ಶುಕ್ರವಾರ, ಏಪ್ರಿಲ್ 24, 2020
ದೆಹಲಿ ಅತ್ಯಾಚಾರ ಪ್ರಕರಣ :ಕೊನೆಗೂ ಸುಖಾಂತ್ಯ !,ಆದರೆ ಇನ್ನೊಬ್ಬನನ್ನು ಹೊರಕೆ ಇಟ್ಟಿದ್ದು ಸರಿಯಲ್ಲ
2020ರ ಮಾರ್ಚ್ 21ನೇ ತಾರೀಕು ಭಾರತದ ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ನ್ಯಾಯಾಲಯದ ವ್ಯವಸ್ಥೆಯಲ್ಲಿ ಹೊಸ ಭಾಷೆ ಬರೆದ ದಿನ ! ಇತಿಹಾಸದ ಪುಟದಲ್ಲಿ ದಾಖಲಾದ ಕ್ಷಣ !! ಒಂಟಿ ಹೆಣ್ಣೊಬ್ಬಳು ಮಧ್ಯರಾತ್ರಿಯಲ್ಲಿ ರಸ್ತೆಮೇಲೆ ತಿರುಗಾಡಿದರೆ ಅಂದೇ ಭಾರತ ಸ್ವತಂತ್ರವಾಗುತ್ತದೆ ಎಂದು ರಾಷ್ಟ್ರಪಿತ ಗಾಂಧೀಜಿ ಹೇಳಿದ್ದರು. ಅದು ಅಸಾಧ್ಯದ ಮಾತೇ ಬಿಡಿ ...! ಅಂದು ಮಧ್ಯರಾತ್ರಿ ಹೆಣ್ಣೊಬ್ಬಳು ಬಸ್ಸಿಗಾಗಿ ಕಾದಿದ್ದಳು ಬಸ್ಸು ಬಂತು ಬಸ್ಸು ಏರಿದ್ದಳು ಆರು ಜನರಿದ್ದರು ಅವರೆಲ್ಲಾ ರಾಕ್ಷಸ ತ್ರಯರು ಅಂತ ಆ ಮುಗ್ದೆಗೆ ಗೊತ್ತೇ ಇರಲಿಲ್ಲ ಬಸ್ಸಿನಲ್ಲಿದ್ದ ಆ ಕಾಮಾಂಧರು ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಹಿಂಸಾತ್ಮಕವಾಗಿ ಅವಳನ್ನು ಮುಗಿಸಿಬಿಟ್ಟಿದ್ದರು. ಇದು ಸುಮಾರು ಏಳು ವರ್ಷಗಳ ಹಿಂದಿನ ಮಾತು ದೇಶಾದ್ಯಂತ ದೊಡ್ಡ ಸದ್ದು ಮಾಡಿದ ಸುದ್ದಿ ! ಡಿಸೆಂಬರ್ 16, 2012ರಂದು ಭಾರತದ ರಾಜಧಾನಿ ದೆಹಲಿಯಲ್ಲಿ 23ವರ್ಷದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಕರುಣಾಜನಕ ಕಥೆ ಕೇವಲ ಅತ್ಯಾಚಾರ ಮಾತ್ರ ಮಾಡದ ಕಾಮ ಪಿಶಾಚಿಗಳು ಅಮಾನವೀಯವಾಗಿ ರಾಡ್ ನಿಂದ ಹಲ್ಲೆ ಮಾಡಿ ಚಲಿಸುವ ಬಸ್ಸಿಂದ ಕೆಳಕ್ಕೆ ಎಸೆದರು ತೀವ್ರವಾಗಿ ಹೊಟ್ಟೆ, ಕರುಳು, ಮರ್ಮಾಂಗ ಜರ್ಜರಿತ ಗೊಂಡು ಐಸಿಯು ನಲ್ಲಿ ಒಂದು ದಿನ ಸಾವು ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿದ್ದಳು . ಪ್ರಕರಣದ ಬೆನ್ನಿಗೆ ಆರೋಪಿಗಳನ್ನು ಬಂಧಿಸಲಾಯಿತು.6 ಜನ ಕಾಮುಕರು ಸಿಕ್ಕಿಬಿದ್ದಿದ್ದರು .ಇವರಿಗೆ ಸಾರ್ವಜನಿಕವಾಗಿ ಗುಂಡಿಕ್ಕುವಂತೆ ಜನಾಕ್ರೋಶವೂ ಭುಗಿಲೆದ್ದಿತ್ತೂ ಆದರೂ, ಕಳೆದ 7 ವರ್ಷ 3 ತಿಂಗಳಿಂದ ಸತತ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು.ಆರು ಜನರ ಪೈಕಿ ಜನ ಆರೋಪಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ಅಕ್ಷಯ್ ಠಾಕೂರ್ ಹಾಗೂ ವಿನಯ್ ಶರ್ಮಾರನ್ನು 2020 ರ ಮಾರ್ಚ್ 21ನೇ ತಾರೀಕಿನಂದು ಬೆಳಗ್ಗಿನ ಜಾವ 5.30ಕ್ಕೆ ಗಲ್ಲಿಗೇರಿಸಲಾಯಿತು. ಇನ್ನೆಷ್ಟೋ ಕಾಮುಕರಿಗೆ ಇದು ಪಾಠವಾಯಿತು ಏನು ಖುಷಿ !ದೇಶ ಸಂತೋಷದಲ್ಲಿ ತೇಲಾಡಿತು., ಆದರೆ ಅದರಲ್ಲಿ ನಾಲ್ಕು ಜನರಿಗೆ ಮಾತ್ರ ಶಿಕ್ಷೆಯಾಗಿತ್ತು . ಒಬ್ಬತಾ ಬಸ್ಚಾಲಕನಾಗಿದ್ದ ರಾಮ್ ಸಿಂಗ್ ತಾನೇ ಆತ್ಮಹತ್ಯೆ ಮಾಡಿಕೊಂಡು ತನ್ನ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಪಡೆದುಕೊಂಡನು.ಇನ್ನೊಬ್ಬ ರಾಜು ಎಂಬಾತ ವಯಸ್ಸಿನ ಮಿತಿಯಲ್ಲಿ ಒಂದಷ್ಟು ಸಡಿಲಿಕೆ ಕಂಡು ಸಣ್ಣಪುಟ್ಟ ಶಿಕ್ಷೆಗೆ ಒಳಪಡಿಸುವ ಮೂಲಕ ಮನೆಗೆ ಕಳಿಸಿಕೊಡಲಾಗಿತ್ತು ಪ್ರಶ್ನೆ ಹುಟ್ಟಿರುವುದು ಮತ್ತು ಆಕ್ರೋಶಕ್ಕೆ ಕಾರಣವಾಗಿರುವುದು ಇದು, ದೊಡ್ಡ ತಪ್ಪು ಮಾಡಿದ ಈತನಿಗೆ ಮರಣದಂಡನೆ ವಿಧಿಸಬೇಕು ಅಂತೆಯೇ ಈ ಪೈಶಾಚಿಕ ಕೃತ್ಯದಲ್ಲಿ ಈತನೇ ಮುಂಚೂಣಿಯಲ್ಲಿದ್ದನಂತೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದ್ದದ್ದು ಈತನೇ ಅಂತೆ ಈತನನ್ನು ಸಹಾ ಗಲ್ಲಿಗೆ ಏರಿಸಬೇಕಿತ್ತು ಅಪ್ರಾಪ್ತ ಎಂದು ಹೊರಗೆ ಇಟ್ಟಿದ್ದು ಸರಿಯಲ್ಲ ಇಂಥವರಿಂದ ಇನ್ನಷ್ಟು ಜೀವಗಳು ನೋವು ಅನುಭವಿಸಬೇಕೋ ಗೊತ್ತಿಲ್ಲ ಹಾಗೆ ಅಂಡರ್ ಏಜ್ ಎಂಬ ಹಣೆಪಟ್ಟಿಯಲ್ಲಿ ಇಂತವರು ಇಂತಹ ಕಾರ್ಯಕ್ಕೆ ಮುಂದಾಗುದರಲ್ಲಿ ಯಾವುದೇ ಸಂಶಯವಿಲ್ಲ ಅತ್ಯಾಚಾರ ಮಾಡಿ ಹಿಂಸಾತ್ಮಕವಾಗಿ ಸಾಯಿಸುವ ಕೆಲವು ವಿಕೃತ ಕಾಮಿಗಳಿಗೆ ಮರಣದಂಡನೆ ಸರಿಯಾದ ಶಿಕ್ಷೆ ಆದರೆ ಅದಾಗುತ್ತಿಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದಿಲ್ಲ ಎಂಬುದೇ ಬಹಳ ಬೇಸರ . ಏನೇ ಆಗಲಿ ಅದೆಷ್ಟೋ ವರ್ಷಗಳ ನಂತರ ಕಷ್ಟಪಟ್ಟು ಪಟ್ಟು ಬಿಡದೆ ನೇಣಿಗೇರಿಸಿದ ರಲ್ಲಿ ಶಕ್ತರಾದ ವಕೀಲರಿಗೆ ಹಾಗೂ ಪ್ರತಿಭಟನೆ ಹಾಗೂ ಇವರ ಬೆಂಬಲಕ್ಕೆ ನಿಂತ ಒಳ್ಳೆಯ ಮನಸ್ಸಿಗರ ಶ್ರಮ ದಿಂದ ಉತ್ತಮ ತೀರ್ಪು ಸಿಕ್ಕಿದೆ . ದಿಲ್ಲಿಯಲ್ಲಿನ ಈ ಘಟನೆ ಬೆಳಕಿಗೆ ಬಂದಿದ್ದೂ ಕೊನೆಗೂ ಸುಖಾಂತ್ಯ ಕಂಡಿದೆ . ಇಂತಹ ಅದೆಷ್ಟೋ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಕೆಲವರು ಮಾನ ಮರ್ಯಾದೆ ಗೆ ಅಂಜಿ ಹಾಗೂ ರಾಜಕೀಯ ಒತ್ತಡ, ಬ್ಲಾಕ್ಮೇಲ್ ,ಇನ್ನಿತ್ತರ ಚಟುವಟಿಕೆ ಇಂದ ಬೆಳಕಿಗೆ ಬಾರದೆ ಘಟನೆಗಳು ಅಲ್ಲೇ ಮುದುಡಿ ಹೋಗುತ್ತದೆ . ಒಂದು ಪಕ್ಷದಲ್ಲಿ ಮುಖ್ಯ ವಾಹಿನಿಗೂ ಬಂದರೂ ನ್ಯಾಯ ಮಾತ್ರ ನಮ್ಮ ದೇಶ ದಲ್ಲಿ ಮರೀಚಿಕೆ.! ಅದಕ್ಕಾಗಿ ಅದೆಷ್ಟೋ ಕಥೆಗಳು ವ್ಯಥೇಗಳಾಗಿ ಅಂತ್ಯ ಗೊಳ್ಳುತ್ತಿದೆ. ವಿದೇಶ ಗಲ್ಲಿರುವಂತ ಕಾನೂನು ನಮ್ಮಲ್ಲಿ ಜಾರಿ ಆದರೇ ಇಂಥ ಘಟನೆ ಕಡಿವಾಣ ಬೀಳಬಹುದೇನೋ ? ಪೊಲೀಸರೂ ಸಹಾ ಏನೂ ಮಾಡಲೂ ಸಾಧ್ಯ ವಿಲ್ಲಾ ಅವರ ಕೈ ಕಟ್ಟಿ ಹಾಕುವ ವ್ಯವಸ್ಥೆ ನಮ್ಮಲ್ಲಿದೆ .. ಏನೇ ಇರಲಿ ಇತ್ತೀಚಿಗೆ ನಡೆದ ಹೈದ್ರಾಬಾದ್ ನ ಘಟನೆಯನ್ನು ಮೆಲುಕು ಹಾಕುತ್ತಾ ಒಡಲಧ್ವನಿಗೆ ಫುಲ್ ಸ್ಟಾಪ್ ಇಡುತ್ತಿದ್ದೇನೆ ಆ ಪೊಲೀಸರಿಗೆ ಸೆಲ್ಯೂಟ್ ಹೊಡೆಯಲೇ ಬೇಕು ಚಾಕ ಚಕ್ಯತೆಯಿಂದ ಅವರುಗಳೇ ಆ ಕಾಮಾಂಧರುಗಳಿಗೆ ನೇರವಾಗಿ ತಕ್ಕ ಶಿಕ್ಷೆ ನೀಡಿದ್ದಾರೆ. ಅದಾಗಬೇಕು .
ಗುರುವಾರ, ಏಪ್ರಿಲ್ 2, 2020
ಸ್ವಾಮೀಜಿಗಳೇ ನಿಮ್ಮದು ಇದೆಂತಾ ಭಂಡತನ ?
ಮೊನ್ನೆ ಒಂದು ಘಟನೆ ಘಟಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಕೋಪೋದ್ರಿಕ್ತರಾಗಿ ವೇದಿಕೆಯಿಂದ ಕೆಳಗಿಳಿದರು ಎಂದು ಮಾಧ್ಯಮಗಳು ನಾನ್ ಸ್ಟಾಪ್ ಸುದ್ದಿಯನ್ನು ಹರಿಯಬಿಟ್ಟಿದ್ದವು . ಎಲ್ಲರೂ ಯಡಿಯೂರಪ್ಪನವರದು ತಪ್ಪು ಎಂದು ಹೇಳುತ್ತಿದ್ದರೆ ವಿನಹ ,ಘಟನೆ ಬಗ್ಗೆ ಕಿಂಚಿತ್ ಆಲೋಚನೆ ಅವರಲ್ಲಿ ಇರಲಿಲ್ಲ ಅಷ್ಟಕ್ಕೂ ಅದು ಅಂತ ದೊಡ್ಡ ಘಟನೆಏನೂ ಆಗಿರಲಿಲ್ಲ .ಅದು ದಾವಣಗೆರೆಯ ಹರಿಹರದಲ್ಲಿ ನಡೆಯುತ್ತಿದ್ದ ಹರ ಜಾತ್ರೆಯ ಕಾರ್ಯಕ್ರಮ ಯಾವುದೋ ಒಂದು ಸಮಾವೇಶ . ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರು ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದರು . ಸ್ವಾಮೀಜಿ ಸ್ವಾಮಿ ಕಾರ್ಯ ಮಾಡುದನ್ನು ಬಿಟ್ಟು ಸ್ವ- ಕಾರ್ಯಕ್ಕೆ ಮುಂದಾಗಿದ್ದರು ! ಹೌದಪ್ಪ ಎಂತೆಂತಹ ಸ್ವಾಮೀಜಿಗಳನ್ನು ನಾವು ಪ್ರಸ್ತುತ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ಅಂದರೆ ಅದಕ್ಕೆಲೆಕ್ಕಪತ್ರವಿಲ್ಲ., ವರ್ಣಿಸಲಾಗದಂತ ಆಟಿಟ್ಯೂಡ್ ಅನ್ನು ಹೊಂದಿರುವ ಸ್ವಾಮೀಜಿಗಳು ನಮ್ಮ ಕಣ್ಣಮುಂದೆ ಬೇಡವೆಂದರೂ ಕಾಣಿಸಿಕೊಳ್ಳುತ್ತಾರೆ ಅದೇನೇ ಇರಲಿ , ಈ ಸ್ವಾಮೀಜಿ ಏನು ಮಾಡಿದ್ರು ಅಂದರೆ ತಮ್ಮ ಭಾಷಣದ ಸರದಿ ಬಂದಾಗ ಮೈಕ್ ಎತ್ತಿಕೊಂಡು , ಏರ್ಪಡಿಸಲಾದ ಸಮಾವೇಶದ ಬಗ್ಗೆ ಉಸುರುದನ್ನು ಬಿಟ್ಟು , ಏಕ್ದಂ ಮುಖ್ಯಮಂತ್ರಿ ಬಗ್ಗೆ ಮಾತಾಡ್ಲಿಕ್ಕೆ ಶುರುವಿಟ್ಟು ಕೊಂಡರು ,ಆ ಸ್ವಾಮೀಜಿಯ ಪ್ರಕಾರ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸೀಟು ಉಳಿಸಿಕೊಂಡಿದ್ದರೆ ಅಂದರೆ ಅವರ ಜನಾಂಗದ ಶಾಸಕರಿಂದ ಅಂತೆ , ಅದಕ್ಕೆ ಅವರ ಸಮುದಾಯದವರನ್ನು ಮಂತ್ರಿ ಮಾಡಬೇಕಂತೆ , ಅದಿಲ್ಲದಿದ್ದರೆ ತುಂಬಾ ಕಷ್ಟ ಅನುಭವಿಸುತ್ತಾರೆ ನಿಮ್ಮ ಸೀಟು ಉಳಿಯುವುದಿಲ್ಲ ಅದು-ಇದು ಎಂದು ಬೊಗಳೆ ಬಿಟ್ಟಿದ್ದು ,ಬಿಟ್ಟಿದ್ದು .! ಅಸಲಿಗೆ ಸ್ವಾಮೀಜಿಗೆ ಇದು ಅಗತ್ಯವಿತ್ತೆ ? ಸ್ವಾಮೀಜಿಗೆ ರಾಜಕೀಯ ಯಾಕೆ ? ಎಲ್ಲವನ್ನೂ ತ್ಯಜಿಸಿದ ಸ್ವಾಮಿಗೆ ರಾಜಕೀಯ ದಲ್ಲಿ ಮೂಗು ತೋರಿಸುವ ಅಧಿಕಾರ ವಿದೆಯೇ ? ಅವರ ಇತಿಮಿತಿ ಏನು ಎಂಥ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡದೇ ಇರದು . ಒಂದು ಪಕ್ಷದಲ್ಲಿ ಸ್ವಾಮಿಗೆ ಅಗತ್ಯ ಕಂಡು ಬಂದಿದ್ದರೆ , ಮುಖ್ಯಮಂತ್ರಿಯಲ್ಲಿ ತಮ್ಮ ಈ ವೈಚಾರಿಕತೆಯನ್ನು ಮಂಡಿಸಬಹುದಿತ್ತು ,ಇರಿಸಬಹುದಾಗಿತ್ತು ಅದನ್ನು ಬಿಟ್ಟು ಸ್ವಾಮೀಜಿ, ಬಹಿರಂಗ ಸಭೆಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವುದು ಎಷ್ಟು ಸಮಂಜಸ ವಾದದ್ದು ?ಇದರಿಂದ ತುಸು ಬೇಸರದಿಂದ ಸೀಟಿನಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ಮೇಲೆದಿದ್ದು ತಪ್ಪೇನಿಲ್ಲ . ಸೀಟಿನಿಂದ ಎದ್ದು ಹೊರಗೆ ನಡೆಯಲಿಲ್ಲ ಎದ್ದು ಅವರಲ್ಲಿ ಸೌಜನ್ಯವಾಗಿ ವಿನಂತಿಸಿದ್ದರು "ಸ್ವಾಮೀಜಿಗೆ ನಿಮ್ಮಿಂದ ಈ ಮಾತು ಬರಬಾರದು "ಎಂದು ಅಲವತ್ತುಕೊಂಡ ಕಾಲುಮುಟ್ಟಿ ಬೇಡಿಕೊಂಡಿದ್ದರು ಆದರೆ ವೇದಿಕೆ ಬಿಟ್ಟು ಕೆಳಗೆ ಇಳಿಯಲಿಲ್ಲ ಇದು ಸ್ವಾಮೀಜಿಯ ದುರಾಂಕಾರವೋ ಅಥವಾ ಮುಖ್ಯಮಂತ್ರಿಗಳದ್ದೋ ? ಮಾಧ್ಯಮಗಲ್ಲಿ ಪ್ರಸಾರ ಕಂಡ ವಿಡಿಯೋ ಕ್ಲಿಪ್ ನೋಡಿ ತಾವೇ ತೀರ್ಮಾನಿಸಿ . ಅಲ್ಲಿ ಮುಖ್ಯಮಂತ್ರಿಗಳೇ ಇರಲಿ ಅಥವಾ ಇನ್ನು ಯಾರೇ ಇದ್ದರೂ ಕೂಡ ಸ್ವಾಮೀಜಿ ಮಾಡಿದ್ದು ಮಹಾನ್ ತಪ್ಪು ಅಲ್ಲವೇ ?!