ಶನಿವಾರ, ಅಕ್ಟೋಬರ್ 8, 2016
ತನ್ನ ತಲೆಯ ಮೇಲೆಯೇ ಚಪ್ಪಡಿ ಕಲ್ಲು ಹಾಕಿ ಕೊಂಡ್ರಾ ಪ್ರಕಾಶ್ ರೈ !
ಬಹು ಬಾಷಾ ಕಲಾವಿದ ಪ್ರಕಾಶ್ ರೈಯ “ಇದು ಒಳ್ಳೆ ರಾಮಾಯಣ” ನಿನಿಮಾದ ಪ್ರೊಮೋಷನ್ ನ ವಿಶೇಷ ರೆಕಾರ್ಡಿಂಗ್ ಕಾರ್ಯಕ್ರಮದ ಸಲುವಾಗಿ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಜನಶ್ರಿ ಸುದ್ದಿ ವಾಹಿನಿ ತಂಡದವರು ಅವರ ನಿವಾಸಕ್ಕೆ ತೆರಳಿದ್ದರು .ಕಾರ್ಯಕ್ರಮದ ಬಗೆಗಿನ ಪ್ರಶ್ನೆಗಳನ್ನೆಲ್ಲಾ ಕೇಳಿ ,ಇನ್ನೇನು ಕಾರ್ಯಕ್ರಮ ಮುಗಿಯುವ ಹಂತ ಬರುತ್ತಿದಂತೆ,ನಿರೂಪಕಿ ಕಾವೇರಿ ವಿವಾದಕ್ಕೆ ಸಂಬಂದಪಟ್ಟ ಒಂದು ಪ್ರಶ್ನೆಯನ್ನು ಕೇಳುತ್ತಾರೆ .ಪ್ರಶ್ನೆಯನ್ನು ಕೂಲ್ ಆಗಿ ನಿರೂಪಕಿ ಕೇಳುತ್ತಿದಂತೆ ಮೈ ಮೇಲೆ ಬೂತ ಬಂದವರ ರೀತಿಯಲ್ಲಿ ನಡತೆಯನ್ನು ಪ್ರದರ್ಶಿಸುತ್ತಾ ಪ್ರಕಾಶ್ ರೈ ,ಸಿನಿಮಾ ವಿಚಾರಕ್ಕೆ ಸಂಬoದಿಸಿದ ಈ ಕಾರ್ಯಕ್ರಮದಲ್ಲಿ ರಾಜಕೀಯದ ಪ್ರಶ್ನೆಯನ್ನು ಕೇಳ್ವುದು ತರವಲ್ಲ. ನಾನೇನು ತಪ್ಪು ಮಾಡಿದ್ದೆ .ಅದೂ ಇದೂ ಎಂದು ಇಲ್ಲ ಸಲ್ಲದ ವಿಚಾರವನ್ನು ಹಿಡಿದು ಅನಗತ್ಯವಾಗಿ ಎಗರಾಡಿ ಶರ್ಟ್ ಗೆ ಅಳವಡಿಸಿದ್ದ ಮೈಕ್ ತೆಗೆದು ಇನ್ನೂ ಯಾವೊತ್ತೂ ಬರಬೇಡಿ ಎಂದು ಷೋ ನಿಂದ ಹೊರೆಗೆ ನಡೆದೇ ಬಿಟ್ಟರು!!!
https://www.youtube.com/watch?v=_FbRSsXwfjU
ಆ ಪ್ರಶ್ನೆ ಇಲ್ಲಿ ಕೇಳಿದ್ದು ಸ್ವಲ್ಪ ಮಟ್ಟಿಗೆ ಸರಿಯಲ್ಲದೇ ಇದ್ದರೂ, ಪ್ರಸ್ತುತ ವಿಧ್ಯಮಾನಕ್ಕೆ ಅನುಗುಣವಾಗಿ ಕೇಳಿದ್ದರಲ್ಲಿ ತಪ್ಪಿಲ್ಲ . ಕಾವೇರಿಯ ವಿಚಾರದಲ್ಲಿ ಕನ್ನಡದ ಕೆಲವು ಸಿನಿಮಾ ಕಲಾವಿದರು ಹಾಗೂ ತಮಿಳು ಚಿತ್ರರಂಗದ ತಾರೆಯರೂ, ಸಹಾ ಕಾವೇರಿ ಕಳಾಕಳಿ ಯಲ್ಲಿ ಒಂದಿಷ್ಟು ಪರ ವಿರೋಧದ ಅಲೆಯಲ್ಲಿ ಪ್ರತಿಭಟನೆಗೆ ಇಳಿದದ್ದು ಎಲ್ಲರಿಗೂ ಗೊತ್ತೇ ಇರದ ವಿಚಾರವೆನಲ್ಲಾ .ತಾರೆಯರ ಬೆಂಬಲದಲ್ಲಿ ಪ್ರಕಾಶ್ ರೈ ಎರಡೂ ಚಿತ್ರರಂಗದ ಕಡೆಯಿಂದ ತಮ್ಮನ್ನು ತೋರ್ಪಡಿಸಿಕೊಳ್ಳ ದೇ ಇರುವುದು ಸಾಮಾನ್ಯ ವಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತೆ . ಬಹುಬಷಾ ನಟನಾಗಿ ,ಅದರಲ್ಲೂ ಕನ್ನಡಿಗನಾಗಿ ,ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ,ನಿರ್ದೇಶಿಸಿ, ನಿರ್ಮಾಪಿಸಿ , ಪ್ರಸಿದ್ದಿ ಪಡೆದವರು ಹಾಗಂತ ತಮಿಳು ನಾಡಿನಲ್ಲೂ ಚಿರಪರಿಚತ ವ್ಯಕ್ತಿಯೇ. ತಮಿಳು ಚಿತ್ರರಂಗದಲ್ಲೂ ಸಹಾ ಅಷ್ಟೇ ಜನಪ್ರಿಯತೆಯನ್ನು ಪಡೆದಿದ್ದವರು.ಉಭಯ ಚಿತ್ರರಂಗದ ತಾರೆಯರು ಕಾವೇರಿ ವಿವಾದದಲ್ಲಿ ತಮ್ಮನ್ನು ತಾವು ತೊಡಗಿ ಕೊಂಡಿರುವುದರ ಮಧ್ಯೆ ಪ್ರಕಾಶ್ ರೈ ಯಾವುದಕ್ಕೂ, ಸಾಥ್ ನೀಡದೇ ಸೈಲೆಂಟ್ ಮೂಡಿಗೆ ತೆರಳಿರುವುದರ ಮರ್ಮದ ಬಗ್ಗೆ ಈ ಪ್ರಶ್ನೆಯನ್ನು ಕೇಳಿದ್ದರಲ್ಲಿ ಖಂಡಿತವಾಗಿಯೂ ತಪ್ಪಿರಲಿಲ್ಲ .ಒಂದೊಮ್ಮೆ ತಪ್ಪು ಇತ್ತು ಏಣಿಸಿದರೆ, ಪ್ರಕಾಶ್ ರೈ ಪ್ರಶ್ನೆಗೆ ಸಮಾಧಾನ ದಿಂದ ಸವಾಕಾಶ ವಾಗಿ ಉತ್ತರಿಸ ಬಹುದ್ದಿತ್ತು ಅದಿಲ್ಲವೆಂದಾರೆ ಈ ಪ್ರಶ್ನೆಯನ್ನು ಕೇಳಬೇಡಿ ಎಂದು ವಿನಂತಿಸಿ ಕೊಂಡು, ಕಾರ್ಯಕ್ರಮ ಪೂರ್ಣಗೊಳಿಸುವಲ್ಲಿ ನೆರವಾಗಬೇಕಿತ್ತು . ಆದರೆ ಪ್ರಕಾಶ್ ರೈ ಮಾಡಿದ್ದು ಘೋರ ಅಪರಾಧ. ಮಗುಚಿ ಬಿದ್ದರೂ ಮುಗು ಮಣ್ಣಾಗಲಿಲ್ಲ ಎನ್ನುವಂತೆ ವಾಹಿನಿಯ ವಿರುದ್ದವೇ ಕಿಡಿಕಾರಿದ್ದು ತಮ್ಮ ಅಭಿಮಾನಿಗಳು ಮೆಚ್ಚುವಂತದ್ದಲ್ಲ .. ಅದೇ ಆ ಪ್ರಶ್ನೆಗೆ ಸoಯಮ ,ಸಮಚಿತ್ತದಿಂದ ಉತ್ತರಿದ್ದರೆ ನೀವು ಇಂದು ನಿಜ ಜೀವನದಲ್ಲಿ ಹೀರೋ ಆಗ್ತಾ ಇದ್ದಿದ್ದರಿ. ಅಭಿಮಾನ ಇನ್ನಷ್ಟು ಉಕ್ಕಿ ಹರಿಯುತ್ತಿತ್ತು .ಸಭ್ಯ ನಾಗರಿಕರಂತೆ ವರ್ತಿಸುವ ನಿಮ್ಮ ನಡಾವಳಿಗಳನ್ನ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಾವು ಗಮನಿಸಿದ್ದೇವೆ . ಆದರೆ ಇಲ್ಲಿ ಮಾತ್ರ ನಿಜ ವಿಚಾರದಲ್ಲಿ ಅಸಭ್ಯತೆ ಮಿತಿ ಮೀರಿತ್ತು. ತಮ್ಮ ಸಿನಿಮಗಳಲ್ಲೇ ಗಮನಿಸಿದಂತೆ ನೀವು ಹೆಚ್ಚಾಗಿ ಜನಪ್ರಿಯತೆ ಗೊoಡದ್ದು ಗೂಂಡಾ !,ವಿಲನ್ ಪಾತ್ರದಲ್ಲಿ ಅಲ್ವೇ ? ಅದನ್ನೇ ಇಲ್ಲಿ ಸಾಬೀತು ಪಡಿಸಿದ್ದಿರಿ. ಒಂದು ಜವಬ್ದಾರಿಯುತ ಸುದ್ದಿ ವಾಹಿನಿ ತಮ್ಮ ಪರವಾಗಿಯೇ ತಮ್ಮ ಚಿತ್ರದ ವಿಚಾರ ಜಗಜಹೀರಾತು ಮಾಡುವಲ್ಲಿ ತಮ್ಮ ಮನೆ ಬಾಗಿಲು ತನಕ ಬಂದವರನ್ನು ಈ ರೀತಿ ಉದ್ದಟತನವನ್ನು ತೋರಿ , ಅವರಿಗೆ ಅವಮಾನ ಮಾಡಿದ ತಾವು ,ಈ ಮಟ್ಟಕ್ಕೆ ಬೆಳೆಯಲು ತಮ್ಮ ಚಿತ್ರದ ಬಗ್ಗೆ ಗಲ್ಲಿ -ಗಲ್ಲಿ ಗಳಲ್ಲಿ ತಲುಪಿಸಿ, ತಮ್ಮ ಹೆಸರು ಬಾನೆತ್ತರಕ್ಕೆ ಬೆಳೆಸಲು ಈ ಮೀಡಿಯಾಗಳೇ ಪ್ರಮುಖ ಕಾರಣ ಎಂದು ಮರೆಯಬೇಡಿ . ಈ ಅಸಭ್ಯೇತೆ ಯಿಂದ ನಿಜಕ್ಕೂ ತಾವು ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದೂ ಬಿಡಿ , ಇನ್ನು ಮುಂದೆ ತಮ್ಮ ಸಂದರ್ಶನಕ್ಕೆ ಬೇರೆ ಮೀಡಿಯಾಗಳು ಹಿಂದೆ ಮುಂದೆ ನೋಡುವ ಅಥವಾ ಬರಲೇ ಬಾರದೆಂಬ ತೀರ್ಮಾಕ್ಕೆ ಬಂದರೂ ಅಚ್ಚರಿಯಿಲ್ಲ !! ತನ್ನ ಕೈಯಾರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿ ಕೊಂಡಿದ್ದ್ರಿ .. !! ತಾವೇನೋ ಈ ಮಟ್ಟಕ್ಕೆ ಬೆಳೆದಾಯ್ತು ಇನ್ಯಾಕೆ ಮೀಡಿಯಾ ಎಂದು ಆಲೋಚನೆ ಯನ್ನು ಬಿಡಿ . ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬ ಭ್ರಮೆ ದೂರವಾಗಲಿ ಪುನಾ: ದಡ ಸೇರುವುದಕ್ಕೆ ಅಂಬಿಗ ಬೇಕೇ ಬೇಕು !!
