ಸೋಮವಾರ, ಜೂನ್ 13, 2016
ವಿಪಕ್ಷಕ್ಕೆ ಗರಬಡಿದಿದ್ಯಾ? ಆಗಿದ್ದೇನು ? ಆಗುತ್ತಿರುವುದಾದರು ಏನು ? ದಿಟ್ಟ ಪೋಲಿಸ್ ಅಧಿಕಾರಿ ಅನುಪಮಾ ಶೆಣೈ ರಾಜೀನಾಮೆ ಸುತ್ತಾ !
ಡಿಕೆ ರವಿ ನಂತರ ಇಡೀ ಕರ್ನಾಟಕದ ಗಮನವನ್ನು ಸೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ, ಕೂಡ್ಲಿಯಡಿ ವೈಎಸ್ಪಿ ಅನುಪಮಾ ಶೆಣೈ !
ರಾಜ್ಯ ಕಾರ್ಮಿಕ ಹಾಗೂ ಅಲ್ಲಿನ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕರ ಫೋನ್ಕಾಲ್ ರಿಸಿವ್ ಮಾಡಿಲ್ಲ ಎಂಬೀ ಒಂದೇ ಒಂದು ಕಾರಣದಿಂದ ಕೊಡ್ಗಿ ಯಿಂದ ಬಿಜಾಪುರಕ್ಕೆ ಗ್ರಹ ಇಲಾಖೆಯ ಕ್ರಪೆಯಿಂದ ತನ್ನ ಪವರ್ ಬಳಿಸಿ ವರ್ಗಾವಣೆ ಮಾಡಲಾಗಿದೆ ಎಂದು ಹತಾಶೆಯಿಂದ ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಪ್ರಸ್ತುತ ಕೂಡ್ಲಿಯ ಡಿವೈಎಸ್ಪಿಯಾಗಿರುವ ಅನುಪಮಾ ಶೆಣೈ ರಾಜಿನಾಮೆ ನೀಡಿದ್ದಲ್ಲದೇ ಸೋಶಿಯಲ್ ನೆಟ್ವರ್ಕ್ ಮೂಲಕ ಸಚಿವರ ವಿರುದ್ಧ ರಣ ಕಹಾಳೆ ಮೊಳಗಿಸಿದ್ದರು. ಶೆಣೈಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಒಳ್ಳೆತನಕ್ಕೆ ಅವರಿಗೆ ನೈತಿಕ ಬೆಂಬಲ ವ್ಯಕ್ತವಾಗಿತ್ತು. ದಿಟ್ಟ ಪೋಲಿಸ್ ಅಧಿಕಾರಿ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ವಿಜಯಪುರದ ಇಂಡಿಗೆ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಈಡಾಗಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಕೂಡ್ಲಿ ಜನತೆ ಬಂದ್ ಕೂಡಾ ಆಚರಿಸಿದ್ದರು . ಸೋಷಿಯಲ್ ಮೀಡಿಯಾದಲ್ಲಿ ಅವರು ಪಡೆಯುತ್ತಿರುವ ಬೆಂಬಲ, ಜನಪ್ರಿಯತೆ ಬಿಟ್ಟರೆ ,ಹಾಲಿ ಸರ್ಕಾರ ದಿಂದ ಕಿಂಚಿತ್ ಬೆಂಬಲ ಬಿಡಿ .ವಿಚಾರವನ್ನು ತನಿಖೆಗೆ ಎತ್ತಿ ಕೊಳ್ಳುವ ಔದಾರ್ಯವನ್ನೂ ತೋರಲಿಲ್ಲ . ಇನ್ನೂ ವಿರೋಧ ಪಕ್ಷಗಳು ಸತ್ತು ಹೊಗಿವೆಯೋ ಎಂಬಂತೆ ವರ್ತಿಸಿವೆ .. ವಿರೋಧ ರಾಜಕೀಯ ಪಕ್ಷಗಳಲ್ಲೋ೦ದಾದ ಜೆಡಿಸ್ ನ ಕುಮಾರ ಸ್ವಾಮೀ ಎರಡು ದಿನ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ , ಬ್ರಹತ್ ಕೇಂದ್ರ ರಾಜಕೀಯ ಪಕ್ಷ ಬಿಜೆಪಿ ಮಾತ್ರ ಅತ್ತ ತಲೆ ಹಾಕಿ ಮಲಗಿ ಕೊಳ್ಳಲು ಸಾಧ್ಯವಾಗದ೦ತಾಯಿತು .. ಕೇವಲ ಕುರ್ಚಿ ಆಸೆಗಾಗಿ ಹಗಲು ರಾತ್ರಿ ಹೋರಾಟ ನೆಡಸುವ ಇವುಗಳು ಒಂದು ಹೆಣ್ಣು ಅದರಲ್ಲೂ ದಕ್ಷ -ದಿಷ್ಟ -ನಿಷ್ಟಾವ೦ತ ಪೋಲಿಸ್ ಅಧಿಕಾರಿಯ ಬೆಂಬಲಕ್ಕೆ ನಿಲ್ಲದಿರುವುದು ನಾಚಿಕೆ ,ಹೇಸಿಗೆಯ ಪರಮಾವಧಿ .!!
