ಗುರುವಾರ, ಆಗಸ್ಟ್ 10, 2017

ನ್ಯಾಯ ಸಿಗದು ಅಟ್ ಲೀಸ್ಟ್ ಸತ್ಯನಾದ್ರೂ ಹೊರಬರಲಿ


ಈಗಷ್ಟೇ ಅರಳುತ್ತಿದ ಮೊಗ್ಗು !ಆಶೆ ಆಕಾಂಕ್ಷೆಗಳು ಬೆಟ್ಟದಷ್ಟು ಕಟ್ಟಿಕೊಂಡಿದ್ದಳು !. ಈ ಪುಟ್ಟ ಬಾಲೆಯಲ್ಲಿ ಆದಾಗಲೇ ಅಗಾಧವಾದ ಪ್ರತಿಭೆ ತುಂಬಿ ತುಳುಕಾಡುತ್ತಿತ್ತು!, ರಾಷ್ಟ್ರಮಟ್ಟಕ್ಕೆ ಪಸರಿಸಿಯೂ ಆಗಿತ್ತು ..ಪ್ರೈಮರಿ ಶಾಲಾ ಜೀವನದಲ್ಲಿಯೇ ಬ್ಯಾಡ್ ಮಿಂಟನ್ ಎಂಬ ಅತೀ ಅಪುರೂಪದ ಕ್ರೀಡೆ ಈ ಗ್ರಾಮೀಣ ಪರಿಸರ ಬಡ ಕುಟುಂಬದಲ್ಲಿ ಜನ್ಮ ತಾಳಿದ ಕುಹರಿಯಲ್ಲಿ ಅಡಕವಾಗಿತ್ತು . ಸೂಕ್ತ ಪ್ರೋತ್ಸಾಹದ ಕೊರತೆಯ ನಡುವೆಯೂ ಸಹಾ ತನ್ನ ದಿಟ್ಟ ಛಲ ಕಠಿಣ ಪರಿಶ್ರಮದಿಂದ ಜಿಲ್ಲಾ ರಾಜ್ಯಾಮ ಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಬೆಳಗಿಸಿದಲ್ಲದೆ ರಾಷ್ಟ್ರ ಮಟ್ಟದಲ್ಲೂ ಶಟಲ್ ಕೊಕ್ ನ್ನು ಮೂಲೆ ಮೂಲೆಗೆ ಅಟ್ಟಿದ್ದ ಈ ಪುಟ್ಟ ಪೋರಿಯ ಸಾಧನೆ ಕಡಿಮೆಯೇನಲ್ಲ .ಮುಂದೊಂದು ದಿನ ಖಂಡಿತವಾಗಿಯೂ ಸೈನಾ ನೆಹವಾಲ್ ನ್ನು ಮೀರಿಸುತ್ತಿದಳೋ ಅಥವಾ ಅವರ ಸಾಲಿಗೆ ಏರುತ್ತಿದ್ದಳೋ ಏನೋ ?!ಆದರೆ ಹಾಗಾಗಲಿಲ್ಲ.. ವಿಧಿ ಬಿಡಲಿಲ್ಲ . ಅದೇನೋ ಕೋಪ ಅವಳ ಮೇಲಿತ್ತೋ ನಾ ಕಾಣೆ .. ಅವಳ ಎಲ್ಲಾ ಬವಿಷ್ಯದ ಬಯಕೆ ಗಳನ್ನು ಕಸಿದು ಕೊಂಡು ಬಿಟ್ಟ
ಆ ಹೆತ್ತ ತಾಯಿಯ ಗೋಳು ಹೇಳತೀರದು ..ಅವಳ ಕುಟುಂಬವಲ್ಲದೇ, ಅವಳ ಊರು ಅಷ್ಟೇಕೆ ,ಇಡೀ ರಾಜ್ಯವೇ ಮರುಗುತ್ತಿವೆ . ಪ್ರತಿಬಾವಂತ ವಿಧ್ಯಾರ್ಥಿನಿ ಯಾವ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದಳು ?ಹಿಂದಿನ ದಿನವಷ್ಟೇ ತಾಯಿಯ ಜೊತೆಗೆ ಮಾತನಾಡಿದ್ದಾಳೆ .. ಆ ವೈರಲ್ ಆದ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸಂದೇಶವನ್ನು ಒಮ್ಮೆ ಕೇಳಿದರೆ ಎಂತವರಿಗೂ ಸಹಾ ಅರ್ಥವಾಗುತ್ತದೆ . ಇಷ್ಟೆಲ್ಲಾ ಚೆನ್ನಾಗಿ ಮಾತಾಡಿದ ಈಕೆ ಮರುದಿನ ನೇಣಿಗೆ ಕೊರಳು ಒಡ್ಡುತ್ತಾಳೆ ಅಂದರೆ ? ನಿಜಕ್ಕೂ ಇಲ್ಲ ..! ಏನೂ ನಿಗೂಢತೆ ಗೋಚರಿಸುತ್ತದೆ .!. ಸಾವಿನ ರಹಸ್ಯದಲ್ಲಿ ಏನೋ ಅಡಗಿದೆ ..ಆತ್ಮಹತ್ಯೇ ಮಾಡಿಕೊಳ್ಳುವ ಮನಸ್ತಿತಿ ಅವಳದಲ್ಲ .. ಯಾವ ನಿರ್ದಿಷ್ಟವಾದ ಕಾರಣವೂ ಇಲ್ಲ ಎನ್ನುವ ಅವಳ ಕುಟುಂಬಿಕರು ಬಿಡಿ ಇಂದಿನ ದಿನದ ಆ ರೆಕಾರ್ಡಿಂಗ್ ಅನ್ನು ಒಮ್ಮೆ ಆಲಿಸಿದರೆ ಸಾಕು ಯೆಂತಾವರೂ ಸಹಾ ಅರ್ಥೈಸಿ ಕೊಳ್ಳಬಲ್ಲರು.
ಆತ್ಮಹತ್ಯೆ ಮಾಡಿಕೊಂಡಳು ಅಂದರೆ ಅಲ್ಲಿ ಆ ದಿನ ಏನಾಗಿತ್ತು ? ಯಾವುದೋ ಬಲವಾದ ಕಾರಣ ಅವಳನ್ನು ಪ್ರಚೋದಿಸಿತ್ತೆ ?
ಇದು ಆತ್ಮಹತ್ಯೇ ಅಲ್ಲಾ ಇದು ಹತ್ಯೆ ಎಂದು ಹೆತ್ತ ಕರುಳು ಮೂಗಿನ ನೇರಕ್ಕೆ ಪ್ರಶ್ನೆ ಮಾಡುತ್ತಿದೆ ..ಒಕ್ಕೊಲೋರಿಂದ ಕರಾವಳಿ ದ್ವನಿಗಳು ಬೊಬ್ಬೆ ಹೊಡೆಯುತ್ತಿದೆ .ಸಾಮಾಜಿಕ ಜಾಲ ತಾಣಗಳು ಹಗಲು ರಾತ್ರಿ ಅರಚುತ್ತಿವೆ ..! ಇಲ್ಲ ಕಾನೂನು ಕೈಕಟ್ಟಿ ಕೂತಿದೆ .
,ಎಂದಿನಂತೆ ಕೆಲ ವಿದ್ಯಾ ಸಂಸ್ತೆಗಳು ಇದು ಆತ್ಮಹತ್ಯೆ ನಮಗೆ ಗೊತ್ತಿಲ್ಲ ಲವ್ ಕೇಸ್ ಇರಬಹುದು ಎಂದು ಯಾಕೆ ಏನು ಎಂಬ ಸತ್ತ ವಿದ್ಯಾರ್ಥಿ ಬಗ್ಗೆ ಕಿಂಚಿತ್ ಚಿಂತಿಸದೇ ಸೀದಾ ಚಿತೆಗೆ ದಾರಿ ತೋರಿಸುವಳ ರೆಡಿ ಮೆಡ್ ಉತ್ತರ ಖ೦ಡಿತವಾಗಿಯೂ ನಾವು ಅಪೇಕ್ಷಿಸುವುದು ಸರ್ವೇ ಸಾಮಾನ್ಯ ..ಸಮಾಜವೂ ಕೂಡಾ ಅಷ್ಟೇ ಇದು ಯಾವುದೊ ಲವ್ ಕೇಸ್ ಅಂತ ಹಿಂದೂ ಮುಂದೂ ಆಲೋಚಿಸದೇ ಡಿಕ್ಲೇರ್ ಮಾಡಿ ಬಿಡುತ್ತದೆ .ಆದರೆ ಇಲ್ಲಿ ಇವಳಿನ್ನೂ ಕಾಲೇಜು ಕನ್ಯಾ ಅಲ್ಲ .. ಜಸ್ಟ್ ಹತ್ತನೇ ತರಗತಿಗೆ ಸೇರಿ ಅದೂ ಹೊಸ ಸಂಸ್ಥೆ ಕೇವಲ ಒಂದು ತಿಂಗಳುಗಳು ಕಳೆದಿವೆ ಅಷ್ಟೇ .ಒಂದು ಕ್ರೀಡಾ ಪಟುವಾಗಿ ಡಬ್ಬಲ್ ಗುಂಡಿಗೆ ಯನ್ನು ಹೊಂದಿರುವವರು ಆತ್ಮಹತ್ಯೆಗೆ ಶರಣಾಗುವುದು ಕನಸ್ಸಿನ ಮಾತು ಎಂದು ಬಲ್ಲವರು ಹೇಳುತ್ತಾರೆ .ಜಲೈ೨೦ ರಂದು ಇಹಲೋಕ ತ್ಯಜಿಸಿದ್ದಾಳೆ .
ಘಟನೆ ಸಂಬವಿಸಿದ್ದು ಸಂಜೆಯ ಸಮಯದಲ್ಲಿ ಹಾಸ್ಟೆಲ್ ನಲ್ಲಿ ರೂಂಮೆಟ್ ಗಳು , ವಾರ್ಡನ್ ಸೆಕುರಿಟಿ ಗಾರ್ಡ್ಸ್ ಎಲ್ಲಾರೂ ಕೂಡಾ ಅಲ್ಲಿರುತ್ತಾರೆ . ಒಳ ರೂಮಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಬಿಡಿ ಆಲೋಚಿಸುವುದಕ್ಕೂ ಕಷ್ಟಕರವಾಗುತ್ತದೆ . ಈ ಹಿಂದೆ ಇದೇ ಸಂಸ್ತೆ ಯಲ್ಲಿ ಕೆಲವು ಘಟನೆಗಳು ನಡೆದು ಹೋಗಿದೆ . ಆತ್ಮಹತ್ಯೆ ಎಂದೇ ದಾಖಲಾದರೂ ಅದಕ್ಕೆ ಪುಷ್ಟಿ ನೀಡುವಂತ ,ಪೂರಕವೆಂಬಂತೆ ಕೆಲವು ಕುರುಹುಗಳು ಸಿಕ್ಕಿದ್ದವು , ಮಹಡಿ ಮೇಲಿಂದ ಹಾರಿ ಪ್ರಾಣ ಕಳೆದು ಕೊಂಡಿದ್ದು .ಡೆತ್ ನೋಟ್ ಬರೆದು ಇಟ್ಟಿದ್ದು ಇತ್ಯಾದಿ ಇತ್ಯಾದಿ .ಇದರ ಒಳ ನೋಟ ಏನೇ ಇದ್ರೂ ಆತ್ಮಹತ್ಯೆ ಎಂಬುದನ್ನು ನಾವು ಅರಗಿಸಿಕೊಳ್ಳಲೆ ಬೇಕಿತ್ತು !!..ಆದರೆ ಇವತ್ತಿನದ್ದೂ ಪೂರ್ತಿ ದಿಪರೆಂಟ್ !..ಹಿಂದಿನ ದಿನ ಅದೆಷ್ಟು ಲವಲವಿಕೆ ಯಿಂದ ಮನೆಯವರೊಂದಿಗೆ ಮಾತಾಡಿದ್ದ ಕಾವ್ಯ ಮರುದಿನ ಅದು ಹೇಗೆ ನೇಣಿಗೆ ಕೊರಳು ಓಡ್ಡಿದ್ದಳು ? ಸಾಮಾಜೀಕ ಹಿತಾಸಕ್ತಿ ,ಕುಟುಂಬದವರ ರೋದನೆ ಬದಿಗಿರಿರಲಿ ಕೊಂಚ ಸೌಜನ್ಯತೆ ಗಾಗಿ ಆಥವಾ ತನ್ನ ಜವಾಬ್ದಾರಿಯುತ ಕರ್ತವ್ಯವೂ ಹೌದು ಎಂಬಂತೆ ತನಿಖೆ ಮಾಡಿಸಬಹುದಿತ್ತು ಸಂಸ್ತೆಯ ಸ್ಥಾಪಕ ಮೋಹನ್ ಆಳ್ವರವರು .ಅದು ಬದಿಗಿರಿ ತನಿಖೆ ನಡೆಸುತ್ತೇವೆ ಎಂಬ ಹಾರಿಕೆಯ ಮಾತನ್ನಾದರೂ ಹೇಳಬಹುದಿತ್ತು ..ಆದರೆ ಇಲ್ಲಿ ಎಲ್ಲವೂ ಉಲ್ಟಾ ಎಲ್ಲೋ ಎಸಿ ರೂಂ ನಲ್ಲಿ ಕೂತು “ಇಲ್ಲ ಇದು ಆತ್ಮಹತ್ಯೇ” ..ಎಂದು ಕಂಡೆಲೆಲ್ಲಾ ಹೇಳುತ್ತಿದ್ದ ಆಳ್ವರ ನಡವಳಿಕೆ ಎಷ್ಟು ಸರಿ ? ಅಲ್ಲಿ ಏನಾಗಿದೆ ?ಯಾಕಾಗಿದೆ ?