ಮುಸುಕಿನ ಗುದ್ದಾಟಕ್ಕೆ ಮೊನ್ನೆ ದಿನ ಬ್ರೇಕ್ ಬಿದ್ದಿತು ! ಹೌದು ಬಹಳ ದಿನಗಳ ನಂತರ ನನ್ನ ಒಡಲ ಧ್ವನಿ ಹೇಳ ಹೊರಟಿರುವುದು ಕಟೀಲು ಯಕ್ಷಗಾನ ಮೇಳದಲ್ಲಿನ ಗೊಂದಲವನ್ನು !. ಕಳೆದ ಎರಡು ವರ್ಷಗಳಿಂದ ಕಟೀಲು ಯಕ್ಷಗಾನ ಮೇಳದಲ್ಲಿ ಒಂದಷ್ಟು ವಿವಾದದ ಸುದ್ದಿಯನ್ನು ನಾವು ಕೇಳುತ್ತಾ ಬಂದಿದ್ದೇವೆ . ಅದೆಷ್ಟೋ ಇತಿಹಾಸವನ್ನು ಹೊಂದಿರುವ ಕಟೀಲು ಮೇಳದಲ್ಲಿ ಈ ರೀತಿ ಯಾಕೆ ಆಯಿತು ?ಇದಕ್ಕೆ ಕಾರಣವೇನು ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ . ರಂಗಸ್ಥಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಇಳಿಸಿದ್ದು ಯಾಕೆ ? ಮೇಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರ?,ಅಶಿಸ್ತು ತೋರಿಸಿದ್ದರಾ ಪಟ್ಲಾ ? ಮೇಳದ ಸಂಚಾಲಕರು ಅರ್ಚಕರು ಒಂದು ಕಡೆ ,ಭಾಗವತ ಸತೀಶ್ ಶೆಟ್ಟಿ ಇನ್ನೊಂದು ಕಡೆ ಶೀತಲ ಸಮರಕ್ಕೆ ಕಾರಣವೇನು ? ಈ ಎಲ್ಲಾ ಮನದ ಪ್ರಶ್ನೆಯನ್ನು ಇಟ್ಟುಕೊಂಡು ಬಲ್ಲವರ ಅಭಿಪ್ರಾಯವನ್ನು ನನ್ನ ಓಡಲ ಧ್ವನಿಯಲ್ಲಿ ಮುದ್ರಿಸಿದ್ದೇನೆ .
ಎಲ್ಲವೂ ಸರಿ ಇತ್ತು .. ಯಕ್ಷಗಾನ ಮೇಳದಲ್ಲಿ ಆಗಿದ್ದೇನು ?
ಪಟ್ಲ ಸತೀಶ ಶೆಟ್ಟಿ ಸ್ಟಾರ್ ಮಟ್ಟದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಯಕ್ಷಗಾನ ಭಾಗವತ . ಕಟೀಲು ಮೇಳದಿಂದಲೇ ವೃತ್ತಿ ಆರಂಭಿಸಿದ ತಮ್ಮದೇಯಾದ ವಿಶಿಷ್ಟ ಶೈಲಿಯ ಭಾಗವತಿಕೆ ಯಿಂದ ಪ್ರಸಿದ್ದಿ ಪಡೆದವರು. ಯಕ್ಷ ದ್ರುವ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಿಂದ ಬಡ ,ನಿರ್ಗತಿಕ ,ನಿರಾಶ್ರಿತ ಯಕ್ಷಗಾನ ಕಲಾವಿದ ಬಂಧುಗಳಿಗೆ ಸಹಾಯ ಹಸ್ತವನ್ನು ನೀಡುತ್ತಿರುವ ಈ ಕಾರ್ಯಕ್ಕೆ ಸಾಕಷ್ಟು ಜನ ಮನ್ನಣೆ ಸಿಕ್ಕಿದ್ದು ನಿಜವಾದರೂ, ಕೆಲವೊಂದು ಊಹಾ ಫೋಹಾಗಳೂ ಸಹಾ ಹೊಗೆಯಾಡುತ್ತಿವೆ !