ಇನ್ನು ಆಡಳಿತ ಪಕ್ಷ ಗ್ರಹ ಇಲಾಖೆಗೆ ಮರ್ಯಾದೆ ಇಲ್ಲವೇ ?? ಕೇವಲ ವರ್ಗಾವಣಯನ್ನೇ ಮುಂದಿಟ್ಟು ಕೊಂಡು ಶೆಣೈ ರಾಜಿನಾಮೆ ನೀಡಿದರೆ ಅಥವಾ ಬೇರೆ ಏನಾದರೂ ಕಾರಣವಿದ್ದಿರಬಹುದೇ ? ಸಚಿವರು ಕೆಲವೊಂದು ಅವ್ಯಾಹತ ಚುಟುವಟಿಕೆಯಲ್ಲಿ ಭಾಗಿಯಾಗಿದ್ದರು ಅದನ್ನು ಪತ್ತೆ ಹಚ್ಚಿದ್ದ ಶೆಣೈ ಅವರು ಇದರಿಂದ ಮೇಲಿಂದ ಮೇಲೆ ಕಿರುಕುಳಕ್ಕೆ ಒಳಗಾಗಿ ರಾಜಿನಾಮೆ ಸಲ್ಲಿಸಿದ್ದಾರೆ ಎಂಬ ವಿಚಾರವೂ ವಿದೆ ಒಟ್ಟಾರೆ ಏನಾಗಿದೆ ಎಂಬ ವಾಸ್ತವ ಸಂಗತಿಯನ್ನು ಪತ್ತೆ ಮಾಡಿ ಅಧಿಕಾರಿಗೆ ನ್ಯಾಯ ದೊರಕಿಸಿ ಕೊಡಬೇಕಿತ್ತು..ಈರ್ವರನ್ನು ವಿಚಾರಣೆಗೆ ಒಳಪಡಿಸುವ ಗೌಜಿಗೆ ಸರ್ಕಾರ ಯಾಕೆ ಮುಂದಾಗಿಲ್ಲ ? ಇಲ್ಲಿ ತಪ್ಪಿತಸ್ತರು ಯಾರು ? ಇಲ್ಲಿ ಆಗಿದ್ದು ,ಆಗುತ್ತಿರುವುದಾದರು ಏನು ? ಸಾಕಷ್ಟು ಅನುಮಾನಗಳು ಮನದ ಪುಟದಲ್ಲಿ ಹೋಗೆಯಾಡುತ್ತಿವೆ.ಪರಮೇಶ್ವರ ನಾಯ್ಕ ವಿರುದ್ಧ ಡಿವೈಎಸ್ಪಿ ಅನುಪಮಾ ಶೆಣೈಯವರು ,ಸೋಶಿಯಲ್ ನೆಟ್ ವರ್ಕ್ ಗಳ ಮೂಲಕ ಮಾಡಿರುವ ಆರೋಪ ಸತ್ಯವೇ ಆಗಿದ್ದಲ್ಲಿ ದಾಖಲೆ ಏಕೆ ಬಿಡುಗಡೆ ಮಾಡುತ್ತಿಲ್ಲ? ಫೇಸ್ ಬುಕ್ ನಲ್ಲಿ ಹರಿಯಬಿಡುತ್ತಿರುವ ಸ್ಟೇಟಸ್ಸುಗಳು ಯಾರದ್ದು ? ಯಾಕಾಗಿ ? ಸಚಿವರ ವಿರುದ್ದ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಮಾಡುತ್ತಿರುವ ಟೀಕಾ ಪ್ರಹಾರಗಳನ್ನು ಗಮನಿಸುತ್ತಿದ್ದರೆ ಇಲ್ಲಿ ಏನೋ ಗಂಬೀರವಾದ ವಿಚಾರ ವಿದೆ ಎನ್ನಲು ಅಡ್ಡಿ ಇಲ್ಲ ?!
