ಅದು ಮಾರ್ಚ್ 9 ಆದಿನ ಪ್ರಾಯಶ : ಕ್ರೀಡಾ ಪ್ರೇಮಿಗಳಿಗೆ ಬ್ಲಾಕ್ ಫ್ರೈಡೆ ಆಗಿತ್ತು .ಶಾಲಾ-ಕಾಲೇಜ್ ,ಕಚೇರಿ -ಸಂಸ್ಥೆ ಗಳಲ್ಲಿ ,ಅಂಗಡಿ -ಹೋಟೆಲ್ ಗಳಲ್ಲಿ ,ಬಸ್ -ರೇಲ್ವೆ ನಿಲ್ದಾಣ ಸೇರಿದಂತೆ ಇನ್ನು ಮುಂದಾದ ಕಡೆ ,ಗಲ್ಲಿ -ಗಲ್ಲಿ ಗಳಲ್ಲಿ ಗುಲ್ಲೆಬಿಸುತ್ತಿದ್ದವು ,ಗೋಡೆ ಕುಸಿತಕ್ಕೆ ಕಾರಣ ಯಾರು ? ಎಂಬ ಹೆತ್ತು -ಹಲವು ವಿಚಾರ ಎಲ್ಲೇ ಮೀರಿ ಚರ್ಚಿತ ವಾಗುತ್ತಿದ್ದವು..ಹೌದು ವಿಶ್ವ ಕಾಣದ ಅದ್ಭುತ ಆಟಗಾರ ಕ್ರೀಕೆಟ್ (ಬೌಲಿಂಗ್ ಹೊರತು ಪಡಿಸಿ ) ಕ್ರಿಕೆಟ್ ಎಲ್ಲಾ ವಿಭಾಗದಲ್ಲಿ ಮಿಂದೆದ್ದ ,ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ರಾಹುಲ್ ದ್ರಾವಿಡ್ ,ಭಾರತದ ಕ್ರಿಕೆಟ್ ಗೋಡೆ ಎಂದೇ ಜನಪ್ರಿಯತೆಯನ್ನು ಪಡೆದವರು .ಹಲವಾರು ದಾಖಲೆಯನ್ನು ಇತಿಹಾಸದ ಪುಟಕ್ಕೆ ಸೇರಿಸಿದ್ದ ಕ್ರಿಕೆಟ್ ಕಾಣದ ಅದ್ಭುತ ಕಲಾತ್ಮಕ ಆಟಗಾರ , ಹಲವು ಸಮಯದ ಹಿಂದೆ ಏಕ ದಿನ ಪಂದ್ಯಕ್ಕೆ ವಿದಾಯ ಹೇಳಲಿದ್ದ ದ್ರಾವಿಡ್ ಹೀಗೆ ಏಕ ಎಕಿ ಟೆಸ್ಟ್ ಪಂದ್ಯಕ್ಕೂ ಮೊನ್ನೆ ವಿದಾಯ ಹೇಳಿರುದು ನಿಜಕ್ಕೂ ಕ್ರೀಡಾ ಪ್ರೇಮಿಗಳಿಗೆ ,ಅಭಿಮಾನಿಗಳೇ ಅರಗಿಸಿಕೊಳ್ಳಲಾಗದ ನೋವಿನೋಲೆಯೇ ದಾವಾಗ್ನಿ ಆಗಿದೆ .

ಇಂದಲ್ಲದಿದ್ದರೂ ನಾಳೆ ಯಂತು ವಿದಾಯ ಹೇಳಲೇ ಬೇಕು ಆದರೆ ಇನ್ನು ಬಹಳಷ್ಟು ಕ್ರಿಕೆಟ್ ಸೇವೆಯನ್ನು ಭಾರತ ತನ್ನ ತೆಕ್ಕೆಗೆ ಹಾಕಿ ಕೊಳ್ಳ ಬೇಕಿತ್ತು ..ಇಷ್ಟು ಬೇಗ ಈ ಸಮಯ ಸಂಧರ್ಬ ಸೂಕ್ತ ವಿರಲಿಲ್ಲ ಎನ್ನುವ ಅಭಿವ್ಯಕ್ತಿ ,ಅಭಿಮಾನಿ ,ಕ್ರೀಡಾ ಪ್ರೇಮಿಗಳು ಸೇರಿದಂತೆ ,ಬಹುತೇಕ ಕ್ರೀಡಾ ಪಂಡಿತರ ,ದೊಡ್ಡ ಆಟಗಾರರ ದ್ದು. ಇನ್ನಷ್ಟು ಪಂಧ್ಯವನ್ನು ಆಡುವ ತವಕ-ತುಡಿತ ಅವ್ರ ಮನಸ್ಸಿನಲ್ಲಿ ತೊಳಲಾದುಟ್ಟಿರುದು ಅವರು ಬೆಂಗ ಳೂರಿನಲ್ಲಿ ನಡೆಸಿದ ವಿದಾಯ ಪತ್ರಿಕಾಗೋಷ್ಠಿಯಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು .ಇಲ್ಲಿ ಕಾಣದ ಕೈಗಳು ಕೆಲಸ ಮಾಡಿದೆ ಎನ್ನುದು ಹಲವರ ಉಹಾ-ಪೋಹ .ಇಲ್ಲ ಆವರ ಕೊನೆಯ ಇಂಗ್ಲೆಂಡ್ ಪಂದ್ಯದಲ್ಲಿ ವಿಫಲರಾದ ಕಾರಣವೇ?,ಅಥವಾ ದೋನಿ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹಿರಿಯ ಆಟಗಾರರನ್ನು ಬೆಂಬಲಿಸದೇ ಇರುದು ಕಾರಣವೇ ? ಗೊತ್ತಿಲ್ಲ ಒಟ್ಟಾರೆ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದು ಬಿಟ್ಟಿದ್ದಾರೆ .ಇವರು ಸಿಡಿಸಿದ 36 ಶತಕಗಳಲ್ಲಿ 32 ಬರಿ ಭಾರತ ಜಯ ಗಳಿಸಿದೆ .ಟೆಸ್ಟ್ ಆಡುವ ಎಲ್ಲ 10 ದೇಶಗಳ ವಿರುದ್ಧ ಶತಕಗೊಲಿಸಿರ್ವ ಏಕೈಕ ಆಟಗಾರ

