ಶನಿವಾರ, ನವೆಂಬರ್ 28, 2015

ಯಕ್ಷಗಾನಕ್ಕೆ ಉಳಿವಿದೆ .. ಅಳಿವಿಲ್ಲ !!!

ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಯಕ್ಷಗಾನ ಸ್ಥಿರವಲ್ಲ ಎಂಬ ಹಲವರ ಬಾವುಕತೆಯ ಆಲೋಚನೆಗೆ ನಿಜಕ್ಕೂ ವರ್ತಮಾನದ ವಾತಾವರಣ ಧೈರ್ಯ ತುಂಬುತ್ತಿದೆ . ಟೆಂಟ್ ಆಟ ಗಳ ಜೊತೆಗೆ ಬಯಲಾಟ ತನ್ನದೆಯಾದ ಛಾಪನ್ನು ಇಂದಿಗೂ ಇರಿಸಿಕೊಂಡು ಬಂದಿದೆ . ಜೊತೆಗೆ ಇನ್ನಷ್ಟು ಮತ್ತಷ್ಟು ಮೊಗದಷ್ಟು ಜನಪ್ರಿಯತೆ ಮಳೈಸಿ ಕೊಂಡು ನಾಗಾಲೋಟದಲ್ಲಿ ಮಿಂಚುತ್ತಿದೆ ಅಂದರೆ ಅತಿಶಯೋಕ್ತಿಯಾಗಲಾರದು 'ಕಾಲಕ್ಕೆ ತಕ್ಕಂತೆ ಕೋಲ' ಎಂಬ ಆಡು ನುಡಿಯಂತೆ ವೈವಿಧ್ಯಮಯವಾಗಿ ವಿವಿಧತೆಯನ್ನು ಪೋಣಿಸುತ್ತಿದೆ . ಸ್ವರ್ದಾತ್ಮಕತೆ ಎಷ್ಟೇ ಇದ್ದರೂ ಕಲೆಗೆ ಬೆಲೆ ಕೊಡುತ್ತಾ ಬಂದಿರುವ ಗಂಡು ಕಲೆ ಯಕ್ಷಗಾನ ತನ್ನದೆಯಾದ ಅಂಗ-ಆಕಾರ, ಗಟ್ಟಿತನವನ್ನು ಉಳಿಸಿ ,ಬೆಳಿಸಿ ,ಕಾಯ್ದಿರಿಕೊಂಡು ಬನ್ದಿದೆ. ಸಮಯಕ್ಕನುಗುಣವಾಗಿ ಕಾಲಮಿತಿಯ ಪ್ರದರ್ಶನ ತೋರುವುದರ ಜೊತೆಗೆ ಮನೋರಂಜನಾತ್ಮಕವಾಗಿ ಸಾಕಷ್ಟು ಅಭಿರುವುದ್ಧಿ ಪಥದತ್ತ ಮುನ್ನುಗ್ಗುತ್ತಿದೆ .
ಅಟ್ಟಣಿಗೆ , ಜೋಡಾಟ , ಕೂಡಾಟಗಳ ಮೂಲಕ ಮನೋರಂಜನಾತ್ಮಕವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ. ವರ್ಷಕ್ಕೊಂದು ನವನವೀನ ಕಥಾನಕ ಗಳಿಂದ ಟೆಂಟ್ ಆಟಗಳು ಯಕ್ಷ ಪ್ರೇಮಿಗಳನ್ನು ಹಿಡಿದಿಟ್ಟು ಕೊಳ್ಳುತ್ತಿದೆ . ಇನ್ನು ಬಯಲಾಟಗಳಿಗೆ ಬರಗಾಲವೇ ಇಲ್ಲ ಬೆಳಕಿನ ಸೇವೆ ಅದೆಷ್ಟು ಭಕ್ತಿ ಪ್ರಧಾನ ದಿಂದ ನಡೆಯುತ್ತಿದೆ ಎಂದರೆ ಆಸ್ತಿಕರು ,ಆಸಕ್ತದಾರ ಪ್ರಮಾಣವೇ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ ವರ್ಷಪ್ರತಿಯಂತೆ ಒಂದೊಂದು ಸನ್ನಿಧಾನ ದಿಂದ ಹೊಸ ಹೊಸ ಯಕ್ಷಗಾನ ಮೇಳಗಳು ಉದಯವಾಗುತ್ತಿರುವುದರ ಜೊತೆಗೆ ಸಾಕಷ್ಟು ವರ್ಷಗಳ ವರೆಗಿನ ಬುಕ್ಕಿಂಗ್ ಕಾಣತ್ತಿರುವುದಕ್ಕೆ ಯಕ್ಷ ಅಭಿಮಾನಿಗಳ ಕ್ರಪಾ ಕಟಾಕ್ಷವಲ್ಲದೇ ಇನ್ನೇನು ?. ಕಟೀಲು ಆರು ಮೇಳಗಳನ್ನು ಹೊಂದಿದ್ದರೂ, ಮಂದಾರ್ತಿಯಲ್ಲಿ ಐದು ಮೇಳಗಳಿದ್ದರೂ , ಸುಮಾರು ಹದಿಮೂರು ವರ್ಷಗಳವರೆಗೆ ಬುಕ್ಕಿಂಗ್ !!!.
ಹೆಚ್ಚುವರಿ ಮೇಳಗಳ ಅಗತ್ಯವಿದ್ದರೂ ಕಲಾವಿದರುಗಳ ಕೊರತೆಯಿಂದ ಇದ್ದದ್ದರಲ್ಲಿಯೇ ನಿಭಾಯಿಸಬೇಕಾದ ಅಗತ್ಯತೆಯನ್ನು ಅನುಭವಿಸಬೆಕಾಗಿದೆ. ಮಾರಣಕಟ್ಟೆ ಮೇಳವೂ ಸಹಾ ಹಲವಾರು ವರ್ಷಗಳಿಂದ ಎರಡು ಮೇಳಗಳನ್ನು ಕಟ್ಟಿಕೊಂಡು ತಿರುಗಾಟದಲ್ಲಿದೆ ಹರಕೆ ಆಟಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ .. ಈ ಸಾಲಿಗೆ ಇನ್ನೊಂದು ಸೇರ್ಪಡೆ ಕಮಶಿಲೆ ಮೇಳ . ಕುಂದಾಪುರ ದಿಂದ ಪೂರ್ವಾಭಿಮುಖವಾಗಿ ೩೦ ಕಿಲೋ ಸಾಗಿದರೆ ಸಹ್ಯಾದ್ರಿ ತಪ್ಪಲಿ ಸ್ವಚ್ಛ ಪರಿಸರದ ಕುಬ್ಜಾ ನದಿ ತೀರದಲ್ಲಿ ನೆಲೆ ನಿಂತಿರುವ ಶಕ್ತಿದಾಯಿನಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ದಿಗ್ದರ್ಶನವಾಗುತ್ತದೆ. ಭಕ್ತರ ಸಕಲ ಇಷ್ಟರ್ಥವನ್ನು ನೀಗಿಸುತ್ತಾಳೆ ಎನ್ನುವುದಕ್ಕೆ ಬೆಳಕಿನ ಸೇವೆ ಯಕ್ಷಗಾನಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಒಂದು ಮೇಳವನ್ನು ಕಟ್ಟಿಕೊಂಡು ಎರಡು ದಶಕಕ್ಕೂ ಅಧಿಕ ಕಾಲದಿಂದ ನಡೆದು ಕೊಂಡು ಬರುತ್ತಿದ್ದ ಮಂಡಳಿ ಇದೀಗ ಹರಕೆ ಆಟವನ್ನು ತೀರಿಸಲು ಇನ್ನೊಂದು ಮೇಳವನ್ನು ಕಟ್ಟಬೇಕಾದ ಅನಿವಾರ್ಯತೆ ಉದ್ಬವಿಸಿದ್ದರಿಂದ ಈ ವರ್ಷದಿಂದ ಎರಡು ಮೇಳಗಳೊಂದಿಗೆ ತಿರುಗಾಟಕ್ಕೆ ಹೊರಟಿದೆ .
ನ್ನೇನು ಬೇಕು ?ಯಕ್ಷಗಾನಕ್ಕೆ ಉಳಿವಿದೆ.. ! ಕಲಾವಿದರ ಕೊರೆತೆ ಕೊಂಚ ತಲ್ಲಣವನ್ನು ತರುತ್ತಿರುವುದನ್ನು ಬಿಟ್ಟರೆ, ಯಕ್ಷ ಪ್ರೇಮಿಗಳ ಸಂಖ್ಯೆ ಒಂದಿನಿತು ಕಡಿಮೆಯಾಗಿಲ್ಲ ಗುಣಮಟ್ಟವಲ್ಲದ (ಸಿನಿಮಾ ಶೈಲಿ ) ಕಥಾನಕ ಎಲ್ಲೋ ತುಸು ಮುನಿಸು ಕೆಲೆವೆಡೆ ಕೇಳಿ ಬರುತ್ತಿರುವುದು ಹೊರತು ಪಡಿಸಿದರೆ ,ಯಕ್ಷಗಾನಕ್ಕೆ ಬಾಳ್ವೆ ಇದೆ. ಬಗ್ಗೆ ಪ್ರಸಂಗ ಕರ್ತರು ಯೋಚಿಸಿದರೆ ಯಕ್ಷಗಾನಕ್ಕೆ ಯಾವುದೇ ಕಳಂಕಬಾರದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