ಮಂಗಳವಾರ, ಜೂನ್ 23, 2020

ನಿಜವಾದ ಸ್ವಾರ್ಥಿಗಳು ಯಾರು ?


“ತಂದೆ ತಾಯಿ ತೀರಿಕೊಂಡರೂ, ಊರಿಗೆ ಬಾರದ ಇವರುಗಳು ತಮ್ಮ ಜೀವ ಭಯದಿಂದ ತಮ್ಮ ತಮ್ಮ ಮನೆಗಳಿಗೆ ದೌಡಾಯಿಸುತ್ತಿದ್ದಾರೆ. ಇವರೆಲ್ಲಾ ಸ್ವಾರ್ಥಿಗಳು .ಸ್ವಾರ್ಥಕ್ಕಾಗಿ ಜೀವಿಸುತ್ತಾರೆ” ಎಂದು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಅನಿವಾಸಿಗಳಿಗೆ ದಿಕ್ಕಾರ ಕೂಗುವವರಲ್ಲಿ ಎಷ್ಟು ಸ್ವಾರ್ಥ ತುಂಬಿದೆ ನೋಡಿ ಇವರುಗಳು ಹೊರಗಿನಿಂದ ವೈರಸ್ ಹೊತ್ತು ತಂದರೇ ನಮಗೆಲ್ಲಿ ಹರಡುತ್ತದೋ ಎಂಬ ಹೆದರಿಕೆ ,ಸ್ವಾರ್ಥ ಮನೋಭಾವನೆಯಿಂದ ಹೀಗೆಲ್ಲಾ ಉಸುರುತ್ತಾರೆ. ಹೊರಗಿನವರ ಆರ್ಥಿಕ ಸಹಾಯ,ಅಲ್ಲಿನ ವಸ್ತುಗಳಿಗೆ ಹಾತೊರೆಯುವರಲ್ಲಿಯೇ ಇದೆ ಸ್ವಾರ್ಥಪರತೆ. ಕರೋನ ಎಂಬ ಮಹಾಮಾರಿಯಿಂದ ಈಡೀ ಜಗತ್ತು ಹೈರಾಣಾಗಿ ಹೋಗಿದೆ . ಈ ಸಂದರ್ಭದಲ್ಲಿ ಊರು ಬಿಟ್ಟು ಪರ ರಾಜ್ಯ, ಪರ ದೇಶಕ್ಕೆ ದುಡಿಯಲು ಹೋದ ಹಲವರ ಸ್ಥಿತಿಯೂ ಕೂಡಾ ಚಿಂತಾ ಜನಕವಾಗಿದೆ .
ಉದ್ಯೋಗವಿಲ್ಲ , ಸರಿಯಾದ ಆಹಾರವಿಲ್ಲ ,ರೂಮ್ ಬಾಡಿಗೆ ನೀಡಲು ಕೈಯಲ್ಲಿ ಕಾಸಿಲ್ಲ ಈ ಕಾರಣ ದಿ೦ದ ಕಷ್ಟಪಟ್ಟು ತಮ್ಮ ಊರಿಗೆ ಮರಳಿ ಬರುವವರಿಗೆ ಬಹಿಷ್ಕಾರದ ಕೂಗು ಎದುರಾಗಿದೆ . ಚೀನಾದಲ್ಲಿ ಹುಟ್ಟಿದ ಕರೋನ ಈಗ ಜಗತ್ತಿನಾದ್ಯಂತ ಕೇಕೆ ಹಾಕುತ್ತಿದೆ ಅಂದರೆ ಹೊರದೇಶದಲ್ಲಿರುವವರು ಅಲ್ಲಿಂದ ಪುಕ್ಕಟ್ಟೆಯಾಗಿ ತಂದು ಕಾಯಿಲೆಯನ್ನು ಇಲ್ಲಿ ಹಬ್ಬಿಸುತ್ತಾರೆ .ಅವರುಗಳು ಬರುವುದು ಬೇಡ ಅವರುಗಳಿಂದಲೇ ಈ ಪರಿಯ ರೋಗ ವೃದ್ಧಿ ಗೊಳ್ಳುತ್ತಿದೆ ಎಂದು ಹೇಳುವವರ ಮಾತಿನಲ್ಲಿ ಕೊಂಚ ಅರ್ಥವಿದೆಯಾದರೂ , ಅನಿವಾಸಿಗಳ ತಪ್ಪಾದರೂ ಏನು ?ಅವರುಗಳಿಗೂ ಸಹಾ ಜೀವ ಭಯವಿಲ್ಲವೇ ?ಬದುಕ ಬೇಕೆಂಬ ಬಯಕೆ ಇಲ್ಲವೇ ? ಬಯಸಿ ಬಯಸಿ ಯಾರು ಕೂಡ ರೋಗಗಕ್ಕೆ ಬಲಿಯಾಗುದಿಲ್ಲ ,ಅದರಲ್ಲೂ ಈ ಕರೋನ ದಿಂದ ಎಷ್ಟು ಜಾಗ್ರತಿವಹಿಸಿದರೂ ಅದು ನಮ್ಮನ್ನು ಆವರಿಸಿ ಬಿಡುತ್ತದೆ . ಹಾಗಂತ ಎಲ್ಲರಲ್ಲೂ ಈ ಖಾಯಿಲೆ ಇರುತ್ತದೆ ಅಂತ ಅಲ್ಲಾ ಕೆಲವರಲ್ಲಿ ಕಂಡೂ ಬಂದರೂ ,ಹಲವರಲ್ಲಿ ನೆಗೆಟಿವ್ ಕೇಸೇ ತುಂಬಿ ಇರುತ್ತವೆ . ಅಂದ ಮಾತ್ರಕ್ಕೆ ಅವರುಗಳು ಬರುವುದು ಸರಿಯಲ್ಲ ಎಂಬುದರಲ್ಲಿ ಅರ್ಥವಿಲ್ಲಾ . ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ತರವಲ್ಲ . ಅದೇಷ್ಟು ಕಷ್ಟಪಟ್ಟು ವಿಧ್ಯಾಭ್ಯಾಸ ಮುಗಿಸಿ ತಮ್ಮ ಸ್ವಂತ ಊರಿನಲ್ಲಿ ಉದ್ಯೋಗ ಸಿಗದೇ ಇದ್ದಾಗ, ನೆಲೆಗೆ ಬೆಲೆಗೆ ಸಿಗದೇ ಇದ್ದಾಗ , ಅನಿವಾರ್ಯವಾಗಿ ಹೊರದೇಶ ,ಹೊರರಾಜ್ಯವನ್ನು ಅವಲಂಭಿಸಬೇಕಾಗಿ ಬರುತ್ತದೆ. ತಮ್ಮ ಅವಶ್ಯಕ್ತತೆಗೆ ಇಲ್ಲಿ ಸಿಗುವ ಹಣ ತ್ರಪ್ತಿ ದಾಯಕವಾಗಿಲ್ಲವಾದ್ದರಿಂದ . ತಮ್ಮ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಕಂಡರಿಯದ ಪ್ರದೇಶಕ್ಕೆ ,ಅಲ್ಲಿನ ವಾತಾವರಣ, ಜನ ಸಂಪರ್ಕ ಯೋಗ್ಯವಲ್ಲದಿದ್ದರೂ ,ಸಹಾ ಮನೆಯವರನ್ನೇಲ್ಲಾ ಬಿಟ್ಟು ವರ್ಷಗಟ್ಟಲೇ ದೂರವಿದ್ದೂ , ಹಗಲು ರಾತ್ರಿ ಯೆನ್ನದೇ ,ತಮ್ಮ ಕಷ್ಟವನ್ನೇಲ್ಲಾ ಇಷ್ಟವನ್ನಾಗಿಸಿ ಸುಖ ಜೀವನ ನಡೆಸುತ್ತಾರೆ . ತೀರಿ ಹೋದ ತಂದೆ-ತಾಯಿಯನ್ನೋ ಸಂಬಂದಿಕರನ್ನು ನೋಡಲು ಬಾರದವರು ಈ ಕರೋನಾ ದಿಂದ ಊರಿಗೆ ಮರಳುತ್ತಾರೆ ಎಂಬ ಮಾತು ಎಲ್ಲೋ ಸತ್ಯದ ತಲೆ ಮೇಲೆ ಹೊಡೆಯುತ್ತಿದ್ದರೂ, ಎಲ್ಲಾರಿಗೂ ಒಪ್ಪಿಗೆ ಯಾಗುವಂತ್ತದ್ದಲ್ಲ .ಒಂದೋ,ಎರಡು ಕೇಸುಗಳು ಅಲ್ಲಿನ ಪರಿಸ್ಥಿತಿ ಗೆ ಅನುಗುಣವಾಗಿ ಹೀಗೆ ಮಿಸ್ಸಿಂಗ್ ಆಗಬಹುದು.. ಹಲವಾರು ಕಡೆಯಲ್ಲಿ ಅಗ್ರಿಮೆಂಟ್ ,ಜವಬ್ದಾರಿಯುತ ಕೆಲಸ,ರಜೆ ಸಿಗದೇ ಇರುವುದು ಹೀಗೆ ಮುಂತಾದ ಕಾರಣಗಳಿಂದ ಎಮರ್ಜೆನ್ಸಿಗೆ ಬಾರದೇ ಇರುವುದು ಎಲ್ಲೋ ಬೆರಳು ಎಣಿಕೆ ಯಷ್ಟು ನಡೆಯುತ್ತದೆ ಅಷ್ಟೇ! ಊರಿಗೆ ಬರಬೇಡಿ ಎಂದು ಹೇಳುವವರು ಮುಂದೆ ಯಾವುದಾದರೂ ಧಾರ್ಮಿಕ .ಸಾಂಸ್ಕ್ರತಿಕ, ಕಾರ್ಯಕ್ರಮ ವಿದ್ದಾಗ ,ಫೋನ್ ಹಾಯಿಸಿ ಮೆಸೆಜ್ ಮಾಡಿ, ಎಷ್ಟೇಷ್ಟೋ ಬೇಡಿಕೆ ಇಡುತ್ತಾರೆ .ಅವರಿಂದ ಲಾಭ ಬೇಕು., ಆದರೆ ಕಷ್ಟ ಮಾತ್ರ ಬೇಡ. ನಿಜವಾದ ಸ್ವಾರ್ಥಿಗಳು ಇವರುಗಳೇ. ಗಣೇಶೋತ್ಸವ ,ಶಾರದೋತ್ಸವ,ಕೋಲ,ನೇಮ, ನಾಗಮಂಡಲ,ದೇವಸ್ಠಾನದ ಧಾರ್ಮಿಕ ಉತ್ಸವ ಇನ್ನಿತರ ಯಾವುದೇ ಧಾರ್ಮಿಕ ,ಸಾಂಸ್ಕೃತಿಕ ,ಸಾಮಾಜಿಕ ಕಾರ್ಯಕ್ರಮಕ್ಕೆ ಆರ್ಥಿಕ ಪರಿಸ್ತಿತಿ ನೆಟ್ಟಗೆ ಇದ್ದರೇ ಅದು ನಾವು ಎಣಿಸಿದಂತೆ ನಿಗದಿತ ಫಲಿತಾಂಶ ನೀಡಲು ಸಾಧ್ಯ. ಸಮೀಕ್ಷೆ ಬಿದಿಗಿರಲಿ .,ವಾಸ್ತವಾರ್ಹವಾಗಿಯೂ ಅನಿವಾಸಿಗಳದ್ದೇ ಹೆಚ್ಚಿನ ಹಣ ಸಂಗ್ರಹವಾಗುವುದು. ಗಲ್ಪ್ ರಾಷ್ಟ್ರ ,ಮಹಾರಾಷ್ಟ್ರ ,ಮತ್ತಿತ್ತರ ಪ್ರದೇಶದಲ್ಲಿರುವವರೇ ಸಹಾಯ ಮಾಡುವುದು ತಾವು ಆ ಕಾರ್ಯಕ್ರಮ ಹಾಜರಾಗದೇ ಇದ್ದರೂ, ನಮ್ಮ ಊರು ನಮ್ಮ ದೇವಸ್ಥಾನ ನಮ್ಮ ಕಾರ್ಯಕ್ರಮ ಎಂದು ಎಣಿಸಿ , ಹೆಚ್ಚಿನ ಪ್ರಮಾಣದಲ್ಲೇ ಸಹಾಯ ಹಸ್ತ ನೀಡುತ್ತಾರೆ ಆಗ ಅವರ ಸಹಾಯ ಬೇಕಿತ್ತು. ಈಗ ಪಾಪ ಅಲ್ಲಿ ಕೆಲಸ ಇಲ್ಲ ಆಹಾರ ಇಲ್ಲದೇ ಒದ್ದಾಡುತ್ತಿರುವವರು ಊರಿಗೆ ಬಂದರೆ ಅಪಸ್ವಾರ !.ನಿಜಕ್ಕೂ ಬೇಸರದ ವಿಚಾರ ಅಷ್ಟಕ್ಕೂ ಅವರು ಬರುವುದು ಸ್ವಂತ ಊರಿಗೆ .,ಅವರ ಮನೆಗೆ ಅಲ್ಲವೇ ?ಅದನ್ನು ತಡೆಯುವ ಅಥವಾ ಅಲ್ಲ ಗೆಳೆಯುವ ಹಕ್ಕೂ ಯಾರಿಗೂ ಇಲ್ಲ .

ಸೋಮವಾರ, ಜೂನ್ 15, 2020

ಕರಾಳ ವರ್ಷ ಈ 2020 !