ಎಂದು ಮುಂದಿನ ಸಂಸ್ಥೆ ಭವಿಷ್ಯಕ್ಕಾಗಿ ಹಾಗೂ ವ್ಯಾಸಂಗ ಮಾಡುತ್ತಿರುವ ೨೬೦೦೦ ವಿಧ್ಯಾರ್ಥಿಗಳ ಪೋಷಕರ ದೈರ್ಯಕ್ಕಾಗಿ ತಾವೇ ಈ ಘಟನೆಯ ವಿಚಾರದ ಬಗೆಗೆ ಮುಂದೆ ನಿಂತು ಖುದ್ದು ಬಗೆಹರಿಸಬಹುದಿತ್ತು. ಇದು ಆತ್ಮಹತ್ಯೆ ಎಂದು ಘಂಟಾ ಘೋಷವಾಗಿ ಹೇಳುವ ಬದಲು ,ಏನೂ ಅರಿಯದೇ ದುಖದಲ್ಲಿರುವ ಕಾವ್ಯಳ ತಂದೆ –ತಾಯಿಗೆ ದೈರ್ಯದ ಮಾತನ್ನು ಹೇಳಿ ತನಿಖೆಗೆ ಸಹಕರಿಸಿದ್ದರೆ ಇಂದು ಸಮಾಜದಲ್ಲಿ ಅವರೊಬ್ಬ ಹಿರೋ ಆಗ್ತಾ ಇದ್ದರು .! ಪಬ್ಲಿಕ್ ನಿಮ್ಮ ಮುಂದೆ ಶರಣಾಗುತ್ತಿತ್ತು “ನಾವೇಕೆ ಅವಳನ್ನು ಮರ್ಡರ್ ಮಾಡಬೇಕು ನಮಗೆ ಏನು ಲಾಭ ?” ಎಂದು ತಾವು ಹೇಳೋದು ಸರಿನೇ ಆದರೂ ಕೆಲಮೊಮ್ಮೆ ಮರ್ಡರ್ ತಮ್ಮಿಂದಲೇ ಆಗ್ಬೇಕು ಅಂತ ಇಲ್ಲಾ ಎಲ್ಲೋ ಅಚಾನಕ್ಕಾಗಿ ತಮಗೆ ಗೊತ್ತಿಲ್ಲದಂತೆಯೂ ಆಗಬಹುದಲ್ಲವೇ ? ಅಷ್ಟಕ್ಕೂ ತಮ್ಮ ಹತ್ತಿರ ಏನು ಸಾಕ್ಷಿ ಇದೇ ಇದು ಸುಸೈಡ್ ಯೇ ಅನ್ನಲಿಕ್ಕೆ ? ನಿಮ್ಮ ವೈರಿಗಳು ಯಾಕೆ ಹಾಸ್ಟೆಲ್ ಗೆ ನುಗ್ಗಿ ಕೊಲೆ ಮಾಡಿ ಅವಳನ್ನು ನೇಣಿಗೆ ಏರಿಸಿರಬಾರದು ನೀವೇ ಹೇಳಿದಂತೆ ಬಾಗಿಲು ಲಾಕ್ ಆಗಿತ್ತು ನಮ್ಮ ಹುಡುಗರು ಮೇಲೆ ಹಾರಿ ಕೆಳಗೆ ಇಳಿದು ಬಾಗಿಲನ್ನು ಓಪನ್ ಮಾಡಿದ್ದು ಅಂಥಾ! ಅದೇ ತರಹ ಕಾವ್ಯಳನ್ನು ಕೊಲೆ ಮಾಡಿ ಮಾಡಿ ತಪ್ಪಿತಸ್ತರು ಹಾಗೆ ಪರಾರಿಯಾಗಿರ ಬಾರದೇಕೆ ? ಒಟ್ಟಾರೆ ತಾವು ಮಾಡಿದ್ದೆಲ್ಲಾ ಸರಿ ಹೇಳಿದೆಲ್ಲವನ್ನೂ ಕೆಳುವುದಕ್ಕೆ ಪ್ರಜ್ಞಾವಂತರು ತಯಾರಿಲ್ಲ .
ಆತ್ಮಹತ್ಯೆ ಹೇಗೆ ಆಯಿತು ? ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೆಯಾದರೇ ಇದೇ ಕಾರಣವಾಗಿರಬಹುದೇ ? ಏನು ಎತ್ತ ಎಂದು ಅವಳ ಉತ್ತರ ಪತ್ರಿಕೆಯನ್ನು ಗಮನಿಸಿ ಪ್ರೋಗ್ರೆಸ್ ಮುಂದೆ ಇಡುಬಹುದಿತ್ತು ಆತ್ಮಾಹತ್ಯೆಗೆ ದೈಹಿಕ ಶಿಕ್ಷಕನೇ ಕಾರಣನಾಗಿರಬಹುದೇ ? ಎರಡರಲ್ಲಿ ಒಂದಂತೂ ಖಂಡಿತವಾಗಿಯೂ ಇದ್ದೆ ಇರುತ್ತದೆ ಇದನೆಲ್ಲವನ್ನೂ ಪರಿಶೀಲಿಸಿ ಸಾವಿನ ಅಂಶವನ್ನು ಪತ್ತೆಹಚ್ಚಿ ಗೊಂದಲಗಳಿಗೆ ತೆರೆ ಎಳೆಯಬೇಕಾದವರು ಇನ್ನಷ್ಟು ಗೋಜಲು ಗೋಜಲುಗಳನ್ನಾಗಿ ಮಾಡುತ್ತಿರುವವರ ಜವಾಬ್ದಾರಿನಾ ಇದು ? ಕ್ರೀಡಾ ಕೋಟದಲ್ಲಿ ತಮ್ಮ ಕಾಲೇಜಿಗೆ ತಾವುಗಳೇ ಒತ್ತಾಯ ಪೂರ್ವಕವಾಗಿ ಬರ ಹೇಳೀದ್ದು ,ಫ್ರೀಯಾಗಿ ಶಿಕ್ಷಣ ನೀಡುತ್ತೇವೆ ಎಂದು ಬಡಾಯಿ ಕೊಚ್ಚಿ ಕೊಳ್ಳುವುದನ್ನು ಬದಿಗಿಡಿ ..ಬಡವರ ಮನೆಯ ವಿಧ್ಯಾರ್ಥಿಗಳು ಎಂಬ ನಿರ್ಲಜ್ಜ ನಿರ್ಲಕ್ಷ ತನವೇಕೆ ?ಕಷ್ಟ ಪಟ್ಟು ಮಕ್ಕಳನ್ನು ಎಲ್ಲಿಂದಲೂ ಅವರ ಭವ್ಯ ಬವಿಷ್ಯಕ್ಕಾಗಿ ದೂರದ ವಿದ್ಯಾ ಸಂಸ್ಥೆಗೆ ಸೇರಿಸುತ್ತಾರೆ .. ಸೇರಿಸಿ ಕೊಳ್ಳುವವರ ಜವವ್ದಾರಿ ಅಷ್ಟೇ ಇರುತ್ತದೆ ತಮ್ಮ ಮಕ್ಕಳೆಂದೇ ಭಾವಿಸಬೇಕು ,ನಿಮ್ಮ ಮೇಲೆ ಜವಬ್ದಾರಿಯನ್ನು ಇರಿಸಿ ಕೊಂಡು ಇಷ್ಟು ದೂರ ಕಳಿಸಿದ್ದಾರೆ ಅವರನ್ನು ಉತ್ತಮ ರೀತಿಯಲ್ಲಿ ಮುತುವರ್ಜಿ ವಹಿಸಬೆಂಬ ಮನೋಬಾವನೆ ಬೆಳೆಯಬೇಕು .ಅದೇ ದಿಕ್ಕಿನಲ್ಲಿ ಕೊಂಚ ಗಮನ ಹರಿಸಬೇಕು ಅಲ್ಲವೇ ?. ತನ್ನ ಸಂಸ್ಥೆಗೆ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವಂತ ಕಾರ್ಯವಾಗುತ್ತಿದೆ ಎಂದೆನ್ನುವ ಆಳ್ವ ಅವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಇಲ್ಲಿ ಯಾರ ಮಾನ ಹರಾಜು ಆಗುತ್ತಿದ್ದೆ ಎಂದು ?” ಆತ್ಮತ್ಯೆಗೆ ಮಾಡಿಕೊಂಡಳು, ಇವರೆಲ್ಲ ಸ್ಪೋರ್ಟ್ಸ್ ಗೆ ಅನ್ಫಿಟ್” ಎಂದು ಕಂಡ- ಕಂಡಲ್ಲಿ ಉಸುರುತ್ತಿರುವ ಆಳ್ವರೇ ಇಲ್ಲಿ ಯಾರ ಮಾರ್ಯಾದೆ ಬೀದಿ ಪಾಲಾಗುತ್ತಿದೆ . ಸತ್ಯ ಗೊತ್ತಿಲ್ಲದ ನೀವು ಎಷ್ಟು ಸಹಜವಾಗಿ ಅವಳ ಮೇಲೆ ಗೂಬೆ ಕೂರುಸುತ್ತೀರಿ ..ರಾಷ್ಟ್ರ ಮಟ್ಟದಲ್ಲಿ ಆದಾಗಲೇ ಕೀರ್ತಿಯನ್ನು ಬೆಳಗಿಸಿದ ಕಾವ್ಯಳ ಎದುರು ನಿಮ್ಮದೇನು ಮಹಾ ?
ಕಾವ್ಯ ಮುಂಜಾನೆ ಪ್ರಾಕ್ಟಿಸ್ ಮಾಡಿದ್ದು ಕಾಲೇಜಿಗೆ ಹೋಗಿದ್ದು ಬಂದಿದ್ದು ಎಲ್ಲಾ ರೆಕಾರ್ಡ್ ಆದ ಸಿಸಿಟಿವಿಯೆ ಪೂಟೇಜ್ ಗಳು ಬಿಡುಗಡೆ ಗೊಂಡಿದೆ ಅದೇ ಅವಘಡ ಸಂಬವಿಸಿದ್ದರ ನೇಣಿನಿಂದ ಕುಣಿಕೆ ಸಡಿಲಿಸಿದ್ದೂ ,ನಾಲ್ಕನೇ ಪ್ಲ್ಲೋರಿಂದ ಆಸ್ಪತ್ರೆ ದಾಖಲಿಸಿದ್ದರ ಪೂಟೇಜ್ ಯಾಕೆ ಬಿಡುಗಡೆ ಗೊಂಡಿಲ್ಲ ? ಮೊದಲು ನೋಡಿದ ಅವಳ ಕ್ಲಾಸ್ ಮೇಟ್ ಗಳನ್ನು ಯಾಕೆ ಮಾಧ್ಯಮಗಳ ಮುಂದೆ ಕೂರಿಸಿಲ್ಲ . ? ಇನ್ನು ಬೆಳಿಗ್ಗೆ 4.15 ರಿಂದ ಪ್ರಾಕ್ಟಿಸ್ ಇರುತ್ತದೆ ಎಂದ ಕಾವ್ಯಾನ್ನು ಅಷ್ಟು ಬೇಗ ಕರೆದಿದ್ದರ ಉದ್ದೇಶ ಏನು ? ಇದಕ್ಕೆಲ್ಲಾ ಸೂತ್ರದಾರ ದೈಹಿಕ ಶಿಕ್ಷಕ ಇರಬಹುದೇ ? ಇಷ್ಟೆಲ್ಲಾ ಸಂದೇಹಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದರೂ ಯಾಕೆ ಇನ್ನೂ ದೈಹಿಕ ಶಿಕ್ಷಕನನ್ನು ಮಂಪರು ಪರೀಕ್ಷೆಗೆ ಒಳ ಪಡಿಸಲಿಲ್ಲ , ? ಎಲ್ಲಕ್ಕಿಂತ ಮೊದಲು ಈ ಕಾರ್ಯ ಆಗಬೇಕಿದೆ ಆಗ ನಿಖರವಾದ ಸತ್ಯ ಸಂಗತಿ ಹೊರಗೆ ಬೀಳ ಬಹುದೇನೋ ? ನ್ಯಾಯ ಸಿಗಬಹುದೇನೋ ?ಆದರೆ ಸತ್ತು ಸ್ವರ್ಗ ಸೇರಿದ ಕಾವ್ಯ ಇನ್ನೆಂದೂ ಬರಲಾರಳು !ಆ ಪುಟ್ಟ ಕೈಗಳಲ್ಲಿ ಬ್ಯಾಡ್ಮಿಂಟನ್ ನ್ನು ಆಸ್ಪಾದಿಸುವುದು ಅಸಾದ್ಯ ..ಆದರೆ ಈ ಹೋರಾಟಗಳು ಮುಂದೊಂದು ಕಾವ್ಯಳನ್ನು ಉಳಿಸಿ ಕೊಳ್ಳಲು ಮಾದರಿ ಯಾಗಬುಹುದು .
ಬುದ್ದಿವಂತರ ಜಿಲ್ಲೆ ಎಂದು ಕರೆಯಿಸಿ ಕೊಂಡ ಈ ನಾಡಿನಲ್ಲಿ ಅದೆಷ್ಟೋ ವಿಧ್ಯಾರ್ಥಿನಿಯರು ಹೇಳ ಹೆಸರಿಲ್ಲದಂತೆ ನಿಗೂಢವಾಗಿ ಸಾವಿನ ಕದ ತಟ್ಟಿದ್ದಾರೆ .. ವಂಶಿ ,ಸೌಜನ್ಯ ,ರತ್ನ ,ಅಕ್ಷತಾ ಇವರೆಲ್ಲಾ ಸಾವಿನ ಹಿಂದೆ ಇದೇ ರೀತಿಯ ಅನುಮಾನಗಳಿದ್ದವು ..ಪ್ರತಿಭಟನೆಗಳು ನಡೆದವು ,ಸಿಐಡಿ ,ಸಿಬಿಐ ನಂತಹ ದೊಡ್ಡ ದೊಡ್ಡ ಪೋಲಿಸ್ ಇಲಾಖೆಯ ಫೈಲ್ ಸೇರಿದ್ದವು. ಆದ್ರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ . ನ್ಯಾಯ ದೇವೆತೆ ಕಣ್ಣು ತೆರೆಯಲೇ ಇಲ್ಲ .....!ಇದಕ್ಕೆ ಇನ್ನೊಂದು ಸೇರ್ಪಡೆ ಕಾವ್ಯಾ ..! ಈ ಘಟನೆಗಳು ನಿತ್ಯ ನಿರಂತರವೇ ? ಇದಕ್ಕೆಲ್ಲಾ ಪುಲ್ ಸ್ಟಾಪ್ ಇಡುವವರು ಯಾರು ? ಎಲ್ಲವೂ ಉತ್ತರ ಇಲ್ಲದ ಯಕ್ಷ ಪ್ರಶ್ನೆ !!!