ತನ್ನನ್ನು ವರ್ಗಾವಣೆ ಮಾಡಿದ್ದ ದ್ವೇಷವನ್ನು ಮುಂದಿಟ್ಟುಕೊಂಡು ಅನುಪಮಾ ಅವರು ಹತಾಶೆಯ ನಿರ್ಧಾರ ತೆಗೆದುಕೊಂಡಿದ್ದಾರೆಯೇ?. ಅಥವಾ ಅವರ ರಾಜೀನಾಮೆ ಪ್ರಕರಣದ ಹಿಂದೆ ಬೇರೆ-ಬೇರೆ ರಾಜಕೀಯ ಶಕ್ತಿಗಳ ಕೈವಾಡವಿದೆಯೇ?. ಅವರು ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುವ ಉದ್ದೇಶ ಹೊಂದಿದ್ದಾರೆಯೇ? ರಾಜೀನಾಮೆ ಬಿಸಾಕಿ ಭೂಗತ ವಾಗಿದ್ದ ಅಧಿಕಾರಿ ಒಮ್ಮೇಲೆ ಪ್ರತ್ಯಕ್ಷವಾಗಿ ಮಾಧ್ಯಮಗಳ ಪ್ರಶ್ನೆಗೆ “ಪೇಸ್ ಬುಕ್ ನಂಗೆ ಎ೦ದ್ರೆ ಏನು ಅಂತ ಗೊತ್ತಿಲ್ಲ ಇದು ನಂದಲ್ಲ “ ಎಂದು ಹೇಳಿರುವ ಇವರ ಪೇಸ್ ಬುಕ್ ನ್ನು ಯಾರು ಉಪಯೋಗಿಸುತ್ತಿದ್ದಾರೆ ? ಇನ್ನೋ೦ಡೆದೆ ಸಚಿವರೂ ಸಹಾ ಪ್ರಕರಣದ ಕುರಿತು ಯಾವ ಸ್ಪಷ್ಟೀಕರಣವನ್ನೂ ನೀಡದೇ ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ . ಮೊದಲು ರಾಜಿನಾಮೆಯನ್ನು ಪಡೆಯದ ಸರ್ಕಾರ ನಿನ್ನೆ ಒಮ್ಮೆಲೇ ರಾಜಿನಾಮೆ ಪತ್ರವನ್ನು ಅ೦ಗೀಕರಿಸಿದ್ದರ ಒಳ ಮರ್ಮವೇನು ? ಒಟ್ಟಾರೆ ಜನರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಈ ಬಗ್ಗೆ ತನಿಖೆ ಮಾಡುವ ಅಧಿಕಾರ ಯಾರಿಗಿದೆ .. ಹಾಲಿ ಸರ್ಕಾರ ಮುಮ್ಮಲ ಮಲಗಿದೆ ..! ವಿಪಕ್ಷ ಇದ್ದೂ ಇಲ್ಲದ೦ತಿದೆ .. ಕೇವಲ ಬೆರಳಣಿಕೆ ಮ೦ದಿ ಮಾತ್ರ ಇದನ್ನು ಗಂಭೀರವಾಗಿ ತೆಗೆದು ಕೊಂಡು ಸತ್ಯಾಸತ್ಯತೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಅಷ್ಟೇ ..! ಏನೇ ಇರಲಿ ಒಳ್ಳೆಯವರಿಗೆ ಕಾಲವಿಲ್ಲ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