ಸ್ವಾಮೀಜಿಗಳಲ್ಲಿ ದೇವರನ್ನು ಕಾಣುತ್ತೇವೆ ,ನಂಬುತ್ತೇವೆ ದೇವರಿಗೆ ಹತ್ತಿರವಾದವರು ,ಅನೂ ದಿನ ಅನೂ ಕ್ಷಣವೋ ಧ್ಯಾನ ಪೂಜೆ ಯಲ್ಲಿ ಮಗ್ನರಾಗಿರುತ್ತಾರೆ ಎಂದು ಅವರಲ್ಲಿ ಆತ್ಮೀಯತೆ,ಪೂಜನೀಯ ಭಾವನೆಯನ್ನು ಬೆಳೆಸುತ್ತೇವೆ ಆದರೆ ಇಂಥ ಚಟುವಟಿಕೆಗಳಿಂದ ಒಳ್ಳೆ ಸ್ವಾಮೀಜಿ ಗಳ ಮೇಲೂ ಸಹ ನಮ್ಮ ನಂಬಿಕೆ ಕುಸಿಯುತ್ತದೆ ಹಾಗೂ ಇತರ ಧರ್ಮದವರ ನಗೆಪಾಟಲಿಗೆ ನಾವು ಈಡಾಗುತ್ತಿದೆ. ಪೇಜಾವರ ಶ್ರೀಗಳು ಹಾಗೂ ಸಿದ್ದಲಿಂಗ ಮಠದ ಸ್ವಾಮೀಜಿಗಳಂತೆ ಯಾವ ಸ್ವಾಮೀಜಿ ಇನ್ನು ಜನ್ಮ ತಾಳಲಾರರಾರು ಅವರ ಪಾದದ ಧೂಳಿಗೆ ಕೂಡ ಸಮವಲ್ಲ ಇಂಥ ಕಪಟ ಭಂಡತನದ ಸ್ವಾಮೀಜಿಗಳಿಂದ ದೂರವಿರುವುದೇ ಲೇಸು ಏನಂತೀರಿ ?
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ (ಕ್ರಪೆ:- #youtub #ಒನ್ ಇಂಡಿಯಾ)
https://www.youtube.com/watch?v=iubma_HjSqU
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ (ಕ್ರಪೆ:- #youtub #ಒನ್ ಇಂಡಿಯಾ)
https://www.youtube.com/watch?v=iubma_HjSqU
ಸೋಮವಾರ, ಡಿಸೆಂಬರ್ 30, 2019
ಕಟೀಲು ಮೇಳದಲ್ಲಿ ಏನೀದು ಗೊಂದಲ ? ಎಲ್ಲಕ್ಕೂ ಪಟ್ಲ ಸತೀಶ್ ಶೆಟ್ಟರೇ ಕೇಂದ್ರ ಬಿಂದು ?!
ಮುಸುಕಿನ ಗುದ್ದಾಟಕ್ಕೆ ಮೊನ್ನೆ ದಿನ ಬ್ರೇಕ್ ಬಿದ್ದಿತು ! ಹೌದು ಬಹಳ ದಿನಗಳ ನಂತರ ನನ್ನ ಒಡಲ ಧ್ವನಿ ಹೇಳ ಹೊರಟಿರುವುದು ಕಟೀಲು ಯಕ್ಷಗಾನ ಮೇಳದಲ್ಲಿನ ಗೊಂದಲವನ್ನು !. ಕಳೆದ ಎರಡು ವರ್ಷಗಳಿಂದ ಕಟೀಲು ಯಕ್ಷಗಾನ ಮೇಳದಲ್ಲಿ ಒಂದಷ್ಟು ವಿವಾದದ ಸುದ್ದಿಯನ್ನು ನಾವು ಕೇಳುತ್ತಾ ಬಂದಿದ್ದೇವೆ . ಅದೆಷ್ಟೋ ಇತಿಹಾಸವನ್ನು ಹೊಂದಿರುವ ಕಟೀಲು ಮೇಳದಲ್ಲಿ ಈ ರೀತಿ ಯಾಕೆ ಆಯಿತು ?ಇದಕ್ಕೆ ಕಾರಣವೇನು ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ . ರಂಗಸ್ಥಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಇಳಿಸಿದ್ದು ಯಾಕೆ ? ಮೇಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರ?,ಅಶಿಸ್ತು ತೋರಿಸಿದ್ದರಾ ಪಟ್ಲಾ ? ಮೇಳದ ಸಂಚಾಲಕರು ಅರ್ಚಕರು ಒಂದು ಕಡೆ ,ಭಾಗವತ ಸತೀಶ್ ಶೆಟ್ಟಿ ಇನ್ನೊಂದು ಕಡೆ ಶೀತಲ ಸಮರಕ್ಕೆ ಕಾರಣವೇನು ? ಈ ಎಲ್ಲಾ ಮನದ ಪ್ರಶ್ನೆಯನ್ನು ಇಟ್ಟುಕೊಂಡು ಬಲ್ಲವರ ಅಭಿಪ್ರಾಯವನ್ನು ನನ್ನ ಓಡಲ ಧ್ವನಿಯಲ್ಲಿ ಮುದ್ರಿಸಿದ್ದೇನೆ .
ಎಲ್ಲವೂ ಸರಿ ಇತ್ತು .. ಯಕ್ಷಗಾನ ಮೇಳದಲ್ಲಿ ಆಗಿದ್ದೇನು ?
ಪಟ್ಲ ಸತೀಶ ಶೆಟ್ಟಿ ಸ್ಟಾರ್ ಮಟ್ಟದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಯಕ್ಷಗಾನ ಭಾಗವತ . ಕಟೀಲು ಮೇಳದಿಂದಲೇ ವೃತ್ತಿ ಆರಂಭಿಸಿದ ತಮ್ಮದೇಯಾದ ವಿಶಿಷ್ಟ ಶೈಲಿಯ ಭಾಗವತಿಕೆ ಯಿಂದ ಪ್ರಸಿದ್ದಿ ಪಡೆದವರು. ಯಕ್ಷ ದ್ರುವ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಿಂದ ಬಡ ,ನಿರ್ಗತಿಕ ,ನಿರಾಶ್ರಿತ ಯಕ್ಷಗಾನ ಕಲಾವಿದ ಬಂಧುಗಳಿಗೆ ಸಹಾಯ ಹಸ್ತವನ್ನು ನೀಡುತ್ತಿರುವ ಈ ಕಾರ್ಯಕ್ಕೆ ಸಾಕಷ್ಟು ಜನ ಮನ್ನಣೆ ಸಿಕ್ಕಿದ್ದು ನಿಜವಾದರೂ, ಕೆಲವೊಂದು ಊಹಾ ಫೋಹಾಗಳೂ ಸಹಾ ಹೊಗೆಯಾಡುತ್ತಿವೆ !
ದಂಗೆ ಎದ್ದರು ಕಲಾವಿದರು :
ಯಕ್ಷಗಾನದ ಅಲ್ಲಿನ ಸಾಂಪ್ರದಾಯಿಕ ನಿಯಮದಂತೆ ವರ್ಷದಿಂದ ವರ್ಷಕ್ಕೆ ಆರೂ ಮೇಳದ ಕಲಾವಿದರುಗಳನ್ನು ಬದಲಾವಣೆ ಮಾಡುವುದು ರೂಢಿ . ಅದರಂತೆ ೨ ವರ್ಷಗಳ ಹಿಂದೆ ೫ನೇ ಮೇಳದಲ್ಲಿದ್ದ ಭಾಗವತ ಪಟ್ಲರನ್ನು ಬೇರೆ ಮೇಳಕ್ಕೆ ವರ್ಗಾವಣೆ ಮಾಡಿದ್ದರಿಂದ ಖುದ್ದು ಪಟ್ಲಾರಿಗಲ್ಲದೇ ,ಅವರ ಹಿತೈಷಿ ಕಾಲವಿದರು ದಂಗೆ ಎದ್ದರು ಪಟ್ಲರನ್ನು ವರ್ಗಾವಣೆ ಮಾಡಬಾರದು ಎಂದು 25 ಕಲಾವಿದರ ಪೈಕಿ 23 ಮಂದಿ ರಾಜೀನಾಮೆಗೆ ಕೊಟ್ಟರು .ವ್ಯವಸ್ಥಾಪಕನಾ ಮಂಡಳಿ ಅವರನ್ನು ನಿರ್ದಾಕ್ಷನ್ಯವಾಗಿ ಮೇಳದಿಂದ ಕೈ ಬಿಟ್ಟಿತು . ತಮ್ಮ ತಪ್ಪನ್ನು ಒಪ್ಪಿಕೊಂಡು ಪುನ್ಹ ಮೇಳಕ್ಕೆ ಕಲಾವಿದರು ಹಿಂತಿರುಗಿದ್ದೂ ಇತಿಹಾಸವಾದಾರೂ ,ಇಂದು ಈ ಘಟನೆಗೆ ಒಂದು ಎಳೆ ಸಹಾ ಕಾರಣವಿಲ್ಲಾ ಅನ್ನುವಂತಿಲ್ಲ ಇಲ್ಲಿಂದ ಶುರುವಾಗುತ್ತಿತ್ತು ಮುಸುಕಿನ ಗುದ್ದಾಟ . ತಾನೇ ಸುಪ್ರೀಂ ನನ್ನ ನಿರ್ಣಾಯದಂತೆ ಎಲ್ಲವೂ ನೆಡೆಯಬೇಕೆಂದು ಬೀಗುತ್ತಿದ್ದಾ ಸತೀಶ್ ಶೆಟ್ಟರು (ಬಲ್ಲ ಮೂಲಗಳ ಪ್ರಕಾರ )..ಎಲ್ಲಿ ನನ್ನಿಂದ ಕಾರ್ಯ ಸಾಧನೆ ಆಗುವುದಿಲ್ಲ ಎಂದು ಮನಗೊಂಡಾಗ ಮೇಳದ ವಿರುದ್ಧವಾಗಿ ಅಲ್ಲಲ್ಲಿ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಾ ಬಂದಿದರು ಎನ್ನುವ ಮಾತು ಕೂಡ ಇವೆ .