ಮಂಗಳವಾರ, ಜುಲೈ 18, 2017

ಸಾಮರಸ್ಯವೇ ತುಂಬಿರುವ ಸಮಾಜದಲ್ಲಿ ಸಮನ್ವಯತೆ ಎಂಬುದು ಕೇವಲ ಮರೀಚಿಕೆ ಅಷ್ಟೇ !

ಇನ್ನೊಮ್ಮೆ ಉಡುಪಿ ಶ್ರೀ ಕ್ರಷ್ಣ ಮಠ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ . ಇಂದು ಹಾದಿ ಬೀದಿಯ ಸುದ್ದಿಗೆ ಗ್ರಾಸವಾಗಿದ್ದರ ವಿಚಾರ ಯಾವುದು ಎಂದರೆ ಶ್ರೀ ಕ್ರಷ್ಣ ಮಠದದ ಆವರಣದಲ್ಲಿ ಮುಸಲ್ಮಾರಿಗೆ ರಂಜಾನ್ ಹಬ್ಬದ ಪ್ರಯುಕ್ತ ಪೇಜಾವರ ಶ್ರೀಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದು , ಹಾಗೂ ನಮಾಜ್ ಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರ ಸಲುವಾಗಿ . ತರುವಾಯ ರಾಜ್ಯಾದ್ಯಂತ ವಾದ ವಿವಾದಗಳ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ .
ಇದೊಂದು ಸರ್ವಧರ್ಮ ಸಮನ್ವಯತೆ ಸಂಪಾದನೆಗೆ ಒಳ್ಳೆಯ ಕೊಂಡಿಯಾಗಿದೆ ಉತ್ತಮ ಕಾರ್ಯವನ್ನು ಸ್ವಾಮೀಜಿಗಳು ಕೈ ಗೊಂಡದ್ದು ಶ್ಲಾಘನೀಯ ಎಂದು ಪೇಜಾವರ ಶ್ರೀಗಳ ಬೆಂಬಲಕ್ಕೆ ಒಂದಷ್ಟು ಜನ ನಿಂತರೆ ಇನ್ನೊಂದಿಷ್ಟು ಜನ ಆಕ್ರೋಶದ ಅಭಿವ್ಯಕ್ತಿಯನ್ನೂ ಹೊರಹಾಕಿದ್ದಾರೆ . ಶ್ರೀ ರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅಂತೂ ಈ ಘಟನೆಯ ಬಗ್ಗೆ ತೀವ್ರವಾದ ಖಂಡನೆ ಯನ್ನು ವ್ಯಕ್ತಪಡಿಸದ್ದಲ್ಲದೇ ,ರಾಜ್ಯಾದ್ಯಾ೦ತ ಪ್ರತಿಭಟನೆಯನ್ನೂ ನಡೆಸಿ ಕೊಟ್ಟರು . ಒಟ್ಟಾರೆ ನಾವು ಇಲ್ಲಿ ತಪ್ಪು ಒಪ್ಪುಗಳ ಪಟ್ಟಿ ಸಂಗ್ರಹಿಸುವುದಕ್ಕಿಂತ ಮೊದಲು ವಿಚಾರವನ್ನು ಮನಗಾಣುವುದಾದರೆ , ಶ್ರೀಮಠಕ್ಕೆ ಅಬ್ದುಲ್ ಹಾಜಿ ಯವರು ಪೂಜಾ ಕಾರ್ಯದ ದೀಪಕ್ಕೆ ಬೇಕಾಗುವ ಎಣ್ಣೆಯನ್ನು ಕೊಟ್ಟಿದ್ದಾರೆ .., ಹಾಗೂ ಮುಸ್ಲಿಂ ಭಾಂದವರು ಮಠದಲ್ಲಿ ಎರಡು ವರ್ಷಕ್ಕೊಮ್ಮೆ ನೆಡೆಯುವ ಜಗತ್ಪ್ರಸಿದ್ದ ಪರ್ಯಾಯ ಉತ್ಸವದಲ್ಲಿ ಹೊರೆಕಾಣಿಕೆ ಹಾಗೂ ನಿರಂತರ ಸಂಪರ್ಕವನ್ನು ಇಟ್ಟುಕೊಂಡು,ಸಹಾಯ ಹಸ್ತವನ್ನು ನೀಡುತ್ತಾ ಬಂದವರು . ಅವರ ಋಣ ತೀರಿಸಲ್ಲಿಕ್ಕೂ ಅಥವಾ ಅವರ ಬಲವಂತದ ಆಮಂತ್ರಣಕ್ಕೆ ಅತ್ತ ಧಾವಿಸಲಾಗದ ಸ್ಥಿತಿಗೂ ಏನೋ ಹೀಗೊಂದು ಕಾರ್ಯಕ್ರಮವನ್ನು ಆಯೋಸಿದ್ದರು ., ಮೂಲಗಳ ಪ್ರಕಾರ ಒಡನಾಟ , ಆತ್ಮೀಯತೆಯನ್ನು ಇಟ್ಟುಕೊಂಡ ಕೆಲವು ಮಸ್ಲಿಂ ಭಾ೦ದವರು ರಂಜಾನ್ ಹಬ್ಬದ ಆ ದಿನ ಸ್ವಾಮೀಜಿಗಳಿಗೆ ಆಹ್ವಾನಿಸಿದ್ದಾರಂತೆ “ನಿಮ್ಮ ಹಬ್ಬಕ್ಕೆ ಆಶೀರ್ವಾದ ನೀಡಲು ನಾನು ನೀವಿದ್ದಲ್ಲಿಗೆ ಬರಲು ತತ್ ಸಮಯದಲ್ಲಿ ಸಾಧ್ಯವಾಗುವುದಿಲ್ಲ ದಯಮಾಡಿ ಇಲ್ಲಿಗೆ ಬನ್ನಿ ಎಂದಾಲೋಚಿಸಿ ಮಠಕ್ಕೆ ಬರಹೇಳಿದ್ದರ೦ತೆ .. ಕೇವಲ ಆಶಿರ್ವಾದ ಹಾಗೂ ಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ಇಲ್ಲಿಯ ವರೆಗಾಗಿ ಬಂದವರಿಗಾಗಿ ಮಠದಲ್ಲಿ ತಯಾರಿಸಲ್ಪಟ್ಟ ಲಘು ಉಪಹಾರವನ್ನು ನೀಡಲು ಮುಂದಾದಾಗ , ನಾವು ಯಾವುದೇ ಉಪಾಹಾರ ಸೇವಿಸುವ ಮೊದಲು ಉಪವಾಸ ಅಂತ್ಯದ ನಂತರ ಧರ್ಮದ ನೀತಿಯಂತೆ ನಮಾಜ್ (ಪ್ರಾರ್ಥನೆ ) ಮಾಡಿ ನಂತರ ಸೇವಿಸುತ್ತೇವೆ ಎಂಬ ಅವರುಗಳ ಇಚ್ಛೆಯ ಮೇರೇಗೆ ಮಠದ ಆವರಣದಲ್ಲಿ ಸಾರ್ವಜನಿಕರು ಬಂದು ತೆರಳುವ ಸ್ಥಳದಲ್ಲಿ ಸಂಪ್ರದಾಯ ಪದ್ದತಿಯಂತೆ ನಮಾಜ್ ಸಲ್ಲಿಸಿ ಉಪಹಾರವನ್ನು ಸೇವಿಸುತ್ತಾರೆ.
ಇದು ಮುಂದೆ ಕ್ಷಣ ಮಾತ್ರದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಹಿರಂಗ ವಾಗುತ್ತದೆ ಶ್ರೀ ಕೃಷ್ಣಮಠದಲ್ಲಿ ಮುಸಲ್ಮಾನ ರಿಗೆ ಇಪ್ತಾರ್ ಕೂಟವನ್ನು ಸ್ವಾಮೀಜಿ ಯವರು ನಡೆಸಿ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ಜಗತ್ ಜಾಹೀರಾತು ಮಾಡಿ ಬಿಡುತ್ತವೆ.. ನಂತರ ನಡೆಯಿತು ವಾದ ವಿವಾದಗಳ ಆರೋಪಗಳ ಸುರಿಮಳೆ !!
ಶ್ರೀಪಾದಂಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಯಿಸುವ ಯೋಗ್ಯತೆಯ ಆಳ್ತನ ಹಿರಿಯ ಜೀವ ಅವರಿಗೆ ಗೊತ್ತಿರುವಂತದ್ದೇ .. ಅವರಿಗೆ ಯಾರು ಯಾವುದೇ ತರನಾದ ಉಪದೇಶವನ್ನು ಮಾಡುವ ಹಾಗೂ ಅವರು ಮಾಡಿದ್ದೆ ಸರಿ ಅಲ್ಲ ಎಂದು ವಿಮರ್ಶಿಸುವ ಅವರ ವಿರುದ್ಧ ಪ್ರತಿಭಟನೆಗೆ ಇಳಿಯುವ ಹಕ್ಕು ಯಾರಿಗೂ ಇಲ್ಲ ಅದು ಸಮಂಜಸವೂ ಕೂಡಾ ಅಲ್ಲ . ಹಾಗಂತ ಇದರಲ್ಲಿ ನೋವಿನ ವಿಚಾರವೂ ಇಲ್ಲದಂತಿಲ್ಲ ಈ ಘಟನೆ ಯಿಂದಾಗಿ ಎರಡೂ ಸಮುದಾಯಗಳೂ ಸಹಾ ರೊಚ್ಚಿಗೆದ್ದು ತಳ್ಳಿ ಹಾಕುವಂತಿಲ್ಲ . ಮಠದಲ್ಲಿ ನಮಾಜ್ ಮಾಡಿದ್ದೂ ಶ್ರೀ ಪಾದರಿಂದ ಪ್ರಸಾದ ವನ್ನು ಸ್ವೀಕರಿಸಿದ್ದೂ ಇಸ್ಲಾಂ ಧರ್ಮ ಸಹಿಸುವುದಿಲ್ಲ ಇದು ಖಂಡನೀಯ ಎಂದು ಕೇವಲು ಮುಸ್ಲಿಮ್ ಸಂಘಟನೆಗಳ ಸಾಮಾಜಿಕ ತಾಣಗಳಲ್ಲಿ ಹೇಳಿ ಕೊಂಡಿವೆ . ಹಿಂದೂ ಧರ್ಮೀಯರೂ ಸಹಾ ಆಕ್ಷೇಪವನ್ನು ಹೊರಹಾಕಿದ್ದಾರೆ ಗೋವು ಭಕ್ಷಕರಿಗೆ ಆವರಣದೊಳಗೆ ಗೋ ಪಾಲಕ ಶ್ರೀ ಕೃಷ್ಣ ನ ಸಮುಖದಲ್ಲಿ ನಮಾಜ್ ಗೆ ಅವಕಾಶ ಮಾಡಿ ಕೊಟ್ಟಿದ್ದು ಸರಿ ಆಲ್ಲ ,ಮಸೀದಿಗಳಲ್ಲಿ ಹಿಂದೂ ಧರ್ಮದ ಆಚರಣೆಗೆ ಅವಕಾಶವನ್ನು ಅವರು ನೀಡುತ್ತಾರೆಯೇ ? ಎಂಬ ಪ್ರಶ್ನೆಗಳಿಗಳನ್ನೂ ಇಡುತ್ತಾರೆ ,ಒಟ್ಟಾರೆ ಸ್ವಾಮೀಜಿಗಳು ಋಣ ಸಂದಾಯಕ್ಕೂ ಅವರ ಮೇಲಿನ ಬಾ೦ದವ್ಯಕ್ಕೋ, , ಅಥವಾ ಕೋಮು ಸಾಮರಸ್ಯವನ್ನು ಹೋಗಲಾಡಿಸಲ್ಲಿಕ್ಕೂ ಹೀಗೊಂದು ಕಾರ್ಯಕ್ರವನ್ನು ಆಯೋಜಿಸಿದ್ದೂ ಒಂದೊಳ್ಳೆ ಭವಿಶ್ಯದ ಬೆಳೆವಣಿಗೆಗೆ , ಸಮಾಜದಲ್ಲಿ ಸರ್ವ ಧರ್ಮ ಸಮನ್ವಯತೆ ಗೆ ಸಹಕಾರವನ್ನು ನೀಡುತ್ತದೆ ಎಂದು ಯೋಚಿಸಿದರೆ ಇದರಿಂದ ಸಾಮರಸ್ಯವೇ ಉ೦ಟಾಗುತ್ತದೆ ವಿನಹಾ : ಸಮನ್ವಯತೆ ಕಾಣದು . ಶಾಂತಿಗೂಡಲ್ಲಿ ಆಶಾ೦ತಿಯೇ ಮೂಡುತ್ತದೆ ಹೊರತು ಎಣಿಸಿದ ಫಲಿತಾಂಶ ಮಾತ್ರ ದೊರಕುವುದು ಕಷ್ಟ ಸಾದ್ಯ ..ಏನೇ ಇರಲಿ
ಇದ್ದದ್ದು ಇದ್ದ ಹಾಗೆ ಇದ್ದರಷ್ಟೇ ಚೆಂದ ಎನ್ನಬಹುದೇನೋ ?!

