ಬುಧವಾರ, ನವೆಂಬರ್ 9, 2016

ಆಧುನಿಕ ತಂತ್ರಜ್ಞಾನಗಳ ನಡುವೆಯೂ ನಡೆಯಿತು ನಡೆಯಬಾರದ ಘಟನೆ : ಯೇ ವಿಧಿ ನೀನೆಷ್ಟು ಕ್ರೂರಿ

ಮಾಸ್ತಿಗುಡಿ ದುರಂತ : ಯಾರು ಹೊಣೆ ?
ಭಂಡ ದೈರ್ಯ ಪ್ರಾಣಕ್ಕೆ ಎರವಾಯಿತೆ ?
ನಿಮ್ಮ ಭಾರವನ್ನು ಸಹಿಸದಾದನೇ ವಿಧಿ ?
ಕಲಾವಿದರನ್ನು ದೂಡಿ ಆಳ ನೋಡುವ ನಿರ್ದೇಶಕರುಗಳೇ ನಿಮ್ಮ ಜನ್ಮಕ್ಕೆ ಇಷ್ಟು ಬೆಂಕಿ ಹಾಕ ! ಪ್ರಸ್ತುತ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆಯೂ ಹೀಗೊಂದು ಘಟನೆ ನಡೆದಿರುವುದು ನಾಚಿಕೆ ಗೇಡು !ಹಾಸ್ಯಾಸ್ಪದ ! ನಿರ್ಲಕ್ಷವಲ್ಲದೆ ಮತ್ತಿನ್ನೇನು ? ಯಾರೂ ಮಾಡದ ಕಾರ್ಯಕ್ಕೆ ಕೈ ಹಾಕಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ನೊಂದಾಯಿಸಿ ದಾಖಲೆ ಮಾಡಬೇಕೆಂಬ ಹುಚ್ಚು ಹಂಬಲ ನಿರ್ದೇಶಕರದ್ದು ! ಪಾಪ ಏನೂ ಅರಿಯದ ಅಮಾಯಕ ನತದೃಷ್ಟ ಕಲಾವಿದರುಗಳ ಜೀವ ಮಾತ್ರ ತೂಗು ಗತ್ತಿ ಮೇಲೆ ತೇಲುತ್ತಿರುರುವುದು ಅಕ್ಷರಸ:ನಿಜ .
ಅದೃಷ್ಟ ಇದ್ದರೆ ಬದುಕಿ ಉಳಿಯಬಹುದು ಇಲ್ಲದಿದ್ದರೆ ಕುಟುಂಬದಲ್ಲಿ ಸೂತಕ ವೇ ಗತಿ ! ಯಾರೂ ಬರಲಾರರು ನಮ್ಮ ರಕ್ಷಣೆಗೆ ಇವನ್ ಭಗವಂತನೂ ಕೂಡಾ ! ಹೌದು ನಿಮ್ಮಿಂದ ನೋಡ ನೋಡುತ್ತಲೇ ದೂರವಾದ ಉದಯೋನ್ಮುಖ ಬಡ ಕಲಾವಿದರಾದ ಉದಯ್ ಹಾಗು ಅನಿಲ್ ರ ಚಿತ್ರಣ ಕಣ್ಣ ಮುಂದೆ ಹಾಯುತ್ತಿದೆ .. ಎಂತಾ ಕಲ್ಲು ಮನಸ್ಸಿನವರಿಗೂ ಕೂಡಾ ತಮಗೆ ಅರಿವಿಲ್ಲ ದಂತೆ ಕಂಬನಿ ಜಾರದೇ ಇರಲಾರದು ನಿನಿಮಾ ಅವಕಾಶಕ್ಕಾಗಿ ಅದೆಷ್ಟೋ ವರ್ಷ ವ್ರತ ಮಾಡ್ಬೇಕು ತಮ್ಮಲ್ಲಿ ಕಲೆಯ ಆಳ –ಅಂತರಾಳ ಕರಗತವಾಗಿದ್ದರೂ ಕಲಾ ವಿದನೆನಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ . ತೆರೆಯಲ್ಲಿ ಮೀನುಗ ಬೇಕಾದರೆ ತೆರೆಯ ಹಿಂದೆ ಅದೆಷ್ಟೋ ಕಷ್ಟ ಕಾರ್ಪಣ್ಯ ವನ್ನು ಉಂಡಿರುತ್ತಾರೆ , ಅವಕಾಶಕ್ಕಾಗಿ ಅದೆಷ್ಟೋ ನಿರ್ದೇಶಕ ಮನೆ ಬಾಗಿಲು ಬಡಿದು, ಸಿಕ್ಕ ಅವಕಾಶ ಹೇಗೆ ಇರಲಿ ದ್ರತಿ ಗೆಡದೆ ಮಾಡಿ ಮುಗಿಸಿ ನಾಳೆ ಭವ್ಯ ಭವಿಷ್ಯಕ್ಕೆ ಬೆಳಕು ಆಗಬೇಕೆಂಬ ಮಹತ್ವಕಾ೦ಕ್ಷೆ ಯಿಂದ ಕ್ಷಣದಲ್ಲಿ ಎಷ್ಟೇ ಕಠಿಣ ಪರಿಸ್ತಿತಿ ಇದ್ದರೂ ,ತಮ್ಮ ವಯಕ್ತಿಕವಾದ ತೊಂದರೆ ತಾಪತ್ರೆ ಗಳಿದ್ದರೂ , ದಿಡೀರ್ ನಿರ್ಧಾರಕ್ಕೆ ಕೈ ಹಾಕಿ , ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಪ್ರಮೇಯವನ್ನೂ ಕೂಡ ಮೆಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ . ಅದನ್ನೇ ಬಂಡವಾಳ ಮಾಡಿ ಕೊಂಡು ಕಲಾವಿದರುಗಳ ಪ್ರಾಣದ ಜೊತೆ ಚೆಲ್ಲಾಟ ವಾಡುವ ಕೆಲ ನಿರ್ದೇಶಕರುಗಳ ಮನಸ್ಸಿಗೆ ಕೊಳ್ಳಿ ಇಡಬೇಕಾಗಿದೆ . ತಂತ್ರಜ್ಞಾನ ಮುಂದುವರಿದಂತೆ ಇಂಥಹ ಹುಚ್ಚು ಸಾಹಸಗಳು ಬೇಕೇ ? ಅವಶ್ಯಕತೆ ಇದ್ದರೇ ಮುಂದಾಗುವ ಅನಾಹುತಗಳನ್ನು ಅರಿತು ಸುರಕ್ಷತೆ ಕಡೆ ಗಮನ ಹರಿಸುವಲ್ಲಿ ಆಗುವ ಅಡ್ಡಿಯಾದರೂ ಏನು ? ಮೂರು ಅಮೂಲ್ಯ ಜೀವಗಳ ರಕ್ಷಣೆಗೆ ಕೇವಲ ಒಂದೇ ಒಂದು ಬೋಟು ..! ಅದೂ ಕೊಡಾ ಕೆರೆಯ ದಡದಲ್ಲಿ! ಅಪಘಾತ ಸಂಬವಿಸಿದ ಬಳಿಕ ನೀರಿಗಿಳಿಯುವ ಪ್ಲಾನ್ ! ಸ್ಪಾಟ್ ಟು ಬೊಟ್ ಹತ್ತು ನಿಮಿಷ ದಾರಿ , ಹತ್ತು ಸೆಕೆಂಡ್ ನೀರಲ್ಲಿ ಈಜು ಬಾರದವರಿಗೆ ಉಸಿರುಬಿಗಿಹಿಡಿಯುವುದು ಕಷ್ಟ ಅಂತದ್ರಲ್ಲಿ ಹತ್ತು ನಿಮಿಷ ಪ್ರಯಾಣ ಮಾಡಿ ಬೋಟು ಅವರನ್ನು ಕಾಪಾಡಬೇಕು ಎಂಥಾ ಮುಟ್ಟಳ ಐಡಿಯಾ ಇದು ?!
“ ನನಗೆ ಆರೋಗ್ಯ ಸರಿ ಇಲ್ಲ ಎರಡು ದಿನಗಳಿಂದ ಜ್ವರದಲ್ಲಿ ಬಳಲುತ್ತಿದ್ದೇನೆ ಕೊನೆಯ ಚಿತ್ರೀಕರಣ ಕ್ಲೈ ಮೇಕ್ಸ್ ಉತ್ತಮವಾಗಿ ಬರಬೇಕು ನನ್ನಿಂದ ಇದು ನಿಲ್ಲಬಾರದು ಎಂಬ ಉದ್ದೇಶ ದಿಂದ ಪಾಲ್ಗೊಳ್ಳುತ್ತಾ ಇದ್ದೇವೆ 60 ಅಡಿ ಎಂದು ಇದೀಗ 100 ಅಡಿಗೆ ಡಿಕ್ಲೇರ್ ಮಾಡಿದ್ದಾರೆ ನಮ್ಮ ಪೈಟ್ ಮಾಸ್ತರ್ . ನಿಜಕ್ಕೂ ಭಯವಾಗುತ್ತದೆ . ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ ನ್ನು ಏರುತ್ತಿರುವುದು . ಈಜು ಗೊತ್ತಿಲ್ಲ “ ಎಂದು ಉಭಯ ಕಲಾವಿದರು ಸಾಹಸಕ್ಕೆ ಮುನ್ನ ಮಾಧ್ಯಮಗಳ ಜೊತೆ ಹೇಳಿದ ಪರಿ ನೋಡಿದ್ದರೆ ನಿಜಕ್ಕೂ ಕರುಳು ಹಿಂಡಿ ಬರುತ್ತದೆ . ಇಷ್ಟಿದ್ದರೂ ಇದ್ಯಾವುದನ್ನೂ ಕಂಡೂ ,ಕೇಳದಂತೆ ಚಿತ್ರ ತಂಡ ಯಾವುದೇ ದೂಪ್ ಬಳಸದೇ ನೀರಿಗೆ ಧುಮುಕಿಸಿ ಪ್ರಾಣವನ್ನು ಕಸಿದು ಕೊಂಡು ಬಿಟ್ಟರಲ್ಲ ! ಛೆ .. ದಿಕ್ಕಾರ ವಿರಲಿ ! ಕೇಸು ಕಾನೂನು ಕಾಯ್ದೆ ಎಲ್ಲವೂ ಇದೆ ಎರಡು ದಿನ ತಪ್ಪಿತಸ್ತರು ಜೈಲ್ ಗೆ ಹೋಗಿ ಬರಬಹುದು ಆದರೆ ಆ ಅಮೂಲ್ಯವಾದ ಎರಡು ಜೀವಗಳು ಮರಳಿ ಬರಲು ಸಾದ್ಯವೇ ? ದೇವರ ಮೇಲೆ ಭಾರ ಹಾಕಿ ಅಪ್ಪ ಅಮ್ಮನ ನೆನೆದು ಕೊಂಡು ಹೆಲಿಪ್ಯಾಡ್ ಹತ್ತಿದ್ದ ಉದಯ ,ಅನಿಲ್ ರನ್ನು ಕೊನೆ ಪಕ್ಷ ಆ ಭಗವಂತನೂ ಕೂಡಾ ಕಾಪಾಡುವಲ್ಲಿ ವಿಫಲ ನಾದನೆ ? ವಿಧಿ ನೀನೆಷ್ಟು ಕ್ರೂರಿ ? ಇಷ್ಟೆಲ್ಲಾ ರಿಸ್ಕ್ ಅಂತ ಗೊತ್ತಿದ್ದರೂ , ಯಾಕೆ ಬೇಕಿತ್ತು ಆ ಭಂಡ ದೈರ್ಯ ? ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದರೇನು ? ದುಡಿದು ತಿನ್ನುವುದಕ್ಕೆ ಸಾಕಷ್ಟು ಹಾದಿಗಳಿವೆ .. ತಮ್ಮನ್ನೇ ನಂಬಿ ಕೊಂಡಿರುವ ಕುಟುಂಬಸ್ತರ ಮನಸ್ಥಿತಿ ಅರ್ಥೈಸಿ ಕೊಳ್ಳುವವರು ಯಾರು ? ತಮ್ಮ ಪ್ರಾಣ ಕಾಪಾಡುವುದಕ್ಕೆ ಇತ್ತ ಗುರುವೂ ಇಲ್ಲ ಅತ್ತ ಸಾಹಸ ನಿರ್ದೇಶಕರೂ ಇಲ್ಲ ಇವರನ್ನೆಲ್ಲಾ ನಂಬಿ ಅಪಾಯಕಾರಿ ಯಾಗಿ ಸ್ಟಂಟ್ ಪ್ರದರ್ಶಿಸುವ ದರ್ದು ಏನಿತ್ತು ?
ಹಾಗೆ ನೋಡಿದರೆ ನಿನಿಮಾ ಗಳಲ್ಲಿ ಸಾಹಸ ದ್ರಷ್ಯವನ್ನು ಮಾಡುವಾಗ ಅಪಘಾತ ,ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೆ ಅದಕ್ಕೂ ಮೊದಲು ಸುರಕ್ಷತೆ ದ್ರಷ್ಟಿ ಇದ್ದೆ ಇರುತ್ತದೆ . 1996 ಲಾಕಪ್ ಡೆತ್ ಸಿನಿಮಾದ ಚೇಸಿಂಗ್ ಚಿತ್ರೀಕರಣದ ವೇಳೆ ಬೈಕ್ ಹಾರಿಸುವಾಗ ಇಬ್ಬರು ಸಾಹಸ ಕಲಾವಿದರುಗಳು ಸಾವನ್ನು ಅಪ್ಪಿತ್ತದ್ದರು ಅದನ್ನೊಂದು ಬಿಟ್ಟರೆ ಇನ್ಯಾಂದೂ ಇಂತಹ ಘಟನೆಗಳು ನಡೆದಿರಲಿಲ್ಲ ಕೂದಲೆಳೆಯ ಅಂತರದಲ್ಲಿ ಸಾವನ್ನು ಗೆದ್ದ ಬಂದದ್ದೂ ನೋವನ್ನೂ ಉಂಡದ್ದೂ ಉದಾಹರಣೆಯಾಗಿ ಸಿಕ್ಕರೂ ನಿಯಮಿತವಾಗ ರಕ್ಷಣಾ ಸರಕು ತಂತ್ರಗಳಿಂದ ಇಂತಹ ಘಟನೆ ನಡೆದಿರಲಿಲ್ಲ. ನಿನ್ನೆಯ ಘಟನೆಯಲ್ಲಿ ಪೂರ್ಣ ಪ್ರಮಾಣದ ನಿರ್ಲಕ್ಷತನ ಎದ್ದು ಕಾಣುತ್ತಿದೆ . ರೋಪ್ ,ಲೈಫ್ ಜಾಕೆಟ್, ಟ್ಯೂಬ್ ,ಬೊಟ್ ಗಳಿದ್ದಿದ್ದರೆ ಖಂಡಿತವಾಗಿಯೂ ಈ ಎರಡು ಜೀವಗಳನ್ನು ಮುಂದಿನ ಸಿನಿಮಾಗಳಲ್ಲಿ ನಾವು ಜೀವಂತವಾಗಿ ಕಣ್ತುಂಬಿಸಿ ಕೊಳ್ಳ ಬಹುದಿತ್ತು .. ಚಿತ್ರ ರಂಗದಲ್ಲಿ ಇನ್ನೆಂದೂ ಈ ತರಹದ ಘಟನೆಗಳು ಮರುಕಳಿಸದೇ ಇರಲಿ ,ಕಲಾವಿದರುಗಳೇ ತಮ್ಮ ಜೀವ ತಮ್ಮ ಕೈ ಯಲ್ಲಿ ! ಯಾರ ಮಾತಿಗೂ ಬಗ್ಗದೇ ರಿಸ್ಕ್ ಗೆ ಮುನ್ನುಗದಿರಿ ! ನಿರ್ದೇಶಕರುಗಳಿಗೆ ಎಕ್ಷ್ಕ್ಲೋಸಿವ್ ಫಿಲಂ ಮಾತ್ರ ಮುಖ್ಯ , ಕಲಾವಿದರುಗಳಲ್ಲ !! ಅಗಲಿದ ಕಲಾವಿದರುಗಳ ಆತ್ಮಕ್ಕೆ ಶಾಂತಿ ದೊರಕಲಿ , ಇನ್ನೊಮ್ಮೆ ಹುಟ್ಟಿ ಬನ್ನಿ ಎಂದೆಷ್ಟೇ ಕೇಳಬೇಕು !