ಆ ದಿನ ನಡೆದಿದ್ದು ಏನು ?
ಪಟ್ಲ ಸತೀಶ್ ಶೆಟ್ಟಿ ಮತ್ತು ಮೇಳದ ಯಜಮಾನರ ನಡುವಿನ ವೈಮನಸ್ಸು, ಮೇಳದ ತಿರುಗಾಟದ ಮೊದಲನೇ ಹರಕೆಯಾಟದಂದೇ ಬಹಿರಂಗಗೊಂಡಿತು
ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಐದು ಮೇಳಗಳ ತಿರುಗಾಟದ ಮೊದಲ ಸೇವೆಯಾಟ ಏಕಕಾಲಕ್ಕೆ, ಶುಕ್ರವಾರ ನ 22 ಕಟೀಲು ಕ್ಷೇತ್ರದಲ್ಲಿ ನಡೆಯುತ್ತಿತ್ತು. ತಡರಾತ್ರಿ 12.45 ಸುಮಾರಿಗೆ ಭಾಗವತಿಕೆಗಾಗಿ ವೇದಿಕೆಗೆ ಆಗಮಿಸಿದ ಪಟ್ಲ ಸತೀಶ್ ಅವರನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು . ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿ ಕೊಟ್ಟರೂ , ಇದರ ಹಿಂದೆ ಸಾಕಷ್ಟು ಕಾರಣವೂ ಇತ್ತು ಮೇಳದಲ್ಲಿ ಅಶಿಸ್ತು ದೂರವುದು ಹಾಗೂ ಮೇಳದ ವಿರುದ್ಧ ಹೇಳಿಕೆಯನ್ನು ನೀಡುತ್ತಾ ಬಂದಿರುದರಿಂದ ಮೇಳದ ಮಾಲೀಕರು ಹಾಗೂ ದೇವಳದ ಆಡಳಿತ ಮಂಡಳಿಯ ನಿರ್ಣಾಯದಂತೆ ಯಜಮಾನರು ಈ ಬಾರಿ ಮೇಳದಿಂದ ಹೊರಕೆ ಇರಲೂ ಆದೇಶಿಸಿದ್ದರು ಎಂಬ ಮಾತೂ ಇದ್ದೂ ಅದನ್ನು ದಿಕ್ಕರಿಸಿ ರಂಗಸ್ಥಳಕ್ಕೆ ಬಂದಿದ್ದರಿಂದ ಕೆಳಗೆ ಇಳಿಯಲು ಮೇಳದ ಮಾಲೀಕರು ಸೂಚಿಸಿದರಂತೆ . ಇದು ಸತೀಶ್ ಶೆಟ್ಟಿ ಯವರದ್ದು ತಪ್ಪು ಅಲ್ಲದೆ ಮತ್ತಿನೇನು ?
ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಏನು ಆಂತಾರೆ ?:
"ಕಳೆದ ಎರಡು ವರ್ಷದಿಂದ ಯಕ್ಷಗಾನ ಮೇಳದ ಬಗ್ಗೆ ತೆಜೋವಧೆ ಮಾಡುತ್ತಿದ್ದಾರೆ. ಆದರೆ ನಾವು ಯಾವುದೇ ಹೇಳಿಕೆ ನೀಡಿಲ್ಲ, ಏನಿದ್ದರೂ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸುತ್ತೇನೆ, ಅದರಂತೆ ಪಟ್ಲ ಭಾಗವತನನ್ನು ಮೇಳದಿಂದ ಕೈ ಬಿಟ್ಟು ಶಿಸ್ತು ಕೈಗೊಂಡಿದ್ದೇನೆ, ಕಟೀಲು ಮೇಳದ ಗೌರವ, ಮೇಳದ ಸೇವಾಕರ್ತರ ಗೌರವ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ನಾವು ಎಲ್ಲೂ ಹೇಳಿಕೆ ನೀಡಿಲ್ಲ, ಕಳೆದ ಪತ್ತನಾಜೆ ಬಳಿಕ ನ.22ರಂದು ಕಟೀಲು ದೇವಸ್ಥಾನದಲ್ಲಿ ನಡೆದ ಸೇವೆಯಾಟದ ವರೆಗೆ ಪಟ್ಲ ಸತೀಶ್ ಶೆಟ್ಟಿ ಎಂದೂ ಮೇಳದ ಯಜಮಾನರನ್ನಾಗಲೀ, ದೇವಸ್ಥಾನದ ಮುಖ್ಯಸ್ಥರನ್ನಾಗಿಲೀ ಭೇಟಿ ಮಾಡಿಲ್ಲ. ಮೊನ್ನೆ ಸೇವೆಯಾಟದ ದಿನವೇ ಅವರು ಕಟೀಲಿಗೆ ಬಂದದ್ದು.ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಮೇಳದ ಕಲಾವಿದರನ್ನು ಹಂಚಿಕೆ ಮಾಡಿ ಚೌಕಿಯಲ್ಲೇ ಈ ಬಗ್ಗೆ ಕಲಾವಿದರಿಗೆ ಮಾಹಿತಿನಿಡುವುದು ಸಂಪ್ರದಾಯ. ಪಟ್ಲ ಸತೀಶ್ ಶೆಟ್ಟಿಯನ್ನು ಯಾವ ಮೇಳದ ಭಾಗವತರನ್ನಾಗಿಯೂ ಹೆಸರಿಸಿರಲಿಲ್ಲ. ಮೊದಲೇ ಈ ಬಗ್ಗೆ ಸೂಚನೆ ಸಿಕ್ಕ ಬಳಿಕವೂ ರಂಗಸ್ಥಳಕ್ಕೆ ಭಾಗವತ ಮಾಡಲು ತೆರಳಿದ್ದು ಉದ್ದೇಶಪೂರ್ವಕವಾಗಿದೆ. ವಿವಾದ ಮಾಡುವುದೇ ಅವರ ಉದ್ದೇಶ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ "ಎಂದು ಹೇಳುತ್ತಾರೆ .
ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯ:
"ನಾನು ಪ್ರಧಾನ ಭಾಗವತಿಗೆ ಯಿಂದ ಹಿಂದೆ ಸರಿದಿದ್ದು ಪೌಂಡೇಶನ್ ಕಾರ್ಯಾಚರಣೆ ಗಾಗಿ ಹೊರದೇಶ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಬೇಕಾಗುದರಿಂದ ನನ್ನಿಂದ ನಿರ್ವಹಿಸಿಲು ಸಾಧ್ಯ ವಿಲ್ಲದ ದ್ರಷ್ಟಿ ಯಿಂದ ಯಜಮಾನರಲ್ಲಿ ವಿನಂತಿಸಿದ್ದೇನೆ . ಯಾವುದೇ ಫಲಾಪೇಕ್ಷೆ ಇಲ್ಲದೇ ಕಟೀಲು ಮೇಳದಲ್ಲಿ ಕಾರ್ಯನಿವ ಹಿಸುತ್ತಿದ್ದೇನೆ . ತಾಯಿ ಸೇವೆ ಎಂದಾ ಆಲೋಚಿಸಿ ಮಾಡುತ್ತಿದ್ದೇನೆ . ರಂಗಸ್ಥಳದಿಂದ ಕೆಳಗೆ ಇಳಿಸಿದ್ದು ತಪ್ಪು ನನಗೆ ಭಾಗವತಿಗೆ ಮಾಡಬೇಡ ಮೇಳದಿಂದ ಹೊರಗೆ ಹೋಗು ಎಂದು ಆದೇಶಿಸಿಲ್ಲ "ಎನ್ನುತ್ತಾರೆ. ಏನೇ ಇರಲಿ ಮೇಳದ ಯಜಮಾನರು ,ಅರ್ಚಕರ ಹಾಗೂ ಸತೀಶ್ ಶೆಟ್ಟಿಯವರ ಶೀತಲ ಸಮರ ಬೆಳಕಿಗೆ ಬಂದ್ದಿದಂತೂ ಸತ್ಯ
ಪಟ್ಲರನ್ನು ಕೆಳಗೆ ಇಳಿಸದ್ದು ಸರಿಯಲ್ಲ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದರೆ, ಇತ್ತಾ ಆಡಳಿತ ಮಂಡಳಿಯ ಪರವಾಗಿಯೂ ಸಹಾ ಉತ್ತಮ ಮಾತು ಕೇಳಿಬರುತ್ತಿವೆ . ಈ ಕ್ಷೇತ್ರದಲ್ಲಿ ಇಂತ ಒಂದು ವಿಚಾರ ಹೀನ ವಿವಾದ ನಡೆಯಬಾರದಿತ್ತು ಎನ್ನುವುದು ಪ್ರಜ್ಞಾವಂತರ ಅಭಿವ್ಯಕ್ತಿ.ಕೊನೇದಾಗಿ ಒಂದು ಮಾತು ವಂಶ ಪಾರಂಪರ್ಯವಾಗಿ ಮೇಳವನ್ನು ನೆಡಸಿ ಕೊಂಡು ಬರುತ್ತಿರುವ ಕಲ್ಯಾಡಿ ಕುಟುಂಬ, ಕಾಲಕ್ಕೆ ತಕ್ಕಂತೆ ,ಸಾಂಪ್ರಾಯಿಕವಾಗಿ ತಲೆ -ತಲಾಂತರ ದಿಂದ ನಡೆಸಿಕೊಂಡು ಬರುವ ಪದ್ದತಿಗೆ ಕೊಳ್ಳಿ ಇಡುವುದು ಸರಿಯಲ್ಲ .ಕಲಾವಿದರಿಗೆ ರಜೆ ಸಂಬಳ , ವಿಶೇಷ ಸೌಲಭ್ಯ ಸಿಗುತ್ತಿದ್ದೂ ,ಏಲಂ ಮಡಬೇಕು ಎಂದೆಲ್ಲಾ ಯೋಚಿಸಿ ಕೋರ್ಟು ಮೆಟ್ಟಲೇರುವುದು ಹುಂಬತನ .
