ಗುರುವಾರ, ಡಿಸೆಂಬರ್ 17, 2020

ಕೊಡಚಾದ್ರಿಗೆ ಕೊಡಲಿ ?

ದೈವೀ ನಿಷ್ಠ ಪ್ರಕ್ರತಿ ಸೌಂದರ್ಯದ ಪಶ್ಚಿಮ ಘಟ್ಟದ ಕೊಡಚಾದ್ರಿಗೆ ಸದ್ದಿಲ್ಲದೇ ಕೊಡಲಿಯೇಟು ಹಾಕುವ ಹುನ್ನಾರ ರೂಪುಗೊಂಡಿದೆ . ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಾನ . ಆಧ್ಯಾತ್ಮಿಕ ಕ್ಷೇತ್ರ ಕೊಡಚಾದ್ರಿ ಶಿಖರಕ್ಕೆ ಇತ್ತೀಚಿಗೆ ಘನ ಸರ್ಕಾರ ಪ್ರವಾಸೋದ್ಯಮದ ಅಡಿಯಲ್ಲಿ ರೋಪ್ ವೇ (ಕೇಬಲ್ ಕಾರ್ ) ನಿರ್ಮಿಸುವ ಯೋಜನೆಯನ್ನು ಜಾರಿಗೆ ತಂದಿದ್ದೂ,ತೀವ್ರ ಆಕ್ಷೇಪ ,ಆಕ್ರೋಶಕ್ಕೆ ಗುರಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಂತಿರುವ ಸರ್ಕಾರವು ಈ ಅನೀತಿ ಯಿಂದ ಹೊರಬರಬೇಕಾಗಿದೆ ಪ್ರಕ್ರತಿ ಸಂಪತ್ತಿನ ನೈಜ ಸೌಂದರ್ಯದಿಂದ ಕಂಗೊಳಿಸುವ ಕೊಡಚಾದ್ರಿ ಪರ್ವತವನ್ನು ಕೇವಲ ಟ್ರಕ್ಕಿಂಗ್ ಗಾಗಿ ಅವಲಂಬಿಸದೇ ಚಾರಣಿಗರಿಗಿಂತ ಅಧಿಕ ಪ್ರಮಾಣದಲ್ಲಿ ಆಸ್ತಿಕರು ಅಪ್ಪಿಕೊಂಡಿದ್ದಾರೆ,ಒಪ್ಪಿಕೊಂಡಿದ್ದಾರೆ . ಕೊಡಚಾದ್ರಿ ಕರ್ನಾಟಕದ ಎರಡನೇ ಅತೀ ದೊಡ್ಡ ಪರ್ವತವಾಗಿದೆ.
ಚಿಕ್ಕ ಮಗಳೂರಿನ ಮುಳ್ಳೆಯನಗಿರಿಯನ್ನು ಹೊರತು ಪಡಿಸಿದರೇ ಕೊಡಚಾದ್ರಿಗೆ ಎರಡನೇ ಸ್ಥಾನ .ಕೊಡಚಾದ್ರಿ ಪ್ರವಾಸಿ ತಾಣವಲ್ಲ ಧಾರ್ಮಿಕ ನೆಲೆಬೀಡು .ಪ್ರವಾಸಿಗರಿಗಿಂತ ಧಾರ್ಮಿಕತೆಯನ್ನು ಮೇಳೈಸಿ ಕೊಂಡು ಬರುವ ಭಕ್ತ ಮಹಾಶಯರ ಸಂಖ್ಯೆಯೇ ಅಧಿಕ. ಕೊಡಚಾದ್ರಿ ಕೊಲ್ಲೂರಿನಿಂದ ೨೧ ಕೀಮಿ ದೂರದಲ್ಲಿದೆ ಸಮುದ್ರ ಮಟ್ಟದಿಂದ ಸುಮಾರು ೧೪೦೦ ಮೀ ಎತ್ತರವನ್ನು ಹೊಂದಿದೆ. ದೇವಿ ಮೂಕಾಂಬಿಕೆಯ ಆದಿ ಕ್ಷೇತ್ರ . ಶ್ರೀ ದೇವಿ ಕ್ರೂರ ರಾಕ್ಷಸ ಮೂಕಾಸುರನನ್ನು ವಧಿಸಿದ ಸ್ಥಳ . ಸೌಪರ್ಣಿಕಾ ನದಿಯ ಉಗಮ ಸ್ಥಾನ. ಆದಿ ಶಂಕರಾಚಾರ್ಯರು ತಪೋಗೈದ ಪುಣ್ಯ ಭೂಮಿ . ಸರ್ವಜ್ಞ ಪೀಠ ,ಗಣೇಶ ಗುಹಾಲಯವನ್ನು ಹೊಂದಿರುವ ದಿವ್ಯ ನೆಲೆ. ಎಲ್ಲಾಕ್ಕಿಂತ ಹೆಚ್ಚಾಗಿ ನಿಸರ್ಗ ಸುಂದರ ಭೂ ಲೋಕದ ಅಪ್ಸರೆ ಈ ಕೊಡಚಾದ್ರಿ !ಉಡುಪಿ ಜಿಲ್ಲೆಗೆ ಪ್ರಥಮ ರೋಪ್ ವೇ ಹಾಗೂ ಪ್ರವಾಸೋದ್ಯಮಕ್ಕೆ ಇಲ್ಲಿಗೆ ಹೆಚ್ಚಿನ ಬಲ ಬಂದರೂ, ಪಶ್ಚಿಮ ಘಟ್ಟದ ಕಣಜ ಕೊಡಚಾದ್ರಿ ಪರಿಸರಕ್ಕೆ ಹಾಗೂ ಶ್ರದ್ಧಾಭಕ್ತಿಯ ಕೇಂದ್ರ ವಾಗಿರುವ ಇಲ್ಲಿಗೆ ಇದು ಪೂರಕವಾಗಿಲ್ಲ .