ಭಾನುವಾರ, ಅಕ್ಟೋಬರ್ 23, 2016

ಸವಾಲ್ ಗೆ ಜವಾಬ್ ಕೊಟ್ಟ ನ್ಯೂಸ್ ಚಾನೆಲ್ ಗಳು ! ಎಲ್ಲಿ ಯಶ್ ?ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!

ರಾಕಿಂಗ್ ಸ್ಟಾರ್ ಯಶ್ ಕನ್ನಡ ನಿನಿಮಾ ರಂಗದಲ್ಲಿ ಇತ್ತೀಚಿಗೆ (2007-08) ಕೇಳಿಬರುತ್ತಿರುವ ಹೆಸರು ಕಿರುತೆರೆ ಯಿಂದ ಹಿರಿ ತೆರೆಗೆ (ಬೆಳ್ಳಿ ತೆರೆಗೆ ) ನೇರವಾಗಿ ಬಡ್ತಿ ಪಡೆದು ಪಯಣವನ್ನು ಬೆಳಸಿದ ಯಶ್ ಮೊದಲ ಸಿನಿಮಾ 2007 ರಲ್ಲಿ ತೆರೆ ಕಂಡ “ಜಂಬದ ಹುಡುಗಿ”. ಮೊದಲ ಸಿನಿಮಾ ಆದರೂ ಅದು ಹೇಳ ಹೆಸರಿಲ್ಲದಂತೆ ನೆಲಕಚ್ಚಿತ್ತು ನಂತರ 2008 ರಲ್ಲಿ ತೆರಕಂಡ ಮೊಗ್ಗಿನ ಮನಸ್ಸು ಸಿನಿಮಾ ಗಾಂಧೀ ನಗರದಲ್ಲಿ ಕೊಂಚ ಸದ್ದು ಮಾಡಿದ್ದಲ್ಲದೇ ಹೆಸರು ಜೊತೆಗೆ ಉತ್ತಮ ಅಭಿನಯಕ್ಕೆ ಪ್ರಶಸ್ತಿಯನ್ನು ಅರಸಿಕೊಂಡು ಬಂದಿತ್ತು . ಇದರ ಮೂಲಕವೇ ಯಶಸ್ಸು ಕಂಡ ನಟ ಯಶ್ ತಂದ ನಂತರ ತಮ್ಮ ನಟನೆಯ ಬೆರಳಣಿಕೆಯ ಸಿನಿಮಾಗಳಲ್ಲಿ ಒಂದಷ್ಟು ಗಲ್ಲಪೆಟ್ಟಿಗೆಯಲ್ಲಿ ಹೆಸರ ಮಾಡಿದ್ದು ಸತ್ಯ. ಇಂತಿಪ್ಪ ಯಶ್ ಸಿನಿಮಾತ್ತೆರವಾಗಿಯೂ ಕಡಿಮೆ ಸಮಯದಲ್ಲೇ ಸಾಕಷ್ಟು ಕಾಂಟ್ವರ್ಸಿಯನ್ನು ಕ್ರೀಯೇಟ್ ಮಾಡಿದ ಮಹಾನುಭಾವನೂ ಹೌದು!.
ತಮ್ಮ ಸಮಕಾಲೀನ ನಟರುಗಳ ವಿರುದ್ದ ತನ್ನ ಅಸಮಾಧಾನದ ಹೊ(ಹ)ಗೆಯನ್ನು ಹೊರ ಹಾಕಿದ್ದ ಯಶ್ ನಂತರ ವಿವಿಧ ಹೋರಾಟಗಳಿಗೆ ತಾನೂ ಸೈ ಎಂದು ಎಲ್ಲಿ ಏನೇ ನಡೆದರೂ ಎಲ್ಲರಿಗಿಂತ ಒಂದು ಸ್ಟೆಪ್ ಮುಂದೆ ಹೋಗಿ ಪ್ರತಿಭಟನಾ ನಿರತನಾಗಿ ಅಣ್ತಮ್ಮ ಎನ್ನುತ್ತಾ ಜನ ಮಾನಸದಲ್ಲಿ ಮಾಸ್ತರ್ ಪೀಸ್ ಎಂದು ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವುವಂತ್ತದ್ದೆ! ಯಶಸ್ಸು ಸಿಕ್ಕ ಯಶ್ ಜೊತೆಗೆ ನಟಿ ರಾಧಿಕಾಳ ಪಂಡಿತ್ ಮೊದಲ ಸಿನಿಮಾ ಮೊಗ್ಗಿನ ಮನಸ್ಸು. ಈ ಜೋಡಿಗಳು ಕೆಲವು ಸಿನಿಮಾಗಳಲ್ಲಿ ಕಪಲ್ಸ್ ಗಳಾಗಿ ಗುರುತಿಸಿ ಜೋಡಿ ಹಕ್ಕಿಗಳು ಎಂದು ಜನಪ್ರಿಯತೆ ಗೊಂಡಿದ್ದವು . ಇತ್ತೀಚಿಗಷ್ಟೇ ಮಿಷ್ಟ್ರ್ ಅಂಡ್ ಮಿಸೆಸ್ ರಾಮಾಚಾರಿ ನಿಶ್ಚಿತಾರ್ಥ ವಾಗಿ ಪಬ್ಲಿಕ್ಸಿಟಿ ಪಡೆದು ಅದರಲ್ಲೂ ಕರ್ನಾಟಕ ಬಿಟ್ಟು ಗೋವಾಕ್ಕೆ ಹೋಗಿ ಉಂಗುರ ಬದಲಾಯಿಸುವ ಅವಶ್ಯಕತೆ ಏನಿತ್ತು ಎಂದು ಸ್ವತ: ಆತನ ಅಭಿಮಾನಿಗಳೂ ಕೂಡಾ ದಂಗೆಗೆ ಎದ್ದಿದ್ದು ಹಳೆ ವಿಷಯ ! ಕಾವೇರಿ ವಿವಾದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು,ಮಹಾದಾಯಿ ವಿಚಾರದಲ್ಲೂ ಕೂಡಾ ಉಪಸ್ತಿತಿ ತೋರ್ಪಡಿಸಿದ್ದು ಎಲ್ಲಾವನ್ನೂ ನೆನಪಿಸಬಹುದು. ಕಾವೇರಿ ವಿವಾದ ಉತ್ತುಂಗಕ್ಕೆ ಏರುತ್ತಿದ್ದ ಸಂದರ್ಭ ,ಸಿನಿಮಾ ಶೂಟಿಂಗ್ ಅಂತ ವಿದೇಶ ಪ್ರಯಾಣದಲ್ಲಿದ್ದಾಗಲೂ ತಾವೇ ಸ್ವತ :ವೀಡಿಯೊ ಮೂಲಕವೇ ಡೈಲಾಗ್ (ನಿನಿಮಾ ) ಡೆಲಿವೆರಿ ಮಾಡುತ್ತಾ ಇದ್ದ ಯಶ್ ಬಗ್ಗೆ ಕೆಲವೊಂದು ಊಹಾ ಪೋಹಾ ಹೊರ ಬೀಳುತ್ತಿತ್ತು .. ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವನ್ನು ಮಾಡಿ ಕೊಳ್ಳುವುದು ಅಂತಾರಲ್ಲ ಹಾಗೆ ! “ಈತ ಕೆಲವ ತಮ್ಮ ಸಿನಿಮಾದ ಕಾಂಟ್ವರ್ಸಿ ಗಾಗಿ ಹೀಗೆಲ್ಲಾ ಆಡುತ್ತಿದ್ದಾನೆ “ ಅಂತಾ ಪ್ರಜ್ಞಾವಂತರ ಆಡು ನುಡಿ ಹೊರಬಿಳಲಿಕ್ಕೆ ಪ್ರಾರಂಭವಾಯ್ತೋ ಆಗ ಕೆಲವು ಟಿವಿ ಚಾನೆಲ್ ಗಳು ಡೈರೆಕ್ಟ್ ಆಗಿ ಯಶ್ ನದ್ದು ಮೊಸಳೆ ಕಣ್ಣೀರು ಎಂಬಂತೆ ಅತೀರೇಕವಾಗಿ ರಂಜಿಸಿ ನ್ಯೂಸ್ ಮಾಡೇ ಬಿಟ್ಟವು.
ಅದರಲ್ಲೂ ಪಬ್ಲಿಕ್ ಟಿವಿ ಮುಂಚೂಣಿಯಲ್ಲಿತ್ತು ಇದರಿಂದ ಕುಪಿತ ಕೊಂಡ ಯಶ್ ನ ಬಿಸಿ ರಕ್ತ ಸೆಂಟಿ ಗ್ರೇಡ್ ದಾಟಿ ಹೋಗಿತ್ತು .. ಅದರಲ್ಲೂ ಕೆಲವೊಂದು ಗೂಗ್ಲಿ ವಿಷಯಗಳನ್ನು ತನ್ನ ಮೈ ಮೇಲೆ ವಿನಾ ಕಾರಣ ಹಾಕಿ ಕೊಳ್ಳುವುದರಲ್ಲಿ ನಿಸ್ಸಿಮನಾಗಿದ್ದ ಯಶ್ ಸಿಕ್ಕಿದ್ದೆ ಚಾನ್ಸ್ ಎನ್ನುತ್ತಾ ಎಲ್ಲೋ ಕುಳಿತು ರಾಜಾ ಹುಲಿಯಂತೆ ಘರ್ಜಿಸ ತೊಡಗಿದ ನಿನಿಮಾದ ಡೈಲಾಗ್ ತರಹ ನ್ಯೂಸ್ ಚಾನೆಲ್ ಗಳಿಗೆ ಬಹಿರಂಗ ಸವಾಲ್ ಹಾಕ್ತಾನೆ !.. “ರೈತರಿಗೆ ಸಂಬಂದದಪಟ್ಟ ಕಾರ್ಯಕ್ರಮ ಮಾಡಿ ಅವರುಗಳ ಕಷ್ಟ ಕಾರ್ಪಣ್ಯ ನೆಲ ಜಲದ ವಿಚಾರ ಪ್ರೈಮ್ ಟೈಮ್ ನಲ್ಲಿ ನಡೆಯಬೇಕು ಅವರುಗಳ ಪರವಾಗಿ ಜಾಹೀರಾತು ದಿನವೀಡಿ ಪ್ರಸಾರವಾಗ ಬೇಕು ಈ ಸವಾಲ್ ಗೆ ಸೈ ಅಂದ್ರೆ ನಾನು ಯಾವುದೇ ಸಮಯದಲ್ಲಿ ಯಾದರೂ ಯವೋದೇ ಚಾನಲ್ ನಲ್ಲಿಯಾದರೂ ಪಾಲ್ಗೊಳ್ಳಲು ಶತ ಸಿದ್ದ” ಎಂದು ಇದ್ದ ವಿಡಿಯೋ ಸಂದೇಶವನ್ನು ನ್ಯೂಸ್ ಚಾನೆಲ್ ಒಪ್ಪಿದವು ಅವರುಗಳಿಗೆ ಬೇಕಾದದ್ದು ಅದೇ ! ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು !.
ಸೇರಿಗೆ ಸಾವ್ವಾ ಸೇರು :ಬಿಡ್ತಾವೆಯೇ ಟಿವಿ ಚಾನೆಲ್ ಗಳು ! ಈತನ ಸವಾಲ್ ಗೆ ಜವಾಬ್ ಕೊಡಲಿಕ್ಕೆ ಟೊಂಕ ಕಟ್ಟಿ ನಿಂತ್ತಿದ್ದು ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ! ವೇದಿಕೆ ಸಿದ್ದವಾಯಿತು ಬಗೆ ಬಗೆ ಟಿವಿ ಪ್ರೊಮೊಗಳು ದಿನವೀಡೀ ಟಿವಿ ಪರದೆ ಮೇಲೆ ಅಲ್ಲದೇ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹರಿದಾಡಿದವು. ಯಶ್ ಕಾದಿತ್ತು ಮಾರಿ ಹಬ್ಬ :ಹಬ್ಬ ತಪ್ಪಿದ್ದರೂ ಹೋಳಿಗೆ ತಪ್ಪಲ್ಲ !! ಹೋಗಿ ಹೋಗಿ ನ್ಯೂಸ್ ಚಾನೆಲ್ ಗಳ ವಿರುದ್ದ ತೊಡೆ ತಟ್ಟುವುದೇ ? ನಿನಿಮಾ ರೀಲ್ , ನ್ಯೂಸ್ ರಿಯಲ್ !ಅರ್ಥೈಸಿ ಕೊಳ್ಳದೇ ಸುಮ್ನೆ ಒಂದೆಡೆ ತಮ್ಮ ಕೆಲಸ ಕಂಡು ಕಣ್ಣು ಕೂರೂದು ಬಿಟ್ಟೂ ಅಧಿಕ ಪ್ರಸಂಗ ಮಾಡಲು ಹೋದ ಯಶ್ ಕೊಲು ಕೊಟ್ಟು ಪೆಟ್ಟು ತಿಂದ ಅವಸ್ತೆಗೆ ಜಾರಿ ಬಿಟ್ಟಿದ್ದ . ಪ್ರೊಗ್ರಾಮ್ ಶುರು ಆದರೂ ಸ್ಟುಡಿಯೋದೊಳಗೆ ಯಶ್ ನಾಪತ್ತೆ ! ಟಿವಿಯವರ ಫೋನ್ ಕಾಲ್ ಗೆ ಇನ್ನೊಂದು ರೀತಿಯ ಡೈಲಾಗ್ ಗಳ ಸುರಿಮಳೆ ! ಬೇಕಿತ್ತಾ ಇದೆಲ್ಲಾ ,? ಏನೇ ಇರಲಿ ಮುಂದೇನು ಕಾದು ನೋಡೋಣ ! ಎಂಜಾಯ್ ಮಾಡೋಣ !ಒಟ್ಟಾರೆ ಸೆಲೆಬ್ರಿಟಿ ಗಳು ಹೇಗೆ ಮಾಡಿದ್ದರೂ ಚೆಂದ ಅಲ್ವೇ ಅದನ್ನೆಲ್ಲಾ ವಿಮರ್ಶೆ ಮಾಡುವ ನಾವುಗಳು ಮಾತ್ರ ಇಂಗು ತಿಂದ ಮಂಗಗಳು ಅಷ್ಟೇ ! ಏನಂತೀರಿ ? ನನ್ನ ಓಡಲಧ್ವನಿಯ ಇದು -ಕೊನೆಯದಾಗಿ ಕಟ್ಟ ಕಡೆಯಲ್ಲಿ ಮೂಡುವುದು ಒಂದೇ ಪ್ರಶ್ನೆ “ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!”