ಹಾಗೆಯೇ ಪಟ್ಲಾ ಸತೀಶ್ ಶೆಟ್ಟರಿಗೆ ಅಂಹಂಕಾರ ಬಂದಿದೆ ಮೇಳದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುದಿಲ್ಲ ಬೇರೆ ಕಾರ್ಯಕ್ರಮಗಳಿಗೆ ವಲಸೆ ಹೋಗುವುದೇ ಹೆಚ್ಚು .ಅತಿಥಿ ಕಲಾವಿದರಂತೆ ಇದ್ದಾರೆ ಅನ್ನುವ ಮಾತು ಇದೆ . ಪೌಂಡೇಶೇನ್ ನಿರ್ವಹಣೆ ಜವಾಬ್ದಾರಿ ,ಪ್ರವಾಸ ಇದೆಲ್ಲಾ ಒತ್ತಡ ದ ನಡುವೆ ಮೇಳದಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುವುದು ಕಷ್ಟ . ಮೇಳವನ್ನು ಬಿಟ್ಟು ತಮ್ಮ ಬೇರೆ ಕಾರ್ಯದ ಬಗ್ಗೆ ಗಮನ ಹರಿಸುವುದು ಸೂಕ್ತ .ಹಾಗೆಯೇ ಯಕ್ಷ ಧ್ರುವ ಪಟ್ಲಾ ಪೌಂಡೇಶನ್ ನಿಂದ ಅವ್ಯವಹಾರ ಇದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ ಸಂತೃಸ್ಥರೀಗೆ ಅದು ಸೂಕ್ತವಾಗಿ ಬಳಕೆ ಆಗುತ್ತಿಲ್ಲ ಎಂಬುದು . !ಏನೇ ಇರಲಿ ಎಲ್ಲವೂ ತಾರ್ಕಿಕ ಅಂತ್ಯ ಕಾಣಲಿ ..ದೇವಿ ಎಲ್ಲರಿಗೂ ಒಳಿತನ್ನು ಉಂಟು ಮಾಡಲಿ.

ಮಂಗಳವಾರ, ಏಪ್ರಿಲ್ 9, 2019
ಮೋದಿ ಮತ್ತೊಮ್ಮೆ ಮನದಲ್ಲಿರಲಿ!
ಲೋಕ ಸಭಾ ಚುನಾವಣೆ ಮತ್ತೆ ಬಂದಿದೆ . ಮೋದಿ ಸರ್ಕಾರವನ್ನು ಮತ್ತೆ ತರಲು ಒಕ್ಕೊಲರಿಂದ ಯುವ ಸಮುದಾಯ ,ಪ್ರಜ್ಞಾವಂತ ನಾಗರಿಕರು ಸಜ್ಜಾಗಿದ್ದಾರೆ . "ಮೋದಿ.. ಮೋದಿ" ! 'ಮತ್ತೊಮ್ಮೆ ಮೋದಿ' !! ಎಂಬ ವೇದ ವಾಕ್ಯವನ್ನು ಉಚ್ಚರಿಸುತ್ತಿದ್ದಾರೆ ಸ್ತುತರ್ಹ! ಸುಮಾರು 70ವರ್ಷಗಳ ಬಳಿಕ ಪ್ರಧಾನಿ ಹುದ್ದೆಗೆ ಒಂದು ಗೌರವ ಮತ್ತು ದೇಶದ ಅಭಿವೃವುದ್ಧಿಗೆ ಹೆಸರುವಾಸಿಯಾಗಿದ್ದು ಮೋದಿ ಬಿಟ್ಟರೆ ಬೇರಾರಿಂದಲೂ ಆ ರೆಕಾರ್ಡ್ನ್ನು ಮುರಿಯುದಕ್ಕೆ ಸಾಧ್ಯವಾಗಿಲ್ಲ ,ಭವಿಷ್ಯದಲ್ಲಿ ನರೇಂದ್ರ ಮೋದಿ ಬಿಟ್ಟರೆ ಆ ಸಾಲಿಗೆ ಬೇರೆ ಯಾರೂ ಆ ಯೋಗ್ಯತೆಯನ್ನು ಕಾಪಾಡುದಕ್ಕೆ ಸಾಧ್ಯವೇ ಇಲ್ಲ . ಮೋದಿ ಪ್ರಧಾನಿಯಾಗುವುದಕ್ಕೆ ಮುಂಚೆ ಗುಜರಾತ್ ನಲ್ಲಿ ಹ್ಯಾಟ್ರಿಕ್ ಮುಖ್ಯ ಮಂತ್ರಿಯಾಗಿ ಸಾಧನೆ ಸಾಹಸಗಾಥೆ ಅವರ ಬಗ್ಗೆ ಪ್ರಶಂಸೆಯ ಮಾತು ದೇಶದ ಉದ್ದಗಲಕ್ಕೂ ಮೂಡಲು ಹೆಚ್ಚಿನ ಸಮಯವೇ ಬೇಕಾಗಿರಲಿಲ್ಲ ಪ್ರಧಾನಿ ಪಟ್ಟ ಸ್ವೀಕರಿಸಿದ ನಂತರ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದೂ ಸುಳ್ಳಲ್ಲ . ದೇಶದ ಗಲ್ಲಿ -ಗಲ್ಲಿ ಗಳಲ್ಲಿ ಬಿಡಿ ಶತ್ರು ದೇಶದವರ ಕೂಡಾ ಚಾಯಿವಾಲನ ಬಗೆಗೆ ಉತ್ತಮ ಮಾತುಗಳನ್ನು ಆಡುತ್ತಿವೆ . ಚೌಕಿದಾರನ ಅದೆಷ್ಟೋ ಯೋಜನೆಗಳು ಅದೆಂತಾ ಯೋಚನೆಗಳು !! .ಒಂದಂತೂ ಸತ್ಯ ಮೋದಿಗೆ 5 ವರ್ಷ ಎಲ್ಲೂ ಸಾಕಾಗಿಲ್ಲ ಇನ್ನೂ ಸಾಕಷ್ಟು ಯೋಜನೆಗಳು ಅವರ ಬತ್ತಳಿಕೆ ಯಲ್ಲಿದೆ ಚಿಗುರು ಒಡೆಯುತ್ತಿದೆ. ಇನ್ನೂ ಸಮಯ ಬೇಕು ಆ ಸಮಯ ನಮ್ಮಲ್ಲಿದೆ ನಾವು ಕೊಟ್ಟರೆ ಖಂಡಿತವಾಗಿಯೂ ಮುಂದಿನ ಅವಧಿಯಲ್ಲಿ ದೇಶ ಇನ್ನಷ್ಟು ಬಲ ಶಾಲಿಯಾಗುವದರಲ್ಲಿ ಯಾವುದೇ ಅನುಮಾನ ವಿಲ್ಲಾ . ನೋಟ್ ಬ್ಯಾನ್ ಜಿಎಸ್ಟಿ ಗಳೆಲ್ಲಾ ಮುಂದಿಟ್ಟು ವಿರೋಧ ಪಕ್ಷದವರು ಮತ ಭೇಟಿಗೆ ಇಳಿದಿದ್ದಾರೆ . ಅದು ಪ್ರಜ್ಞಾವಂತರಿಗೆ ಗೊತ್ತು ಎಲ್ಲೂ ಒಂದ್ಚೂರು ಜನ ಮಾನಸದಲ್ಲಿ ತೊಂದರೆ ತಂದಿದ್ದು ಸತ್ಯ ಆದರೆ ,ಇದು ದೇಶಕ್ಕೆ ಎಷ್ಟು ಲಾಭ ತಂದಿದೆ ಎನ್ನುವುದನ್ನು ಸಹಾ ಮನಗಾಣಬೇಕು . ಕಳೆದ 70ವರ್ಷಗಳಿಂದ ಗಾಂಧಿ ಎಂದು ಹೆಸರು ಹೇಳಿ ಕೊಂಡು ಬಂದ ಅತಿರಥರಿಂದ ಅದೆಷ್ಟು ಪ್ರಯೋಜನ ದೇಶ ಕಂಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಕಳೆದ ಬಾರಿ ರಾಬೊಟೋ ಮನ್ಮೋಹನ್ ಸಿಂಗ್ ನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ . ಕೆಜಿಗೂ ಲೀಟರ್ ಗೂ ವ್ಯತ್ಯಾಸ ಗೊತ್ತಿಲ್ದೆ ಇರುವವ , ಸರಿಯಾಗಿ ಮಾತನ್ನು ಹೊರಡಿಸಲಾಗದವ .