ಹೌದು !ಹಿಂದೆಂದೂ ಕಂಡು ಕೇಳರಿಯದಂತ ಅಹಿತಕರ ಘಟನೆಯನ್ನು ಹೊತ್ತು ತಂದಿದೆ ಈ ವರ್ಷ 2020 ! ಕಣ್ಣಿಗೆ ಮುದ ನೀಡುವಂತಹ ಸಂಖ್ಯೆ 2020., ಅಷ್ಟೇ ಕಣ್ಣೀರು ತರಿಸುತ್ತಿದೆ ದಿನದಿಂದ ದಿನಕ್ಕೆ. ಸಾವು-ನೋವುಗಳನ್ನೂ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಲೆಕ್ಕ- ಪತ್ರ ಇಲ್ಲದೇ ವೇಗವಾಗಿ ವಿಹರಿಸುತ್ತಿದೆ.,ಇನ್ನೂ ಅರ್ಧ ವರ್ಷ ಕಳೆದಿಲ್ಲ ,ಇಷ್ಟೊಂದು ಪಾಸ್ಟ್ ಆಗಿ ದುಃಖದ ಮಡುವಿನೊಂದಿಗೆ ಕಣ್ಣೀರಿನಲ್ಲಿ ಕೈ ತೊಳೆಯಿಸುತ್ತಿದೆ ಅಂದರೇ, ಇನ್ನುಳಿದ ಅರ್ಧ ವರ್ಷದ ಬಗೆಗೆ ಆಲೋಚಿಸಿದರೇ ನಿದ್ರೆ ಹತ್ತುವುದಿಲ್ಲ ಭಯದ ನಡುವೆ ಬದುಕು ಸಾಗಿಸುವಂತಾಗಿದೆ .ಕರೋನ ಎಂಬ ಮಹಾಮಾರಿ ಕಂಡು ಬಂದದ್ದು ,2019 ರ ಡಿಸೇಂಬರ್ ಕೊನೆ ಭಾಗದಲ್ಲಿಯಾದರೂ ,ಪರಿಣಾಮ ,ಫಲಿತಾಂಶ ಮಾತ್ರ 2020 ನೀಡುತ್ತಿದೆ.ದೇಶದಲ್ಲಿ ಸುಮಾರು 3 ಲಕ್ಷ ಅಧಿಕ ಮಂದಿ ಸೋಂಕಿಗೆ ತುತ್ತಾದರೇ 8500 ಕ್ಕೂ ಅಧಿಕ ಮಂದಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುವಂತಿದೆ . ಇದುವರಿಗಿನ ಅಂಕಿ-ಅಂಶದ ಪ್ರಕಾರ ಮುಂದೆ ಅದೆಷ್ಟೋ ದೇವರಿಗೆ ಗೊತ್ತು . ಅದೆಷ್ಟೋ ಪತಿ ಪತ್ನಿಯನ್ನು ,ಅಮ್ಮ ಮಗನನ್ನು ,ತಂದೆ - ತಾಯಿ ,ಬಂಧು ಬಳಗವನ್ನೂ ಎಲ್ಲಾಕ್ಕಿಂತ ಹೆಚ್ಚಾಗಿ, ಇನ್ನೇನು ಮಗುವನ್ನು ನೋಡುವ ದಿನ ಸಮೀಪಿಸುವಾಗಲೇ ಮುಖವನ್ನು ನೋಡಲು ಸಾಧ್ಯವಾಗದ ಸುದ್ದಿ ನಿಜಕ್ಕೂ ಅರಗಿಸಿಕೊಳ್ಳಲಾಗದು. ಇಂತಹ ದುಃಖ ಭರಿತ ಕೇಸುಗಳಿಗೆ ಲೆಕ್ಕವಿಲ್ಲ ,ಅನೂ ದಿನವೂ ಏರಿಕೆ ಕಾಣುತ್ತಿದೆ . 'ಅಯ್ಯೋ ಪಾಪಾ' ಎಂಬ ಧ್ವನಿಯೊಂದಿಗೆ ಕಣ್ಣೀರು ನಮಗೆ ಅರಿವಿಲ್ಲದಂತೆ ಉದುರದೇ ಇರದು . 'ಇದು ಎಂತ ವರ್ಷವಪ್ಪಾ’ ಎಂದು ಹಿಡಿ ಶಾಪ ಹಾಕುತ್ತಿದ್ದರೇ ,ಮತ್ತದೇ ಪತ್ರಿಕೆ, ಟಿವಿಗಳಲ್ಲಿ ಅದೇ ನ್ಯೂಸ್ !ಇನ್ನೂ ಸೆಲೆಬ್ರಿಟಿಗಳಿಗಂತೂ ಕರಾಳ ವರ್ಷವೇ ಸರಿ. ಎಂದೂ ಕೂಡಾ ಈ ಪರಿಯ, ಈ ಪ್ರಾಯದ ಸಾವು -ನೋವು ಕಂಡ ಉದಾಹರಣೆಗಳಿಲ್ಲ .ಆದರೆ ಈ ವರ್ಷ ಸೆಲೆಬ್ರೆಟಿಗಳ ಬಾಳಲ್ಲಿ ಹೆಸರಂತೆ ಟ್ವೆಂಟಿ -ಟ್ವೆಂಟಿ ಆಡುತ್ತಿದೆ . ಒಟ್ಟಾರೇ ಈ ವರ್ಷ ಅದೆಷ್ಟು ಸೆಲೆಬ್ರಿಟಿಗಳು ದೂರ ಆಗಿದ್ದಾರೆ ,ನೋವು ಅನುಭವಿಸಿದ ,ಆಸ್ಪತ್ರೆ ಕದ ತಟ್ಟಿದವರ ಒಂದು ಪುಟ್ಟ ಪರಿಚಯದ ಪಟ್ಟಿ ಸಂಗಹ್ರಹಿಸಿದ್ದೇನೆ .ಇದರಲ್ಲಿ ಸಿನಿಮಾ ನಟ ,ನಟಿ,ನಿರ್ಮಾಪಕ ,ಸಂಗೀತ ನಿರ್ದೇಶಕ , ಕವಿ -ಸಾಹಿತಿ , ನ್ಯಾಯವಾದಿ,ರಾಜಕೀಯ ಮುಖಂಡರು ಇದ್ದಾರೆ .
ಬಾಲಿವುಡ್ ನಟಿ- ಶಬಾನಾ ಆಜ್ಮಿ :
ಅದು ಜನವರಿ 18 ಶನಿವಾರ ಬಾಲಿವುಡ್ ಹೆಸರಾಂತ ನಟಿ ಶಬಾನಾ ಆಜ್ಮಿ ಕಾರು ಅಪಘಾತವಾಗಿತ್ತು . ಅದೃಷ್ಟವಶಾತ್ ಶಬಾನಾ ಗಾಯಕೊಂಡಿದ್ದು ಬಿಟ್ಟರೇ, ಅಪಾಯದಿಂದ ಪಾರಾಗಿದ್ದರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು . ಮುಂಬೈನಿಂದ 60 ಕಿ.ಮೀ. ದೂರದ ಖಲಾಪುರದಲ್ಲಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಶಬಾನಾ ಅವರನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಜ್ಮಿ 1974ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ಅಂಕುರ್ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ,ಸಾಕೆಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ . 69 ವರ್ಷದ ಶಬಾನಾ ಆಜ್ಮಿ ಅವರು ಅತ್ಯುತ್ತಮ ನಟಿಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 4 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದ್ದಾರೆ.ಹಾಗೂ 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ-ಅರ್ಜುನ್ ಜನ್ಯ
ಜನಪ್ರೀಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಫೆಬ್ರವರಿ 26ನೇ ತಾರೀಕು ಬುಧವಾರ ರಂದು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದರು. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು . ‘ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಸ್ಪತ್ರೆಯ ತಂಡ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ಇನ್ನು 2 ಗಂಟೆ ತಡವಾಗಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವೂ ಸರಿಯಾಗಿದೆ. ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ' ಎಂದು ವೈದ್ಯರು ಹೇಳಿದ್ದರು.39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.ಇತ್ತೀಚೆಗೆ ತೆರೆಕಂಡ ದರ್ಶನ್ ಅಭಿನಯದ 'ಒಡೆಯ' ಸಿನಿಮಾಗೆ ಹಾಗೂ ಇನ್ನೇನು ತೆರೆ ಕಾಣಬೇಕಿರುವ 'ರಾಬರ್ಟ್' ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕ -ವಿ ಕೆ ಮೋಹನ್
ಖ್ಯಾತ ನಿರ್ಮಾಪಕ, ಉದ್ಯಮಿ ವಿ ಕೆ ಮೋಹನ್ ಅವರು ಬೆಂಗಳೂರಿನ ಪೀಣ್ಯ ಬಳಿಯಿರುವ ತಮ್ಮದೇ ಹೋಟೆಲ್ ಒಂದರಲ್ಲಿ ಮಾರ್ಚ್ 22 ರಂದು ನೇಣಿಗೆ ಶರಣಾಗಿದ್ದರು .ದಿ| ಡಾ ರಾಜ್‌ ಕುಮಾರ್‌ ಕುಟುಂಬಕ್ಕೆ ಆತ್ಯಾಪ್ತರಾಗಿದ್ದ ಅವರು . ಹಲವು ಸಿನೆಮಾಗಳ ವಿತರಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ನಿರ್ವಹಿಸಿದ್ದರು.ವಿ.ಕೆ. ಮೋಹನ್‌ ಅಲಿಯಾಸ್‌ ಕಪಾಲಿ ಮೋಹನ್‌ ಅವರಿಗೆ 62 ವರ್ಷವಾಗಿತ್ತು . ಕುಂದಾಪುರ ಮೂಲದ ವಿ.ಕೆ.ಮೋಹನ್ ವಕ್ವಾಡಿ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಸಿನಿಮಾ ನಿರ್ಮಾಣ, ವಿತರಣೆ, ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.
ನಟಿ - ಶರ್ಮಿಳಾ ಮಾಂಡ್ರೆ
ಅದು ಏಪ್ರಿಲ್ 3 ರಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆಯಿತು . ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿತ್ತು ಬಿಟ್ಟರೇ ಅಪಾಯದಿಂದ ಪಾರಾಗಿದ್ದರು .2007ರಲ್ಲಿ "ಸಜನಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಕೃಷ್ಣ, ನವಗ್ರಹ, ಹೀಗೆ ಸುಮಾರು 19 ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.ಇದಲ್ಲದೆ ಇವರು ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಸ್ಯನಟ- ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯನಟರ ಪೈಕಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಏಪ್ರಿಲ್ 6 ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 44 ವರ್ಷ ವಯಸ್ಸು ಆಗಿತ್ತು . ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ರಾಯಲ್ ಎನ್ಫೀಲ್ಡ್ ಬುಲೆಟ್ ಬ೦ಡಿಯನ್ನು ಓಡಿಸುವುದರಿ೦ದ ಇವರಿಗೆ ಈ ಬುಲೆಟ್ ಎ೦ಬ ಹೆಸರು ಸೇರಿಕೊಂಡು ಬುಲೆಟ್ ಪ್ರಕಾಶ್ ಎಂಬುದಾಗಿತ್ತು. 2002ರ ಧ್ರುವ ಚಿತ್ರದಿಂದ ಆರಂಭಗೊಂಡ ಇವರ ಸಿನಿ ಜರ್ನಿ, ಪಾರ್ಥ, ಮಸ್ತ್ ಮಜಾ ಮಾಡಿ, ಐತಲಕಡಿ ಸೇರಿದಂತೆ ರಾಜಸಿಂಹದ ನಂತ್ರ ಮುಂದುವರೆದಿತ್ತು. 2015 ರಲ್ಲಿ, ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಕನ್ನಡ ಅಷ್ಟೇ ಅಲ್ಲದೇ ಸೌಂತ್ ಇಂಡಿಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ ನಟ -ಇರ್ಫಾನ್‌ ಖಾನ್
ಬಾಲಿವುಡ್‌ ನಟ ಇರ್ಫಾನ್‌ ಖಾನ್ ಏಪ್ರಿಲ್ 29 ರಂದು ಬುಧವಾರ ಮುಂಬೈನಲ್ಲಿ‌ ನಿಧನರಾದರು. 53 ವರ್ಷದ ಇರ್ಫಾನ್,ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ಖಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕೆತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು .ಮೊದಲಿಗೆ ಇರ್ಫಾನ್ ಖಾನ್ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ನಂತರ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು. ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗ್ರೇಜಿ ಮೀಡಿಯಂ ಅವರ ಕೊನೆಯ ಸಿನಿಮಾ.
ಬಾಲಿವುಡ್ ನಟ -ರಿಷಿ ಕಪೂರ್
ಇರ್ಫಾನ್ ಖಾನ್ ನನ್ನ ಕಳೆದು ಕೊಂಡು ಕಣ್ಣೀರು ಇಡುತ್ತಿದ್ದ ಬಾಲಿವುಡ್ ಗೆ ಕೇವಲ ದಿನದಾದ ಅಂತರದಲ್ಲಿ ಇನ್ನೊಂದು ಆಘಾತ ಬರಸಿಡಿಲಿನಂತೆ ಬಂದು ಒದಗಿತ್ತು . ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.ತಂದೆ ರಾಜ್‌ ಕಪೂರ್ ಅವರ 'ಮೇರಾ ನಾಮ್ ಜೋಕರ್' ಚಿತ್ರದಲ್ಲಿನ ಬಾಲನಟನೆಗಾಗಿ ರಿಷಿ ಕಪೂರ್ 1970ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಡಿಂಪಲ್ ಕಪಾಡಿಯಾ ಜೊತೆಗೆ ಲೀಡ್ ಆಗಿ 'ಬಾಬಿ' ಚಿತ್ರದಲ್ಲಿ ಕಾಣಿಸಿಕೊಂಡ ರಿಷಿಗೆ 1974ರಲ್ಲಿ ಉತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಸಿಕ್ಕಿತ್ತು. 1973ರಿಂದ 2000ರವರೆಗೆ 92 ಸಿನಿಮಾಗಳಲ್ಲಿ ಲೀಡ್ ಆಗಿ ಕಾಣಿಸಿಕೊಂಡ ರಿಷಿ ಕಪೂರ್ ,ಅವುಗಳಲ್ಲಿ 32 ಹಿಟ್ ಸಿನಿಮಾ ನೀಡಿದ್ದರು. 'ದೊ ದೋನಿ ಚಾರ್', 'ಕಪೂರ್ & ಸನ್ಸ್' ಸಿನಿಮಾಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದರು. ಇವರ ಪತ್ನಿ ನೀತು ಸಿಂಗ್ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು.ಇವರನ್ನು ಕಳೆದು ಕೊಂಡ ಬಾಲಿವುಡ್ ಬಡವಾಗಿದೆ .
ಖ್ಯಾತ ಕವಿ- ಕೆ.ಎಸ್‌ ನಿಸಾರ್ ಅಹಮ್ಮದ್
ಖ್ಯಾತ ಕವಿ ಹಾಗೂ ಬರಹಗಾರ ಕೆ.ಎಸ್‌ ನಿಸಾರ್ ಅಹಮ್ಮದ್ ಮೇ 3 ರಂದು,ಭಾನುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು . ನಿತ್ಯೋತ್ಸವ ಕವಿ ಎಂದೇ ಪ್ರಸಿದ್ದಗಳಿಸಿದ್ದ ನಿಸಾರ್ ಅಹಮ್ಮದ್ ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ಸ್ವಗೃಹದಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ 15 ದಿನಗಳ ಹಿಂದಷ್ಟೇ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದು, ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು.ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5,1936ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (2018) 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಪ್ರಶಸ್ತಿ ,ಪಂಪ ಪ್ರಶಸ್ತಿ,ಗೊರೋರು ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೇ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಇವರನ್ನೂ ಕೂಡಾ ಈ 2020 ಬಿಡಲೇ ಇಲ್ಲ
ಹಾಸ್ಯನಟ -ಮೈಕಲ್ ಮಧು
ಏಪ್ರಿಲ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದಂತೆ ಇತ್ತ ಕನ್ನಡದ ಹಿರಿಯ ಹಾಸ್ಯನಟ ಮೈಕಲ್ ಮಧು ನಮ್ಮನ್ನು ಅಗಲಿದರು . ಅವರಿಗೆ 55 ವರ್ಷ ವಯಸ್ಸು ಆಗಿತ್ತು . ಮನೆಯಲ್ಲಿ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ,ಮೇ 13 ರಂದು ಬುಧವಾರ ಬೆಂಗಳೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ನಿಧನರಾದರು .ಕಳೆದ ಎರಡೂವರೆ ದಶಕಗಳಿಂದ ಕನ್ನಡದ ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈಕಲ್‌ ಮಧು ವಿವಿಧ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೈಕಲ್ ಮಧು,ಕೇವಲ ನಟ ಮಾತ್ರವಲ್ಲದೇ ,ನ್ರತ್ಯ ಸಂಯೋಜಕರು ಕೂಡಾ ಆಗಿದ್ದರು ಆದುದ್ದರಿಂದಲೇ ಅವರಿಗೆ ಮೈಕಲ್ ಎಂಬ ಹೆಸರು ಅಂಟಿ ಕೊಂಡಿತ್ತು.
ನಟಿ-ಮೆಬಿನಾ ಮೈಕಲ್
ಚಿತ್ರರಂಗಕ್ಕೆ ಇದೀಗ ಪಾದಾರ್ಪಣೆ ಮಾಡಿದ್ದ ಕೊಡಗಿನ ಯುವ ಪ್ರತಿಭೆ ನಮ್ಮನ್ನು ಬಿಟ್ಟು ಅಗಲಿದರು . ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನಾ ಮೈಕಲ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೇ 26 ಮಂಗಳವಾರ ದಂದು ಸಂಜೆ ಮೃತಪಟ್ಟಿರು .ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟೀಯ ಹೆದ್ದಾರಿ 75ರಲ್ಲಿ ಸಂಜೆ ಸುಮಾರು 4.30ರ ಸಮಯದಲ್ಲಿ ಅಪಘಾತ ಸಂಭವಿಸಿತ್ತು . ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು ಬೆಂಗಳೂರಿನಿಂದ ಸೋಮವಾರಪೇಟೆಗೆ ತಮ್ಮ ನಿವಾಸಕ್ಕೆ ಕಾರಿನಲ್ಲಿ ಮೇಬಿನಾ ಮೂವರ ಜೊತೆ ತೆರಳುತ್ತಿದ್ದರು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಮೆಬಿನಾ, ಪ್ರತಿಯೊಂದು ಟಾಸ್ಕನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರು. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿದ್ದ ಆಕೆ ವಿಜೇತೆಯಾಗಿದ್ದರು. ರಿಯಾಲಿಟಿ ಶೋ ಬಳಿಕ ಮಾಡೆಲಿಂಗ್ನತ್ತ ಮುಖ ಮಾಡಿದ್ದ ಮೆಬಿನಾ ಅಲ್ಲೂ ಕೂಡಾ ಯಶಸ್ಸು ಗಳಿಸಿದ್ದರು.ತಮಿಳು ಚಿತ್ರ ಒಂದರಲ್ಲಿ ನಟಿಸುತ್ತಿದ್ದರು ,ಕನ್ನಡಲ್ಲೂ ಎರಡು ಸಿನಿಮಾಗಳಿಗೆ ಅವಕಾಶ ಪಡೆದಿದ್ದರು .
ನಟಿ- ಚಂದನಾ
ಇತ್ತ ನಗರದ ತಾವರೆಕೆರೆಯಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆಯಿತು ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು .ವಿಷ ಸೇವಿಸಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.29 ವರ್ಷದ ಚಂದನಾ ,ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮೇ 30 ರಂದು ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ.ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.
ಸಂಗೀತ ನಿರ್ದೇಶಕ- ವಾಜಿದ್ ಖಾನ್
ಜೂನ್ ಮೊದಲ ದಿನವೇ ಬಾಲಿವುಡ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ವಾಜಿದ್ ಖಾನ್. ಸಾಜಿದ್ – ವಾಜಿದ್ ಜೋಡಿ ಅಂತಲೇ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಸಹೋದರರು. 1998ರಲ್ಲಿ ಸಲ್ಮಾನ್ ಖಾನ್ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಈ ಜೋಡಿ ಮತ್ತೆ ಹಿಂದಿರುಗಿ ನೋಡಿರಲಿಲ್ಲ. ಆ ಬಳಿಕ 22 ವರ್ಷಗಳ ಸಂಗೀತಪಯಣದಲ್ಲಿ 50ಕ್ಕೂ ಹೆಚ್ಚು ಹಿಟ್, ಸೂಪರ್ಹಿಟ್ ಸಿನಿಮಾಗಳಿಗೆ ಹಲವು ಚಾರ್ಟ್ಬಸ್ಟರ್ ಸಂಗೀತ ನೀಡಿದ್ದರು. ಅದರಲ್ಲೂ ಸಲ್ಮಾನ್ ಖಾನ್ರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ, ‘ದಬಾಂಗ್’, ‘ಹಲೋ’, ‘ವೀರ್’, ‘ಪಾರ್ಟನರ್’, ‘ವಾಂಟೆಡ್’ , ‘ಏಕ್ ಥಾ ಟೈಗರ್’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು. ಅವರು ಸಂಗೀತ ನೀಡಿದ ಕೊನೆಯ ಸಿನಿಮಾ ಕೂಡ ಸಲ್ಮಾನ್ ಖಾನ್ ನಾಯಕರಾಗಿದ್ದ ‘ದಬಾಂಗ್ 3’.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್, ಅವರನ್ನು ಕೆಲ ದಿನಗಳ ಹಿಂದೆ ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಪರಿಣಾಮ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ. ಲಾಕ್ಡೌನ್ ಮುಗಿದು ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತೆ ಅಂತ ಎದುರು ನೋಡುತ್ತಿದ್ದ ಬಾಲಿವುಡ್ ಮಂದಿ ಮತ್ತೆ ಕಣ್ಣೀರಾಗಿದ್ದಾರೆ.
ನಟ -ಚಿರಂಜೀವಿ ಸರ್ಜಾ
ಅದು ಭಾನುವಾರ ಜೂನ್ 7 ರಂದು ಮಧ್ಯಾಹ್ನ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಇಡೀ ಸ್ಯಾಂಡಲ್ವುಡ್ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು. ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ಕುಟುಂಬದೊಟ್ಟಿಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದಾರೆ. 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದರು.1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ನಿರ್ಮಾಪಕ- ಅನಿಲ್ ಸೂರಿ
ಜೂನ್ 3 ಬುಧವಾರ ದಂದು ಇನ್ನೊಂದು ಸ್ಯಾಡ್ ನ್ಯೂಸ್ ಬಂದಿತ್ತು . ಕೊರೋನಾ ಸೋಂಕಿಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ಸಾವನ್ನಪ್ಪಿದ್ದರು ಎಂದು .ಅವರಿಗೆ 77 ವರ್ಷ ವಯಸ್ಸಾಗಿತ್ತು . ಅನಿಲ್ ಸೂರಿ ಅವರಿಗೆ ಕಳೆದ ಜೂನ್ 2ರಂದು ಜ್ವರ ಕಾಣಿಸಿಕೊಂಡಿತು. ಮರು ದಿನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಂತೆ . ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಯಿತು. ಆದರೆ ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ‌ ಅವರು‌ ಸಾವನ್ನಪ್ಪಿದ್ದರು ಎಂದು ತಿಳಿದು ‌ಬಂದಿದೆ. ಅನಿಲ್‌ ಸೂರಿ ಅವರು ಕರ್ಮಯೋಗಿ, ರಾಜ್ ತಿಲಕ್ ನಂತಹ ಹೆಸರಾಂತ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ರಾಜಕೀಯ ಮುಖಂಡ -ಆಸ್ಕರ್ ಫೆರ್ನಾಂಡಿಸ್
ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಜೂನ್ 10 ರಂದು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷ ಪ್ರಾಯದ ಆಸ್ಕರ್ ಫರ್ನಾಂಡಿಸ್ ಅವರು ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ನಗರದ ಕೊಡಿಯಾಲಬೈಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ.ಹಿರಿಯ ಕಾಂಗ್ರೆಸ್ ಮುಖಂಡ ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಉಡುಪಿ ಮೂಲದವರಾದ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.ಅವರು ಆದಷ್ಟು ಬೇಗ ಚೇತರಿಕೆ ಕಂಡು ತಮ್ಮ ನಿವಾಸಕ್ಕೆ ಬರಲಿ ಎಂದು ಆಶಿಸೋಣ
ನ್ಯಾಯವಾದಿ- ಎಂ.ಸಿ.ನರಸಿಂಹನ್
ಹೈಕೋರ್ಟ್ ನ ಪ್ರಸಿದ್ಧ ಕಾರ್ಮಿಕ ನ್ಯಾಯವಾದಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಮಾಜಿ ಶಾಸಕ ಎಂ.ಸಿ.ನರಸಿಂಹನ್ ಜೂನ್ 10 ರಂದು ಬುಧವಾರ ಸಂಜೆ 5 ಗಂಟೆಗೆ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು . ಅವರಿಗೆ 98 ವರ್ಷ ವಯಸ್ಸು ಆಗಿತ್ತು ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ.ನರಸಿಂಹನ್ ಅವರು ಕಾರ್ಮಿಕ ವಿವಾದಗಳ ಬಗೆಗಿನ ಪ್ರಕರಣಗಳ ವಾದ ಮಂಡನೆಯಲ್ಲಿ ಹೆಸರಾಂತ ವಕೀಲರಾಗಿದ್ದರು.ರಾಜ್ಯದ ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು. 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು. .ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.
ಬಾಲಿವುಡ್- ನಟ ಸುಶಾಂತ್ ಸಿಂಗ್ ರಜಪೂತ್
ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರ ಶುಕ್ರವಾರ ದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 34 ವರ್ಷದ ಸುಶಾಂತ್ ಈ ಕೃತ್ಯ ಮಧ್ಯಾಹ್ನ 1.30ರ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ,'ಪವಿತ್ರ ರಿಶ್ತಾ' ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. '' ಕಾಯ್ ಪೋ ಚೇ' ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, 11 ಚಿತ್ರಗಳಲ್ಲಿ ನಟಿಸಿದ್ದು, ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.ಅವರು ನಟಿಸಿದ್ದ 'ಶುದ್ಧ್ ದೇಶಿ ರೊಮ್ಯಾನ್ಸ್' ಸಿನಿಮಾದ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಸುಶಾಂತ್ ಸಿಂಗ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.'ಕಿಸ್ ದೇಸ್ ಮೇ ಮೇರಾ ದಿಲ್' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಸುಶಾಂತ್‍ಗೆ 'ಪವಿತ್ರ ರಿಶ್ತೆ' ಧಾರಾವಾಹಿ ಟೆಲಿವಿಷನ್ ಸ್ಟಾರ್ ವ್ಯಾಲ್ಯೂ ನೀಡಿತ್ತು.ಇವರ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿದ ಬಾಲಿವುಡ್ ಇವರನ್ನು ಕೈ ಬೀಸಿ ಕರೆಯಿತು. 'ಡಿಟೆಕ್ಟಿವ್ ಬ್ಯೂಮ್ ಕೇಶ್ ಭಕ್ಷಿ' ,' ರಭಟಾ', 'ಸಂಚಾರಿಯಾ', 'ಚಿಚ್ಚೋರೆ ಮೊದಲಾದ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೋಜ್ಞ ಅಭಿನಯದ ಮೂಲಕ ರಂಜಿಸಿದ ಸುರದ್ರೂಪಿ ನಟ ರಜಪುತ್ ಚಿತ್ರ ರಸಿಕರನ್ನು ತಮ್ಮ ಅಗಾಧ ಪ್ರತಿಭೆಯಿಂದ ರಂಜಿಸಿದರು.ಇಂದು ಅತ್ಯುತ್ತಮ ಟೆಲಿವಿಷನ್ ನಟ , ಸ್ಕ್ರೀನ್ ಪ್ರಶಸ್ತಿ, ಜೀ ಅವಾಡ್ರ್ಸ್, ಮೆಲ್ಬೋರ್ನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಸುಶಾಂತ್ ,ನಟನೆ ಅಲ್ಲದೆ ಅದ್ಭುತ ನೃತ್ಯ ಪಟುವೂ ಆಗಿದ್ದರು. ಅವರದೇ ಆದ ನವೋದ್ಯಮವನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಇದು ಸಾವು ನೋವು ಅನುಭವಿಸಿದ ಸೆಲೆಬ್ರಿಟಿಗಳ ಸಣ್ಣ ನೋಟವಾಗಿದೆ, ನಾವುಗಳು ದಿನನಿತ್ಯ ಇವರ ಬಗ್ಗೆ ಕಂಡು ಕೇಳಿ ತಿಳಿದು ಕೊಂಡಿದ್ದೇವೆ.ಸಾಕಷ್ಟು ಇವರುಗಳ ಸಿನಿಮಾಗಳನ್ನು ನೋಡಿದ್ದೇವೆ .ಅವರುಗಳು ಹೇಗೋ ನಮಗೆ ಅತೀ ಆಪ್ತರೆನ್ನಿಸಿ ಬಿಡುತ್ತಾರೆ. ಏನೇ ಇರಲಿ ಸಾವಿನ ದವಡೆಯನ್ನು ಸ್ಪರ್ಶಿಸಿ ಬಂದವರು,ಅತೀ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರನ್ನು ಕಂಡರೆ ನಿಜಕ್ಕೂ ದುಃಖವಾಗುತ್ತದೆ,ಆವರೆಲ್ಲರಿಗೂ ಶಾಂತಿ ದೊರಕಲಿ ಇನ್ನು ಉಳಿದಿರುವ 2020 ಅರ್ಧ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಆಶಯ ನಮ್ಮೆಲ್ಲರದ್ದು ಆಗಿರಲಿ .





.

ಶನಿವಾರ, ಜೂನ್ 13, 2020

ಕಾಲ ಮಿತಿಗೆ ಇಳಿದ ಯಕ್ಷಗಾನ ಮೇಳಗಳು


ಹೌದು !ಕಾಲಕ್ಕೆ ತಕ್ಕಂತೆ ಕೋಲ ಎಂಬ ಆಡು ನುಡಿ ನಮ್ಮಲಿದೆ . ಎಲ್ಲವೂ ಕಾಲದ ಮಹಿಮೆ .ಕಾಲಾಯ ತಸಂಹೀ ನಮಃ ಎಂದು ಅದಕ್ಕೆ ಹೇಳುದೇನೋ ?ಗಂಡು ಕಲೆ ಯಕ್ಷಗಾನ ಕರಾವಳಿ ಕರ್ನಾಟಕದ ಜನಪ್ರೀಯ ಜಾನಪದದ ರಂಗ ಭೂಮಿ ರೂಪ ,ಧಾರ್ಮಿಕ ಕಲೆ ,ನವ ರಸವನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಜನಮನವನ್ನು ಯಥೇಚ್ಛವಾಗಿ ತಣಿಸುವ ಅಭೂತ ಪೂರ್ವ ಕಲಾಪ್ರಕಾರ, ಭಕ್ತಿ ,ಭಾವವನ್ನು ಮೆರೆಯುವ ದೇವತಾರಾಧನೆ ಕಲೆ. ಚೆಂದದ ವೇದಿಕೆ,ನೃತ್ಯ, ಮಾತುಗಾರಿಗೆ ,ಹಾಡುಗಾರಿಕೆ ,ವೇಷ -ಭೂಷಣ, ಚಂಡೆ -ಮದ್ದಳೆ ಶ್ರುತಿಯ ನಿನಾದ ಇವೆಲ್ಲವನ್ನೂ ಒಂದೇ ಸೂರಿನಡಿ ಕಟ್ -ಕಾಪಿ -ಪೇಸ್ಟ್ ಇಲ್ಲದೇ ನೇರವಾಗಿ ಕಾಣಸಿಗುವ ಏಕೈಕ ಕಲೆ ಅದು ಯಕ್ಷಗಾನ .ಇದರಲ್ಲಿ ತೆಂಕು ಮತ್ತು ಬಡಗು ತಿಟ್ಟು ಎಂಬ ಎರಡು ವಿಧಗಳಿವೆ. ಬಡ ಬೆಡಗು ಎಂದು ಇನ್ನೊಂದು ವಿಧ ವಿದ್ದರೂ ,ಅದು ಬಡಗು ತಿಟ್ಟು ಮಾದರಿ.ಯಕ್ಷಗಾನದ ಪದ್ಧತಿ ಒಂದೇಯಾದರೂ , ತುಸು ಪರಿ ಮಾತ್ರ ಬೇರೆ. ಇತ್ತೀಚಿಗೆ ಜನಪ್ರೀಯತೆ ಗೊಳ್ಳುತ್ತಿರುವ ತಾಳ ಮದ್ದಳೆ ಕೂಡಾ ಯಕ್ಷಗಾನದ ಇನ್ನೊಂದು ಭಾಗ ,ಮಗ್ಗುಲು .ಇನ್ನು ಯಕ್ಷಗಾನದ ಮೇಳಗಳಲ್ಲಿ ಎರಡು ವಿಧವಿದೆ.ಬಯಲಾಟ ಮೇಳ ,ಮತ್ತು ಡೇರೆ (ಟೆಂಟ್)ಮೇಳ . ಬಯಲಾಟ ಎಂದರೆ ದೇವಸ್ಥಾನದ ವತಿಯಿಂದ ನಡೆಯಲ್ಪಡುವ ಸೇವಾದರ ಹರಕೆಗನುಗುಣವಾಗಿ ನಡೆಯುವ ಯಕ್ಷಗಾನ ಮೇಳವಾದರೇ, ಅಲ್ಲಲ್ಲಿ ಡೇರೆ ಇಟ್ಟು ನಿರ್ದಿಷ್ಟ ಟಿಕೆಟ್ ನೊಂದಿಗೆ ಆಡುವ ಆಟಕ್ಕೆ ಡೇರೆ ಮೇಳ ಎಂದು ಕರೆಯಲಾಗುತ್ತದೆ .ಹೆಚ್ಚಾಗಿ ಹರಕೆ ಆಟಗಳೇ ಅಧಿಕ ಪ್ರಾಮಾಣದಲ್ಲಿರುವುದರಿಂದ ಬಯಲಾಟಗಳೇ ಹೆಚ್ಚು ಕಾಣಸಿಗುತ್ತದೆ. ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಇಂದಿಗೂ ಸಹಾ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಯಕ್ಷಗಾನ ಪ್ರೀಯರ ಪ್ರೋತ್ಸಾಹ ,ಧಾರ್ಮಿಕತೆಯಲ್ಲಿನ ನಂಬಿಕೆಯೇ ಪ್ರಧಾನ ಅಂಶವೆನ್ನಲು ಅಡ್ಡಿಯಿಲ್ಲ .ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ದಿನದಿಂದ ದಿನಕ್ಕೆ ಒಂದೊಂದು ಕ್ಷೇತ್ರ ದಿಂದ ಹುಟ್ಟಿಕೊಳ್ಳುತ್ತಿರುವ ಯಕ್ಷಗಾನ ಮೇಳಗಳೇ ಸಾಕ್ಷಿ.
ಏನೇ ಇರಲಿ, ಆದರೆ ಬೇಸರದ ವಿಚಾರವೆಂದರೆ ಹೆಚ್ಚಿನ ಯಕ್ಷಗಾನ ಮೇಳಗಳು ಕಾಲ ಮಿತಿಗೆ ಸೀಮಿತವಾಗಿರುವುದು. ಸಂಜೆ 7 ಗಂಟೆಯಿಂದ ರಾತ್ರಿ 12ರ ಒಳಗೆ ಕಥಾಪ್ರಸಂಗವನ್ನು ಪೂರ್ಣಗೊಳಿಸಿ ಪೆಟ್ಟಿಗೆಯನ್ನು ಕಟ್ಟುವ ಪದ್ಧತಿ ಜಾರಿಯಲ್ಲಿದೆ.ಆರಂಭದಲ್ಲಿ ಒಂದೆರಡು ಮೇಳಗಳಿದ್ದೂ ,ತದನಂತರ ಅದರ ಅಂಕೆ ಸಂಖ್ಯೆ ವ್ರದ್ದಿಸುತ್ತಾ ಹೋಗುತ್ತಿದೆ.ಇದು ಹಲವರಿಗೆ ಅರಗಿಸಿಕೊಳ್ಳಲಾರದ ವಿಚಾರವೆಂದರೂ, ಅತಿಶೋಯೋಕ್ತಿಯಾಗಲಾರದು. ಬೆಳಿಗ್ಗೆ ತನಕ ನಿದ್ರೆ ಬಿಟ್ಟು ನೋಡುವವರ ಸಂಖ್ಯೆ ಕುಂಠಿತಗೊಂಡಿದೆ .,ಈಗೇನಿದ್ದರೂ ಜನರು ಪಾಸ್ಟ್ ಬದುಕಿಗೆ ಹೊಂದಿಕೊಂಡಿದ್ದಾರೆ.ಎಲ್ಲವೂ ಬೇಗ ಬೇಕು.,ವೇಗದ ಜಿಂದಗಿಯಲ್ಲಿ ಮನೋರಂಜನಾತ್ಮಕವಾಗಿಯೂ ,ಸಹಾ ಜನತೆ ಅದನ್ನೇ ಬಯಸುವುದರಿಂದ ವೀಕ್ಷಕರ ಕೊರತೆ ನಿವಾರಣೆಗೆ ಕಾಲ ಮಿತಿ ಮಾಡದ ವಿಧಿಯಿಲ್ಲ.,ಆಟ ಆಡಿಸುವ ಮನೆಯ ನಾಲ್ಕು ಮಂದಿ ಮತ್ತು ಕಲಾವಿದರುಗಳೇ ಬಿಟ್ಟರೇ ,ಪ್ರೇಕ್ಷಕರ ಸಂಖ್ಯೆ ಬೆರಳಣಿಕೆಷ್ಟು ಎಂಬುದು ಸತ್ಯಕ್ಕೆ ಅರ್ಹವಾದರೂ ,ಸುಮಾರು 5-6 ಶತಮಾನಗಳ ಇತಿಹಾಸ ಇರುವ ಯಕ್ಷಗಾನ ಕಲೆಗೆ ಭಂಗ ತರುವುದು , ಹೀಗೆ ತುಂಡರಿಸುವುದು ಎಷ್ಟು ಸಮಂಜಸ ? ಕಥೆಗಳಲ್ಲಿ ಕಟ್ ,ಕೆಲವು ಪಾತ್ರಗಳ ಪ್ರವೇಶವೂ ಇಲ್ಲ.ಸ್ವಷ್ಟ ,ಸ್ವಚ್ಛ ,ಶುದ್ಧ ಸಂಭಾಷಣೆ, ಚಂಡೆ-ಮದ್ದಳೆಯೊಂದಿಗಿನ ನಿನಾದದ ನೃತ್ಯ ,ಭಾಗವತಿಕೆ ಪದಗಳೇ ಪೂರ್ಣ ಯಕ್ಷಗಾನದ ಜೀವಾಳ., ಅದೇ ಇಲ್ಲ ಅಂದ ಮೇಲೆ ಯಕ್ಷಗಾನ ನೋಡುವುದಾದರೇ, ಅದು ಯಕ್ಷಗಾನ ಅಲ್ಲವೇ ಅಲ್ಲ ಅನ್ನುವ ಕಟು ಭಾವನೆ ಮನಸ್ಸಿನಲ್ಲಿ ಪುಟಿದೇಳುತ್ತದೆ. ಎಲ್ಲಾ ವಿಚಾರದಲ್ಲೂ ,ಕಾಲಕ್ಕೆ ಹೊಂದಿಕೊಂಡು ಬಾಳುವುದು ಸರಿಯಲ್ಲ .ಯಕ್ಷಗಾನವೆಂದರೆ ಪರಂಪರೆಯ ಕಲೆ .ಇದೀಗ ಕಾಲ ಮಿತಿಯಲ್ಲಿರುವ ಯಕ್ಷಗಾನ ಕಾಲ ಕ್ರಮೇಣ ಕಾಲವಾದರೂ ಅಚ್ಚರಿ ಇಲ್ಲ.ಅದಕ್ಕಾಗಿ ಯಕ್ಷಗಾನದ ಪೋಷಕರು , ಪ್ರೋತ್ಸಾಹಕರು ಸಹರಿಸಬೇಕು . ಯಕ್ಷಗಾನ ಉಳಿಯಬೇಕು .ಬೆಳೆಯಬೇಕು . ಕಲೆಯು ಉಳಿವು ಮತ್ತು ಬೆಳವಣಿಗೆ ಯಕ್ಷಗಾನ ಪ್ರೀಯರು ಯೋಚಿಸಬೇಕಾಗಿದೆ.ಸಂತೋಷದ ವಿಚಾರವೆಂದರೇ ಡೇರೆ ಮೇಳಗಳೂ,ಸೇರಿದಂತೆ ಕೆಲವು ಬಯಲಾಟ ಮೇಳಗಳು ಇಂದಿಗೂ ಸಹಾ ಮುಂಜಾನೆ ತನಕ ಆಟ ಆಡಿಸುತ್ತಿವೆ ಇದು ಕೊಂಚ ತೃಪ್ತಿದಾಯಕ ಬೆಳವಣಿಗೆಯಾದರೂ , ಇವುಗಳು ಭವಿಷ್ಯತ್ ನಲ್ಲಿ ಕಾಲಮಿತಿಗೆ ಜಾರದಿರಲಿ ಎಂಬ ವಿಶ್ವಾಸ ,ಆಶಯ ನನ್ನದು.ರಾತ್ರಿ 9:30 ಕ್ಕೆ ಪ್ರಾರಂಭವಾಗಿ ಮುಂಜಾನೆ 6:00 ಗಂಟೆ ತನಕ ಮಂಗಳ ಪದ್ಯ ಆಲಿಸಿ, ಮನೆಕಡೆ ಹೆಜ್ಜೆ ಹಾಕುವ ಪೂರ್ತಿ ಪ್ರಮಾಣದ ಪಾತ್ರವರ್ಗವನ್ನು ಕಣ್ತುಂಬಿಸಿಕೊಳ್ಳುವ 3-4 ಭಾಗವತರುಗಳಿಂದ ಸಂಪೂರ್ಣ ಪದ್ಯದ ರಸಗವಳವನ್ನು ಆಸ್ಪಾದಿಸುವ ,ಆಲಿಸುವ ,ಕಡ್ಲೇಕಾಯಿ ,ವಡೆ ,ಅಡಿಗಡಿಗೆ ಚಾ ಹೀರುವ, ಕಣ್ಣು ಕೂರುವ, ಕೋಳಿ ನಿದ್ರೆ ಮಾಡುವ ಮಜಾನೇ ಬೇರೆ ಅಲ್ಲವೇ ?!

ಸೋಮವಾರ, ಮೇ 4, 2020

ಕರೋನ -ಕೊಡೋಣಾ :ನಾಚಿಕೆಯಾಗಬೇಕು ಇಂತಹ ಜನಪ್ರತಿನಿಧಿಗಳಿಗೆ !


ಕರುಣೆ ಇಲ್ಲದ ಕರೋನ ಎಂಬ ಮಹಾಮಾರಿಯ ಹೊಡೆತಕ್ಕೆ ಇಡಿ ವಿಶ್ವವೇ ನಲುಗಿ ಹೋಗಿದೆ ,ಶ್ರೀಮಂತ ರಾಷ್ಟ್ರಗಳು ತಮ್ಮ ಕೈಯಲ್ಲಿ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿರುವುದು ತಿಳಿದಿರುವ ವಿಚಾರ ಲಾಕ್ ಡೌನ್ ಒಂದೇ ಪರಿಹಾರ ಎಂದು ಎಣಿಸಿದರೂ ,ಕೋಟಿಗಟ್ಟಲೆ ದೇಶವಾಸಿಗಳನ್ನು ಕೂಡಿಹಾಕಿ ಇಡಲು ಸಾಧ್ಯವೇ ?ಹೊಟ್ಟೆಗೆ ಹಿಟ್ಟು ಬೇಕಲ್ಲವೇ ? ಇಡೀ ವಿಶ್ವವೇ ಆರ್ಥಿಕತೆಯಲ್ಲಿ ಕುಸಿತ ಕಂಡಿದ್ದು ಶ್ರೀಮಂತ ರಾಷ್ಟ್ರ್ರಗಳೂ ತಲೆ ಮೇಲೆ ಕೈ ಹೊತ್ತು ಕೊಂಡು ಕುಳಿತಿವೆ . ಹಾಗೋ- ಹೇಗೋ ತಮ್ಮ ಜನಸಂಖ್ಯೆಗನುಗುಣವಾಗಿ ನಿಭಾಯಿಸಬಲ್ಲ ತಾಕತ್ತು ಕೆಲ ರಾಷ್ಟ್ರಗಳಿಗಿವೆ , ಅವುಗಳು ಏನೋ ಒಂದು ಸಾಧಿಸಬಲ್ಲವು . ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೂಲಸೌಕರ್ಯದ ವಿಚಾರದಲ್ಲಿ ಅಷ್ಟೊಂದು ಬಲಶಾಲಿಯಾಗಿರದ ನಮ್ಮ ದೇಶಕ್ಕೆ ಇದು ಬಹಳ ಹೊರೆ ತಂದಿದೆ ,ಹೊಡೆತ ಬಿದ್ದಿದ್ದೂ ಅಷ್ಟಿಷ್ಟಲ್ಲ 21 ದಿನಗಳ ಕಾಲ ಬಂಧಿಯಾಗಿ, ಪುನ: ಮೇ 3ರವರೆ ಸಮೀಪ ತಲುಪ ಮೊದಲೇ ಮತ್ತೆ ಮೇ 17 ಕ್ಕೆ ಮುಂದುವರಿದಿದೆ ಈ ಲಾಕ್ ಡೌನ್ ! ನಿಜಕ್ಕೂ ಅರಗಿಸಿಕೊಳ್ಳಗಾದ ವಿಚಾರವಾದರೂ ಅನುಭವಿಸದೇ ವಿಧಿ ಇಲ್ಲ ಉಳ್ಳವರು ಹೇಗೋ ಇದ್ದುದ್ದರಲ್ಲಿ ಜೀವನ ಸಾಗಿಸುತ್ತಾ ಇದ್ದರೆ ಇಲ್ಲದವರಿಗೆ ಒಂದು ಹೊತ್ತು ಊಟಕ್ಕೂ ಪರದಾಡಬೇಕಾದ ಸಂದರ್ಭದ ಬಂದೊದಗಿದೆ ,ದಿನಗೂಲಿ ನೌಕರರ ಪಾಡು ಹೇಳತೀರದು .
ಅವರನ್ನೆಲ್ಲರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ದಿನನಿತ್ಯ ಬಳಕೆಯ ಸಾಮಾಗ್ರಿಗಳನ್ನು ಪೂರೈಸಬೇಕಾಗಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ಜಂಟಿ ಆಶ್ರಯದಲ್ಲಿ ರೇಷನ್ ವಿತರಣೆಯನ್ನು ಮಾಡುತ್ತಿವೆ . ನೌಕರಿಯಲ್ಲಿನ ತಿಂಗಳ ಸಂಬಳವೂ ನಿರಂತರವಾಗಿ ನಡೆಯಲು ಆಯಾಯ ಕಂಪನಿ ಸಂಸ್ಥೆಗಳಿಗೆ ಆದೇಶವನ್ನೂ ನೀಡಲಾಗಿದೆ , ಜನಧನ ಯೋಜನೆ ಜಾರಿಯಲ್ಲಿದೆ. ಅಷ್ಟು ಮಾತ್ರ ಸಾಕೇ ? ಭಾರತದ ಪಾಲಿಗೆ ದೊಡ್ಡ ಸವಾಲೇ ಸರಿ..! ಆರ್ಥಿಕತೆ ಮುಮ್ಮಲ ಮಲಗಿದೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವು ದಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ ,ಒಂದು ಪಕ್ಷದಲ್ಲಿ ಸರಿ ಕಂಡರೂ , ಇನ್ನೊಂದು ದಿಕ್ಕಿನಲ್ಲಿ ಇದು ನಗೆಪಾಟಲಿಗೆ ಈಡಾಗುತ್ತಿದೆ ಈ ಸಮಯದಲ್ಲಿ ದೇಶಕ್ಕೆ ದೇಣಿಗೆ ಅನಿವಾರ್ಯವೇನೋ ಆದರೂ, ಅದನ್ನು ಜನಸಾಮಾನ್ಯರ ಮೇಲೆ ಹೊರಿಸುವುದು ತರವಲ್ಲ ಸಂಸದರು ,ಶಾಸಕರು ,ಸರ್ಕಾರದ ಹತ್ತಾರು ಭಾಗದಲ್ಲಿರುವ, ಈಗಾಗಲೇ ಸರ್ಕಾರದ ಬೊಕ್ಕಸದಿಂದ ತಿಂದು ತೇಗಿ ಮಿಕ್ಕಿದ ಸಂಪತ್ತಿನ ಅಲ್ಪ ಪ್ರಮಾಣದಲ್ಲಿ ಕೊಟ್ಟರೆ ಸಾಕು ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗುವುದರಲ್ಲಿ ಎರಡು ಮಾತಿಲ್ಲ . ನಾಲ್ಕು ಸಾವಿರದಿಂದ ಐದು ಸಾವಿರ ತನಕ ಸಂಸದರು ,ಶಾಸಕರು ನಮ್ಮ ದೇಶದಲ್ಲಿ ಇದ್ದಾರೆ ಶಾಸಕರಾಗುವ ಮೊದಲು ಕೋಟಿ ಕೋಟಿ ತಮ್ಮ ಆಸ್ತಿಪಾಸ್ತಿಯನ್ನು ತೋರಿಸುತ್ತಾರೆ,ಆದಮೇಲೆ ಅದೆಷ್ಟು ಕೋಟಿಯೋ ಅವರಿಗೆ ಲೆಕ್ಕ ವಿಲ್ಲಾ ಬಿಡಿ ! ಇವರುಗಳಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಸಿಯಬೇಕಾಗಿದೆ ಅಥವಾ ದೇಶದ ರಕ್ಷಣೆಗೆ ಅವರು ಸೌಜನ್ಯಕ್ಕಾದರೂ , ಆಗಮಿಸಬೇಕು ಅಲ್ಲವೇ? ನಾಚಿಕೆ ಇಲ್ಲವೇ ಜನಪ್ರತಿನಿಧಿಗಳಿಗೆ ? ಒಂದಷ್ಟು ಮಂದಿ ಅನಿವಾರ್ಯತೆಗೆ ಚೂರು-ಪಾರು ಒಂದು ದಿನದ್ದೋ , ತಿಂಗಳದ್ದು ವರ್ಷದ ಸಂಬಳವನ್ನು ಪರಿಹಾರ ನಿಧಿಗೆ ಕೊಟ್ಟರೆ ಇನ್ನು ಕೆಲವರಿಗೆ ನಾಚಿಕೆಯಾಗಬೇಕು ಒಂದೂ ನಯಾ ಪೈಸೆಯನ್ನೂ ಬಿಚ್ಚಿಲ್ಲ ಚುನಾವಣೆ ಬಂದಾಗ ಹಣ ಹೆಂಡ ಇನ್ನಿತರ ಸಾಮಾನುಗಳನ್ನು ಹಂಚುವ ಇವರುಗಳು ಈಗ ಸತ್ತಿದ್ದಾರೆ ?, ಕೋಟಿಗಟ್ಟಲೇ ಖರ್ಚು ಮಾಡಿ ಮಕ್ಕಳ ಮದುವೆ ಮಾಡಲಿಕ್ಕೆ , ಕೋಟಿಗೆ ಕಿಂಚಿತ್ ಲೆಕ್ಕವಿಲ್ಲದಂತೆ ಯಂ ಎಲ್ ಏ ಗಳನ್ನು ಖರೀದಿ ಮಾಡಲು ಹಣ ವಿದೆ ಆದರೆ ದೇಶ ಸನ್ಕಷ್ಟದಲ್ಲಿರುವಾಗ,ವೋಟು ಹಾಕಿದ ಜನತೆ ಹಸಿವಿನಿಂದ ಸಾಯುತ್ತಿರುವಾಗ ಎಲ್ಲಿದೆ ನಿಮ್ಮ ಮೊಸಳೆ ಕಣ್ಣೀರು ? ಎಲ್ಲಿದೆ ನಿಮ್ಮ ರಿಯಲ್ ಸಹಾಯ ಹಸ್ತದ ಬೆಳವಣಿಗೆ ? ಭಾವೋದ್ವೇಗ ಉಂಟಾಗುತ್ತಿದೆ , ಕೋಪ ನೆತ್ತಿಗಿರುತ್ತಿದೆ ,ರಕ್ತ ಕುದಿಯುತ್ತಿದೆ . ಇವೆರೆಲ್ಲಾ ಬದಲಾಗೋಲ್ಲ , ಯಾರೂ ಕೂಡಾ ರಿಯಲ್ ಹೀರೊ ಅಲ್ಲಾ ಕೇವಲ ಕುರ್ಚಿಯ ಲಾಲಸೆಗೆ ಒದ್ದಾಡುವ ಸ್ವಾರ್ಥಿಗಳು .. ! ಯೋಚಿಸಿ ಪ್ರಜೆಗಳೇ,ಆಲೋಚಿಸಿ ಇದೆ ಸರಿಯಾದ ಸಮಯ ಸಹಾಯ ಮಾಡಿದವರ ಮೇಲೆ ಗಮನವಿರಲಿ ಮುಂದಿನ ಚುನಾವಣೆಗೆ ಅಸ್ತ್ರ ನಿಮ್ಮಲ್ಲೇ ಇದೆ ಈಗಲೇ ಮಸೆಯಲು ಸಿದ್ದರಾಗಿ .
ಮೆಚ್ಚಬೇಕು ಇಂಥವರುಗಳ ಕಾರ್ಯ: ಅದೆಷ್ಟು ವಾಹನಗಳು ,ಹೋಟೆಲ್, ಕಾರ್ಖಾನೆ, ಐಷಾರಾಮಿ ದೊಡ್ಡ ದೊಡ್ಡ ಬಂಗಲೆ ಅವೆಲ್ಲವನ್ನೂ ಹೊಂದಿರುವ ಜನಪ್ರತಿನಿಧಿಗಳ ಪೈಕಿ ,ಯಾವೊಬ್ಬನಿಂದಲೂ ಸಹಾ ಎಳ್ಳು ಕಾಳಷ್ಟು ಉಪಯೋಗ ವಾಗಿಲ್ಲ. ನಿಜಕ್ಕೂ ಮೆಚ್ಚಬೇಕು ನಮ್ಮಲ್ಲಿ ಏನೂ ಇಲ್ಲದಿದ್ದರೂ ಸಹಾ ಹಲವಾರು ಮನಸ್ಸುಗಳು ಸಹಾಯಕ್ಕೆ ಬಂದಿದೆ ತಮ್ಮಿಂದ ಏನು ಕೊಡಲು ಇಲ್ಲದಿದ್ದರೂ ದುಡಿಯುವ ,ತುಡಿಯುವ ಮನಸ್ಸುಗಳಿಗೆ ಕೃತಜ್ಞತೆ ಸಲ್ಲಿಸಲೇಬೇಕು. ತಮ್ಮಲ್ಲಿ ಒಂದು ರೂಪಾಯಿ ಇದ್ದರೇ, ಅದರಲ್ಲಿ ಇಲ್ಲದವರಿಗೆ ಐವತ್ತು ಪೈಸೆ ಕೊಡಲು ಇಷ್ಟ ಪಡುವ ಮನಸ್ಸುಗಳು ಈ ದಿನಗಳಲ್ಲಿ ತೆರೆಮರೆಯಲ್ಲಿ ಬೆಳಕಿಗೆ ಬರುತ್ತಿವೆ. ಉಡುಪಿ ಮಲ್ಪೆಯ ಮೀನು ಮಾರುವ ಮಹಿಳೆಯೆ ಶಾರದಕ್ಕನ ನೋಡಿ ಮೊನ್ನೆ ಸುದ್ದಿಯಾದಳು ಮನೆ ಕಟ್ಟಲಿಕ್ಕೆ ಇಟ್ಟ ಮೂವತ್ತು ಸಾವಿರ ರೂಪಾಯಿನ್ನು ಈ ಸಮಯದಲ್ಲಿ ತನ್ನಂತೆ ಇರುವ ಬಡ ಜೀವಕ್ಕೆ ಆಸೆರೆಯಾದಳು. ಸುಮಾರು ೧೪೦ ಮನೆಗಳಿಗೆ ಅಕ್ಕಿ ವಿತರಿಸಿದ ಧೀರೆಯಾದಳು. , ಬೆಂಗಳೂರಿನಲ್ಲಿ ಪಾಕೆಟ್ ಹಾಲಿಗೆ ಹೊಡೆದಾಟ ,ಹಾತುರ ಪಡೆಯುವ ಕೆಲವು ಮನಸ್ಥಿತಿಗಳು ಇವರನ್ನು ನೋಡಿ ಕಲಿಬೇಕು , ಯಾವ್ದೋ ಒಂದು ಸಂಸ್ಥೆ ,ಕಡು ಬಡತನವನ್ನು ಹೊಂದಿದ್ದ ಒಂಟಿ ಮಹಿಳೆ ಮನೆಗೆ ಅಗತ್ಯ ಸಾಮಗ್ರಿಯನ್ನು ತಂದು ಕೊಟ್ಟರೆ ಪಾಪ ಆಕೆ ನನಗೆ ಬೇಡ ಈಗಾಗಾಲೇ ಸಿಕ್ಕಿದೆ ಬೇರೆಯವರಿಗೆ ಕೊಡಿ ಅವರಿಗೂ ಸಹಾಯವಾಗುತ್ತದೆ ಎಂದು ವಿನಮ್ರ ವಾಗಿ ಹೇಳುವ ಆ ವಿಡಿಯೋ ಕಣ್ಣೇರು ತರಿಸುತ್ತಿದೆ . ಆಟೋ ರಿಕ್ಷಾ ಆನಂದಣ್ಣ . ಜೀವನವೋಪಾಯಕ್ಕೆ ಬಾಡಿಗೆಗೆ ಒಂದು ಸಣ್ಣ ಆಟೋರಿಕ್ಷಾ ಇದೆ. ತೀರಾ ಗ್ರಾಮೀಣ ಭಾಗದಲ್ಲಿರುವ ಇವರು ಮೊದಲೇ ಬಡತನದಲ್ಲಿ ಬೇಯುತ್ತಾ ಬಂದವರು ,ಅವರಿಗೂ ಅರಿವಿದೆ ಬಡತನ ಎಂದರೇನು ಅದು ಈ ಸಮಯದಲ್ಲಿ ಎಷ್ಟು ಪರಿಣಾಮ ಬೀರುತ್ತಿದೆ ಎಂದು , ಲಾಕ್ ದೌನ್ ಆದ ದಿನದಿಂದಲೂ ಆ ಭಾಗದಲ್ಲಿ ಅದೆಷ್ಟೋ ಜನರಿಗೆ ಉಪಕಾರಿಯಾಗಿದ್ದಾರೆ ,ಗ್ರಾಮೀಣ ಪ್ರದೇಶಗಲ್ಲಿ ರೋಗಿಗಳನ್ನು ದೂರದ ಆಸ್ಪತ್ರೆ ಸಾಗಿಸಲು , ಸರ್ಕಾರ ಕೊಟ್ಟ ರೇಷನ್ ನ್ನು ಅವರ ಮನೆ ತಲುಪಿಸಲು ,ಅಗತ್ಯ ವಸ್ತುಗಳನ್ನು ನಿರ್ಗತಿಕರಿಗೆ ಬಡವರಿಗೆ ಮನೆಗೆ ತಲುಪಿಸುವ ಕಾರ್ಯವನ್ನು ಕೈ ಕೊಂಡಿದ್ದಾರೆ ನಿಜಕ್ಕೂ ಇವರೆಲ್ಲಾ ತೆರೆ ಮರೆಯ ಹೀರೊಗಳು ಬೆಳಕಿಗೆ ಬರುದಿಲ್ಲ .,ಅದೂ ಅವರಿಗೆ ಅವಶ್ಯಕೆತೆಯೂ ಇಲ್ಲ ಬಿಡಿ .! ಹಾ.! ಮೊನ್ನೆ ಒಂದು ಈ ಹಳ್ಳಿಯಲ್ಲಿ ಕಹಿ ಘಟನೆಯೊಂದು ನಡೆದು ಬಿಟ್ಟಿತು ಕಾಡಿಗೆ ಸೊಪ್ಪು ತರಲು ಹೋದ ಮಹಿಳೆಗೆ ಹಾವು ಕಚ್ಚಿದಾಗ ಅದು ಯಾರೋ ಆನಂದ ಅಣ್ಣನಿಗೆ ಫೋನ್ ಹಾಯಿಸಿದ್ದರು ತಡ ಮಾಡದೇ ಸ್ಥಳಕ್ಕೆ ದೌಡಾಯಿಸಿ ಆ ಮಹಿಳೆಯನ್ನು ತನ್ನ ಆಟೋದಲ್ಲಿ ಹೊತ್ತು ನೆಡೆದರು 3 ಆಸ್ಪತ್ರೆ ಕ್ಲಿನಿಕ್ ಒಳ ಹೊಕ್ಕರೂ ಪ್ರಯೋಜನ ಕಾಣದೇ ಅತೀ ವೇಗವಾಗಿಯೇ ತಾಲೂಕಿನ ದೊಡ್ಡ ಆಸ್ಪತ್ರೆಗೆ ಬಂದರು . ಸರಿ ಸುಮಾರು 45 ಕೀಮಿ ದೂರಡಾ ಪಯಣಆಸ್ಪತ್ರೆಯಲ್ಲಿ ಧಾಖಲಾದರೂ, ಆಸ್ಪತ್ರೆ ಫೀಸುಗೂ ಹಣ ವಿಲ್ಲದೇ ಇದ್ದ ಮಹಿಳೆಯ ಕುಟುಂಬದ ಸಂಕಷ್ಟ ಕಂಡು ತಾನೇ ಜೇಬಲ್ಲಾ ಅರಸಿ 2000 ಕೊಟ್ಟು ಬಂದರು . ನಿಜಕ್ಕೂ ಇವರುಗಳು ಗ್ರೇಟ್ ಅಲ್ಲದೆ ಮತ್ತಿನೇನು ? ಇದು ನಾ ಕಂಡ ಉದಾಹರಣೆ ಅಷ್ಟೇ ಇಂತಹ ಅದೆಷ್ಟೋ ಮಂದಿ ನಮ್ಮ ಸುತ್ತ ಮುತ್ತಾ ಇದ್ದಾರೆ .ಇವರಾರು ಪ್ರಚಾರ ಬಯಸೊಲ್ಲ ,ಎಡ ಕೈಗೆ ಕೊಟ್ಟರೆ ಬಲ ಕೈಗೆ ತಿಳಿಯಬಾರದೆಂಬ೦ತೇ ಇದ್ದರೂ ಅದು ಬೆಳಕಿಗೆ ಬರುತ್ತದೆ ಅದೂ ಬರಲೇ ಬೇಕು ಕೂಡಾ ಒನ್ದಷ್ಟು ಅತಿ ರಥರುಗಳ ಮರ್ಯಾದೆಗೆ ಅನಿವಾರ್ಯ ! ಕೆಲವು ಮನಸ್ಥಿಗಳಿಗೆ ಏನು ಹೇಳ್ಬೇಕು ಗೊತ್ತಾಗೊಲ್ಲ ಕೊಡುವುದು ಮೂರು ಕಾಸಿನ ವಿಚಾರ ಆದರೆ ಆರು ಕಾಸಿನ ಪ್ರಚಾರ ! ಆಹಾರ ಕಿಟ್ ಗಳ ಮೇಲೆ ತಮ್ಮ ಫೋಟೋ, ಹೆಸರು, ರಾಜಕೀಯ ಪಕ್ಷಗಳ ಚಿನ್ಹೆ ,ಒಂದಾ ಎರಡಾ ಒಟ್ಟಾರೆ ಪುಕ್ಕಟೆ ಪಬ್ಲಿಸಿಟಿಗಳೂ ಕಾಣ ಸಿಗುತ್ತಿವೆ. ಅದೇನೆಯಿರಲಿ ಸಂಕ ಮುರಿದಲ್ಲೆ ಸ್ನಾನ್ಹ ,ಜೊತೆಗೆ ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವೂ ಸಹಾ ಈ ಸಮಯದಲ್ಲಿ ತಾರಕ್ಕೆಕ್ಕೆ ಏರಿದೆ .ಒಟ್ಟಾರೆ ಕೆಲವು ಸಣ್ಣಪುಟ್ಟ ಸಂಘ-ಸಂಸ್ಥೆಗಳು , ಸಮಾಜ ಸೇವೆ ಗೆ ತಮ್ಮನ್ನು ಅರ್ಪಿಸುವ ಸಮಾನ ಮನಸ್ಕರು ಹಳ್ಳಿ- ಹಳ್ಳಿಗಳಿಗೆ ಸಾಗಿ ಆಹಾರವನ್ನು ಒದಗಿಸುವ, ಸಹಾಯ ಹಸ್ತವನ್ನು ಚಾಚುವ ಕಾರ್ಯವನ್ನು ಕೈಗೊಂಡಿದೆ,ನಿರ್ಗತಿಕರಿಗೆ , ಭಿಕ್ಷುಕರಿಗೆ, ಬೀದಿನಾಯಿ ,ಪ್ರಾಣಿ- ಪಕ್ಷಿಗಳಿಗೆ ಆಹಾರ ಒದಗಿಸುವ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ! ಐಸೋಲೇಶನ್ ಗಳಿಗೆ ತಮ್ಮ ತಮ್ಮ ಕಟ್ಟಡ ಮನೆಗಳನ್ನು ಕೊಡಲು ಮುಂದಾಗುವ ಮನಸ್ಸುಗಳೂ ಇವೆ ಸದ್ಯ ಕೆಲವು ಐಟಿ-ಬಿಟಿ ಕಂಪನಿಗಳು, ಸಿನಿಮಾ ನಟ-ನಟಿಯರು ಸಹಾಯಧನವನ್ನು ನೀಡುತ್ತಿದ್ದಾರೆ,ಕೊಡಲೇ ಬೇಕು ಅದು ಅವರ ಧರ್ಮ ಈ ಮಣ್ಣಿನ ಋಣ .! ಜನ ಪ್ರತಿನಿಧಿಗಳೇ ಏಳಿ ,ಮತ ದಾನ ಪ್ರಭುಗಳೇ ನೆನಪಿಡಿ, ಮತ ಭಿಕ್ಷೆಗೆ ಬಂದಾಗ ರಿವೇಂಜ್ ನಿಮ್ಮದಾಗಿರಲಿ !!


ಶುಕ್ರವಾರ, ಏಪ್ರಿಲ್ 24, 2020

ದೆಹಲಿ ಅತ್ಯಾಚಾರ ಪ್ರಕರಣ :ಕೊನೆಗೂ ಸುಖಾಂತ್ಯ !,ಆದರೆ ಇನ್ನೊಬ್ಬನನ್ನು ಹೊರಕೆ ಇಟ್ಟಿದ್ದು ಸರಿಯಲ್ಲ



2020ರ ಮಾರ್ಚ್ 21ನೇ ತಾರೀಕು ಭಾರತದ ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ನ್ಯಾಯಾಲಯದ ವ್ಯವಸ್ಥೆಯಲ್ಲಿ ಹೊಸ ಭಾಷೆ ಬರೆದ ದಿನ ! ಇತಿಹಾಸದ ಪುಟದಲ್ಲಿ ದಾಖಲಾದ ಕ್ಷಣ !! ಒಂಟಿ ಹೆಣ್ಣೊಬ್ಬಳು ಮಧ್ಯರಾತ್ರಿಯಲ್ಲಿ ರಸ್ತೆಮೇಲೆ ತಿರುಗಾಡಿದರೆ ಅಂದೇ ಭಾರತ ಸ್ವತಂತ್ರವಾಗುತ್ತದೆ ಎಂದು ರಾಷ್ಟ್ರಪಿತ ಗಾಂಧೀಜಿ ಹೇಳಿದ್ದರು. ಅದು ಅಸಾಧ್ಯದ ಮಾತೇ ಬಿಡಿ ...! ಅಂದು ಮಧ್ಯರಾತ್ರಿ ಹೆಣ್ಣೊಬ್ಬಳು ಬಸ್ಸಿಗಾಗಿ ಕಾದಿದ್ದಳು ಬಸ್ಸು ಬಂತು ಬಸ್ಸು ಏರಿದ್ದಳು ಆರು ಜನರಿದ್ದರು ಅವರೆಲ್ಲಾ ರಾಕ್ಷಸ ತ್ರಯರು ಅಂತ ಆ ಮುಗ್ದೆಗೆ ಗೊತ್ತೇ ಇರಲಿಲ್ಲ ಬಸ್ಸಿನಲ್ಲಿದ್ದ ಆ ಕಾಮಾಂಧರು ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಹಿಂಸಾತ್ಮಕವಾಗಿ ಅವಳನ್ನು ಮುಗಿಸಿಬಿಟ್ಟಿದ್ದರು. ಇದು ಸುಮಾರು ಏಳು ವರ್ಷಗಳ ಹಿಂದಿನ ಮಾತು ದೇಶಾದ್ಯಂತ ದೊಡ್ಡ ಸದ್ದು ಮಾಡಿದ ಸುದ್ದಿ ! ಡಿಸೆಂಬರ್ 16, 2012ರಂದು ಭಾರತದ ರಾಜಧಾನಿ ದೆಹಲಿಯಲ್ಲಿ 23ವರ್ಷದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಕರುಣಾಜನಕ ಕಥೆ ಕೇವಲ ಅತ್ಯಾಚಾರ ಮಾತ್ರ ಮಾಡದ ಕಾಮ ಪಿಶಾಚಿಗಳು ಅಮಾನವೀಯವಾಗಿ ರಾಡ್ ನಿಂದ ಹಲ್ಲೆ ಮಾಡಿ ಚಲಿಸುವ ಬಸ್ಸಿಂದ ಕೆಳಕ್ಕೆ ಎಸೆದರು ತೀವ್ರವಾಗಿ ಹೊಟ್ಟೆ, ಕರುಳು, ಮರ್ಮಾಂಗ ಜರ್ಜರಿತ ಗೊಂಡು ಐಸಿಯು ನಲ್ಲಿ ಒಂದು ದಿನ ಸಾವು ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿದ್ದಳು . ಪ್ರಕರಣದ ಬೆನ್ನಿಗೆ ಆರೋಪಿಗಳನ್ನು ಬಂಧಿಸಲಾಯಿತು.6 ಜನ ಕಾಮುಕರು ಸಿಕ್ಕಿಬಿದ್ದಿದ್ದರು .ಇವರಿಗೆ ಸಾರ್ವಜನಿಕವಾಗಿ ಗುಂಡಿಕ್ಕುವಂತೆ ಜನಾಕ್ರೋಶವೂ ಭುಗಿಲೆದ್ದಿತ್ತೂ ಆದರೂ, ಕಳೆದ 7 ವರ್ಷ 3 ತಿಂಗಳಿಂದ ಸತತ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು.
ಆರು ಜನರ ಪೈಕಿ ಜನ ಆರೋಪಿಗಳಾದ ಮುಖೇಶ್‌ ಸಿಂಗ್‌, ಪವನ್‌ ಗುಪ್ತಾ, ಅಕ್ಷಯ್‌ ಠಾಕೂರ್‌ ಹಾಗೂ ವಿನಯ್‌ ಶರ್ಮಾರನ್ನು 2020 ರ ಮಾರ್ಚ್ 21ನೇ ತಾರೀಕಿನಂದು ಬೆಳಗ್ಗಿನ ಜಾವ 5.30ಕ್ಕೆ ಗಲ್ಲಿಗೇರಿಸಲಾಯಿತು. ಇನ್ನೆಷ್ಟೋ ಕಾಮುಕರಿಗೆ ಇದು ಪಾಠವಾಯಿತು ಏನು ಖುಷಿ !ದೇಶ ಸಂತೋಷದಲ್ಲಿ ತೇಲಾಡಿತು., ಆದರೆ ಅದರಲ್ಲಿ ನಾಲ್ಕು ಜನರಿಗೆ ಮಾತ್ರ ಶಿಕ್ಷೆಯಾಗಿತ್ತು . ಒಬ್ಬತಾ ಬಸ್ಚಾಲಕನಾಗಿದ್ದ ರಾಮ್ ಸಿಂಗ್ ತಾನೇ ಆತ್ಮಹತ್ಯೆ ಮಾಡಿಕೊಂಡು ತನ್ನ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಪಡೆದುಕೊಂಡನು.ಇನ್ನೊಬ್ಬ ರಾಜು ಎಂಬಾತ ವಯಸ್ಸಿನ ಮಿತಿಯಲ್ಲಿ ಒಂದಷ್ಟು ಸಡಿಲಿಕೆ ಕಂಡು ಸಣ್ಣಪುಟ್ಟ ಶಿಕ್ಷೆಗೆ ಒಳಪಡಿಸುವ ಮೂಲಕ ಮನೆಗೆ ಕಳಿಸಿಕೊಡಲಾಗಿತ್ತು ಪ್ರಶ್ನೆ ಹುಟ್ಟಿರುವುದು ಮತ್ತು ಆಕ್ರೋಶಕ್ಕೆ ಕಾರಣವಾಗಿರುವುದು ಇದು, ದೊಡ್ಡ ತಪ್ಪು ಮಾಡಿದ ಈತನಿಗೆ ಮರಣದಂಡನೆ ವಿಧಿಸಬೇಕು ಅಂತೆಯೇ ಈ ಪೈಶಾಚಿಕ ಕೃತ್ಯದಲ್ಲಿ ಈತನೇ ಮುಂಚೂಣಿಯಲ್ಲಿದ್ದನಂತೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದ್ದದ್ದು ಈತನೇ ಅಂತೆ ಈತನನ್ನು ಸಹಾ ಗಲ್ಲಿಗೆ ಏರಿಸಬೇಕಿತ್ತು ಅಪ್ರಾಪ್ತ ಎಂದು ಹೊರಗೆ ಇಟ್ಟಿದ್ದು ಸರಿಯಲ್ಲ ಇಂಥವರಿಂದ ಇನ್ನಷ್ಟು ಜೀವಗಳು ನೋವು ಅನುಭವಿಸಬೇಕೋ ಗೊತ್ತಿಲ್ಲ ಹಾಗೆ ಅಂಡರ್ ಏಜ್ ಎಂಬ ಹಣೆಪಟ್ಟಿಯಲ್ಲಿ ಇಂತವರು ಇಂತಹ ಕಾರ್ಯಕ್ಕೆ ಮುಂದಾಗುದರಲ್ಲಿ ಯಾವುದೇ ಸಂಶಯವಿಲ್ಲ ಅತ್ಯಾಚಾರ ಮಾಡಿ ಹಿಂಸಾತ್ಮಕವಾಗಿ ಸಾಯಿಸುವ ಕೆಲವು ವಿಕೃತ ಕಾಮಿಗಳಿಗೆ ಮರಣದಂಡನೆ ಸರಿಯಾದ ಶಿಕ್ಷೆ ಆದರೆ ಅದಾಗುತ್ತಿಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದಿಲ್ಲ ಎಂಬುದೇ ಬಹಳ ಬೇಸರ . ಏನೇ ಆಗಲಿ ಅದೆಷ್ಟೋ ವರ್ಷಗಳ ನಂತರ ಕಷ್ಟಪಟ್ಟು ಪಟ್ಟು ಬಿಡದೆ ನೇಣಿಗೇರಿಸಿದ ರಲ್ಲಿ ಶಕ್ತರಾದ ವಕೀಲರಿಗೆ ಹಾಗೂ ಪ್ರತಿಭಟನೆ ಹಾಗೂ ಇವರ ಬೆಂಬಲಕ್ಕೆ ನಿಂತ ಒಳ್ಳೆಯ ಮನಸ್ಸಿಗರ ಶ್ರಮ ದಿಂದ ಉತ್ತಮ ತೀರ್ಪು ಸಿಕ್ಕಿದೆ . ದಿಲ್ಲಿಯಲ್ಲಿನ ಈ ಘಟನೆ ಬೆಳಕಿಗೆ ಬಂದಿದ್ದೂ ಕೊನೆಗೂ ಸುಖಾಂತ್ಯ ಕಂಡಿದೆ . ಇಂತಹ ಅದೆಷ್ಟೋ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಕೆಲವರು ಮಾನ ಮರ್ಯಾದೆ ಗೆ ಅಂಜಿ ಹಾಗೂ ರಾಜಕೀಯ ಒತ್ತಡ, ಬ್ಲಾಕ್ಮೇಲ್ ,ಇನ್ನಿತ್ತರ ಚಟುವಟಿಕೆ ಇಂದ ಬೆಳಕಿಗೆ ಬಾರದೆ ಘಟನೆಗಳು ಅಲ್ಲೇ ಮುದುಡಿ ಹೋಗುತ್ತದೆ . ಒಂದು ಪಕ್ಷದಲ್ಲಿ ಮುಖ್ಯ ವಾಹಿನಿಗೂ ಬಂದರೂ ನ್ಯಾಯ ಮಾತ್ರ ನಮ್ಮ ದೇಶ ದಲ್ಲಿ ಮರೀಚಿಕೆ.! ಅದಕ್ಕಾಗಿ ಅದೆಷ್ಟೋ ಕಥೆಗಳು ವ್ಯಥೇಗಳಾಗಿ ಅಂತ್ಯ ಗೊಳ್ಳುತ್ತಿದೆ. ವಿದೇಶ ಗಲ್ಲಿರುವಂತ ಕಾನೂನು ನಮ್ಮಲ್ಲಿ ಜಾರಿ ಆದರೇ ಇಂಥ ಘಟನೆ ಕಡಿವಾಣ ಬೀಳಬಹುದೇನೋ ? ಪೊಲೀಸರೂ ಸಹಾ ಏನೂ ಮಾಡಲೂ ಸಾಧ್ಯ ವಿಲ್ಲಾ ಅವರ ಕೈ ಕಟ್ಟಿ ಹಾಕುವ ವ್ಯವಸ್ಥೆ ನಮ್ಮಲ್ಲಿದೆ .. ಏನೇ ಇರಲಿ ಇತ್ತೀಚಿಗೆ ನಡೆದ ಹೈದ್ರಾಬಾದ್ ನ ಘಟನೆಯನ್ನು ಮೆಲುಕು ಹಾಕುತ್ತಾ ಒಡಲಧ್ವನಿಗೆ ಫುಲ್ ಸ್ಟಾಪ್ ಇಡುತ್ತಿದ್ದೇನೆ ಆ ಪೊಲೀಸರಿಗೆ ಸೆಲ್ಯೂಟ್ ಹೊಡೆಯಲೇ ಬೇಕು ಚಾಕ ಚಕ್ಯತೆಯಿಂದ ಅವರುಗಳೇ ಆ ಕಾಮಾಂಧರುಗಳಿಗೆ ನೇರವಾಗಿ ತಕ್ಕ ಶಿಕ್ಷೆ ನೀಡಿದ್ದಾರೆ. ಅದಾಗಬೇಕು .

