ಮತ್ತೆ ರಾಜ್ಯಾದ್ಯಾಂತ
ಉಡುಪಿ ಶ್ರೀ ಕ್ರಷ್ಣ ಮಠ
ಸುದ್ದಿಯಾಗುತ್ತಿದೆ. ಹಲವಾರು ಬಾರಿ
ವಿಚಾರಹೀನ ವಿವಾದಕ್ಕೆ ಎಡೆಯಾಗುತ್ತಿದ್ದ ಮಠ , ಈ ಬಾರಿಯೂ ಅಷ್ಟೇ . ಜಾತಿ ಪಂಕ್ತಿ ಭೇಧವೆಂಬ ನೆಪ ಒಡ್ಡಿ ಭಂಟ ಸಮುದಾಯವನ್ನು ಎತ್ತಿ
ಕಟ್ಟಲಾಗುತ್ತಿದೆ ಎಂಬದು ಪ್ರಜ್ಞಾವಂತರ ನುಡಿ.
ಊಟಕ್ಕೆ(ಅನ್ನಪ್ರಸಾದ ) ಕೂತ ಸಂದರ್ಭ ದಲ್ಲಿ ''ನೀನು ಯಾವ ಜಾತಿ ಯಾವ ಮಠ , ಕುಲ, ಗೋತ್ರ''
ಎಂಬೀ ಪ್ರಶ್ನೆ ಗಳನ್ನೂ ಒಡ್ಡಿ , ನನ್ನನ್ನು ಬೋಜನ ಶಾಲೆಯಿಂದ ಹೊರಹಾಕಿದ್ದಾರೆ ಇದರಿಂದ ಅವಮಾನಿತಳಾಗಿದ್ದೇನೆ .. ಎಂದು
ಪ್ರತಿಭಟನೆಗೆ ಧುಮುಕಿದ ಹಾಗೂ ಜಾತಿ ಎಂಬ ಪ್ರಶ್ನೆ ಯನ್ನು ಒತ್ತಿ ಹಿಡಿದು ಭಂಟ ಸಮುದಾಯವನ್ನು
ಮಠಕ್ಕೆ ವಿರೋಧ ಕಟ್ಟಿ ಕೊಳ್ಳುವಲ್ಲಿ
ಸಫಲತೆಯನ್ನು ಸಾಧಿಸುವಲ್ಲಿ ಶ್ರಮಿಸುತ್ತಿರುವ , ವಸಂತಿ ಮೇಡಂ ರವರಿಗೆ
, ತಾವು ಒಬ್ಬ ಉಪನ್ಯಾಸಕಿ ಆಗಿ
ಅಲ್ಲಿನ ಸ್ಥಳೀಯ ನಿವಾಸಿಯಾಗಿ ತಮಗೆ ಅಲ್ಲಿನ ನೀತಿ ನಡವಳಿಕೆಗಳು ಗೊತ್ತಿಲ್ಲದೇ ಇರುವುದು
ಸೋಜಿಗವೇ ಸರಿ!
ಪಂಕ್ತಿ ಭೇದ ಎನ್ನುವುದು
ಎಲ್ಲೆಡೆ ನಡೆಯುತ್ತಿದೆ ಅದು ಮೊದಲಿಂದಲೂ ನೆಡೆದು ಕೊಂಡು ಬಂದ ರೀತಿ .. ಬ್ರಹ್ಮಣರಿಗೆ ,
ವಿಐಪಿ ಗಳಿಗೆ ಪಂಕ್ತಿ ಗಳಿರುತ್ತವೆ .. ನಂತರ ಇತರರಿಗೆ
ನಡೆಯಲ್ಪಡುವುದು ತಲೆ -ತಲಾತಂತರ ದಿಂದ ಬಂದ
ಪದ್ಧತಿ. ಮೊನ್ನೆ ಇಲ್ಲಿ ಆಗಿದ್ದು ಅಷ್ಟೇ ಗೊತ್ತಿದ್ದೂ ,ಗೊತ್ತಿಲ್ಲದೆಯೋ
ಬ್ರಾಹ್ಮಣ ರ ಪಂಕ್ತಿಯಲ್ಲಿ ತಾನು
ಕೂತಿದ್ದಲ್ಲದೇ ಮಠದ ಮೇಲೆ ಬೆರಳು ಮಾಡಿ
ತೋರಿಸುತ್ತಿರುವ ಇವರ ವಿರುದ್ಧವೇ ಪ್ರತಿಭಟನೆ ಯಾಗಬೇಕ್ಕಿತ್ತು/ ಆಗಬೇಕು. ಸ್ವತಃ ವಸಂತಿ ಶೆಟ್ಟಿ
ಯವರೇ ಕ್ಷಮೆ ಕೇಳಬೇಕು .
ಇಲ್ಲಿ ಕೇವಲ ವಸಂತಿ
ಶೆಟ್ಟಿ ಎಂಬ ಉಪನ್ಯಾಸಕಿ ಮಾತಿಗೆ ಮಣೆ ಹಾಕಲಾಗುತ್ತಿದೇಯೆ ವಿನಾ: ಸತ್ಯ ವಿಚಾರ ಯಾರಿಗೂ
ಗೊತ್ತಿಲ್ಲ. ಎಲ್ಲರೂ ಮಠದ ವಿರುದ್ಧವೇ ಧ್ವನಿ ಎತ್ತಿದ್ದಾರೆ , 'ಅನ್ನ ಬ್ರಹ್ಮ' ಎಂದು ನಾಮಾಕಿ೦ತ ಗೊಂಡಿರುವ ಶ್ರೀ
ಕ್ರಷ್ಣ ಮಠ ದಲ್ಲಿ ಇದುವರೆಗೂ ಇಂಥ ಒಂದು ವಿವಾದ
ಸ್ರಷ್ಟಿಯಾಗಿಲ್ಲ . ಸಾವಿರಾರು ಭಕ್ತಾಧಿಗಳು , ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಂದಲೇ ದಿನನಿತ್ಯ ಅನ್ನ ಪ್ರಸಾದವನ್ನು
ಸ್ವಿಕರಿಸುತ್ತಿದ್ದೂ , ಈ ವಿವಾದ
ಹಲವರಲ್ಲಿ ಬೇಸರ ಸ್ರಷ್ಟಿ ಮಾಡಿದೆ ..ಮದ್ವಾಚಾರ್ಯರ ಕಾಲದಿಂದಲೂ ಕರಾವಳಿ ಯಲ್ಲಿ ಇರುವ ದೊಡ್ಡ
ಸಮುದಾಯವಾದ ಭಂಟ ರಿಂದ ಸಹಾಯ ಹಸ್ತವೂ ಸೇರಿದಂತೆ ಏನೋ ಒಂದು ರೀತಿ ಅವಿನಾಭಾವ ಸಂಭಂದ ಇದೆ .
ಇದನ್ನು ಹಾಳು ಗೆಡವಲು ಹೆಣೆದ ಕುತಂತ್ರ ಎಂಬುದು ಹಲವರ ವಾದ .