ದಂಗೆ ಎದ್ದರು ಕಲಾವಿದರು :
ಯಕ್ಷಗಾನದ ಅಲ್ಲಿನ ಸಾಂಪ್ರದಾಯಿಕ ನಿಯಮದಂತೆ ವರ್ಷದಿಂದ ವರ್ಷಕ್ಕೆ ಆರೂ ಮೇಳದ ಕಲಾವಿದರುಗಳನ್ನು ಬದಲಾವಣೆ ಮಾಡುವುದು ರೂಢಿ . ಅದರಂತೆ ೨ ವರ್ಷಗಳ ಹಿಂದೆ ೫ನೇ ಮೇಳದಲ್ಲಿದ್ದ ಭಾಗವತ ಪಟ್ಲರನ್ನು ಬೇರೆ ಮೇಳಕ್ಕೆ ವರ್ಗಾವಣೆ ಮಾಡಿದ್ದರಿಂದ ಖುದ್ದು ಪಟ್ಲಾರಿಗಲ್ಲದೇ ,ಅವರ ಹಿತೈಷಿ ಕಾಲವಿದರು ದಂಗೆ ಎದ್ದರು ಪಟ್ಲರನ್ನು ವರ್ಗಾವಣೆ ಮಾಡಬಾರದು ಎಂದು 25 ಕಲಾವಿದರ ಪೈಕಿ 23 ಮಂದಿ ರಾಜೀನಾಮೆಗೆ ಕೊಟ್ಟರು .ವ್ಯವಸ್ಥಾಪಕನಾ ಮಂಡಳಿ ಅವರನ್ನು ನಿರ್ದಾಕ್ಷನ್ಯವಾಗಿ ಮೇಳದಿಂದ ಕೈ ಬಿಟ್ಟಿತು . ತಮ್ಮ ತಪ್ಪನ್ನು ಒಪ್ಪಿಕೊಂಡು ಪುನ್ಹ ಮೇಳಕ್ಕೆ ಕಲಾವಿದರು ಹಿಂತಿರುಗಿದ್ದೂ ಇತಿಹಾಸವಾದಾರೂ ,ಇಂದು ಈ ಘಟನೆಗೆ ಒಂದು ಎಳೆ ಸಹಾ ಕಾರಣವಿಲ್ಲಾ ಅನ್ನುವಂತಿಲ್ಲ ಇಲ್ಲಿಂದ ಶುರುವಾಗುತ್ತಿತ್ತು ಮುಸುಕಿನ ಗುದ್ದಾಟ . ತಾನೇ ಸುಪ್ರೀಂ ನನ್ನ ನಿರ್ಣಾಯದಂತೆ ಎಲ್ಲವೂ ನೆಡೆಯಬೇಕೆಂದು ಬೀಗುತ್ತಿದ್ದಾ ಸತೀಶ್ ಶೆಟ್ಟರು (ಬಲ್ಲ ಮೂಲಗಳ ಪ್ರಕಾರ )..ಎಲ್ಲಿ ನನ್ನಿಂದ ಕಾರ್ಯ ಸಾಧನೆ ಆಗುವುದಿಲ್ಲ ಎಂದು ಮನಗೊಂಡಾಗ ಮೇಳದ ವಿರುದ್ಧವಾಗಿ ಅಲ್ಲಲ್ಲಿ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಾ ಬಂದಿದರು ಎನ್ನುವ ಮಾತು ಕೂಡ ಇವೆ .
ಆ ದಿನ ನಡೆದಿದ್ದು ಏನು ?
ಪಟ್ಲ ಸತೀಶ್ ಶೆಟ್ಟಿ ಮತ್ತು ಮೇಳದ ಯಜಮಾನರ ನಡುವಿನ ವೈಮನಸ್ಸು, ಮೇಳದ ತಿರುಗಾಟದ ಮೊದಲನೇ ಹರಕೆಯಾಟದಂದೇ ಬಹಿರಂಗಗೊಂಡಿತು
ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಐದು ಮೇಳಗಳ ತಿರುಗಾಟದ ಮೊದಲ ಸೇವೆಯಾಟ ಏಕಕಾಲಕ್ಕೆ, ಶುಕ್ರವಾರ ನ 22 ಕಟೀಲು ಕ್ಷೇತ್ರದಲ್ಲಿ ನಡೆಯುತ್ತಿತ್ತು. ತಡರಾತ್ರಿ 12.45 ಸುಮಾರಿಗೆ ಭಾಗವತಿಕೆಗಾಗಿ ವೇದಿಕೆಗೆ ಆಗಮಿಸಿದ ಪಟ್ಲ ಸತೀಶ್ ಅವರನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು . ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿ ಕೊಟ್ಟರೂ , ಇದರ ಹಿಂದೆ ಸಾಕಷ್ಟು ಕಾರಣವೂ ಇತ್ತು ಮೇಳದಲ್ಲಿ ಅಶಿಸ್ತು ದೂರವುದು ಹಾಗೂ ಮೇಳದ ವಿರುದ್ಧ ಹೇಳಿಕೆಯನ್ನು ನೀಡುತ್ತಾ ಬಂದಿರುದರಿಂದ ಮೇಳದ ಮಾಲೀಕರು ಹಾಗೂ ದೇವಳದ ಆಡಳಿತ ಮಂಡಳಿಯ ನಿರ್ಣಾಯದಂತೆ ಯಜಮಾನರು ಈ ಬಾರಿ ಮೇಳದಿಂದ ಹೊರಕೆ ಇರಲೂ ಆದೇಶಿಸಿದ್ದರು ಎಂಬ ಮಾತೂ ಇದ್ದೂ ಅದನ್ನು ದಿಕ್ಕರಿಸಿ ರಂಗಸ್ಥಳಕ್ಕೆ ಬಂದಿದ್ದರಿಂದ ಕೆಳಗೆ ಇಳಿಯಲು ಮೇಳದ ಮಾಲೀಕರು ಸೂಚಿಸಿದರಂತೆ . ಇದು ಸತೀಶ್ ಶೆಟ್ಟಿ ಯವರದ್ದು ತಪ್ಪು ಅಲ್ಲದೆ ಮತ್ತಿನೇನು ?
ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಏನು ಆಂತಾರೆ ?:
"ಕಳೆದ ಎರಡು ವರ್ಷದಿಂದ ಯಕ್ಷಗಾನ ಮೇಳದ ಬಗ್ಗೆ ತೆಜೋವಧೆ ಮಾಡುತ್ತಿದ್ದಾರೆ. ಆದರೆ ನಾವು ಯಾವುದೇ ಹೇಳಿಕೆ ನೀಡಿಲ್ಲ, ಏನಿದ್ದರೂ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸುತ್ತೇನೆ, ಅದರಂತೆ ಪಟ್ಲ ಭಾಗವತನನ್ನು ಮೇಳದಿಂದ ಕೈ ಬಿಟ್ಟು ಶಿಸ್ತು ಕೈಗೊಂಡಿದ್ದೇನೆ, ಕಟೀಲು ಮೇಳದ ಗೌರವ, ಮೇಳದ ಸೇವಾಕರ್ತರ ಗೌರವ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ನಾವು