ಗುರುವಾರ, ಏಪ್ರಿಲ್ 2, 2020

ಸ್ವಾಮೀಜಿಗಳೇ ನಿಮ್ಮದು ಇದೆಂತಾ ಭಂಡತನ ?

ಮೊನ್ನೆ ಒಂದು ಘಟನೆ ಘಟಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಕೋಪೋದ್ರಿಕ್ತರಾಗಿ ವೇದಿಕೆಯಿಂದ ಕೆಳಗಿಳಿದರು ಎಂದು ಮಾಧ್ಯಮಗಳು ನಾನ್ ಸ್ಟಾಪ್  ಸುದ್ದಿಯನ್ನು ಹರಿಯಬಿಟ್ಟಿದ್ದವು . ಎಲ್ಲರೂ ಯಡಿಯೂರಪ್ಪನವರದು ತಪ್ಪು ಎಂದು ಹೇಳುತ್ತಿದ್ದರೆ ವಿನಹ ,ಘಟನೆ ಬಗ್ಗೆ ಕಿಂಚಿತ್ ಆಲೋಚನೆ ಅವರಲ್ಲಿ ಇರಲಿಲ್ಲ ಅಷ್ಟಕ್ಕೂ ಅದು  ಅಂತ ದೊಡ್ಡ ಘಟನೆಏನೂ ಆಗಿರಲಿಲ್ಲ .
ಅದು ದಾವಣಗೆರೆಯ ಹರಿಹರದಲ್ಲಿ ನಡೆಯುತ್ತಿದ್ದ ಹರ ಜಾತ್ರೆಯ ಕಾರ್ಯಕ್ರಮ ಯಾವುದೋ ಒಂದು ಸಮಾವೇಶ . ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರು ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದರು . ಸ್ವಾಮೀಜಿ ಸ್ವಾಮಿ ಕಾರ್ಯ ಮಾಡುದನ್ನು ಬಿಟ್ಟು ಸ್ವ- ಕಾರ್ಯಕ್ಕೆ ಮುಂದಾಗಿದ್ದರು ! ಹೌದಪ್ಪ ಎಂತೆಂತಹ ಸ್ವಾಮೀಜಿಗಳನ್ನು ನಾವು ಪ್ರಸ್ತುತ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ಅಂದರೆ ಅದಕ್ಕೆಲೆಕ್ಕಪತ್ರವಿಲ್ಲ., ವರ್ಣಿಸಲಾಗದಂತ ಆಟಿಟ್ಯೂಡ್ ಅನ್ನು ಹೊಂದಿರುವ ಸ್ವಾಮೀಜಿಗಳು ನಮ್ಮ ಕಣ್ಣಮುಂದೆ ಬೇಡವೆಂದರೂ ಕಾಣಿಸಿಕೊಳ್ಳುತ್ತಾರೆ ಅದೇನೇ ಇರಲಿ , ಈ ಸ್ವಾಮೀಜಿ ಏನು ಮಾಡಿದ್ರು ಅಂದರೆ ತಮ್ಮ ಭಾಷಣದ ಸರದಿ ಬಂದಾಗ ಮೈಕ್ ಎತ್ತಿಕೊಂಡು , ಏರ್ಪಡಿಸಲಾದ ಸಮಾವೇಶದ ಬಗ್ಗೆ ಉಸುರುದನ್ನು ಬಿಟ್ಟು , ಏಕ್ದಂ  ಮುಖ್ಯಮಂತ್ರಿ ಬಗ್ಗೆ ಮಾತಾಡ್ಲಿಕ್ಕೆ ಶುರುವಿಟ್ಟು ಕೊಂಡರು ,ಆ ಸ್ವಾಮೀಜಿಯ ಪ್ರಕಾರ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸೀಟು ಉಳಿಸಿಕೊಂಡಿದ್ದರೆ ಅಂದರೆ ಅವರ ಜನಾಂಗದ ಶಾಸಕರಿಂದ ಅಂತೆ , ಅದಕ್ಕೆ ಅವರ ಸಮುದಾಯದವರನ್ನು ಮಂತ್ರಿ ಮಾಡಬೇಕಂತೆ , ಅದಿಲ್ಲದಿದ್ದರೆ ತುಂಬಾ ಕಷ್ಟ ಅನುಭವಿಸುತ್ತಾರೆ ನಿಮ್ಮ ಸೀಟು ಉಳಿಯುವುದಿಲ್ಲ ಅದು-ಇದು ಎಂದು ಬೊಗಳೆ ಬಿಟ್ಟಿದ್ದು ,ಬಿಟ್ಟಿದ್ದು .! ಅಸಲಿಗೆ  ಸ್ವಾಮೀಜಿಗೆ ಇದು ಅಗತ್ಯವಿತ್ತೆ ? ಸ್ವಾಮೀಜಿಗೆ ರಾಜಕೀಯ ಯಾಕೆ ? ಎಲ್ಲವನ್ನೂ ತ್ಯಜಿಸಿದ ಸ್ವಾಮಿಗೆ ರಾಜಕೀಯ ದಲ್ಲಿ ಮೂಗು ತೋರಿಸುವ ಅಧಿಕಾರ ವಿದೆಯೇ ? ಅವರ ಇತಿಮಿತಿ ಏನು ಎಂಥ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡದೇ ಇರದು . ಒಂದು ಪಕ್ಷದಲ್ಲಿ ಸ್ವಾಮಿಗೆ ಅಗತ್ಯ ಕಂಡು ಬಂದಿದ್ದರೆ , ಮುಖ್ಯಮಂತ್ರಿಯಲ್ಲಿ ತಮ್ಮ ಈ ವೈಚಾರಿಕತೆಯನ್ನು ಮಂಡಿಸಬಹುದಿತ್ತು ,ಇರಿಸಬಹುದಾಗಿತ್ತು ಅದನ್ನು ಬಿಟ್ಟು ಸ್ವಾಮೀಜಿ, ಬಹಿರಂಗ ಸಭೆಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವುದು ಎಷ್ಟು ಸಮಂಜಸ ವಾದದ್ದು ?ಇದರಿಂದ ತುಸು ಬೇಸರದಿಂದ ಸೀಟಿನಿಂದ ಮುಖ್ಯ ಮಂತ್ರಿ ಯಡಿಯೂರಪ್ಪ  ಮೇಲೆದಿದ್ದು  ತಪ್ಪೇನಿಲ್ಲ . ಸೀಟಿನಿಂದ ಎದ್ದು ಹೊರಗೆ ನಡೆಯಲಿಲ್ಲ ಎದ್ದು ಅವರಲ್ಲಿ ಸೌಜನ್ಯವಾಗಿ ವಿನಂತಿಸಿದ್ದರು "ಸ್ವಾಮೀಜಿಗೆ  ನಿಮ್ಮಿಂದ ಈ ಮಾತು ಬರಬಾರದು "ಎಂದು ಅಲವತ್ತುಕೊಂಡ ಕಾಲುಮುಟ್ಟಿ ಬೇಡಿಕೊಂಡಿದ್ದರು ಆದರೆ ವೇದಿಕೆ ಬಿಟ್ಟು ಕೆಳಗೆ ಇಳಿಯಲಿಲ್ಲ ಇದು ಸ್ವಾಮೀಜಿಯ ದುರಾಂಕಾರವೋ  ಅಥವಾ ಮುಖ್ಯಮಂತ್ರಿಗಳದ್ದೋ ? ಮಾಧ್ಯಮಗಲ್ಲಿ ಪ್ರಸಾರ ಕಂಡ ವಿಡಿಯೋ ಕ್ಲಿಪ್ ನೋಡಿ ತಾವೇ ತೀರ್ಮಾನಿಸಿ . ಅಲ್ಲಿ ಮುಖ್ಯಮಂತ್ರಿಗಳೇ ಇರಲಿ ಅಥವಾ ಇನ್ನು ಯಾರೇ ಇದ್ದರೂ ಕೂಡ ಸ್ವಾಮೀಜಿ ಮಾಡಿದ್ದು ಮಹಾನ್ ತಪ್ಪು  ಅಲ್ಲವೇ ?!ಸ್ವಾಮೀಜಿಗಳಲ್ಲಿ  ದೇವರನ್ನು ಕಾಣುತ್ತೇವೆ ,ನಂಬುತ್ತೇವೆ ದೇವರಿಗೆ ಹತ್ತಿರವಾದವರು ,ಅನೂ ದಿನ ಅನೂ ಕ್ಷಣವೋ  ಧ್ಯಾನ ಪೂಜೆ ಯಲ್ಲಿ ಮಗ್ನರಾಗಿರುತ್ತಾರೆ  ಎಂದು ಅವರಲ್ಲಿ ಆತ್ಮೀಯತೆ,ಪೂಜನೀಯ ಭಾವನೆಯನ್ನು ಬೆಳೆಸುತ್ತೇವೆ ಆದರೆ ಇಂಥ ಚಟುವಟಿಕೆಗಳಿಂದ  ಒಳ್ಳೆ ಸ್ವಾಮೀಜಿ ಗಳ  ಮೇಲೂ ಸಹ ನಮ್ಮ ನಂಬಿಕೆ ಕುಸಿಯುತ್ತದೆ ಹಾಗೂ ಇತರ ಧರ್ಮದವರ ನಗೆಪಾಟಲಿಗೆ ನಾವು ಈಡಾಗುತ್ತಿದೆ.  ಪೇಜಾವರ ಶ್ರೀಗಳು ಹಾಗೂ ಸಿದ್ದಲಿಂಗ ಮಠದ ಸ್ವಾಮೀಜಿಗಳಂತೆ ಯಾವ ಸ್ವಾಮೀಜಿ ಇನ್ನು ಜನ್ಮ ತಾಳಲಾರರಾರು ಅವರ ಪಾದದ ಧೂಳಿಗೆ ಕೂಡ ಸಮವಲ್ಲ ಇಂಥ ಕಪಟ ಭಂಡತನದ ಸ್ವಾಮೀಜಿಗಳಿಂದ ದೂರವಿರುವುದೇ ಲೇಸು ಏನಂತೀರಿ ?
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ (ಕ್ರಪೆ:- #youtub #ಒನ್ ಇಂಡಿಯಾ)
https://www.youtube.com/watch?v=iubma_HjSqU

ಸೋಮವಾರ, ಡಿಸೆಂಬರ್ 30, 2019

ಕಟೀಲು ಮೇಳದಲ್ಲಿ ಏನೀದು ಗೊಂದಲ ? ಎಲ್ಲಕ್ಕೂ ಪಟ್ಲ ಸತೀಶ್ ಶೆಟ್ಟರೇ ಕೇಂದ್ರ ಬಿಂದು ?!

ಮುಸುಕಿನ ಗುದ್ದಾಟಕ್ಕೆ ಮೊನ್ನೆ ದಿನ ಬ್ರೇಕ್ ಬಿದ್ದಿತು ! ಹೌದು ಬಹಳ ದಿನಗಳ ನಂತರ ನನ್ನ ಒಡಲ ಧ್ವನಿ ಹೇಳ ಹೊರಟಿರುವುದು ಕಟೀಲು ಯಕ್ಷಗಾನ ಮೇಳದಲ್ಲಿನ ಗೊಂದಲವನ್ನು !. ಕಳೆದ ಎರಡು ವರ್ಷಗಳಿಂದ ಕಟೀಲು ಯಕ್ಷಗಾನ ಮೇಳದಲ್ಲಿ ಒಂದಷ್ಟು ವಿವಾದದ ಸುದ್ದಿಯನ್ನು ನಾವು ಕೇಳುತ್ತಾ ಬಂದಿದ್ದೇವೆ .
ಅದೆಷ್ಟೋ ಇತಿಹಾಸವನ್ನು ಹೊಂದಿರುವ ಕಟೀಲು ಮೇಳದಲ್ಲಿ ಈ ರೀತಿ ಯಾಕೆ ಆಯಿತು ?ಇದಕ್ಕೆ ಕಾರಣವೇನು ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ . ರಂಗಸ್ಥಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಇಳಿಸಿದ್ದು ಯಾಕೆ ? ಮೇಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರ?,ಅಶಿಸ್ತು ತೋರಿಸಿದ್ದರಾ ಪಟ್ಲಾ ? ಮೇಳದ ಸಂಚಾಲಕರು ಅರ್ಚಕರು ಒಂದು ಕಡೆ ,ಭಾಗವತ ಸತೀಶ್ ಶೆಟ್ಟಿ ಇನ್ನೊಂದು ಕಡೆ ಶೀತಲ ಸಮರಕ್ಕೆ ಕಾರಣವೇನು ? ಈ ಎಲ್ಲಾ ಮನದ ಪ್ರಶ್ನೆಯನ್ನು ಇಟ್ಟುಕೊಂಡು ಬಲ್ಲವರ ಅಭಿಪ್ರಾಯವನ್ನು ನನ್ನ ಓಡಲ ಧ್ವನಿಯಲ್ಲಿ ಮುದ್ರಿಸಿದ್ದೇನೆ .
ಎಲ್ಲವೂ ಸರಿ ಇತ್ತು .. ಯಕ್ಷಗಾನ ಮೇಳದಲ್ಲಿ ಆಗಿದ್ದೇನು ?
ಪಟ್ಲ ಸತೀಶ ಶೆಟ್ಟಿ ಸ್ಟಾರ್ ಮಟ್ಟದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಯಕ್ಷಗಾನ ಭಾಗವತ . ಕಟೀಲು ಮೇಳದಿಂದಲೇ ವೃತ್ತಿ ಆರಂಭಿಸಿದ ತಮ್ಮದೇಯಾದ ವಿಶಿಷ್ಟ ಶೈಲಿಯ ಭಾಗವತಿಕೆ ಯಿಂದ ಪ್ರಸಿದ್ದಿ ಪಡೆದವರು. ಯಕ್ಷ ದ್ರುವ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಿಂದ ಬಡ ,ನಿರ್ಗತಿಕ ,ನಿರಾಶ್ರಿತ ಯಕ್ಷಗಾನ ಕಲಾವಿದ ಬಂಧುಗಳಿಗೆ ಸಹಾಯ ಹಸ್ತವನ್ನು ನೀಡುತ್ತಿರುವ ಈ ಕಾರ್ಯಕ್ಕೆ ಸಾಕಷ್ಟು ಜನ ಮನ್ನಣೆ ಸಿಕ್ಕಿದ್ದು ನಿಜವಾದರೂ, ಕೆಲವೊಂದು ಊಹಾ ಫೋಹಾಗಳೂ ಸಹಾ ಹೊಗೆಯಾಡುತ್ತಿವೆ !
ದಂಗೆ ಎದ್ದರು ಕಲಾವಿದರು :
ಯಕ್ಷಗಾನದ ಅಲ್ಲಿನ ಸಾಂಪ್ರದಾಯಿಕ ನಿಯಮದಂತೆ ವರ್ಷದಿಂದ ವರ್ಷಕ್ಕೆ ಆರೂ ಮೇಳದ ಕಲಾವಿದರುಗಳನ್ನು ಬದಲಾವಣೆ ಮಾಡುವುದು ರೂಢಿ . ಅದರಂತೆ ೨ ವರ್ಷಗಳ ಹಿಂದೆ ೫ನೇ ಮೇಳದಲ್ಲಿದ್ದ ಭಾಗವತ ಪಟ್ಲರನ್ನು ಬೇರೆ ಮೇಳಕ್ಕೆ ವರ್ಗಾವಣೆ ಮಾಡಿದ್ದರಿಂದ ಖುದ್ದು ಪಟ್ಲಾರಿಗಲ್ಲದೇ ,ಅವರ ಹಿತೈಷಿ ಕಾಲವಿದರು ದಂಗೆ ಎದ್ದರು ಪಟ್ಲರನ್ನು ವರ್ಗಾವಣೆ ಮಾಡಬಾರದು ಎಂದು 25 ಕಲಾವಿದರ ಪೈಕಿ 23 ಮಂದಿ ರಾಜೀನಾಮೆಗೆ ಕೊಟ್ಟರು .ವ್ಯವಸ್ಥಾಪಕನಾ ಮಂಡಳಿ ಅವರನ್ನು ನಿರ್ದಾಕ್ಷನ್ಯವಾಗಿ ಮೇಳದಿಂದ ಕೈ ಬಿಟ್ಟಿತು . ತಮ್ಮ ತಪ್ಪನ್ನು ಒಪ್ಪಿಕೊಂಡು ಪುನ್ಹ ಮೇಳಕ್ಕೆ ಕಲಾವಿದರು ಹಿಂತಿರುಗಿದ್ದೂ ಇತಿಹಾಸವಾದಾರೂ ,ಇಂದು ಈ ಘಟನೆಗೆ ಒಂದು ಎಳೆ ಸಹಾ ಕಾರಣವಿಲ್ಲಾ ಅನ್ನುವಂತಿಲ್ಲ ಇಲ್ಲಿಂದ ಶುರುವಾಗುತ್ತಿತ್ತು ಮುಸುಕಿನ ಗುದ್ದಾಟ . ತಾನೇ ಸುಪ್ರೀಂ ನನ್ನ ನಿರ್ಣಾಯದಂತೆ ಎಲ್ಲವೂ ನೆಡೆಯಬೇಕೆಂದು ಬೀಗುತ್ತಿದ್ದಾ ಸತೀಶ್ ಶೆಟ್ಟರು (ಬಲ್ಲ ಮೂಲಗಳ ಪ್ರಕಾರ )..ಎಲ್ಲಿ ನನ್ನಿಂದ ಕಾರ್ಯ ಸಾಧನೆ ಆಗುವುದಿಲ್ಲ ಎಂದು ಮನಗೊಂಡಾಗ ಮೇಳದ ವಿರುದ್ಧವಾಗಿ ಅಲ್ಲಲ್ಲಿ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಾ ಬಂದಿದರು ಎನ್ನುವ ಮಾತು ಕೂಡ ಇವೆ .
ಆ ದಿನ ನಡೆದಿದ್ದು ಏನು ?
ಪಟ್ಲ ಸತೀಶ್ ಶೆಟ್ಟಿ ಮತ್ತು ಮೇಳದ ಯಜಮಾನರ ನಡುವಿನ ವೈಮನಸ್ಸು, ಮೇಳದ ತಿರುಗಾಟದ ಮೊದಲನೇ ಹರಕೆಯಾಟದಂದೇ ಬಹಿರಂಗಗೊಂಡಿತು
ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಐದು ಮೇಳಗಳ ತಿರುಗಾಟದ ಮೊದಲ ಸೇವೆಯಾಟ ಏಕಕಾಲಕ್ಕೆ, ಶುಕ್ರವಾರ ನ 22 ಕಟೀಲು ಕ್ಷೇತ್ರದಲ್ಲಿ ನಡೆಯುತ್ತಿತ್ತು. ತಡರಾತ್ರಿ 12.45 ಸುಮಾರಿಗೆ ಭಾಗವತಿಕೆಗಾಗಿ ವೇದಿಕೆಗೆ ಆಗಮಿಸಿದ ಪಟ್ಲ ಸತೀಶ್ ಅವರನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು . ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿ ಕೊಟ್ಟರೂ , ಇದರ ಹಿಂದೆ ಸಾಕಷ್ಟು ಕಾರಣವೂ ಇತ್ತು ಮೇಳದಲ್ಲಿ ಅಶಿಸ್ತು ದೂರವುದು ಹಾಗೂ ಮೇಳದ ವಿರುದ್ಧ ಹೇಳಿಕೆಯನ್ನು ನೀಡುತ್ತಾ ಬಂದಿರುದರಿಂದ ಮೇಳದ ಮಾಲೀಕರು ಹಾಗೂ ದೇವಳದ ಆಡಳಿತ ಮಂಡಳಿಯ ನಿರ್ಣಾಯದಂತೆ ಯಜಮಾನರು ಈ ಬಾರಿ ಮೇಳದಿಂದ ಹೊರಕೆ ಇರಲೂ ಆದೇಶಿಸಿದ್ದರು ಎಂಬ ಮಾತೂ ಇದ್ದೂ ಅದನ್ನು ದಿಕ್ಕರಿಸಿ ರಂಗಸ್ಥಳಕ್ಕೆ ಬಂದಿದ್ದರಿಂದ ಕೆಳಗೆ ಇಳಿಯಲು ಮೇಳದ ಮಾಲೀಕರು ಸೂಚಿಸಿದರಂತೆ . ಇದು ಸತೀಶ್ ಶೆಟ್ಟಿ ಯವರದ್ದು ತಪ್ಪು ಅಲ್ಲದೆ ಮತ್ತಿನೇನು ?
ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಏನು ಆಂತಾರೆ ?:
"ಕಳೆದ ಎರಡು ವರ್ಷದಿಂದ ಯಕ್ಷಗಾನ ಮೇಳದ ಬಗ್ಗೆ ತೆಜೋವಧೆ ಮಾಡುತ್ತಿದ್ದಾರೆ. ಆದರೆ ನಾವು ಯಾವುದೇ ಹೇಳಿಕೆ ನೀಡಿಲ್ಲ, ಏನಿದ್ದರೂ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸುತ್ತೇನೆ, ಅದರಂತೆ ಪಟ್ಲ ಭಾಗವತನನ್ನು ಮೇಳದಿಂದ ಕೈ ಬಿಟ್ಟು ಶಿಸ್ತು ಕೈಗೊಂಡಿದ್ದೇನೆ, ಕಟೀಲು ಮೇಳದ ಗೌರವ, ಮೇಳದ ಸೇವಾಕರ್ತರ ಗೌರವ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ನಾವು ಎಲ್ಲೂ ಹೇಳಿಕೆ ನೀಡಿಲ್ಲ, ಕಳೆದ ಪತ್ತನಾಜೆ ಬಳಿಕ ನ.22ರಂದು ಕಟೀಲು ದೇವಸ್ಥಾನದಲ್ಲಿ ನಡೆದ ಸೇವೆಯಾಟದ ವರೆಗೆ ಪಟ್ಲ ಸತೀಶ್ ಶೆಟ್ಟಿ ಎಂದೂ ಮೇಳದ ಯಜಮಾನರನ್ನಾಗಲೀ, ದೇವಸ್ಥಾನದ ಮುಖ್ಯಸ್ಥರನ್ನಾಗಿಲೀ ಭೇಟಿ ಮಾಡಿಲ್ಲ. ಮೊನ್ನೆ ಸೇವೆಯಾಟದ ದಿನವೇ ಅವರು ಕಟೀಲಿಗೆ ಬಂದದ್ದು.ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಮೇಳದ ಕಲಾವಿದರನ್ನು ಹಂಚಿಕೆ ಮಾಡಿ ಚೌಕಿಯಲ್ಲೇ ಈ ಬಗ್ಗೆ ಕಲಾವಿದರಿಗೆ ಮಾಹಿತಿನಿಡುವುದು ಸಂಪ್ರದಾಯ. ಪಟ್ಲ ಸತೀಶ್ ಶೆಟ್ಟಿಯನ್ನು ಯಾವ ಮೇಳದ ಭಾಗವತರನ್ನಾಗಿಯೂ ಹೆಸರಿಸಿರಲಿಲ್ಲ. ಮೊದಲೇ ಈ ಬಗ್ಗೆ ಸೂಚನೆ ಸಿಕ್ಕ ಬಳಿಕವೂ ರಂಗಸ್ಥಳಕ್ಕೆ ಭಾಗವತ ಮಾಡಲು ತೆರಳಿದ್ದು ಉದ್ದೇಶಪೂರ್ವಕವಾಗಿದೆ. ವಿವಾದ ಮಾಡುವುದೇ ಅವರ ಉದ್ದೇಶ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ "ಎಂದು ಹೇಳುತ್ತಾರೆ .

ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯ:

"ನಾನು ಪ್ರಧಾನ ಭಾಗವತಿಗೆ ಯಿಂದ ಹಿಂದೆ ಸರಿದಿದ್ದು ಪೌಂಡೇಶನ್ ಕಾರ್ಯಾಚರಣೆ ಗಾಗಿ ಹೊರದೇಶ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಬೇಕಾಗುದರಿಂದ ನನ್ನಿಂದ ನಿರ್ವಹಿಸಿಲು ಸಾಧ್ಯ ವಿಲ್ಲದ ದ್ರಷ್ಟಿ ಯಿಂದ ಯಜಮಾನರಲ್ಲಿ ವಿನಂತಿಸಿದ್ದೇನೆ . ಯಾವುದೇ ಫಲಾಪೇಕ್ಷೆ ಇಲ್ಲದೇ ಕಟೀಲು ಮೇಳದಲ್ಲಿ ಕಾರ್ಯನಿವ ಹಿಸುತ್ತಿದ್ದೇನೆ . ತಾಯಿ ಸೇವೆ ಎಂದಾ ಆಲೋಚಿಸಿ ಮಾಡುತ್ತಿದ್ದೇನೆ . ರಂಗಸ್ಥಳದಿಂದ ಕೆಳಗೆ ಇಳಿಸಿದ್ದು ತಪ್ಪು ನನಗೆ ಭಾಗವತಿಗೆ ಮಾಡಬೇಡ ಮೇಳದಿಂದ ಹೊರಗೆ ಹೋಗು ಎಂದು ಆದೇಶಿಸಿಲ್ಲ "ಎನ್ನುತ್ತಾರೆ. ಏನೇ ಇರಲಿ ಮೇಳದ ಯಜಮಾನರು ,ಅರ್ಚಕರ ಹಾಗೂ ಸತೀಶ್ ಶೆಟ್ಟಿಯವರ ಶೀತಲ ಸಮರ ಬೆಳಕಿಗೆ ಬಂದ್ದಿದಂತೂ ಸತ್ಯ
ಪಟ್ಲರನ್ನು ಕೆಳಗೆ ಇಳಿಸದ್ದು ಸರಿಯಲ್ಲ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದರೆ, ಇತ್ತಾ ಆಡಳಿತ ಮಂಡಳಿಯ ಪರವಾಗಿಯೂ ಸಹಾ ಉತ್ತಮ ಮಾತು ಕೇಳಿಬರುತ್ತಿವೆ . ಈ ಕ್ಷೇತ್ರದಲ್ಲಿ ಇಂತ ಒಂದು ವಿಚಾರ ಹೀನ ವಿವಾದ ನಡೆಯಬಾರದಿತ್ತು ಎನ್ನುವುದು ಪ್ರಜ್ಞಾವಂತರ ಅಭಿವ್ಯಕ್ತಿ.
ಕೊನೇದಾಗಿ ಒಂದು ಮಾತು ವಂಶ ಪಾರಂಪರ್ಯವಾಗಿ ಮೇಳವನ್ನು ನೆಡಸಿ ಕೊಂಡು ಬರುತ್ತಿರುವ ಕಲ್ಯಾಡಿ ಕುಟುಂಬ, ಕಾಲಕ್ಕೆ ತಕ್ಕಂತೆ ,ಸಾಂಪ್ರಾಯಿಕವಾಗಿ ತಲೆ -ತಲಾಂತರ ದಿಂದ ನಡೆಸಿಕೊಂಡು ಬರುವ ಪದ್ದತಿಗೆ ಕೊಳ್ಳಿ ಇಡುವುದು ಸರಿಯಲ್ಲ .ಕಲಾವಿದರಿಗೆ ರಜೆ ಸಂಬಳ , ವಿಶೇಷ ಸೌಲಭ್ಯ ಸಿಗುತ್ತಿದ್ದೂ ,ಏಲಂ ಮಡಬೇಕು ಎಂದೆಲ್ಲಾ ಯೋಚಿಸಿ ಕೋರ್ಟು ಮೆಟ್ಟಲೇರುವುದು ಹುಂಬತನ .
ಹಾಗೆಯೇ ಪಟ್ಲಾ ಸತೀಶ್ ಶೆಟ್ಟರಿಗೆ ಅಂಹಂಕಾರ ಬಂದಿದೆ ಮೇಳದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುದಿಲ್ಲ ಬೇರೆ ಕಾರ್ಯಕ್ರಮಗಳಿಗೆ ವಲಸೆ ಹೋಗುವುದೇ ಹೆಚ್ಚು .ಅತಿಥಿ ಕಲಾವಿದರಂತೆ ಇದ್ದಾರೆ ಅನ್ನುವ ಮಾತು ಇದೆ . ಪೌಂಡೇಶೇನ್ ನಿರ್ವಹಣೆ ಜವಾಬ್ದಾರಿ ,ಪ್ರವಾಸ ಇದೆಲ್ಲಾ ಒತ್ತಡ ದ ನಡುವೆ ಮೇಳದಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುವುದು ಕಷ್ಟ . ಮೇಳವನ್ನು ಬಿಟ್ಟು ತಮ್ಮ ಬೇರೆ ಕಾರ್ಯದ ಬಗ್ಗೆ ಗಮನ ಹರಿಸುವುದು ಸೂಕ್ತ .ಹಾಗೆಯೇ ಯಕ್ಷ ಧ್ರುವ ಪಟ್ಲಾ ಪೌಂಡೇಶನ್ ನಿಂದ ಅವ್ಯವಹಾರ ಇದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ ಸಂತೃಸ್ಥರೀಗೆ ಅದು ಸೂಕ್ತವಾಗಿ ಬಳಕೆ ಆಗುತ್ತಿಲ್ಲ ಎಂಬುದು . !ಏನೇ ಇರಲಿ ಎಲ್ಲವೂ ತಾರ್ಕಿಕ ಅಂತ್ಯ ಕಾಣಲಿ ..ದೇವಿ ಎಲ್ಲರಿಗೂ ಒಳಿತನ್ನು ಉಂಟು ಮಾಡಲಿ.