ಕೇವಲ ಒಂದುವರೆ ತಿಂಗಳುಗಳ
ಅವಧಿಯಲ್ಲಿ ಕೊಳವೆ ಬಾವಿಯೇಂಬ ಮ್ರತ್ಯುಕೂಪಕ್ಕೆ ತನ್ನದಲ್ಲದ ತಪ್ಪಿಗೆ ಇನ್ನೊಂದು ಮಗು ಆಹುತಿ ಯಾಗಿದೆ. ಛೇ .,ಆಳುವ ಹಾಳು ವ್ಯವಸ್ತೆಗೆ ಶೆಮ್ ಎಲ್ಲದೇ ವಿಧಿ ಇಲ್ಲ.
ಒಂದುವರೆ ತಿಂಗಳ
ಗಳ ಹಿಂದೆ ಆ ಬಿಜಾಪುರದ ಘಟನೆ ಮರೆ ಮಾಚುವ ಮುಂಚೆ ಇಂತಹ ಒಂದು ಘಟನೆ ನಡೆದೆ ಬಿಟ್ಟಿದೆ. ಆ ದಿನ ನಡೆದ
ಘಟನೆಯನ್ನು ಮನಸ್ಸಿನಾಳಕ್ಕೆ ಇಳಿಸಿ ಕೊಂಡು ಕೊಂಚ ಅದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಂಡಿದ್ದೇ
ಯಾಗಿದ್ದರೇ ಖಂಡಿತವಾಗಿಯೂ ಇಂದು ಬಾಗಲಕೋಟೆಯಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗುತ್ತಿರಲಿಲ್ಲ. ಕೇವಲ
ಖುರ್ಚಿಗಾಗಿ ಕಾದಾಡುತ್ತಿರುವ ಆಳುವ ಸರ್ಕಾರಕ್ಕೆ ಇದರ ಬಗ್ಗೆ ಯೋಚಿಸುವುದಕ್ಕೆ ಸಮಯವಾದರೂ ಎಲ್ಲಿ
ಸಿಗುತ್ತದೆ ಹೇಳಿ ? ಮಾಧ್ಯಮಗಳಿಗಿರುವಶ್ಟು ಕಿಂಚಿತ್ ಸದುದ್ದೇಶ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು
ಹಳ್ಳಿ, ಮೂಲೆ - ಮೂಲೆ ಗಳಲ್ಲಿರುವ ಮ್ರತ್ಯುಕೂಪಗಳನ್ನು ಸಂಬಂದಪಟ್ಟ ಅಧಿಕಾರಿಗಳ ಮುಂದೆ ತಂದರೂ ,
ಅದರ ಬಗ್ಗೆ ಕ್ರಮಕೈಗೊಳ್ಳಲಾಗದ ಜನಪ್ರತಿನಿಧಿಗ ಳು ಇದ್ದೂ ಏನು ಪ್ರಯೋಜನಾ ? ಉದಾಹರಣೆಗೆ ಶಿರಹಟ್ಟಿ ಶಾಸಕರ ಹೊಲದಲ್ಲಿ ೪ ಕೊಳವೆ ಬಾವಿಗಳಿದ್ದೂ,
ಅದನ್ನೇ ಮುಚ್ಚಲು ಸಾಧ್ಯವಾಗದ ಆತ ಇನ್ನು ಕ್ಶೇತ್ರದ ದಲ್ಲಿರುವ ಕೊಳವೆ ಬಾವಿಯನ್ನು ಅರಸಲು ಸಾಧ್ಯವೇ
? ಆಳುವ ವವರಿಂದ ಖಂಡಿತವಾಗಿಯೂ ನೀರಿಕ್ಶೆ ಮಾಡಲು
ಸಾಧ್ಯವೇ ಇಲ್ಲ . ತಮ್ಮ ತಮ್ಮ ಊರಿನ ಹೊಲದಲ್ಲಿರುವ
ಕಣ್ಣಿಗೆ ತೋಚಿದನ್ನು ನಾವೇ ಅದನ್ನೇ ಗತಿ ಗಾಣಿಸಬೇಕೇ ವಿನಾ: ಸಂಬಂದ ಪಟ್ಟವರ ಕಣ್ತೆರೆಸುವಲ್ಲಿ ಅನಾಹುತ
ನಡೆದೇ ಹೊಗಿರುತ್ತದೆ. ಆದ್ದರಿಂದ ಇದರ ಬಗ್ಗೆ ಗಮನ ಹರಿಸೋಣ ಮುಂದಿನ ಒಂದಷ್ಟು ಜೀವವನ್ನು ರಕ್ಶಿಸುವಲ್ಲಿ
ಅಳಲು ಸೇವೆ ಮಾಡೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