https://www.youtube.com/watch?v=Ml0xPNgS938
ಇನ್ನು ಈ ವಿಚಾರ ಜನಶ್ರೀ ಟಿವಿಯ ಪ್ರಧಾನ ಸಂಪಾದಕರಾದ ಅನಂತ ಜೀನಿವಾರ್ ,ರೈ ನಡವಳಿಕೆ ಬಗ್ಗೆ ಮರುದಿನ ಬಹಿರಂಗ ಪಡಿಸಿದ್ದೆ ತಡಾ ,ಕೆಲವು ಅವರ ಅಭಿಮಾನಿಗಳು ರೈ ಮಾಡಿದ್ದೇ ಸರಿ ಎಂದು ವಿವಿಧ ಟ್ರೋಲ್ಲೆರ್ ಗಳ ಮೂಲಕ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವಾಹಿನಿಯ ವಿರುದ್ದ ,ನಿರೂಪಕಿ, ಸಂಪಾದಕರ ವಿರುದ್ದ ಜರಿದಿದ್ದೆ ಜರಿದಿದ್ದು ! ಇವರಿಗೇನು ಗೊತ್ತು ಕೇವಲ ಸಿನಿಮಾದ ನಾಟಕೀಯತೆಗೆ ಮಾತ್ರ ಮನ ಸೋತವರು ಇವರುಗಳು . ಒಂದಿಷ್ಟು ಪ್ರಜ್ನತೆಯನ್ನು ಇಟ್ಟು ಕೊಂಡಿದ್ದರೆ ಅರ್ಥವಾಗುತ್ತಿತ್ತು. ರೀಲ್ ಆಚೆಗೆ ಬಂದು ರಿಯಲ್ ಆಗಿ ಏನು ಮಾಡಿದ್ದಾರೆ ಮಹಾನ್ ರೈ ಅವರು? ಇವರುಗಳಿಗೆ ಸಿನಿಮಾ ಹಿಟ್ ಆಗಬೇಕೆಂದರೆ ಟಿವಿ ಚಾನೆಲ್ ಗಳು ಬೇಕು.. ಸಿನಿಮಾ ಹಂಡ್ರೆದ್ ದಿನ ಒಡ್ಬೇಕೆಂದರೆ ಮೂಕ ಪ್ರೇಕ್ಷಕ ಜನತೆ ಬೇಕು . ಈ ಜನತೆಯ ಉದ್ದಾರಕ್ಕೆ ಏನು ಮಾಡಿದ್ದಾರೆ ತಾರೆ ಯರು ?? ಅದೇ ಜನತೆಗೆ ಮೂಲ ಭೂತ ಸೌಕರ್ಯ ಗಳಲ್ಲಿ ಒಂದಾದ ನೀರು ಕೊಡಲಿಕ್ಕೂ ಲಾಯಕ್ಕಲ್ಲದ ನಾಲಾಯಕ್ ಗಳು ನಮಗೆ ಬೇಕಾ? ಇವರ ಮನೆಯಿಂದ ಏನೂ ನಮಗೆ ನೀರು ಕೊಡೋದು ಬೇಡ ಅಟ್ ಲಿಸ್ಟ್ ಹೋರಾಟದಲ್ಲಿ ಬಾಗವಹಿಸಿದ ತಾರೆಯರ ಜೊತೆ ಏನೋ ಹರಕೆ –ಬಲಿ ಎಂದು ಭಾವಿಸಿ ,ಮೊಸಳೆ ಕಣ್ಣೀರು ಹಾಕಿ ಕೈ ತೊಳೆದು ಕೊಳ್ಳುವಲ್ಲಿ ಆಗುವ ಅಡ್ಡಿಯಾದರೂ ಏನು .. ? ಮೊನ್ನೆ ಮೊನ್ನೆ ನಮ್ಮ ಕನ್ನಡತಿ ನಾಯಕಿ ರಮ್ಯಾ ವಿಚಾರವನ್ನೇ ನೋಡಿ ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿಯೇ ಬಿಟ್ಟಳು ದೇಶ ದ್ರೋಹಿಗಳು ಇವರಿಗೆಲ್ಲಾ ನಮ್ಮ ದೇಶ ಬೇಕಾ ?ರಾಜಕೀಯ ಗೋಸ್ಕರ ತಮ್ಮ ಶೀಲವನ್ನು ಕೊಡಲಿ ಆದರೆ ತಮ್ಮ ದೇಶವನ್ನಲ್ಲ ! ಪಾಕಿಸ್ತಾನ ನರಕ ಅಲ್ಲ ಎಂದು ಉಸುರಿದ್ದ ರಮ್ಯ ಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ ಪಬ್ಲಿಕ್ ಟೀವಿಯ ಪ್ರತಿನಿಧಿ ಕೇಳಿದ್ದಕ್ಕೆ ಪಾಕಿಸ್ತಾನ ವಲ್ಲ ನಮ್ಮ ಮಂಗಳೂರು ನರಕ ಎಂದು ಎಷ್ಟೊಂದು ಲೀಲಾ ಜಾಲವಾಗಿ ಹೇಳಿಲ್ವಾ ? ಇಂಥಹ ನೀಚ ಮನಸ್ಥಿತಿಯನ್ನು ಅರಸಿ ಅರಹುವುದಕ್ಕೆ ಮಾಧ್ಯಮ ಬೇಕು !! ಮೊಟ್ಟೆ ಅಬಿಷೇಕ ಮಾಡಿಸ್ಲಿಕ್ಕೆ ಮಾಧ್ಯಮ ಬೇಕು . ಅದೇ ಈ ಪ್ರಕಾಶ್ ರೈ ವಿಚಾರದಲ್ಲೂ ಅಷ್ಟೇ ಅವರ ಮನದಿಂಗಿತವನ್ನು ಹೊರಹಾಕು ವಲ್ಲಿ ಪ್ರಯತ್ನಿಸಿದ ಜನಶ್ರೀ ವಾಹಿನಿದು ತಪ್ಪಿತ್ತೆ ? ಕೇವಲ ಪ್ರಕಾಶ್ ರೈ ಪರವಾಗಿ ಮಾತಾಡುವ ಅಭಿಮಾನಿಗಳೇ ಯೋಚಿಸಿ ತಮ್ಮ ಬುದ್ದಿಯನ್ನು ಖರ್ಚು ಮಾಡಿ .ಅಭಿಮಾನ ಅತಿಯಾಗದಿರಲಿ .ಅದನ್ನು ಬದಿಗಿಡಿ ಪ್ರಜ್ಞಾವಂತ ಸಮಾಜದಲ್ಲಿ ಗ್ರಹಿಕೆ ಸಾಮರ್ಥ್ಯ ಇರುವ ಪ್ರತಿಯೊಬ್ಬರೂ ಕೂಡಾ ಸತ್ಯಕ್ಕೆ ಬೆಂಬಲ ಕೊಡುತ್ತಾರೆ .
ಶನಿವಾರ, ಜುಲೈ 30, 2016
ಸಾವಿನಲ್ಲೂ ವಿಕ್ರತ ಆನಂದ ಪಡುವ ಮನಸ್ಸು ಯಾಕ್ರೀ ?!
ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ನಿನ್ನೆ ಮಧ್ಯಾಹ್ನ ವಿಧಿವಶರಾಗಿದ್ದರು ಅನೇಕ ಮಂದಿ ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಅದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ರಾಕೇಶ್ ಅವರ ಸಾವಿನಲ್ಲಿ ವಿಕೃತವಾದ ಆನಂದವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೆಲವು ವಿಕೃತ ಜನತೆ ಜನರ ಶಾಪದಿಂದ ಹೀಗಾಗಿದೆ. ಕೊನೆಗೂ ಸಿದ್ದರಾಮಯ್ಯ ಅವರ ಪುತ್ರ ನಿಧನ ಎನ್ನುವ ಸಂದೇಶವನ್ನು ಒಳಗೊಂಡಿರುವ ವಿಧ -ವಿಧ ವಾದ ಚಿತ್ರ ಸಂದೇಶವನ್ನು ಕ್ರೆಯೆಟ್ ನಾಡಿ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹಂಚಿಕೊಂಡು ಸಾವಿನ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ನಮ್ಮ ಶತ್ರವಾದರು ಆತನ ಅಥವಾ ಆತನ ಸಂಬಂಧಿಗಳ ಸಾವಿಗೆ ಯಾರಾದರು ಸಂತಾಪ ಪಡಬೇಕು .. ಕನ್ನಡದಲ್ಲಿ ದಿನಪ್ರತಿ ಪ್ರಯೋಗ ವಾಗುವ ಗಾದೆ ಮಾತೇ ಇದೆ ಸಾವು ನೋವು ಗಳನ್ನೂ ಒಳಗೊಂಡ ಘಟನೆ ನಡೆದಾದ ಸಂಬಂದ ಪಟ್ಟವರು ಯಷ್ಟೇ ಶತ್ರು ಗಳಾದರೂ..ಸಾಮನ್ಯವಾಗಿಯೇ ಇನ್ನೊಬ್ಬರ ಜೊತೆ ಹಂಚಿ ಕೊಳ್ಳುತ್ತಾರೆ .*’’ನಮ್ಮ ಶತ್ರುಗಳಿಗೂ ಇಂಥ ಪರಿಸ್ತಿತಿ ಬರಬಾರದು* ‘’ಎಂದು . ಆದ್ರೆ ನಿನ್ನೆಯ ವಿಚಾರ ಮಾತ್ರ ಬೇಸರವನ್ನು ಉಂಟು ಮಾಡುತ್ತವೆ ..*ಉರಿಯುತ್ತಿರುವ ಬೆಂಕಿಗೆ ತುಪ್ಪ* ಹಾಕಿದ ಹಾಗೆ ಸಾವಿನ ಕುರಿತು ನೂರಾರು ಕಥೆಕಟ್ಟತ್ತಿದ್ದಾರೆ . ಹಾಸ್ಯ ಮಾಡಲಾಗುತ್ತಿದೆ . ಸಾವಿನ ಕುರಿತು ಲೇವಡಿ ಮಾಡುವ ದುಷ್ಟ ಮನಸ್ಸುಗಳು ಕಂಡುಬರುತ್ತಿದೆ ಇದು ನಿಜಕ್ಕೂ ಖಂಡನೀಯ .ಸಿದ್ದರಾಮಯ್ಯನ ಕೆಲವು ವಿರೋಧಿ ನೀತಿ... ದಬ್ಬಾಳಿಕೆಯ ಆಡಳಿತ ನಾವು ವಿರೋಧಿಸುತ್ತೇವೆ, ವಿರೋಧಿಸಬೇಕು ಹೊರತು...ಅಮಾಯಕ ಅವರ ಪುತ್ರನ ಸಾವಿಗೆ ಸಂತೋಷ ಪಡುವ ಕೀಳು ಮನೋಭಾವನೆ ನಮಗೆ ಶೋಭೆ ತರುವ೦ತದ್ದಲ್ಲ .ಸಾವಿಲ್ಲದ ಮನೆ ಎಲ್ಲಿಯಾದರೂ ಇದಿಯೇ.?ಒಬ್ಬರು ಮನೆಯಲ್ಲಿ ಸತ್ತರೇ ಮಾತ್ರ ಅದರ ನೋವು ಗೊತ್ತಾಗಬೇಕಾ?.ಯಾರೇ ಸತ್ತರು ಸಾಂತ್ವನ ಹೇಳೋದು ಮನುಷ್ಯನಾದವನಿಗೆ ಜನ್ಮದತ್ತವಾಗಿರುತ್ತದೆ .ಗಾಂಧೀ ಸತ್ತಾಗ ಈಡೀ ಜಗತ್ತೇ ಕಣ್ಣೀರು ಹಾಕಲಿಲ್ಲವಾ ?ಡಿ.ಕೆ.ರವಿ ಸತ್ತಾಗ ತನ್ನ ಮನೆ ಮಗ ಸತ್ತಂತೆ ಈಡೀ ಕರ್ನಾಟಕ ಭಾವಿಸಲಿಲ್ಲವೇ ..ದೇವರಿಗೆ ಎಲ್ಲರೂ ಒಂದೇ .ಕಣ್ಣೀರಿಗಗೂ ಬೆಲೆ ಇದೆ. *ಕಾಗೆ ಕುಳಿತುಕೊಳ್ಳವುದಕ್ಕ್ಕೂ ಟೊಂಗೆ ಮುರಿಯೋದಕ್ಕೂ ಸರಿ ಹೋಯ್ತು*ಎಂಬ ಲೋಕನುಡಿಯಂತೆ ಅದಕ್ಕೂ-ಇದಕ್ಕೂ ತಳಕು ಹಾಕಿ ವಿಲಕ್ಷಣ ಚರ್ಚೆ ಮಾಡುವುದು ಸರಿಯಲ್ಲ .ಮರೆಯಾಗದಿರಲಿ ಮಾನವೀಯತೆ ರಾಕೇಶ್ ಸಿದ್ದರಾಮಯ್ಯನವರ ನಿಧನ ನಿಜಕ್ಕೂ ದುರದೃಷ್ಟಕರ .ಅಗಲಿದ ರಾಕೇಶ್ ಸಿದ್ದರಾಮಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ. ಸಿದ್ದರಾಮಯ್ಯನವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ.. ಕೊನೆಯದಾಗಿ ಒಂದೇ ಒಂದು ಮಾತು *ಅನಿಷ್ಟಕ್ಕೆಲ್ಲಾ ಶನೀಶ್ವರ ನೇ ಕಾರಣನಲ್ಲ* !
