ಬುಧವಾರ, ಮಾರ್ಚ್ 11, 2026

ಅವಮಾನಿಸಿದವರೇ ಮಾಡಿದರು ಸನ್ಮಾನ ! ಅಂಜದೇ ಸಾಧನೆಗೈದ ಸಂಜು !!

ಎಸ್ !ಅಂತೂ ಎಲ್ಲರ ನಿರಿಕ್ಷೆಯಂತೆ ಮ್ಯಾನ್ ಇನ್ ಬ್ಲೂ ಹುಡುಗರು ಪ್ರತಿಷ್ಠಿತ ಟಿ ಟ್ವೆಂಟಿ 2026ರ ಕ್ರಿಕೆಟ್ ವಿಶ್ವ ಕಪ್ ನ್ನು ಗೆದ್ದು ವಿಶ್ವ ಚಾಂಪಿಯನ್ ಆಗಿ ಮತ್ತೊಮ್ಮೆ ಹೊರಹೊಮ್ಮಿದ್ದಾರೆ . ಎರಡು ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್ ಪಂದ್ಯಾಟವು ಪ್ರಾರಂಭಿಕ ಪಂದ್ಯ ಧೋನಿ ನೇತೃತ್ವದಲ್ಲಿ 2007ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಮೂಡಿಗೆರೆಸಿಕೊಂಡಿತು. ಸಾಕಷ್ಟು ವಿರಾಮದ ಬಳಿಕ ಇಂಡಿಯನ್ ಟೀಮ್ 2024ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮತ್ತೆ ಕಪ್ ಗೆ ಮುತ್ತಿಕ್ಕಿತ್ತು . ಇದೀಗ ಗೆದ್ದು ಬೀಗಿ ಸತತ ಎರಡು ಬಾರಿ ಒಟ್ಟು ಮೂರು ಬಾರಿ ವಿಶ್ವಕಪ್ ಗೆದ್ದ ತಂಡವಾಗಿ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿ ಕೊಂಡಿದೆ. ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಇರುವಷ್ಟು ಅತ್ತ್ಯುತ್ತಮ ಆಟಗಾರರು ಬೇರೆಯಲ್ಲೂ ಸಿಗಲಿಕ್ಕೆ ಇಲ್ಲ ಒಬ್ಬರಿಗಿಂತ ಒಬ್ಬರು ಬಲಿಷ್ಠರು ಇಂತಹ ಪ್ಲೇಯರ್ಗಳನ್ನು ಅರಸಿ ಆರಿಸಿ ಆಯ್ಕೆ ಮಾಡೋದು ಸುಲಭದ ಮಾತು ಅಲ್ಲವೇ ಅಲ್ಲ ಅದೊಂದು ದೊಡ್ಡ ಸವಾಲು !. ಈ ಬಾರಿ ಹದಿನೈದು ಸದಸ್ಯರುಳ್ಳ ಒಳ್ಳೆಯ ಟೀಮನ್ನು ಆಡಳಿತ ಮಂಡಳಿ ಸೆಲೆಕ್ಟ್ ಮಾಡಿದಾಗಲೇ ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದರು ಈ ಬಾರಿ ಕಪ್ ಇಂಡಿಯಾದ ಮಡಿಲಿಗೆ ಎಂದು.ಅಂತೆಯೇ ಗ್ರೂಪ್ ಹಂತದಲ್ಲಿ ಒಂದು ಪಂದ್ಯ ಸೋತಿದ್ದು ಹೊರತು ಪಡಿಸಿದರೇ ಮತ್ತೆಲ್ಲವೂ ಗೆಲುವಿನ ಪತಾಕೆಯನ್ನು ಹಾರಿಸಿದ್ದೆವು .