ಭಾನುವಾರ, ಅಕ್ಟೋಬರ್ 5, 2014

ಪ್ರಾಣಕ್ಕೆ ಎರವಾಯಿತೇ ಫೋಟೋ ತೆಗೆಯೋ(ಸೋ ) ಹುಚ್ಚು ?!

ಹೌದು ! ಫೋಟೋ ತೆಗೆಯೋ ಹುಚ್ಚು ಹಾಗೆ ಫೋಟೋಗೆ ಪೋಸ್ ಕೊಡೋ  ಹುಚ್ಚು ನಮ್ಮಲ್ಲಿ ಬಹಳಷ್ಟು , ನಾನಾ ರೀತಿಯಲ್ಲಿ ಬಳಕೆ ಯಲ್ಲಿದೆ .... ನಾವ್ ತೆಗೆಯೋ ಚಿತ್ರ ಚೆನ್ನಾಗಿ ಬರಬೇಕು , ಯಾರೂ ಮಾಡದ ಸಾಹಸಕ್ಕೆ ಕೈ ಹಾಕಬೇಕು ಎಂದು ಸಾಕಷ್ಟು ಛಾಯಾ ಗ್ರಾಹಕರೂ ಸೇರಿದಂತೆ ಕೆಮರಾ ಹಿಡಿಯುವ ಸಾಕಷ್ಟು ಮಂದಿಯ ಆಲೋಚನೆ ಇದೆ ಆಗಿರುತ್ತದೆ ..ಇಂಥ ಸಾಕಷ್ಟು ಸರ್ಕಸ್ ಸಾಹಸದಲ್ಲಿ , ಪ್ರಾಣಿಗಳ ಬಾಯಿಗೆ ಆಹಾರ ವಾದ , ಪ್ರಕ್ರತಿಯ ಹೊಡೆತಕ್ಕೆ ಸಿಲುಕಿ ಸತ್ತವರ ಸಂಖ್ಯೆ ನಮ್ಮಲ್ಲಿ ಬಹಳಷ್ಟು ಜನರ ಉದಾಹರಣೆ ಇದೆ.. ಸಾಧನೆಯ ನಾಗಾ ಲೋಟದಲ್ಲಿ ಕೊನೆ ಉಸಿರು ಎಳೆದವರ ವಿಚಾರ ಒತ್ತಟ್ಟಿಗಿರಲಿ ,, ದರೆ  ತಮ್ಮಗಳ ಫೋಟೋ ಬಾರಿ ಪೇಮಸ್ ಆಗ್ಬೇಕು ಎಂಬ ಹಠ , ಆಶಯ , ಹವಿರ್ಬಾವ ಇದೆ ಯಲ್ಲ ಇದಕ್ಕೆ ಏನ್ ಅನ್ಬೇಕೋ ಗೊತ್ತಾಗಲ್ಲ .. ಅದು ಎಲ್ಲಿಯವರೆಗೆ ಎಂದರೆ ತಮ್ಮ ಪ್ರಾಣ ವನ್ನೂ ಪಣಕ್ಕೆ ಇಟ್ಟು ಫೋಟೋ ಕ್ರೇಜ್ ನಲ್ಲಿ ಮುಳುಗುತ್ತಾರೆ  ಎಂದರೆ ?.. ಬೀಸುವ ಗಾಳಿಯಲ್ಲಿ  ಮುಳುಗೇಳುವ ನೀರಿನಲ್ಲಿ ,ಹಾರಾಡುವ ಆಕಾಶದಲ್ಲಿ ,ವಾಹನಗಲ್ಲಿ ತಮ್ಮ ಛಲ ಬಲ , ವನ್ನು ತೋರ್ಪಡಿಸುವ ಬೇರೆ ವಿಚಾರ ಒಂದಷ್ಟು ತರಭೇತಿ ಪಡೆದು ಅದರಲ್ಲಿ ನಿಪುಣತೆ  ಸಾಧಿಸ ಬೇಕೆಂಬ ಆಲೋಚನೆಯಿಂದ ಅಂತಹ ಒಂದು ಕಾರ್ಯಕಕ್ಕೆ ಕೈ ಹಾಕಿ ಸಕ್ಸಸ್ ಕಂಡವರೂ ಇದ್ದಾರೆ ,ಇದರಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೂ , ಅದು ಸಾಮಾನ್ಯವೇ . ಆದ್ರೆ  ಇವುಗಳ  ಬಗ್ಗೆ ಲವಲೇಶವೂ ಗೊತ್ತಿಲ್ಲದೇ   ಪ್ಯಾಶನ್ ಗೋಸ್ಕರ ಇಂತಹ ಒಂದು ಅಪಯಕಾರಿ  ಸನ್ನಿವೇಶದಲ್ಲಿ ಫೋಟೋ ತೆಗಿಸಿ ಕೊಳ್ಳುವ ಚಟ ಕ್ಕೆ ಏನ್ ಅನ್ನ ಬೇಕೋ ಗೊತ್ತಿಲ್ಲ ಪ್ಯಾಶನ್ ಫೋಟೋಗೆ.. ಹೆಚ್ಚ್ಗಾಗಿ ಇದಕ್ಕೆ ಯಂಗ್ ಅಂಡ್ ಅನರ್ಜಿಟಿಕ್  ಯುವಕರು ಮಾತ್ರ ನಮ್ಮ ಕಣ್ಣ ಮುಂದೆ ತೋಚುತ್ತಿದ್ದರೆ ಇದೀಗ ಹೆಣ್ಣು ಹೈಕಳುಗಳೂ ಇದರಲ್ಲಿ ತಲ್ಲಿನರಾಗಿ ಜೀವ ವನ್ನು ಕಳೆದು ಕೊಳ್ಳುತ್ತಿರ್ವಿವುದ ಮಟ್ಟಿಗೆ  ಇಳಿದಿದ್ದಾರೆ ಎಂದರೆ ?  ಘಟನೆಗೆ ಉತ್ತಮ ಉದಾಹರಣೆ ಪುತ್ತೂರಿನಾ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿನಿಯರನ್ನೇ ನಾವು ಕಾಣ ಬಹುದು .. ಮೊನ್ನೆ ಭಾನುವಾರ ವಿವಿಧ ಬಂಗಿಯಲ್ಲಿ ಫೋಟೋ ವನ್ನು ತೆಗೆಸಿದ್ದು ಸಾಲದೇ ರೈಲು ಹಳಿಯಲ್ಲಿ ಅದೂ ರೈಲು ವೇಗವನೂ ಕಂಡೂ ಫೋಟೋ ಅವಾಂತರ ಹುಚ್ಚಿಗೆ ಪ್ರಾಣ ವನ್ನೇ ಕಳೆದು ಕೊಂಡರೇ , ಇನ್ನು ರಕ್ಷಣೆ ಗೆ ಧಾವಿಸಿದ ಇನ್ನೊಬ್ಬಾಕೆ ಅದೃಷ್ಟ ಚೆನ್ನಾಗಿತ್ತು ಸ್ವಲ್ಪದರಲ್ಲೇ ಸಾವಿನದವಡೆಯಿಂದ ಪಾರಾದರೂ ಕೈ ಮೂಳೆ  ಮುರಿದೆ ಬಿಟ್ಟಿತು,, ಬವಿಷ್ಯ ಮುಂದೆ ಫೋಟೋ ತೆಗಿಯುವಾಗ ಇವಳಿಗೆ ಇದು ಅರಿವಾಗಬಹುದು ಫೋಟೋ ಕ್ಲಿಕಿಸುವ್ದಕ್ಕೆ ಕೈ ಹಿಂಜರಿಯಬಹುದೇನೋ ?! ಇನ್ನು ದುರ್ದೈವಿ ಮ್ರತ ವಿಧ್ಯಾರ್ಥಿನಿ ಯಿಂದ ಉಳಿದವರೂ ಪಾಠ ಕಲಿತಾರೆನೋ ? ಓದಿನಲ್ಲಿ ಮುಂದಿದ್ದ ವಿಧ್ಯಾರ್ಥಿನಿಯರಿಗೆ ಓಡುವ ರೈಲಿನ ಮುಂದೆ ಫೋಟೋ ತೆಗೆದರೆ ,ಶಾಶ್ವತವಾಗಿ ನಮ್ಮ ಫೋಟೋ ಮನೆ ಗೋಡೆಯಲ್ಲಿ ತುಗುತ್ತದೆ ಎಂದು ಅರಿವಾಗದೇ ಇರುವುದು ಕಾಕತಾಳೀಯ. ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ಹೇಳುವುದು ನನ್ನ ಉದ್ದೇಶ ಅಲ್ಲಕೇವಲ ಒಂದು ಫೋಟೋ ಗೋಸ್ಕರ ತಮ್ಮ ಜೀವನವನ್ನೇ ಪಿನಿಶ್ ಮಾಡಿ ಕೊಳ್ಳು ವುದಿದೆಯಲ್ಲ ಅದು ಹೇಸಿಗೆ ,ಲಜ್ಜೆಗೇಡಿ ತನ .. !! ಬಯಸಿ ಬಯಸಿ ಆಗದೇ ಇದ್ದರೂ ಜಾಗ್ರತೆ ಹಳಿ ತಪ್ಪದಿರಲಿ ,ಇಂಥ ಘಟನೆ ಗಳು ಎಂದೂ ನಡೆಯದಿರಲಿ ಎಂದು ಆಶಿಸೋಣ
ಕೊನೆಯುಸಿರು ಎಳೆಯುವ ಮುಂಚೆ ಕೊನೆಯ ಪೊಟೊ 

ಕೊಳವೆ ಬಾವಿಯೋಳಗೆ ಇನ್ನೊಂದು ಪುಟಾಣಿ : ಮತ್ತದೇ ರಾಗ.. ಆಳುವ ಹಾಳು ವ್ಯವಸ್ತೆಗೆ .?... ಛೀ .. ಶೆಮ್.. ಶೇಮ್ !!!

ಕೇವಲ ಒಂದುವರೆ ತಿಂಗಳುಗಳ ಅವಧಿಯಲ್ಲಿ ಕೊಳವೆ ಬಾವಿಯೇಂಬ ಮ್ರತ್ಯುಕೂಪಕ್ಕೆ ತನ್ನದಲ್ಲದ ತಪ್ಪಿಗೆ ಇನ್ನೊಂದು  ಮಗು ಆಹುತಿ ಯಾಗಿದೆ.  ಛೇ .,ಆಳುವ ಹಾಳು  ವ್ಯವಸ್ತೆಗೆ ಶೆಮ್ ಎಲ್ಲದೇ ವಿಧಿ ಇಲ್ಲ.
ಒಂದುವರೆ ತಿಂಗಳ ಗಳ ಹಿಂದೆ ಆ ಬಿಜಾಪುರದ ಘಟನೆ ಮರೆ ಮಾಚುವ ಮುಂಚೆ ಇಂತಹ ಒಂದು ಘಟನೆ ನಡೆದೆ ಬಿಟ್ಟಿದೆ. ಆ ದಿನ ನಡೆದ ಘಟನೆಯನ್ನು ಮನಸ್ಸಿನಾಳಕ್ಕೆ ಇಳಿಸಿ ಕೊಂಡು ಕೊಂಚ ಅದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಂಡಿದ್ದೇ ಯಾಗಿದ್ದರೇ ಖಂಡಿತವಾಗಿಯೂ ಇಂದು ಬಾಗಲಕೋಟೆಯಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗುತ್ತಿರಲಿಲ್ಲ. ಕೇವಲ ಖುರ್ಚಿಗಾಗಿ ಕಾದಾಡುತ್ತಿರುವ ಆಳುವ ಸರ್ಕಾರಕ್ಕೆ ಇದರ ಬಗ್ಗೆ ಯೋಚಿಸುವುದಕ್ಕೆ ಸಮಯವಾದರೂ ಎಲ್ಲಿ ಸಿಗುತ್ತದೆ ಹೇಳಿ ? ಮಾಧ್ಯಮಗಳಿಗಿರುವಶ್ಟು ಕಿಂಚಿತ್ ಸದುದ್ದೇಶ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು ಹಳ್ಳಿ, ಮೂಲೆ - ಮೂಲೆ ಗಳಲ್ಲಿರುವ ಮ್ರತ್ಯುಕೂಪಗಳನ್ನು ಸಂಬಂದಪಟ್ಟ ಅಧಿಕಾರಿಗಳ ಮುಂದೆ ತಂದರೂ , ಅದರ ಬಗ್ಗೆ ಕ್ರಮಕೈಗೊಳ್ಳಲಾಗದ ಜನಪ್ರತಿನಿಧಿಗ ಳು ಇದ್ದೂ ಏನು ಪ್ರಯೋಜನಾ ?  ಉದಾಹರಣೆಗೆ ಶಿರಹಟ್ಟಿ ಶಾಸಕರ ಹೊಲದಲ್ಲಿ ೪ ಕೊಳವೆ ಬಾವಿಗಳಿದ್ದೂ, ಅದನ್ನೇ ಮುಚ್ಚಲು ಸಾಧ್ಯವಾಗದ ಆತ ಇನ್ನು ಕ್ಶೇತ್ರದ ದಲ್ಲಿರುವ ಕೊಳವೆ ಬಾವಿಯನ್ನು ಅರಸಲು ಸಾಧ್ಯವೇ ? ಆಳುವ ವವರಿಂದ ಖಂಡಿತವಾಗಿಯೂ ನೀರಿಕ್ಶೆ ಮಾಡಲು  ಸಾಧ್ಯವೇ ಇಲ್ಲ . ತಮ್ಮ  ತಮ್ಮ ಊರಿನ ಹೊಲದಲ್ಲಿರುವ ಕಣ್ಣಿಗೆ ತೋಚಿದನ್ನು ನಾವೇ ಅದನ್ನೇ ಗತಿ ಗಾಣಿಸಬೇಕೇ ವಿನಾ: ಸಂಬಂದ ಪಟ್ಟವರ ಕಣ್ತೆರೆಸುವಲ್ಲಿ ಅನಾಹುತ ನಡೆದೇ ಹೊಗಿರುತ್ತದೆ. ಆದ್ದರಿಂದ ಇದರ ಬಗ್ಗೆ ಗಮನ ಹರಿಸೋಣ ಮುಂದಿನ ಒಂದಷ್ಟು ಜೀವವನ್ನು ರಕ್ಶಿಸುವಲ್ಲಿ ಅಳಲು ಸೇವೆ ಮಾಡೋಣ.


ಭಾನುವಾರ, ಆಗಸ್ಟ್ 3, 2014

ಈಗೀಗ ಅತ್ಯಚಾರ ಬೆಳಕಿಗೆ ಬರಲಿಕ್ಕೆ ಕಾರಣ : ದಿಲ್ಲಿಯೆ ಫಲಶ್ರುತಿಯೇ ?!