ಎಲ್ಲೂ ಹೇಳಿಕೆ ನೀಡಿಲ್ಲ, ಕಳೆದ ಪತ್ತನಾಜೆ ಬಳಿಕ ನ.22ರಂದು ಕಟೀಲು ದೇವಸ್ಥಾನದಲ್ಲಿ ನಡೆದ ಸೇವೆಯಾಟದ ವರೆಗೆ ಪಟ್ಲ ಸತೀಶ್ ಶೆಟ್ಟಿ ಎಂದೂ ಮೇಳದ ಯಜಮಾನರನ್ನಾಗಲೀ, ದೇವಸ್ಥಾನದ ಮುಖ್ಯಸ್ಥರನ್ನಾಗಿಲೀ ಭೇಟಿ ಮಾಡಿಲ್ಲ. ಮೊನ್ನೆ ಸೇವೆಯಾಟದ ದಿನವೇ ಅವರು ಕಟೀಲಿಗೆ ಬಂದದ್ದು.ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಮೇಳದ ಕಲಾವಿದರನ್ನು ಹಂಚಿಕೆ ಮಾಡಿ ಚೌಕಿಯಲ್ಲೇ ಈ ಬಗ್ಗೆ ಕಲಾವಿದರಿಗೆ ಮಾಹಿತಿನಿಡುವುದು ಸಂಪ್ರದಾಯ. ಪಟ್ಲ ಸತೀಶ್ ಶೆಟ್ಟಿಯನ್ನು ಯಾವ ಮೇಳದ ಭಾಗವತರನ್ನಾಗಿಯೂ ಹೆಸರಿಸಿರಲಿಲ್ಲ. ಮೊದಲೇ ಈ ಬಗ್ಗೆ ಸೂಚನೆ ಸಿಕ್ಕ ಬಳಿಕವೂ ರಂಗಸ್ಥಳಕ್ಕೆ ಭಾಗವತ ಮಾಡಲು ತೆರಳಿದ್ದು ಉದ್ದೇಶಪೂರ್ವಕವಾಗಿದೆ. ವಿವಾದ ಮಾಡುವುದೇ ಅವರ ಉದ್ದೇಶ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ "ಎಂದು ಹೇಳುತ್ತಾರೆ .
ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯ:
"ನಾನು ಪ್ರಧಾನ ಭಾಗವತಿಗೆ ಯಿಂದ ಹಿಂದೆ ಸರಿದಿದ್ದು ಪೌಂಡೇಶನ್ ಕಾರ್ಯಾಚರಣೆ ಗಾಗಿ ಹೊರದೇಶ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಬೇಕಾಗುದರಿಂದ ನನ್ನಿಂದ ನಿರ್ವಹಿಸಿಲು ಸಾಧ್ಯ ವಿಲ್ಲದ ದ್ರಷ್ಟಿ ಯಿಂದ ಯಜಮಾನರಲ್ಲಿ ವಿನಂತಿಸಿದ್ದೇನೆ . ಯಾವುದೇ ಫಲಾಪೇಕ್ಷೆ ಇಲ್ಲದೇ ಕಟೀಲು ಮೇಳದಲ್ಲಿ ಕಾರ್ಯನಿವ ಹಿಸುತ್ತಿದ್ದೇನೆ . ತಾಯಿ ಸೇವೆ ಎಂದಾ ಆಲೋಚಿಸಿ ಮಾಡುತ್ತಿದ್ದೇನೆ . ರಂಗಸ್ಥಳದಿಂದ ಕೆಳಗೆ ಇಳಿಸಿದ್ದು ತಪ್ಪು ನನಗೆ ಭಾಗವತಿಗೆ ಮಾಡಬೇಡ ಮೇಳದಿಂದ ಹೊರಗೆ ಹೋಗು ಎಂದು ಆದೇಶಿಸಿಲ್ಲ "ಎನ್ನುತ್ತಾರೆ. ಏನೇ ಇರಲಿ ಮೇಳದ ಯಜಮಾನರು ,ಅರ್ಚಕರ ಹಾಗೂ ಸತೀಶ್ ಶೆಟ್ಟಿಯವರ ಶೀತಲ ಸಮರ ಬೆಳಕಿಗೆ ಬಂದ್ದಿದಂತೂ ಸತ್ಯ