ಮಂಗಳವಾರ, ಜೂನ್ 20, 2017

‘ಪೋಲಿಸ್ ಪೇದೆಯಾಗಿ ತನ್ನ ಮಡದಿಯನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಅಂದಾದರೆ ಉಳಿದವರ ಗತಿ ಏನು?

ಒಬ್ಬ ಪೋಲಿಸ್ ಕಾನ್ಸ್ಟೇಬಲ್ ರ ಅಸಹಾಯಕತೆ,ವ್ಯಥೇಯ ನುಡಿ.
“ನನ್ನ ಹೆಂಡತಿಯ ರಕ್ಷಣೆಯನ್ನು ನನ್ನ ಕಣ್ಣ ಮುಂದೇನೆ ನಾನೊಬ್ಬ ಪೋಲಿಸ್ ಪೇದೆಯಾಗಿ ಪೋಲಿಸ್ ಪೇದೆ ಮಾಡಿಕೊಳ್ಳುವಲ್ಲಿ ಸಾದ್ಯವಾಗಲ್ಲಿಲ್ಲವೆಂದಾರೆ ಇನ್ನೂ ದೇಶ ರಕ್ಷಣೆಗೆ ಪಣ ತೊಡಲು ನನ್ನಿಂದ ಅಥವಾ ನನ್ನಂತಾ ಆರಕ್ಷಕ ಪಡೆಗೆ ಸಾದ್ಯವಾಗ ಬಲ್ಲದೇ ? ಇನ್ನು ಸಾಮಾನ್ಯ ನಾಗರಿಕರ ಕತೆ ಎಂತದ್ದು ?”ಎಂಬೀ ಅಸಹಾಯಕತೆ ಮಾತು ತನ್ನ ಹಿರಿಯ ಪೋಲಿಸ್ ಅಧಿಕಾರಿ ಜೊತೆ ಪೋನ್ ನಲ್ಲಿ ನಡೆಸಿದ ವೈರಲ್ ಸಂದೇಶವನ್ನು ಒಮ್ಮೆ ಆಲಿಸಿದರೆ ಎಂತಹ ಕಚಡಾ ರಾಜಕೀಯ ವ್ಯವಸ್ತೆ ಹಳ್ಳಿ- ಹಳ್ಳಿ ಗಲ್ಲಿ- ಗಲ್ಲಿ ಗಳಲ್ಲಿ ನಮ್ಮನ್ನು ಆಳುತ್ತಿದೆ ಎಂಬುದು ದಿಟವಾಗುತ್ತದೆ .
ಹೌದು ನಾ ಹೇಳ ಹೊರಟಿರುವ ವಿಷಯ ಬೇರೆಯಲ್ಲಿಯದ್ದೂ ಅಲ್ಲ , ಮೊನ್ನೆ ಮೊನ್ನೆ ನಮ್ಮ ಪರಿಸರದ ಘಟನೆ ಬಗ್ಗೆ ..ಉಡುಪಿ ಯಿಂದ ಅನತಿ ದೂರದಲ್ಲಿರುವ ಮಲ್ಪೆ ಪೋಲಿಸ್ ಥಾಣಾ ವ್ಯಾಪ್ತಿಗೆ ಒಳಪಡುವ ಒಂದು ಪ್ರದೇಶದಲ್ಲಿ ನಡೆದ ಘಟನೆ ... ಒಂತರ ವಿಚಿತ್ರ ,ಸಚಿತ್ರ ಥೇಟ್ ಸಿನಿಮಾ ಶೈಲಿ ...!!
ಮಲ್ಪೆಯ ಪೋಲಿಸ್ ಕಾನ್ಷ್ಟೇಬಲ್ ಒಬ್ಬರು ತಮ್ಮ ಮಡದಿಯ ಜೊತೆಗೆ ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿ ಮಡದಿಯ ಆರೋಗ್ಯ ಪರೀಕ್ಷಾ ಕಾರ್ಯ ಮುಗಿದ ಬಳಿಕ ಅಲ್ಲಿಂದ ತುಸು ದೂರದಲ್ಲಿರುವ ಅಂಗಡಿ ಒಂದರಲ್ಲಿ ತಮಗೆ ಅಗತ್ಯವಿರುವ ಸಾಮಾಗ್ರಿಯನ್ನು ಖರಿದಿಸುವುದರಲ್ಲಿ ಆ ಪೋಲಿಸ್ ಪೇದೆ ಮಗ್ನರಾಗಿರುತ್ತಾರೆ . ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆತನ ಪತ್ನಿಗೆ ಒಂದಿಬ್ಬರು ಕಂಠ ಪೂರ್ತಿ ಕುಡಿದು ಕಿರುಕುಳ ಕೊಡಲು ಪ್ರಾರಂಬಿಸುತ್ತಾರೆ . ಸಾಯ್ಲಿ ಎಂದು ಹಿಡಿಶಾಪ ಹಾಕಿ ಸುಮ್ಮನಾದ ಆಕೆ ಗಂಡನಲ್ಲಿ ಇದ್ಯಾವುದನ್ನೂ ಹೇಳದೇ ಇಬ್ಬರು ಬೈಕ್ ಏರಿ ಹೊರಡುತ್ತಾರೆ . ತಮ್ಮ ಮನಸ್ಸಿನ ವಾಂಚೆ ಯನ್ನು ಬಿಡದ ಆ ಕುಡುಕ ಕಾಮುಕರು , ಇವರ ಬೈಕ್ ನನ್ನು ಪೋಲೊ ಮಾಡುತ್ತಾರೆ . ಬೈಕ್ ನ್ನು ಹತ್ತಿರ-ಹತ್ತಿರ ತಂದು ಮತ್ತಷ್ಟು ಕಿರುಕುಳ ಕೊಡುವುದಕ್ಕೆ ಅಣಿ ಯಾಗುತ್ತಾರೆ , ಬೈಕ್ ನ ಹಿಂಬದಿ ಸವಾರ ಒಂದು ಕಲ್ಲನ್ನು ಎತ್ತಿ ಪೋಲಿಸ್ ಪೇದೆಯ ಹೆಂಡತಿ ಮೇಲೆ ಎಸೆಯುತ್ತಾನೋ ಆಗ ಕೋಪ ಗೊಂಡ ಮಹಿಳೆ ತನ್ನ ಪತಿಯಲ್ಲಿ ಎಲ್ಲಾವನ್ನೂ ಉರ್ಸುರುತ್ತಾಳೆ ,ಈ ಸಂದರ್ಭದಲ್ಲಿ ಯಾರೇ ಆದರೂ ಆ ಕೆಲಸವನ್ನು ಮಾಡಿಯೇ ತೀರುತ್ತಾರೆ ಕೋಪ ನೆತ್ತಿಗೆ ಏರದೆ ಇರದು .ಅಂತೆಯೇ ತಡಮಾಡದ ಪೋಲಿಸ್ ಪೇದೆ ಬೈಕ್ ಸೈಡ್ ಗೆ ಸರಿಸಿ , ಅವರಿಬ್ಬರಿಗೂ ಎರಡು ಕಪಾಳಕ್ಕೆ ಬಾರಿಸುತ್ತಾರೆ ...ಜನಜಂಗುಳಿ ಒಟ್ಟಾಗುತ್ತದೆ .. ಇಷ್ಟಕ್ಕೆ ಬಿಡ ಬೇಡಿ ಸರ್ ಅವರನ್ನು ಒದ್ದು ಒಳಗೆ ಹಾಕಿ ಎಂದು ನೆರದಿದ್ದವರ ಅಭಿಪ್ರಾಯದಂತೆ ಕೂಡಲೇ ಪೋಲಿಸ್ ಟಾಣೆಗೆ ಪೋನ್ ಹಾಯಿಸಿ ಅವರನ್ನು ತಾಣೆಗೆ ಕರೆದೊಯ್ಯುಲಾಗುತ್ತದೆ . . ಮಹಿಳೆಯ ದೂರಿನ ಅನ್ವಯ ದೂರನ್ನು ದಖಲಿಸಿಕೊಂಡು ಅಲ್ಲಿ ಇನ್ನೆರಡು ಬಿಸಿ ಬಸಿ ಹೋಳಿಗೆ ಕೊಟ್ಟು ಬುದ್ದಿವಾದ ಹೇಳಿ ಫಟಿಂಗ ರನ್ನು ಮನೆಗೆ ಅವರನ್ನು ಕಳಿಸಲಾಗುತ್ತದೆ .
ನಂತರ ನಡೆದಿದ್ದೇ ಹೈಡ್ರಾಮ !!!
ಮಹಿಳೆಯನ್ನು ಕಿಚಾಯಿಸಿ ಪಬ್ಲಿಕ್ ಗಳಿಂದ ಉಗಿಸಿ ಕೊಂಡು ಪೋಲಿಸ್ ಪೇದೆಯಿಂದ ಏಟು ತಿಂದ ಮಾಹಾನುಭಾವರು ಉಡುಪಿ ಶಾಸಕ ,ಮಂತ್ರಿ ಪ್ರಮೋದ್ ಮದ್ವ್ರರಾಜ್ ರವರ ಕಾರ್ಖಾನೆಯಲ್ಲಿ ಟ್ಯಾಕ್ಟರ್ ಚಾಲಕರಂತೆ . ಅಂದ ಮಾತ್ರಕ್ಕೆ ಸರಳವಾಗಿ ಅರ್ತೈಸಿ ಕೊಂಡು ಬಿಡಬಹುದು ಇವರ ಆಟೋಟೋಪಕ್ಕೆ ಹಿಂಬದಿ ಪ್ರೇರಣಾ ಶಕ್ತಿ ಇನ್ನೇನು ಬೇಕು ? ಚುನಾವಾಣ ಪ್ರಚಾರ ಮುಗಿಸಿ ನಿವಾಸಕ್ಕೆ ಮದ್ವರಾಜ್ ಬಂದು ಒಂದು ದಿನದ ಬಳಿಕ ನಡೆದ ವಿಷಯ ಅವರ ಕಿವಿಗೆ ಸೋಕುತ್ತದೆ .
ಮಹಿಳೆಗೆ ಆದ ಅನ್ಯಾಯದ ವಿರುದ್ದ ಕ್ರಮ ಕೈಗೊಳ್ಳ ಬೇಕಿದ್ದ ಮಾನ್ಯ ಸಚಿವರು,ತಮ್ಮ ಕೆಲಸ ಆಳುಗಳು ಮಾಡಿದ್ದೆ ಸರಿ ಎಂಬ ನಿಲುವಿಗೆ ಬದ್ದರಾಗುತ್ತಾರೆ , ಅವರ ರಕ್ಷಣೆ ನಿಲ್ಲುವುದು ಬಿಡಿ ,ಪೋಲಿಸ್ ಪೇದೆ ಮಾಡಿದ್ದು ಸರಿ ಅಲ್ಲ ಎಂದು ತನ್ನ ಪವರ್ ಬಳಸಿ ಪೇದೆಯನ್ನು ವರ್ಗಾವಣೆಗೆ ಮಾಡುವುದಕ್ಕೆ ಮು೦ದಾಗುತ್ತಾರೆ ..
ನೆಡೆದ ಘಟನೆಯು ಸ್ಥಳಿಯರಲ್ಲಿ ಯಾರದ್ದು ತಪ್ಪು ಸರಿ ಎಂಬ ಜಡ್ಜ್ಮೆಂಟ್ ಇದ್ದರೂ ,ಮಂತ್ರಿ ಪಟಾಲಂ ಕಡೆಯವರು ಜನರಿಗೆ ಮಂಕು ಬೂದಿ ಅರಚಿ ಇದರಲ್ಲಿ ಪೋಲಿಸ್ನದ್ದು ಪೂರ್ಣ ತಪ್ಪು ಎಂದು ತೋರಿಸೋಲ್ಕರ ಒಂದು ನಾಟಕವನ್ನು ಹೂಡುತ್ತದೆ .
ಎಂದಿಂತೆ ಅರಾಮಾಗಿ ಬೈಕ್ ನಲ್ಲಿ ಸುತ್ತಾಡಿ ಮಧ್ಯೆ ಹೀರಿ ಇತರರಿಗೆ ಕಿಚಾಯಿಸುವ ತಮ್ಮ ಹವ್ಯಾಸ ವನ್ನು ಒತ್ತೆಯಲ್ಲಿಟ್ಟು ಕೊ೦ ಡಿದ್ದ ಫಟಿಂಗರು ,ಒಂದು ದಿನದ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ .. ಪೊಲೀಸರು ಹೊಡೆದದ ಏಟು ತೀವ್ರ ಸ್ವರೂಪ ತಾಳಿ ಸೇರಿಯಸ್ ಆಗಿದೆ ಎಂದು ಜೊತೆಗೆ ಪೋಲಿಸ್ ದೂರು ದಾಖಲಾಗುತ್ತದೆ . ..ಸಿನಿಯರ್ ಪೋಲಿಸ್ ಅಧಿಕಾರಿಯೊಬ್ಬರು ಈ ಪೇದೆಗೆ ಕರೆ ಮಾಡಿ ನೀನು 15 ದಿನದ ಮಟ್ಟಿಗೆ ರಜೆಗೆ ಊರಿಗೆ ತೆರಳು ಇಲ್ಲದಿದ್ದರೆ ನಿನಗೆ ಬೇರೆಡೆ ವರ್ಗಾವಣೆ ಮಾಡ ಬೇಕೆಂಬ ಒತ್ತಡ ವಿದೆ ಎಂಬ ಮಾತು ಕೇಳಿ ಆತನಿಗೆ ಒಮ್ಮೆಲೇ ಬೆಚ್ಚಿಬೀಳಿಸಿತ್ತಾದರೂ, ಇದು ಇದೇ ಸ್ವರೂಪ ತಾಳುತ್ತದೆ ಎಂಬ ಅರಿವು ಅವರಿಗೆ ಮೊದಲೇ ಮನಸಿನಲ್ಲಿ ಮನೆ ಮಾಡಿತ್ತು . ಏನು ಮಾಡೋಣ ಹೇಳಿ ಇಂತಹ ಹೇಸಿಗೆ ಪ್ರಜಾಪ್ರಬುತ್ವದಲ್ಲಿ ನಾವಿದ್ದೇವೆ ಎಂಬ ಕಡು ಸತ್ಯವನ್ನು ಬಗಲಲ್ಲಿ ಇಟ್ಟು ಕೊಳ್ಳಲೇ ಬೇಕು . ದುರ೦ತವಲ್ಲದೇ ಮತ್ತಿನ್ನೇನು ? ಒಬ್ಬ ಪೋಲಿಸ್ ಅಧಿಕಾರಿಗೆ ತನ್ನ ಹೆಂಡತಿಗೆ ರಕ್ಷಣೆ ಕೊಟ್ಟು ,ಅನ್ಯಾಯ ವಿರುದ್ದ ಹೋರಾಡಿ ನ್ಯಾಯ ಬದಿಗಿರಲಿ ಸ್ವತ: ತಾನೇ ಶಿಕ್ಷೆಯನ್ನು ಅನುಭವಿಸಬೇಕಾದ ಸ್ತಿತಿ ಬಂತೆಂದರೆ ಇನ್ನೂ ಸಾಮಾನ್ಯ ಜನರ ಗತಿ ಏನು ? ಮುಂದೆ ಒಂದು ದಿನ ತಮ್ಮತಮ್ಮ ಮನೆಯ ಹೆಣ್ಮಕ್ಕನ್ನು ಎತ್ತಾಕಿ ಕೊಂಡು ಹೋದರೂ ಅಚ್ಚರಿ ಇಲ್ಲ...! ಇಂತವರುಗಳಿಗೆ ಸಾಥ್ ನೀಡುವರಿಗೆ ಹಾಗೂ ಇದರಲ್ಲಿ ಬಾಗಿಯಾಗುವವರಿಗೆ ಆ ಕ್ಷಣದಲ್ಲಿ ಯಾವುದೇ ಶಿಕ್ಷೆ ನೀಡುವ ಸಿನಿಮಾಗಳಂತೆ ಒಬ್ಬ ನಾಯಕ ಬರಲು ಅಸಾದ್ಯವಾದರೂ ,ಮುಂದೊಂದು ದಿನ ಇವರುಗಳಿಗೂ ಈ ಪರಿಸ್ತಿತಿ ಬಾರದೇ ಇರದು ಪರಿಣಾಮ ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ .. ಅಧಿಕಾರ ಹಣ ಯಾವುದೂ ಶಾಶ್ವತ ಅಲ್ಲ ಅಲ್ಲವೇ ?!.