ಶನಿವಾರ, ಅಕ್ಟೋಬರ್ 8, 2016

ತನ್ನ ತಲೆಯ ಮೇಲೆಯೇ ಚಪ್ಪಡಿ ಕಲ್ಲು ಹಾಕಿ ಕೊಂಡ್ರಾ ಪ್ರಕಾಶ್ ರೈ !

ಬಹು ಬಾಷಾ ಕಲಾವಿದ ಪ್ರಕಾಶ್ ರೈಯ “ಇದು ಒಳ್ಳೆ ರಾಮಾಯಣ” ನಿನಿಮಾದ ಪ್ರೊಮೋಷನ್ ನ ವಿಶೇಷ ರೆಕಾರ್ಡಿಂಗ್ ಕಾರ್ಯಕ್ರಮದ ಸಲುವಾಗಿ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಜನಶ್ರಿ ಸುದ್ದಿ ವಾಹಿನಿ ತಂಡದವರು ಅವರ ನಿವಾಸಕ್ಕೆ ತೆರಳಿದ್ದರು .ಕಾರ್ಯಕ್ರಮದ ಬಗೆಗಿನ ಪ್ರಶ್ನೆಗಳನ್ನೆಲ್ಲಾ ಕೇಳಿ ,ಇನ್ನೇನು ಕಾರ್ಯಕ್ರಮ ಮುಗಿಯುವ ಹಂತ ಬರುತ್ತಿದಂತೆ,ನಿರೂಪಕಿ ಕಾವೇರಿ ವಿವಾದಕ್ಕೆ ಸಂಬಂದಪಟ್ಟ ಒಂದು ಪ್ರಶ್ನೆಯನ್ನು ಕೇಳುತ್ತಾರೆ .ಪ್ರಶ್ನೆಯನ್ನು ಕೂಲ್ ಆಗಿ ನಿರೂಪಕಿ ಕೇಳುತ್ತಿದಂತೆ ಮೈ ಮೇಲೆ ಬೂತ ಬಂದವರ ರೀತಿಯಲ್ಲಿ ನಡತೆಯನ್ನು ಪ್ರದರ್ಶಿಸುತ್ತಾ ಪ್ರಕಾಶ್ ರೈ ,ಸಿನಿಮಾ ವಿಚಾರಕ್ಕೆ ಸಂಬoದಿಸಿದ ಈ ಕಾರ್ಯಕ್ರಮದಲ್ಲಿ ರಾಜಕೀಯದ ಪ್ರಶ್ನೆಯನ್ನು ಕೇಳ್ವುದು ತರವಲ್ಲ. ನಾನೇನು ತಪ್ಪು ಮಾಡಿದ್ದೆ .ಅದೂ ಇದೂ ಎಂದು ಇಲ್ಲ ಸಲ್ಲದ ವಿಚಾರವನ್ನು ಹಿಡಿದು ಅನಗತ್ಯವಾಗಿ ಎಗರಾಡಿ ಶರ್ಟ್ ಗೆ ಅಳವಡಿಸಿದ್ದ ಮೈಕ್ ತೆಗೆದು ಇನ್ನೂ ಯಾವೊತ್ತೂ ಬರಬೇಡಿ ಎಂದು ಷೋ ನಿಂದ ಹೊರೆಗೆ ನಡೆದೇ ಬಿಟ್ಟರು!!! https://www.youtube.com/watch?v=_FbRSsXwfjU ಆ ಪ್ರಶ್ನೆ ಇಲ್ಲಿ ಕೇಳಿದ್ದು ಸ್ವಲ್ಪ ಮಟ್ಟಿಗೆ ಸರಿಯಲ್ಲದೇ ಇದ್ದರೂ, ಪ್ರಸ್ತುತ ವಿಧ್ಯಮಾನಕ್ಕೆ ಅನುಗುಣವಾಗಿ ಕೇಳಿದ್ದರಲ್ಲಿ ತಪ್ಪಿಲ್ಲ . ಕಾವೇರಿಯ ವಿಚಾರದಲ್ಲಿ ಕನ್ನಡದ ಕೆಲವು ಸಿನಿಮಾ ಕಲಾವಿದರು ಹಾಗೂ ತಮಿಳು ಚಿತ್ರರಂಗದ ತಾರೆಯರೂ, ಸಹಾ ಕಾವೇರಿ ಕಳಾಕಳಿ ಯಲ್ಲಿ ಒಂದಿಷ್ಟು ಪರ ವಿರೋಧದ ಅಲೆಯಲ್ಲಿ ಪ್ರತಿಭಟನೆಗೆ ಇಳಿದದ್ದು ಎಲ್ಲರಿಗೂ ಗೊತ್ತೇ ಇರದ ವಿಚಾರವೆನಲ್ಲಾ .ತಾರೆಯರ ಬೆಂಬಲದಲ್ಲಿ ಪ್ರಕಾಶ್ ರೈ ಎರಡೂ ಚಿತ್ರರಂಗದ ಕಡೆಯಿಂದ ತಮ್ಮನ್ನು ತೋರ್ಪಡಿಸಿಕೊಳ್ಳ ದೇ ಇರುವುದು ಸಾಮಾನ್ಯ ವಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತೆ . ಬಹುಬಷಾ ನಟನಾಗಿ ,ಅದರಲ್ಲೂ ಕನ್ನಡಿಗನಾಗಿ ,ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ,ನಿರ್ದೇಶಿಸಿ, ನಿರ್ಮಾಪಿಸಿ , ಪ್ರಸಿದ್ದಿ ಪಡೆದವರು ಹಾಗಂತ ತಮಿಳು ನಾಡಿನಲ್ಲೂ ಚಿರಪರಿಚತ ವ್ಯಕ್ತಿಯೇ. ತಮಿಳು ಚಿತ್ರರಂಗದಲ್ಲೂ ಸಹಾ ಅಷ್ಟೇ ಜನಪ್ರಿಯತೆಯನ್ನು ಪಡೆದಿದ್ದವರು.ಉಭಯ ಚಿತ್ರರಂಗದ ತಾರೆಯರು ಕಾವೇರಿ ವಿವಾದದಲ್ಲಿ ತಮ್ಮನ್ನು ತಾವು ತೊಡಗಿ ಕೊಂಡಿರುವುದರ ಮಧ್ಯೆ ಪ್ರಕಾಶ್ ರೈ ಯಾವುದಕ್ಕೂ, ಸಾಥ್ ನೀಡದೇ ಸೈಲೆಂಟ್ ಮೂಡಿಗೆ ತೆರಳಿರುವುದರ ಮರ್ಮದ ಬಗ್ಗೆ ಈ ಪ್ರಶ್ನೆಯನ್ನು ಕೇಳಿದ್ದರಲ್ಲಿ ಖಂಡಿತವಾಗಿಯೂ ತಪ್ಪಿರಲಿಲ್ಲ .ಒಂದೊಮ್ಮೆ ತಪ್ಪು ಇತ್ತು ಏಣಿಸಿದರೆ, ಪ್ರಕಾಶ್ ರೈ ಪ್ರಶ್ನೆಗೆ ಸಮಾಧಾನ ದಿಂದ ಸವಾಕಾಶ ವಾಗಿ ಉತ್ತರಿಸ ಬಹುದ್ದಿತ್ತು ಅದಿಲ್ಲವೆಂದಾರೆ ಈ ಪ್ರಶ್ನೆಯನ್ನು ಕೇಳಬೇಡಿ ಎಂದು ವಿನಂತಿಸಿ ಕೊಂಡು, ಕಾರ್ಯಕ್ರಮ ಪೂರ್ಣಗೊಳಿಸುವಲ್ಲಿ ನೆರವಾಗಬೇಕಿತ್ತು . ಆದರೆ ಪ್ರಕಾಶ್ ರೈ ಮಾಡಿದ್ದು ಘೋರ ಅಪರಾಧ. ಮಗುಚಿ ಬಿದ್ದರೂ ಮುಗು ಮಣ್ಣಾಗಲಿಲ್ಲ ಎನ್ನುವಂತೆ ವಾಹಿನಿಯ ವಿರುದ್ದವೇ ಕಿಡಿಕಾರಿದ್ದು ತಮ್ಮ ಅಭಿಮಾನಿಗಳು ಮೆಚ್ಚುವಂತದ್ದಲ್ಲ .. ಅದೇ ಆ ಪ್ರಶ್ನೆಗೆ ಸoಯಮ ,ಸಮಚಿತ್ತದಿಂದ ಉತ್ತರಿದ್ದರೆ ನೀವು ಇಂದು ನಿಜ ಜೀವನದಲ್ಲಿ ಹೀರೋ ಆಗ್ತಾ ಇದ್ದಿದ್ದರಿ. ಅಭಿಮಾನ ಇನ್ನಷ್ಟು ಉಕ್ಕಿ ಹರಿಯುತ್ತಿತ್ತು .ಸಭ್ಯ ನಾಗರಿಕರಂತೆ ವರ್ತಿಸುವ ನಿಮ್ಮ ನಡಾವಳಿಗಳನ್ನ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಾವು ಗಮನಿಸಿದ್ದೇವೆ . ಆದರೆ ಇಲ್ಲಿ ಮಾತ್ರ ನಿಜ ವಿಚಾರದಲ್ಲಿ ಅಸಭ್ಯತೆ ಮಿತಿ ಮೀರಿತ್ತು. ತಮ್ಮ ಸಿನಿಮಗಳಲ್ಲೇ ಗಮನಿಸಿದಂತೆ ನೀವು ಹೆಚ್ಚಾಗಿ ಜನಪ್ರಿಯತೆ ಗೊoಡದ್ದು ಗೂಂಡಾ !,ವಿಲನ್ ಪಾತ್ರದಲ್ಲಿ ಅಲ್ವೇ ? ಅದನ್ನೇ ಇಲ್ಲಿ ಸಾಬೀತು ಪಡಿಸಿದ್ದಿರಿ. ಒಂದು ಜವಬ್ದಾರಿಯುತ ಸುದ್ದಿ ವಾಹಿನಿ ತಮ್ಮ ಪರವಾಗಿಯೇ ತಮ್ಮ ಚಿತ್ರದ ವಿಚಾರ ಜಗಜಹೀರಾತು ಮಾಡುವಲ್ಲಿ ತಮ್ಮ ಮನೆ ಬಾಗಿಲು ತನಕ ಬಂದವರನ್ನು ಈ ರೀತಿ ಉದ್ದಟತನವನ್ನು ತೋರಿ , ಅವರಿಗೆ ಅವಮಾನ ಮಾಡಿದ ತಾವು ,ಈ ಮಟ್ಟಕ್ಕೆ ಬೆಳೆಯಲು ತಮ್ಮ ಚಿತ್ರದ ಬಗ್ಗೆ ಗಲ್ಲಿ -ಗಲ್ಲಿ ಗಳಲ್ಲಿ ತಲುಪಿಸಿ, ತಮ್ಮ ಹೆಸರು ಬಾನೆತ್ತರಕ್ಕೆ ಬೆಳೆಸಲು ಈ ಮೀಡಿಯಾಗಳೇ ಪ್ರಮುಖ ಕಾರಣ ಎಂದು ಮರೆಯಬೇಡಿ . ಈ ಅಸಭ್ಯೇತೆ ಯಿಂದ ನಿಜಕ್ಕೂ ತಾವು ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದೂ ಬಿಡಿ , ಇನ್ನು ಮುಂದೆ ತಮ್ಮ ಸಂದರ್ಶನಕ್ಕೆ ಬೇರೆ ಮೀಡಿಯಾಗಳು ಹಿಂದೆ ಮುಂದೆ ನೋಡುವ ಅಥವಾ ಬರಲೇ ಬಾರದೆಂಬ ತೀರ್ಮಾಕ್ಕೆ ಬಂದರೂ ಅಚ್ಚರಿಯಿಲ್ಲ !! ತನ್ನ ಕೈಯಾರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿ ಕೊಂಡಿದ್ದ್ರಿ .. !! ತಾವೇನೋ ಈ ಮಟ್ಟಕ್ಕೆ ಬೆಳೆದಾಯ್ತು ಇನ್ಯಾಕೆ ಮೀಡಿಯಾ ಎಂದು ಆಲೋಚನೆ ಯನ್ನು ಬಿಡಿ . ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬ ಭ್ರಮೆ ದೂರವಾಗಲಿ ಪುನಾ: ದಡ ಸೇರುವುದಕ್ಕೆ ಅಂಬಿಗ ಬೇಕೇ ಬೇಕು !! https://www.youtube.com/watch?v=Ml0xPNgS938 ಇನ್ನು ಈ ವಿಚಾರ ಜನಶ್ರೀ ಟಿವಿಯ ಪ್ರಧಾನ ಸಂಪಾದಕರಾದ ಅನಂತ ಜೀನಿವಾರ್ ,ರೈ ನಡವಳಿಕೆ ಬಗ್ಗೆ ಮರುದಿನ ಬಹಿರಂಗ ಪಡಿಸಿದ್ದೆ ತಡಾ ,ಕೆಲವು ಅವರ ಅಭಿಮಾನಿಗಳು ರೈ ಮಾಡಿದ್ದೇ ಸರಿ ಎಂದು ವಿವಿಧ ಟ್ರೋಲ್ಲೆರ್ ಗಳ ಮೂಲಕ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವಾಹಿನಿಯ ವಿರುದ್ದ ,ನಿರೂಪಕಿ, ಸಂಪಾದಕರ ವಿರುದ್ದ ಜರಿದಿದ್ದೆ ಜರಿದಿದ್ದು ! ಇವರಿಗೇನು ಗೊತ್ತು ಕೇವಲ ಸಿನಿಮಾದ ನಾಟಕೀಯತೆಗೆ ಮಾತ್ರ ಮನ ಸೋತವರು ಇವರುಗಳು . ಒಂದಿಷ್ಟು ಪ್ರಜ್ನತೆಯನ್ನು ಇಟ್ಟು ಕೊಂಡಿದ್ದರೆ ಅರ್ಥವಾಗುತ್ತಿತ್ತು. ರೀಲ್ ಆಚೆಗೆ ಬಂದು ರಿಯಲ್ ಆಗಿ ಏನು ಮಾಡಿದ್ದಾರೆ ಮಹಾನ್ ರೈ ಅವರು? ಇವರುಗಳಿಗೆ ಸಿನಿಮಾ ಹಿಟ್ ಆಗಬೇಕೆಂದರೆ ಟಿವಿ ಚಾನೆಲ್ ಗಳು ಬೇಕು.. ಸಿನಿಮಾ ಹಂಡ್ರೆದ್ ದಿನ ಒಡ್ಬೇಕೆಂದರೆ ಮೂಕ ಪ್ರೇಕ್ಷಕ ಜನತೆ ಬೇಕು . ಈ ಜನತೆಯ ಉದ್ದಾರಕ್ಕೆ ಏನು ಮಾಡಿದ್ದಾರೆ ತಾರೆ ಯರು ?? ಅದೇ ಜನತೆಗೆ ಮೂಲ ಭೂತ ಸೌಕರ್ಯ ಗಳಲ್ಲಿ ಒಂದಾದ ನೀರು ಕೊಡಲಿಕ್ಕೂ ಲಾಯಕ್ಕಲ್ಲದ ನಾಲಾಯಕ್ ಗಳು ನಮಗೆ ಬೇಕಾ? ಇವರ ಮನೆಯಿಂದ ಏನೂ ನಮಗೆ ನೀರು ಕೊಡೋದು ಬೇಡ ಅಟ್ ಲಿಸ್ಟ್ ಹೋರಾಟದಲ್ಲಿ ಬಾಗವಹಿಸಿದ ತಾರೆಯರ ಜೊತೆ ಏನೋ ಹರಕೆ –ಬಲಿ ಎಂದು ಭಾವಿಸಿ ,ಮೊಸಳೆ ಕಣ್ಣೀರು ಹಾಕಿ ಕೈ ತೊಳೆದು ಕೊಳ್ಳುವಲ್ಲಿ ಆಗುವ ಅಡ್ಡಿಯಾದರೂ ಏನು .. ? ಮೊನ್ನೆ ಮೊನ್ನೆ ನಮ್ಮ ಕನ್ನಡತಿ ನಾಯಕಿ ರಮ್ಯಾ ವಿಚಾರವನ್ನೇ ನೋಡಿ ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿಯೇ ಬಿಟ್ಟಳು ದೇಶ ದ್ರೋಹಿಗಳು ಇವರಿಗೆಲ್ಲಾ ನಮ್ಮ ದೇಶ ಬೇಕಾ ?ರಾಜಕೀಯ ಗೋಸ್ಕರ ತಮ್ಮ ಶೀಲವನ್ನು ಕೊಡಲಿ ಆದರೆ ತಮ್ಮ ದೇಶವನ್ನಲ್ಲ ! ಪಾಕಿಸ್ತಾನ ನರಕ ಅಲ್ಲ ಎಂದು ಉಸುರಿದ್ದ ರಮ್ಯ ಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ ಪಬ್ಲಿಕ್ ಟೀವಿಯ ಪ್ರತಿನಿಧಿ ಕೇಳಿದ್ದಕ್ಕೆ ಪಾಕಿಸ್ತಾನ ವಲ್ಲ ನಮ್ಮ ಮಂಗಳೂರು ನರಕ ಎಂದು ಎಷ್ಟೊಂದು ಲೀಲಾ ಜಾಲವಾಗಿ ಹೇಳಿಲ್ವಾ ? ಇಂಥಹ ನೀಚ ಮನಸ್ಥಿತಿಯನ್ನು ಅರಸಿ ಅರಹುವುದಕ್ಕೆ ಮಾಧ್ಯಮ ಬೇಕು !! ಮೊಟ್ಟೆ ಅಬಿಷೇಕ ಮಾಡಿಸ್ಲಿಕ್ಕೆ ಮಾಧ್ಯಮ ಬೇಕು . ಅದೇ ಈ ಪ್ರಕಾಶ್ ರೈ ವಿಚಾರದಲ್ಲೂ ಅಷ್ಟೇ ಅವರ ಮನದಿಂಗಿತವನ್ನು ಹೊರಹಾಕು ವಲ್ಲಿ ಪ್ರಯತ್ನಿಸಿದ ಜನಶ್ರೀ ವಾಹಿನಿದು ತಪ್ಪಿತ್ತೆ ? ಕೇವಲ ಪ್ರಕಾಶ್ ರೈ ಪರವಾಗಿ ಮಾತಾಡುವ ಅಭಿಮಾನಿಗಳೇ ಯೋಚಿಸಿ ತಮ್ಮ ಬುದ್ದಿಯನ್ನು ಖರ್ಚು ಮಾಡಿ .ಅಭಿಮಾನ ಅತಿಯಾಗದಿರಲಿ .ಅದನ್ನು ಬದಿಗಿಡಿ ಪ್ರಜ್ಞಾವಂತ ಸಮಾಜದಲ್ಲಿ ಗ್ರಹಿಕೆ ಸಾಮರ್ಥ್ಯ ಇರುವ ಪ್ರತಿಯೊಬ್ಬರೂ ಕೂಡಾ ಸತ್ಯಕ್ಕೆ ಬೆಂಬಲ ಕೊಡುತ್ತಾರೆ .

ಶನಿವಾರ, ಜುಲೈ 30, 2016

ಸಾವಿನಲ್ಲೂ ವಿಕ್ರತ ಆನಂದ ಪಡುವ ಮನಸ್ಸು ಯಾಕ್ರೀ ?!

ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ನಿನ್ನೆ ಮಧ್ಯಾಹ್ನ ವಿಧಿವಶರಾಗಿದ್ದರು ಅನೇಕ ಮಂದಿ ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಅದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ರಾಕೇಶ್ ಅವರ ಸಾವಿನಲ್ಲಿ ವಿಕೃತವಾದ ಆನಂದವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೆಲವು ವಿಕೃತ ಜನತೆ ಜನರ ಶಾಪದಿಂದ ಹೀಗಾಗಿದೆ. ಕೊನೆಗೂ ಸಿದ್ದರಾಮಯ್ಯ ಅವರ ಪುತ್ರ ನಿಧನ ಎನ್ನುವ ಸಂದೇಶವನ್ನು ಒಳಗೊಂಡಿರುವ ವಿಧ -ವಿಧ ವಾದ ಚಿತ್ರ ಸಂದೇಶವನ್ನು ಕ್ರೆಯೆಟ್ ನಾಡಿ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹಂಚಿಕೊಂಡು ಸಾವಿನ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ನಮ್ಮ ಶತ್ರವಾದರು ಆತನ ಅಥವಾ ಆತನ ಸಂಬಂಧಿಗಳ ಸಾವಿಗೆ ಯಾರಾದರು ಸಂತಾಪ ಪಡಬೇಕು .. ಕನ್ನಡದಲ್ಲಿ ದಿನಪ್ರತಿ ಪ್ರಯೋಗ ವಾಗುವ ಗಾದೆ ಮಾತೇ ಇದೆ ಸಾವು ನೋವು ಗಳನ್ನೂ ಒಳಗೊಂಡ ಘಟನೆ ನಡೆದಾದ ಸಂಬಂದ ಪಟ್ಟವರು ಯಷ್ಟೇ ಶತ್ರು ಗಳಾದರೂ..ಸಾಮನ್ಯವಾಗಿಯೇ ಇನ್ನೊಬ್ಬರ ಜೊತೆ ಹಂಚಿ ಕೊಳ್ಳುತ್ತಾರೆ .
*’’ನಮ್ಮ ಶತ್ರುಗಳಿಗೂ ಇಂಥ ಪರಿಸ್ತಿತಿ ಬರಬಾರದು* ‘’ಎಂದು . ಆದ್ರೆ ನಿನ್ನೆಯ ವಿಚಾರ ಮಾತ್ರ ಬೇಸರವನ್ನು ಉಂಟು ಮಾಡುತ್ತವೆ ..*ಉರಿಯುತ್ತಿರುವ ಬೆಂಕಿಗೆ ತುಪ್ಪ* ಹಾಕಿದ ಹಾಗೆ ಸಾವಿನ ಕುರಿತು ನೂರಾರು ಕಥೆಕಟ್ಟತ್ತಿದ್ದಾರೆ . ಹಾಸ್ಯ ಮಾಡಲಾಗುತ್ತಿದೆ . ಸಾವಿನ ಕುರಿತು ಲೇವಡಿ ಮಾಡುವ ದುಷ್ಟ ಮನಸ್ಸುಗಳು ಕಂಡುಬರುತ್ತಿದೆ ಇದು ನಿಜಕ್ಕೂ ಖಂಡನೀಯ .ಸಿದ್ದರಾಮಯ್ಯನ ಕೆಲವು ವಿರೋಧಿ ನೀತಿ... ದಬ್ಬಾಳಿಕೆಯ ಆಡಳಿತ ನಾವು ವಿರೋಧಿಸುತ್ತೇವೆ, ವಿರೋಧಿಸಬೇಕು ಹೊರತು...ಅಮಾಯಕ ಅವರ ಪುತ್ರನ ಸಾವಿಗೆ ಸಂತೋಷ ಪಡುವ ಕೀಳು ಮನೋಭಾವನೆ ನಮಗೆ ಶೋಭೆ ತರುವ೦ತದ್ದಲ್ಲ .ಸಾವಿಲ್ಲದ ಮನೆ ಎಲ್ಲಿಯಾದರೂ ಇದಿಯೇ.?ಒಬ್ಬರು ಮನೆಯಲ್ಲಿ ಸತ್ತರೇ ಮಾತ್ರ ಅದರ ನೋವು ಗೊತ್ತಾಗಬೇಕಾ?.ಯಾರೇ ಸತ್ತರು ಸಾಂತ್ವನ ಹೇಳೋದು ಮನುಷ್ಯನಾದವನಿಗೆ ಜನ್ಮದತ್ತವಾಗಿರುತ್ತದೆ .
ಗಾಂಧೀ ಸತ್ತಾಗ ಈಡೀ ಜಗತ್ತೇ ಕಣ್ಣೀರು ಹಾಕಲಿಲ್ಲವಾ ?ಡಿ.ಕೆ.ರವಿ ಸತ್ತಾಗ ತನ್ನ ಮನೆ ಮಗ ಸತ್ತಂತೆ ಈಡೀ ಕರ್ನಾಟಕ ಭಾವಿಸಲಿಲ್ಲವೇ ..ದೇವರಿಗೆ ಎಲ್ಲರೂ ಒಂದೇ .ಕಣ್ಣೀರಿಗಗೂ ಬೆಲೆ ಇದೆ. *ಕಾಗೆ ಕುಳಿತುಕೊಳ್ಳವುದಕ್ಕ್ಕೂ ಟೊಂಗೆ ಮುರಿಯೋದಕ್ಕೂ ಸರಿ ಹೋಯ್ತು*ಎಂಬ ಲೋಕನುಡಿಯಂತೆ ಅದಕ್ಕೂ-ಇದಕ್ಕೂ ತಳಕು ಹಾಕಿ ವಿಲಕ್ಷಣ ಚರ್ಚೆ ಮಾಡುವುದು ಸರಿಯಲ್ಲ .ಮರೆಯಾಗದಿರಲಿ ಮಾನವೀಯತೆ ರಾಕೇಶ್ ಸಿದ್ದರಾಮಯ್ಯನವರ ನಿಧನ ನಿಜಕ್ಕೂ ದುರದೃಷ್ಟಕರ .ಅಗಲಿದ ರಾಕೇಶ್ ಸಿದ್ದರಾಮಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ. ಸಿದ್ದರಾಮಯ್ಯನವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ.. ಕೊನೆಯದಾಗಿ ಒಂದೇ ಒಂದು ಮಾತು *ಅನಿಷ್ಟಕ್ಕೆಲ್ಲಾ ಶನೀಶ್ವರ ನೇ ಕಾರಣನಲ್ಲ* !

ಶನಿವಾರ, ಜುಲೈ 9, 2016

ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ ! ಮತ್ತೆಷ್ಟೋ ?

ನಿಜಕ್ಕೂ ಕರುಳು ಹಿಂಡುವಂತ ಪ್ರಸಂಗ ! ಹೌದು ಏನಾಗುತ್ತಿದೆ ರಾಜ್ಯದಲ್ಲಿ ? ರಕ್ಷಕರಿಗೆ ರಕ್ಷಣೆ ಇಲ್ಲದಿದ್ದರೆ ? ಅವರುಗಳಿಗೆ ಸೂಕ್ತವಾದ ಕಾನೂನುಗಳಿಲ್ಲವೇ ?ದಕ್ಷ -ನಿಷ್ಟಾವಂತ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡುವುದು ತಪ್ಪಾ ?.. ಕಿಚಕರ ಸಾಮ್ರಾಜ್ಯದಲ್ಲಿ ಅರ್ಜುನನ೦ತವರಿಗೆ ಬೆಲೆ -ನೆಲೆ ಮರೀಚಿಕೆಯೇ ? ಸಾರಥಿ ಕ್ರಷ್ಣ ನೀ ಬೇಗನೇ ಬಾರೋ ಅನ್ನದೇ ವಿಧಿ ಇಲ್ಲ .. ಕೇವಲ ಎರಡೇ ಎರಡು ದಿನದಲ್ಲಿ ಇನ್ನೊಬ್ಬ ಪೋಲಿಸ್ ಅಧಿಕಾರಿ ಆತ್ಮಹತ್ಯಗೆ ಶರಣಾಗಿದ್ದಾರೆ . ಹಿರಿಯ ಅಧಿಕಾರಿ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಯೊಂದಿಗೆ ಮತ್ತೊಮ್ಮೆ ರಾಜ್ಯದ ದುಷ್ಟ ಆಡಳಿತದ ಮುಖವಾಡ ಬಯಲುಗೊಂಡಿದೆ .
ಪೊಲೀಸ್ ಅಧಿಕಾರಿಗಳಿಗೆ ಟಾರ್ಚರ್ ಕೊಡಲಾಗುತ್ತದೆ ಎನ್ನುವುದು ಈಗ ಹೊರ ಬಂದಿರುವ ಮಾಹಿತಿ ಅಲ್ಲ. ಈ ಹಿಂದೆ ಕೂಡ ಹಲವರುಘಟನೆಗಳು ಘಟಿಸಿತ್ತು. ಕೆಲವರು ಸಾವನ್ನಪ್ಪಿದ್ದರೇ. ಕೆಲವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೆಲವರ ಸಾವಿಗೆ ನಿರ್ಧಿಷ್ಟವಾದ ಕಾರಣ ಸಿಕ್ಕಿಲ್ಲ ..ಕಾರಣ ಹಿರಿಯ ಅಧಿಕಾರಿಗಳಿಗೆ ಟಾರ್ಚರ್ ಎಂಬ ಹಣೆ ಪಟ್ಟಿ ಇದ್ದಾರೂ ,ಹಲವರು ಬಹಿರಂಗ ಪಡಿಸದೇ ಇಹ ಲೋಕ ತ್ಯಜಿಸಿದ್ದರೆ , ಇನ್ನೂ ಹೆಚ್ಚಿನವರು ಎಲ್ಲವನ್ನೂ ನುಂಗಿ ಕೊಂಡು ಅನಿವಾರ್ಯವಾಗಿ ಮನೆ ಮಜ್ಜಿಗೆ ಮರದ ಅಡಿ ಕುಡಿಯ ಬಾರದೆಂದು ಜೀವನ ಸಾಗಿಸುತ್ತಿದ್ದಾರೆ .ಏನೇ ಇರಲಿ ಎಲ್ಲವೂ ಅವನ ಆಟ ..ನಿನ್ನೆಯ ಘಟನೆ ಬಗ್ಗೆ ಯೋಚಿಸಿದರೆ ತುಂಬಾನೇ ಬೇಸರವಾಗುತ್ತದೆ.