ಇದೆಲ್ಲವನ್ನೂ ಒತ್ತಿಟ್ಟಿಗಿಟ್ಟು ಬೊಟ್ಟು ಮಾಡಿ ಹೇಳಬಯಸಿದ್ದು ನಮ್ಮ ಸಂಜು ಸ್ಯಾಮ್ಸನ್ ಬಗ್ಗೆ ವಿಕೆಟ್ ಕೀಪರ್ ಕಮ್ ಓಪನಿಂಗ್ ಬ್ಯಾಟರ್ ಆಗಿರುವ ಕೇರಳದ ಮೂಲದ ಸಂಜು ICC ಟ್ರೊಫಿಯಲ್ಲಿ ಆತನ ಬ್ಯಾಟ್ ನಿಂದ ರನ್ ನಿರೀಕ್ಷಿಸಲು ಸಾಧ್ಯವಿಲ್ಲ ಈತ ಕೇವಲ ಐಪಿಎಲ್ ಪ್ಲೇಯರ್ ಎಂಬ ಕುಹಕದ ಮಾತುಗಳು ಕೇಳಿ ಬರುತ್ತಿತ್ತು. ದುರಾದೃಷ್ಟವೇಬಂತೆ ಆತನ ಬ್ಯಾಟ್ ನಿಂದ ರನ್ ಕೂಡಾ ಹರಿಯುತ್ತಿರಲಿಲ್ಲ. ಮೊದಲೇ ಮೇನೇಜ್ಮೆಂಟ್ ರಾಜಕೀಯ ,ಆಯ್ಕೆಯ ಒತ್ತಡ... ಈತನ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುತ್ತಿತ್ತು . ಫಲಶ್ರುತಿ ಎಂಬಂತೆ ಸಾಕಷ್ಟು ಸೀರೀಸ್ ನಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸೋಶಿಯಲ್ ಮೀಡಿಯಾವು ಸಂಜು ಪರವಾಗಿ ಆಯ್ಕೆಯ ಪ್ರಕ್ರಿಯೆಗೆ ಮ್ಯಾನೇಜ್ಮೆಂಟ್ ಗೆ ಚಾಟಿ ಬೀಸುತ್ತಿದ್ದವು.ಅದೇನೋ 2024 ರ ಟಿ20 ವಿಶ್ವಕಪ್ 15ರ ಬಳಗದಲ್ಲಿ ಸ್ಥಾನ ಪಡೆದಿದ್ದರೂ ಲಾಸ್ಟ್ ವರೆಗೆ ಬೆಂಚ್ ಬಿಸಿ ಮಾಡುವ ಕಾಯಕ ಮಾತ್ರ ಈತನದಾಗಿತ್ತು. ಒಂದೇ ಒಂದು ಮ್ಯಾಚ್ ನಲ್ಲಿ ಚಾನ್ಸ್ ಸಿಗಲೇ ಇಲ್ಲ .
ತದನಂತರ ಕೆಲವೊಂದು ಸೀರಿಸ್ ನಲ್ಲಿ ಸ್ಥಾನ ಸಿಕ್ಕರೂ,ಕಳಪೆ ಪ್ರದರ್ಶನ ದಿಂದ ಹೊರಗೆ ಉಳಿಯಬೇಕಾಯಿತು.ಅಂತೂ 2026ರಲ್ಲಿ ಸೆಲೆಕ್ಟ್ ಆಗಿದ್ದೆ ರೋಚಕ ! ಹದಿನೈದು ಸದಸ್ಯರ ಟೀಮ್ ನಲ್ಲಿ ಇಬ್ಬರು ಕೀಪರ್ಸ್ ಗಳನ್ನ ಸೇರಿಸಿ ಕೊಳ್ಳುವ ಅವಕಾಶದಲ್ಲಿ ಮೊದಲಿಗೆ ಇಶಾನ್ ಕಿಶನ್ ಹೆಸರು ಕೇಳಿಬಂದಿತ್ತು ಯಾಕೆಂದರೆ ಇತ್ತೀಚಿಗೆ ನಡೆದ ಸೈಯದ್ ಮುಸ್ತಾಕ್ ಆಲಿ ಹಾಗೂ ರಣಜಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವುದರಿಂದ ಕಣ್ಣು ಮುಚ್ಚಿ ಸೆಲೆಕ್ಟ್ ಮಾಡಲಾಗಿತ್ತು . ಇನ್ನು ಹಿರಿಯ ಅನುಭವಿ ಆಟಗಾರ 31ರ ಹರೆಯದ ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿಗೆ ಉತ್ತಮ ಲಯ ಕಂಡು ಕೊಳ್ಳುತ್ತಿರುವ ಜಿತೇಶ್ ಶರ್ಮ ನಡುವೆ ಪೈಪೋಟಿ ಯಲ್ಲಿ ಕೊನೆಗೆ ಸಂಜು ಸ್ಥಾನ ಗಿಟ್ಟಿಸಿ ಕೊಳ್ಳುವಲ್ಲಿ ಸಫಲತೆಯನ್ನು ಸಾಧಿಸಿದ್ದರು . ಸಂಜುವಿನ ಅದೃಷ್ಟ ಪುನಹ ಕೈ ಕೊಡುತ್ತಿತ್ತು ಗ್ರೂಪ್ ಹಂತದ ಎರಡೆರಡು ಪಂದ್ಯದಲ್ಲಿ ಒಂದಂಕಿ ಸುತ್ತಿ ಪೆವಿಲಿಯನ್ ಸೇರುತ್ತಿದ್ದು ಅಭಿಮಾನಿಗಳಿಗೆ ಬಾರಿ ನಿರಾಸೆ ಜೊತೆಗೆ ಕೋಚ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಟಿ20 ವಿಶ್ವ ರ್ಯಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಅಭಿಷೇಕ್ ಶರ್ಮ ನಿಂದ ಕಳಪೆ ಪ್ರದರ್ಶನ ಬರುತ್ತಿದ್ದರೂ, ಆತನಿಗೆ ಸಿಗುತ್ತಿದ್ದ ಅವಕಾಶ ಸಂಜುಗೆ ಸಿಕ್ಕಿರಿಲಿಲ್ಲ ಪುನಃ ಪುನಃ ಬೆಂಚ್ ಕಾಯುವ ಪರಿಸ್ಥಿತಿ ಬಂದೊದಗಿತು ಒಂದೆರಡು ಮ್ಯಾಚ್ ನಲ್ಲಿ ಇಶಾನ್ ಕಿಶನ್ ನ್ನು ಸಂಜು ಬದಲಿಗೆ ವಿಕೆಟ್ ಕೀಪರ್ ಆಗಿ ನೇಮಿಸಲಾಯಿತು . ಆತನ್ನು ಬೌಂಡರಿ ಲೈನ್ ನಲ್ಲಿ ಫೀಲ್ಡ್ ಗೆ ಕಳುಹಿಸುತ್ತಿದ್ದರು. ನತದೃಷ್ಟ ಸಂಜು ವಿನ ಬ್ಯಾಟ್ ನಿಂದ ರನ್ ಬಾರದೇ ಇದ್ದರೂ ವಿಕೆಟ್ ಕೀಪಿಂಗ್ ನಲ್ಲಿಏನೂ ಮೋಸ ಇರಲಿಲ್ಲ ಎತ್ತಿದ ಕೈ. ಇಶಾನ್ ಕಿಶನ್ ಗಿಂತ ಉತ್ತಮವಾಗಿಯೇ ಕೀಪಿಂಗ್ ಮಾಡ ಬಲ್ಲ ಸಾಮರ್ಥ್ಯದ ಸಂಜು ಬೌಂಡರಿ ಲೈನ್ ನಲ್ಲಿ ನಿಲ್ಲಬೇಕಾಯಿತು. ಪ್ರೆಸ್ ಮೀಟ್ ನಲ್ಲಿ ಹೊರಹೊಮ್ಮುತ್ತಿದ್ದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ವ್ಯಂಗ್ಯ ಮಾತುಗಳನ್ನು ಅದು ಹೇಗೋ ಅರಗಿಸಿ ಕೊಂಡರೂ ಗೊತ್ತಿಲ್ಲ.