ಸೋಮವಾರ, ಜನವರಿ 9, 2017

ಬ್ಲಾಕ್ ಮೆಲ್ ಎಂಬ ಕರಾಳ ದಂಧೆ


“ಹನಿಟ್ರ್ಯಾಪ್“.. ಸಿಂಪಲ್ಲಾಗಿ ಬ್ಲಾಕ್ ಮೆಲ್ ಅಂತ ಹೇಳಬಹುದು ಇದೊಂದು ಅಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟಿರುವವರ ದಂಧೆ .. ಇದಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ ..ಇವತ್ತಿನ ನಿನ್ನೆಯ ವಿಚಾರವಂತೂ ಅಲ್ಲವೇ ಅಲ್ಲ .. ಇದರಲ್ಲಿ ಬಲಿಪಶು ವಾಗುವವರು ಹಾಗೂ ಈ ದಂಧೆಯ ಸೂತ್ರಧಾರರು ಅಷ್ಟೇ ಬಲಾಧ್ಯರು.
ಯಾರು ಯಾರು ಈ ಬ್ಲಾಕ್ ಮೇಲ್ ಪೆಡ೦ಬೂತಕ್ಕೆ ಒಳಗಾಗುತ್ತಾರೆ ?
ಸೆಲೆಬ್ರಿಟಿಗಳು , ರಾಜಕಾರಣಿಗಳು , ಪ್ರೀತಿ ಪ್ರೇಮ ಹೆಚ್ಚೀಕೆ ಪುಟಾಣಿ ಮಕ್ಕಳು ಸಹಾ ಅವರವರ ವಿಕ್ನೆಸ್ ಹಾಗೂ ಲಾಭಾಂಶ ಗೊಸ್ಕರ ಬ್ಲಾಕ್ ಮೆಲ್ ಗೆ ಒಳಪಡುತ್ತಾರೆ,
ಬ್ಲಾಕ್ ಮೆಲ್ ನ ಉದಯ ಹಾಗೂ ಧಂದೆಯ ಕಿರು ನೋಟ ನನ್ನ ಕಲ್ಪನೆಯಲ್ಲಿ :
ಈ ಧಂದೆ ಪ್ರಾರ೦ಭವಾಗಿದ್ದೆ ಹೀಗೆ .
,ಅಲ್ಲೂ ನಡೆಯ ಬಾರದ ಘಟನೆ ಸಮಾಜದ ಸಮುಖದಲ್ಲಿ ರಾರಾಜಿಸಬಾರೆಂದು ಆ ವ್ಯಕ್ತಿ ಕಣ್ಣಾರೆ ಕಂಡ ವ್ಯಕ್ತಿಗೆ ಯಾವೊದೋ ಒಂದು ರೂಪದಲ್ಲಿ ಆಸೆ ತೋರಿಸಿದಾಗ, ಆ ಆಸೆ ಯೇ ಜೀವನದ ಕುಲ ಕಸಬು ಆಗಿ ನಿರ್ಮಾಣ ಗೊಂಡು ಒಂದು ಹಂತದಲ್ಲಿ ಇದರ ಕಬಂದ ಬಾಹು ದೊಡ್ಡ ಧಂಧೆಯಾಗಿ ಮಾರ್ಪಾಡು ಗೊಂಡಿದೆ ಎನ್ನ ಬಹುದೇನೋ ?!ಎಲ್ಲೋ ಆಗಾಗ ಅಲ್ಲೋ ಇಲ್ಲೋ ಕದ್ದು ಮುಚ್ಚಿ ನಡಿತಾ ಇದ್ದ ವಿಚಾರ ಬಹಿರಂಗವಾಗದೆ ಇರಲಿ ಅಂತ ಸಂತ್ರಸ್ತರು ಸ್ವಲ್ಪ ಯಾವೊದೋ ವಿಧದ ಲಾಬಾಂಶವನ್ನು ತೊರಿಸಿ ಆಲ್ಲಿಗೆ ಆ ಕಥೆಗೆ ಇತಿಶ್ರೀ ಹಾಡುತ್ತಿದ್ದರು .. ಅದನ್ನೇ ಬಂಡವಾಳ ಮಾಡಿಕೊಂಡ ಮಹಾನ್ ಪಟ0ಗರು ಅದನ್ನು ಒಂದು ಉದ್ಯೋಗವನ್ನಾಗಿ ,ದಂಧೆಯನ್ನಾಗಿ ಮಾಡಿರುವದು ವಿಚಿತ್ರವಾದರೂ ಸತ್ಯ ! ಹೆಚ್ಚಾಗಿ ಕೆಲವು ಟಿವಿ ಪತ್ರಿಕಾ ಮಾಧ್ಯಗಳೂ ಸಹಾ ಅಗ್ರ ಪಂತ್ಯಯಲ್ಲಿ ರಾರಾಜಿಸುತ್ತಿರುವುದು ಸುಳ್ಳಲ್ಲ .!
ಬ್ಲಾಕ್ ಮೆಲ್ ವಿಚಾರವನ್ನು ಒಳಗೊಂಡ ಸಿನಿಮಾ ಯಾರಿಗೆ ಪೂರಕ ವಾಗಿದೆ ?
ಇನ್ನು ಸಾಕಷ್ಟು ಸಿನಿಮಾಗಳು ಈ ಬ್ಲಾಕ್ ಮೇಲ್ ಗೆ ಸಂಬಂದ ಪಟ್ಟಂತೆ ಅದರ ನೈಜ ಒಳ ಹೂರಣ ತುಡಿತ ಮಿಡಿತಗಳ ಕಥಾ ಸಾರಾಂಶವನ್ನು ಇಟ್ಟು ತೆರೆ ಕಂಡಿವೆ .. ಚಿತ್ರದಲ್ಲಿ ಖಳ ನಾಯಕ ಮಾಡುವ ತಂತ್ರ ,ನಾಯಕನ ಕೌಶಲ್ಯ ಮುಂತಾದವುಗಳು ಇದರಲ್ಲಿ ಮೂಡಿ ಬರುತ್ತವೆ ..ಇದು ಸಮಾಜಕ್ಕೆ ಎಷ್ಟು ಉಪಯುಕ್ತವಾಗಿದೆ ..ಎಷ್ಟು ಪರಿಣಾಮಕಾರಿಯಾಗಿದೆ ಎಂಬ ವಿಚಾರ ಬದಿಗಿರಿಲಿ ಇದು ಯಾರಿಗೆ ಉಪಕಾರಿ ಆಗಿದ್ಯೋ ,ಪ್ರಚೋದನಕಾರಿ ಆಗಿದೆಯೋ ಗೊತ್ತಿಲ್ಲ .. ಅಂತ ಸಿನಿಮಾಗಳಿಂದ ಎಚ್ಚೆತ್ತ ಸಂತ್ರಸ್ತರಿಗಿಂತ , ಪಟಿ೦ಗರಿಗೆ ದಾರಿ ದೀಪ ಆಗಿದೆ ಎಬುವುದಕ್ಕೆ ಸಾಕಷ್ಟು ಪುರಾವೆಗಳು ಇವೆ ,,ಸಾಕ್ಷಾತ್ ಸಿಕ್ಕಿ ಬಿದ್ದ ಪಟಿಂಗ ರುಗಳೇ ಪೋಲಿಸ್ ರ ಮುಂದೆ ಬಾಯಿ ಬಿಟ್ಟಿದ್ದಾರೆ .
ಒಂದಷ್ಟು ಜಾಲಿ ಲೈಫೇಗೆ ಪುಟ್ಟ ಮಕ್ಕಳು ಕೂಡಾ ತಮ್ಮ ಪೋಷಕರುಗಳಿಗೂ ಸಹಾ ಬೇರೊಬ್ಬರ ಸಹಾಯ ಪಡೆದು ಪರ್ಸೆಂಟ್ ಲೆಕ್ಕದಲ್ಲಿ ಬ್ಲಾಕ್ ಮೆಲ್ ಮಾಡುವುದು, ಇದು ಸಿನಿಮಾ ಕಥೆ ಅಲ್ಲ ..ನಮ್ಮ ಮುಂದಿದೆ .,ಸಂಭವಿಸದ ರಿಯಲ್ ಸ್ಟೋರಿ ..!
ಪ್ರೀತಿ ಪ್ರೇಮವೆಂದು ನಾಟಕವಾಡಿ ಯಾವುದೋ ತಮ್ಮ ಲಾಭ ಕೊಸ್ಕರ ಮೋಸ ಮಾಡುವುದು ಬೇರೊಂದು ವಿಚಾರವಾದರೂ ,ಅದೂ ಕೂಡಾ ಬ್ಲಾಕ್ ಮೆಲ್ ಎಂದು ಕೆರೆಯಿಕೊಡುತ್ತದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಸಂಗತಿಗಳು ಕಣ್ಣಿಗೆ ರಾಟುತ್ತವೆ. ಅದೇನೇ ಇರಲಿ
ಆಪ್ತರೇ ಮಾಡ್ತಾರೆ ಹನಿಟ್ರ್ಯಾಪ್:
ಹೌದು ! ‘ಹಣಕ್ಕೆ ಹೆಣ ಕೂಡ ಬಾಯಿ ಬಿಡತ್ತೆ’ ಅಂತ ಒಂದು ಗಾದೆ ಮಾತಿದೆ ...ಯಾರಿಗೆ ಹಣ ಬೇಡ ಹೇಳಿ ..? ಹೇಳಿ ಕೇಳಿ ಮೈ ಮುರಿಯದೇ ದುಡ್ಡು ಮಾಡಲು ಶೋಕಿ ಜೀವನ ನಡೆಸಲು ಯಾವ ಕಾರ್ಯಕ್ಕೂ ಸೈ ಎಂಬ ಮನಸ್ತಿತಿಯ ಮಹಾನುಭಾವರು ಕೂಡಾ ಇದ್ದಾರೆ ..ನಮ್ಮ ಎಷ್ಟೇ ಆಪ್ತರು ಎಂದು ಗುರುತಿಸಿ ಕೊಂಡರೂ, ಅವರ ಎದುರು ಯಾವುದೇ ರಹಸ್ಯ ವಿಚಾರವನ್ನು ಹಂಚಿಕೆ ಮಾಡುವುದು,ಬಿಚ್ಚಿ ಇಡುವುದು ಸರಿಯಲ್ಲ .. ನೇರವಾಗಿ ಅವರು ಬಾಗಿಯಾಗದೇ ಇದ್ದರೂ ಕುತಂತ್ರ ದಿಂದ ಅದನ್ನು ಇತರ ತಮ್ಮ ಸ್ನೇಹಿತರಿಗೆ ರವಾನಿಸಿ ತಮಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ ಎರಡು ಕಡೆಯಿಂದ ಸಂಬಂದಗಟ್ಟಿ ಗೊಳಿಸಿ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸುವ ಛಾತಿ ಇರುವವರು ನಮ್ಮ ಹಿಂದೆ ಇದ್ದೆ ಇರುತ್ತಾರೆ. ಅಂತವರನ್ನು ಸಹಾ ಎಚ್ಚರಿಕೆ ಯಿಂದ ನೋಡಬೇಕಾದದ್ದು ಅನಿವಾರ್ಯ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದೇ ಇರುವುದು ಒಳ್ಳೇದು ಮೇಟಿ ಕಾಮ ಕಾಂಡ ಎಂದೆಲ್ಲಾ ಕೆರಿಸಿ ಕೊಂಡ ಇತ್ತೀಚಿಗೆ ಟಿವಿ ಮಾಧ್ಯಮಗಳ ಟೆಯಾರ್ಪಿ ಹೆಚ್ಚಸಿದ ಘಟನೆಯೂ ಸಹಾ ಇದೆ ಮಾದರಿಯದ್ದೇ .. ! ನಮ್ಮ ಎಚ್ಚರ ನಮ್ಮ ಕೈಲಲ್ಲಿ ಇರಬೇಕು ಅಷ್ಟೇ
ಬ್ಲಾಕ್ ಮೇಲ್ ಗೆ ಒಳಗಾದವವರಿಗೆ ಲಾಭಾ ಅಂಶವನ್ನು ದಯಪಾಲಿಸುವುದಕ್ಕಿಂತ ಅವರನ್ನು ನೇರವಾಗಿ ಪೋಲಿಸ್ ರಿಗೆ ಒಪ್ಪಿಸಿದರೆ ಮ್ಯಾಟರ್ ಕ್ಲೋಸ್ ಆಗುತ್ತೆ ಮುಂದೆ ಇಂತಹ ದಂಧೆಯನ್ನು ಯಾರೂ ಕೂಡಾ ಮಾಡಬಲ್ಲರು .. ಒಂದೊಮ್ಮೆ ಅವರುಗಳ ಬೇಡಿಕೆಗೆ ಮಣಿದರೆ ತಾವು ಅರ್ಧ ಸತ್ತಂತೆ ..ಅದನ್ನೇ ಹಿಡಿದು ಮೊದಲಿಗೆ ಇಂತಿಷ್ಟು ಪಡೆಯುವ ಅವರುಗಳು ನಂತರ ಮತ್ತೊಂದಿಷ್ಟಕ್ಕೆ ಬೇಡಿಕೆ ,ಕೊಟ್ಟು ಕೊಟ್ಟು ಕೋಡಂಗಿಯಾಗಿ ಅನಂತರ ತಮ್ಮ ಆ ನೈಜ ವಿಚಾರವೂ ಬೆಳಕಿಗೆ ಬರುತ್ತದೆ ಇತ್ತ ತಮ್ಮ ಖಜಾನೆಯೂ ಖಾಲಿಯಾಗಿರುತ್ತದೆ .
ಅತ್ತ ಮರ್ಯಾದೆಯೂ ಸಹಾ ಬೀದಿಗೆ ಬಂದಿರುತ್ತದೆ ..ಎಲ್ಲಾಕ್ಕಿಂತ ಉತ್ತಮ ನೇರವಾಗಿ ಸಂಬದ ಪಟ್ಟವರಿಗೆ ತಿಳಿಸುವುದು.
ಮೊನ್ನೆಯ ವಿಚಾರವೂ ಹಾಗೆ ಆಗಿದೆ ಅನ್ನುವುದು ಮೆಲ್ನೋಟಕ್ಕೆ (ಬಲ್ಲ ಮೂಲಗಳಿಂದ ) ಸಾಬೀತು ಆಗುತ್ತಾ ಇದೆ ಸಚಿವ ಮೇಟಿ ವಿವಾದಲ್ಲಿ ಮೆಂದು ಸಾಕಾಗದ ಮಹಾನುಭಾವರು ಕೊನೆಗೂ ಸೀಡಿ ಬಿಡುಗಡೆ ಮಾಡಿದ್ರಂತೆ ..ಅತ್ತ ಹಣ ಇಲ್ಲ ಇತ್ತ ಮರ್ಯಾದೆ ಇಲ್ಲ .. ಇದು ಕೇವಲ ಮೇಟಿ ವಿಚಾರವಲ್ಲ ಇನ್ನೂ ಸಾಕಷ್ಟು ಜನ ಇದರಲ್ಲಿ ಮಾನ ಮರ್ಯಾದೆಗೆ ಅಂಜಿ ಬಲಿ ಪಶು ಆಗಿದ್ದಾರೆ .. ಪುಕ್ಕಟೆಯಾಗಿ ಹೆದರಿಸಿ ಬೆದರಿಸಿ ಲೂಟಿ ಕಾರರು ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ .. ಮೇಟಿ ವಿಚಾರ ದಿಂದ ಒಂದೊಂತು ಸತ್ಯ, ಸಮಾಜಕ್ಕೆ ಒಳ್ಳೆಯ ಪಾಠ ಸಿಕ್ಕಿದೆ ! ಬ್ಲಾಕ್ ಮೆಲ್ ದಂಧೆಯ ಕರಾಳ ಮುಖ ಬಯಲಾಗಿದೆ ..!