ನಿನ್ನೆ ಆತ್ಮಹತ್ಯೆ ಶರಣಾಗುವ ಮುನ್ನ ಗಣಪತಿ ಸತ್ಯವನ್ನು ಹೊರಗೆಡವ ಬೇಕೆಂಬ ನಿಟ್ಟಿನಲ್ಲಿ ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಎಲ್ಲವನ್ನೂ ಎಳೆ- ಎಳೆಯಾಗಿ ವಿವರಿಸಿದ್ದರು .. ನನ್ನ ಸಾವಿಗೆ ಇಂತವರೇ ಕಾರಣ ಎಂದು ಕಡ್ಡಿ ತುಂಡು ಮಾಡಿದಂತೆ ಸತ್ಯವನ್ನೇ ಬೊಟ್ಟು ಮಾಡಿ ಮುಂಗಡವಾಗಿ ಕಕ್ಕಿದ್ದರು .. ಆದರೆ ಇಲ್ಲಿ ಆಗಿದ್ದು ಏನು ? ಎಲ್ಲಕ್ಕೂ ಸಾಕ್ಷಿ ಬೇಕೆಂಬ ನ್ಯಾಯಾಲಯದ ಬಯಕೆಗೆ ಒಂದು ಪಟ್ಟು ಹೆಚ್ಚೇ ಎಂಬಂತೆ ಸಾಕ್ಷಿ ಪುರಾವೆಗಳು ಚಿತ್ರಿಕರಿಲ್ಪಟ್ಟ ವಿಡಿಯೋದಲ್ಲಿ ಇದ್ದವು ..ಆದರೆ ಹೇಸಗೆ ಲಜ್ಜೆ ಗೆಡಿತನದ ದುಷ್ಟ -ಭಂಡ ರಾಜಕೀಯ ವ್ಯವಸ್ತೆಯಲ್ಲಿ ..ಅಪರಾಧಿಗಳಿಗೆ ಇದುವರೆಗೂ ಯಾವುದೇ ಕ್ರಮ ಕೈ ಕೊಳ್ಳದಿರುವುದು ವಿಪರ್ಯಾಸವೇ ಸರಿ !. ಏನ್ರೀ ಇದು ? ಬೇಲಿ ಕಾಯುವವರು ಬಿಡಿ, ಓಟು ಹಾಕಿ ಗೆಲ್ಲೀಸಿದ ನಮಗೆ ಕೂಡಾ ಒಂದು ಕಿಂಚಿತ್ ಹೋರಾಟದ ಮನೋ ಭಾವನೆ ಉಂಟಾಗದಿರುವುದು ಶೋಜಿಗ . ಕೇವಲ ಒಂದಷ್ಟು ಜನ ಬಾಯಿ ತೆರೆದದ್ದು ಸಮಾಧಾನಕರ ತಂದರೂ ವಿಪಕ್ಷಳು ಅವುಗಳ ಕುರ್ಚಿ ಭದ್ರತೆಗಾಗಿ ಮಜಾ ತೆಗೆದು ಕೊಂಡು ಸಂಕ ಮುರಿದಲ್ಲೇ ಸ್ನಾನ ಎನ್ನುವಂತೆ ಕಿಡಿಕಾರುವುದು ಬಿಟ್ಟರೆ ಫಲಿತಾಂಶ ಮಾತ್ರ ಶೂನ್ಯ !. ಹೋರಾಟ ಹರತಾಳ ಮಾಡಿದರೆ ಸತ್ತವರು ಎದ್ದು ಬರುತ್ತಾರೆ ಎಂಬ ಆಲೋಚನೆ ಅಲ್ಲ ಅಟಲಿಸ್ಟ್ ಮುಂದಿನ ಅಧಿಕಾರಿಗಳ ಸರದಿಗೆ ಪುಲ್ ಸ್ಟಾಪ್ ಬಯಸಬಹುದಲ್ಲ ಎಂಬ ಒಂದು ಆಶಯ ವಷ್ಟೇ . ಇನ್ನು ಅಪರಾಧಿಗಳಿಗೆ ನಮಲ್ಲಿ ಅಷ್ಟೇ ಶಿಕ್ಷೆ ಇದೆ ಅದು ಬಿಡಿ (!) ಕೇವಲ ಮಾವನ ಮನೆಗೆ ಹೋಗಿ ಬಂದ ರೀತಿಯಲ್ಲಿ ಸಕಲ ರಾಜ ಮಾರ್ಯಾದೆಯೊಂದಿಗೆ ಅವರಗಳ ಬಂಧನದ ಡ್ರಾಮ ಮುಕ್ತಾಯವಾಗುತ್ತದೆ . ಮತ್ತದೇ ರಾಗ ಮತ್ತದೇ ಹಾಡು ! ಆದರೆ ತಪ್ಪಿತಸ್ತರು ಮುಖವಾಣಿಗೆ ಬರಬೇಕು ಎನ್ನುವ ಇರಾದೆ ಅಷ್ತೆ .
ಸಂತ್ರಸ್ತರ ಅನ್ಯಾಯಕ್ಕೆ ನಿರ್ದಿಷ್ಟ ಕಾರಣ ಗೊತ್ತಿದ್ದರೂ, ಸಿಬಿಐ ಸಿಐಡಿ ಎಂದೆಲ್ಲಾ ವರ್ಷಾನುಗಟ್ಟಲೆ ಎನ್ಕ್ವಯರಿ ಅದೂ ಇದೂ ಕಥೆ ಕಟ್ಟಿ ಸ್ವಲ್ಪ ದಿನಗಳಲ್ಲಿ ಎಲ್ಲ ನೆನಪುಗಳೂ ಮಾಸಿ ಬಿಡುತ್ತವೆ . ಇದಕ್ಕೆ ಇಂತ್ತದ್ದೆ ಕೆಲವು ಇತ್ತೀಚೆಗಿನ ನಡೆದ ಘಟನೆಯನ್ನು ನೆನಪು ಮಾಡಿ ಕೊಳ್ಳಿ. ಐಎಎಸ್ ಅಧಿಕಾರಿ ಡಿ.ಕೆ.ರವಿ ಒಬ್ಬ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದರು. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅಕ್ರಮ ಮರಳು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇಂಥಹ ಅಧಿಕಾರಿ 2014ರಲ್ಲಿ ನೇಣಿಗೆ ಶರಣಾಗಿದ್ದರು ಇದು ರಾಜ್ಯ ಮಾತ್ರವಲ್ಲ ದೇಶವನ್ನೇ ತಲ್ಲಣ ಗೊಳಿಸಿತ್ತು . ಕಾರಣ ಗೊತ್ತಿದ್ದೂ ಪ್ರಕರಣದ ಸಿಬಿಐ ಗೆ ವಹಿಸಲಾಗಿತ್ತು ತನಿಖೆ ಮುಂದುವರಿಯುತ್ತಿದೆ ಯಾವಾಗ ಕೊನೆ ಗೊಳ್ಳುತ್ತೋ ಗೊತ್ತಿಲ್ಲ ! ಮೊನ್ನೆ ಮೊನ್ನೆಯಷ್ಟೇ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಇವರ ವಿರುದ್ಧ ವ್ಯಕ್ತಿಯ ಕಿಡ್ನ್ಯಾಪ್ ಮಾಡಿ ಹಣ ಪಡೆದ ಆರೋಪವೂ ಸೇರಿ ಇಲ್ಲ -ಸಲ್ಲದ ಅದೂ- ಇದೂ ಇದು ಎಂದು ರೆಕ್ಕೆ ಪುಕ್ಕ ಕಟ್ಟಿ ಒಂದಷ್ಟು ದಿನ ಅಧಿಕಾರಿಯ ಮೇಲೆ ಗೂಬೆ ಕೊರಿಸಲಾಗಿತ್ತು .
ಆದರೆ, ಕಲ್ಲಪ್ಪ ಕುಟುಂಬ ಮಾತ್ರ ಎಸ್ಪಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎ0ದು ಬಿಗು ಪಟ್ಟು ಹಿಡಿದಾಗ ಸರ್ಕಾರ ಬೇರೆ ದಾರಿಕಾಣದೇ.ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಿತ್ತು ಹೇಗೋ ಏನು ತನಿಖೆ ಆರಂಭಗೊಂಡಿದೆ ಅಂತ್ಯ ಮಾತ್ರ ಗೊತ್ತಿಲ್ಲ . ಇನ್ನೂ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಕೂಡ ದಕ್ಷತೆ ಯಿಂದ ಕಾರ್ಯ ನಿರ್ವಹಿಸಿದ ಅಧಿಕಾರಿ. ಕೂಡ್ಲಿಗಿ ಯಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮತ್ತು ಹಿತಕರ ಘಟನೆಯನ್ನು ಪತ್ತೆ ಹಚ್ಚಿ ಇದಕ್ಕೆ ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಸಾಥ್ ಇದೆ ಎಂಬ ವಿಷಯ ಬಹಿರಂಗ ವಾಗುತ್ತಿದಂತೆ , ಸಚಿವ ಅನುಪಮಾ ಶೆಣೈಯನ್ನು ತನ್ನ ಪವರ್ ಬಳಸಿ ಬಿಜಾಪುರಕ್ಕೆ ಎತ್ತಂಗಡಿ ಮಾಡಿಸಿದ್ದರು. ಸರಕಾರಕ್ಕೆ ಇದನ್ನು ಗಮನಕ್ಕೆ ತಂದರೂ ಪ್ರಯೋಜನ ಕಾಣದೇ ಇದ್ದಾಗ ನೇರವಾಗಿ ಅನಪಮಾ ಶೆಣೈ ರಾಜೀನಾಮೆ ನೀಡಿದ್ದರು .
ಕಾರಣ ಪರಮೇಶ್ವರ್ ಟಾರ್ಚ್ರ್ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ . ಹೀಗೆ ರಾಜ್ಯದಲ್ಲಿ ಪ್ರಭಾವಿಗಳ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಒಂದೂ ಪ್ರಕರಣದಲ್ಲೂ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದ್ದು ಕಾಣುತ್ತಿಲ್ಲ ಎನ್ನುವುದು ನೋವಿನ ಸಂಗತಿ. ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ ! ಯಾಗಿದೆ ,, ಮುಂದೆ ಎಷ್ಟೋ ? ಪ್ರಜ್ಞಾವಂತರೆ ಎಚ್ಚರ ಗೊಳ್ಳಿ..ನಮಗೆ ರಕ್ಷಣೆ ನೀಡುವವರನ್ನು ನಾವು ನಾವು ರಕ್ಷಣೆ ನೀಡುವುದರಲ್ಲಿ ಏನು ತಪ್ಪು ..