ಕಂಡ ಕಂಡ ಸಭೆಯಲ್ಲಿ ಟ್ರಾಲ್ ಪೀಸ್ ಆಗಿರುವ ಈಗ ಒಂದೊಮ್ಮೆ ಪ್ರಧಾನಿಯಾದ್ರೆ ದೊಡ್ಡ ಜೋಕರ್ ಬಿಟ್ಟರೆ ಪ್ರಧಾನಿ ಕುರ್ಚಿಗೆ ಅಯೋಗ್ಯ !ಇನ್ನೂ ಕಾಂಗ್ರೆಸ್ ನಲ್ಲಿ ಯಾವೊಬ್ಬನೂ ಸಹಾ ಪ್ರಧಾನಿ ಸ್ಥಾನಕ್ಕೆ ಇಲ್ಲವೇ ಇಲ್ಲ . ಒಂದಿಷ್ಟು ಮೈತ್ರಿ ಪಕ್ಷಗಳು ಕುರ್ಚಿ ಆಸೆಗೆ ಹಪಹಪಿಸುತ್ತವೆ .ಒಂದೊಮ್ಮೆ ಈ ದೋಸ್ತಿ ಸರ್ಕಾರ ಸ್ಥಾಪನೆಯಾದರೂ ಸುಭದ್ರ ಸರ್ಕಾರ ಎಷ್ಟರ ಮಟ್ಟಿಗೆ ನೀಡಬಲ್ಲರು ಎಂಬುದು ಎಲ್ಲರ ಅರಿವೆಗೆ ಬಂದಿರುವಂತದ್ದೇ. ಇನ್ನು ಮಹಾ ಘಟ ಬಂಧನ್ ಎಂದು ಹೋರಾಟಕ್ಕೆ ಇಳಿದಿರುವ ಇವರುಗಳಿಂದ ಯಾವ ಸರಿ ಸಾಟಿ ಇಲ್ಲ ಮೋದಿ ಹೆಸರು ಹೇಳಲಿಕ್ಕೂ ಲಾಯಿಕ್ಕ ಇಲ್ಲದ ಇವರುಗಳ ನಾಲಿಗೆ ಎಷ್ಟು ಹರಿಸಿದರೂ ಅಷ್ಟೇ ! 18 ಗಂಟೆಗಳ ಕಾಲ ಹಗಲು ಇರುಳು ಎನ್ನದೆ . ತನ್ನ ಪರಿವಾರವನ್ನು ಬಿಟ್ಟು ದೇಶದ ಸೇವೆಗಾಗಿ ದುಡಿಯುತ್ತಿರುವ ತನ್ನ ರಾಜಕೀಯದ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ಮುಕ್ತ ಪಾರದರ್ಶಕವಾಗಿ ಆಡಳಿತ ನೀಡಿದ ಮೋದಿ ಮುಂದೆಯೂ ಸಹಾ ಅತೀ ಹೆಚ್ಚು ಮತಗಳಿಂದ ಆರಿಸಿ ಬರ್ಬೇಕು . ಇದೆ ಬರುವ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡೋಣ ಸ್ಥಳೀಯ ಅಭ್ಯರ್ಥಿ ಯಾರೇ ಇರಲಿ ಮೋದಿ ಮುಖ ನೋಡಿ ತಮ್ಮ ಓಟ್ ಒತ್ತಿ ಇದು ಸ್ಥಳೀಯ ಚುನಾವಣಯಲ್ಲ ಅಭ್ಯರ್ಥಿಯ ಅರ್ಹತೆ ಪ್ರಮಾಣ ಪತ್ರವನ್ನು ನೋಡುವುದು ಬೇಡ ಭವಿಷ್ಯ ಭಾರತದ ಬಗ್ಗೆ ಗಮನ ವಹಿಸೋಣ ..ಮೋದಿ ಮತ್ತೊಮ್ಮೆ ಎಂಬದು ಮನದಲ್ಲಿರಲಿ !
ಮಂಗಳವಾರ, ಏಪ್ರಿಲ್ 2, 2019
ಲೋಕಾ ಸಮರ :ಮಂಡ್ಯಕ್ಷೇತ್ರವೂ ,ಕುಮಾರ ಸ್ವಾಮೀ ಕಿತಾಪತಿಯೂ !
ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ ,ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಭ್ಯರ್ಥಿಗಳ ಭವಿಷ್ಯಕ್ಕೆ ಸಾಕ್ಷಿ ಬರೆಯಲು ಹೊರಟಿರುವ ಲೋಕ ಸಭಾ ಚುನಾವಣೆಯ ಮೈತ್ರಿ ಸರ್ಕಾರದ ಸೀಟು ಹಂಚಿಕೆ ವಿಚಾರದಲ್ಲಿ ಬಹಳಷ್ಟು ರಂಗಿನಾಟ ನಡೆಯುತ್ತಿದೆ.ಕುಟುಂಬ ರಾಜಕೀಯಕ್ಕೆ ಹೆಸರಾಗಿರುವ ದೇವೇಗೌಡರ ತಾಳ್ಮೆ ಕಿಂಚಿತ್ ಕಡಿಮೆ ಆದಂತೆ ಇಲ್ಲ ಎಂದೇ ಹೇಳಬಹುದು ಈ ಬಾರಿ ಚುನಾವಣೆಗೆ ತಮ್ಮ ಕುಟುಂಬದ ಇನ್ನೆರೆಡು ಹೊಸ ಮುಖವನ್ನು ಕಣಕ್ಕಿಳಿಸಿದೆ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಹಾಗೂ ರೇವಣ್ಣ ಪುತ್ರ ಪ್ರಜ್ವಲ್ ! ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಘಟಾಘಟಾನಿ ಮುಖಂಡರು ಕಾರ್ಯಕರ್ತರು ,ಗೆಲ್ಲುವ ಕುದುರೆಗಳಿದ್ದರೂ ಅವ್ರೇರಿಗೂ ಬಿ ಫಾರ್ಮ್ ಇಲ್ಲ . ಅವರುಗಳೆಲ್ಲರೂ ಕೇವಲ ಪಾರ್ಟಿ ಪಕ್ಷಕ್ಕಾಗಿ ಹಗಲಿರುಳು ಬೆವರು ಸುರಿಸಿ ದುಡಿಯುವುದಕ್ಕೆ ಮಾತ್ರ ಸೀಮಿತ .