ಇಲ್ಲಿ ರೂಪ್ ವೇ ಪ್ರಾರಂಭ ಮಾಡಿದ್ದೇಯಾದರೇ ಇದು ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ಕೇಂದ್ರವಾಗಿ ರೂಪು ಗೊಳ್ಳುತ್ತದೆ. ಮೋಜು -ಮಸ್ತಿಗೆ ದಾರಿ ಮಾಡಿಕೊಡುವುದರೊಂದಿಗೆ ಧಾರ್ಮಿಕ ಕ್ಷೇತ್ರವನ್ನು ಹಾಳುಗೆಡುವಂತಾಗುತ್ತದೆ . ಸರ್ಕಾರಕ್ಕೆ ಅಭಿವೃದ್ಧಿಪಡಿಸುವ ಆಲೋಚನೆ ಇದ್ದರೇ, ಕಡಿದಾದ ರಸ್ತೆ ದುರ್ಗಮ ಹಾದಿಯನ್ನು ದುರಸ್ತಿ ಗೊಳಿಸಲಿ ಕೊಲ್ಲೂರು ಕ್ಷೇತ್ರಕ್ಕೆ ಆಗಬಹುದಾದ ಸಾಕಷ್ಟು ಕಾಮಗಾರಿಗೆ ದ್ರಷ್ಟಿ ನೆಟ್ಟಬಹುದು ಅದನ್ನೆಲ್ಲವನ್ನು ಬದಿಗಿರಿಸಿ ,ಈ ರೋಪ್ ವೇ ಯೋಚನೆಗೆ ಮುಂದಾಗಿರುವುದು ನಿಜಕ್ಕೂ ಆಸಮಂಜಸ. ಪ್ರಕೃತಿಗೆ ಮಾರಕವಾಗಿರುವ ಈ ವ್ಯವಸ್ಥೆಯಲ್ಲಿ ಪ್ರಕ್ರತಿ ಮಾತೆಯೇ ಧರೆಗೆ ಇಳಿದಿರುವ ಕೊಡಚಾದ್ರಿಯಲ್ಲಿರುವ ಅರಣ್ಯ ನಾಶವಾಗುತ್ತದೆ., ಪ್ರಾಣಿ- ಪಕ್ಷಿ ಸಂಕುಲ ,ಕಣ್ಮರೆಯಾಗುತ್ತದೆ . ಅಪಾರ ಅಪರೂಪದ ಔಷಧೀಯ ಸಸ್ಯ ಸಂಪತ್ತು ಬರಿದಾಗುತ್ತದೆ . ಆಧ್ಯಾತ್ಮಿಕ ಕ್ಷೇತ್ರಕ್ಕೆ ದಕ್ಕೆ ಉಂಟಾಗುತ್ತದೆ . ಇವೆಲ್ಲವೂ ಒತ್ತಿಟ್ಟಿಗಿರಲಿ ,ಮಡಿಕೇರಿಯ ಘಟನೆಯನ್ನು ಒಮ್ಮೆ ಮನದಲ್ಲಿ ಇಳಿಸಿಕೊಂಡರೆ ಸಾಕು ಇತ್ತೀಚಿಗೆ ನಡೆದ ಅಂತಹ ಅಪಾಯಕಾರಿ ಘಟನೆ ಮರುಕಳಿಸಬಾರದು ಎಂದಾದರೇ ಈ ಯೋಜನೆಯಿಂದ ಹಿಂದೆ ಸರಿಯಬೇಕಾಗಿದೆ . ರಕ್ಷಿತಾರಣ್ಯದಲ್ಲಿರುವ ಪ್ರಾಚೀನ ವೃಕ್ಷಗಳು, ಜೀವ ವೈವಿಧ್ಯತೆ ಉಳಿಸಲು ಈ ಯೋಜನೆ ವಿರುದ್ಧ ಸಾಕಷ್ಟು ಮನಸ್ಸುಗಳು ವಿರೋಧ ವ್ಯಕ್ತ ಪಡಿಸುತ್ತಿದೆ ಸುತ್ತರ್ಯವೂ ಹೌದು. ಬ್ರಹತ್ ಗಾತ್ರದ ಟವರ್ ,ಪಿಲ್ಲರ್ ,ಬೀಮ್ ನಿರ್ಮಿಸಲು ಸಾಕಷ್ಟು ಪ್ರಮಾಣದ ಅರಣ್ಯ ನಾಶ ವಾಗುವುದರ ಜೊತೆಗೆ ಪುಣ್ಯ ದಿವ್ಯ ಕ್ಷೇತ್ರದ ಘನತೆಗೆ ಕುಂದು ಉಂಟಾಗುತ್ತದೆ . ಕೊಡಚಾದ್ರಿಯನ್ನು ಉಳಿಸಬೇಕು ,ಉಳಿಸಿಕೊಳ್ಳಲು ಹೋರಾಡಬೇಕಿದೆ. ಬೇಡಿಕೆಗೆ ಬೆದರದೇ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದೆಯಾದರೇ ಮೂಕಾಂಬಿಕೆ ಮುನಿಯದೇ ಇರಲಾರಳು ಅನಾಹುತ ನಡೆಯುದಕ್ಕಿಂತ ಮೊದಲು ಈ ಯೋಜನೆ ಯಿಂದ ಹಿಂದೆ ಸರಿಯುವುದೇ ಲೇಸು !