ಎಕದಿನ ಕ್ರಿಕೆಟ್ ನಲ್ಲಿ ಗಂಗೂಲಿ ಜೊತೆ ಗೂಡಿ 318 ರನ್ ಕಲೆಹಾಕಿದ್ದು ನಂತರ ತೆಂಡೂಲ್ಕರ್ ಜೊತೆ 331 ರನ್ ಪೇರಿಸಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. 1996 ರಲ್ಲಿ ಲಾರ್ಡ್ಸ್ ನಲ್ಲಿ ಮೊದಲ ಟೆಸ್ಟ್ ಆಡಿದ ದ್ರಾವಿಡ್ ನಂತರ 164 ಟೆಸ್ಟ್ ಗಳಲ್ಲಿ ಐತಿಹಾಸಿಕ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.ಆಸ್ಟ್ರೇಲಿಯಾ ಸರಣಿ 2012 ಹೊರತು ಪಡಿಸಿದರೆ ದ್ರಾವಿಡ್ , ಟೆಸ್ಟ್ ಕ್ರಿಕೆಟ್ ನಲ್ಲಿ ಸೋತಿದ್ದು ಕಮ್ಮಿ. ಆನೇಕ ಬಾರಿ ಎಲ್ಲಾ ಬ್ಯಾಟ್ಸ್ ಮನ್ ಗಳು ಕೈ ಕೊಟ್ಟಾಗ ಗೋಡೆ ರೀತಿ ನಿಂತು ಇನ್ನಿಂಗ್ಸ್ ಬೆಳೆಸುವ ರೀತಿ ಅನುಕರಣೀಯ.1996ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಕ್ರಿಕೆಟ್ಗೆ ಪಾದಾರ್ಪಣೆಗೈದ ಬಳಿಕ 164 ಟೆಸ್ಟ್ ಪಂದ್ಯಗಳನ್ನು ಆಡಿರುವ ದ್ರಾವಿಡ್, 52.31ರ ಸರಾಸರಿಯಲ್ಲಿ 13,288 ರನ್ಗಳನ್ನು ಗಳಿಸಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್(15470) ಬಳಿಕ ಎರಡನೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ.‘ಗ್ರೇಟ್ವಾಲ್’ ಎಂದೇ ಖ್ಯಾತರಾಗಿರುವ ದ್ರಾವಿಡ್ ಬ್ಯಾಟಿಂಗ್ನಲ್ಲಿ ಮಾತ್ರವಲ್ಲ ಫೀಲ್ಡಿಂಗ್ನಲ್ಲಿ ವಿಶ್ವ ದಾಖಲೆ ಮೆರೆದಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಒಟ್ಟು 210 ಕ್ಯಾಚ್ಗಳನ್ನು ಪಡೆದಿರುವ ದ್ರಾವಿಡ್ ಹೊಸ ದಾಖಲೆಯನ್ನು

ಬರೆದಿದ್ದಾರೆ.ಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೆ ಅತಿ ಹೆಚ್ಚು ರನ್ ಬಾರಿಸಿರುವ ರಾಹುಲ್ ದ್ರಾವಿಡ್ .ಗುಡ್ ಬೈ ಹೇಳಿರುದು ಭಾರತದ ಕ್ರಿಕೆಟ್ ತಂಡಕ್ಕೆ ತುಂಬಲಾರದ ನಷ್ಟ ವೇ ಸರಿ ..