ಸೋಮವಾರ, ಮೇ 4, 2020

ಕರೋನ -ಕೊಡೋಣಾ :ನಾಚಿಕೆಯಾಗಬೇಕು ಇಂತಹ ಜನಪ್ರತಿನಿಧಿಗಳಿಗೆ !


ಕರುಣೆ ಇಲ್ಲದ ಕರೋನ ಎಂಬ ಮಹಾಮಾರಿಯ ಹೊಡೆತಕ್ಕೆ ಇಡಿ ವಿಶ್ವವೇ ನಲುಗಿ ಹೋಗಿದೆ ,ಶ್ರೀಮಂತ ರಾಷ್ಟ್ರಗಳು ತಮ್ಮ ಕೈಯಲ್ಲಿ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿರುವುದು ತಿಳಿದಿರುವ ವಿಚಾರ ಲಾಕ್ ಡೌನ್ ಒಂದೇ ಪರಿಹಾರ ಎಂದು ಎಣಿಸಿದರೂ ,ಕೋಟಿಗಟ್ಟಲೆ ದೇಶವಾಸಿಗಳನ್ನು ಕೂಡಿಹಾಕಿ ಇಡಲು ಸಾಧ್ಯವೇ ?ಹೊಟ್ಟೆಗೆ ಹಿಟ್ಟು ಬೇಕಲ್ಲವೇ ? ಇಡೀ ವಿಶ್ವವೇ ಆರ್ಥಿಕತೆಯಲ್ಲಿ ಕುಸಿತ ಕಂಡಿದ್ದು ಶ್ರೀಮಂತ ರಾಷ್ಟ್ರ್ರಗಳೂ ತಲೆ ಮೇಲೆ ಕೈ ಹೊತ್ತು ಕೊಂಡು ಕುಳಿತಿವೆ . ಹಾಗೋ- ಹೇಗೋ ತಮ್ಮ ಜನಸಂಖ್ಯೆಗನುಗುಣವಾಗಿ ನಿಭಾಯಿಸಬಲ್ಲ ತಾಕತ್ತು ಕೆಲ ರಾಷ್ಟ್ರಗಳಿಗಿವೆ , ಅವುಗಳು ಏನೋ ಒಂದು ಸಾಧಿಸಬಲ್ಲವು . ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೂಲಸೌಕರ್ಯದ ವಿಚಾರದಲ್ಲಿ ಅಷ್ಟೊಂದು ಬಲಶಾಲಿಯಾಗಿರದ ನಮ್ಮ ದೇಶಕ್ಕೆ ಇದು ಬಹಳ ಹೊರೆ ತಂದಿದೆ ,ಹೊಡೆತ ಬಿದ್ದಿದ್ದೂ ಅಷ್ಟಿಷ್ಟಲ್ಲ 21 ದಿನಗಳ ಕಾಲ ಬಂಧಿಯಾಗಿ, ಪುನ: ಮೇ 3ರವರೆ ಸಮೀಪ ತಲುಪ ಮೊದಲೇ ಮತ್ತೆ ಮೇ 17 ಕ್ಕೆ ಮುಂದುವರಿದಿದೆ ಈ ಲಾಕ್ ಡೌನ್ ! ನಿಜಕ್ಕೂ ಅರಗಿಸಿಕೊಳ್ಳಗಾದ ವಿಚಾರವಾದರೂ ಅನುಭವಿಸದೇ ವಿಧಿ ಇಲ್ಲ ಉಳ್ಳವರು ಹೇಗೋ ಇದ್ದುದ್ದರಲ್ಲಿ ಜೀವನ ಸಾಗಿಸುತ್ತಾ ಇದ್ದರೆ ಇಲ್ಲದವರಿಗೆ ಒಂದು ಹೊತ್ತು ಊಟಕ್ಕೂ ಪರದಾಡಬೇಕಾದ ಸಂದರ್ಭದ ಬಂದೊದಗಿದೆ ,ದಿನಗೂಲಿ ನೌಕರರ ಪಾಡು ಹೇಳತೀರದು .