ಇದು ಜೆಡಿಎಸ್ ನಲ್ಲಿ ಹೊಸತು ಅಲ್ಲ ಬಿಡಿ ಆದರೆ ಹೊಸದಾಗಿ ಕಾಣುವುದು ಸದ್ಯದ ಪರಿಸ್ಥಿತಿ ಮಂಡ್ಯ ಕ್ಷೇತ್ರ. ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಾದ್ಯಂತ ಪ್ರತಿಷ್ಟೆಯ ಕಣವಾಗಿ ಮೂಡಿ ಬಂದಿದೆ. ದಿವಂಗತ ನಟ ಅಂಬರೀಷ್ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಗೆದ್ದು ಎಂಪಿ ಆಗಿದ್ದರು. ಜನಪ್ರತಿನಿಧಿಯಾಗಿ ತಮ್ಮ ಕೈಲಾದ ಜನೋಪಯೋಗಿ ಕೆಲಸವನ್ನು ನಿರ್ವಹಿಸಿದರು ಕಾವೇರಿ ನೀರಿನ ವಿಚಾರದ ಬಗ್ಗೆ ತಮ್ಮ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಗಮನ ವಹಿಸಿಲ್ಲ ಎಂದು ತಮ್ಮ ರಾಜೀನಾಮೆ ಸಲ್ಲಿಸಿದವರು .ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಅಂಬರೀಶ್ ಅವರ ಪರವಾಗಿ ಅವರ ಸ್ಥಾನ ತುಂಬಲು ಪತ್ನಿ ಸುಮಲತಾ ಅಂಬರೀಶ್ ಅವರಿಗೆ ಜನರ ಒತ್ತಾಯದ ಮೇರೆಗೆ ಮಂಡ್ಯ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ದಿಸಿದ್ದಾರೆ .ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ರಾಜ್ಯದಲ್ಲಿ ಪ್ರತಿಫಲಿತವಾಗಿದೆ .ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಸ್ನಿಂದ ಸುಮಲತಾಗೆ ಟಿಕೆಟ್ ಕೊಡವುದರ ಬಗ್ಗೆ ಸುದ್ದಿ ಕೇಳಿಬಂದಿತ್ತದರೂ ತಮ್ಮ ಕುಟುಂಬ ರಾಜಕೀಯ ಯಕ್ಕೆ ಹೆಸರು ವಾಸಿ ಯಾದ ದೇವೇಗೌಡರು ಬಿಡಬೇಕಲ್ಲ ಅದು ಸುದ್ದಿಗೆ ಮಾತ್ರ ಸೀಮಿತವಾಗಿತ್ತು ಕೊನೆಗೂ ಕುಮಾರ ಸ್ವಾಮೀ ಅವರು ತನ್ನ ಮಗನನ್ನೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿಬಿಟ್ಟರು . ಎಲ್ಲೂ ಸಣ್ಣ ಅನುಮಾನ ಖಂಡಿತ ಕುಮಾರ ಸ್ವಾಮಿಗೆ ಇತ್ತು ಸುಮಲತಾ ವಿರುದ್ಧ ಮಗ ಜಯ ಸಾಧಿಸುವುದು ಕಷ್ಟವೇ ಸರಿ ಅಂತಾ ,ಸುಮಲತಾ ವರನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಿಲ್ಲದ ಕಸರತ್ತುನ್ನು ಮಾಡುತ್ತಾ ಬಂದಿದ್ದಾರೆ .ಆದರೂ ಧೈರ್ಯ ಗುಂದದ ಸುಮಲತಾ ಅಖಾಡಕ್ಕೆ ಮುನ್ನುಗಿದ್ದಾರೆ . ತನ್ನ ಮಗನನ್ನು ಮಂಡ್ಯ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಕುಮಾರಸ್ವಾಮಿ. ತಮ್ಮ ಸ್ವಂತ ಕ್ಷೇತ್ರದಂತೆ ಇರುವ ಎಲ್ಲಿ ಒಂದಷ್ಟು ತನ್ನ ಪ್ರಾಬಲ್ಯತೆಯನ್ನು ಹೊಂದಿದ್ದವುದು ಸುಳ್ಳಲ್ಲ . ರೈತರ ಸಾಲ ಮನ್ನಾ ಎಂಬ ನಾಟಕಗಳನ್ನು ಜಾರಿಗೆ ತಂದು ,ಮೊಸಳೆ ಕಣ್ಣೀರು ಹಾಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಕ್ಕೆ ಏಳು ಜೆಡಿಎಸ್ ಪಾಳಯಕ್ಕೆ ಒಲಿದು ಬಂದಿತ್ತು., ಅದೇ ಹುಮ್ಮಸ್ಸು ಹಾಗೂ ತನ್ನದೇ ಆಡಳಿತ ಪಕ್ಷ ಎಂಬ ಬಿಗುಮಾನ ಅವರಿಗೆ ಪ್ಲಸ್ ಪಾಯಿಂಟ್ . ಆದರೆ ಸುಮಲತಾ ಅವರಿಗೆ ಮಂಡ್ಯದ ಗಂಡು ಅಂಬರೀಶ್ ವರ್ಚಸ್ಸು . ಸಿಂಪತಿ ಹಾಗೂ ಕುಮಾರ ಸ್ವಾಮೀ ಕುಟುಂಬ ರಾಜಕಾರಣ ದ್ವೇಷ ಇದೆಲ್ಲಾ ಸುಮಲತಾ ಅವರಿಗೆ ಹೆಲ್ಪ್ ಆಗಬಹುದು.ಸುಮಲತಾರನ್ನು ಸೋಲಿಸಬೇಕು ಹಾಗೂ ಕಣಕ್ಕೆ ಇಳಿಯದಂತೆ ಗಮನಹರಿಸಬೇಕೆಂದು ಕುಮಾರ ಸ್ವಾಮೀ ಮತ್ತು ರೇವಣ್ಣ ಸಾಕಷ್ಟು ಸರ್ಕಸ್ ಮಾಡಿದರೂ ಏಳ್ಳ ಷ್ಟೂ ಪ್ರಯೋಜನ ಕಂಡಿಲ್ಲ ಇಲ್ಲ ಸಲ್ಲದ ಹೇಳಿಕೆ ,ನಾಮಪತ್ರ ಸಲ್ಲಿಸುವ ವೇಳೆ ಪವರ್ ,ಕೇಬಲ್ ಕಟ್ ಹೀಗೆ ನಾನಾ ಸಮಸ್ಯೆನ್ನು ತಂದು ಒಡ್ಡಿದರೂ ,ಜನರ ಆಶೋತ್ತರಕ್ಕೆ ಹಿಂದೆ ಸರಿಯದೇ ಮುಂದಡಿ ಇಟ್ಟಿದ್ದಾರೆ .ಉತ್ತಮ ಪ್ರಶಂಸೆಯ ಮಾತು ಮತ್ತು ಆಶೀರ್ವಾದ ಮಂಡ್ಯ ಜನತೆಯಿಂದ ಕೇಳಿಬರುತ್ತಿದೆ ಬೇಕು ಬೇಡದ ಹೇಳಿಕೆಗಳನ್ನು ಕೊಡುತ್ತಾ ಬಂದಿರುವ ಕುಮಾರಸ್ವಾಮಿ ಬ್ರದರ್ಸ್ ಇದುವರಿಗೂ ಏನೂ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಇನ್ನೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಮತದಾರರಲ್ಲಿ ಒಂದಷ್ಟು ಗೊಂದಲ ಮೂಡಿಸಲು ಕೃತಕ ಮೂರು ಮಂದಿ ಸುಮಲತಾ ಕ್ಯಾಂಡಿಡೇಟ್ ಅನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ .ಏನೆನೆಲ್ಲಾ ಕಸರತ್ತು ನಡೆಸುತ್ತಿರುವಇವರುಗಳು ಮುಂದೆ ಎಷ್ಟು ತಲೆ ಓಡಿಸಿದರೂ ಪ್ರಯೋಜನಕಾರಿ ಆಗದು ಮತದಾರರು ಪ್ರಜ್ಞಾವಂತರು ಕೆಲವೇ ದಿನಗಳಲ್ಲಿ ಫಲಿತಾಂಶ ಉತ್ತರ ನೀಡಬಲ್ಲದು !
ಶುಕ್ರವಾರ, ಫೆಬ್ರವರಿ 22, 2019
ಮೊದಲು ಒಳಗಿರುವ ಭಯೋತ್ಪಾದಕರನ್ನು ಮಟ್ಟ ಹಾಕ್ಬೇಕು !
ಹೌದು !ಅದು ಫೆ ೧೪ ಭಾರತದ ಪಾಲಿಗೆ ಕರಾಳ ದಿನ .ಜಮ್ಮುವಿನ ಆವಂತೀಪುರ ಪಲ್ವಾನದಲ್ಲಿ ಉಗ್ರ ನೋರ್ವನ ಆತ್ಮಾಹುತಿ ಬಾಂಬ್ ದಾಳಿಗೆ ಸುಮಾರು ೪೦ ಮಂದಿ ನಮ್ಮ ವೀರ ಯೋಧರು ಹುತಾತ್ಮರಾದರು . ಉಗ್ರ ಆದಿಲ್ ನಮ್ಮವನೇ ಆದರೂ , ಪಾಪಿ ಪಾಕಿಸ್ತಾನದ ಕೃಪಾಕಟಾಕ್ಷದಿಂದ ಆಗಬಾರದ ಘಟನೆ ನಡೆದೇ ಹೋಯಿತು. ಭಾರತಾಂಬೆಯ ಮಕ್ಕಳ ಕೋಪಾಗ್ನಿ ಮುಗಿಲು ಮುಟ್ಟುತ್ತಿದೆ ., ದುಃಖದ ಕಟ್ಟೆ ಒಡೆದು ಶೋಕಸಾಗರದಲ್ಲಿ ಇಡೀ ಭಾರತ ದೇಶ ಕಣ್ಣೇರು ಇಡುತ್ತಿದ್ದರೇ .ಇತ್ತ ನಮ್ಮವರೇ ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಇಲ್ಲಯೇ ನೆಲೆ ನಿಂತ ಕೆಲ ವಿಕ್ರತ ಮನಸ್ಸುಗಳು ಪಾಕಿಸ್ತಾನದ ದಿಟ್ಟತನ ಬಗ್ಗೆ ಉತ್ಪ್ರೇಕ್ಷೆ ಪಡುತ್ತಿದೆ .ಸಂತಸವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತೀವೆ ಪಾಕಿಸ್ತಾನಕ್ಕೆ ಎದುರಿನಿಂದ ಎದುರಿಸುವ ಶಕ್ತಿ ಇಲ್ಲದೆ ನಮ್ಮವರ ಸಹಾಯ ಪಡೆದು ವಂಚನಾ ಮಾರ್ಗದ ಮೂಲಕ ಕೆಚ್ಚೆದೆಯ ವೀರ ಯೋಧರನ್ನು ಬಲಿ ಪಡೆಯತೇ ವಿನಾ: ತನ್ನ ಶಕ್ತಿ ಸಾಮರ್ಥ್ಯ ದಿಂದ ಅಲ್ಲ ಎಂಬುದು ದಿಟ . ಅರ್ಥಾತ್ ಹೊರಗಿನವರನ್ನು ಹೇಗಾದರೂ ಬಗ್ಗು ಬಡಿಯಬಹುದು ಆದರೆ ನಮ್ಮ ಜೊತೆಗೆ ಇದ್ದೂ ನಮ್ಮ ಅನ್ನ ತಿಂದು ನಮಗೆ ಎರಡು ಬಗೆಯವವರನ್ನು ಮಟ್ಟ ಹಾಕಬೇಕಾಗಿದೆ .ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಅನ್ನುವ ಪರಿಸ್ಥಿತಿ ನಮ್ಮದಾಗಿದೆ . ವಾಹನದಲ್ಲಿ ಎಲ್ಲ ಡಾಕುಮೆಂಟ್ ಪೇಪರ್ ನಿಂದ ಹಿಡಿದು ಇಂಚೂ - ಇಂಚು ಚೆಕ್ ಮಾಡುವ ಭಾದ್ರತಾ ಪಡೆಗಳ ನಡುವೆ ಈ ಕಿಡಿಗೇಡಿ ಉಗ್ರನ ಕಾರು ಸುಮಾರು ೩೫೦ ಕೆಜಿ ಸ್ಪೋಟಕ ಸಾಮಗ್ರಿ ಹೊತ್ತು ತಂದದ್ದ ಕಣ್ಣಿಗೆ ಕಾಣಿಸಲಿಲ್ಲವೇ ? ಅದೂ ಕೂಡಾ ನಿಷೇಧಿತ ಪ್ರದೇಶ ! ಜನಸಂಖ್ಯೆಕ್ಕಿಂತ ಮಿಲಿಟರಿ ಸೈನ್ಯದ ನಡುವೆ ಇದು ಹೇಗೆ ಸಾಧ್ಯವಾಯಿತು ? ಅಲ್ಲದೇ ೭೮ ಸಿ ಆರ್ ಪಿ ಸಿಪಾಯಿ ವಾಹನಗಳು ಇಂತಹ ರಸ್ತೆಯಲ್ಲೇ ಬರುತ್ತಿದೆ ಎಂದು ಹೊರಗಿನ ಪಾಪಿಸ್ಥಾನಕ್ಕೆ ಗೊತ್ತಾಗಿದ್ದೂ ಹೇಗೆ? ಒಟ್ಟಾರೆ ಎಲ್ಲವನ್ನೂ ಗಮನಿಸುತ್ತಿದ್ದರೆ , ದಾಲ್ ಮೇ ಕಾಲಾ ಹೈ ಅಂತ ಅರಿಯುದಕ್ಕೆ ಹೆಚ್ಚಿನ ಸಮಯದ ಅಗತ್ಯವಿಲ್ಲ . ಸುಳಿವು ದೊರಕಿದ್ದು ನಮ್ಮಿಂದಲೇ ಅಲ್ವೇ ? ರಹಸ್ಯವನ್ನು ಸೋರಿಕೆ ಮಾಡುವ ದೇಶ ದ್ರೋಹಿಗಳನ್ನು ಮೊದಲು ಮಟ್ಟ ಹಾಕ್ಬೇಕು .. ಇನ್ನೂ ನಮ್ಮಲ್ಲಿ ರಾಜಕೀಯ ಪಟಿಂಗರಗಳು ಎಲ್ಲಿವರೆಗೆ ನಿರ್ನಾಮ ಆಗೂದಿಲ್ಲವೋ ಅಲ್ಲಿವರೆಗೆ ಇಂಥಹ ಚಟುವಟಿಗೆ ಸಾರಾಸಗಟಾಗಿ ನಡೆಯುತ್ತಲೇ ಇರುತ್ತವೆ . ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ಪರ ಬ್ಯಾಟಿಂಗ್ ಮಾಡುವ ರಾಜಕಾರಣಿಗಳ ರಾಜಕಾರಣ ಮೊದಲು ನಿಲ್ಲಬೇಕು .ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ದೂರುವುದು ಅದು ಒತ್ತಟಿ ಗಿರಲಿ , ಅದು ಅಂತರಂಗದ ವಿಚಾರ ಆದರೆ ಇಂತಹ ಘಟನೆಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಲ್ಲರೂ ಒಟ್ಟಾಗಿ ಈ ತರಹದ ಘಟನೆ ನಡೆಯದಂತೆ ಹಾಗೂ ಮುಂದಿನ ಕ್ರಮ ಕೈ ಗೊಳ್ಳುವದರ ಬಗ್ಗೆ ಚಿಂತಿಸಬೇಕು ಅದನ್ನು ಬಿಟ್ಟು ಅಸೂಹೆಯಾತ್ಮಕವಾಗಿ ಒಳಜಗಳದಲ್ಲಿ ಬಾಗಿಯಾಗುತ್ತಾ ಹೋದರೆ ಶತ್ರುಗಳಿಗೆ ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇರುವುದು ಇಲ್ಲ .. ಕೊನೆದಾಗಿ ಒಂದು ಮಾತು ಹೊರಗಿನವರನ್ನು ಹೇಗೋ ಕಂಡು ಹಿಡಿಯ ಬಹುದು ಒಳಗಿನ ದೇಶ ದ್ರೋಹಿಗಳನ್ನ ಪತ್ತೆಹಚ್ಚುವುದು ಅಷ್ಟೂ ಸುಲಭದ ಮಾತಲ್ಲ,ಆ ಕಾರ್ಯ ತುರ್ತು ಆಗಬೇಕಿದೆ . ಅವರನ್ನು ಸಂಹಾರ ಮಾಡಬೇಕಿದೆ !
ಗುರುವಾರ, ಅಕ್ಟೋಬರ್ 25, 2018
ನಿಮ್ಮ ಅತೀರೇಕದ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು !
ನಮ್ಮಲ್ಲಿ ಸಿನಿಮಾ ನಟ -ನಟಿಯರ ಮೇಲೆ ಇದ್ದಷ್ಟು ಅಭಿಮಾನ ಬೇರೆಯಲ್ಲೂ ಅಷ್ಟೊಂದು ಕಾಣಸಿಗುವುದಿಲ್ಲ . ರೀಲ್ ಹೀರೋಗಳನ್ನು ರಿಯಲ್ ಹೀರೊಗಳನ್ನಾಗಿ ನಾವು ಬಿಂಬಿಸ್ತವೆ . ಅಭಿಮಾನವನ್ನು ಮುಗಿಲೆತ್ತರಕ್ಕೆ ತೋರಿಸ್ತೇವೆ . ಎಷ್ಟೊಂದು ಅಭಿಮಾನ ನಮ್ಮ ತೆಕ್ಕೆಯಲ್ಲಿ ಅಂಟಿಕೊಂಡಿರುತ್ತವೆ ಅಂದ್ರೆ ತಮ್ಮ ಪ್ರಾಣವನ್ನು ಧಾರೆ ಎರೆಯುವುದಕ್ಕೂ ಸೈ ! ಇನ್ನೂ ಎಂತೆಂಥಾದೋ ಮನೋಭೂಮಿಕೆ ಅಡಕವಾಗಿರುತ್ತವೆ., ಅದೆಷ್ಟೋ ಮಂದಿ ನಟ ನಟಿಯರಿಗಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ನೋಡಿದ್ದೇವೆ . ಪ್ರತಿಭಟನೆ ,ನಮ್ಮ- ನಮ್ಮ ಹಿರೊಗಳಿಗೋಸ್ಕರ ಹೋರಾಟ -ಹಾರಾಟ ,ಹಲ್ಲೆ -ಹರತಾಳ ಎಲ್ಲವನ್ನೂ ಕಂಡಿದ್ದೇವೆ . ಒಂದು ಸಿನಿಮಾ ರಿಲೀಸ್ ಆದರೆ ಸಾಕು ಸಿಹಿ ಹಂಚುವುದು ಪೋಸ್ಟ್ ಗಳಿಗೆ ಹಾಲೆ ರೆಯುವದು ಹೂವಿನ ಅಭಿಷೇಕ ಮಾಡುವುದು ಒಂದೇ ಎರಡೇ ಎಲ್ಲವೂ ಭೂತ ಭವಿಷ್ಯತ್ ಕಾಲದಲ್ಲಿ ಕಣ್ಣು ಮಿಟುಕಿಸುತ್ತದೆ .
ಆದರೆ ವರ್ತಮಾನದ ವಿಚಾರವೆಂದರೆ ನಿಜಕ್ಕೂ ಅಸಹ್ಯ ಮೂಡಿಸುತ್ತಿದೆ . ಈ ಪರಿಯ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು ಅನ್ನುವಷ್ಟು ಮಟ್ಟಿಗೆ ಮನಸ್ಸು ಭಾರವಾಗುತ್ತದೆ . 'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾ ರಿಲೀಸ್ ಆಗಿತ್ತು . ನೆಲಮಂಗಲದಲ್ಲಿ ಒಂದು ಜೀವಂತ ಕೋಣವನ್ನು ಬಲಿ ಕೊಡಲಾಯಿತು . ಅದರ ರಕ್ತವನ್ನು ಸಿನಿಮಾ ಪೋಸ್ಟರ್ ಗೆ ಹಿಡಿದಿದ್ದಾರೆ ನಿನಿಮಾ ಒಳ್ಳೆ ರೀತಿಯಿಂದ ಓಡಬೇಕೆಂತೆ .ನಾಗರಿಕ ಸಮಾಜ ಎತ್ತ ಸಾಗುತ್ತಿದೆ ?. ನಿನಿಮಾದ ಒಂದು ಪೋಸ್ಟರ್ ಗೆ ಪ್ರಾಣಿ ಬಲಿ ಕೊಡುವುದೇ ? ಪ್ರಾಣಿ ಹಿಂಸೆ ಆಗುತ್ತಿದೆ ಎಂಬ ಕಾರಣಕ್ಕೆ ಐತಿಹಾಸಿಕ ಸಾಂಪ್ರದಾಯ ಬದ್ದ ಕಂಬಳ ಮತ್ತು ಜಲ್ಲಿ ಕಟ್ಟುವನ್ನು ನಿಷೇಧಕ್ಕೆ ಹೊರಟ 'ಪ್ರಾಣಿ ದಯಾ ಸಂಘ' ದವರಿಗೆ ಇದು ಕಣ್ಣಿಗೆ ಕಾಣಿಸಲಿಲ್ವೇ ?ಯಾರೂ ಕೂಡಾ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ,ಯೇಟ್ ಲಿಸ್ಟ್ ಸಿನಿಮಾ ಮಂದಿಯಾದರೂ ? ಇಂಥ ಅಂಧ ಅಭಿಮಾನಿಗಳಿಗೆ ಧಿಕ್ಕಾರ ವಿರಲಿ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)