ಶುಕ್ರವಾರ, ಫೆಬ್ರವರಿ 4, 2022

ನಾ ಬಿಡೆ ನೀ ಕೊಡೆ :ಬುದ್ದಿವಂತರ ನಾಡಲ್ಲಿ ಹೀಗೊಂದು ಹಿಜಾಬ್ ವಿವಾದ !!

ಆರು ಜನ ವಿದ್ಯಾರ್ಥಿನೀಯರಿಂದ ಇಡೀ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ! ಜಿಲ್ಲೆಯ ಹಲವು ಕಾಲೇಜಿಗೆ ಹರಡಿದ ಸ್ಕಾರ್ಫ್ ಸಂಘರ್ಷ :ಹಿಜಾಬ್ v/s ಕೇಸರಿ ಶಾಲು ! ರಾಜ್ಯಾದ್ಯಂತ ಹರಡಿದರೂ ಅಚ್ಚರಿ ಇಲ್ಲ ಈ ಸೋಂಕು ! ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಹೀಗೊಂದು ವಿವಾದ ಕೇಳಿಬರುತ್ತಿವೆ .ಆರು ಜನ ವಿದ್ಯಾರ್ಥಿನೀಯರು ಕಾಲೇಜಿನ ಆವರಣದಲ್ಲಿ ಪ್ರತಿಭಟನಾ ನಿರತರಾಗಿದ್ದೂ, ಫಲ ಕಾಣದೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ . ಇತ್ತ ಜಿಲ್ಲೆಯ ವಿವಿಧ ಕಾಲೇಜಿನಲ್ಲಿ ಸ್ಕಾರ್ಫ್ ಸಂಘರ್ಷ ಮುಗಿಲು ಮುಟ್ಟಿದೆ . ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ. ಬುದ್ದಿವಂತರ ನಾಡಿನ ಮಾನ ಹರಾಜಾಗುತ್ತಿದೆ . ಶುರುವಾಗಿದ್ದು ಆರು ವಿಧ್ಯಾರ್ಥಿನಿಯರಿಂದ ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 97 ಮುಸ್ಲಿಂ ಧರ್ಮದ ವಿದ್ಯಾರ್ಥಿನೀಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ ಅವರಿಗಿಲ್ಲದ ಈ ವರಿ ಕೇವಲ 6 ಮಂದಿಗೆ ಎಲ್ಲಿಂದ ಬಂತೋ ಗೊತ್ತಿಲ್ಲಾ . ಹಿಜಾಬ್ ಧರಿಸಿಯೇ ನಾವು ತರಗತಿ ಪ್ರವೇಶಿಸುತ್ತೇವೆ ಎಂಬ ಹಠ ,ಚಟ ! ಹಿಜಾಬ್ ಧರಿಸುವುದು ನಮ್ಮ ಹಕ್ಕು, ಧಾರ್ಮಿಕ ವಿಚಾರ ಎಂಬ ಮೊಂಡು ವಾದ !ಹೌದು ! ತಲೆಬಾಗಲೇ ಬೇಕು, ಇಸ್ಲಾಂ ಸಂಸ್ಕೃತಿಯಲ್ಲಿ ಬುರ್ಖಾ ಹಾಗೂ ಹಿಜಾಬ್ ನ್ನು ಮಹಿಳೆಯರು ಧರಿಸಬೇಕು ಹಿಜಾಬ್ ಧರಿಸವುದು ಅನಾದಿಕಾಲದಿಂದಲೂ ನಡೆದು ಕೊಂಡು ಬಂದ ಪದ್ಧತಿ.,ಹಾಗಂತ ಕೆಲವು ಸ್ಥಳಗಳಲ್ಲಿ, ಕೆಲವು ನಿಯಮಗಳು ಇದೆ, ನಿರ್ಬಂಧವೂ ಇದೆ . ಶೈಕ್ಷಣಿಕ ವ್ಯವಸ್ಥೆಯಲ್ಲಿ ,ಶಿಸ್ತು- ಶ್ರದ್ದೆಯಿಂದ ಪಾಠ ಪ್ರವಚನ ಕಲಿಯಬೇಕದ ಸ್ಥಳದಲ್ಲಿ ಇದು ಅನಾವಶ್ಯಕ . ಶಾಲಾ -ಕಾಲೇಜುಗಳ ನಿಯಮದಡಿಯಲ್ಲಿ ಅಲ್ಲಿನ ಸೂಕ್ತ ಸಮವಸ್ತ್ರ, ವಸ್ತ್ರಸಂಹಿತೆ ಪಾಲನೆ ಮಾಡ್ಬೇಕು,ಅವಲಂಭಿಸಬೇಕು. ಸಾಮಾಜಿಕ ಕ್ಷೇತ್ರದಲ್ಲಿಇದು ಅಪ್ರಸ್ತುತ. ಅಂತೂ ಸಂಪ್ರದಾಯಿಕವಾಗಿ ನಡೆಕೊಂಡು ಬರುತ್ತಿದ್ದ ಇತಿಹಾಸ ಭರಿತ ಕಾಲೇಜಿನಲ್ಲಿ ಹೊಸ ಇತಿಹಾಸ ಸ್ರಷ್ಠಿಸಲು ಹೊರಟಿದ್ದಾರೆ ಆರು ಜನ ಹಿಜಾಬ್ ಧಾರಿಣಿಗಳು .