ಅವರನ್ನೆಲ್ಲರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ದಿನನಿತ್ಯ ಬಳಕೆಯ ಸಾಮಾಗ್ರಿಗಳನ್ನು ಪೂರೈಸಬೇಕಾಗಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ಜಂಟಿ ಆಶ್ರಯದಲ್ಲಿ ರೇಷನ್ ವಿತರಣೆಯನ್ನು ಮಾಡುತ್ತಿವೆ . ನೌಕರಿಯಲ್ಲಿನ ತಿಂಗಳ ಸಂಬಳವೂ ನಿರಂತರವಾಗಿ ನಡೆಯಲು ಆಯಾಯ ಕಂಪನಿ ಸಂಸ್ಥೆಗಳಿಗೆ ಆದೇಶವನ್ನೂ ನೀಡಲಾಗಿದೆ , ಜನಧನ ಯೋಜನೆ ಜಾರಿಯಲ್ಲಿದೆ. ಅಷ್ಟು ಮಾತ್ರ ಸಾಕೇ ? ಭಾರತದ ಪಾಲಿಗೆ ದೊಡ್ಡ ಸವಾಲೇ ಸರಿ..! ಆರ್ಥಿಕತೆ ಮುಮ್ಮಲ ಮಲಗಿದೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವು ದಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ ,ಒಂದು ಪಕ್ಷದಲ್ಲಿ ಸರಿ ಕಂಡರೂ , ಇನ್ನೊಂದು ದಿಕ್ಕಿನಲ್ಲಿ ಇದು ನಗೆಪಾಟಲಿಗೆ ಈಡಾಗುತ್ತಿದೆ ಈ ಸಮಯದಲ್ಲಿ ದೇಶಕ್ಕೆ ದೇಣಿಗೆ ಅನಿವಾರ್ಯವೇನೋ ಆದರೂ, ಅದನ್ನು ಜನಸಾಮಾನ್ಯರ ಮೇಲೆ ಹೊರಿಸುವುದು ತರವಲ್ಲ ಸಂಸದರು ,ಶಾಸಕರು ,ಸರ್ಕಾರದ ಹತ್ತಾರು ಭಾಗದಲ್ಲಿರುವ, ಈಗಾಗಲೇ ಸರ್ಕಾರದ ಬೊಕ್ಕಸದಿಂದ ತಿಂದು ತೇಗಿ ಮಿಕ್ಕಿದ ಸಂಪತ್ತಿನ ಅಲ್ಪ ಪ್ರಮಾಣದಲ್ಲಿ ಕೊಟ್ಟರೆ ಸಾಕು ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗುವುದರಲ್ಲಿ ಎರಡು ಮಾತಿಲ್ಲ . ನಾಲ್ಕು ಸಾವಿರದಿಂದ ಐದು ಸಾವಿರ ತನಕ ಸಂಸದರು ,ಶಾಸಕರು ನಮ್ಮ ದೇಶದಲ್ಲಿ ಇದ್ದಾರೆ ಶಾಸಕರಾಗುವ ಮೊದಲು ಕೋಟಿ ಕೋಟಿ ತಮ್ಮ ಆಸ್ತಿಪಾಸ್ತಿಯನ್ನು