ಶನಿವಾರ, ಜುಲೈ 9, 2016
ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ ! ಮತ್ತೆಷ್ಟೋ ?
ನಿಜಕ್ಕೂ ಕರುಳು ಹಿಂಡುವಂತ ಪ್ರಸಂಗ ! ಹೌದು ಏನಾಗುತ್ತಿದೆ ರಾಜ್ಯದಲ್ಲಿ ? ರಕ್ಷಕರಿಗೆ ರಕ್ಷಣೆ ಇಲ್ಲದಿದ್ದರೆ ? ಅವರುಗಳಿಗೆ ಸೂಕ್ತವಾದ ಕಾನೂನುಗಳಿಲ್ಲವೇ ?ದಕ್ಷ -ನಿಷ್ಟಾವಂತ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡುವುದು ತಪ್ಪಾ ?.. ಕಿಚಕರ ಸಾಮ್ರಾಜ್ಯದಲ್ಲಿ ಅರ್ಜುನನ೦ತವರಿಗೆ ಬೆಲೆ -ನೆಲೆ ಮರೀಚಿಕೆಯೇ ? ಸಾರಥಿ ಕ್ರಷ್ಣ ನೀ ಬೇಗನೇ ಬಾರೋ ಅನ್ನದೇ ವಿಧಿ ಇಲ್ಲ .. ಕೇವಲ ಎರಡೇ ಎರಡು ದಿನದಲ್ಲಿ ಇನ್ನೊಬ್ಬ ಪೋಲಿಸ್ ಅಧಿಕಾರಿ ಆತ್ಮಹತ್ಯಗೆ ಶರಣಾಗಿದ್ದಾರೆ . ಹಿರಿಯ ಅಧಿಕಾರಿ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಯೊಂದಿಗೆ ಮತ್ತೊಮ್ಮೆ ರಾಜ್ಯದ ದುಷ್ಟ ಆಡಳಿತದ ಮುಖವಾಡ ಬಯಲುಗೊಂಡಿದೆ . ಪೊಲೀಸ್ ಅಧಿಕಾರಿಗಳಿಗೆ ಟಾರ್ಚರ್ ಕೊಡಲಾಗುತ್ತದೆ ಎನ್ನುವುದು ಈಗ ಹೊರ ಬಂದಿರುವ ಮಾಹಿತಿ ಅಲ್ಲ. ಈ ಹಿಂದೆ ಕೂಡ ಹಲವರುಘಟನೆಗಳು ಘಟಿಸಿತ್ತು. ಕೆಲವರು ಸಾವನ್ನಪ್ಪಿದ್ದರೇ. ಕೆಲವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೆಲವರ ಸಾವಿಗೆ ನಿರ್ಧಿಷ್ಟವಾದ ಕಾರಣ ಸಿಕ್ಕಿಲ್ಲ ..ಕಾರಣ ಹಿರಿಯ ಅಧಿಕಾರಿಗಳಿಗೆ ಟಾರ್ಚರ್ ಎಂಬ ಹಣೆ ಪಟ್ಟಿ ಇದ್ದಾರೂ ,ಹಲವರು ಬಹಿರಂಗ ಪಡಿಸದೇ ಇಹ ಲೋಕ ತ್ಯಜಿಸಿದ್ದರೆ , ಇನ್ನೂ ಹೆಚ್ಚಿನವರು ಎಲ್ಲವನ್ನೂ ನುಂಗಿ ಕೊಂಡು ಅನಿವಾರ್ಯವಾಗಿ ಮನೆ ಮಜ್ಜಿಗೆ ಮರದ ಅಡಿ ಕುಡಿಯ ಬಾರದೆಂದು ಜೀವನ ಸಾಗಿಸುತ್ತಿದ್ದಾರೆ .ಏನೇ ಇರಲಿ ಎಲ್ಲವೂ ಅವನ ಆಟ ..ನಿನ್ನೆಯ ಘಟನೆ ಬಗ್ಗೆ ಯೋಚಿಸಿದರೆ ತುಂಬಾನೇ ಬೇಸರವಾಗುತ್ತದೆ.ನಿನ್ನೆ ಆತ್ಮಹತ್ಯೆ ಶರಣಾಗುವ ಮುನ್ನ ಗಣಪತಿ ಸತ್ಯವನ್ನು ಹೊರಗೆಡವ ಬೇಕೆಂಬ ನಿಟ್ಟಿನಲ್ಲಿ ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಎಲ್ಲವನ್ನೂ ಎಳೆ- ಎಳೆಯಾಗಿ ವಿವರಿಸಿದ್ದರು .. ನನ್ನ ಸಾವಿಗೆ ಇಂತವರೇ ಕಾರಣ ಎಂದು ಕಡ್ಡಿ ತುಂಡು ಮಾಡಿದಂತೆ ಸತ್ಯವನ್ನೇ ಬೊಟ್ಟು ಮಾಡಿ ಮುಂಗಡವಾಗಿ ಕಕ್ಕಿದ್ದರು .. ಆದರೆ ಇಲ್ಲಿ ಆಗಿದ್ದು ಏನು ? ಎಲ್ಲಕ್ಕೂ ಸಾಕ್ಷಿ ಬೇಕೆಂಬ ನ್ಯಾಯಾಲಯದ ಬಯಕೆಗೆ ಒಂದು ಪಟ್ಟು ಹೆಚ್ಚೇ ಎಂಬಂತೆ ಸಾಕ್ಷಿ ಪುರಾವೆಗಳು ಚಿತ್ರಿಕರಿಲ್ಪಟ್ಟ ವಿಡಿಯೋದಲ್ಲಿ ಇದ್ದವು ..ಆದರೆ ಹೇಸಗೆ ಲಜ್ಜೆ ಗೆಡಿತನದ ದುಷ್ಟ -ಭಂಡ ರಾಜಕೀಯ ವ್ಯವಸ್ತೆಯಲ್ಲಿ ..ಅಪರಾಧಿಗಳಿಗೆ ಇದುವರೆಗೂ ಯಾವುದೇ ಕ್ರಮ ಕೈ ಕೊಳ್ಳದಿರುವುದು ವಿಪರ್ಯಾಸವೇ ಸರಿ !. ಏನ್ರೀ ಇದು ? ಬೇಲಿ ಕಾಯುವವರು ಬಿಡಿ, ಓಟು ಹಾಕಿ ಗೆಲ್ಲೀಸಿದ ನಮಗೆ ಕೂಡಾ ಒಂದು ಕಿಂಚಿತ್ ಹೋರಾಟದ ಮನೋ ಭಾವನೆ ಉಂಟಾಗದಿರುವುದು ಶೋಜಿಗ . ಕೇವಲ ಒಂದಷ್ಟು ಜನ ಬಾಯಿ ತೆರೆದದ್ದು ಸಮಾಧಾನಕರ ತಂದರೂ ವಿಪಕ್ಷಳು ಅವುಗಳ ಕುರ್ಚಿ ಭದ್ರತೆಗಾಗಿ ಮಜಾ ತೆಗೆದು ಕೊಂಡು ಸಂಕ ಮುರಿದಲ್ಲೇ ಸ್ನಾನ ಎನ್ನುವಂತೆ ಕಿಡಿಕಾರುವುದು ಬಿಟ್ಟರೆ ಫಲಿತಾಂಶ ಮಾತ್ರ ಶೂನ್ಯ !. ಹೋರಾಟ ಹರತಾಳ ಮಾಡಿದರೆ ಸತ್ತವರು ಎದ್ದು ಬರುತ್ತಾರೆ ಎಂಬ ಆಲೋಚನೆ ಅಲ್ಲ ಅಟಲಿಸ್ಟ್ ಮುಂದಿನ ಅಧಿಕಾರಿಗಳ ಸರದಿಗೆ ಪುಲ್ ಸ್ಟಾಪ್ ಬಯಸಬಹುದಲ್ಲ ಎಂಬ ಒಂದು ಆಶಯ ವಷ್ಟೇ . ಇನ್ನು ಅಪರಾಧಿಗಳಿಗೆ ನಮಲ್ಲಿ ಅಷ್ಟೇ ಶಿಕ್ಷೆ ಇದೆ ಅದು ಬಿಡಿ (!) ಕೇವಲ ಮಾವನ ಮನೆಗೆ ಹೋಗಿ ಬಂದ ರೀತಿಯಲ್ಲಿ ಸಕಲ ರಾಜ ಮಾರ್ಯಾದೆಯೊಂದಿಗೆ ಅವರಗಳ ಬಂಧನದ ಡ್ರಾಮ ಮುಕ್ತಾಯವಾಗುತ್ತದೆ . ಮತ್ತದೇ ರಾಗ ಮತ್ತದೇ ಹಾಡು ! ಆದರೆ ತಪ್ಪಿತಸ್ತರು ಮುಖವಾಣಿಗೆ ಬರಬೇಕು ಎನ್ನುವ ಇರಾದೆ ಅಷ್ತೆ .ಸಂತ್ರಸ್ತರ ಅನ್ಯಾಯಕ್ಕೆ ನಿರ್ದಿಷ್ಟ ಕಾರಣ ಗೊತ್ತಿದ್ದರೂ, ಸಿಬಿಐ ಸಿಐಡಿ ಎಂದೆಲ್ಲಾ ವರ್ಷಾನುಗಟ್ಟಲೆ ಎನ್ಕ್ವಯರಿ ಅದೂ ಇದೂ ಕಥೆ ಕಟ್ಟಿ ಸ್ವಲ್ಪ ದಿನಗಳಲ್ಲಿ ಎಲ್ಲ ನೆನಪುಗಳೂ ಮಾಸಿ ಬಿಡುತ್ತವೆ . ಇದಕ್ಕೆ ಇಂತ್ತದ್ದೆ ಕೆಲವು ಇತ್ತೀಚೆಗಿನ ನಡೆದ ಘಟನೆಯನ್ನು ನೆನಪು ಮಾಡಿ ಕೊಳ್ಳಿ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಒಬ್ಬ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದರು. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅಕ್ರಮ ಮರಳು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇಂಥಹ ಅಧಿಕಾರಿ 2014ರಲ್ಲಿ ನೇಣಿಗೆ ಶರಣಾಗಿದ್ದರು ಇದು ರಾಜ್ಯ ಮಾತ್ರವಲ್ಲ ದೇಶವನ್ನೇ ತಲ್ಲಣ ಗೊಳಿಸಿತ್ತು . ಕಾರಣ ಗೊತ್ತಿದ್ದೂ ಪ್ರಕರಣದ ಸಿಬಿಐ ಗೆ ವಹಿಸಲಾಗಿತ್ತು ತನಿಖೆ ಮುಂದುವರಿಯುತ್ತಿದೆ ಯಾವಾಗ ಕೊನೆ ಗೊಳ್ಳುತ್ತೋ ಗೊತ್ತಿಲ್ಲ !