ಕಾಲೇಜಿಗೆ ಪ್ರವೇಶವಿಲ್ಲ : ಈ ಹಿಜಾಬ್ ಧಾರಿಣಿಯರಿಗೆ ಕಾಲೇಜಿನ ಆಡಳಿತ ಮಂಡಳಿ ಸಮಜಾಯಿಸಿ ಹೇಳಿದರೂ ಪಟ್ಟು ಬಿಡದ ಆರು ಜನ ವಿದ್ಯಾರ್ಥಿನೀಯರಿಗೆ ಕಾಲೇಜಿನ ಹಿತ ದ್ರಷ್ಟಿ ಇಂದ ಪ್ರವೇಶ ನಿರಾಕರಿಸದ್ದನ್ನು ಅಲ್ಲಗಳೆಯುವಂತಿಲ್ಲ .ಪಟ್ಟು ಸಡಲಿಸದ ಇವರುಗಳಿಗೆ ಒಂದಷ್ಟು ಕುಮ್ಮಕ್ಕು ಸಿಕ್ಕಿದರ ಫಲವಾಗಿ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಿರತರಾದರು. ಸಂಧಾನ ಸಭೆಯೂ ವಿಫಲ : ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಪೋಷಕರ ಜೊತೆ ಸೇರಿ ತಜ್ಞರ ಜೊತೆ ಮಾತುಕತೆ ನಡೆಯಿಸಿ ಇಲ್ಲಿಗೆ ಇದು ಅಂತ್ಯಗೊಳ್ಳುತ್ತೇನೋ ಅನ್ನುವ ಆಶಾ ಭಾವನೆ ಇಟ್ಟುಕೊಂಡಿದ್ದರೇ ,ನಾ ಬಿಡೆ ಎನ್ನುವ ನಿಲುವನ್ನು ಹೊಂದಿರುವ ಆರು ಜನ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ . 'ನಮ್ಮ ಧರ್ಮ ಇದು ನಮ್ಮ ಹಕ್ಕು ನಾವು ಧರಿಸಿಯೇ ಧರಿಸುತ್ತೇವೆ 'ಎಂದು ಹಠ ಹಿಡಿರುವ ಇವರುಗಳು ಒಂದು ಪಕ್ಷದಲ್ಲಿ ಸರ್ಕಾರಿ ನೌಕರಿ ದೊರತರೇ ? ಪೊಲೀಸ್ ಇಲಾಖೆ ಹಾಗೂ ಮಿಲಿಟರಿ ಮತ್ತಿತ್ತರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ? ಅಲ್ಲಿ ಹಿಜಾಬ್ ಗೆ ಅಡೆ ತಡೆ ಉಂಟಾಗುವುದಿಲ್ಲವೇ ? ಅದೆಷ್ಟು ಮುಸ್ಲಿಂ ಧರ್ಮದವರು ಇಂತಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ವೇ ? ಇನ್ನೂ ಸಿನಿಮಾ ಮತ್ತಿತರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ? ಉಳಿದ ಸಹಪಾಠಿಗಳಿಗೆ ಇಲ್ಲದಿರುವ ಹಕ್ಕು ಈ ಆರು ಜನಕ್ಕೆ ಮಾತ್ರ ಸೀಮಿತವೇ ? ಇದ್ದರೂ ಇದು ಈ ಹಿಂದೆ ಹೇಳಿದಂತೆ ಶಾಲೆ ಕಾಲೇಜಿನಲ್ಲಿ ಅನ್ವಹಿಸುವುದಿಲ್ಲ , ಮೊದಲಾಗಿ ಶಾಲಾ ಕಾಲೇಜುಗಳಲ್ಲಿ ಇಂತಹ ಧಾರ್ಮಿಕ ಆಚರಣೆಗೆ ಅವಕಾಶವೇ ಇಲ್ಲಾ . ಅದರಲ್ಲೂ ಇದು ಮಹಿಳಾ ಕಾಲೇಜು ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳೆಲ್ಲಾರೂ ಮಹಿಳೆಯರೇ ಅಲ್ಲವೇ ? ಕೇವಲ ವಿಚಾರ ಹೀನ ವಿವಾದ ಮಾಡುತ್ತಿರುವ ಈ ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕಿದೆ .ಒಂದು ಪಕ್ಷದಲ್ಲಿ ಸಾಂಪ್ರಾದಾಯಿಕವಾಗಿ ನಡೆದು ಕೊಂಡು ಬಂದ ಕಾಲೇಜಿನ ನೀತಿ- ನಿಯಮ ಮುರಿದು ಇವರಿಗೆ ಅವಕಾಶ ಕೊಟ್ಟಿದ್ದೇ ಯಾದರೇ ,ಮುಂದೆ ಇದು ಬಹಳ ದೊಡ್ಡ ಗೊಂದಲ -ಗದ್ದಲಕ್ಕೆ ಕಾರಣ ಆಗದೇ ಇರದು., ಈಗಾಗಾಲೇ ಊಹಿಸಿದಂತೆ ಇನ್ನೊಂದು ಧರ್ಮದವರು ಇದಕ್ಕೆ ಪ್ರತಿರೋಧ ತರುತ್ತಿದ್ದಾರೆ . ಅಂತೆಯೇ ಜಿಲ್ಲೆಯ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜಿನ ನಿನ್ನೆ ನಡೆದ ಘಟನೆ ಬೆನ್ನಲ್ಲೇ ಮತ್ತೆ 3-4 ಕಾಲೇಜಿನ ಹಿಂದೂ ಧರ್ಮದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ,ಜೈ ಕಾರ ಹಾಕುತ್ತಾ ಕೋಮು ಸಂಘರ್ಷಕ್ಕೆ ಕಾರಣೀಭೂತರಾಗುತ್ತಿದ್ದಾರೆ. ಏನು ಅರಿಯದ ಮುಗ್ದ ಮಕ್ಕಳಲ್ಲಿ ಮತೀಯತೆಯ ವಿಷ ಬೀಜ ಬಿತ್ತುವ ಕಾರ್ಯ ರೂಪು ಗೊಳ್ಳುತ್ತಿದೆ . ನಾಡಿನ ,ನಾಳಿನ ದೇಶದ ಸಮತೋಲನ ವ್ಯವಸ್ಥೆಗೆ ಶಿಕ್ಷಣ ಮುಖ್ಯ. ಶಿಕ್ಷಣ ಸಂಸ್ಥೆಯಲ್ಲಿ ನಾವೆಲ್ಲರೂ ಒಂದು ಎಂದು ಉತ್ತಮ ನಡವಳಿಕೆ ಪಾಠ ಕಲಿತು ಆ ಮಕ್ಕಳು ಮುಂದಿನ ಪ್ರಜೆಯಾಗಿ ನಿಲ್ಲುವಲ್ಲಿ ಸಹಕಾರಿಯಾಗ ಬೇಕು ಆದರೆ ಇಲ್ಲಿ ನಡಿಯುತ್ತಿರುವ ವಿಚಾರವಾದರೂ ಏನು ? ಕೋಮು ಸೌಹಾರ್ದತೆಗೆ ದಕ್ಕೆ ತರುತ್ತಿದೆ. ಆ ಆರು ವಿದ್ಯಾರ್ಥಿನೀಯರು ಎಲ್ಲಿ ಸೂಕ್ತವೋ ಅಲ್ಲಿ ಅಲ್ಲಿಗೆ ಹೊಗಲಿ ಅದನ್ನು ಬಿಟ್ಟು ಗೊಂದಲವನ್ನು ಸ್ರಷ್ಟಿ ಮಾಡುವುದು ಸರಿ ಅಲ್ಲ, ಆರು ವಿದ್ಯಾರ್ಥಿಗಳಿಂದ ಇಡೀ ಕಾಲೇಜಿನ ಭವಿಷ್ಯ ಹಾಳಾಗುತ್ತಿದೆ. ಶೈಕ್ಷಣಿಕವಾಗಿ ವರ್ಷದಿಂದ ವರ್ಷಕ್ಕೆ ಪ್ರಥಮ ದ್ವೀತಿಯ ಸ್ಥಾನದಲ್ಲಿ ಕಂಗೊಳಿಸುತ್ತಿದ್ದ ಬುದ್ಧಿವಂತರ ಜಿಲ್ಲೆ ಉಡುಪಿ, ಇಂತವರಿಂದ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕೆಟ್ಟ ರೀತಿಯಲ್ಲಿ ಸುದ್ದಿಯಾಗುವಂತಾಯಿತು .