ಸೋಮವಾರ, ಜೂನ್ 13, 2016

ವಿಪಕ್ಷಕ್ಕೆ ಗರಬಡಿದಿದ್ಯಾ? ಆಗಿದ್ದೇನು ? ಆಗುತ್ತಿರುವುದಾದರು ಏನು ? ದಿಟ್ಟ ಪೋಲಿಸ್ ಅಧಿಕಾರಿ ಅನುಪಮಾ ಶೆಣೈ ರಾಜೀನಾಮೆ ಸುತ್ತಾ !

ಡಿಕೆ ರವಿ ನಂತರ ಇಡೀ ಕರ್ನಾಟಕದ ಗಮನವನ್ನು ಸೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ, ಕೂಡ್ಲಿಯಡಿ ವೈಎಸ್ಪಿ ಅನುಪಮಾ ಶೆಣೈ ! ರಾಜ್ಯ ಕಾರ್ಮಿಕ ಹಾಗೂ ಅಲ್ಲಿನ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕರ ಫೋನ್ಕಾಲ್ ರಿಸಿವ್ ಮಾಡಿಲ್ಲ ಎಂಬೀ ಒಂದೇ ಒಂದು ಕಾರಣದಿಂದ ಕೊಡ್ಗಿ ಯಿಂದ ಬಿಜಾಪುರಕ್ಕೆ ಗ್ರಹ ಇಲಾಖೆಯ ಕ್ರಪೆಯಿಂದ ತನ್ನ ಪವರ್ ಬಳಿಸಿ ವರ್ಗಾವಣೆ ಮಾಡಲಾಗಿದೆ ಎಂದು ಹತಾಶೆಯಿಂದ ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಪ್ರಸ್ತುತ ಕೂಡ್ಲಿಯ ಡಿವೈಎಸ್ಪಿಯಾಗಿರುವ ಅನುಪಮಾ ಶೆಣೈ ರಾಜಿನಾಮೆ ನೀಡಿದ್ದಲ್ಲದೇ ಸೋಶಿಯಲ್ ನೆಟ್ವರ್ಕ್ ಮೂಲಕ ಸಚಿವರ ವಿರುದ್ಧ ರಣ ಕಹಾಳೆ ಮೊಳಗಿಸಿದ್ದರು. ಶೆಣೈಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಒಳ್ಳೆತನಕ್ಕೆ ಅವರಿಗೆ ನೈತಿಕ ಬೆಂಬಲ ವ್ಯಕ್ತವಾಗಿತ್ತು. ದಿಟ್ಟ ಪೋಲಿಸ್ ಅಧಿಕಾರಿ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ವಿಜಯಪುರದ ಇಂಡಿಗೆ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಈಡಾಗಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಕೂಡ್ಲಿ ಜನತೆ ಬಂದ್ ಕೂಡಾ ಆಚರಿಸಿದ್ದರು .
ಸೋಷಿಯಲ್ ಮೀಡಿಯಾದಲ್ಲಿ ಅವರು ಪಡೆಯುತ್ತಿರುವ ಬೆಂಬಲ, ಜನಪ್ರಿಯತೆ ಬಿಟ್ಟರೆ ,ಹಾಲಿ ಸರ್ಕಾರ ದಿಂದ ಕಿಂಚಿತ್ ಬೆಂಬಲ ಬಿಡಿ .ವಿಚಾರವನ್ನು ತನಿಖೆಗೆ ಎತ್ತಿ ಕೊಳ್ಳುವ ಔದಾರ್ಯವನ್ನೂ ತೋರಲಿಲ್ಲ . ಇನ್ನೂ ವಿರೋಧ ಪಕ್ಷಗಳು ಸತ್ತು ಹೊಗಿವೆಯೋ ಎಂಬಂತೆ ವರ್ತಿಸಿವೆ .. ವಿರೋಧ ರಾಜಕೀಯ ಪಕ್ಷಗಳಲ್ಲೋ೦ದಾದ ಜೆಡಿಸ್ ನ ಕುಮಾರ ಸ್ವಾಮೀ ಎರಡು ದಿನ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ , ಬ್ರಹತ್ ಕೇಂದ್ರ ರಾಜಕೀಯ ಪಕ್ಷ ಬಿಜೆಪಿ ಮಾತ್ರ ಅತ್ತ ತಲೆ ಹಾಕಿ ಮಲಗಿ ಕೊಳ್ಳಲು ಸಾಧ್ಯವಾಗದ೦ತಾಯಿತು .. ಕೇವಲ ಕುರ್ಚಿ ಆಸೆಗಾಗಿ ಹಗಲು ರಾತ್ರಿ ಹೋರಾಟ ನೆಡಸುವ ಇವುಗಳು ಒಂದು ಹೆಣ್ಣು ಅದರಲ್ಲೂ ದಕ್ಷ -ದಿಷ್ಟ -ನಿಷ್ಟಾವ೦ತ ಪೋಲಿಸ್ ಅಧಿಕಾರಿಯ ಬೆಂಬಲಕ್ಕೆ ನಿಲ್ಲದಿರುವುದು ನಾಚಿಕೆ ,ಹೇಸಿಗೆಯ ಪರಮಾವಧಿ .!! ಇನ್ನು ಆಡಳಿತ ಪಕ್ಷ ಗ್ರಹ ಇಲಾಖೆಗೆ ಮರ್ಯಾದೆ ಇಲ್ಲವೇ ?? ಕೇವಲ ವರ್ಗಾವಣಯನ್ನೇ ಮುಂದಿಟ್ಟು ಕೊಂಡು ಶೆಣೈ ರಾಜಿನಾಮೆ ನೀಡಿದರೆ ಅಥವಾ ಬೇರೆ ಏನಾದರೂ ಕಾರಣವಿದ್ದಿರಬಹುದೇ ? ಸಚಿವರು ಕೆಲವೊಂದು ಅವ್ಯಾಹತ ಚುಟುವಟಿಕೆಯಲ್ಲಿ ಭಾಗಿಯಾಗಿದ್ದರು ಅದನ್ನು ಪತ್ತೆ ಹಚ್ಚಿದ್ದ ಶೆಣೈ ಅವರು ಇದರಿಂದ ಮೇಲಿಂದ ಮೇಲೆ ಕಿರುಕುಳಕ್ಕೆ ಒಳಗಾಗಿ ರಾಜಿನಾಮೆ ಸಲ್ಲಿಸಿದ್ದಾರೆ ಎಂಬ ವಿಚಾರವೂ ವಿದೆ ಒಟ್ಟಾರೆ ಏನಾಗಿದೆ ಎಂಬ ವಾಸ್ತವ ಸಂಗತಿಯನ್ನು ಪತ್ತೆ ಮಾಡಿ ಅಧಿಕಾರಿಗೆ ನ್ಯಾಯ ದೊರಕಿಸಿ ಕೊಡಬೇಕಿತ್ತು..ಈರ್ವರನ್ನು ವಿಚಾರಣೆಗೆ ಒಳಪಡಿಸುವ ಗೌಜಿಗೆ ಸರ್ಕಾರ ಯಾಕೆ ಮುಂದಾಗಿಲ್ಲ ? ಇಲ್ಲಿ ತಪ್ಪಿತಸ್ತರು ಯಾರು ? ಇಲ್ಲಿ ಆಗಿದ್ದು ,ಆಗುತ್ತಿರುವುದಾದರು ಏನು ? ಸಾಕಷ್ಟು ಅನುಮಾನಗಳು ಮನದ ಪುಟದಲ್ಲಿ ಹೋಗೆಯಾಡುತ್ತಿವೆ.ಪರಮೇಶ್ವರ ನಾಯ್ಕ ವಿರುದ್ಧ ಡಿವೈಎಸ್ಪಿ ಅನುಪಮಾ ಶೆಣೈಯವರು ,ಸೋಶಿಯಲ್ ನೆಟ್ ವರ್ಕ್ ಗಳ ಮೂಲಕ ಮಾಡಿರುವ ಆರೋಪ ಸತ್ಯವೇ ಆಗಿದ್ದಲ್ಲಿ ದಾಖಲೆ ಏಕೆ ಬಿಡುಗಡೆ ಮಾಡುತ್ತಿಲ್ಲ? ಫೇಸ್ ಬುಕ್ ನಲ್ಲಿ ಹರಿಯಬಿಡುತ್ತಿರುವ ಸ್ಟೇಟಸ್ಸುಗಳು ಯಾರದ್ದು ? ಯಾಕಾಗಿ ? ಸಚಿವರ ವಿರುದ್ದ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಮಾಡುತ್ತಿರುವ ಟೀಕಾ ಪ್ರಹಾರಗಳನ್ನು ಗಮನಿಸುತ್ತಿದ್ದರೆ ಇಲ್ಲಿ ಏನೋ ಗಂಬೀರವಾದ ವಿಚಾರ ವಿದೆ ಎನ್ನಲು ಅಡ್ಡಿ ಇಲ್ಲ ?! ತನ್ನನ್ನು ವರ್ಗಾವಣೆ ಮಾಡಿದ್ದ ದ್ವೇಷವನ್ನು ಮುಂದಿಟ್ಟುಕೊಂಡು ಅನುಪಮಾ ಅವರು ಹತಾಶೆಯ ನಿರ್ಧಾರ ತೆಗೆದುಕೊಂಡಿದ್ದಾರೆಯೇ?. ಅಥವಾ ಅವರ ರಾಜೀನಾಮೆ ಪ್ರಕರಣದ ಹಿಂದೆ ಬೇರೆ-ಬೇರೆ ರಾಜಕೀಯ ಶಕ್ತಿಗಳ ಕೈವಾಡವಿದೆಯೇ?. ಅವರು ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುವ ಉದ್ದೇಶ ಹೊಂದಿದ್ದಾರೆಯೇ? ರಾಜೀನಾಮೆ ಬಿಸಾಕಿ ಭೂಗತ ವಾಗಿದ್ದ ಅಧಿಕಾರಿ ಒಮ್ಮೇಲೆ ಪ್ರತ್ಯಕ್ಷವಾಗಿ ಮಾಧ್ಯಮಗಳ ಪ್ರಶ್ನೆಗೆ “ಪೇಸ್ ಬುಕ್ ನಂಗೆ ಎ೦ದ್ರೆ ಏನು ಅಂತ ಗೊತ್ತಿಲ್ಲ ಇದು ನಂದಲ್ಲ “ ಎಂದು ಹೇಳಿರುವ ಇವರ ಪೇಸ್ ಬುಕ್ ನ್ನು ಯಾರು ಉಪಯೋಗಿಸುತ್ತಿದ್ದಾರೆ ? ಇನ್ನೋ೦ಡೆದೆ ಸಚಿವರೂ ಸಹಾ ಪ್ರಕರಣದ ಕುರಿತು ಯಾವ ಸ್ಪಷ್ಟೀಕರಣವನ್ನೂ ನೀಡದೇ ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ . ಮೊದಲು ರಾಜಿನಾಮೆಯನ್ನು ಪಡೆಯದ ಸರ್ಕಾರ ನಿನ್ನೆ ಒಮ್ಮೆಲೇ ರಾಜಿನಾಮೆ ಪತ್ರವನ್ನು ಅ೦ಗೀಕರಿಸಿದ್ದರ ಒಳ ಮರ್ಮವೇನು ? ಒಟ್ಟಾರೆ ಜನರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಈ ಬಗ್ಗೆ ತನಿಖೆ ಮಾಡುವ ಅಧಿಕಾರ ಯಾರಿಗಿದೆ .. ಹಾಲಿ ಸರ್ಕಾರ ಮುಮ್ಮಲ ಮಲಗಿದೆ ..! ವಿಪಕ್ಷ ಇದ್ದೂ ಇಲ್ಲದ೦ತಿದೆ .. ಕೇವಲ ಬೆರಳಣಿಕೆ ಮ೦ದಿ ಮಾತ್ರ ಇದನ್ನು ಗಂಭೀರವಾಗಿ ತೆಗೆದು ಕೊಂಡು ಸತ್ಯಾಸತ್ಯತೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಅಷ್ಟೇ ..! ಏನೇ ಇರಲಿ ಒಳ್ಳೆಯವರಿಗೆ ಕಾಲವಿಲ್ಲ !