ಸೋಮವಾರ, ಡಿಸೆಂಬರ್ 19, 2016

ಬಂಡ ಬ್ರಷ್ಟಚಾರಿಗಳಿಂದಲೇ ಬಡವರು ಬರ್ಬಾದ್ !


ಎಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಬ್ರಷ್ಟಚಾರಿಗಳು ನಮ್ಮ ಸಮಾಜದಿಂದ ನಿರ್ನಾಮವಾಗುವುದಿಲ್ಲವೋ ಅಲ್ಲಿಯವರಗೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ, ಬಡವರ ಬರ್ಬಾದ್ ತನ ಮುಂದುವರಿಯತ್ತಲೇ ಇರುತ್ತದೆ . ಅದಿಲ್ಲವೆಂದರೆ ಹೀಗಾಗುತ್ತದೆಯೇ ? ದೇಶ ಕಂಡ ಅಪ್ರತಿಮ ಜನ ಸೇವಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟುಗಳನ್ನು ನಿಷೇಧ ಮಾಡಿ ಕಾಳ ಧನ ಕರಗಿ ಹೋಗಿ ಮುಂದೊಂದು ದಿನ ಭಾರತ ಮಾದರಿ ದೇಶವಾಗಿ ಬಡಬಲ್ಲಿಗರಿಗೆ ಆಶ್ರಯವಾಗುತ್ತದೆ ಎಂದು ಅದ್ಭುತ ಸಾಹಸಕ್ಕೆ ಕೈ ಹಾಕಿದರೆ ಥೂ !ನಾಚಿಕೆ ಗೆಟ್ಟವರು ಹಣದ ಹಿಂದೆ ಅಂಡಿಲೆಯುವ ನೀಚ ಹೀನ ಮನಸ್ಥಿತಿಯ ರಕ್ತ ಬೀಜಾಸುರನ ಸಂತತಿ ಬ್ರಷ್ಟಾಚಾರಿಗಳು ಬಿಡಬಲ್ಲರೆ ?!.
ಕಂತೆ ಕಂತೆ ಹೊಸ ಹೊಸ ನೋಟುಗಳು ಐಟಿ ದಾಳಿಯಲ್ಲಿ ದಿನ ನಿತ್ಯ ಸಿಗ್ತಾನೆ ಇವೆ . ಸಾಮಾನ್ಯ ಒಬ್ಬ ವ್ಯಕ್ತಿ ದಿನವೀಡಿ ಕ್ಯೂ ನಲ್ಲಿ ನಿ೦ತರೂ 2500 ರೂ ATM ನಲ್ಲಿ ದೊರಕುದು ಕಷ್ಟ . ವಾರಕ್ಕೆ 24000 ರೂ. ಕಿಂತ ಮೇಲೆ ಹಣ ಸಿಗೋಲ್ಲ .. ಇಂತಿರುವಾಗ ದಿನ ನಿತ್ಯ ಈ ಪರಿಯ ಕೋಟಿ ಕೋಟಿ ಹೊಸ ಹೊಸ ನೋಟು ಕಂತೆಗಳು ಸೀಜ್ ಆಗ್ತಾ ಇವೆಯಲ್ಲ ? ಇಷ್ಟೊಂದು ಪ್ರಮಾಣದ ಇಷ್ಟು ದಿನಗಳಲ್ಲಿ ಬ್ಯಾಂಕ್ ಮುಂದೆ ಕಾವಲು ಕಾಯದೇ ನೇರವಾಗಿ ಇವರ ಬಚ್ಚಲ ಮೆನೆಯಿ೦ದ ಹಿಡಿದು ಮಲಗುವ ಹಾಸಿಗೆ ಕೆಳಗೆ ಸಿಗೋದು ಅಂದ್ರೆ ತಮಾಷೆನಾ ?
ಬೆಂಕಿ ಇಲ್ಲದೇ ಹೋಗೆ ಯಾಡುತ್ತದೆಯೇ ? ಚಾಪೆಯಡಿಯಲ್ಲಿ ನುಸುಳುವ ಯೋಜನೆ ಜಾರಿಗೆ ತಂದರೂ ಕೆಲವರ ರಂಗೋಲಿ ಯಡಿ ನುಸುಳುವ ಜಾಯಮಾನದ ಜಾಣ್ಮೆಯನ್ನು ಮೆಚ್ಚಲೇ ಬೇಕು !! ಇವರುಗಳಿಂದ ಹೇಗೆ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ ? ಕೆಲವು ಬ್ಯಾಂಕ್ ಉದ್ಯೋಗಿಗಳು ಬ್ಯಾಂಕ್ ಮೇನೇಜರ್ ಗಳು ಹೊಡೆಯದೇ ಬಡಿಯದೇ ಕೂತಲ್ಲೇ (ಬೆವರು ಹರಿಸದೇ ) ಕಮಿಷನ್ ವ್ಯವಹಾರದಲ್ಲಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದರಲ್ಲ ಶೇಮ್ ! ಕೊಂಚ ಮನಸಾಕ್ಷಿ ಇದ್ದರೆ ಅಬಲರಿಂದ ವ್ರದ್ದರರೂ ಬಿಸಿಲಿನಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯವನ್ನು ಬಿಟ್ಟು ಕ್ಯೂ ನಲ್ಲಿ ನಿಂತು ತಮ್ಮ ಹಣವನ್ನು ಎಕ್ಸ್ ಚೆ೦ಜ್ ಮಾಡುವ ಪರಿಯನ್ನು ಒಮ್ಮೆ ನೋಡಿ, ಕನಿಕರ ವಿದ್ದರೆ ಕಂಬನಿ ಖಂಡಿತವಾಗಿಯೂ ಉದುರುತ್ತವೆ .ಅವರುಗಳಿಗೆ ಸಾಧ್ಯವಾದರೆ ಸಹಕಾರ ನೀಡಿ ಅದನ್ನು ಬಿಟ್ಟು ಯಾವುದೇ ಕಷ್ಟವಿಲ್ಲದೇ ಪರ್ಸೆಂಟ್ ಲೆಕ್ಕದಲ್ಲಿ ದೊಡ್ಡ ಕುಳಗಳಿಗೆ ಹಣ ಅಡಗಿಸುವುದಕ್ಕೆ ಸಾಥ್ ನೀಡುತ್ತಿದ್ದಿರಲ್ಲ ? ಛೆ ! ನಾಚಿಕೆ ಆಗಬೇಕು.. ದಿಕ್ಕಾರವಿರಲಿ ಇಂತಹ ವ್ಯವಸ್ಥೆಗೆ !!!.
ಇದು ಕೇವಲ ಮನಿಮಾಫಿಯಾದ ಬಗಗೆಗಿನ ವಿಚಾರವಲ್ಲ , ಯಾವುದೇ ಒಂದು ಯೋಜನೆ ಬಂದರೂ ಫಲಾನುಭವಿಗಳಿಗೆ ಸಿಗುವುದು ಎಳ್ಳು ಪ್ರಮಾಣ ಮಾತ್ರ .. ಉದಾಹರಣೆಗೆ ಒಂದು ರೂಪಯಿ ಅಕ್ಕಿ ಬಡವನಿಗೆ ಸೇರುವುದು ಎಲ್ಲೋ 30% ಮಾತ್ರ . ಲೋಡ್ ಗಟ್ಟಲೇ ಬೇರೆ ಗೋಡಾನ್ನಿಗೆ ಸರಬರಜಾಗುವುದು ಗುಟ್ಟೆನಲ್ಲ ..! ಒಂದು ರಸ್ತೆಯ ಗುತ್ತಿಗೆ ಕಾರ್ಯವೂ ಅಷ್ಟೇ 100% ಬಜೆಟ್ ನಲ್ಲಿ ಅವರಿವರ ಕೈ ಸೋಕಿ ಕೊನೆಗೆ ನಿರ್ಮಾಣವಾಗುವದು ಕೇವಲ ಹೆಚ್ಚೆಂದರೆ 25% ಮೊತ್ತದಲ್ಲಿ ಮಾತ್ರ ....ಸಿಂಹಪಾಲು ಸಂಬಂದ ಪಟ್ಟವರ ಖಜಾನೆಗೆ ಜಮಾವಣಯಾಗುತ್ತದೆ. ಇದೆಕ್ಕೆಲ್ಲಾ ಕೊನೆ ಎಂದು ? ಮಟ್ಟ ಹಾಕುವವರು ಯಾರು ? ಯಾವ ಕಾನೂನಿನಡಿ ಇದು ಸಾದ್ಯ ? ಮೋದಿ ಯಿಂದಲೇ ಸಾಧ್ಯವಿಲ್ಲ ಅಂದ ಮೇಲೆ ಇದನ್ನು ಇನ್ಯಾರಿಂದ ನಿರೀಕ್ಷಿಸಬಹುದು ? ಐಟಿ ದಾಳಿ ಆಗಿದೆ ..ಆಗ್ತಾನೂ ಇದೆ ಅಂದ ಮಾತ್ರಕ್ಕೆ ಒಂದಿಷ್ಟು ತಪ್ಪಿತಸ್ತರು ಬಲೆಗೆ ಬಿದ್ದಿದ್ದಾರೆ ಅಷ್ಟೇ !! ಇನ್ನು ಗುಟ್ಟಾಗಿ ಅದೆಷ್ಟೋ ತಿಮಿಂಗಿಲಗಳು ನಮ್ಮ ಸುತ್ತಾ ಮುತ್ತಾ ಮೂಲೆ ಮೂಲೆಗಳಲ್ಲಿ ಇದ್ದಾವೆ.. ಇದ್ದೆ ಇರುತ್ತವೆ . ಈ ರಹಸ್ಯವನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಕಠಿಣವೇ ಸರಿ . ಎಲ್ಲಿಯವರೆಗೆ ಭಂಡ ಬಕಾಸುರ ವಂಶದ ಬ್ರಷ್ಟಚಾರಿಗಳು ನಿರ್ನಾಮವಾಗುತ್ತಾರೋ ಅಲ್ಲಿಯವರೆಗೆ ನಡಿತಾನೆ ಇರುತ್ತೆ .. ಏನೂ ಮಾಡಲು ಸಾಧ್ಯವಿಲ್ಲ ಕೊನೆಯಾದಾಗಿ ಒಂದು ಮಾತು ಬೆಂಕಿಯ ಪಕ್ಕ ಬೆಣ್ಣೆಯನ್ನು ಇಡಬಾರದು ಅಷ್ಟೇ !!!