ಮೊನ್ನೆ ಮೊನ್ನೆಯಷ್ಟೇ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಇವರ ವಿರುದ್ಧ ವ್ಯಕ್ತಿಯ ಕಿಡ್ನ್ಯಾಪ್ ಮಾಡಿ ಹಣ ಪಡೆದ ಆರೋಪವೂ ಸೇರಿ ಇಲ್ಲ -ಸಲ್ಲದ ಅದೂ- ಇದೂ ಇದು ಎಂದು ರೆಕ್ಕೆ ಪುಕ್ಕ ಕಟ್ಟಿ ಒಂದಷ್ಟು ದಿನ ಅಧಿಕಾರಿಯ ಮೇಲೆ ಗೂಬೆ ಕೊರಿಸಲಾಗಿತ್ತು .
ಆದರೆ, ಕಲ್ಲಪ್ಪ ಕುಟುಂಬ ಮಾತ್ರ ಎಸ್ಪಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎ0ದು ಬಿಗು ಪಟ್ಟು ಹಿಡಿದಾಗ ಸರ್ಕಾರ ಬೇರೆ ದಾರಿಕಾಣದೇ.ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಿತ್ತು ಹೇಗೋ ಏನು ತನಿಖೆ ಆರಂಭಗೊಂಡಿದೆ ಅಂತ್ಯ ಮಾತ್ರ ಗೊತ್ತಿಲ್ಲ .
ಇನ್ನೂ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಕೂಡ ದಕ್ಷತೆ ಯಿಂದ ಕಾರ್ಯ ನಿರ್ವಹಿಸಿದ ಅಧಿಕಾರಿ. ಕೂಡ್ಲಿಗಿ ಯಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮತ್ತು ಹಿತಕರ ಘಟನೆಯನ್ನು ಪತ್ತೆ ಹಚ್ಚಿ ಇದಕ್ಕೆ ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಸಾಥ್ ಇದೆ ಎಂಬ ವಿಷಯ ಬಹಿರಂಗ ವಾಗುತ್ತಿದಂತೆ , ಸಚಿವ ಅನುಪಮಾ ಶೆಣೈಯನ್ನು ತನ್ನ ಪವರ್ ಬಳಸಿ ಬಿಜಾಪುರಕ್ಕೆ ಎತ್ತಂಗಡಿ ಮಾಡಿಸಿದ್ದರು. ಸರಕಾರಕ್ಕೆ ಇದನ್ನು ಗಮನಕ್ಕೆ ತಂದರೂ ಪ್ರಯೋಜನ ಕಾಣದೇ ಇದ್ದಾಗ ನೇರವಾಗಿ ಅನಪಮಾ ಶೆಣೈ ರಾಜೀನಾಮೆ ನೀಡಿದ್ದರು . ಕಾರಣ ಪರಮೇಶ್ವರ್ ಟಾರ್ಚ್ರ್ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ . ಹೀಗೆ ರಾಜ್ಯದಲ್ಲಿ ಪ್ರಭಾವಿಗಳ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಒಂದೂ ಪ್ರಕರಣದಲ್ಲೂ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದ್ದು ಕಾಣುತ್ತಿಲ್ಲ ಎನ್ನುವುದು ನೋವಿನ ಸಂಗತಿ. ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ !
ಯಾಗಿದೆ ,, ಮುಂದೆ ಎಷ್ಟೋ ? ಪ್ರಜ್ಞಾವಂತರೆ ಎಚ್ಚರ ಗೊಳ್ಳಿ..ನಮಗೆ ರಕ್ಷಣೆ ನೀಡುವವರನ್ನು ನಾವು ನಾವು ರಕ್ಷಣೆ ನೀಡುವುದರಲ್ಲಿ ಏನು ತಪ್ಪು ..
ಸೋಮವಾರ, ಜೂನ್ 13, 2016
ವಿಪಕ್ಷಕ್ಕೆ ಗರಬಡಿದಿದ್ಯಾ? ಆಗಿದ್ದೇನು ? ಆಗುತ್ತಿರುವುದಾದರು ಏನು ? ದಿಟ್ಟ ಪೋಲಿಸ್ ಅಧಿಕಾರಿ ಅನುಪಮಾ ಶೆಣೈ ರಾಜೀನಾಮೆ ಸುತ್ತಾ !
ಡಿಕೆ ರವಿ ನಂತರ ಇಡೀ ಕರ್ನಾಟಕದ ಗಮನವನ್ನು ಸೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ, ಕೂಡ್ಲಿಯಡಿ ವೈಎಸ್ಪಿ ಅನುಪಮಾ ಶೆಣೈ !
ರಾಜ್ಯ ಕಾರ್ಮಿಕ ಹಾಗೂ ಅಲ್ಲಿನ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕರ ಫೋನ್ಕಾಲ್ ರಿಸಿವ್ ಮಾಡಿಲ್ಲ ಎಂಬೀ ಒಂದೇ ಒಂದು ಕಾರಣದಿಂದ ಕೊಡ್ಗಿ ಯಿಂದ ಬಿಜಾಪುರಕ್ಕೆ ಗ್ರಹ ಇಲಾಖೆಯ ಕ್ರಪೆಯಿಂದ ತನ್ನ ಪವರ್ ಬಳಿಸಿ ವರ್ಗಾವಣೆ ಮಾಡಲಾಗಿದೆ ಎಂದು ಹತಾಶೆಯಿಂದ ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಪ್ರಸ್ತುತ ಕೂಡ್ಲಿಯ ಡಿವೈಎಸ್ಪಿಯಾಗಿರುವ ಅನುಪಮಾ ಶೆಣೈ ರಾಜಿನಾಮೆ ನೀಡಿದ್ದಲ್ಲದೇ ಸೋಶಿಯಲ್ ನೆಟ್ವರ್ಕ್ ಮೂಲಕ ಸಚಿವರ ವಿರುದ್ಧ ರಣ ಕಹಾಳೆ ಮೊಳಗಿಸಿದ್ದರು. ಶೆಣೈಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಒಳ್ಳೆತನಕ್ಕೆ ಅವರಿಗೆ ನೈತಿಕ ಬೆಂಬಲ ವ್ಯಕ್ತವಾಗಿತ್ತು. ದಿಟ್ಟ ಪೋಲಿಸ್ ಅಧಿಕಾರಿ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ವಿಜಯಪುರದ ಇಂಡಿಗೆ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಈಡಾಗಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಕೂಡ್ಲಿ ಜನತೆ ಬಂದ್ ಕೂಡಾ ಆಚರಿಸಿದ್ದರು . ಸೋಷಿಯಲ್ ಮೀಡಿಯಾದಲ್ಲಿ ಅವರು ಪಡೆಯುತ್ತಿರುವ ಬೆಂಬಲ, ಜನಪ್ರಿಯತೆ ಬಿಟ್ಟರೆ ,ಹಾಲಿ ಸರ್ಕಾರ ದಿಂದ ಕಿಂಚಿತ್ ಬೆಂಬಲ ಬಿಡಿ .ವಿಚಾರವನ್ನು ತನಿಖೆಗೆ ಎತ್ತಿ ಕೊಳ್ಳುವ ಔದಾರ್ಯವನ್ನೂ ತೋರಲಿಲ್ಲ . ಇನ್ನೂ ವಿರೋಧ ಪಕ್ಷಗಳು ಸತ್ತು ಹೊಗಿವೆಯೋ ಎಂಬಂತೆ ವರ್ತಿಸಿವೆ .. ವಿರೋಧ ರಾಜಕೀಯ ಪಕ್ಷಗಳಲ್ಲೋ೦ದಾದ ಜೆಡಿಸ್ ನ ಕುಮಾರ ಸ್ವಾಮೀ ಎರಡು ದಿನ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ , ಬ್ರಹತ್ ಕೇಂದ್ರ ರಾಜಕೀಯ ಪಕ್ಷ ಬಿಜೆಪಿ ಮಾತ್ರ ಅತ್ತ ತಲೆ ಹಾಕಿ ಮಲಗಿ ಕೊಳ್ಳಲು ಸಾಧ್ಯವಾಗದ೦ತಾಯಿತು .. ಕೇವಲ ಕುರ್ಚಿ ಆಸೆಗಾಗಿ ಹಗಲು ರಾತ್ರಿ ಹೋರಾಟ ನೆಡಸುವ ಇವುಗಳು ಒಂದು ಹೆಣ್ಣು ಅದರಲ್ಲೂ ದಕ್ಷ -ದಿಷ್ಟ -ನಿಷ್ಟಾವ೦ತ ಪೋಲಿಸ್ ಅಧಿಕಾರಿಯ ಬೆಂಬಲಕ್ಕೆ ನಿಲ್ಲದಿರುವುದು ನಾಚಿಕೆ ,ಹೇಸಿಗೆಯ ಪರಮಾವಧಿ .!!
ಇನ್ನು ಆಡಳಿತ ಪಕ್ಷ ಗ್ರಹ ಇಲಾಖೆಗೆ ಮರ್ಯಾದೆ ಇಲ್ಲವೇ ?? ಕೇವಲ ವರ್ಗಾವಣಯನ್ನೇ ಮುಂದಿಟ್ಟು ಕೊಂಡು ಶೆಣೈ ರಾಜಿನಾಮೆ ನೀಡಿದರೆ ಅಥವಾ ಬೇರೆ ಏನಾದರೂ ಕಾರಣವಿದ್ದಿರಬಹುದೇ ? ಸಚಿವರು ಕೆಲವೊಂದು ಅವ್ಯಾಹತ ಚುಟುವಟಿಕೆಯಲ್ಲಿ ಭಾಗಿಯಾಗಿದ್ದರು ಅದನ್ನು ಪತ್ತೆ ಹಚ್ಚಿದ್ದ ಶೆಣೈ ಅವರು ಇದರಿಂದ ಮೇಲಿಂದ ಮೇಲೆ ಕಿರುಕುಳಕ್ಕೆ ಒಳಗಾಗಿ ರಾಜಿನಾಮೆ ಸಲ್ಲಿಸಿದ್ದಾರೆ ಎಂಬ ವಿಚಾರವೂ ವಿದೆ ಒಟ್ಟಾರೆ ಏನಾಗಿದೆ ಎಂಬ ವಾಸ್ತವ ಸಂಗತಿಯನ್ನು ಪತ್ತೆ ಮಾಡಿ ಅಧಿಕಾರಿಗೆ ನ್ಯಾಯ ದೊರಕಿಸಿ ಕೊಡಬೇಕಿತ್ತು..ಈರ್ವರನ್ನು ವಿಚಾರಣೆಗೆ ಒಳಪಡಿಸುವ ಗೌಜಿಗೆ ಸರ್ಕಾರ ಯಾಕೆ ಮುಂದಾಗಿಲ್ಲ ? ಇಲ್ಲಿ ತಪ್ಪಿತಸ್ತರು ಯಾರು ? ಇಲ್ಲಿ ಆಗಿದ್ದು ,ಆಗುತ್ತಿರುವುದಾದರು ಏನು ? ಸಾಕಷ್ಟು ಅನುಮಾನಗಳು ಮನದ ಪುಟದಲ್ಲಿ ಹೋಗೆಯಾಡುತ್ತಿವೆ.ಪರಮೇಶ್ವರ ನಾಯ್ಕ ವಿರುದ್ಧ ಡಿವೈಎಸ್ಪಿ ಅನುಪಮಾ ಶೆಣೈಯವರು ,ಸೋಶಿಯಲ್ ನೆಟ್ ವರ್ಕ್ ಗಳ ಮೂಲಕ ಮಾಡಿರುವ ಆರೋಪ ಸತ್ಯವೇ ಆಗಿದ್ದಲ್ಲಿ ದಾಖಲೆ ಏಕೆ ಬಿಡುಗಡೆ ಮಾಡುತ್ತಿಲ್ಲ? ಫೇಸ್ ಬುಕ್ ನಲ್ಲಿ ಹರಿಯಬಿಡುತ್ತಿರುವ ಸ್ಟೇಟಸ್ಸುಗಳು ಯಾರದ್ದು ? ಯಾಕಾಗಿ ? ಸಚಿವರ ವಿರುದ್ದ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಮಾಡುತ್ತಿರುವ ಟೀಕಾ ಪ್ರಹಾರಗಳನ್ನು ಗಮನಿಸುತ್ತಿದ್ದರೆ ಇಲ್ಲಿ ಏನೋ ಗಂಬೀರವಾದ ವಿಚಾರ ವಿದೆ ಎನ್ನಲು ಅಡ್ಡಿ ಇಲ್ಲ ?!
ತನ್ನನ್ನು ವರ್ಗಾವಣೆ ಮಾಡಿದ್ದ ದ್ವೇಷವನ್ನು ಮುಂದಿಟ್ಟುಕೊಂಡು ಅನುಪಮಾ ಅವರು ಹತಾಶೆಯ ನಿರ್ಧಾರ ತೆಗೆದುಕೊಂಡಿದ್ದಾರೆಯೇ?. ಅಥವಾ ಅವರ ರಾಜೀನಾಮೆ ಪ್ರಕರಣದ ಹಿಂದೆ ಬೇರೆ-ಬೇರೆ ರಾಜಕೀಯ ಶಕ್ತಿಗಳ ಕೈವಾಡವಿದೆಯೇ?. ಅವರು ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುವ ಉದ್ದೇಶ ಹೊಂದಿದ್ದಾರೆಯೇ? ರಾಜೀನಾಮೆ ಬಿಸಾಕಿ ಭೂಗತ ವಾಗಿದ್ದ ಅಧಿಕಾರಿ ಒಮ್ಮೇಲೆ ಪ್ರತ್ಯಕ್ಷವಾಗಿ ಮಾಧ್ಯಮಗಳ ಪ್ರಶ್ನೆಗೆ “ಪೇಸ್ ಬುಕ್ ನಂಗೆ ಎ೦ದ್ರೆ ಏನು ಅಂತ ಗೊತ್ತಿಲ್ಲ ಇದು ನಂದಲ್ಲ “ ಎಂದು ಹೇಳಿರುವ ಇವರ ಪೇಸ್ ಬುಕ್ ನ್ನು ಯಾರು ಉಪಯೋಗಿಸುತ್ತಿದ್ದಾರೆ ? ಇನ್ನೋ೦ಡೆದೆ ಸಚಿವರೂ ಸಹಾ ಪ್ರಕರಣದ ಕುರಿತು ಯಾವ ಸ್ಪಷ್ಟೀಕರಣವನ್ನೂ ನೀಡದೇ ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ . ಮೊದಲು ರಾಜಿನಾಮೆಯನ್ನು ಪಡೆಯದ ಸರ್ಕಾರ ನಿನ್ನೆ ಒಮ್ಮೆಲೇ ರಾಜಿನಾಮೆ ಪತ್ರವನ್ನು ಅ೦ಗೀಕರಿಸಿದ್ದರ ಒಳ ಮರ್ಮವೇನು ? ಒಟ್ಟಾರೆ ಜನರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಈ ಬಗ್ಗೆ ತನಿಖೆ ಮಾಡುವ ಅಧಿಕಾರ ಯಾರಿಗಿದೆ .. ಹಾಲಿ ಸರ್ಕಾರ ಮುಮ್ಮಲ ಮಲಗಿದೆ ..! ವಿಪಕ್ಷ ಇದ್ದೂ ಇಲ್ಲದ೦ತಿದೆ .. ಕೇವಲ ಬೆರಳಣಿಕೆ ಮ೦ದಿ ಮಾತ್ರ ಇದನ್ನು ಗಂಭೀರವಾಗಿ ತೆಗೆದು ಕೊಂಡು ಸತ್ಯಾಸತ್ಯತೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಅಷ್ಟೇ ..! ಏನೇ ಇರಲಿ ಒಳ್ಳೆಯವರಿಗೆ ಕಾಲವಿಲ್ಲ !
ಟಿಪ್ಪು –ತಪ್ಪು! ಏನೀದು ಟಿಪ್ಪು ಸುಲ್ತಾನ್ ಜಯಂತಿ.?
ಸ್ವಾಭಿಮಾನ, ಸಾಹಸ, ಶೌರ್ಯಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್ !ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಟಿಪ್ಪು ಸುಲ್ತಾನ್ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ, ನರಿಯಂತೆ ನೂರು ವರ್ಷ ಬದುಕುವ ಬದಲು ಹುಲಿಯಂತೆ ಮೂರು ವರ್ಷ ಬದುಕುತ್ತೇನೆ ಎಂದು ಗರ್ಜಿಸಿದ ಸಾಹಸಿ ಮೈಸೂರು ಹುಲಿ !
ಟಿಪ್ಪು ಸುಲ್ತಾನ್ ಅವರ ಜನ್ಮ ವಾರ್ಷಿಕೋತ್ಸವವನ್ನು ನಾಡಿನೆಲ್ಲೆಡೆ ಆಚರಿಸಲು ಕರ್ನಾಟಕ ಸರ್ಕಾರ ಇತ್ತೀಚಿಗೆ ನಿರ್ಧರಿಸಿತ್ತು ಇದರಿಂದ ಉಂಟಾದ ಗೊಂದಲ, ಗಲಭೆ, ಸಾವು ಎಲ್ಲವೂ ತಮಗೆ ಗೊತ್ತಿರುವುದೇ .. ಟಿಪ್ಪು ಜಯಂತಿ ಆಚರಿಸಬೇಕು ಬೇಡ ಎ೦ಬ ಪರ –ವಿರೋಧ ದ ಅಲೆಗಳ ಮಧ್ಯೆ ಅಂತೂ ಕೆಲೆವೆಡೆ ನೆರವೆರಿದ್ದು ಬೇರೆ ವಿಚಾರ .
ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಈ ವರ್ಷ ರಾಜ್ಯ ಸರ್ಕಾರ ತಕರಾರು ತೆಗೆದು ಬಹಳಷ್ಟು ಸಾವು ನೋವು ಗೊಂದಲಕ್ಕೆ ಕಾರಣವಾಯಿತು ,,ಕೋಮು ಸಾಮರಸ್ಯ ಕ್ಕ ಕೂಡಾ ಕಾರಣ ವಾಯಿತು .. ಟಿಪ್ಪು ಜನಿಸಿ ,ಮರಣ ಹೊಂದಿ ಅದೆಷ್ಟು ವರ್ಷಗಳು ಗತಿಸಿ ಹೋಗಿದೆ ಅದೆಷ್ಟೋ ಸರಕಾರ ಬಂದೂ ಹೋಗಿವೆ. ಆದರೆ ಈ ವರ್ಷ ಮಾತ್ರ ಸರಕಾರಕ್ಕೆ ಟಿಪ್ಪು ಸುಲ್ತಾನ್ ನೆನಪು ಆಗಿದ್ದೋ ಯಾಕೋ ?ಟಿಪ್ಪು ಜಯಂತಿ ಆಚರಣೆ ಒಳ್ಳೆದೇ ..ಮಾಡಬೇಕಾದ್ದು ನಮ್ಮ ಕರ್ತವ್ಯ ..ಎಲ್ಲದಕ್ಕೂ ,ಎಲ್ಲಾರಿಗೂ ಒನೊಂದು ದಿನ ಆಚರಣೆ ಇದೆ .. ಹಲವು ಧರ್ಮೀಯರ ನಾಡು ಭಾರತ ದೇಶ ಯಾವತ್ತೂ ಧರ್ಮ ಜನಾಂಗ ಎಂಬ ಬೇಧ ಭಾವನ್ನು ತೋರುವಂತಿಲ್ಲ ಸ೦ವಿಧಾನದ ನಿಯಮ .. ಆದರೆ ಇಷ್ಟು ದಿನ ಮಮ್ಮಲ ಮಲಗಿದ್ದ ಸರ್ಕಾರ ಈಗ ತಟ್ಟನೆ ನನೆಪಾಗಿದ್ದು ಯಾಕೆ ? ಇದು ಟಿಪ್ಪುಗೆ ಗೌರವ ಕ್ಕಿಂತ ಅಗೌರವ ಜಾಸ್ತಿ ಎನ್ನುವುದು ನನ್ನ ಕಲ್ಪನೆ . ಇನ್ನು ಟಿಪ್ಪು ಅಭಿಮಾನಿಗಳು ಟಿಪ್ಪು ಜಯಂತಿ ಆಚರಣೆ ಸರಿಯಾದದ್ದೆ ಎ೦ದು ಹೋರಾಟಕ್ಕೆ ಇಳಿದರೇ ವಿರೋಧಿಗಳು ಸಹಾ ಅಷ್ಟೇ ಹುಟ್ಟಿ ಕೊಂಡಿದ್ದ೦ತೂ ಸುಳ್ಳಲ್ಲ .. ಟಿಪ್ಪು ಮುಸಲ್ಮಾನನಾಗಿದ್ದು ಆತನ ಆಡಳಿತದಲ್ಲಿ ಸಾಕಷ್ಟು ನಡತೆ ಕೆಟ್ಟ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಶೀಲ ಹರಣ ಸೇರಿದಂತೆ , ಇಸ್ಲ್ಲಾಂ ಧರ್ಮಕ್ಕೆ ಆತ ಇತರ ಧರ್ಮೀಯರನ್ನು ಮತಾಂತರಗೊಳಿಸುತ್ತಿದ್ದ .. ಕ್ರೂರತನ ಸರ್ವಾದಳಿತ ಆತನಲಿತ್ತು ,ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಹಾಗಾಗಿ ಆತನ ಜನ್ಮ ದಿನವನ್ನು ಆಚರಿಸುವುದು ತಪ್ಪು ಎಂದು ಕಿರಿಕಾರಿದ್ದವು .. ಒಟ್ಟಾರೆ ಕೆಲವೆಡೆ ಆತನ ಬಗೆಗೆ ಉತ್ತಮ ಪ್ರಶಂಸೆ ಬಂದರೆ ಹಲವೆಡೆ ಗೊಂದಲ ಹರತಾಳಗಳೂ ಉ೦ಟಾಗಿದ್ದವು .
