ಕ್ರಿಕೆಟ್ ದೇವರು ಎಂದೇ ಪ್ರಖ್ಯಾತಿ ಪಡೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರ ಕ್ರಿಕೆಟ್ ಜೀವನದಲ್ಲಿ ಇರುವ ದಾಖಲೆ ಒಂದೆರಡಲ್ಲ ,ಯಾರು ಇದುವರಗೆ ಮಾಡದ ,ಮಾಡಲು ಅಸಾಧ್ಯವಾಗಿರುವ ದಾಖಲೆಗನ್ನು ಅದಾಗಲೇ ಇತಿಹಾಸ ಪುಟಕ್ಕೆ ಸೇರಿಸಿ ಬಿಟ್ಟಿದ್ದಾರೆ.ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ .. ಆದರೆ ಒಂದೇ ಒಂದು ಕೊರತೆ ಅವರಲ್ಲಿ,ಅಭಿಮಾನಿಗಳಲ್ಲಿ ಇತ್ತು ಅದು 100 ಶತಕವನ್ನು , ಪೂರ್ಣ ಗೊಳಿಸುದು.ಟೆಸ್ಟ್ ಮತ್ತು ಒನ್ ಡೇ ಪಂದ್ಯಾಟದಲ್ಲಿ 99 ಶತಕ ಗಳನ್ನೂ ಪೂರ್ಣ ಗೊಳಿಸಿ ,ಕೇವಲ ಒಂದೇ ಒಂದು ಶತಕಕ್ಕಾಗಿ 1 ವರ್ಷ ಕಾಯಬೇಕಾಯ್ತು .ಅದು ಮೊನ್ನೆ 16 -03 -2012 , 4 :36 ರ ಶುಭ ಕ್ಷಣದಲ್ಲಿ ಪೂರ್ಣ ಗೊಳ್ಳುವಂತಆಯ್ತು. ಅಂತೂ ಎಲ್ಲ ದಾಖಲೆಗಲ್ಲಿ ತನ್ನ ಹೆಸರನ್ನು ಅಗ್ರವಾಗಿಸಿದ್ದಾರೆ.
ಯಾರ ,ಯಾರ ವಿರುದ್ಧ ಎಷ್ಟು ಶತಕವನ್ನು ದಾಖಲಿಸಿದ್ದಾರೆ ನೋಡೋಣ :
ವಿರುದ್ದ ಟೆಸ್ಟ್ ಏಕದಿನ ಒಟ್ಟು ಆಷ್ಟ್ರೇಲಿಯಾ 11 09 20
ಶ್ರೀ ಲಂಕಾ 09 08 17
ದಕ್ಷಿಣ ಆಫ್ರಿಕ 07 05 12
ಇಂಗ್ಲೆಂಡ್ 07 02 09
ನ್ಯೂಜಿಲ್ಯಾಂಡ್ 04 05 09
ಜಿ೦ಬಾಬೆ 03 05 08
ವೆಸ್ಟ್ ಇಂಡಿಸ್ 03 04 07
ಪಾಕಿಸ್ಥಾನ 02 05 07
ಬಾಂಗ್ಲಾ ದೇಶ 05 01 06
ಕಿನ್ಯ - 04 04
ನಮಿಬಿಯ - 01 01
ಒಟ್ಟು 51 49 100




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