ನಕ್ಸಲ್ ನಿಗ್ರಹ ದಳದ “ಯಾನೆ” ಸಾವಿನ ಸುತ್ತ ಅನುಮಾನದ ಹುತ್ತ ..
ಅ-08-2011 ಶನಿವಾರ ಮಧ್ಯರಾತ್ರಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯ ಭೀಕರ ಗುಂಡಿನ ಕಾಳಗ ನಡೆದಿದ್ದು ನಕ್ಸಲ್ ನಿಗ್ರಹ ಪಡೆ ಯಾನೆ ಗುಂಡಿಗೆ ಬಲಿಯಾದರು ಎಂದು ರಾಜ್ಯದ್ಯಾದಂತ ಪ್ರಚಲಿತ ಗೊಂಡಿತು ಮತ್ತು ಅವರ ಡೆಡ್ ಬಾಡಿ ಯನ್ನು ಅವರು ವಾಸವಾಗಿದ್ದ ಬೆಂಗಳೊರಿನ ಕೋರಮಂಗಲ ಪೋಲಿಸ್ ಕ್ವಾಟ್ರಸ್ ನಲ್ಲಿ ತರಲಾಗಿತ್ತು ..ಸಕಲ ಗೌರವ -ಸನ್ಮನದೊಂದಿಗೆ ಶವ ಸಂಸ್ಕಾರ ಮಾಡಲಾಯ್ತು .ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಕಾನ್ಸ್ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು.ಮಾನೆ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಬೆಂಗಳೂರಿನ ಕೆಎಸ್ಆರ್ ಪಿ ತುಕಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾನೆ, ಸ್ವಇಚ್ಛೆಯಿಂದ ಇತ್ತಿಚೆಗಷ್ಟೇ ನಕ್ಸಲ್ ನಿಗ್ರಹ ಪಡೆ ಸೇರಿಕೊಂಡಿದ್ದರು. ಪ್ರಕರಣದ ಹಿನ್ನಲೆ ಬಹಳಷ್ಟು ಅನುಮಾನ ಎಡೆಮಾಡಿ ಕೊಟ್ಟಿತ್ತು .
![]() |
| ಚಿತ್ರ -ಸಂಗ್ರಹ |
ಸ್ಥಳಿಯರ ಮತ್ತು ಕೆಲ ಮಾಧ್ಯಮದವರ ಸಕ್ರಿಯ ತನಿಖ ವರದಿ-ಕ್ರಮದಿಂದ ದಿನ್ಕೊಂಡು ರೀತಿಯಲ್ಲಿ ಹೋಗೆ ಯಾದುತ್ತಿದೆ.ಸವಣಾಳು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ನೆರವಿನೊಂದಿಗೆ ಮಧ್ಯರಾತ್ರಿಯಿಂದಲೇ ಕೋಂಬಿಂಗ್ ಆಪರೇಶನ್ ಶುರು ಹಚ್ಚಿಕೊಂಡಿದ್ದರು. ಇದನ್ನರಿತ ನಕ್ಸಲರು ಪ್ರತಿ ದಾಳಿ ನಡೆಸಿದಾಗ ಪೇದೆ ಮಾನೆ ಸಾವಿಗೀಡಾಗಿದ್ದಾರೆ. ಇನ್ನೂ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎಂಬುದು ಪ್ರಾಥಮಿಕ ವರದಿಯಾಗಿತ್ತು .ಆದರೆ ಘಟನಾ ಸ್ಥಳ ಮತ್ತು ಪರಿಸರದ ಜನತೆಯ ಹೇಳಿಕೆಯಂತೆ ಇಷ್ಟು ವರ್ಷದಲ್ಲಿ ಈ ಭಾಗದಲ್ಲಿ ಯಾವುದೇ ನಕ್ಸಲ್ ಚಟುವಟಿಕೆಗಳಾಗಲಿ ಕುರುಹುಗಳಾಗಲಿ ಪತ್ತೆಯಾಗಿರುವುದಿಲ್ಲ. ಹಾಗಿರುವಾಗ ಇಲ್ಲಿ ನಕ್ಸಲೀಯರು ಇಲ್ಲಿ ಬಂದಿರುವ ಸಾಧ್ಯತೆ ವಿರಳವಾಗಿದೆ. ಅಲ್ಲದೆ ಪೇದೆ ಎಂ.ಎಸ್. ಮಾನೆಯವರ ಬೆನ್ನಿಗೆ ಗುಂಡು ತಾಗಿರುವುದು. ಗುಂಡು ಒಳಹೊಕ್ಕ ಜಾಗದಲ್ಲಿ 6.5 ಸೆಂ.