ಹೌದು ಇತ್ತೀಚೆಗೆ ಎಲ್ಲಿ ನೋಡಿದರೂ ಅತ್ಯಚಾರದ್ದೇ ಸುದ್ದಿ.ಯಾವುದೇ ಟಿವಿ ನ್ಯೂಸ್ ಚಾನೆಲ್ ಆನ್ ಮಾಡಿದ್ದ್ರೂ, ರೇಫ್ ನ ಸ್ಚ್ರಿಪ್ಟ್ ತುಂಬಿ ತುಳುಕುತ್ತಿದೆ
... ಹೋಗುವ ಹಾದಿಯಲ್ಲಿ ,ಒಬ್ಬಂಟಿ ಮನೆಯಲ್ಲಿ, ಶಾಲೆಯ ಸಿಬ್ಬಂದಿಯಿಂದ , ವಾಹನದ ಚಾಲಕರಿಂದ, ಸಹೋದ್ಯೋಗಿಯಿಂದ, ಎಳೆಯ ಹಸುಳೆ ಎಂದು ಲೆಕ್ಕಿಸದೇ ಹೇಯ ಕ್ರತ್ಯವನ್ನು ಎಸಗುವ ಪರಿಯನ್ನು  ಈ ವರ್ಣಾನಾತ್ಮಕ ಘಟನೆಗಳು ಇತ್ತಿಚೆಗೆ ಮಾತ್ರ ನಡೆಯುತ್ತಿದೆಯೆ ಎಂದು ಮೂಗಿನ ಮೇಲೆ ಬೆರಳಿಟ್ಟು ಆಲೋಚಿಸುವುದು ತಪ್ಪು. ಇದು ಇಂದು ನಿನ್ನೆಯದಲ್ಲ.. ಪುರಾತನ ಕಾಲದಿಂದಲೂ ನಡೆದು ಬರುತ್ತಿರುವ ವಿಚಾರವೇ! ಅತ್ಯಚಾರಕ್ಕೆ ಒಳಗಾದವರು ಅತ್ಯಚಾರ ಎಸಗಿದವರ ಬೆದರಿಕೆಗೆ ಮುದುಡಿ ಕುಳಿತರೇ, ಇನ್ನು ಹೆಚ್ಚಿನವರು ಮರ್ಯಾದೆಗೆ ಅಂಜಿ ಭವಿಷ್ಯದ ಚಿಂತನೆಯ ಯೋಚನೆಯಲ್ಲಿ ಅದನ್ನು ಬಹಿರಂಗ ಪಡಿಸದೇ ಇದ್ದರಿಂದ ಅದು ಅಷ್ಟೊಂದು ಪ್ರಚಲಿತ ಪಡೆಯುತ್ತಿರಲಿಲ್ಲ ಎಲ್ಲೋ ಒಂದೋ ಎರಡೋ ಘಟನೆಗಳು  ಧೈರ್ಯ ವಂತ ರಿಂದ ಮಾತ್ರ ಮುಖ್ಯವಾಹಿನಿಗೆ ಬರುತ್ತಿತ್ತು. ಎಂದು ದಿಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ನಡೆದು ರಾಷ್ಟ್ರ ಅಂತರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿ ಕೊಂಡೀತೋ ಅಂದಿನಿಂದ ದೇಶದ ಮೂಲೆ ಮೂಲೆ ಗಳಲ್ಲೂ ಬಯಲು ಗೊಳ್ಳುವಂತೆ ಮಾಡೀತು. ಇದು ದಿಲ್ಲಿಯ ಫಲಶ್ರುತಿ ಎಂದರೂ ಅತೀಶಯೋಕ್ತಿ ಯಾಗಲಾರದು. ಏನೇ ಇರಲಿ  ಈ ಪ್ರಕರಣ ದಿಂದ ಅಂತರಂಗದ ವಿಚಾರ ಬಹಿರಂಗ ಒಳ್ಳೆದೇ ಯಾದರೂ, ಅತ್ಯಚಾರಿ ಕಾಮ ಪಿಪಾಸುಗಳಿಗೆ ಕಠಿಣ ಸಜೆ ಆಗಬೇಕು. ಶಿಕ್ಷೆ ಎಂದರೇ ಕೇವಲ ಮಾಮುಲಿ ನಂತಿರದೇ ಇನ್ನು ಮುಂದೆ ಆತ ಯಾರನ್ನು ಆ ಭಾವನೆಯಿಂದ ಕಾಣುವಂತಿರಬಾರದು, ಆತನನ್ನು ನೋಡಿ ಇನ್ನೊಬ್ಬನ್ನು ಸಹಾ ಅದರಿಂದ ದೂರ ಹೊಗುವಂತಿರಬೇಕು. ಅಂತಹ ಶಿಕ್ಷೆ ನಮ್ಮ ದೇಶದಲ್ಲಿ ಬರಬೇಕಾದದ್ದು ಜರೂರತ್ ಇದೆ.


ಭಾನುವಾರ, ಏಪ್ರಿಲ್ 27, 2014

ವಿಚಾರ ಹೀನ ವಿವಾದ

ಮತ್ತೆ ರಾಜ್ಯಾದ್ಯಾಂತ ಉಡುಪಿ ಶ್ರೀ ಕ್ರಷ್ಣ ಮಠ  ಸುದ್ದಿಯಾಗುತ್ತಿದೆ.  ಹಲವಾರು ಬಾರಿ ವಿಚಾರಹೀನ ವಿವಾದಕ್ಕೆ ಎಡೆಯಾಗುತ್ತಿದ್ದ ಮಠ , ಈ ಬಾರಿಯೂ ಅಷ್ಟೇ . ಜಾತಿ ಪಂಕ್ತಿ ಭೇಧವೆಂಬ ನೆಪ ಒಡ್ಡಿ ಭಂಟ ಸಮುದಾಯವನ್ನು ಎತ್ತಿ ಕಟ್ಟಲಾಗುತ್ತಿದೆ ಎಂಬದು  ಪ್ರಜ್ಞಾವಂತರ ನುಡಿ. ಊಟಕ್ಕೆ(ಅನ್ನಪ್ರಸಾದ ) ಕೂತ ಸಂದರ್ಭ ದಲ್ಲಿ ''ನೀನು ಯಾವ ಜಾತಿ ಯಾವ ಮಠ , ಕುಲ,   ಗೋತ್ರ'' ಎಂಬೀ ಪ್ರಶ್ನೆ ಗಳನ್ನೂ ಒಡ್ಡಿ  , ನನ್ನನ್ನು ಬೋಜನ ಶಾಲೆಯಿಂದ ಹೊರಹಾಕಿದ್ದಾರೆ ಇದರಿಂದ ಅವಮಾನಿತಳಾಗಿದ್ದೇನೆ .. ಎಂದು ಪ್ರತಿಭಟನೆಗೆ ಧುಮುಕಿದ ಹಾಗೂ ಜಾತಿ ಎಂಬ ಪ್ರಶ್ನೆ ಯನ್ನು ಒತ್ತಿ ಹಿಡಿದು ಭಂಟ ಸಮುದಾಯವನ್ನು ಮಠಕ್ಕೆ ವಿರೋಧ ಕಟ್ಟಿ ಕೊಳ್ಳುವಲ್ಲಿ  ಸಫಲತೆಯನ್ನು ಸಾಧಿಸುವಲ್ಲಿ ಶ್ರಮಿಸುತ್ತಿರುವ , ವಸಂತಿ ಮೇಡಂ ರವರಿಗೆ  , ತಾವು ಒಬ್ಬ ಉಪನ್ಯಾಸಕಿ ಆಗಿ ಅಲ್ಲಿನ ಸ್ಥಳೀಯ ನಿವಾಸಿಯಾಗಿ ತಮಗೆ ಅಲ್ಲಿನ ನೀತಿ ನಡವಳಿಕೆಗಳು ಗೊತ್ತಿಲ್ಲದೇ ಇರುವುದು ಸೋಜಿಗವೇ ಸರಿ!

