ಶುಕ್ರವಾರ, ಫೆಬ್ರವರಿ 22, 2019

ಮೊದಲು ಒಳಗಿರುವ ಭಯೋತ್ಪಾದಕರನ್ನು ಮಟ್ಟ ಹಾಕ್ಬೇಕು !


ಹೌದು !ಅದು ಫೆ ೧೪ ಭಾರತದ ಪಾಲಿಗೆ ಕರಾಳ ದಿನ .ಜಮ್ಮುವಿನ ಆವಂತೀಪುರ ಪಲ್ವಾನದಲ್ಲಿ ಉಗ್ರ ನೋರ್ವನ ಆತ್ಮಾಹುತಿ ಬಾಂಬ್ ದಾಳಿಗೆ ಸುಮಾರು ೪೦ ಮಂದಿ ನಮ್ಮ ವೀರ ಯೋಧರು ಹುತಾತ್ಮರಾದರು . ಉಗ್ರ ಆದಿಲ್ ನಮ್ಮವನೇ ಆದರೂ , ಪಾಪಿ ಪಾಕಿಸ್ತಾನದ ಕೃಪಾಕಟಾಕ್ಷದಿಂದ ಆಗಬಾರದ ಘಟನೆ ನಡೆದೇ ಹೋಯಿತು. ಭಾರತಾಂಬೆಯ ಮಕ್ಕಳ ಕೋಪಾಗ್ನಿ ಮುಗಿಲು ಮುಟ್ಟುತ್ತಿದೆ ., ದುಃಖದ ಕಟ್ಟೆ ಒಡೆದು ಶೋಕಸಾಗರದಲ್ಲಿ ಇಡೀ ಭಾರತ ದೇಶ ಕಣ್ಣೇರು ಇಡುತ್ತಿದ್ದರೇ .ಇತ್ತ ನಮ್ಮವರೇ ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಇಲ್ಲಯೇ ನೆಲೆ ನಿಂತ ಕೆಲ ವಿಕ್ರತ ಮನಸ್ಸುಗಳು ಪಾಕಿಸ್ತಾನದ ದಿಟ್ಟತನ ಬಗ್ಗೆ ಉತ್ಪ್ರೇಕ್ಷೆ ಪಡುತ್ತಿದೆ .ಸಂತಸವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತೀವೆ ಪಾಕಿಸ್ತಾನಕ್ಕೆ ಎದುರಿನಿಂದ ಎದುರಿಸುವ ಶಕ್ತಿ ಇಲ್ಲದೆ ನಮ್ಮವರ ಸಹಾಯ ಪಡೆದು ವಂಚನಾ ಮಾರ್ಗದ ಮೂಲಕ ಕೆಚ್ಚೆದೆಯ ವೀರ ಯೋಧರನ್ನು ಬಲಿ ಪಡೆಯತೇ ವಿನಾ: ತನ್ನ ಶಕ್ತಿ ಸಾಮರ್ಥ್ಯ ದಿಂದ ಅಲ್ಲ ಎಂಬುದು ದಿಟ . ಅರ್ಥಾತ್ ಹೊರಗಿನವರನ್ನು ಹೇಗಾದರೂ ಬಗ್ಗು ಬಡಿಯಬಹುದು ಆದರೆ ನಮ್ಮ ಜೊತೆಗೆ ಇದ್ದೂ ನಮ್ಮ ಅನ್ನ ತಿಂದು ನಮಗೆ ಎರಡು ಬಗೆಯವವರನ್ನು ಮಟ್ಟ ಹಾಕಬೇಕಾಗಿದೆ .
ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಅನ್ನುವ ಪರಿಸ್ಥಿತಿ ನಮ್ಮದಾಗಿದೆ . ವಾಹನದಲ್ಲಿ ಎಲ್ಲ ಡಾಕುಮೆಂಟ್ ಪೇಪರ್ ನಿಂದ ಹಿಡಿದು ಇಂಚೂ - ಇಂಚು ಚೆಕ್ ಮಾಡುವ ಭಾದ್ರತಾ ಪಡೆಗಳ ನಡುವೆ ಈ ಕಿಡಿಗೇಡಿ ಉಗ್ರನ ಕಾರು ಸುಮಾರು ೩೫೦ ಕೆಜಿ ಸ್ಪೋಟಕ ಸಾಮಗ್ರಿ ಹೊತ್ತು ತಂದದ್ದ ಕಣ್ಣಿಗೆ ಕಾಣಿಸಲಿಲ್ಲವೇ ? ಅದೂ ಕೂಡಾ ನಿಷೇಧಿತ ಪ್ರದೇಶ ! ಜನಸಂಖ್ಯೆಕ್ಕಿಂತ ಮಿಲಿಟರಿ ಸೈನ್ಯದ ನಡುವೆ ಇದು ಹೇಗೆ ಸಾಧ್ಯವಾಯಿತು ? ಅಲ್ಲದೇ ೭೮ ಸಿ ಆರ್ ಪಿ ಸಿಪಾಯಿ ವಾಹನಗಳು ಇಂತಹ ರಸ್ತೆಯಲ್ಲೇ ಬರುತ್ತಿದೆ ಎಂದು ಹೊರಗಿನ ಪಾಪಿಸ್ಥಾನಕ್ಕೆ ಗೊತ್ತಾಗಿದ್ದೂ ಹೇಗೆ? ಒಟ್ಟಾರೆ ಎಲ್ಲವನ್ನೂ ಗಮನಿಸುತ್ತಿದ್ದರೆ , ದಾಲ್ ಮೇ ಕಾಲಾ ಹೈ ಅಂತ ಅರಿಯುದಕ್ಕೆ ಹೆಚ್ಚಿನ ಸಮಯದ ಅಗತ್ಯವಿಲ್ಲ . ಸುಳಿವು ದೊರಕಿದ್ದು ನಮ್ಮಿಂದಲೇ ಅಲ್ವೇ ? ರಹಸ್ಯವನ್ನು ಸೋರಿಕೆ ಮಾಡುವ ದೇಶ ದ್ರೋಹಿಗಳನ್ನು ಮೊದಲು ಮಟ್ಟ ಹಾಕ್ಬೇಕು .. ಇನ್ನೂ ನಮ್ಮಲ್ಲಿ ರಾಜಕೀಯ ಪಟಿಂಗರಗಳು ಎಲ್ಲಿವರೆಗೆ ನಿರ್ನಾಮ ಆಗೂದಿಲ್ಲವೋ ಅಲ್ಲಿವರೆಗೆ ಇಂಥಹ ಚಟುವಟಿಗೆ ಸಾರಾಸಗಟಾಗಿ ನಡೆಯುತ್ತಲೇ ಇರುತ್ತವೆ . ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ಪರ ಬ್ಯಾಟಿಂಗ್ ಮಾಡುವ ರಾಜಕಾರಣಿಗಳ ರಾಜಕಾರಣ ಮೊದಲು ನಿಲ್ಲಬೇಕು .ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ದೂರುವುದು ಅದು ಒತ್ತಟಿ ಗಿರಲಿ , ಅದು ಅಂತರಂಗದ ವಿಚಾರ ಆದರೆ ಇಂತಹ ಘಟನೆಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಲ್ಲರೂ ಒಟ್ಟಾಗಿ ಈ ತರಹದ ಘಟನೆ ನಡೆಯದಂತೆ ಹಾಗೂ ಮುಂದಿನ ಕ್ರಮ ಕೈ ಗೊಳ್ಳುವದರ ಬಗ್ಗೆ ಚಿಂತಿಸಬೇಕು ಅದನ್ನು ಬಿಟ್ಟು ಅಸೂಹೆಯಾತ್ಮಕವಾಗಿ ಒಳಜಗಳದಲ್ಲಿ ಬಾಗಿಯಾಗುತ್ತಾ ಹೋದರೆ ಶತ್ರುಗಳಿಗೆ ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇರುವುದು ಇಲ್ಲ .. ಕೊನೆದಾಗಿ ಒಂದು ಮಾತು ಹೊರಗಿನವರನ್ನು ಹೇಗೋ ಕಂಡು ಹಿಡಿಯ ಬಹುದು ಒಳಗಿನ ದೇಶ ದ್ರೋಹಿಗಳನ್ನ ಪತ್ತೆಹಚ್ಚುವುದು ಅಷ್ಟೂ ಸುಲಭದ ಮಾತಲ್ಲ,ಆ ಕಾರ್ಯ ತುರ್ತು ಆಗಬೇಕಿದೆ . ಅವರನ್ನು ಸಂಹಾರ ಮಾಡಬೇಕಿದೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