ಉಪ್ಪು ತಿಂದವರು ನೀರು ಕುಡಿಯಲೇ ಬೇಕು
3 ವರ್ಷಗಳ ಕಾಲ ರಾಜ್ಯ ಮುಖ್ಯಮಂತ್ರಿಯಾಗಿ ಕರ್ನಾಟಕದ ಜನತೆಗೆ ಬಾಯಲ್ಲಿ .ಧೀಮಂತ ನಾಯಕನಾಗಿ, ಹೋರಾಟಗಾರನಾಗಿ ಹೆಸರು ಗಳಿಸಿದ್ದ ಮಾಜಿ ಮುಖ್ಯಮಂತ್ರಿ ಬಿ .ಎಸ್ .ಯೆಡಿಯೂರಪ್ಪ ಜೈಲು ಸೇರಿದ್ದಾರೆ .
3 ವರ್ಷಗಳ ಕಾಲ ರಾಜ್ಯ ಮುಖ್ಯಮಂತ್ರಿಯಾಗಿ ಕರ್ನಾಟಕದ ಜನತೆಗೆ ಬಾಯಲ್ಲಿ .ಧೀಮಂತ ನಾಯಕನಾಗಿ, ಹೋರಾಟಗಾರನಾಗಿ ಹೆಸರು ಗಳಿಸಿದ್ದ ಮಾಜಿ ಮುಖ್ಯಮಂತ್ರಿ ಬಿ .ಎಸ್ .ಯೆಡಿಯೂರಪ್ಪ ಜೈಲು ಸೇರಿದ್ದಾರೆ .
ಕರ್ನಾಟಕ ರಾಜ್ಯದಲ್ಲಿ ಯೇ ಇದು ಪ್ರಥಮ ವೇನೋ ವೆಂಬಂತೆ ಈ ಘಟನೆ ಬಿಟ್ಟಿತು . ಒಬ್ಬ ಮಾಜಿ ಮುಖ್ಯ ಮಂತ್ರಿ ಜೈಲು ಸೇರಿರುದು ಇದು ಮೊದಲನೇ ಬಾರಿ.. ಉತ್ತಮ ಆಡಳಿತಗಾರನಾಗಿ ಯಾರೂ ಇದುವರಗೆ ಮಾಡದಿದ್ದ 0ತಹ ಒಂದು ಸಕ್ರಿಯ ರಾಜ್ಯ ಕಾರಣಿ ಯಾಗಿ , ಒಂದಿರುಳಿನಲ್ಲಿ ಸ್ವಲ್ಪೂ ಕೂರದೇ ರಾಜ್ಯಾದ್ಯಂತ ಉದ್ಗಾಟನೆ ಇಂದ ಹಿಡಿದು ,ಯಾವದೇ ಒಂದು ಕಾರ್ಯ ಕ್ರಮ ಇದ್ದರೂ ಹಾಜರಾಗುತ್ತಿದ್ದರು ..ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದರು .
ವಿರೋದ ಪಕ್ಷಗಳ ಕಿರುಕುಳಗಳ ನಡುವೆಯೂ ದಿಟ್ಟ ತನದಿಂದ ೩ ವರ್ಷಗಳ ಕಾಲರಾಜ್ಯವನ್ನು ಆಳಿದರು. ಜೆ .ಡಿ.ಎಸ್ . ಮತ್ತು ಬಿ .ಜೆ.ಪಿ ಮೈತ್ರಿ ಸರ್ಕಾರ ವಿದ್ದಾಗ ಕೊನೆ ಗಳಿಗೆ ಯಲ್ಲಿ ಕುಮಾರಸ್ವಾಮಿ ಮಾಡಿದ ವಚನ ಬ್ರಷ್ಟತೆ ಇಂದ ಕಂಗಲಾದರೂ , ಮತದಾರರ ಸಿಂಪತಿ ಮೇರೆಗೆ ಸ್ವತಂತ್ರ್ಯ ವಾಗಿ ಬಿ .ಜೆ.ಪಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ದಲ್ಲಿ ಸರ್ಕಾರವನ್ನು ನೆಡೆಸುವಂತಾಯಿತು.ರೈತರ ಮೇಲೆ ಪ್ರಮಾಣವಚನವನ್ನು ಮಾಡಿದ ಯೆಡ್ಡಿ, ಉತ್ತಮವಾಗಿ ರಾಜ್ಯವನ್ನು ನಿಭಾಯಿಸಿದರು , ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಹೆಸರು ಕಂಡುಬಂದ ಸಂದರ್ಭದಲ್ಲಿ ರಾಜೀನಾಮೆ ನೀಡಲು ಹಠಮಾರಿತನ ತೋರಿದ್ದರು.