ಟಿಪ್ಪು –ತಪ್ಪು! ಏನೀದು ಟಿಪ್ಪು ಸುಲ್ತಾನ್‌ ಜಯಂತಿ.?

ಸ್ವಾಭಿಮಾನ, ಸಾಹಸ, ಶೌರ್ಯಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್‌ !ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಟಿಪ್ಪು ಸುಲ್ತಾನ್‌ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ, ನರಿಯಂತೆ ನೂರು ವರ್ಷ ಬದುಕುವ ಬದಲು ಹುಲಿಯಂತೆ ಮೂರು ವರ್ಷ ಬದುಕುತ್ತೇನೆ ಎಂದು ಗರ್ಜಿಸಿದ ಸಾಹಸಿ ಮೈಸೂರು ಹುಲಿ ! ಟಿಪ್ಪು ಸುಲ್ತಾನ್ ಅವರ ಜನ್ಮ ವಾರ್ಷಿಕೋತ್ಸವವನ್ನು ನಾಡಿನೆಲ್ಲೆಡೆ ಆಚರಿಸಲು ಕರ್ನಾಟಕ ಸರ್ಕಾರ ಇತ್ತೀಚಿಗೆ ನಿರ್ಧರಿಸಿತ್ತು ಇದರಿಂದ ಉಂಟಾದ ಗೊಂದಲ, ಗಲಭೆ, ಸಾವು ಎಲ್ಲವೂ ತಮಗೆ ಗೊತ್ತಿರುವುದೇ .. ಟಿಪ್ಪು ಜಯಂತಿ ಆಚರಿಸಬೇಕು ಬೇಡ ಎ೦ಬ ಪರ –ವಿರೋಧ ದ ಅಲೆಗಳ ಮಧ್ಯೆ ಅಂತೂ ಕೆಲೆವೆಡೆ ನೆರವೆರಿದ್ದು ಬೇರೆ ವಿಚಾರ .
ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಈ ವರ್ಷ ರಾಜ್ಯ ಸರ್ಕಾರ ತಕರಾರು ತೆಗೆದು ಬಹಳಷ್ಟು ಸಾವು ನೋವು ಗೊಂದಲಕ್ಕೆ ಕಾರಣವಾಯಿತು ,,ಕೋಮು ಸಾಮರಸ್ಯ ಕ್ಕ ಕೂಡಾ ಕಾರಣ ವಾಯಿತು .. ಟಿಪ್ಪು ಜನಿಸಿ ,ಮರಣ ಹೊಂದಿ ಅದೆಷ್ಟು ವರ್ಷಗಳು ಗತಿಸಿ ಹೋಗಿದೆ ಅದೆಷ್ಟೋ ಸರಕಾರ ಬಂದೂ ಹೋಗಿವೆ. ಆದರೆ ಈ ವರ್ಷ ಮಾತ್ರ ಸರಕಾರಕ್ಕೆ ಟಿಪ್ಪು ಸುಲ್ತಾನ್ ನೆನಪು ಆಗಿದ್ದೋ ಯಾಕೋ ?ಟಿಪ್ಪು ಜಯಂತಿ ಆಚರಣೆ ಒಳ್ಳೆದೇ ..ಮಾಡಬೇಕಾದ್ದು ನಮ್ಮ ಕರ್ತವ್ಯ ..ಎಲ್ಲದಕ್ಕೂ ,ಎಲ್ಲಾರಿಗೂ ಒನೊಂದು ದಿನ ಆಚರಣೆ ಇದೆ .. ಹಲವು ಧರ್ಮೀಯರ ನಾಡು ಭಾರತ ದೇಶ ಯಾವತ್ತೂ ಧರ್ಮ ಜನಾಂಗ ಎಂಬ ಬೇಧ ಭಾವನ್ನು ತೋರುವಂತಿಲ್ಲ ಸ೦ವಿಧಾನದ ನಿಯಮ .. ಆದರೆ ಇಷ್ಟು ದಿನ ಮಮ್ಮಲ ಮಲಗಿದ್ದ ಸರ್ಕಾರ ಈಗ ತಟ್ಟನೆ ನನೆಪಾಗಿದ್ದು ಯಾಕೆ ? ಇದು ಟಿಪ್ಪುಗೆ ಗೌರವ ಕ್ಕಿಂತ ಅಗೌರವ ಜಾಸ್ತಿ ಎನ್ನುವುದು ನನ್ನ ಕಲ್ಪನೆ . ಇನ್ನು ಟಿಪ್ಪು ಅಭಿಮಾನಿಗಳು ಟಿಪ್ಪು ಜಯಂತಿ ಆಚರಣೆ ಸರಿಯಾದದ್ದೆ ಎ೦ದು ಹೋರಾಟಕ್ಕೆ ಇಳಿದರೇ ವಿರೋಧಿಗಳು ಸಹಾ ಅಷ್ಟೇ ಹುಟ್ಟಿ ಕೊಂಡಿದ್ದ೦ತೂ ಸುಳ್ಳಲ್ಲ .. ಟಿಪ್ಪು ಮುಸಲ್ಮಾನನಾಗಿದ್ದು ಆತನ ಆಡಳಿತದಲ್ಲಿ ಸಾಕಷ್ಟು ನಡತೆ ಕೆಟ್ಟ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಶೀಲ ಹರಣ ಸೇರಿದಂತೆ , ಇಸ್ಲ್ಲಾಂ ಧರ್ಮಕ್ಕೆ ಆತ ಇತರ ಧರ್ಮೀಯರನ್ನು ಮತಾಂತರಗೊಳಿಸುತ್ತಿದ್ದ .. ಕ್ರೂರತನ ಸರ್ವಾದಳಿತ ಆತನಲಿತ್ತು ,ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಹಾಗಾಗಿ ಆತನ ಜನ್ಮ ದಿನವನ್ನು ಆಚರಿಸುವುದು ತಪ್ಪು ಎಂದು ಕಿರಿಕಾರಿದ್ದವು .. ಒಟ್ಟಾರೆ ಕೆಲವೆಡೆ ಆತನ ಬಗೆಗೆ ಉತ್ತಮ ಪ್ರಶಂಸೆ ಬಂದರೆ ಹಲವೆಡೆ ಗೊಂದಲ ಹರತಾಳಗಳೂ ಉ೦ಟಾಗಿದ್ದವು . ಏನೆ ಇರಲಿ ಟಿಪ್ಪು ಬಗ್ಗೆ ಒಂದ್ಚೂರು :ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬಂದೂಕಿನ ಶಕ್ತಿಯಿಂದ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಬ್ರಿಟಿಷರ ವಿರುದ್ದ ಹೋರಾಡಿದವರಲ್ಲಿ ಪ್ರಮುಖ ಹೆಸರು ಟಿಪ್ಪು ಸುಲ್ತಾನ್. ತಮ್ಮ ನಿಜನಾಮಧೇಯ ಶೇರ್-ಎ-ಮೈಸೂರ್ !ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ನಿಂತು ಅವರ ಆಕ್ರಮಣವನ್ನು ಎದುರಿಸಿ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯತ್ನಿಸಿದ ಮಹಾನ್ ಪರಾಕ್ರಮಿಗಳಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲ ರಾಜರ ಮತ್ತು ಸಾಮಂತರಲ್ಲಿ ಒಗಟ್ಟು ಮೂಡಿಸಿ ಇಡಿಯ ದಕ್ಷಿಣ ಭಾರತವನ್ನೇ ಬ್ರಿಟಿಷರ ತೆಕ್ಕೆಯಿಂದ ರಕ್ಷಿಸಿಕೊಂಡ ಕಾರಣಕ್ಕಾಗಿಯೇ ಅವರಿಗೆ ಶೇರ್-ಎ-ಹಿಂದ್ (ಭಾರತದ ಹುಲಿ) ಎಂದು ಕರೆಯಲಾಗುತ್ತದೆ . 1750ರಲ್ಲಿ ಬೆಂಗಳೂರು ದೇವನಹಳ್ಳಿಯಲ್ಲಿ ಹೈದರಾಲಿ ಮತ್ತು ಫಾತಿಮಾ ಫಖರುನ್ನೀಸಾ ದಂಪತಿಯ ಮಗನಾಗಿ ಹುಟ್ಟಿದರು. ಆ ದಿನಗಳಲ್ಲಿ ಹೈದರಾಲಿ ಮೈಸೂರು ಸಂಸ್ಥಾನದ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹುಟ್ಟಿದಾಗ ಟಿಪ್ಪೂ ಸುಲ್ತಾನರಿಗೆ ಫತೇಹ್ ಅಲಿ ಎಂದು ನಾಮಕರಣವಾಗಿತ್ತು. ಬಳಿಕ ಹೈದರಾಲಿ ನಂಬುವ ಸಂತರಾದ ಸಂತ ಟಿಪ್ಪೂ ಮಸ್ತಾನ್ ಔಲಿಯಾರವರ ಗೌರವಾರ್ಥ ತಮ್ಮ ಮಗನನ್ನೂ ಟಿಪ್ಪೂ ಸುಲ್ತಾನ್ ಎಂದು ಕರೆಯತೊಡಗಿದರು. ವಾಸ್ತವವಾಗಿ ಟಿಪ್ಪೂ ಸುಲ್ತಾನ್ ಎಂಬುದು ಅವರನ್ನು ಕರೆಯುವ ಹೆಸರಾಗಿದೆ, ಅವರ ನಿಜನಾಮಧೇಯ ಸುಲ್ತಾನ್ ಫತೇಹ್ ಅಲಿ ಖಾನ್ ಶಹಾಬ್ ಎಂದಾಗಿದೆ. ಟಿಪ್ಪು ಸುಲ್ತಾನನ ಜನನದ ಬಳಿಕ ಹೈದರಾಲಿಯ ವೃತ್ತಿಜೀವನದಲ್ಲಿ ಏಳ್ಗೆ ಕಾಣುತ್ತಾ ಹೋಗಿತ್ತು. ಮುಂದಿನ ಹನ್ನೊಂದು ವರ್ಷಗಳಲ್ಲಿ ಹಂತಹಂತವಾಗಿ ಮೇಲೇರಿದ ಅವರು 1761ರಲ್ಲಿ ಮೈಸೂರು ಸಂಸ್ಥಾನದ ಆಡಳಿತಗಾರರಾಗಿ ನೇಮಕಗೊಂಡರು. ಅಂದಿನ ದಿನಗಳಲ್ಲಿ ಹೈದರಾಲಿ ಫ್ರೆಂಚ್ ಸರ್ಕಾರದೊಂದಿಗೆ ಹೆಚ್ಚು ವ್ಯವಹಾರ ನಡೆಸುತ್ತಿದ್ದರು. ಇದೇ ಮೈತ್ರಿಯಿಂದ ಟಿಪ್ಪೂ ಸುಲ್ತಾನರಿಗೆ ಫ್ರೆಂಚ್ ವಿಶ್ವವಿದ್ಯಾಲಯದಲ್ಲಿ ರಾಜತಾಂತ್ರಿಕ ಮತ್ತು ರಾಜ್ಯಾಡಳಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ದೊರಕಿತು. ಮುಂದಿನ ನಾಲ್ಕು ವರ್ಷಗಳ ಕಾಲ ಅಂದಿನ ದಿನಗಳಲ್ಲಿ ಲಭ್ಯರಿದ್ದ ಅತ್ಯಂತ ದಕ್ಷರಾದ ಶಿಕ್ಷಕರಿಂದ ಅವರು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆದರು. ರಾಜತಾಂತ್ರಿಕ ವಿಷಯದ ಜೊತೆಗೇ ಕುದುರೆಸವಾರಿ, ಕತ್ತಿವರಸೆ, ಬಂದೂಕು ಚಲಾಯಿಸುವಿಕೆ ಮೊದಲಾದ ವಿದ್ಯೆಗಳಲ್ಲೂ ಪಾರಾಂಗತರಾದರು. 