೂ, ಅವರ ನೆಲ ಎಂಬ ಕಿಂಚಿತ್ ಆಲೋಚನೆ ಟೀಮ್ ಸೇಲೆಕ್ಟ್ರ್ ಗಳಿಗೆ ಇರಲಿಲ್ಲ.
ಸೆಲೆಕೆಟ್ರ್ ಅಜಿತ್ ಅಗರ್ಕರ್ ರ ಟೀಮ್ ನಲ್ಲಿ ವಿದೇಶಕ್ಕಿಂತ ತವರಿನ ಪಿಚ್ಚಿನಲ್ಲಿ ಆಡಿದವರೇ ಅಧಿಕ ಸಂಖ್ಯೆಯಲ್ಲಿದ್ದರು.ಐರ್ಲೆಂಡ್ ಪಿಚ್ ಕಂಡವರು ಯಾರೊಬ್ಬರೂ ಟೀಮಿನಲ್ಲಿ ಜಾಗ ಪಡೆಯಲಿಲ್ಲ. ಇದೇನೋ ಸಣ್ಣ ಟೀಮ್ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂಕಾರ ಒಂದೆಡೆಯಾದರೇ ಸಹಜತೆಯ ನೆಗ್ಲೆಜೆನ್ಸ್ ಭಾವ ಇನ್ನೊಂದೆಡೆ ! ಕ್ರಿಕೆಟ್ ದುನಿಯಾವೇ ಅಚ್ಚರಿ ಪಡುವಂತೆ ಐರ್ಲ್ಯಾಂಡ್, ವಿಶ್ವ ಚಾಂಪಿಯನ್ ಇಂಡಿಯಾವನ್ನು ವಾಶ್ ಔಟ್ ಮಾಡಿ ಬಿಟ್ಟಿತು . ಒಂದೂ ಮ್ಯಾಚ್ನ್ನು ಬಿಟ್ಟು ಕೊಡದ ಕ್ರಿಕೆಟ್ ಶಿಶುಗಳ ಸಾಂಘಿಕ ಆಟ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿತ್ತು. ಮರ್ಯಾದೆ, ಗೌರವಕ್ಕೆ ಒಂದಾದರೂ ಗೆಲ್ಲಬಹುದಿತೇನೋ ಆದರೆ ಕೋಚ್ ಗಂಭೀರ್ ನವ -ನವೀನ ಸಂಶೋಧನೆಯಡಿಯಲ್ಲಿ ಕೈಕೊಟ್ಟು ಬಿಟ್ಟಿದ್ದು. ಇಲ್ಲ ಸಲ್ಲದ ಕೆಟ್ಟ ದಾಖಲೆಗಳನ್ನು ಬರೆಸಿಕೊಂಡಿತು. ಶತ್ರು ರಾಷ್ಟ್ರ್ರಗಳ ಹೀಯಾಳಿಕೆ ನುಡಿಗಳಿಗೆ ಒಳಗಾಗಬೇಕಾಯಿತು . ಇಂಗ್ಲೆಂಡ್ ಸೀರೀಸ್ ನಲ್ಲೂ ಅದೇ ಹಾಡು: ಬೆರಳಣಿಕೆಯ ದಿನಗಳಲ್ಲಿ ಇನ್ನೊಂದು ಸೀರಿಯಸ್ ಶುರುವಾಯಿತು ಅದು ಇಂಗ್ಲೆಂಡ್ ಪ್ರವಾಸ.ಐದು T20 ಹಾಗೂ 3 ಒಂಡೇ ಮ್ಯಾಚ್ .ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರತೆ ಕಾಣಿಸಲಿಲ್ಲ. ಅದೇ ರಾಗ ಅದೇ ಹಾಡು ಎಂಬಂತೆ ಮತ್ತದೇ ತರಹನಾದ ಟೀಮ್ ನ ಸೆಲೆಕ್ಟ್ ಮಾಡಿದರು ಈ ಮಹಾನುಭಾವರು . ಐರ್ಲ್ಯಾಂಡ್ ನಿಂದ ಪಾಠ ಕಲಿಯದ ಮ್ಯಾನೇಜ್ಮೆಂಟ್, ಕ್ರಿಕೆಟ್ ರೂವಾರಿಗಳ ತವರು ನಾಡಿನಲ್ಲಿ ಸರಿಯಾಗಿ ಬುದ್ಧಿ ಕಲಿತರು. ಐದು T20 ಯಲ್ಲಿ ಒಂದು ಮಳೆಯಿಂದ ರದ್ದಾಗಿದ್ದರೇ ,ಮಾತೆಲ್ಲವೂ ಗೋನ್ ಪಚಕ್ ! ಹೋಗಲಿ Onday ನಲ್ಲಿಯಾದರೂ,ಪ್ರತಿಕಾರ ತೀರಿಸಿಕೊಳ್ಳುತ್ತಾರೆ ಅಂದು ಎಣಿಸಿದರೆ ಲೆಕ್ಕ ಚುಕ್ತಾ ಆಗದೇ ಹೋಯಿತು. ಅದ್ಯಾವುದೋ ಅದೃಷ್ಟವೋ ,ಪುಣ್ಯವೋ ಕ್ಲೀನ್ ಸ್ವೀಪ್ ಆಗ್ಲಿಲಿಲ್ಲ.ಅಟ್ಲಿಸ್ಟ್ ಒಂದು ಮಾಯ್ಚ್ ಗೆದ್ದು ಮರ್ಯಾದೆ ಉಳಿಸಿಕೊಂಡಿತು. ಕೋಚ್ ಗಂಭೀರ್ ಇಂಪ್ಲಿಮೆಂಟೇಶನ್ ಯಾವುದು ಕೈಗೂಡುವುದಿಲ್ಲ, ಆತ ಬಿಡುವುದಿಲ್ಲ.ಒಂಡೇ ಯಲ್ಲಿ ಟೀಮ್ ಕೊಂಚ ಚೇಂಜ್ ಆಗಿದ್ದರೂ , ಬೋಲಿಂಗ್ ನಲ್ಲಿ ಮಾತ್ರ full ಪ್ಲಾಪ್ !. ಮಹಮ್ಮದ್ ಶಮಿ ,ಮೊಹಮ್ಮದ್ ಸಿರಾಜ್ ,ಭುವನೇಶ್ವರ್ ಕುಮಾರ್, ಅಂತಹ ಅನುಭವಿ ಬೋಲರ್ಗಳಿದ್ದರೂ ಅವರೆನ್ನೆಲ್ಲಾ ಸೈಡ್ ಲೈನ್ ಮಾಡಿ ,ಇಂಥವರುಗಳಿಗೆ ಚಾನ್ಸ್ ಕೊಟ್ಟು ಟೀಮ್ ನ್ನು ಸರ್ವನಾಶ ಮಾಡಲು ಹೊರಟಿದ್ದರು. ಇನ್ನು ಕುಲದೀಪ್ ಯಾದವ್ ಟೀಮ್ ಗೆ ಸೆಲೆಕ್ಟ್ ಆಗಿದ್ದರೂ ,ಆತ ನೀರು ತಂದು ಕೊಡುವ ಕಾಯಕಕಷ್ಟೆ ಸೀಮಿತವಾಗಿದ್ದರು. ಕ್ರಿಕೇಟ್ ಪಂಡಿತರ ಅಭಿಪ್ರಾಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶದ ಫಲಶೃತಿಯೇನೋ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ರೆಸ್ಟ್ ಕೊಟ್ಟ ಬಿಸಿಸಿಐ , ಜಿಂಬಾಬ್ಬೆ ವಿರುದ್ಧದ ಸೀರೀಸ್ ಗೆ ವಿವಿಎಸ್ ಲಕ್ಷ್ಮಣ್ ಗೆ ಮಣೆ ಹಾಕಿದ್ದರು. ನಗು ಮುಖದ ಸುಂದರ ಸರದಾರ ಲಕ್ಶಣ್, ಅಷ್ಟೊಂದು ಬಲಶಾಲಿ ಅಲ್ಲದ ಟೀಮ್ ತನ್ನ ಕೈಲ್ಲಿದ್ದರೂ ,ಹೆಚ್ಚಿನ ಒತ್ತಡ ,ಕಠಿಣವಲ್ಲದ ಹರಾರೆ ಪಿಚ್ ನಲ್ಲಿ ಸುಲಭವಾಗಿ ಜಿಂಬಾಬ್ಬೆ ಬಾಯ್ಸ್ ಗಳನ್ನು ಕಾಡಿ ಮೂರಕ್ಕೆ ಮೂರೂ T20 ಯನ್ನು ಕೈವಶ ಪಡಿಸಿಕೊಂಡು ಕೊಂಚ ನಿಟ್ಟಿಸಿರು ಬಿಡುವಂತೆ ಮಾಡಿದರು.ನಿರೀಕ್ಷೆಯಂತೆ ಜಿಂಬಾಬ್ಬೆ ಹೇಳಿಕೊಳ್ಳುವಂತ ದೊಡ್ಡ ಟೀಮ್ ಅಲ್ಲದಿದ್ದರೂ, ಟೀಮ್ ಇಂಡಿಯಾದ ಈಗಿನ ಪರಿಸ್ಥಿತಿಗೆ ದೊಡ್ಡದೇ !! ಶುಭಾಶಯಗಳು. ಕೊನೆ ಮಾತು:ಮುಂದೆ ಶ್ರೀಲಂಕಾ ಫ್ಲೈಟ್ ಹತ್ತುವುದಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ.ಎರಡು ಟೆಸ್ಟ್ ಮ್ಯಾಚ್ ಗೆಲುವಿಗೆ ಎದುರು ನೋಡುತ್ತಿದೆ. ಪ್ರತಿಭಾವಂತ ಆಟಗಾರರನ್ನು ಅವರ ಸಹಜ ಕ್ರಮಾಂಕದಲ್ಲೇ ಆಡಿಸುವುದು, ಅನುಭವ ಮತ್ತು ಯುವ ಪ್ರತಿಭೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ತಂಡದ ಯಶಸ್ಸಿನ ಗುಟ್ಟುಇನ್ನು ,ಅತಂತ್ರ ಪರಿಸ್ಥಿಯಲ್ಲಿರುವ kl ರಾಹುಲ್ ಕ್ರಿಕೆಟ್ ಕ್ಯಾರಿಯರ್ ಜೊತೆ ಆಟವಾಡುತ್ತಿರುವ ಮೆನೇಜೆಮೆಂಟ್ ಉಪನಾಯಕನ ಸ್ಥಾನವನ್ನು ಕೊಟ್ಟಿದೆ. ಯಾರೇ ಕೋಚ್ ಆದರೂ ಸರಿಯಾಗಿ use ಮಾಡಿ ಕೊಳ್ಳಿ ತನ್ನ ಕ್ರಮಾಂಕದಲ್ಲೇ ಆಡುವುದಕ್ಕೆ ಸ್ವತಂತ್ರತೆ ನೀಡಿ.ಇನ್ನೇನು ICC ವಿಶ್ವ ಕಪ್ ಪ್ರಾರಂಭವಾಗಲಿದೆ .ಭಾರತೀಯ ಕ್ರಿಕೆಟ್ ಮತ್ತೆ ವಿಶ್ವದ ನಂ.1 ತಂಡದ ಮಟ್ಟವನ್ನು ತಲುಪಬೇಕಾದರೆ, ಪ್ರಯೋಗಗಳಿಗಿಂತ ಸ್ಥಿರತೆ, ಸ್ಪಷ್ಟ ಯೋಜನೆ ಮತ್ತು ಸರಿಯಾದ ತಂಡದ ಆಯ್ಕೆಯೇ ಯಶಸ್ಸಿನ ದಾರಿ.