ಪಂಕ್ತಿ ಭೇದ ಎನ್ನುವುದು ಎಲ್ಲೆಡೆ ನಡೆಯುತ್ತಿದೆ ಅದು ಮೊದಲಿಂದಲೂ ನೆಡೆದು ಕೊಂಡು ಬಂದ ರೀತಿ .. ಬ್ರಹ್ಮಣರಿಗೆ , ವಿಐಪಿ ಗಳಿಗೆ  ಪಂಕ್ತಿ ಗಳಿರುತ್ತವೆ .. ನಂತರ ಇತರರಿಗೆ ನಡೆಯಲ್ಪಡುವುದು   ತಲೆ -ತಲಾತಂತರ ದಿಂದ ಬಂದ ಪದ್ಧತಿ. ಮೊನ್ನೆ ಇಲ್ಲಿ ಆಗಿದ್ದು ಅಷ್ಟೇ ಗೊತ್ತಿದ್ದೂ ,ಗೊತ್ತಿಲ್ಲದೆಯೋ  ಬ್ರಾಹ್ಮಣ ರ  ಪಂಕ್ತಿಯಲ್ಲಿ  ತಾನು  ಕೂತಿದ್ದಲ್ಲದೇ   ಮಠದ ಮೇಲೆ ಬೆರಳು ಮಾಡಿ ತೋರಿಸುತ್ತಿರುವ ಇವರ ವಿರುದ್ಧವೇ ಪ್ರತಿಭಟನೆ ಯಾಗಬೇಕ್ಕಿತ್ತು/ ಆಗಬೇಕು. ಸ್ವತಃ ವಸಂತಿ ಶೆಟ್ಟಿ ಯವರೇ ಕ್ಷಮೆ ಕೇಳಬೇಕು . 
ಇಲ್ಲಿ ಕೇವಲ ವಸಂತಿ ಶೆಟ್ಟಿ ಎಂಬ ಉಪನ್ಯಾಸಕಿ ಮಾತಿಗೆ ಮಣೆ ಹಾಕಲಾಗುತ್ತಿದೇಯೆ ವಿನಾ: ಸತ್ಯ ವಿಚಾರ ಯಾರಿಗೂ ಗೊತ್ತಿಲ್ಲ. ಎಲ್ಲರೂ ಮಠದ ವಿರುದ್ಧವೇ ಧ್ವನಿ ಎತ್ತಿದ್ದಾರೆ , 'ಅನ್ನ ಬ್ರಹ್ಮ' ಎಂದು ನಾಮಾಕಿ೦ತ ಗೊಂಡಿರುವ  ಶ್ರೀ ಕ್ರಷ್ಣ  ಮಠ ದಲ್ಲಿ ಇದುವರೆಗೂ ಇಂಥ ಒಂದು ವಿವಾದ ಸ್ರಷ್ಟಿಯಾಗಿಲ್ಲ . ಸಾವಿರಾರು ಭಕ್ತಾಧಿಗಳು , ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಂದಲೇ ದಿನನಿತ್ಯ ಅನ್ನ ಪ್ರಸಾದವನ್ನು ಸ್ವಿಕರಿಸುತ್ತಿದ್ದೂ , ಈ ವಿವಾದ ಹಲವರಲ್ಲಿ ಬೇಸರ ಸ್ರಷ್ಟಿ ಮಾಡಿದೆ ..ಮದ್ವಾಚಾರ್ಯರ ಕಾಲದಿಂದಲೂ ಕರಾವಳಿ ಯಲ್ಲಿ ಇರುವ ದೊಡ್ಡ ಸಮುದಾಯವಾದ ಭಂಟ ರಿಂದ ಸಹಾಯ ಹಸ್ತವೂ ಸೇರಿದಂತೆ ಏನೋ ಒಂದು ರೀತಿ ಅವಿನಾಭಾವ ಸಂಭಂದ ಇದೆ . ಇದನ್ನು ಹಾಳು ಗೆಡವಲು ಹೆಣೆದ ಕುತಂತ್ರ ಎಂಬುದು ಹಲವರ ವಾದ .


ಗುರುವಾರ, ಮಾರ್ಚ್ 13, 2014

ಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯ ?!