ಪಟ್ಲರನ್ನು ಕೆಳಗೆ ಇಳಿಸದ್ದು ಸರಿಯಲ್ಲ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದರೆ, ಇತ್ತಾ ಆಡಳಿತ ಮಂಡಳಿಯ ಪರವಾಗಿಯೂ ಸಹಾ ಉತ್ತಮ ಮಾತು ಕೇಳಿಬರುತ್ತಿವೆ . ಈ ಕ್ಷೇತ್ರದಲ್ಲಿ ಇಂತ ಒಂದು ವಿಚಾರ ಹೀನ ವಿವಾದ ನಡೆಯಬಾರದಿತ್ತು ಎನ್ನುವುದು ಪ್ರಜ್ಞಾವಂತರ ಅಭಿವ್ಯಕ್ತಿ.ಕೊನೇದಾಗಿ ಒಂದು ಮಾತು ವಂಶ ಪಾರಂಪರ್ಯವಾಗಿ ಮೇಳವನ್ನು ನೆಡಸಿ ಕೊಂಡು ಬರುತ್ತಿರುವ ಕಲ್ಯಾಡಿ ಕುಟುಂಬ, ಕಾಲಕ್ಕೆ ತಕ್ಕಂತೆ ,ಸಾಂಪ್ರಾಯಿಕವಾಗಿ ತಲೆ -ತಲಾಂತರ ದಿಂದ ನಡೆಸಿಕೊಂಡು ಬರುವ ಪದ್ದತಿಗೆ ಕೊಳ್ಳಿ ಇಡುವುದು ಸರಿಯಲ್ಲ .ಕಲಾವಿದರಿಗೆ ರಜೆ ಸಂಬಳ , ವಿಶೇಷ ಸೌಲಭ್ಯ ಸಿಗುತ್ತಿದ್ದೂ ,ಏಲಂ ಮಡಬೇಕು ಎಂದೆಲ್ಲಾ ಯೋಚಿಸಿ ಕೋರ್ಟು ಮೆಟ್ಟಲೇರುವುದು ಹುಂಬತನ .
ಹಾಗೆಯೇ ಪಟ್ಲಾ ಸತೀಶ್ ಶೆಟ್ಟರಿಗೆ ಅಂಹಂಕಾರ ಬಂದಿದೆ ಮೇಳದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುದಿಲ್ಲ ಬೇರೆ ಕಾರ್ಯಕ್ರಮಗಳಿಗೆ ವಲಸೆ ಹೋಗುವುದೇ ಹೆಚ್ಚು .ಅತಿಥಿ ಕಲಾವಿದರಂತೆ ಇದ್ದಾರೆ ಅನ್ನುವ ಮಾತು ಇದೆ . ಪೌಂಡೇಶೇನ್ ನಿರ್ವಹಣೆ ಜವಾಬ್ದಾರಿ ,ಪ್ರವಾಸ ಇದೆಲ್ಲಾ ಒತ್ತಡ ದ ನಡುವೆ ಮೇಳದಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುವುದು ಕಷ್ಟ . ಮೇಳವನ್ನು ಬಿಟ್ಟು ತಮ್ಮ ಬೇರೆ ಕಾರ್ಯದ ಬಗ್ಗೆ ಗಮನ ಹರಿಸುವುದು ಸೂಕ್ತ .ಹಾಗೆಯೇ ಯಕ್ಷ ಧ್ರುವ ಪಟ್ಲಾ ಪೌಂಡೇಶನ್ ನಿಂದ ಅವ್ಯವಹಾರ ಇದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ ಸಂತೃಸ್ಥರೀಗೆ ಅದು ಸೂಕ್ತವಾಗಿ ಬಳಕೆ ಆಗುತ್ತಿಲ್ಲ ಎಂಬುದು . !ಏನೇ ಇರಲಿ ಎಲ್ಲವೂ ತಾರ್ಕಿಕ ಅಂತ್ಯ ಕಾಣಲಿ ..ದೇವಿ ಎಲ್ಲರಿಗೂ ಒಳಿತನ್ನು ಉಂಟು ಮಾಡಲಿ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