ನಂತರ ವರಿಷ್ಠರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವ ಹಂತದಲ್ಲಿಯೂ ಸಾಕಷ್ಟು ಆಟವಾಡಿದ್ದರು.ನಂತರ ತಾವು ನಂಬಿರುವ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರು ತಿಳಿಸಿದ ಮುಹೂರ್ತದಲ್ಲಿ ರಾಜೀನಾಮೆ ಒಗಾಯಿಸಿ, ಎಲ್ಲರೂ ನಿರಾಳರಾಗುವಂತೆ ಮಾಡಿದ್ದರು.
.ರಾಜ್ಯದಲ್ಲಿ ಇದುವರೆಗೆ ಬಂದ ಎಲ್ಲ ರಾಜಕಾರಣಿಗಳು ಸಂಪತ್ತನ್ನು ಮಾಡಿದ್ದವರೇ ..ಆದರೆ ವೆಂಕಟಾಚಲ ಮತ್ತು ಸಂತೋಷ್ ಹೆಗ್ಡೆ ಬಂದ ನಂತರ ಲೋಕಾಯುಕ್ತ ಎನ್ನುವ ಹುದ್ದೆಗೆ ಜೀವ ಬಂದಿತ್ತು ಮತ್ತು ತತ್ವ ,ಸತ್ವ ಕಾರ್ಯರೂಪಕ್ಕೂ ಬಂತು ..ಈ ನಿಟ್ಟಿನಲ್ಲಿ ಯೆಡ್ಡಿ ಅವರ ಕಪಿಮುಸ್ಟಿ ಗೆ ಸಿಕ್ಕಿ ಒದ್ದಾಡಿದರು ಮತ್ತು ಶರಣಾದರು .. ಅ. 14- 2011 : ಸರಿಯಾಗಿ ಸಂಜೆ 4.45ಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಲೋಕಾಯುಕ್ತ ವಿಶೇಷ ನ್ಯಾಯಾಧೀಶರೆದಿರು ಶರಣಾಗತರಾದರು .
ಮೂರು ವರ್ಷಗಳ ಸರ್ವಾಧಿಕಾರಿಯಂತೆ ಬಿಂದಾಸ್ ಆಗಿ ರಾಜ್ಯಭಾರ ಮಾಡಿದ್ದ ಯಡಿಯೂರಪ್ಪ ಸಾಮಾನ್ಯ ಕೈದಿಯಂತೆ ಪರಪ್ಪನ ಅಗ್ರಹಾರ ಸೇರಿರುದರಿಂದ ರಾಜ್ಯಾದ್ಯಂತ ಎಂದು ಕಾಣದ ರೀತಿ ಯಲ್ಲಿ ಗಲ್ಲಿ -ಗಲ್ಲಿ ಗುಲ್ಲೆಬ್ಬೀತು .. ಕರ್ನಾಟಕ ರಾಜ್ಯದ ಇತಿಹಾಸದ ಪುಟದಲ್ಲಿ
ದಾಖಲಾಗುವಂತೆ ಮಾಡಿತು ಏನೆ ಇರಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಅಲ್ಲವೇ ? ಉಪ್ಪು ತಿಂದ ಮೇಲೆ ನೀರು ಕುಡಿಯಲಿ ಅನ್ನೋಣ ...
- ಶಿವಕುಮಾರ್ ,







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