ಭಾನುವಾರ, ಮೇ 27, 2018

ಸಕಲ ಕಲಾ ವಲ್ಲಭ ;ಮುಸ್ತಾಕ್ ಹೆನ್ನಾಬೈಲ್


ಧರ್ಮಕ್ಕೂ ತೊಡಕಾಗದ ಅಪೂರೂಪದ ಅರಳುತ್ತಿರುವ ಬಹುಮುಖ ವ್ಯಕ್ತಿತ್ವ



ಯಕ್ಷಗಾನ ಕರ್ನಾಟಕ ಕರಾವಳಿಯ ಗಂಡುಕಲೆ .ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯಲ್ಲಿ ಇತ್ತೀಚೆಗೆ ಸ್ತ್ರೀಯರು ಪ್ರವೇಶ ಮಾಡಿ ಮಿಂಚುತ್ತಿದ್ದಾರೆ. ಇನ್ನೂ ಸಂತೋಷದ ವಿಚಾರವೆಂದರೆ ಅನ್ಯ ಧರ್ಮೀಯರ ಪ್ರವೇಶ. ಜಬ್ಬಾರ್ ಸಮೋ ಈ ಹೆಸರು ಕೇಳಿದಾಕ್ಷಣ ತಾಳಮದ್ದಲೆ ಪ್ರೇಕ್ಷಕರಿಗೆ ಏನೋ ರೋಮಾಂಚನ,ಜಬ್ಬಾರರಂತೆ ಈ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲ ,ಈಗಷ್ಟೇ ಅಂಬೆಗಾಲಿಡುತ್ತಿರುವ ವಿನೂತನ ಪ್ರತಿಭೆ ಮುಸ್ತಾಕ್ ಹೆನ್ನಾಬೈಲ್.

ಅರಣ್ಯ ಇಲಾಖೆ ಸಿಬ್ಬಂದಿಯಾದ ಅಬ್ದುಲ್ ಹಮೀದ್ ಮತ್ತು ರಹಿಮುನ್ನಿಸಾ ದಂಪತಿಗಳ ಪುತ್ರರಾಗಿ ಕುಂದಾಪುರ ತಾಲೂಕು ಸಿದ್ಧಾಪುರ ಗಾೃಮದ ಹೆನ್ನಾಬೆೈಲುವಿನಲ್ಲಿ ಅಕ್ಟೋಬರ್ 26 ,1978 ರಲ್ಲಿ ಮುಸ್ತಾಕರು ಹುಟ್ಟಿದರು.ಪ್ರಾಥಮಿಕ ಶಿಕ್ಷಣವನ್ನು ಹೆನ್ನಾಬೆೈಲು,ಪ್ರೌಢ ಶಿಕ್ಷಣವನ್ನು ಹೊಸಂಗಡಿ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಶಂಕರನಾರಾಯಣದಲ್ಲಿ ಪೊರೆೈಸಿದರು.

ಮುಸ್ತಾಕರದು ಬಹುಮುಖ ಪ್ರತಿಭೆ.

