ಶನಿವಾರ, ನವೆಂಬರ್ 28, 2015

ಜನ ಪ್ರತಿನಿಧಿಗಳೇ ಶೇಮ್ ! ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ !

ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬರ್ಭರವಾಗಿ ಹಾಡು ಹಗಲೇ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು . ಆಡಳಿತ ರೂಢ ಕಾಂಗ್ರೆಸ್ ಪಾಳಯದ ಸರ್ಕಾರಕ್ಕೆ ಪ್ರಶಾಂತ್ ಪೂಜಾರಿ ಕೊಲೆ ಎಂಬುದು ಬೀದಿ ನಾಯಿ ಸತ್ತಂತ ಬುದ್ದಿ ಮತ್ತೆಯನ್ನು ಹೊಂದಿದೆ , ಶೇಮ್ ಎನ್ನಬೇಕು ಕರಾವಳಿಯ ಕಾಂಗ್ರೆಸ್ ತನ್ನನ್ನು ತಾನೇ ನಡುಬೀದಿಯಲ್ಲಿ ನಗ್ನವಾಗಿಸಿ ಜನರಿಂದ ಶೇಮ್ ಎನಿಸಿಕೊಳ್ಳುತ್ತಿದೆ. ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ , ಕರಾವಳಿಯ ಐದು ಜನರ ಪೈಕಿ ಯಾವೊಬ್ಬನೋ ಸಹಾ ಅತ್ತ ತಲೆ ಹಾಕಿ ಮಲಗಿಲ್ಲ ಮೂಡಬಿದಿರೆಯ ಕಾಂಗ್ರೆಸ್ ಶಾಸಕ ಮತ್ತು ಸಚಿವ ಅಭಯಚಂದ್ರ ಜೈನ್ ಕೊಲೆಯಾದ ಪ್ರಶಾಂತ್ ಮನೆಗೆ ಭೇಟಿಯೂ ನೀಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ಸೌಜನ್ಯಕ್ಕೂ ಈ ಘಟನೆಯನ್ನು ಖಂಡಿಸಿಲ್ಲ ಮತ್ತು ಪ್ರಶಾಂತ್ ತಂದೆ ತಾಯಿಯನ್ನು ಮಾತಾಡಿಸಿಲ್ಲ. ಇದು ನಿಜಕ್ಕೂ ಅಮಾನವೀಯ. ಕೊಲೆಯಾದವನ ಸಿದ್ಧಾಂತ ಏನೇ ಇರಲಿ ತನ್ನೂರಿನ ಒಬ್ಬ ಹುಡುಗ ಕೊಲೆಯಾಗಿದ್ದಾನೆ, ಕಾನೂನು ಬಾಹಿರ ಕೃತ್ಯವೊಂದು ನಡೆದಿದೆ. ಅದನ್ನು ಶಾಸಕ ಮತ್ತು ಮಂತ್ರಿ ಖಂಡಿಸಬೇಕಿತ್ತು. ತಂದೆತಾಯಿಗೆ ಸಾಂತ್ವನ ಹೇಳಬೇಕಿತ್ತು. ಅಟ್ ನೀಸ್ಟ್ ತಮ್ಮ ಎಂದಿನ ಮೊಸಳೆ ಕಣ್ಣೀರನ್ನದರೂ ಹಾಕಿ ಕೈ ತೊಳೆದು ಕೊಳ್ಳ ಬಹುದಾಗಿತ್ತು .. ಛೆ !ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ !.. ರಾಜಕೀಯ, ಸಿದ್ಧಾಂತ ಭೇದ ಏನೇ ಇರಲಿ ಓರ್ವ ಸರ್ಕಾರದ ಮತ್ತು ಜನರ ಪ್ರತಿನಿಧಿಯಾಗಿದರೂ ಪ್ರಶಾಂತ್ ಮನೆಗೆ ಹೋಗಲೇಬೇಕಿತ್ತು. ಎಂತೆಂತಹ ರೌಡಿ ಶೀಟರ್‌ಗಳು, ಕೊಲೆಗಡುಕರೆಲ್ಲ ಸತ್ತಾಗ ಕಾಂಗ್ರೆಸಿಗರು ಅವರ ಮನೆಗೆ ಹೋಗಿಲ್ಲವೆ? ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲವೆ? ಕುಟುಂಬದವರಿಗೆ ಸಾಂತವನ ಹೇಳಿಲ್ಲವೆ? ಹಾಗಾದರೆ ಪ್ರಶಾಂತ್ ಪೂಜಾರಿಯ ಮನೆಗೆ ಹೋಗಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ,ತನಿಖೆಯ ಭರವಸೆ ನೀಡಬಹುದದಿತ್ತು? ದನಗಳ್ಳ ಕಬೀರ್ ಕ್ಕಿಂತಲೂ ಈತ ಕಡೇಯಾದನೇ ?! ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮಾತಾಡಬೇಕಿದೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