ಮೀ ಗಾಯವಾಗಿರುವುದು, ಮೂರು ಬೆರಳು ತೂರಿಸುವಷ್ಟು ಆಳವಾದ ಗಾಯವಾಗಿರುವುದು ಇದು ಶಿಕಾರಿಗಳ ಗುಂಡಿಗೆ ಬಲಿಯಾಗಿದ್ದಲ್ಲ ಎಂದು ಸ್ಪಷ್ಟಪಡಿಸುತ್ತದೆ.ಗುಂಡು ದೇಹದೊಳಗೆ ಹೊರಹೋಗದೇ ಇರುವುದು ಮತ್ತು ನಾಪತ್ತೆಯಾಗಿರುವುದು ಮೊದಲಾದ ಘಟನೆಗಳನ್ನು ನೋಡುವಾಗ ಈ ಘಟನೆಯ ಬಗ್ಗೆ ಸಾಕಷ್ಟು ಅನುಮಾನಗಳು ಕಂಡು ಬರುತ್ತಿದೆ. ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳ ಅಭಿವ್ಯಕ್ತಿ .ಯಾನೆ ಮೃತ ಪಟ್ಟಿರುದು ಸಹವರ್ತಿ ಪೊಲೀಸರ ಗುಂಡಿನಿಂದಲೇ , ಎಂಬುದು ವೈದ್ಯರ ಪ್ರಾಥಮಿಕ ವರದಿ ಇಂದ ತಿಳಿದು ಬಂದಿತ್ತು .ಆದ್ರೆ ಕ್ರಮೇಣ ವರದಿ ಒಂದ್ಚೂರು ಬದಲಿಸಲಯ್ತು ,ನಕ್ಸಲ್ ಪಡೆಗೆ ಗುಂಡಿನ ಮಳೆ ಗರೆಯುತ್ತಿದ್ದ ಸಂದರ್ಭ ,ರಾತ್ರಿ ಸಮಯ ಅದು ಕಾಡಿನ ಮದ್ಯ ಉಂಟಾದ ಸಂಘರ್ಷದಿಂದ ಯಾನೆಯ ಗುಂಡು ಹತ್ತಿರದ ಮರಕ್ಕೆ ಹೊಡೆದು ವಾಪಸು ಯಾನೆಗೆ ತಾಕಿದೆ .ಇದರಿಂದ ಸ್ಥಳದಲ್ಲಿಯೇ ಯಾನೆ ಕೊನೆಯುಸಿರು ಎಳೆದರು ಎನ್ನುದು ಇನ್ನೊಂದು ಕಥೆಯ ಸ್ವರಹಸ್ಯ .ಈ ಕಥೆಯನ್ನೆಲ್ಲವನ್ನು ಅಲ್ಲ ಗಳೆಯುತ್ತ ಬಂದಿರುವ ಪ್ರಜ್ನ ವನ್ತರಿಗೆ ಇಲಾಖೆ ಮತ್ತೊಂದು ಕಥೆಯನ್ನು ಹೆಣೆದಿದೆ. ಎಎನ್ಎಫ್ ಪೊಲೀಸರು ಮಂಜಲ ಕಾಡಿನಲ್ಲಿ ಕೊಬಿಂಗ್ ನಿರತರಾಗಿರುವ ಸಂದರ್ಭ ಆ ಪ್ರದೇಶದಲ್ಲಿ ಮುಳ್ಳು ಹಂದಿ ಹಿಡಿಯಲು ಶಿಕಾರಿ ತಂಡ ಬಂದಿತ್ತು ಬಿಲದೊಳಗಿರುವ ಹಂದಿಯನ್ನು ಹೊರತೆಗೆಯುವ ಉದ್ದೇಶ ಬೇಟೆ ಗರರದಾಗಿತ್ತು.ಅವರ ಜೊತೆ ಇದ್ದ ನಾಯಿ ಬೊಗಳಿದಾಗ ಪೊಲೀಸರು ಗುಂಡು ಹಾರಿಸಿದರು.ಆಗ ನಾಯಿ ಓಡಿತ್ತು .ಶಿಕಾರಿಗೆ ಬಂದವರು ಪೊಲೀಸರತ್ತ ಟಾರ್ಚಲೈಟ್ ಹಾಕಿದ್ದಾರೆ .ಅವರನ್ನೇ ನಕ್ಸಲರೆಂದು ತಿಳಿದು ಪೊಲೀಸರು ಗುಂಡು ಹಾರಿಸಿದರು ,ಎಂದು ಪೊಲೀಸರು ಹೇಳುತ್ತಿರುವ ಕಥೆ ಘಟನೆ ನಡೆದ ಪರಿಸರದಲ್ಲಿ ಖಾಲಿ ವಿಸ್ಕಿ ಬಾಕ್ಸ್ ಗಳು ಲಬಿಸಿದೆ .ಪೊಲೀಸರು ಪಾನಮತ್ತರಾಗಿ ದ್ದು ಅವರುಗಳ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿರಬಹುದು ಎಂದು ಸ್ಥಳಿಯರು ಅನುಮಾನ ವ್ಯಕ್ತ ಪಡಿಸುತ್ತಾರೆ . ಒಟ್ಟಾರೆ ಯಾನೆ ಸಾವಿನ ಸುತ್ತ ಅನುಮಾನದ ಹುತ್ತ ಆವರಿಸಿದೆ .ತಿಳಿದೆಯೋ ತಿಳಿದೋ ಈ ನಡೆಯ ಬಾರದ ಘಟನೆ ನಡೆದು ಹೋಗಿದೆ ..ಇದು ಮರುಕಳಿಸದಿರಲಿ ಎನ್ನೋಣ ಅಲ್ಲವೇ ???
* ಶಿವಕುಮಾರ್ ಹೊಸಂಗಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