ಹವ್ಯಾಸಿ ತಾಳಮದ್ದಲೆಯ ಅರ್ಥಧಾರಿ,ವೇಷಧಾರಿ.. ಆರ್ಕೆಸ್ಟ್ರಾ ಗಾಯಕ..ಸೊಗಸಾದ ಕಾರ್ಯಕ್ರಮ ನಿರೂಪಕ ..ಮೋಡಿ ಮಾಡುವ ಭಾಷಣಕಾರ..ಉತ್ತಮ ಬರಹಗಾರ , ರೋಟರಿಯಂತಹ ಅಂತರಾಷ್ಟ್ರೀಯ ಮಟ್ಟದ ಸಮಾಜ ಸೇವಾ ಸಂಘಟನೆಗಳಲಿ ಸಕ್ರಿಯರಾಗಿರುವ ಕ್ರಿಯಾಶೀಲ ವ್ಯಕ್ತಿತ್ವದವರು.
ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳ ಆಳವಾದ ಜ್ಞಾನದ ಜೊತೆಗೆ ಹಿಂದೂ ಮಹಾಕಾವ್ಯಗಳಾದ ರಾಮಾಯಣ ,ಮಹಾಭಾರತ ,ಭಗವದ್ಗೀತೆ,ವೇದ ಉಪನಿಷತ್ತುಗಳ ಮೇಲೆ ಅರ್ಥ ವ್ಯಾಖ್ಯಾನ ಕೊಡಬಲ್ಲ ಆಕರ್ಷಕ ವಾಗ್ಮಿ....ತಾಳಮದ್ದಲೆ ಕ್ಷೇತ್ರಕ್ಕೆ ಇತ್ತೀಚೆಗಷ್ಟೇ ಪಾದಾರ್ಪಣೆ ಮಾಡಿದರೂ ,ಮಾಡಿದ ಎಲ್ಲಾ ಪಾತ್ರಗಳು ಜನಮನ್ನಣೆಗಳಿಸಿ
ರಂಗದಲ್ಲಿಯೂ ಮೋಡಿಯ ಮಾತಿನಿಂದ ಖ್ಯಾತಿಗಳಿಸುತ್ತಿದ್ದಾರೆ.....ಸತ್ಯ ಹರಿಶ್ಚಂದ್ರ ಪ್ರಸಂಗದ 'ವಿಶ್ವಾಮಿತ್ರ', ಗದಾಯುದ್ಧದ 'ಸಂಜಯ'ಭೀಷ್ಮ ವಿಜಯದ 'ಬ್ರಾಹ್ಮಣ',ಇಂದ್ರಜಿತು ಕಾಳಗದ 'ವಿಭೀಷಣ' ಶ್ರೀ ಕೃಷ್ಣ ಪರಂಧಾಮದ 'ಜರ' ಮುಂತಾದ ಪಾತ್ರಗಳಲ್ಲಿ ತನ್ನ ಅಭಿನಯ,ಮಾತುಗಾರಿಕೆ,ವಿಶೇಷ ಶೆೈಲಿಯ ಪ್ರಸ್ತುತಿಯ ಜೊತೆಗೆ ಸಾಮಾಜಿಕ ಸಾಮರಸ್ಯ ಸಾರುವಲ್ಲಿ ಮತ್ತು ಕಲೆ ಧರ್ಮಾತೀತವಾದುದು ಎನ್ನುವುದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಬಿಡುವಿಲ್ಲದ ವೃತ್ತಿ ಜೀವನದ ನಡುವೆಯೂ ಹವ್ಯಾಸಿಯಾಗಿ ಹಲವಾರು ಇತರ ರಂಗಗಳಂತೆ ಯಕ್ಷರಂಗ ವನ್ನೂ ಆಯ್ದುಕೊಂಡ ಮುಸ್ತಾಕರು ವೃತ್ತಿಯಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿರುವವರು ..
ವಿಶ್ವದ ಪ್ರಮುಖ ಚಿನ್ನಾಭರಣ ಸಂಸ್ಥೆಯಾದಂತಹ ಚೆಮ್ಮನೂರು ಜ್ಯುವೆಲರ್ಸ್ನಲ್ಲಿ ಮತ್ತು ಭಾರತದ ಪ್ರಖ್ಯಾತ ಮುಕೇಶ ಅಂಬಾನಿಯವರ ರಿಲಾಯನ್ಸ್‌ ಸಂಸ್ಥೆಗಳಲ್ಲಿ ಸರಿಸುಮಾರು 18 ವರ್ಷ ಸೇವೆ ಸಲ್ಲಿಸಿ ಇದೀಗ Rsj Gold ಎನ್ನುವ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ ....ಯಕ್ಷಗಾನ ರಂಗದ ತನ್ನ ಪಯಣದಲ್ಲಿ ಈ ರಂಗಕ್ಕೆ ತನ್ನನ್ನು ಪರಿಚಯಿಸಿದ ಸಿದ್ಧಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ।ಜಗದೀಶ ಶೆಟ್ಟಿಯವರನ್ನು ಸದಾ ಸ್ಮರಿಸುತ್ತಾರೆ.
ರಂಗದ ನಡೆಗಳ ಜೊತೆಗೆ ಪಾತ್ರಕ್ಕೆ ಬೇಕಾದ ಪೌರಾಣಿಕ ಜ್ಞಾನ ಮತ್ತು ಸ್ಫೂರ್ತಿಯನ್ನು ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ಹಾಗೂ ತನ್ನ ಗುರುಗಳಾದಂತಹ ಶ್ರೀ ಧನಂಜಯ ಚಾತ್ರ ಹಳ್ಳಿಹೊಳೆ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ...ಜೊತೆಗೆ ಕಮಲಶಿಲೆ ಮೇಳದ ಪ್ರಸಿದ್ಧ ಭಾಗವತ ಶ್ರೀ ಗಣೇಶ ಕುಮಾರ್ ಹೆಬಿೃ ಮತ್ತು ಮಿತ್ರ ಹಾಗೂ ಕಲಾವಿದ ಶ್ರೀ ಸತೀಶ ಮೂಡುಬಗೆಯವರ ಸಹಕಾರವನ್ನು ನೆನಪಿಸುತ್ತಾರೆ...ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿಯನ್ನುೂ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮುಸ್ತಾಕರು ಕಲೆಯ ಮೂಲಕ ಜ್ಞಾನ ಪ್ರಸರಣ ಮಾತ್ರವಲ್ಲದೆ ಸೌಹಾರ್ದತೆ ಮೂಡುವುದರ ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕೆಂಬ ಉನ್ನತ ಆಶಯವನ್ನು ಹೊಂದಿರುವವರು...

http://vknews.in/335976/