ಶುಕ್ರವಾರ, ಡಿಸೆಂಬರ್ 16, 2016

ಮುಗಿಯಿತೇ ಜಯಮ್ಮ ನಿನ್ನ ಕಾಲ ?


ಯಾರೂ ಕೂಡಾ ಊಹಿಸಿರಲು ಸಾಧ್ಯವಿಲ್ಲ .ತಮಿಳುನಾಡಿನ ‘’ಪುರುಚ್ಚಿ ತಲೈವಿ’’ ಎಂದೇ ಖ್ಯಾತಿ ಪಡೆದ ಅಮ್ಮ ಅಂದೇ ದೇಶದಾದ್ಯಂತ ಜನಪ್ರೀಯರೂ ಆಗಿದ್ದ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ .ಎಲ್ಲವೂ ದಾಖಲೆಗಳು ! ಹುಟ್ಟಿನಿ೦ದ ಸಾವಿನ ತನಕವೂ ದಾಖಲೆಗಳ ಸರದಾರ್ತಿ. ಯಾರೂ ಕೂಡಾ ಅಂದಾಜಿಸಲಾಗದ ವಿಚಿತ್ರ ಸಂಗತಿಗಳು ಜಯಲಲಿತಾ ಸುತ್ತಾ ಇವೆ . ಕರ್ನಾಟಕದಲ್ಲಿ ಹುಟ್ಟಿ ತಮಿಳು ನಾಡಿನಲ್ಲಿ ಅನಭಿಷೆಕ್ತ ದೊರೆಯಾದ ಜಯಲಲಿತಾ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲವಂತೆ .ಬಾಲ್ಯದಲ್ಲೇ ಸಾಕಷ್ಟು ಕಷ್ಟಪಟ್ಟು ಶಾಲಾ ಜೀವನದಲ್ಲಿಯೇ ಉತ್ತಮವಾಗಿ ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೇ,ಯಾರೂ ಕೂಡಾ ಎಣಿಸಿರಲಿಕ್ಕಿಲ್ಲ ಜಯಲಲಿತ ಪೇಮಸ್ ಹಿರೋಯಿನ್ ಆಗ್ತಾಳೆ ಅಂತ , ಹೆಚ್ಚೇನು ಮುಖ್ಯಮಂತ್ರಿ ಸೀಟು ಸಹಾ ಅರಸಿಕೊಂಡು ಆರಿಸಿಕೊಂಡು ಬರಲಿಕ್ಕೆ ಜಾಸ್ತಿ ಸಮಯ ಬೇಕಾಗಿರಲಿಲ್ಲ. ತಾನು ಮುಟ್ಟಿದ್ದೆಲ್ಲಾ ಸಕ್ಸಸ್ ಆಗುತ್ತೆ ಅಂತ ಖುದ್ದು ಜಯಲಲಿತಾಗೂ ಕೂಡಾ ಗೊತ್ತಿರಲಿಕ್ಕಿಲ್ಲ .ರಾಜಕಾರಾಣಿಯಾಗಿ ಯಾರೂ ಮಾಡದ ಕಾರ್ಯದಲ್ಲಿ ಸಫಲರಾಗುತ್ತಾಳೆ . “ಜನ ಸೇವೆಯೇ ಜನಾರ್ಧನ ಸೇವೆ” ಎಂದು ಜನರನ್ನು ಪಾಲಿಸಿ ಪೋಷಿಸುತ್ತಾಳೆ , ಅಮ್ಮ ಎಂದೇ ಜನ ಜನಿ ಳಾಗುತ್ತಾಳೆ .
ಎಲ್ಲಾ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದು ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ . ತನ್ನ ಸಾವು ಕೂಡಾ ಒಂದು ದಾಖಲೆ ಆಗುತ್ತದೆ ಎಂದು ಸ್ವರ್ಗದಲ್ಲಿರುವ ಜಯಲಲಿತಾಗೆ ಗೊತ್ತಿರಲಿಕ್ಕಿಲ್ಲ !. ಎಲ್ಲವೂ ಸಾರ್ವಕಾಲಿಕ ದಾಖಲೆ !!!.
74 ದಿನ ಆಸ್ಪತ್ರೆಯಲ್ಲಿದ್ದರೂ ಸಾಯುವಂತ ಕಾಯಿಲೆ ಖಂಡಿತವಾಗಿಯೂ ಬಾಧಿಸುತ್ತಿತ್ತೆ ?ಪ್ರಾಣಕ್ಕೆ ಕುತ್ತು ತರುತ್ತಿರುವ ಕಾಯಿಲೆ ಇದ್ದರೂ ಮೇಲ್ನೋಟಕ್ಕೆ ಪಬ್ಲಿಕ್ ಗೆ ಪಬ್ಲಿಕ್ ಆಗಿಲ್ಲ. ಸುಧಾರಿಸಿದ್ದಾರೆ ಅಂತದ್ದೇನೂ ಇಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿದ್ದೆ ಹೇಳಿದ್ದು ..ಇದು ನಿಜವೇ ? ಸಾವಿನ ದವದೆಯಲ್ಲಿದ್ದರೂ ವೈದ್ಯರು ಪ್ರಚಾರಿಸಿಲ್ಲ ಯಾಕೆ ? ಒಂದು ಪಕ್ಷದಲ್ಲಿ ಕಾಯಿಲೆ ಮಿತಿ ಮೀರಿದ್ದೆ ಯಾದರೇ ವಿದೇಶ ಆಸ್ಪತ್ರೆಯನ್ನು ಅವಲಂಬಿಸುವುದು ಸಾಮನ್ಯವಾಗಿ ಸೆಲೆಬ್ರೇಟ್ ಗಳು ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ ..ಆದರೆ ಅಲ್ಲಿಗೆ ರವಾನೆ ಆಗಿಲ್ಲ ಯಾಕೆ ? ಜಯ ಆಪ್ತರೇ ಜಯಲಿತರನ್ನು ಇಲ್ಲವಾಗಿಸಿ ಬಿಟ್ಟರೆ ?? ಎಲ್ಲವೂ ಪಿಸು ಪಿಸು !! ಒಟ್ಟಾರೆ ಗೊಂದಲದ ಗೂಡು ಆಷ್ಟೇ !..ಅನೀರಿಕ್ಷಿತವಾಗಿ ಅಮ್ಮ ಕಾಲವಾಗಿದ್ದಾರೆ . ಏನೇ ಇರಲಿ ಇಂತಹ ಅದ್ಭುತ ರಾಜಕಾರಣಿಯನ್ನು ದೇಶ ಅಗಲಿದೆ .
ಬಾಲ್ಯ ದಿಂದಲೂ ಹಿಡಿದ ಕಾರ್ಯವನ್ನೆಲ್ಲಾ ಸಕ್ಸಸ್ ನಲ್ಲಿ ಕಾಣುತ್ತಾ ಕಷ್ಟದಿಂದ ಬಂದು ಸುಖ ಸಂಸಾರ ಬೇಡ ವೆಂದು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ ತಮಿಳ ಪಾಲಿಗೆ ಅಮ್ಮನಾದ ಜಯಲಲಿತಾ ರಂತಹ ರಾಜಕಾರಿಣಿ ಭಾರತಕ್ಕೆ ಸಿಗುವುದು ಬಹಳ ಅಪೂರೂಪ. ಹಿಂದಿಲ್ಲ ಮುಂದೆ ಕೂಡಾ ಇ೦ತವರು ಕಾಣಸಿಗರು ಎಂದು ಎದೆ ತಟ್ಟಿ ಹೇಳಬಹುದು. ತಮಗೆ ಮಾತ್ರವಲ್ಲದೇ ಮರಿ ಮಕ್ಕಳವರೆಗೆ ಆಗುವಷ್ಟು ಸoಪತ್ತನ್ನು ಕೂಡಿಟ್ಟು ಅನೈತಿಕವಾಗಿ ರಾಜಕಾರಣ ಮಾಡುವ ಜನಪ್ರತಿನಿಧಿಗಳು ನಮ್ಮ ಮುಂದೆ ಸಹಸಾರು ಜನ ಇದ್ದಾರೆ ಆದರೆ ಅದ್ಯಾವುದೂ ಗೊಡವೆ ಇಲ್ಲದೇ ಜನಗಳೇ ನನ್ನ ಕುಟುಂಬದವರು ರೆಂದು ಕೇವಲ ಬಾಯಿ ಮಾತಿಗೆ ವೋಟ್ ಬೇಡಿಕೆಗೆ ಉಪಯೋಗಿಸದೇ ಪ್ರತ್ಯಕ್ಷವಾಗಿ ತೋರಿಸಿದ ದಿಟ್ಟ ಮಹಿಳೆ ಈಕೆ . ಅದೆಷ್ಟು ಸೌಲಭ್ಯ ಅದೆಷ್ಟು ಯೊಜನೆಗಳ ಮೂಲಕ ಬಡವರ ನಿರಾಶ್ರಿತರ ಪರವಾಗಿ ನಿಂತಾಕೆ . ಸ್ವಂತ ನೆಲ ಕರ್ನಾಟಕವಾದರೂ ನೀರಿಗಾಗಿ , ತಮ್ಮ ನೆಲದ ಜನಗಳಿಗಾಗಿ , ಕರ್ನಾಟಕದ ವಿರುದ್ಧ ತೊಡೆ ತಟ್ಟಿ ಕಾವೇರಿ ನೀರಿಗಾಗಿ ಸುಪ್ರ್ರಿಂ ಕೋರ್ಟ್ ಮೆಟ್ಟಿಲೇರಿ ಕರುನಾಡ ಜನರ ಹೆಗೆಗೆ ಒಳಗಾಗಿ ಕಾವೇರಿ ನೀರನ್ನು ತಮಿಳರಿಗೆ ಕುಡಿಸಿದಾಕೆ !!
ಮಹಿಳೆಯರು ಮಕ್ಕಳು ವ್ರದ್ಧರು ನಡೆಯಲಿಕ್ಕೆ ಸಾಧ್ಯವಾಗದವರೂ ಕೂಡಾ ಅಮ್ಮ ಅಮ್ಮ ಎಂದು ಅಮ್ಮನಿಗಾಗಿ ಎಳೆ ಮಗು ಗೋಳಿಡುವ ರೀತಿಯಲ್ಲಿ ರೋಧಿಸುವ ದ್ರಶ್ಯವೇ ಸಾರಿ ಹೇಳುತ್ತಿದೆ, ಅಮ್ಮನ ಕೀರ್ತಿಯೆಲ್ಲಿಯರೆಗೆ ಕೊಂಡು ಒಯಿದಿದೆ ಎಂದು . ಈ ಚಿತ್ರಣ ನಾವು ನಿನಿಮಾಗಳಲ್ಲಿ ಅಲ್ಲ ನೈಜ ಜೀವನದಲ್ಲಿ ಅಂದರೆ ಅರ್ಥವಾಗುತ್ತದೆ ಜಯಲಲಿತಾರ ಪಾರದರ್ಶಕ ಆಡಳಿತ ವ್ಯವಸ್ಥೆ ಅದೆಷ್ಟು ಜನಪೋಯೋಗಿ ಆಗಿತ್ತು ಎಂದು . ಇಂತಹ ಚಿತ್ರಣವನ್ನು ದೇಶದ ಯಾವುದೇ ಮೂಲೆಯಲ್ಲಿ ಸಹಾ ಕಾಣಲಿಕ್ಕೆ ಸಾಧ್ಯವಿಲ್ಲ . ಒಟ್ಟಾರೆ ಇದನ್ನೆಲ್ಲಾ ಇಷ್ಟು ದಿನ ಅನುಭವಿಸಿದ ತಮಿಳುರು ಅದೃಷ್ಟವಂತರು ಎಂದರೂ ಅತಿಶಯೋಕ್ತಿಯಾಗಲಾರದು .
ಒಂದು ಕಾಲದಲ್ಲಿ ಅಂದ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲೂ ಸಹಾ ಇಂಥದ್ದೇ ಒಂದು ಅಭಿಮಾನವನ್ನು ಅವರು ಸಂಪಾದಿಸಿದ್ದರು .. ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದರು. ತದನಂತರದ ಅಲ್ಲಿನ ರಾಜಕೀಯ ಬೆಳವಣಿಗೆ ಎಷ್ಟು ಕುಲಗೆಟ್ಟು ಹೋಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುವುದರ ಅಗತ್ಯವಿಲ್ಲ ಅದೆಷ್ಟು ನೀಚ ಮಟ್ಟಕ್ಕೆ ರಾಜಕೀಯ ಹೋಯಿತು ಅಂದ್ರೆ ,ಒಂದೇ ರಾಜ್ಯ ಎರಡು ಹೋಳುಗಳಾಗಿ ಪರಿವರ್ತನೆ ಗೊಂಡಿತು ಅ೦ತದ್ದೆ ಪರಿಸ್ತಿತಿ ತಮಿಳು ನಾಡಿಗೂ ಕೂಡಾ ದೂರವಿಲ್ಲ . ಗಟ್ಟಿತನ ರಾಜಕೀಯ ವ್ಯವಸ್ಥೆ ಕೈಕೊಟ್ಟಂತೆ ಇದೆ . ಅಮ್ಮನ ಕಾಲದಲ್ಲಿ ಸುಖಿಗಳಾಗಿದ್ದ ಪ್ರಜೆಗಳಿಗೆ ದುಖದ ದಿನ ದೂರವಿಲ್ಲ ಎನ್ನಬಹುದೇನೋ ?! ಕಾಲವೇ ಉತ್ತರ ಹೇಳಬೇಕು !
ಕೊನೆಯಾದಾಗಿ ಒಂದೇ ಮಾತು

ಮುಗಿಯತೇ ಜಯಮ್ಮ ನಿನ್ನ ಕಾಲ?