ಇದು ಮೊನ್ನೆ ನಡೆದ ಘಟನೆ .ಕರ್ನಾಟಕದ ನಂಬರ್ ಒನ್ ಸುದ್ದಿ ಚಾನೆಲ್  ಟಿವಿ 9 ,ಈಗಾಗಲೇ  ಬ್ರಷ್ಟ  ರಾಜಕಾರಣಿ ಎಂದು ಜನ ಜನಿತವಾಗಿದ್ದ ,ಪ್ರಸ್ತುತ ರಾಜ್ಯದ ಇಂಧನ ಸಚಿವ ಡಿ .ಕೆ .ಶಿವಕುಮಾರ್ ಬಗ್ಗೆ ಕುಟುಕು  ರಹಸ್ಯ ಕಾರ್ಯಾಚರಣೆಗೆ ಮುಂದಾಗಿತ್ತು .ಹೇಗೋ ಏನೋ ವರದಿಗೆ  ತೆರಳಿದ್ದ ಪ್ರತಿನಿಧಿಗಳಾದ ಶ್ರೇಯಸ್ ಮತ್ತು ಶ್ವೇತಾ  ಅವರು ಸಿಕ್ಕಿ ಬಿದ್ದರು . ಸಾಮನ್ಯವಾಗಿ ಇಂಥಹ ತನಿಖಾ ವರದಿಗೆ ಎಷ್ಟೇ ಜಾಗ್ರತೆ ಇದ್ದರೂ ಸಾಲದು ,ಹಾಗೆ ಸ್ವಲ್ಪ ಅಜಾಗುರುಕತೆ ಯಿಂದ ಡಿಕೆಶಿ ಮತ್ತು ಬೆಂಬಲಿಗರ ಬಲೆಗೆ ಬಿದ್ದ ಇರ್ವರನ್ನು ಮನಬಂದಂತೆ ತಳಿಸಿದ್ದಲ್ಲದೇ , ಪೊಲೀಸರಿಗೂ ಒಪ್ಪಿಸಿ ಬಿಟ್ಟರು . ಇಲ್ಲ ಸಲ್ಲದ ಕೇಸನ್ನು ಜಡಿದು ನ್ಯಾಯಲಯಕ್ಕೆ ಹಾಜರುಪಡಿಸುವಲ್ಲಿಯೂ ಸಫಲರಾದರು . ಇದರಲ್ಲಿ ತಪ್ಪು ಯಾರದ್ದು ? ನಿರ್ಭೀತಿಯಿಂದ ಕುಟುಕು ಕಾರ್ಯಾಚರಣೆಗೆ ಮುಂದಾಗಿ ಬ್ರಷ್ಟಚಾರಿಗಳ ಮುಖವನ್ನು ಸಮಾಜಕ್ಕೆ ತೋರ್ಪಡಿಸಲು ಮುಂದಾದ ಚಾನಲ್ ನದೇ ಅಥವಾ ಇದನ್ನೇ ಮಹಾ ತಪ್ಪು ಎಂದು ಹಿಗ್ಗಾ -ಮುಗ್ಗಾ ಹಲ್ಲೆ ಮಾಡಿದ ರಾಜ್ಯದ ಘನವೆತ್ತ ಸಚಿವ ಮಹಾಶಯನದ್ದೇ .. ?ತಪ್ಪು ಚಾನಲ್ ನದ್ದೇ ಯಾದರೂ ಅದಕ್ಕೊಂದು ಕಾನೂನು ಇಲ್ಲವೇ ? ತಾವೇ ಕಾನೂನನ್ನು ,ಅದೂ ಒಬ್ಬ ಜನನಾಯಕನಾಗಿ ಕೈ ಗೆ ಎತ್ತಿ ಕೊಂಡದ್ದು ಎಷ್ಟು ಸರಿ ? ಅಷ್ಟಕ್ಕೂ ಚಾನಲ್ ನದ್ದು ಏನು ಮಹಾನ್  ತಪ್ಪು ?ಬ್ರಷ್ಟಚಾರಿಗಳ ಮುಖವಾಡವನ್ನು ಕಳಚುವಲ್ಲಿ ಇಂಥಹ ಒಂದು ಕಾರ್ಯಾಚರಣೆ ಬಹಳ ಮುಖ್ಯವೆ.. ಇದೆ ರೀತಿ ರಹಸ್ಯ ಕಾರ್ಯಚರ್ಣೆಯಲ್ಲಿ ಟಿವಿ 9 ಸಹಿತ ಹಲವಾರು ಮಾಧ್ಯಮಗಳು ವರದಿ ಮಾಡಿ ಸಕ್ಸಸ್ ಕಂಡು ,ಜನ ಸಮುಖದಲ್ಲಿ ನಿಲ್ಲಿಸಿವೆ.. ಒಬ್ಬ ಜವಾಬ್ದಾರಿಯುತ  ಸಚಿವನಾಗಿ ಮಾಡಿದ ಈ ಕಾರ್ಯಕ್ಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯಾಗುತ್ತಿದ್ದರೂ , ಸರ್ಕಾರ ಯಾಕೆ ಕ್ರಮ ಕೈ ಗೊಳ್ಳುತ್ತಿ ಲ್ಲ .. ಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯದ ಜೋಕಾಲಿಯನ್ನು ದೂಡುತ್ತಿರುವ  ಪೋಲಿಸ್ ಇಲಾಖೆಗೆ ದಿಕ್ಕಾರ !!!.  

ಬುಧವಾರ, ಫೆಬ್ರವರಿ 26, 2014

ಅಂಬರೀಶ್ ಗೆ ಸಿಕ್ಕ ಎಳ್ಳಷ್ಟು ಬೆಲೆ ಸಾಲುಮರ ತಿಮ್ಮಕ್ಕನಿಗೆ ಯಾಕಿಲ್ಲ ?