1765ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಟಿಪ್ಪೂ ಸುಲ್ತಾನ್ ಮಾಡಿದ ಮೊದಲ ಕೆಲಸವೆಂದರೆ ಮಲಬಾರ್ ಪ್ರಾಂತದ ಸಾಮಂತರ ವಿರುದ್ಧ ಯುದ್ಧ ಮಾಡಿ ಸಾಮಂತ ಮತ್ತು ಅವರ ಕುಟುಂಬವನ್ನು ವಶಕ್ಕೆ ಪಡೆದುಕೊಂಡಿದ್ದು. ಆಗ ಅವರ ವಯಸ್ಸು ಕೇವಲ ಹದಿನೈದು ವರ್ಷ!ಅಪ್ಪಟ ಕನ್ನಡ ಭಾಷಾಭಿಮಾನಿ ಯಾದ, ಮಾತೃಭೂಮಿ ರಕ್ಷಣೆಗಾಗಿ ಸ್ವಂತ ಮಕ್ಕಳನ್ನು ಬ್ರಿಟೀಷರಲ್ಲಿ ಒತ್ತೆಯಿಟ್ಟಿ ಟಿಪ್ಪು ಸುಲ್ತಾನ್‌ ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಎ೦ದು ಇತಿಹಾಸ ಕಾರರಲ್ಲಿ ಕೆರೆಯಿಸಿ ಕೊಂಡಿದ್ದಾನೆ ಬಹು ಸಂಸ್ಕೃತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು. ತನ್ನ ಸಾಮ್ರಾಜ್ಯದಲ್ಲಿದ್ದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದವರಿಗೆ ಶಿಕ್ಷಣ ಕೊಡಿಸಿದ ಮಹಾನುಭಾವ ಎನ್ನಲಾಗುತ್ತಿದೆ .ಹದಿನೆಂಟನೆಯ ಶತಮಾನದ ಇತಿಹಾಸವನ್ನು ಪರಿಗಣಿಸಿದರೆ ಭಾರತದಾದ್ಯಂತ ರಾಜರ, ಸಾಮಂತರ ಆಳ್ವಿಕೆ ಜಾರಿಯಲ್ಲಿತ್ತು. ವೈರತ್ವ ಮತ್ತು ಮಿತೃತ್ವಗಳನ್ನು ನಿಭಾಯಿಸಲು ಯುದ್ಧಗಳು ನಡೆಯುವುದು ಸಾಮಾನ್ಯವಾಗಿತ್ತು. ಇಬ್ಬರು ಸ್ನೇಹಿತರ ನಡುವೆ ವೈರತ್ವ ಹುಟ್ಟುಹಾಕಿ ಇಬ್ಬರ ಜಗಳದಿಂದ ಲಾಭ ಪಡೆಯುವ 'ಒಡೆದು ಆಳುವ ನೀತಿ'ಯನ್ನು ಅನುಸರಿಸಿದ ಬ್ರಿಟಿಷರು ತಮ್ಮ ಯೋಜನೆಯಲ್ಲಿ ಬಹುತೇಕ ಯಶಸ್ವಿಯೂ ಆದರು. ಆದರೆ ಉತ್ತರ ಭಾರತವನ್ನು ಸುಲಭವಾಗಿ ಆಕ್ರಮಿಸಿದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಟಿಪ್ಪೂ ಸುಲ್ತಾನನ್ನು ಎದುರಿಸಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಟಿಪ್ಪು ಸಾಹೇಬ್ ಎಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಅಂದಿನ ದಕ್ಷಿಣದ ಪ್ರಾಂತಗಳಾದ ಮದ್ರಾಸ್ ಮತ್ತು ಮಂಗಳೂರು ಪ್ರಾಂತಗಳನ್ನು ಮೊದಲ ಮತ್ತು ಎರಡು ಅಂಗ್ಲೋ ಮೈಸೂರ್ ವಾರ್ (ಅಥವಾ ಅಂಗ್ಲ-ಮೈಸೂರು ಯುದ್ದ) ಗಳಲ್ಲಿ ಬ್ರಿಟಿಷರ ವಿರುದ್ಧ ಸೆಣೆಸಿ ಉಳಿಸಿದ್ದರು.1782ರ ಡಿಸೆಂಬರ್ ಆರರಂದು ಹೈದರಾಲಿ ಚಿತ್ತೂರಿನಲ್ಲಿ ವಿಧಿವಶರಾದರು. ನಂತರ ತಂದೆಯ ಸ್ಥಾನವನ್ನು ಅಲಂಕರಿಸಿದ ಟಿಪ್ಪು ಮೈಸೂರಿನ ರಾಜರಾಗುವ ಮೊದಲೇ ಮೊದಲ ಮತ್ತು ಎರಡನೇ ಅಂಗ್ಲೋ ಮೈಸೂರು ಯುದ್ಧಗಳನ್ನು ಜಯಿಸಿದ ಅನುಭವ ಪಡೆದಿದ್ದರು. ಆದರೆ ಇಡಿಯ ಭಾರತವನ್ನೇ ಜಯಿಸುವ ಮಹತ್ವಾಕಾಂಕ್ಷೆಯಿಂದ ಆಗಮಿಸಿದ್ದ ಬ್ರಿಟಿಷರ ವಿರುದ್ದ ಹೋರಾಡುವುದು ಬಹಳ ಕಷ್ಟ ಎಂದು ಅವರು ಅರಿತಿದ್ದರು. ಹೈದರಾಲಿಯ ಸಮಯದಲ್ಲಿಯೇ ಈ ಕ್ಷಿಪಣಿಗಳನ್ನು ಉಪಯೋಗಿಸಲಾಗಿದ್ದರೂ ತಂತ್ರಜ್ಞಾನದಲ್ಲಿ ಮತ್ತು ಕ್ಷಮತೆಯಲ್ಲಿ ಹಿಂದಿದ್ದವು. ಟಿಪ್ಪುಸುಲ್ತಾನ ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿಗಳು ತಮ್ಮೊಂದಿಗೆ ಚೂಪಾದ ಬಾಣಗಳಂತಿರುವ ಲೋಹದ ತುಂಡುಗಳನ್ನೂ ಕೊಂಡೊಯ್ದು ವೈರಿಗಳ ತಲೆ ಅಥವಾ ಶರೀರವನ್ನು ಸೀಳಿ ಬಿಡುತ್ತಿದ್ದವು.ಈ ಕ್ಷಿಪಣಿಗಳನ್ನು ಸೂಕ್ತವಾಗಿ ಬಳಸಲು ಇಡಿಯ ಮೈಸೂರು ಸಂಸ್ಥಾನದಲ್ಲಿ ಇಪ್ಪತ್ತನಾಲ್ಕು ಕುಶೂನ್ (cushoon) ಎಂಬ ಕ್ಷಿಪಣಿಪಡೆಗಳನ್ನು ರಚಿಸಿ ಪ್ರತಿ ಪಡೆಯಲ್ಲಿಯೂ ಈ ಕ್ಷಿಪಣಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇನ್ನೂರು ನುರಿತ ಮತ್ತು ತರಬೇತಿ ಪಡೆದ ನಂಬಿಗಸ್ತ ಸೈನಿಕರನ್ನು ನಿಯೋಜಿಸಿದ. ಅಲ್ಲದೇ ಈ ಕ್ಷಿಪಣಿಗಳನ್ನು ಹೇಗೆ ಬಳಸಬೇಕು, ಯಾವ ತಂತ್ರವನ್ನು ಹೂಡಬೇಕು ಎಂದು ವಿವರಿಸುವ ಯುದ್ಧತಂತ್ರದ ವಿವರಗಳನ್ನು 'ಫತಹುಲ್ ಮುಜಾಹಿದೀನ್' ಎಂಬ ಗ್ರಂಥದಲ್ಲಿ ಸ್ವತಃ ಬರೆದು ಪ್ರಕಟಿಸಿದ್ದರು. ಈ ಗ್ರಂಥದಲ್ಲಿ ವಿವರಿಸಿದ ಯುದ್ಧತಂತ್ರಗಳನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪೂವಿನ ಸೈನ್ಯ ಸಮರ್ಥವಾಗಿತ್ತು. ಆದರೆ ದುರಾದ್ರಷ್ಟವಷತ್ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿ ಮೋಸ ದಿಂದ ಟಿಪ್ಪು ವೀರ ಮರಣ ವನ್ನು ಒಪ್ಪಬೇಕಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .