ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ ಕರ್ನಾಟಕವನ್ನು
ಆಶ್ರ ಯಿಸಿರುವ ಉತ್ತರ ಭಾರತದ ಈಶಾನ್ಯ ಭಾಗದ ಜನತೆ ಕಳೆದ ಮೂರು ದಿನಗಳಿಂದ ಪುಂಖಾನು -ಪುಂಖ
ವಾಗಿ ಕಾಲ್ಕಿಳುತ್ತಿರುವ ಚಿತ್ರಣವನ್ನು ನೋಡಿ ಅನೇಕರು ಕರ್ನಾಟಕದ ಜನಸಂಖ್ಯೆ ಕಡಿಮೆಯಾಗಲಿ ನಮ್ಮ
ನಿರುದ್ಯೋಗಿ ಗಳಿಗೆ ಫಲ ಸಿಕ್ಕಿಲಿ ಅನ್ನುವಂತ ಮನಸ್ಥಿತಿ ಹೊಂದಿದ್ದರೆ , ಇವರುಗಳಿಂದ ನಮ್ಮ
ರಾಜ್ಯಕ್ಕೆ ಬಹಳಷ್ಟು ಲಾಭಾ೦ಶವಿದೆ ಎಂಬ ವಿಚಾರ ತೆರೆ ಮರೆಯಲ್ಲಿ ಪ್ರಜ್ಞಾವಂತರು ಆಲೋಚಿಸುತ್ತಿದ್ದರೆ
,ನಮ್ಮ ರಾಜ್ಯದ ರಾಜಕೀಯ ಪಂಡಿತರಿಗೆ ಏನ್ ಅನ್ನಿಸುತ್ತಿದ್ದ್ಯೋ ಗೊತ್ತಿಲ್ಲ ಒಟ್ಟಾರೆ ಪಕ್ಷ ಬೇಧ ಮರೆತು
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬೀಡು ಬಿಟ್ಟು ಮೈಕ್ ಹಿಡಿದು ಬೊಗಳೆ ಬಿಡುತ್ತಾ, ಈ ವಿಚಾರದಲ್ಲೂ
ಅಷ್ಟೇ ನಿರಂತರವಾಗಿ ಒಬ್ಬರನೊಬ್ಬರು ದೂರುದರಲ್ಲೇ ಕಾಲ ಕಳೆಯುತ್ತಿದ್ದಾರೆ ...ಹೋಗುವವರನ್ನು
ಕೈ ಹಿಡಿದು ಕುಳ್ಳಿರಿಸಲು ಅಸಾಧ್ಯದ ಮಾತು
ಎತ್ತಿಗೆ
ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ನಡವಳಿಕೆ ಎಳ್ಳಷ್ಟು ಸರಿಯಲ್ಲ ಇವರುಗಳಿಗೆ ಸೂಕ್ತ ವಾದ
ಭದ್ರತೆ ಒದಗಿಸುವಲ್ಲಿ ಆಡಳಿತ ಪಕ್ಷ ವಿಫಲ ವಾಗಿದೆ ಎಂದು ಕಿಡಿ ಕಾರುತ್ತಿರುವ ,ಒಂದೊಂದು ವಿಚಾರ ಸಿಕ್ಕರೆ
ಸಾಕು ಆಡಳಿತ ಪಕ್ಷಕ್ಕೆ ಸರಿಯಾಗಿ ಜಾಡಿಸುವ , ವಿರೋಧ ಪಕ್ಷದ ಮಹಾನುಭಾವರು ಒಮ್ಮೆ ಆ ಸ್ಥಾನದಲ್ಲಿದ್ದಾರೆ
ಏನು ಮಾಡುತ್ತಿದ್ದರು ?ಒಟ್ಟಾರೆ ಈ ವಿಚಾರ ದಲ್ಲಿ ಬಹಳಷ್ಟು ಪ್ರಶ್ನೆ ಉದ್ಭವಿಸುತ್ತಿದೆ.ರೆಗುಲರ್
ಟ್ರೈನ್ ಇದ್ದರೂ ,ಸ್ಪೆಷಲ್ ಟ್ರೈನ್ ವ್ಯವಸ್ಥೆ ಈಶಾನ್ಯರನ್ನು ಕಳಿಸುದರ ಉದ್ದೇಶ ವೇನು?
ಈ ವ್ಯವಸ್ಥೆ ಮೂಲಕ ಆದಷ್ಟು ಬೇಗ ಜಾಗಖಾಲಿ ಮಾಡಲಿ ಎಂಬ ಮನೋಭಾವನೆ ಹೊಂದಿರ
ಬಹುದೇ ? ಆಕಸ್ಮಾತ್ ಅವರುಗಳಿಗೆ ಟ್ರೈನ್ ಸಂಪರ್ಕ ಇಲ್ಲದ ಪರಿಸ್ಥಿತಿ ಯಲ್ಲಿ ಈಶಾನ್ಯರು ಹೇಗೆ
ತೆರಳಲು ಸಾಧ್ಯ ವಾಗುತಿತ್ತು ? ಒಟ್ಟಾರೆಯಾಗಿ ಮೊಸಳೆ ಕಣ್ಣಿರು ಮಿಡಿಯುತ್ತಿರುವ ಇವರುಗಳ ಆತ್ಮ ಶಕ್ತಿ
ಏನು ಹೇಳುತ್ತಿದೆ ಗೊತ್ತಿಲ್ಲ.ಏನೆ ಇರಲಿ ಉತ್ತರ ಭಾಗದಲ್ಲಿನ ನಾಗರಿಕರಿಗೆ ಸಂಕಟ -ಸಿಂಪತಿ ತೋರುವ
ನಮ್ಮ ರಾಜಕಾರಣಿಗಳು ನಮ್ಮ ಉತ್ತರ ಕರ್ನಾಟಕದಲ್ಲಿನ ಕೆಲವು ಪ್ರದೇಶಗಳ ಜನರು ವಸತಿ ,ಆಹಾರ ,ಉದ್ಯೋಗಕ್ಕಾಗಿ ಗುಳ್ಳೆಹೋಗುತ್ತಿರುದನ್ನು ತಪ್ಪಿಸುವದ ಸಲುವಾಗಿ ಬೇರೆ ಪರ್ಯಾಯ ಮಾರ್ಗವನ್ನು ಅರಸಬಹುದಿತ್ತು .ಒಂದಷ್ಟು ಸಾನ್ತ್ವಾನದ ನುಡಿ ಯನ್ನಾದರೂ ಹೇಳಬಹುದಿತ್ತು ..ಆಗ ಇವರ
ಹೋರಾಟದ ಸ೦ವಹನ ಶೀಲ ಕಣ್ಣೀರ ಗಾಥೆ ಎಲ್ಲಿಗೆ ಹೋಗಿತ್ತು ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