ಭಾನುವಾರ, ನವೆಂಬರ್ 13, 2011

ಅಡ್ವಾಣಿ ಯಾತ್ರೆ ಸ್ವಾಗತಾರ್ಹ ?!


                                           ಅಡ್ವಾಣಿ ಯಾತ್ರೆ ಸ್ವಾಗತಾರ್ಹ ?! 

84 ಹರೆಯದ ಬಿ ,ಜೆ .ಪಿ ರಾಷ್ಟ್ರಧ್ಯಕ್ಷ ಎಲ್ .ಕೆ ಅಡ್ವಾಣಿ ೩೮ ದಿನಗಳ ಕಾಲ ದೇಶಾದ್ಯಂತ ಸುಮಾರು 75೦೦ ಕಿ .ಮಿ ಸಂಚಾರದ ಮುಖೇನ ಮೌಲ್ಯ ಧರಿತ ರಾಜಕಾರಣಕ್ಕಾಗಿ ,ಸ್ವಚ್ಹ ಆಡಳಿತ ಬ್ರಷ್ಟ ಮುಕ್ತ ಪಾರದರ್ಶಕ ಆಡಳಿತ ಕ್ಕಾಗಿ ಜನ ಚೇತನ ಯಾತ್ರೆ ಯನ್ನು ಕೈ ಗೊಂಡರು .1952 ರಿಂದ ನಡೆದ ಎಲ್ಲ ಬಿ .ಜೆ .ಪಿ ಚುನಾವಣೆಯಲ್ಲಿ ಕೆಲಸ ನಿರ್ವಹಿಸಿದ ಸಕ್ರಿಯ ಕಾರ್ಯಕರ್ತ,ಬಿ ಜೆ .ಪಿ ಯಾ ಬೆನ್ನೆಲುಬು ಆಗಿದ್ದ ಆಡ್ವಾಣಿ ಯಾ ತುರಂತ್ ಯಾತ್ರೆಗೆ ದೇಶಾದ್ಯಂತ ಜನತಾ ಪಾರ್ಟಿಗೆ ಒಂದಷ್ಟು ಸಾಥ್,ಉತ್ಶದ ಅಲೆ ಸಿಕ್ಕಿದರೆಇನ್ನು ಹಲವೆಡೆ ತಣ್ಣೀರ್ಎರಚಿದಂತಾಗಿದೆ . ಕಪ್ಪು ಭಾವುಟ ಪ್ರದರ್ಶನ ಉಂಟಾಗಿದೆ .ಅಡ್ವಾಣಿ ಯಾತ್ರೆ ಯು. ಪಿ. .ಸರ್ಕಾರದ ವಿರುದ್ದ ಹೋರಾಟ ವೆಂಬ ಹಣೆಪಟ್ಟಿ ಯಲ್ಲಿದ್ದರೂ, ಯಾರೇ ಆಗಲಿ, ಉಪಯೋಗ ವಿಲ್ಲದೆ ಯಾವುದೇ ಕಾರ್ಯಕ್ಕೂ ಕೈ ಹಾಕುದಿಲ್ಲ .. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ವನ್ನು ಪೂರ್ಣ ಗೊಳಿಸಲು ಅಡ್ವಾಣಿ ಸ್ಚೆಚ್ ಎಂದು ರಾಜಕೀಯ ಪಂಡಿತ ಅಭಿವ್ಯಕ್ತಿ ..ಮುಂದೊಂದು ದಿನ ಜನತಾ ಪಾರ್ಟಿ ಬಹುಮತ ಪಡೆದಲ್ಲಿ ಪ್ರಧಾನ ಮಂತ್ರಿ ಹುದ್ದೆಯನ್ನು ಸದ್ದಿಲ್ಲದೇ ಏರುವಲ್ಲಿ ಯಾತ್ರೆ ಕೊಂಚ ಉಪಕಾರಿ ಯಾಗಬಹುದು ಎನ್ನುವ ಲೆಕ್ಕಚಾರವೋ ಗೊತ್ತಿಲ್ಲ ,ಒಟ್ಟಾರೆ ಒಂದಷ್ಟು ಕಹಿ -ಒಂದಷ್ಟು ಸಿಹಿ ಯೊಂದಿಗೆ ಮುಕ್ತಾಯ ಗೊಳಿಸಿದೆ .ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಜನತಾ ಪಾರ್ಟಿ ಸರ್ಕಾರ ಸೆಟ್ಟೇರಿದ್ದು ಕರ್ನಾಟಕದಲ್ಲಿ .ಬಹುನಿರೀಕ್ಷೆಯ ಆಡಳಿತ ಪಕ್ಷದಲ್ಲಿ ಮುಸುಕಿನಲ್ಲಿ ಹಗೆ -ಹೋಗೆ ಮುಗಿಲು ಮುಟ್ಟುತ್ತಿತ್ತು,
 ಬ್ರಷ್ಟಾಚಾರ ಮುಕ್ತ ರಾಜಕೀಯಕ್ಕಾಗಿ ಯಾತ್ರೆ ಕೈ ಗೊಂಡಿರುವ ಅಡ್ವಾಣಿ ಇಲ್ಲಿ ಅದರ ವಿರುದ್ದಾರ್ಥಕ ರೀತಿಯ ಸಮಾಜದ ಸಮತೋಲನ ಕೈ ಕೊಟ್ಟಿತ್ತು ..ವಿರೋದ ಪಕ್ಷಗಳ ಅಟ್ಟಹಾಸ ಒಂದೆಡೆಯಾದರೆ , ಕರ್ನಾಟಕದಲ್ಲಿ ಸರ್ಕಾರವನ್ನು ಕಟ್ಟಿ ಬೆಳೆಸಿದ್ದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಇತರ ಕೆಲ ಶಾಶಕ ,ಸಚಿವರು ಜೈಲು ಸೇರಿಕೊಂಡಿದ್ದರು ..ಒಳೊಳಗೆ ಬಣಬಣ ಗಳ ನಡುವೆ ಗುದ್ದಾಟ .. ಇಂಥಹ ತುಡಿತ -ಮಿಡಿತ ಗಳ ನಡುವೆ ಅಡ್ವಾಣಿಯ ಕರ್ನಾಟ ಯಾತ್ರೆ ಅಷ್ಟೊಂದು ಸಂತೋಷವನ್ನು ತರದಿದ್ದರೂ ,ಬಂದ ಕಾರ್ಯವನ್ನು ನೆಮ್ಮದಿ ಇಂದ ಮುಗಿಸಿ ತೆರಳಿದರು. ಏನೆ ಇರಲಿ ಅಡ್ವಾಣಿ ಯಾತ್ರೆಗೆ ಕೆಲೆವಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ . ಯಾತ್ರೆ ಅವಶ್ಯಕತೆ ಇತ್ತೇ ? ಇದು ಸ್ವಾಗತಾರ್ಹವೇ ? ಗೊತ್ತಿಲ್ಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