ಏನೆ ಇರಲಿ ಟಿಪ್ಪು ಬಗ್ಗೆ ಒಂದ್ಚೂರು :ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬಂದೂಕಿನ ಶಕ್ತಿಯಿಂದ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಬ್ರಿಟಿಷರ ವಿರುದ್ದ ಹೋರಾಡಿದವರಲ್ಲಿ ಪ್ರಮುಖ ಹೆಸರು ಟಿಪ್ಪು ಸುಲ್ತಾನ್. ತಮ್ಮ ನಿಜನಾಮಧೇಯ ಶೇರ್-ಎ-ಮೈಸೂರ್ !ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ನಿಂತು ಅವರ ಆಕ್ರಮಣವನ್ನು ಎದುರಿಸಿ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯತ್ನಿಸಿದ ಮಹಾನ್ ಪರಾಕ್ರಮಿಗಳಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲ ರಾಜರ ಮತ್ತು ಸಾಮಂತರಲ್ಲಿ ಒಗಟ್ಟು ಮೂಡಿಸಿ ಇಡಿಯ ದಕ್ಷಿಣ ಭಾರತವನ್ನೇ ಬ್ರಿಟಿಷರ ತೆಕ್ಕೆಯಿಂದ ರಕ್ಷಿಸಿಕೊಂಡ ಕಾರಣಕ್ಕಾಗಿಯೇ ಅವರಿಗೆ ಶೇರ್-ಎ-ಹಿಂದ್ (ಭಾರತದ ಹುಲಿ) ಎಂದು ಕರೆಯಲಾಗುತ್ತದೆ .
1750ರಲ್ಲಿ ಬೆಂಗಳೂರು ದೇವನಹಳ್ಳಿಯಲ್ಲಿ ಹೈದರಾಲಿ ಮತ್ತು ಫಾತಿಮಾ ಫಖರುನ್ನೀಸಾ ದಂಪತಿಯ ಮಗನಾಗಿ ಹುಟ್ಟಿದರು. ಆ ದಿನಗಳಲ್ಲಿ ಹೈದರಾಲಿ ಮೈಸೂರು ಸಂಸ್ಥಾನದ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹುಟ್ಟಿದಾಗ ಟಿಪ್ಪೂ ಸುಲ್ತಾನರಿಗೆ ಫತೇಹ್ ಅಲಿ ಎಂದು ನಾಮಕರಣವಾಗಿತ್ತು. ಬಳಿಕ ಹೈದರಾಲಿ ನಂಬುವ ಸಂತರಾದ ಸಂತ ಟಿಪ್ಪೂ ಮಸ್ತಾನ್ ಔಲಿಯಾರವರ ಗೌರವಾರ್ಥ ತಮ್ಮ ಮಗನನ್ನೂ ಟಿಪ್ಪೂ ಸುಲ್ತಾನ್ ಎಂದು ಕರೆಯತೊಡಗಿದರು. ವಾಸ್ತವವಾಗಿ ಟಿಪ್ಪೂ ಸುಲ್ತಾನ್ ಎಂಬುದು ಅವರನ್ನು ಕರೆಯುವ ಹೆಸರಾಗಿದೆ, ಅವರ ನಿಜನಾಮಧೇಯ ಸುಲ್ತಾನ್ ಫತೇಹ್ ಅಲಿ ಖಾನ್ ಶಹಾಬ್ ಎಂದಾಗಿದೆ.
ಟಿಪ್ಪು ಸುಲ್ತಾನನ ಜನನದ ಬಳಿಕ ಹೈದರಾಲಿಯ ವೃತ್ತಿಜೀವನದಲ್ಲಿ ಏಳ್ಗೆ ಕಾಣುತ್ತಾ ಹೋಗಿತ್ತು. ಮುಂದಿನ ಹನ್ನೊಂದು ವರ್ಷಗಳಲ್ಲಿ ಹಂತಹಂತವಾಗಿ ಮೇಲೇರಿದ ಅವರು 1761ರಲ್ಲಿ ಮೈಸೂರು ಸಂಸ್ಥಾನದ ಆಡಳಿತಗಾರರಾಗಿ ನೇಮಕಗೊಂಡರು. ಅಂದಿನ ದಿನಗಳಲ್ಲಿ ಹೈದರಾಲಿ ಫ್ರೆಂಚ್ ಸರ್ಕಾರದೊಂದಿಗೆ ಹೆಚ್ಚು ವ್ಯವಹಾರ ನಡೆಸುತ್ತಿದ್ದರು. ಇದೇ ಮೈತ್ರಿಯಿಂದ ಟಿಪ್ಪೂ ಸುಲ್ತಾನರಿಗೆ ಫ್ರೆಂಚ್ ವಿಶ್ವವಿದ್ಯಾಲಯದಲ್ಲಿ ರಾಜತಾಂತ್ರಿಕ ಮತ್ತು ರಾಜ್ಯಾಡಳಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ದೊರಕಿತು.
ಮುಂದಿನ ನಾಲ್ಕು ವರ್ಷಗಳ ಕಾಲ ಅಂದಿನ ದಿನಗಳಲ್ಲಿ ಲಭ್ಯರಿದ್ದ ಅತ್ಯಂತ ದಕ್ಷರಾದ ಶಿಕ್ಷಕರಿಂದ ಅವರು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆದರು. ರಾಜತಾಂತ್ರಿಕ ವಿಷಯದ ಜೊತೆಗೇ ಕುದುರೆಸವಾರಿ, ಕತ್ತಿವರಸೆ, ಬಂದೂಕು ಚಲಾಯಿಸುವಿಕೆ ಮೊದಲಾದ ವಿದ್ಯೆಗಳಲ್ಲೂ ಪಾರಾಂಗತರಾದರು. 1765ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಟಿಪ್ಪೂ ಸುಲ್ತಾನ್ ಮಾಡಿದ ಮೊದಲ ಕೆಲಸವೆಂದರೆ ಮಲಬಾರ್ ಪ್ರಾಂತದ ಸಾಮಂತರ ವಿರುದ್ಧ ಯುದ್ಧ ಮಾಡಿ ಸಾಮಂತ ಮತ್ತು ಅವರ ಕುಟುಂಬವನ್ನು ವಶಕ್ಕೆ ಪಡೆದುಕೊಂಡಿದ್ದು. ಆಗ ಅವರ ವಯಸ್ಸು ಕೇವಲ ಹದಿನೈದು ವರ್ಷ!ಅಪ್ಪಟ ಕನ್ನಡ ಭಾಷಾಭಿಮಾನಿ ಯಾದ, ಮಾತೃಭೂಮಿ ರಕ್ಷಣೆಗಾಗಿ ಸ್ವಂತ ಮಕ್ಕಳನ್ನು ಬ್ರಿಟೀಷರಲ್ಲಿ ಒತ್ತೆಯಿಟ್ಟಿ ಟಿಪ್ಪು ಸುಲ್ತಾನ್ ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಎ೦ದು ಇತಿಹಾಸ ಕಾರರಲ್ಲಿ ಕೆರೆಯಿಸಿ ಕೊಂಡಿದ್ದಾನೆ ಬಹು ಸಂಸ್ಕೃತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು. ತನ್ನ ಸಾಮ್ರಾಜ್ಯದಲ್ಲಿದ್ದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದವರಿಗೆ ಶಿಕ್ಷಣ ಕೊಡಿಸಿದ ಮಹಾನುಭಾವ ಎನ್ನಲಾಗುತ್ತಿದೆ .ಹದಿನೆಂಟನೆಯ ಶತಮಾನದ ಇತಿಹಾಸವನ್ನು ಪರಿಗಣಿಸಿದರೆ ಭಾರತದಾದ್ಯಂತ ರಾಜರ, ಸಾಮಂತರ ಆಳ್ವಿಕೆ ಜಾರಿಯಲ್ಲಿತ್ತು. ವೈರತ್ವ ಮತ್ತು ಮಿತೃತ್ವಗಳನ್ನು ನಿಭಾಯಿಸಲು ಯುದ್ಧಗಳು ನಡೆಯುವುದು ಸಾಮಾನ್ಯವಾಗಿತ್ತು. ಇಬ್ಬರು ಸ್ನೇಹಿತರ ನಡುವೆ ವೈರತ್ವ ಹುಟ್ಟುಹಾಕಿ ಇಬ್ಬರ ಜಗಳದಿಂದ ಲಾಭ ಪಡೆಯುವ 'ಒಡೆದು ಆಳುವ ನೀತಿ'ಯನ್ನು ಅನುಸರಿಸಿದ ಬ್ರಿಟಿಷರು ತಮ್ಮ ಯೋಜನೆಯಲ್ಲಿ ಬಹುತೇಕ ಯಶಸ್ವಿಯೂ ಆದರು. ಆದರೆ ಉತ್ತರ ಭಾರತವನ್ನು ಸುಲಭವಾಗಿ ಆಕ್ರಮಿಸಿದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಟಿಪ್ಪೂ ಸುಲ್ತಾನನ್ನು ಎದುರಿಸಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಟಿಪ್ಪು ಸಾಹೇಬ್ ಎಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಅಂದಿನ ದಕ್ಷಿಣದ ಪ್ರಾಂತಗಳಾದ ಮದ್ರಾಸ್ ಮತ್ತು ಮಂಗಳೂರು ಪ್ರಾಂತಗಳನ್ನು ಮೊದಲ ಮತ್ತು ಎರಡು ಅಂಗ್ಲೋ ಮೈಸೂರ್ ವಾರ್ (ಅಥವಾ ಅಂಗ್ಲ-ಮೈಸೂರು ಯುದ್ದ) ಗಳಲ್ಲಿ ಬ್ರಿಟಿಷರ ವಿರುದ್ಧ ಸೆಣೆಸಿ ಉಳಿಸಿದ್ದರು.1782ರ ಡಿಸೆಂಬರ್ ಆರರಂದು ಹೈದರಾಲಿ ಚಿತ್ತೂರಿನಲ್ಲಿ ವಿಧಿವಶರಾದರು. ನಂತರ ತಂದೆಯ ಸ್ಥಾನವನ್ನು ಅಲಂಕರಿಸಿದ ಟಿಪ್ಪು ಮೈಸೂರಿನ ರಾಜರಾಗುವ ಮೊದಲೇ ಮೊದಲ ಮತ್ತು ಎರಡನೇ ಅಂಗ್ಲೋ ಮೈಸೂರು ಯುದ್ಧಗಳನ್ನು ಜಯಿಸಿದ ಅನುಭವ ಪಡೆದಿದ್ದರು. ಆದರೆ ಇಡಿಯ ಭಾರತವನ್ನೇ ಜಯಿಸುವ ಮಹತ್ವಾಕಾಂಕ್ಷೆಯಿಂದ ಆಗಮಿಸಿದ್ದ ಬ್ರಿಟಿಷರ ವಿರುದ್ದ ಹೋರಾಡುವುದು ಬಹಳ ಕಷ್ಟ ಎಂದು ಅವರು ಅರಿತಿದ್ದರು. ಹೈದರಾಲಿಯ ಸಮಯದಲ್ಲಿಯೇ ಈ ಕ್ಷಿಪಣಿಗಳನ್ನು ಉಪಯೋಗಿಸಲಾಗಿದ್ದರೂ ತಂತ್ರಜ್ಞಾನದಲ್ಲಿ ಮತ್ತು ಕ್ಷಮತೆಯಲ್ಲಿ ಹಿಂದಿದ್ದವು. ಟಿಪ್ಪುಸುಲ್ತಾನ ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿಗಳು ತಮ್ಮೊಂದಿಗೆ ಚೂಪಾದ ಬಾಣಗಳಂತಿರುವ ಲೋಹದ ತುಂಡುಗಳನ್ನೂ ಕೊಂಡೊಯ್ದು ವೈರಿಗಳ ತಲೆ ಅಥವಾ ಶರೀರವನ್ನು ಸೀಳಿ ಬಿಡುತ್ತಿದ್ದವು.