ತೋರಿಸುತ್ತಾರೆ,ಆದಮೇಲೆ ಅದೆಷ್ಟು ಕೋಟಿಯೋ ಅವರಿಗೆ ಲೆಕ್ಕ ವಿಲ್ಲಾ ಬಿಡಿ ! ಇವರುಗಳಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಸಿಯಬೇಕಾಗಿದೆ ಅಥವಾ ದೇಶದ ರಕ್ಷಣೆಗೆ ಅವರು ಸೌಜನ್ಯಕ್ಕಾದರೂ , ಆಗಮಿಸಬೇಕು ಅಲ್ಲವೇ? ನಾಚಿಕೆ ಇಲ್ಲವೇ ಜನಪ್ರತಿನಿಧಿಗಳಿಗೆ ? ಒಂದಷ್ಟು ಮಂದಿ ಅನಿವಾರ್ಯತೆಗೆ ಚೂರು-ಪಾರು ಒಂದು ದಿನದ್ದೋ , ತಿಂಗಳದ್ದು ವರ್ಷದ ಸಂಬಳವನ್ನು ಪರಿಹಾರ ನಿಧಿಗೆ ಕೊಟ್ಟರೆ ಇನ್ನು ಕೆಲವರಿಗೆ ನಾಚಿಕೆಯಾಗಬೇಕು ಒಂದೂ ನಯಾ ಪೈಸೆಯನ್ನೂ ಬಿಚ್ಚಿಲ್ಲ ಚುನಾವಣೆ ಬಂದಾಗ ಹಣ ಹೆಂಡ ಇನ್ನಿತರ ಸಾಮಾನುಗಳನ್ನು ಹಂಚುವ ಇವರುಗಳು ಈಗ ಸತ್ತಿದ್ದಾರೆ ?, ಕೋಟಿಗಟ್ಟಲೇ ಖರ್ಚು ಮಾಡಿ ಮಕ್ಕಳ ಮದುವೆ ಮಾಡಲಿಕ್ಕೆ , ಕೋಟಿಗೆ ಕಿಂಚಿತ್ ಲೆಕ್ಕವಿಲ್ಲದಂತೆ ಯಂ ಎಲ್ ಏ ಗಳನ್ನು ಖರೀದಿ ಮಾಡಲು ಹಣ ವಿದೆ ಆದರೆ ದೇಶ ಸನ್ಕಷ್ಟದಲ್ಲಿರುವಾಗ,ವೋಟು ಹಾಕಿದ ಜನತೆ ಹಸಿವಿನಿಂದ ಸಾಯುತ್ತಿರುವಾಗ ಎಲ್ಲಿದೆ ನಿಮ್ಮ ಮೊಸಳೆ ಕಣ್ಣೀರು ? ಎಲ್ಲಿದೆ ನಿಮ್ಮ ರಿಯಲ್ ಸಹಾಯ ಹಸ್ತದ ಬೆಳವಣಿಗೆ ? ಭಾವೋದ್ವೇಗ ಉಂಟಾಗುತ್ತಿದೆ , ಕೋಪ ನೆತ್ತಿಗಿರುತ್ತಿದೆ ,ರಕ್ತ ಕುದಿಯುತ್ತಿದೆ . ಇವೆರೆಲ್ಲಾ ಬದಲಾಗೋಲ್ಲ , ಯಾರೂ ಕೂಡಾ ರಿಯಲ್ ಹೀರೊ ಅಲ್ಲಾ ಕೇವಲ ಕುರ್ಚಿಯ ಲಾಲಸೆಗೆ ಒದ್ದಾಡುವ ಸ್ವಾರ್ಥಿಗಳು .. ! ಯೋಚಿಸಿ ಪ್ರಜೆಗಳೇ,ಆಲೋಚಿಸಿ ಇದೆ ಸರಿಯಾದ ಸಮಯ ಸಹಾಯ ಮಾಡಿದವರ ಮೇಲೆ ಗಮನವಿರಲಿ ಮುಂದಿನ ಚುನಾವಣೆಗೆ ಅಸ್ತ್ರ ನಿಮ್ಮಲ್ಲೇ ಇದೆ ಈಗಲೇ ಮಸೆಯಲು ಸಿದ್ದರಾಗಿ .