ಸಚಿವ ,ನಟ  ರೆಬಲ್ ಸ್ಟಾರ್ ಅಮ್ಬಾರಿಶ್  ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ .ಕಳೆದ ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸ್ತೆ ಪಡೆಯುತ್ತಿದ್ದಾರೆ .''ಯಾರೂ ಸಹಾ ಗಾಬರಿ ಪಡೆಯುವಂತ  ಯಾವುದೇ ಗಂಭೀರ ದೊಡ್ಡ  ಸಮಸ್ಯೆ ಇಲ್ಲ ''. ಎಂದು  ಆಸ್ಪತ್ರೆ ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೂ, ವಿಕ್ರಮ್ ಆಸ್ಪತ್ರೆ ಗೆ ದಾಂಗುಡಿ ಇಡುತ್ತಿರುವ ವಿಐಪಿಗಳಿಗೆ, ಸೆಲೆಬ್ರೇ ಟಿ ಗಳಿಗೆ  ಬರವಿಲ್ಲ . ಹೋಮ -ಹವನ ,ಪೂಜಾ -ಪುನಸ್ಕಾರ ಇಡೀ ರಾಜ್ಯಾದ್ಯಂತ   ಜರೂರಾಗಿ  ಜೋರಾಗಿ ನದೆಯುತ್ತಿದೆ  ನನ್ನ ಅಬ್ಯಂತರ ಏನೂ ಇಲ್ಲ ಅವರವರ ಭಾವ ಅವರವರ ಭಕುತಿಗೆ ಬಿಟ್ಟ ವಿಚಾರ  ಆದರೆ  ಬಹಳ ಬೇಸರ ತರಿಸುತ್ತಿರ್ವುದು  ಇಲ್ಲಿ .ತತ್ಸಮಯದಲ್ಲಿ ಸಮಾಜ ಸೇವಕಿ ಪ್ರಕ್ರತಿ ಪ್ರೇಮಿ ಸಾಲು ಮರದ ತಿಮ್ಮಕ್ಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ , ಅಮ್ಬರಿಶ್ ಗೆ ತೋರಿಸಿದಂತ ಒಂದು ಎಳ್ಳು ಕಣದಷ್ಟು ಅಭಿಮಾನ ತೋರಿಸಲಾರದ ನಮ್ಮ ಸಮಾಜಕ್ಕೆ  ನಾಚಿಕೆಯಾಗಬೇಕಿದೆ . ಒಂದು ಸಿನಿಮಾದಲ್ಲಿ ಹಿರೋ ಅಂದ ಮಾತ್ರಕ್ಕೆ ಆತ ನಿಜ ಜೀವನದಲ್ಲಿ ಹಿರೋ ಅಲ್ಲ .ರಿಯಲ್ ಹಿರೋ ಎಂದು ಜನಜನಿತ ರಾಗಿರ್ವುದು ಸಾಲು ಮರದ ತಿಮ್ಮಕ್ಕ ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಿರ್ವುದೇ. ದಿನಕ್ಕೆ ಸಾವಿರಾರು ಮಂದಿ ವಿಕ್ರಮ್ ಆಸ್ಪತ್ರೆಗೆ ತೆರುಳುತ್ತಿರುವವರ ಮಧ್ಯೆ ಒಂದೆರಡು ಮಂದಿ ವಿಕ್ಟೋರಿಯ ಆಸ್ಪತ್ರೆಯ ಮುಖ ತೋರಿಸಿದ್ದರೆ ತಮ್ಮಗಳ ಗೌರವ  ಇನ್ನಷ್ಟು ಇಮ್ಮುಡಿ ಗೊಳ್ಳು ತ್ತಿತ್ತು . ದಿನದ ಮುಕ್ಕಾಲು ಭಾಗ ಹೇಳಿದ್ದೆ ಹೇಳಿದ್ದು ಕಿಸ್ಬಾಯಿ ದಾಸ ಅನ್ನುವಂತೆ ರೆಬಲ್ ಸ್ಟಾರ್ ಚಿತ್ರಣ ವಿಚಾರನ್ನೆ , (ನೇರ ಪ್ರಸಾರದ ಮುಖಾಂತರ )ಬಿತ್ತರಿಸುತ್ತಿದ್ದ   ಮಾಧ್ಯಮಗಳೇ ನಿಮಗೆ ತಿಮ್ಮಕ್ಕ ಬೇಡವಾದಳೇ..ಲಕ್ಷಾನು ಗಟ್ಟಲೆ  ಲೀಟರ್ ಹಾಲನ್ನು ಕಾಲ್ಪನಿಕ ಅಂಬರೀಶ್ ಭಾವಚಿತ್ರಕ್ಕೆ ಸುರಿಸುವ ಬದಲು. ಒಂದು ಲೋಟ ಹಾಲನ್ನು ಜೀವಂತ ತಿಮಕ್ಕನಿಗೆ ದಯಪಾಲಿಸುವಲ್ಲಿ ಶಕ್ತ ರಾಗದ ಮನುಶತ್ವ ವಿಲ್ಲದ ಪ್ರಜೆಗಳೇ  ತಮ್ಮಗಳಿಗೆ ನೈತಿಕ ಪ್ರಜ್ಞೆ ಎನ್ನುವುದು ಇಲ್ಲವೆ???

