ಬುಧವಾರ, ಮೇ 25, 2016
ಓದುದರ್ಲ್ಲೂ ಪಶ್ಟ್ ! ಓಡುವುದರ್ಲೂ ಪಶ್ಟ್ !-ಕುಗ್ರಾಮದ ಕುಹರಿ ಶ್ರೀದೇವಿಯ ಕಹಾನಿ !
ಕುಂದಾಪುರ : ತಾಲೋಕಿನ ಹೊಸಂಗಡಿ ಪ್ರೌಢ ಶಾಲೆ ವಿಧ್ಯಾರ್ಥಿನಿ ಶ್ರೀದೇವಿ ಆಟ -ಓಟ -ಪಾಠವೂ ಸೇರಿದಂತೆ ಸಾಂಸ್ಕ್ರತಿಕ ಚಟುವಟಿಕೆಯಲ್ಲೂ ಕೈಯಾಡಿಸಿ ಸಕ್ಸಸ್ ಕಂಡ ಸಾಹಸಿಗಳ ಪೈಕಿ ಒಬ್ಬಳಾಗಿದ್ದಾಳೆ !
ಕಲಿಕೆಯಲ್ಲೂ ಹಿಂದಿರದ ಜಾಣೆ ..ಗ್ರಾಮೀಣ ಪರಿಸರದ ಈ ಬಹುಮುಖ ಪ್ರತಿಭೆ :
ಶೈಕ್ಷಣಿಕವಾಗಿ ಪ್ರಾಥಮಿಕ ಶಾಲೆಯಿಂದ ಉನ್ನತ ಸ್ತರದಲ್ಲೇ ವ್ಯಾಸಂಗ ಮಾಡುತ್ತಾ ಬಂದಿರುವ ಈಕೆ ಎಂದಿನ ಎಣಿಕೆಯ೦ತೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 93ಫಲಿತಾಂಶವನ್ನು ಪಡೆದು ಹೊಸಂಗಡಿ ಪ್ರೌಢ ಶಾಲೆಗೆ ಮೊದಲಿಗಳಾಗಿದ್ದಾಳೆ . ಪ್ರತಿಭಾ ಕಾರಂಜಿ ಎಂಬ ಸಾಂಸ್ಕ್ರತಿಕ ಸ್ವರ್ಧೆಯಲ್ಲಿ ಪ್ರಶಸ್ತಿಗಳ ಮಹಾಪೂರವನ್ನು ಬಾಚಿ ಕೊಂಡು ಸೈ ಯೇನಿಸಿಕೊಂಡು ಜನ ಮೆಚ್ಚುಗೆ ಗಳಿಸಿದ್ದಲ್ಲದೇ,ಕ್ರೀಡಾರಂಗದಲ್ಲೂ ಎತ್ತಿದ ಕೈ ! ಕಳೆದ ಕೆಲವು ಸಮಯಗಳ ಹಿಂದೆ ನಡೆದ 100/ 200 ಮೀ . ಹಡ್ಸಲ್ ಓಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಳು . ಜಿಲ್ಲಾ ಮಟ್ಟದಲ್ಲಿ ಸೆಣೆಸಿದ ಖೋ ಖೋ ಮತ್ತು ಕಬ್ಬಡಿ ಹೊಸಂಗಡಿ ಪ್ರೌಢ ಶಾಲೆಯ ಟೀಮ್ ಕ್ಯಾಪಟನ್ ಕೂಡ ಆಗಿ ಚಾಂಪಿಯನ್ ಪಟ್ಟವನ್ನೂ ಗಿಟ್ಟಿಸಿ ಕೊಂಡವಳು ..ಹಾಗೂ ಕರಾಟೆ ಪಟುವೂ ಹೌದು !!