ಮೆಚ್ಚಬೇಕು ಇಂಥವರುಗಳ ಕಾರ್ಯ: ಅದೆಷ್ಟು ವಾಹನಗಳು ,ಹೋಟೆಲ್, ಕಾರ್ಖಾನೆ, ಐಷಾರಾಮಿ ದೊಡ್ಡ ದೊಡ್ಡ ಬಂಗಲೆ ಅವೆಲ್ಲವನ್ನೂ ಹೊಂದಿರುವ ಜನಪ್ರತಿನಿಧಿಗಳ ಪೈಕಿ ,ಯಾವೊಬ್ಬನಿಂದಲೂ ಸಹಾ ಎಳ್ಳು ಕಾಳಷ್ಟು ಉಪಯೋಗ ವಾಗಿಲ್ಲ. ನಿಜಕ್ಕೂ ಮೆಚ್ಚಬೇಕು ನಮ್ಮಲ್ಲಿ ಏನೂ ಇಲ್ಲದಿದ್ದರೂ ಸಹಾ ಹಲವಾರು ಮನಸ್ಸುಗಳು ಸಹಾಯಕ್ಕೆ ಬಂದಿದೆ ತಮ್ಮಿಂದ ಏನು ಕೊಡಲು ಇಲ್ಲದಿದ್ದರೂ ದುಡಿಯುವ ,ತುಡಿಯುವ ಮನಸ್ಸುಗಳಿಗೆ ಕೃತಜ್ಞತೆ ಸಲ್ಲಿಸಲೇಬೇಕು. ತಮ್ಮಲ್ಲಿ ಒಂದು ರೂಪಾಯಿ ಇದ್ದರೇ, ಅದರಲ್ಲಿ ಇಲ್ಲದವರಿಗೆ ಐವತ್ತು ಪೈಸೆ ಕೊಡಲು ಇಷ್ಟ ಪಡುವ ಮನಸ್ಸುಗಳು ಈ ದಿನಗಳಲ್ಲಿ ತೆರೆಮರೆಯಲ್ಲಿ ಬೆಳಕಿಗೆ ಬರುತ್ತಿವೆ. ಉಡುಪಿ ಮಲ್ಪೆಯ ಮೀನು ಮಾರುವ ಮಹಿಳೆಯೆ ಶಾರದಕ್ಕನ ನೋಡಿ ಮೊನ್ನೆ ಸುದ್ದಿಯಾದಳು ಮನೆ ಕಟ್ಟಲಿಕ್ಕೆ ಇಟ್ಟ ಮೂವತ್ತು ಸಾವಿರ ರೂಪಾಯಿನ್ನು ಈ ಸಮಯದಲ್ಲಿ ತನ್ನಂತೆ ಇರುವ ಬಡ ಜೀವಕ್ಕೆ ಆಸೆರೆಯಾದಳು. ಸುಮಾರು ೧೪೦ ಮನೆಗಳಿಗೆ ಅಕ್ಕಿ ವಿತರಿಸಿದ ಧೀರೆಯಾದಳು. , ಬೆಂಗಳೂರಿನಲ್ಲಿ ಪಾಕೆಟ್ ಹಾಲಿಗೆ ಹೊಡೆದಾಟ ,ಹಾತುರ ಪಡೆಯುವ ಕೆಲವು ಮನಸ್ಥಿತಿಗಳು ಇವರನ್ನು ನೋಡಿ ಕಲಿಬೇಕು , ಯಾವ್ದೋ ಒಂದು ಸಂಸ್ಥೆ ,ಕಡು ಬಡತನವನ್ನು ಹೊಂದಿದ್ದ ಒಂಟಿ ಮಹಿಳೆ ಮನೆಗೆ ಅಗತ್ಯ ಸಾಮಗ್ರಿಯನ್ನು ತಂದು ಕೊಟ್ಟರೆ ಪಾಪ ಆಕೆ ನನಗೆ ಬೇಡ ಈಗಾಗಾಲೇ ಸಿಕ್ಕಿದೆ ಬೇರೆಯವರಿಗೆ ಕೊಡಿ ಅವರಿಗೂ ಸಹಾಯವಾಗುತ್ತದೆ ಎಂದು ವಿನಮ್ರ ವಾಗಿ ಹೇಳುವ ಆ ವಿಡಿಯೋ ಕಣ್ಣೇರು ತರಿಸುತ್ತಿದೆ . ಆಟೋ ರಿಕ್ಷಾ ಆನಂದಣ್ಣ . ಜೀವನವೋಪಾಯಕ್ಕೆ ಬಾಡಿಗೆಗೆ ಒಂದು ಸಣ್ಣ ಆಟೋರಿಕ್ಷಾ ಇದೆ. ತೀರಾ ಗ್ರಾಮೀಣ ಭಾಗದಲ್ಲಿರುವ ಇವರು ಮೊದಲೇ ಬಡತನದಲ್ಲಿ ಬೇಯುತ್ತಾ ಬಂದವರು ,ಅವರಿಗೂ ಅರಿವಿದೆ ಬಡತನ ಎಂದರೇನು ಅದು ಈ ಸಮಯದಲ್ಲಿ ಎಷ್ಟು ಪರಿಣಾಮ ಬೀರುತ್ತಿದೆ ಎಂದು , ಲಾಕ್ ದೌನ್ ಆದ ದಿನದಿಂದಲೂ ಆ ಭಾಗದಲ್ಲಿ ಅದೆಷ್ಟೋ ಜನರಿಗೆ ಉಪಕಾರಿಯಾಗಿದ್ದಾರೆ ,ಗ್ರಾಮೀಣ ಪ್ರದೇಶಗಲ್ಲಿ ರೋಗಿಗಳನ್ನು ದೂರದ ಆಸ್ಪತ್ರೆ ಸಾಗಿಸಲು , ಸರ್ಕಾರ ಕೊಟ್ಟ ರೇಷನ್ ನ್ನು ಅವರ ಮನೆ ತಲುಪಿಸಲು ,ಅಗತ್ಯ ವಸ್ತುಗಳನ್ನು ನಿರ್ಗತಿಕರಿಗೆ ಬಡವರಿಗೆ ಮನೆಗೆ ತಲುಪಿಸುವ ಕಾರ್ಯವನ್ನು ಕೈ ಕೊಂಡಿದ್ದಾರೆ ನಿಜಕ್ಕೂ ಇವರೆಲ್ಲಾ ತೆರೆ ಮರೆಯ ಹೀರೊಗಳು ಬೆಳಕಿಗೆ ಬರುದಿಲ್ಲ .,ಅದೂ ಅವರಿಗೆ ಅವಶ್ಯಕೆತೆಯೂ ಇಲ್ಲ ಬಿಡಿ .! ಹಾ.! ಮೊನ್ನೆ ಒಂದು ಈ ಹಳ್ಳಿಯಲ್ಲಿ ಕಹಿ ಘಟನೆಯೊಂದು ನಡೆದು ಬಿಟ್ಟಿತು ಕಾಡಿಗೆ ಸೊಪ್ಪು ತರಲು ಹೋದ ಮಹಿಳೆಗೆ ಹಾವು ಕಚ್ಚಿದಾಗ ಅದು ಯಾರೋ ಆನಂದ ಅಣ್ಣನಿಗೆ ಫೋನ್ ಹಾಯಿಸಿದ್ದರು ತಡ ಮಾಡದೇ ಸ್ಥಳಕ್ಕೆ ದೌಡಾಯಿಸಿ ಆ ಮಹಿಳೆಯನ್ನು ತನ್ನ ಆಟೋದಲ್ಲಿ ಹೊತ್ತು ನೆಡೆದರು 3 ಆಸ್ಪತ್ರೆ ಕ್ಲಿನಿಕ್ ಒಳ ಹೊಕ್ಕರೂ ಪ್ರಯೋಜನ ಕಾಣದೇ ಅತೀ ವೇಗವಾಗಿಯೇ ತಾಲೂಕಿನ ದೊಡ್ಡ ಆಸ್ಪತ್ರೆಗೆ ಬಂದರು . ಸರಿ ಸುಮಾರು 45 ಕೀಮಿ ದೂರಡಾ ಪಯಣಆಸ್ಪತ್ರೆಯಲ್ಲಿ ಧಾಖಲಾದರೂ, ಆಸ್ಪತ್ರೆ ಫೀಸುಗೂ ಹಣ ವಿಲ್ಲದೇ ಇದ್ದ ಮಹಿಳೆಯ ಕುಟುಂಬದ ಸಂಕಷ್ಟ ಕಂಡು ತಾನೇ ಜೇಬಲ್ಲಾ ಅರಸಿ 2000 ಕೊಟ್ಟು ಬಂದರು . ನಿಜಕ್ಕೂ ಇವರುಗಳು ಗ್ರೇಟ್ ಅಲ್ಲದೆ ಮತ್ತಿನೇನು ? ಇದು ನಾ ಕಂಡ ಉದಾಹರಣೆ ಅಷ್ಟೇ ಇಂತಹ ಅದೆಷ್ಟೋ ಮಂದಿ ನಮ್ಮ ಸುತ್ತ ಮುತ್ತಾ ಇದ್ದಾರೆ .