ಈ ಕ್ಷಿಪಣಿಗಳನ್ನು ಸೂಕ್ತವಾಗಿ ಬಳಸಲು ಇಡಿಯ ಮೈಸೂರು ಸಂಸ್ಥಾನದಲ್ಲಿ ಇಪ್ಪತ್ತನಾಲ್ಕು ಕುಶೂನ್ (cushoon) ಎಂಬ ಕ್ಷಿಪಣಿಪಡೆಗಳನ್ನು ರಚಿಸಿ ಪ್ರತಿ ಪಡೆಯಲ್ಲಿಯೂ ಈ ಕ್ಷಿಪಣಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇನ್ನೂರು ನುರಿತ ಮತ್ತು ತರಬೇತಿ ಪಡೆದ ನಂಬಿಗಸ್ತ ಸೈನಿಕರನ್ನು ನಿಯೋಜಿಸಿದ. ಅಲ್ಲದೇ ಈ ಕ್ಷಿಪಣಿಗಳನ್ನು ಹೇಗೆ ಬಳಸಬೇಕು, ಯಾವ ತಂತ್ರವನ್ನು ಹೂಡಬೇಕು ಎಂದು ವಿವರಿಸುವ ಯುದ್ಧತಂತ್ರದ ವಿವರಗಳನ್ನು 'ಫತಹುಲ್ ಮುಜಾಹಿದೀನ್' ಎಂಬ ಗ್ರಂಥದಲ್ಲಿ ಸ್ವತಃ ಬರೆದು ಪ್ರಕಟಿಸಿದ್ದರು. ಈ ಗ್ರಂಥದಲ್ಲಿ ವಿವರಿಸಿದ ಯುದ್ಧತಂತ್ರಗಳನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪೂವಿನ ಸೈನ್ಯ ಸಮರ್ಥವಾಗಿತ್ತು. ಆದರೆ ದುರಾದ್ರಷ್ಟವಷತ್ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿ ಮೋಸ ದಿಂದ ಟಿಪ್ಪು ವೀರ ಮರಣ ವನ್ನು ಒಪ್ಪಬೇಕಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ಬುಧವಾರ, ಮೇ 25, 2016
ಓದುದರ್ಲ್ಲೂ ಪಶ್ಟ್ ! ಓಡುವುದರ್ಲೂ ಪಶ್ಟ್ !-ಕುಗ್ರಾಮದ ಕುಹರಿ ಶ್ರೀದೇವಿಯ ಕಹಾನಿ !
ಕುಂದಾಪುರ : ತಾಲೋಕಿನ ಹೊಸಂಗಡಿ ಪ್ರೌಢ ಶಾಲೆ ವಿಧ್ಯಾರ್ಥಿನಿ ಶ್ರೀದೇವಿ ಆಟ -ಓಟ -ಪಾಠವೂ ಸೇರಿದಂತೆ ಸಾಂಸ್ಕ್ರತಿಕ ಚಟುವಟಿಕೆಯಲ್ಲೂ ಕೈಯಾಡಿಸಿ ಸಕ್ಸಸ್ ಕಂಡ ಸಾಹಸಿಗಳ ಪೈಕಿ ಒಬ್ಬಳಾಗಿದ್ದಾಳೆ !
ಕಲಿಕೆಯಲ್ಲೂ ಹಿಂದಿರದ ಜಾಣೆ ..ಗ್ರಾಮೀಣ ಪರಿಸರದ ಈ ಬಹುಮುಖ ಪ್ರತಿಭೆ :
ಶೈಕ್ಷಣಿಕವಾಗಿ ಪ್ರಾಥಮಿಕ ಶಾಲೆಯಿಂದ ಉನ್ನತ ಸ್ತರದಲ್ಲೇ ವ್ಯಾಸಂಗ ಮಾಡುತ್ತಾ ಬಂದಿರುವ ಈಕೆ ಎಂದಿನ ಎಣಿಕೆಯ೦ತೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 93ಫಲಿತಾಂಶವನ್ನು ಪಡೆದು ಹೊಸಂಗಡಿ ಪ್ರೌಢ ಶಾಲೆಗೆ ಮೊದಲಿಗಳಾಗಿದ್ದಾಳೆ . ಪ್ರತಿಭಾ ಕಾರಂಜಿ ಎಂಬ ಸಾಂಸ್ಕ್ರತಿಕ ಸ್ವರ್ಧೆಯಲ್ಲಿ ಪ್ರಶಸ್ತಿಗಳ ಮಹಾಪೂರವನ್ನು ಬಾಚಿ ಕೊಂಡು ಸೈ ಯೇನಿಸಿಕೊಂಡು ಜನ ಮೆಚ್ಚುಗೆ ಗಳಿಸಿದ್ದಲ್ಲದೇ,ಕ್ರೀಡಾರಂಗದಲ್ಲೂ ಎತ್ತಿದ ಕೈ ! ಕಳೆದ ಕೆಲವು ಸಮಯಗಳ ಹಿಂದೆ ನಡೆದ 100/ 200 ಮೀ . ಹಡ್ಸಲ್ ಓಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಳು . ಜಿಲ್ಲಾ ಮಟ್ಟದಲ್ಲಿ ಸೆಣೆಸಿದ ಖೋ ಖೋ ಮತ್ತು ಕಬ್ಬಡಿ ಹೊಸಂಗಡಿ ಪ್ರೌಢ ಶಾಲೆಯ ಟೀಮ್ ಕ್ಯಾಪಟನ್ ಕೂಡ ಆಗಿ ಚಾಂಪಿಯನ್ ಪಟ್ಟವನ್ನೂ ಗಿಟ್ಟಿಸಿ ಕೊಂಡವಳು ..ಹಾಗೂ ಕರಾಟೆ ಪಟುವೂ ಹೌದು !!
ಕುಗ್ರಾಮದ ಕುಹರಿ ಶ್ರೀದೇವಿ:ತನ್ನ ಅಪಾರಿಮಿತ ಸ್ಪರ್ಧಾತ್ಮಕ ಬಹು ಪ್ರತಿಭೆಯನ್ನು ಹೊಂದಿರುವ ಶ್ರೀದೇವಿ
ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ‘ಮುತ್ತಿನಕಟ್ಟೆ’ ಎಂಬ ಕುಗ್ರಾಮದಲ್ಲಿ ನೆಲೆಸಿರುವ ಕ್ರಷಿ ಕುಟುಂಬದ ಶ್ರೀಕಾಂತ್ ಗೊಲ್ಲ ಹಾಗೂ ಶಿಲ್ಪಾ ದಂಪತಿಯ ಪುತ್ರಿ. ಯಾವುದೇ ಪ್ರೋತ್ಸಾಹ ವಿಲ್ಲದೇ ಪೋಷಕರ ಬೆಂಬಲದಿಂದ ತನ್ನ ಪ್ರತಿಭೆಯನ್ನು ತೋರ್ಪಡಿಸುತ್ತಾ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಿ ಗುರು ವಿಲ್ಲದೇ ಗುರಿಯತ್ತ ದ್ರಷ್ಟಿಯನ್ನಿಟ್ಟಿ ಶ್ರೀದೇವಿಯ ಆಕಾಂಕ್ಷೆಗೆ ನೆರವಾಗಿದ್ದೂ , ಹೊಸಂಗಡಿಯ ಸಾಕಷ್ಟು ಕ್ರೀಡಾಳುಗಳನ್ನ ರಾಜ್ಯಕ್ಕೆ ಪರಿಚಯಿಸಿದ ಕೀರ್ತಿಯನ್ನು ಹೊಂದಿರುವ ಕ್ರೀಯಾಶೀಲ ವ್ಯಕ್ತಿ ದೈಹಿಕ ಶಿಕ್ಷಕರಾಗಿರುವ ಶ್ರೀ ಸುಕುಮಾರ್ ಶೆಟ್ಟಿಯವರು. ಆಸೆಗೆ ನೀರೆರದು ತರಬೇತಿಯನ್ನು ನೀಡಿದರು . ಕೇವಲ ಕ್ರೀಡೆಯನ್ನೇ ಬಂಡವಾಳ ವಾಗಿಸಿಕೊಳ್ಳ ಶ್ರೀದೇವಿ ಓದಿಗೂ ಕೊಂಚ ಬ್ರೇಕ್ ಕೊಡದೇ ಕಲಿಕೆಯನ್ನೂ ಸಮತೋಲನದಲ್ಲಿ ಇಟ್ಟುಕೊಂದ್ಡಿದ್ದೆ ಭವಿಷ್ಯ ಎಸೆ ಎಸ್ ಎಲ್ ಸಿ ಯಲ್ಲಿ ತಮ್ಮ ಶಾಲೆಯೇ ತಾಪರ್ ಆಗಿದ್ದನ್ನು ನೆನಪಿಸ ಬಹುದಾಗಿದೆ! ಒಟ್ಟಾರೆ ಮೂರುವರ್ಷಗಳ ಇವಳ ಸಾಧನೆಯ ಸಾಹಸಿಹಾದಿ ಇಲ್ಲಿ ಇದೆ ನೋಡಿ
ಯ :
2013-2014 ಸಾಲಿನ 8ನೇ ತರಗತಿಯಲ್ಲಿ ವಿಧ್ಯಾಭಾಸ್ಯ ಮಾಡುತ್ತಿರುವ ಸಂದರ್ಭ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಿದ್ದಳು . ಹಾಗೆಯೇ ಸಿದ್ದಾಪುರ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿ ನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದರೆ ,ಭಾಷಣ ಮತ್ತು ಕೋಲಾಟದಲ್ಲಿ ತ್ರತಿಯ ಸ್ಥಾನ ಪಡೆದ್ದಿದ್ದಳು . ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200ಮೀ . ಹರ್ಡ್ಸಲ್ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ . ಹಾಗೂ 4* 100 ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ ಕೀರ್ತಿಗೆ ಭಾಜನಳಾಗಿದ್ದಳು.ಅಂತೆಯೇ ಕೊಲ್ಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 100ಮೀ .ಮತ್ತು ಹರ್ಡ್ಸಲ್ ಸ್ಪರ್ದೆಯಲ್ಲಿ ತ್ರತಿಯ ಹಾಗೂ 200 ಮೀ . ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಳು .
2014 -15 ರ ಸಾಲಿನ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ 100ಮೀ .ಓಟದಲ್ಲಿ ದ್ವಿತೀಯ ಸ್ಥಾನ 4* 100 ಮೀ. 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ 4*100 ಮೀ. 200 ಮೀ. ಓಟದಲ್ಲಿ ತ್ರತಿಯ ಸ್ಥಾನ ಹಾಗೂ 4*400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ .ಹಾಗೆಯೇ ಕುಂದಾಪುರದಲ್ಲಿ ನಡೆದ ಪೈಕಾ ಗ್ರಾಮೀಣ ಕ್ರೀಡಾ ಕೂಟದಲ್ಲಿ 100ಮೀ ಓಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಜೊತೆಗೆ 4*400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ ಹಾಗೂ ತ್ರತಿಯ ಸ್ಥಾನ ಪಡೆದಿದ್ದಾಳೆ . ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ನಾಟಕ ಸ್ಪರ್ದೆ ಯಲ್ಲಿ ಪ್ರಥಮ ಹಾಗೂ ಕನ್ನಡ ಭಾಷಣದಲ್ಲಿ ಧ್ವಿತಿಯ ಸ್ಥಾನ ಪಡೆದಿದ್ದಳು
ಹಾಗೆಯೇ ತೆಕ್ಕೆಟ್ಟೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕ್ಯಾಪ್ಟನ್ ಸ್ಥಾನದಲಿದ್ದು ,ದ್ವಿತೀಯ ಸ್ಥಾನವನ್ನೂ ಪಡೆದು ಉತ್ತಮ ದಾಂಡುಗಾರ್ತಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದ್ದಳು ,ಅಲ್ಲದೇ ಕುಂದಾಪುರದಲ್ಲಿ ನಡೆದ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ. ಹರ್ಡ್ಸಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೋಕು ಚಾಂಪಿಯನ್ ಆಗಿ ಹೊರಹೊಮ್ಮಿದ್ದಳು .
2015-16 ನೆ ಸಾಲಿನ ಕುಂದಾಪುರದಲ್ಲಿ ನಡೆದ ಪೈಕಾ ಕ್ರೀಡಾ ಕೂಟದಲ್ಲಿ 100ಮೀ . 4*400 ಮೀ. 4*400 ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪೈಕಾ ಕ್ರೀಡಾ ಕೂಟದಲ್ಲಿ 100 ಮೀ. ಓಟದಲ್ಲಿ ಪ್ರಥಮ 4*400 ಮೀ . ರಿಲೆಯಲ್ಲಿ ದ್ವಿತೀಯ ಸ್ಥಾನ 4*100ಮೀ. ರಿಲೆಯಲ್ಲಿ ತ್ರತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಹಾಗೆಯೇ ಸಿದ್ದಾಪುರದಲ್ಲಿ ನಡೆದ ಕ್ಲಷ್ಟೇರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ , ಭಾಷಣಾ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು , ವಲಯ ಮಟ್ಟದ ನಾಟಕ ಸ್ಪ್ರರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ . ಹಾಗೇಯೇ ಕುಂದಾಪುರ ತಾಲೋಕು ಮಟ್ಟದ ಕ್ರೀಡಾ ಕೂಟದಲ್ಲಿ 100 ಮೀ . 200 ಮೀ . 4*400 ಮೀ ರಿಲೆಯಲ್ಲಿ ಪ್ರಥಮ ಹಾಗೂ ಹರ್ಡ್ಸಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ ಅಲ್ಲದೇ ಬೈಲೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ ಹರ್ಡ್ಸಲ್ ನಲ್ಲಿ 100 ಮೀ. ಪ್ರಥಮ 200 ಮೀ. ಹರ್ಡ್ಸಲ್ 4*400 ಮೀ ರಿಲೆ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಶಂಕರನಾರಾಯಣ ದಲ್ಲಿ ನಡೆದ ತಾಲೋಕು ಮಟ್ಟದ ಖೋ ಖೋ ಪಂದ್ಯಾಟ ಕ್ಯಾಪ್ಟನ್ ಆಗಿ ಪ್ರಥಮ ಸ್ಥಾನ ಪಡೆದು ಹೆಬ್ರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಚಿಕ್ಕ ಮಗಳೂರಿನಲ್ಲಿ ನಡೆದ ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ ಹಾಗೂ ತಾಲೋಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ್ದಾಳೆ ಇಷ್ಟು ಮಾತ್ರ ವಲ್ಲದೇ ಶಾಲಾ ವಾರ್ಷಿಕ ಕ್ರೀಡಾ ಕೂಟದ ಚಾಂಪಿಯನ್ ಆಗಿ ಮೂಡಿ ಬಂದಿದ್ದಾಳೆ.
ಏನೆ ಇರಲಿ ಅದ್ಭುತ ಪ್ರತಿಬೆ ಗೆ ಪ್ರೋತ್ಸಾಹ ದೊರಕಲಿ , ಮುಂದು ಸಹಾ ಈ ಕೀರ್ತಿ ಪತಾಕೆ ಹಾರುತ್ತಿರಲಿ . ಉಜ್ವಲ ಭವಿಷ್ಯದಲ್ಲಿ ಬಯಸಿದ್ದೆಲ್ಲ ಸಿಗಲಿ ಎಂಬ ಹಾರೈಕೆ ನಮ್ಮದು .
ಶನಿವಾರ, ನವೆಂಬರ್ 28, 2015
ಜನ ಪ್ರತಿನಿಧಿಗಳೇ ಶೇಮ್ ! ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ !
ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬರ್ಭರವಾಗಿ ಹಾಡು ಹಗಲೇ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು . ಆಡಳಿತ ರೂಢ ಕಾಂಗ್ರೆಸ್ ಪಾಳಯದ ಸರ್ಕಾರಕ್ಕೆ ಪ್ರಶಾಂತ್ ಪೂಜಾರಿ ಕೊಲೆ ಎಂಬುದು ಬೀದಿ ನಾಯಿ ಸತ್ತಂತ ಬುದ್ದಿ ಮತ್ತೆಯನ್ನು ಹೊಂದಿದೆ , ಶೇಮ್ ಎನ್ನಬೇಕು ಕರಾವಳಿಯ ಕಾಂಗ್ರೆಸ್ ತನ್ನನ್ನು ತಾನೇ ನಡುಬೀದಿಯಲ್ಲಿ ನಗ್ನವಾಗಿಸಿ ಜನರಿಂದ ಶೇಮ್ ಎನಿಸಿಕೊಳ್ಳುತ್ತಿದೆ. ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ , ಕರಾವಳಿಯ ಐದು ಜನರ ಪೈಕಿ ಯಾವೊಬ್ಬನೋ ಸಹಾ ಅತ್ತ ತಲೆ ಹಾಕಿ ಮಲಗಿಲ್ಲ ಮೂಡಬಿದಿರೆಯ ಕಾಂಗ್ರೆಸ್ ಶಾಸಕ ಮತ್ತು ಸಚಿವ ಅಭಯಚಂದ್ರ ಜೈನ್ ಕೊಲೆಯಾದ ಪ್ರಶಾಂತ್ ಮನೆಗೆ ಭೇಟಿಯೂ ನೀಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ಸೌಜನ್ಯಕ್ಕೂ ಈ ಘಟನೆಯನ್ನು ಖಂಡಿಸಿಲ್ಲ ಮತ್ತು ಪ್ರಶಾಂತ್ ತಂದೆ ತಾಯಿಯನ್ನು ಮಾತಾಡಿಸಿಲ್ಲ. ಇದು ನಿಜಕ್ಕೂ ಅಮಾನವೀಯ. ಕೊಲೆಯಾದವನ ಸಿದ್ಧಾಂತ ಏನೇ ಇರಲಿ ತನ್ನೂರಿನ ಒಬ್ಬ ಹುಡುಗ ಕೊಲೆಯಾಗಿದ್ದಾನೆ, ಕಾನೂನು ಬಾಹಿರ ಕೃತ್ಯವೊಂದು ನಡೆದಿದೆ. ಅದನ್ನು ಶಾಸಕ ಮತ್ತು ಮಂತ್ರಿ ಖಂಡಿಸಬೇಕಿತ್ತು. ತಂದೆತಾಯಿಗೆ ಸಾಂತ್ವನ ಹೇಳಬೇಕಿತ್ತು. ಅಟ್ ನೀಸ್ಟ್ ತಮ್ಮ ಎಂದಿನ ಮೊಸಳೆ ಕಣ್ಣೀರನ್ನದರೂ ಹಾಕಿ ಕೈ ತೊಳೆದು ಕೊಳ್ಳ ಬಹುದಾಗಿತ್ತು .. ಛೆ !ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ !.. ರಾಜಕೀಯ, ಸಿದ್ಧಾಂತ ಭೇದ ಏನೇ ಇರಲಿ ಓರ್ವ ಸರ್ಕಾರದ ಮತ್ತು ಜನರ ಪ್ರತಿನಿಧಿಯಾಗಿದರೂ ಪ್ರಶಾಂತ್ ಮನೆಗೆ ಹೋಗಲೇಬೇಕಿತ್ತು. ಎಂತೆಂತಹ ರೌಡಿ ಶೀಟರ್‌ಗಳು, ಕೊಲೆಗಡುಕರೆಲ್ಲ ಸತ್ತಾಗ ಕಾಂಗ್ರೆಸಿಗರು ಅವರ ಮನೆಗೆ ಹೋಗಿಲ್ಲವೆ? ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲವೆ? ಕುಟುಂಬದವರಿಗೆ ಸಾಂತವನ ಹೇಳಿಲ್ಲವೆ? ಹಾಗಾದರೆ ಪ್ರಶಾಂತ್ ಪೂಜಾರಿಯ ಮನೆಗೆ ಹೋಗಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ,ತನಿಖೆಯ ಭರವಸೆ ನೀಡಬಹುದದಿತ್ತು? ದನಗಳ್ಳ ಕಬೀರ್ ಕ್ಕಿಂತಲೂ ಈತ ಕಡೇಯಾದನೇ ?! ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮಾತಾಡಬೇಕಿದೆ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)