ಕುಗ್ರಾಮದ ಕುಹರಿ ಶ್ರೀದೇವಿ:ತನ್ನ ಅಪಾರಿಮಿತ ಸ್ಪರ್ಧಾತ್ಮಕ ಬಹು ಪ್ರತಿಭೆಯನ್ನು ಹೊಂದಿರುವ ಶ್ರೀದೇವಿ
ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ‘ಮುತ್ತಿನಕಟ್ಟೆ’ ಎಂಬ ಕುಗ್ರಾಮದಲ್ಲಿ ನೆಲೆಸಿರುವ ಕ್ರಷಿ ಕುಟುಂಬದ ಶ್ರೀಕಾಂತ್ ಗೊಲ್ಲ ಹಾಗೂ ಶಿಲ್ಪಾ ದಂಪತಿಯ ಪುತ್ರಿ. ಯಾವುದೇ ಪ್ರೋತ್ಸಾಹ ವಿಲ್ಲದೇ ಪೋಷಕರ ಬೆಂಬಲದಿಂದ ತನ್ನ ಪ್ರತಿಭೆಯನ್ನು ತೋರ್ಪಡಿಸುತ್ತಾ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಿ ಗುರು ವಿಲ್ಲದೇ ಗುರಿಯತ್ತ ದ್ರಷ್ಟಿಯನ್ನಿಟ್ಟಿ ಶ್ರೀದೇವಿಯ ಆಕಾಂಕ್ಷೆಗೆ ನೆರವಾಗಿದ್ದೂ , ಹೊಸಂಗಡಿಯ ಸಾಕಷ್ಟು ಕ್ರೀಡಾಳುಗಳನ್ನ ರಾಜ್ಯಕ್ಕೆ ಪರಿಚಯಿಸಿದ ಕೀರ್ತಿಯನ್ನು ಹೊಂದಿರುವ ಕ್ರೀಯಾಶೀಲ ವ್ಯಕ್ತಿ ದೈಹಿಕ ಶಿಕ್ಷಕರಾಗಿರುವ ಶ್ರೀ ಸುಕುಮಾರ್ ಶೆಟ್ಟಿಯವರು. ಆಸೆಗೆ ನೀರೆರದು ತರಬೇತಿಯನ್ನು ನೀಡಿದರು . ಕೇವಲ ಕ್ರೀಡೆಯನ್ನೇ ಬಂಡವಾಳ ವಾಗಿಸಿಕೊಳ್ಳ ಶ್ರೀದೇವಿ ಓದಿಗೂ ಕೊಂಚ ಬ್ರೇಕ್ ಕೊಡದೇ ಕಲಿಕೆಯನ್ನೂ ಸಮತೋಲನದಲ್ಲಿ ಇಟ್ಟುಕೊಂದ್ಡಿದ್ದೆ ಭವಿಷ್ಯ ಎಸೆ ಎಸ್ ಎಲ್ ಸಿ ಯಲ್ಲಿ ತಮ್ಮ ಶಾಲೆಯೇ ತಾಪರ್ ಆಗಿದ್ದನ್ನು ನೆನಪಿಸ ಬಹುದಾಗಿದೆ! ಒಟ್ಟಾರೆ ಮೂರುವರ್ಷಗಳ ಇವಳ ಸಾಧನೆಯ ಸಾಹಸಿಹಾದಿ ಇಲ್ಲಿ ಇದೆ ನೋಡಿ
ಯ :
2013-2014 ಸಾಲಿನ 8ನೇ ತರಗತಿಯಲ್ಲಿ ವಿಧ್ಯಾಭಾಸ್ಯ ಮಾಡುತ್ತಿರುವ ಸಂದರ್ಭ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಿದ್ದಳು . ಹಾಗೆಯೇ ಸಿದ್ದಾಪುರ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿ ನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದರೆ ,ಭಾಷಣ ಮತ್ತು ಕೋಲಾಟದಲ್ಲಿ ತ್ರತಿಯ ಸ್ಥಾನ ಪಡೆದ್ದಿದ್ದಳು . ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200ಮೀ . ಹರ್ಡ್ಸಲ್ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ . ಹಾಗೂ 4* 100 ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ ಕೀರ್ತಿಗೆ ಭಾಜನಳಾಗಿದ್ದಳು.ಅಂತೆಯೇ ಕೊಲ್ಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 100ಮೀ .ಮತ್ತು ಹರ್ಡ್ಸಲ್ ಸ್ಪರ್ದೆಯಲ್ಲಿ ತ್ರತಿಯ ಹಾಗೂ 200 ಮೀ . ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಳು .
2014 -15 ರ ಸಾಲಿನ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ 100ಮೀ .ಓಟದಲ್ಲಿ ದ್ವಿತೀಯ ಸ್ಥಾನ 4* 100 ಮೀ. 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ 4*100 ಮೀ. 200 ಮೀ. ಓಟದಲ್ಲಿ ತ್ರತಿಯ ಸ್ಥಾನ ಹಾಗೂ 4*400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ .ಹಾಗೆಯೇ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟದಲ್ಲಿ 100ಮೀ ಓಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಜೊತೆಗೆ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಹಾಗೂ ತ್ರತಿಯ ಸ್ಥಾನ ಪಡೆದಿದ್ದಾಳೆ . ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ನಾಟಕ ಸ್ಪರ್ದೆ ಯಲ್ಲಿ ಪ್ರಥಮ ಹಾಗೂ ಕನ್ನಡ ಭಾಷಣದಲ್ಲಿ ಧ್ವಿತಿಯ ಸ್ಥಾನ ಪಡೆದಿದ್ದಳು
ಹಾಗೆಯೇ ತೆಕ್ಕೆಟ್ಟೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕ್ಯಾಪ್ಟನ್ ಸ್ಥಾನದಲಿದ್ದು ,ದ್ವಿತೀಯ ಸ್ಥಾನವನ್ನೂ ಪಡೆದು ಉತ್ತಮ ದಾಂಡುಗಾರ್ತಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದ್ದಳು ,ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ. ಹರ್ಡ್ಸಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ್ದಳು .
2015-16 ನೆ ಸಾಲಿನ ಕುಂದಾಪುರದಲ್ಲಿ ನಡೆದ ಪೈಕಾ ಕ್ರೀಡಾ ಕೂಟದಲ್ಲಿ 100ಮೀ . 4*400 ಮೀ. 4*400 ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪೈಕಾ ಕ್ರೀಡಾ ಕೂಟದಲ್ಲಿ 100 ಮೀ. ಓಟದಲ್ಲಿ ಪ್ರಥಮ 4*400 ಮೀ . ರಿಲೆಯಲ್ಲಿ ದ್ವಿತೀಯ ಸ್ಥಾನ 4*100ಮೀ. ರಿಲೆಯಲ್ಲಿ ತ್ರತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಹಾಗೆಯೇ ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ , ಭಾಷಣಾ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು , ವಲಯ ಮಟ್ಟದ ನಾಟಕ ಸ್ಪ್ರರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ . ಹಾಗೇಯೇ ಕುಂದಾಪುರ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ . 4*400 ಮೀ ರಿಲೆಯಲ್ಲಿ ಪ್ರಥಮ ಹಾಗೂ ಹರ್ಡ್ಸಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ ಅಲ್ಲದೇ ಬೈಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ ಹರ್ಡ್ಸಲ್ ನಲ್ಲಿ 100 ಮೀ. ಪ್ರಥಮ 200 ಮೀ. ಹರ್ಡ್ಸಲ್ 4*400 ಮೀ ರಿಲೆ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಶಂಕರನಾರಾಯಣ ದಲ್ಲಿ ನಡೆದ ತಾಲೋಕು ಮಟ್ಟದ ಖೋ ಖೋ ಪಂದ್ಯಾಟ ಕ್ಯಾಪ್ಟನ್ ಆಗಿ ಪ್ರಥಮ ಸ್ಥಾನ ಪಡೆದು ಹೆಬ್ರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಚಿಕ್ಕ ಮಗಳೂರಿನಲ್ಲಿ ನಡೆದ ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ ಹಾಗೂ ತಾಲೋಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಾಳೆ ಇಷ್ಟು ಮಾತ್ರ ವಲ್ಲದೇ ಶಾಲಾ ವಾರ್ಷಿಕ ಕ್ರೀಡಾ ಕೂಟದ ಚಾಂಪಿಯನ್ ಆಗಿ ಮೂಡಿ ಬಂದಿದ್ದಾಳೆ.
ಏನೆ ಇರಲಿ ಅದ್ಭುತ ಪ್ರತಿಬೆ ಗೆ ಪ್ರೋತ್ಸಾಹ ದೊರಕಲಿ , ಮುಂದು ಸಹಾ ಈ ಕೀರ್ತಿ ಪತಾಕೆ ಹಾರುತ್ತಿರಲಿ . ಉಜ್ವಲ ಭವಿಷ್ಯದಲ್ಲಿ ಬಯಸಿದ್ದೆಲ್ಲ ಸಿಗಲಿ ಎಂಬ ಹಾರೈಕೆ ನಮ್ಮದು .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