ಒಂದೇ ಒಂದು ಚಾನ್ಸ್ ಗೆ ಕಾಯುತ್ತಿದ್ದ ಸಂಜುಗೆ ಆದಿನ ಅವಕಾಶ ಸಿಗುತ್ತದೆ.ಇದು ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ಮ್ಯಾಚ್ ಸೂಪರ್ 8 ಗೆ ಸ್ಥಾನ ಪಡೆಯುವುದಕ್ಕೂ ಸಂಜುಗೆ ಕೂಡ ಮುಂದಿನ ಸ್ಥಾನ ಭದ್ರ ಪಡಿಸಲು ಈ ಮ್ಯಾಚ್ important ಆಗಿತ್ತು. ಮುಂದೆ ನಡೆದಿದ್ದೇ ಇತಿಹಾಸ !! ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 50 ಬಾಲ್ ಗೆ ಬರೋಬ್ಬರಿ 97 ರನ್ ಚಚ್ಚಿದ ಸಂಜು ನಾಟ್ ಔಟ್ ! ಇಂಡಿಯಾವನ್ನು ಗೆಲ್ಲಿಸುವುದರ ಜೊತೆಗೆ ನಿರ್ಲಕ್ಷ್ಯೆ ಮಾಡಿದವರಿಗೆ ಬ್ಯಾಟ್ ನಿಂದ ಉತ್ತರ ಕೊಟ್ಟು ಮ್ಯಾನ್ ಆ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಜೊತೆಗೆ ಕೀಪರ್ ಸ್ಥಾನವೂ ಭದ್ರವಾಯಿತು.ಸಂಜುವಿನ ಬ್ಯಾಟ್ ಆರ್ಭಟ ಕಡಿಮೆ ಯಾಗಲಿಲ್ಲ ಸೆಮಿ ಫೈನಲ್ ನಲ್ಲೂ ಇಂಗ್ಲೆಂಡ್ ಬಾಲರ್ ಗಳನ್ನೂ ಇಲ್ಲಿಲ್ಲದಂತೆ ಕಾಡಿದರು ಬೌಂಡರಿಗಳ ಮೇಲೆ ಬೌಂಡರಿ! ಚೆಂಡು ಸೀಮಾ ಗೆರೆ ದಾಟುತ್ತಿತ್ತು.46 ಬಾಲ್ ಗೆ 89 ರನ್ ಗಳಿಸಿ ತಂಡ ಫೈನಲ್ ತಲುಪಲು ಮುಖ್ಯಪಾತ್ರ ಮಾತ್ರವಹಿಸಿದ ಸಂಜುವಿನ ಈ ಹೋರಾಟ ಕಡಿಮೆಯಾಗಲಿಲ್ಲ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ನಲ್ಲಿ 89ರನ್ 46 ಬಾಲಿಗೆ ಜಾಣ್ಮೆ,ತಾಳ್ಮೆಯ ಆಟಕ್ಕೆ ಇಡೀ ಕ್ರಿಕೇಟ್ ಜಗತ್ತು ಬೆಕ್ಕಸ ಬೆರಗಾಯಿತು. ಟೀಮ್ ಕೋಚ್ ಸೇರಿದಂತೆ ಕ್ಯಾಪ್ಟನ್ ಎಲ್ಲರೂ ತಲೆತಗ್ಗಿಸಿದರು, ತಲೆಬಾಗಿ ವಂದಿಸಿದರು. ಎಷ್ಟೆಲ್ಲಾ ಅವಮಾನವನ್ನು ಉಂಡ ಸಂಜು 2 ಬಾರಿ ಮಾನ್ ಒಫ್ ದಿ ಮ್ಯಾಚ್ ಕೊನೆಗೆ ಮ್ಯಾನ್ ಆಫ್ ದಿ ಸೀರೀಸ್ ನ್ನು ಪಡೆದರು ಇದು ನಿಜಕ್ಕೂ ಅದ್ಭುತ!! ಅವಮಾನಿಸಿದವರೇ ಮುಂದೆ ಸನ್ಮಾನ ಸ್ವೀಕರಿಸಿದ ಪರಿ ನಿಜಕ್ಕೂ ಗ್ರೇಟ್! ಪ್ರತಿಭೆ ಇದ್ದರೂ ವೇದಿಕೆ ಸಿಗದೇ ಹೋಗುವುದು ಬೇಸರ ಸರಿಸುವ ವಿಚಾರ ಒಂದೆರಡು ಮ್ಯಾಚ್ ನಲ್ಲಿ ಕಳಪೆ ಯಾದರೂ ಇನ್ನೊಂದೆರೆಡು ಚಾನ್ಸ್ ಕೊಟ್ಟರೇ ಖಂಡಿತ ಫಲ ಸಿಗುತ್ತದೆ ಪ್ರತಿಭೆ ಇದ್ದರೇ ಸಾಲದು ಅದೃಷ್ಟ ಕೂಡ ಬೇಕು ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