ಶುಕ್ರವಾರ, ಫೆಬ್ರವರಿ 14, 2014

ದುಡ್ಡು ಸಿಕ್ಕರೆ ಸಾಕು ಯಾವುದಕ್ಕೂ ಹಿಂಜರಿಯದ .............. ಗಳು

ಕಟ್ಟು -ಕಟ್ಟು ದುಡ್ಡು ಸಿಕ್ಕರೆ ಯಾವುದಕ್ಕೂ ಹಿಂಜರಿಯದ  ಕೆಲವು ನಟಿಯರಿಗೆ ಏನು ಹೇಳ್ಬೇಕು ನೀವು ಹೇಳಿ .............. ಈ ಬಿಟ್ಟ ಸ್ಥಳ ನಿಮ್ಮ ವ್ಯಾಖ್ಯಾನದ ಲ್ಲೇ ತುಂಬಿರಿ. ಈ ಮೂರು ಬಿಟ್ಟ ಮೂರು ಕಾಸಿನವರಿಗೆ ಮಾನ ಮರ್ಯಾದೆ ಯಂತು ಇಲ್ಲಾ ಆದರೆ ,ಬೇರೆಯವರು ಬಗ್ಗೆಯಾದರೂ, ಕಿಂಚಿತ್ ಆಲೋಚನೆ ಮಾಡುವ ಶಕ್ತಿಯಾದರೂ ಇರಲಿ .. ಅಲ್ಲದಿದ್ದರೆ
ಮೊನ್ನೆ ಮೊನ್ನೆ ಅಷ್ಟೇ  ನರೇಂದ್ರ ಮೋದಿ ಪ್ರಚಾರಕ್ಕೆ ಅರ್ಥ ಬಟ್ಟೆ ಬಿಚ್ಚಿದ ಆ ನಟಿಯ( ಹೆಸರು ಹೇಳಿ ಬಾಯಿ ಹೊಲಸು ಮಾಡಿಕೊಳ್ಳಕ್ಕೆ ನಾನು ಇಷ್ಟ ಪಡೋಲ್ಲ ..) ನಿನ್ನೆ ಇನ್ನೊಬ್ಬ ಭಾರತೀಯ ನಟಿ ಮಣಿ  ರಾಹುಲ್ ಗಾಂದಿ ಪ್ರಚಾರಕ್ಕೆ ಪೂರ್ಣ ಬಟ್ಟೆಯನ್ನೇ ಬಿಟ್ಟು  ಕೇವಲ ಆ ಪಕ್ಷದ ಬ್ಯಾನರನ್ನೇ ತನ್ನ ಬೆತ್ತಲೆ ದೇಹದ ಮೇಲೆ ಅಳವಡಿಸಿ ಪ್ರಚಾರದಲ್ಲಿ ಪ್ರದರ್ಶನವನ್ನು ನೀಡುತ್ತಿದ್ದ  ಇವಳ ನಡವಳಿಕೆಗೆ  ಚಪ್ಪಲ್ ನಲ್ಲಿ ಬಾರಿಸುವ ಸಾಹಸಕ್ಕೆ ಯಾಕೆ ಹೆಂಗಳೆಯರು ಮುಂದಾಗಲಿಲ್ಲ .. ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತಹಾ  ಇನ್ನುವುದು ಇದಕ್ಕೇನಾ ?ಇವರ ಹೆತ್ತ ತಂದೆ ತಾಯಿಗಳು  ಎಂತವರು ? ಇವರುಗಳ ಆಟಾ ಟೋಪ ನ್ನು ನೋಡಿ ತಲೆ ತಗ್ಗಿಸಿ ಮರಿಯಲ್ಲಿ ನಿಂತು ನಕ್ಕು ಬಿಡುವ  ಯುವತಿಯರೇ ಇದು ಸರಿಯೇ ? ಎಲ್ಲಿದ್ದಿರಿ ? ''ಅಂವ ಕಣ್ಣು ಹೊಡೆದ ಸರ್ ''ಎಂದು ಶಾಲೆಯಲ್ಲಿ  ಅದ್ಯಾಪಕರುಗಳಿಗೆ  ಕಂಪ್ಲೇಟ್ ಕೊಡುವ  ವಿದ್ಯಾರ್ಥಿನೀಯರುಗಳೇ, ಇದು ನಿಮಗೆ ಮುಜುಗರ ಅನ್ನಿಸವುದಿಲ್ಲವೇ ? ? 'ನನ್ನ ಹಿಂದೆ ಆ ಹುಡುಗ ಬಂದ ಈ ಹುಡುಗ ಬಂದ ಎಂದು  ಮಾರುದ್ದ ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಆ ಯುವಕನಿಗೆ ಪೋಲಿಸ್ ಠಾಣೆ ಮೆಟ್ಟಿಲನ್ನು ತೋರಿಸುವ  ಸಭ್ಯ ಯುವತಿಯರೇ  ಇದು ನಿಮಗೆ ಸರಿ ಕಾಣಿಸುತ್ತಿದೆಯೇ ? ದೊಡ್ಡ ದೊಡ್ಡ ಫಿಲಾಸಿಪಿ ಮಾತಾಡುವ ಮಹಿಳಾ ಮಣಿಗಳೇ ಯಾವ ಲೊಕದಲ್ಲಿದ್ದಿರಿ ಈಗ ಸಂಸ್ಕ್ರತಿಯನ್ನು ಹರಾಜಿಗೆ ಇಟ್ಟಿರುವ ಇವರುಗಳ ವರ್ತನೆಗೆ  ಕಲ್ಲು ಹೊಡೆದು ಸಾಯಿಸಿಬೇಕು  . ಇಂಥ ಮಾನಗೆಟ್ಟ ವರನ್ನು ಪ್ರಚಾರಕ್ಕೆ ತಳ್ಳುವ ಅತಿರಥರನ್ನು ಮೊದಲು ಗಡಿಪಾರು ಮಾಡ್ಬೇಕು . ಮುಂಬರು ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ ಜೊತೆಗೆ ಕೆಲವು ನಟಿ ಮಣಿಗಳದ್ದೂ  ಸಹಾ  ಈದೀಗ ಪ್ರಚಾರಕ್ಕೆ ಬಂದಿದ್ದು ಎರಡು ಪಕ್ಷಗಳ ನಾ  .... ಗಳು ಮುಂದೆ ಇನ್ನ ನಮ್ಮ ಪ್ರಜಾ ಪ್ರಭುತ್ವ ದಲ್ಲಿ ರಾಜಕೀಯ ಪಕ್ಷಗಳಿಗೆ ಬರಗಾಲ ವಿಲ್ಲ .. ಇನ್ನಷ್ಟನ್ನು ನೋಡುವ ಅವಕಾಶ ದೇಶಕ್ಕಿದೆ ... ಇದಕ್ಕೆ ಫುಲ್ ಸ್ಟಾಪ್ ಇಡುವವರು ಯಾರು ?..ಯಾರ್ರಿ ?

 ಮಹಿಳಾ ಸಂಘಟನೆಗಳೇ  ಕಾರ್ಯಕ್ಕೆ ಬಾರದ ಚಟುವಟಿಕೆಯನ್ನು ಬಿಟ್ಟು ಹಿಡಿಸುಡಿ  ಹಿಡಿದು ಬೀದಿಗಿಳಿಯಿರಿ .............