ಇವರಾರು ಪ್ರಚಾರ ಬಯಸೊಲ್ಲ ,ಎಡ ಕೈಗೆ ಕೊಟ್ಟರೆ ಬಲ ಕೈಗೆ ತಿಳಿಯಬಾರದೆಂಬ೦ತೇ ಇದ್ದರೂ ಅದು ಬೆಳಕಿಗೆ ಬರುತ್ತದೆ ಅದೂ ಬರಲೇ ಬೇಕು ಕೂಡಾ ಒನ್ದಷ್ಟು ಅತಿ ರಥರುಗಳ ಮರ್ಯಾದೆಗೆ ಅನಿವಾರ್ಯ ! ಕೆಲವು ಮನಸ್ಥಿಗಳಿಗೆ ಏನು ಹೇಳ್ಬೇಕು ಗೊತ್ತಾಗೊಲ್ಲ ಕೊಡುವುದು ಮೂರು ಕಾಸಿನ ವಿಚಾರ ಆದರೆ ಆರು ಕಾಸಿನ ಪ್ರಚಾರ ! ಆಹಾರ ಕಿಟ್ ಗಳ ಮೇಲೆ ತಮ್ಮ ಫೋಟೋ, ಹೆಸರು, ರಾಜಕೀಯ ಪಕ್ಷಗಳ ಚಿನ್ಹೆ ,ಒಂದಾ ಎರಡಾ ಒಟ್ಟಾರೆ ಪುಕ್ಕಟೆ ಪಬ್ಲಿಸಿಟಿಗಳೂ ಕಾಣ ಸಿಗುತ್ತಿವೆ. ಅದೇನೆಯಿರಲಿ ಸಂಕ ಮುರಿದಲ್ಲೆ ಸ್ನಾನ್ಹ ,ಜೊತೆಗೆ ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವೂ ಸಹಾ ಈ ಸಮಯದಲ್ಲಿ ತಾರಕ್ಕೆಕ್ಕೆ ಏರಿದೆ .ಒಟ್ಟಾರೆ ಕೆಲವು ಸಣ್ಣಪುಟ್ಟ ಸಂಘ-ಸಂಸ್ಥೆಗಳು , ಸಮಾಜ ಸೇವೆ ಗೆ ತಮ್ಮನ್ನು ಅರ್ಪಿಸುವ ಸಮಾನ ಮನಸ್ಕರು ಹಳ್ಳಿ- ಹಳ್ಳಿಗಳಿಗೆ ಸಾಗಿ ಆಹಾರವನ್ನು ಒದಗಿಸುವ, ಸಹಾಯ ಹಸ್ತವನ್ನು ಚಾಚುವ ಕಾರ್ಯವನ್ನು ಕೈಗೊಂಡಿದೆ,ನಿರ್ಗತಿಕರಿಗೆ , ಭಿಕ್ಷುಕರಿಗೆ, ಬೀದಿನಾಯಿ ,ಪ್ರಾಣಿ- ಪಕ್ಷಿಗಳಿಗೆ ಆಹಾರ ಒದಗಿಸುವ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ! ಐಸೋಲೇಶನ್ ಗಳಿಗೆ ತಮ್ಮ ತಮ್ಮ ಕಟ್ಟಡ ಮನೆಗಳನ್ನು ಕೊಡಲು ಮುಂದಾಗುವ ಮನಸ್ಸುಗಳೂ ಇವೆ ಸದ್ಯ ಕೆಲವು ಐಟಿ-ಬಿಟಿ ಕಂಪನಿಗಳು, ಸಿನಿಮಾ ನಟ-ನಟಿಯರು ಸಹಾಯಧನವನ್ನು ನೀಡುತ್ತಿದ್ದಾರೆ,ಕೊಡಲೇ ಬೇಕು ಅದು ಅವರ ಧರ್ಮ ಈ ಮಣ್ಣಿನ ಋಣ .! ಜನ ಪ್ರತಿನಿಧಿಗಳೇ ಏಳಿ ,ಮತ ದಾನ ಪ್ರಭುಗಳೇ ನೆನಪಿಡಿ, ಮತ ಭಿಕ್ಷೆಗೆ ಬಂದಾಗ ರಿವೇಂಜ್ ನಿಮ್ಮದಾಗಿರಲಿ !!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