ಇದು ಮೊನ್ನೆ ನಡೆದ ಘಟನೆ .ಕರ್ನಾಟಕದ ನಂಬರ್ ಒನ್ ಸುದ್ದಿ ಚಾನೆಲ್
ಟಿವಿ 9 ,ಈಗಾಗಲೇ ಬ್ರಷ್ಟ
ರಾಜಕಾರಣಿ ಎಂದು ಜನ ಜನಿತವಾಗಿದ್ದ ,ಪ್ರಸ್ತುತ ರಾಜ್ಯದ ಇಂಧನ
ಸಚಿವ ಡಿ .ಕೆ .ಶಿವಕುಮಾರ್ ಬಗ್ಗೆ ಕುಟುಕು ರಹಸ್ಯ ಕಾರ್ಯಾಚರಣೆಗೆ ಮುಂದಾಗಿತ್ತು .ಹೇಗೋ ಏನೋ ವರದಿಗೆ ತೆರಳಿದ್ದ ಪ್ರತಿನಿಧಿಗಳಾದ ಶ್ರೇಯಸ್ ಮತ್ತು ಶ್ವೇತಾ ಅವರು ಸಿಕ್ಕಿ ಬಿದ್ದರು . ಸಾಮನ್ಯವಾಗಿ ಇಂಥಹ ತನಿಖಾ
ವರದಿಗೆ ಎಷ್ಟೇ ಜಾಗ್ರತೆ ಇದ್ದರೂ ಸಾಲದು ,ಹಾಗೆ ಸ್ವಲ್ಪ ಅಜಾಗುರುಕತೆ
ಯಿಂದ ಡಿಕೆಶಿ ಮತ್ತು ಬೆಂಬಲಿಗರ ಬಲೆಗೆ ಬಿದ್ದ ಇರ್ವರನ್ನು ಮನಬಂದಂತೆ ತಳಿಸಿದ್ದಲ್ಲದೇ , ಪೊಲೀಸರಿಗೂ ಒಪ್ಪಿಸಿ ಬಿಟ್ಟರು . ಇಲ್ಲ ಸಲ್ಲದ ಕೇಸನ್ನು ಜಡಿದು ನ್ಯಾಯಲಯಕ್ಕೆ
ಹಾಜರುಪಡಿಸುವಲ್ಲಿಯೂ ಸಫಲರಾದರು . ಇದರಲ್ಲಿ ತಪ್ಪು ಯಾರದ್ದು ? ನಿರ್ಭೀತಿಯಿಂದ ಕುಟುಕು ಕಾರ್ಯಾಚರಣೆಗೆ ಮುಂದಾಗಿ ಬ್ರಷ್ಟಚಾರಿಗಳ ಮುಖವನ್ನು ಸಮಾಜಕ್ಕೆ
ತೋರ್ಪಡಿಸಲು ಮುಂದಾದ ಚಾನಲ್ ನದೇ ಅಥವಾ ಇದನ್ನೇ ಮಹಾ ತಪ್ಪು ಎಂದು ಹಿಗ್ಗಾ -ಮುಗ್ಗಾ ಹಲ್ಲೆ ಮಾಡಿದ
ರಾಜ್ಯದ ಘನವೆತ್ತ ಸಚಿವ ಮಹಾಶಯನದ್ದೇ .. ?ತಪ್ಪು ಚಾನಲ್ ನದ್ದೇ ಯಾದರೂ ಅದಕ್ಕೊಂದು ಕಾನೂನು
ಇಲ್ಲವೇ ?
ತಾವೇ ಕಾನೂನನ್ನು ,ಅದೂ ಒಬ್ಬ
ಜನನಾಯಕನಾಗಿ ಕೈ ಗೆ ಎತ್ತಿ ಕೊಂಡದ್ದು ಎಷ್ಟು ಸರಿ ? ಅಷ್ಟಕ್ಕೂ ಚಾನಲ್ ನದ್ದು ಏನು ಮಹಾನ್ ತಪ್ಪು
?ಬ್ರಷ್ಟಚಾರಿಗಳ ಮುಖವಾಡವನ್ನು ಕಳಚುವಲ್ಲಿ ಇಂಥಹ
ಒಂದು ಕಾರ್ಯಾಚರಣೆ ಬಹಳ ಮುಖ್ಯವೆ.. ಇದೆ ರೀತಿ ರಹಸ್ಯ ಕಾರ್ಯಚರ್ಣೆಯಲ್ಲಿ ಟಿವಿ 9 ಸಹಿತ ಹಲವಾರು ಮಾಧ್ಯಮಗಳು ವರದಿ ಮಾಡಿ ಸಕ್ಸಸ್ ಕಂಡು ,ಜನ
ಸಮುಖದಲ್ಲಿ ನಿಲ್ಲಿಸಿವೆ.. ಒಬ್ಬ ಜವಾಬ್ದಾರಿಯುತ
ಸಚಿವನಾಗಿ ಮಾಡಿದ ಈ ಕಾರ್ಯಕ್ಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯಾಗುತ್ತಿದ್ದರೂ , ಸರ್ಕಾರ ಯಾಕೆ ಕ್ರಮ ಕೈ ಗೊಳ್ಳುತ್ತಿ ಲ್ಲ .. ಸಾಮಾನ್ಯರಿಗೊಂದು ನ್ಯಾಯ
ಪ್ರಭಾವಿಗಳಿಗೊಂದು ನ್ಯಾಯದ ಜೋಕಾಲಿಯನ್ನು ದೂಡುತ್ತಿರುವ ಪೋಲಿಸ್ ಇಲಾಖೆಗೆ ದಿಕ್ಕಾರ !!!.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