ಹುಟ್ಟಿದ್ದು ಕರುನಾಡಿನಲ್ಲಿ
ಹೆಸರುಗಳಿಸಿದ್ದು ತಮಿಳು ನಾಡಿನಲ್ಲಿ

ಜಾಣೆಯಾಗಿ ವಿದ್ಯಾಭ್ಯಾಸದಲ್ಲಿ ಎತ್ತಿದ ಕೈ
ಅಭಿನೇತ್ರಿಯಾಗಿಯೂ ಚಿತ್ರರಂಗದಲ್ಲಿ ಸೈ

ಕಷ್ಟದಲ್ಲಿ ನೀ ಎದ್ದು ಬಂದೆ
ಸಂಸಾರ ಸುಖ ಬೇಡ ವೆಂದೆ

ಜನ ಸೇವೆಗೆ ಬದುಕು ಮುಡುಪಾಗಿಟ್ಟೆ
ಜನ ಮಾನಸದಲ್ಲಿ ಆರಾಧ್ಯ ದೈವ ಆಗಿಬಿಟ್ಟೆ

ಹೆಸರಲ್ಲೇ ಇತ್ತು ಜಯ
ಅದಕ್ಕೇನೋ ಹಿಡಿದ ಕಾರ್ಯವೆಲ್ಲ ವಿಜಯ

ತಮಿಳಿನ ಪುರುಚ್ಚಿ ತಲೈವಿ ನೀನಾದೆ
ದೇಶದಾದ್ಯಂತ ಅಮ್ಮನಿಗೆ ಅನ್ವರ್ಥಳಾದೆ

ಮುಗಿಯತೇ ಜಯಮ್ಮ ನಿನ್ನ ಕಾಲ?
ಇನ್ನ್ಯಾರು ತಮಿಳರಿಗೆ ಅಭಯದ ಬಲ ?

ಶನಿವಾರ, ಡಿಸೆಂಬರ್ 3, 2016

ದೇವರ ನಾಡಿನಲ್ಲಿ ದೇವಾಲಯದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ?

ದೇವರ ಸ್ವಂತ ನಾಡು ಕೆರೆಯಿಸಿ ಕೊಳ್ಳುವ ಉತ್ತರ ಭಾರತದ ಪುಟ್ಟ ರಾಜ್ಯ ಕೇರಳ . ಹೌದು !ಹಲವು ಧರ್ಮೀಯರ ನಾಡು ಭಾರತದಲ್ಲಿ ಅತೀ ಹೆಚ್ಚು ಮಠ ಮಂದಿರ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳವನ್ನು ಹೊoದಿರುವುದು ಕೇರಳ ಬಿಟ್ಟರೆ ಬೇರಾವುದೂ ಇಲ್ಲ ಅದಕ್ಕಾಗಿಯೇ ಏನೋ , ದೇವರ ಸ್ವಂತ ನಾಡು ಎಂದು ಪ್ರಖ್ಯಾತಿ ಪಡೆದಿದೆ .
ಕೇವಲ ಹಿಂದೂ ಧರ್ಮ ಮಾತ್ರವಲ್ಲದೇ ಮಾರಿಗೊಂದು ಚರ್ಚ್ ಮಸ್ಜಿದ್ ಗಳೂ ಕಾಣ ಸಿಗುತ್ತವೆ ಇದರರ್ಥ ಸಮಭಾವ ಸಮ್ಮಿಲನ ದೊಂದಿಗೆ ಧಾರ್ಮಿಕ ಚಟುವಟಿಕೆ ಅದರ ರೀತಿ ನೀತಿಯೇ ಎಂಬ ತಳ ಹದಿಯಲ್ಲಿ ನಡೆಯುತ್ತಿದೆ., ನಡೆಯಲ್ಪಡುತ್ತದೆ. ಅದು ಹಿಂದಿನಿಂದಲೂ ನಡೆದು ಕೊಂಡು ಬಂದ ಪದ್ಧತಿ. ಕೇರಳದಲ್ಲಿರುವ ಶಬರಿಮಲೈ ಸ್ವಾಮೀ ಅಯ್ಯಪ್ಪ ದೇವಸ್ಥಾನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಎಲ್ಲಾರಿಗೂ ಗೊತ್ತಿರುವ ವಿಚಾರ ಹನ್ನೆರಡು ವರ್ಷದ ದಾಟದ ಹಾಗೂ 40 ವರ್ಷಗಳ ಮೇಲಿನ ,ಮಹಿಳೆಯರಿಗೆ ಮಾತ್ರ ಶ್ರೀಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪ್ರವೇಶ .
ಇದು ಪರಂಪರಾಗತವಾಗಿ ನಡೆದು ಕೊಂಡು ಬಂದಿರುವ ಅಚಾರ ವಿಚಾರ . ಅದರ ಹಿಂದಿನ ಕಥೆಯನ್ನೂ ಇಲ್ಲಿ ಅರಹಬೇಕಾಗಿಲ್ಲ ಸಮಸ್ತ ಸಮಾಜವೂ ಅರಿತಿರುವ ಸಂಗತಿ ,ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗಿನ ದಿನಗಳಲಿ ಕೇರಳ ರಾಜ್ಯವು ಹೈಕೋರ್ಟ್ ನಿಂದ ಹಿಡಿದು ಸುಪ್ರಿಂ ಕೋರ್ಟ್ ವರೆಗೂ ಸಹಾ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿ ಕೊಡಬೇಕೆಂಬ ಅತಿಯಾಸೆಯಸಾಹಸಕ್ಕೆ ಕೈ ಹಾಕಿದೆ
ಇದರ ಪರ ವಾದ -ವಿವಾದ ಇನ್ನೂ ನಡೆಯುತ್ತಲೇ ಇದೆ . ಮುಂದೆ ಇದು ಯಾವ ದಿಕ್ಕಿನಲ್ಲಿ ತೀರ್ಪು ಪಡೆದು ಕೊಳ್ಳುತದೋ ಗೊತ್ತಿಲ್ಲ. ಸಾಮನ್ಯವಾಗಿ ಎಲ್ಲಾರಲ್ಲೂ ಮೂಡುವುದು ಒಂದೇ ಮಹಿಳೆಯರಿಗೆ ಪ್ರವೇಶ ಬೇಡ ತಲತಲಾಂತರ ದಿಂದ ಬಂದಿರುವ ಈ ಸುಸಂಸ್ಕ್ರತಿ ,ಸಂಪ್ರದಾಯವನ್ನು ಒಮ್ಮೆಲೇ ಮುರಿಯುವುದು ಸರಿಯಲ್ಲ ಎಂಬುದು.ಮುಂದೆ ಇದರ ವಿರುದ್ದವಾಗಿ ಸುಪ್ರಿಂ ಕೋರ್ಟ್ ನಿಂದ ತೀರ್ಪು ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ ನಿನ್ನೆ ಇನ್ನoತ್ತದ್ದೆ ಒಂದು ಮಾಹಾನ್ ತೀರ್ಪು ಹೊರಬಂದಿತ್ತು . ಈ ಮೊದಲೇ ನಾನು ಹೇಳಿದಂತೆ ದೇವರ ಸ್ವಂತ ನಾಡು ಎಂದು ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡ ಬಂದಿರುವುದಕ್ಕೆ ಅಲ್ಲಿನ ಭಕ್ತರ ಧಾರ್ಮಿಕ ಪ್ರಜ್ಞೆ ದೇವರ ಮೇಲಿಟ್ಟಿರುವ ನಂಬಿಕೆ ವಿಧಿವಿಧಾನಗಳು ಬೇರೆಲ್ಲೂ ಕಾಣ ಸಿಗದು .
ಇಲ್ಲಿ ಯಾವುದೇ ಒಂದು ದೇವಸ್ಥಾನದ ಒಳ ಪ್ರವೇಶಾತಿಗೆ ಪುರುಷರು ಅಂಗಿ –ಬನಿಯಾನ್ ನ್ನು ತೆಗೆಯದೇ ಒಳ ಹೋಗುವಂತಿಲ್ಲ ಇನ್ನು ಕೆಲವೊಂದು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆಯುವುದರ ಜೊತೆಗೆ ಲುಂಗಿ-ಪಂಚೆಯನ್ನು ಧರಿಸಲೇ ಬೇಕು ಹಾಗೂ ಮಹಿಳೆಯರು ಕಟ್ಟುನಿಟ್ಟಾಗಿ ಸೀರೆಯನ್ನು ಧರಿಸಿರಬೇಕು ,ಚೂರಿದಾರ್ ಇದ್ದರೆ ಅದರ ಮೇಲೆ ಪಂಚೆ ಅಥವಾ ದೋತಿ- ಲುಂಗಿಯನ್ನು ಕಡ್ಡಾಯವಾಗಿಉಡಲೇ ಬೇಕು ಆಗ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಇದು ಇಂದಿನದಲ್ಲಾ ಸಾಕಷ್ಟು ದಶಕ ಗಳಿಂದ ನಡೆದು ಕೊಂಡು ಬಂದಿರುವ ಪದ್ಧತಿ . ನಿನ್ನೆ ಸುಪ್ರಿ ಕೋರ್ಟ್ ನಿಂದ ಒಂದು ತೀರ್ಪು ಹೊರಬಿದ್ದಿದೆ ಕೇರಳದ ರಾಜಧಾನಿ ತಿರುವನoತಪುರಂಲ್ಲಿರುವ ಅನಂತ ಪದ್ಮನಾಭ ದೇಗುಲದಲ್ಲಿ (ಚಿನ್ನ ಸಿಕ್ಕಿ ಜಗತಿನಾದ್ಯಂತ ಖ್ಯಾತಿ ಪಡೆದ ಮಂದಿರ ) ಮಹಿಳೆಯರು ಲುಂಗಿಯನ್ನು ಬಳಸದೇ ಚೂರಿದಾರ್ ರಿಂದಲೇ ನೇರವಾಗಿ ಪ್ರವೆಶಿಸಬಹುದೆಂದು , ಸುಪ್ರಿಂ ಕೋರ್ಟ್ ಗೆ ತೆಲೆಕೆಟ್ಟಿದೆ !! ,ಹಾಗಂತ ಭಕ್ತರೇ ನೀವೇಕೆ ಹೀಗೆ ? ಧಾರ್ಮಿಕತೆಯನ್ನು ಉನ್ನತ ಸ್ತರದಲ್ಲಿ ಮೇಳೈಸಿಕೊಂಡು ಬಂದಿರುವ ಭಾರತೀಯ ಅದರಲ್ಲೂ ಕೇರಳದಲ್ಲಿ ಈ ನೀತಿ ಜಾರಿಗೆ ಬಂದಿರುವುದು ಅಕ್ಷ್ಯಮ! ಸಹಿಸುವನ್ತದ್ದಲ್ಲ ಧಾರ್ಮಿಕತೆಗೆ ಪೆಟ್ಟು ನೀಡಿದಂತಾಗಿದೆ ತಲೆ ತಲಾಂತರ ದಿಂದ ನಡೆದು ಕೊಂಡು ಬಂದಿರುವ ಪದ್ದತಿಗೆ ಬೆಲೆ ಇಲ್ಲದಂತಾಗುತ್ತದೆ . ಸಮಾಧಾನ ಇಷ್ಟೇ ಈ ಬಗ್ಗೆ ಪ್ರಜ್ಞಾವಂತ ತಾಯಿ ಸಹೋದರಿಯರು ಈ ರೋಲ್ಸ್ ಗೆ ಒಗ್ಗಿ ಕೊಳ್ಳಲಿಲ್ಲ ಕೇರಳದಲ್ಲಿ ಹರತಾಳ ನಡೆಯುತ್ತಿದೆ ಆದಷ್ಟು ಬೇಗ ಈ ನೀತಿಯನ್ನು ಕೋರ್ಟು ಹಿಂತೆದುಕೊಳ್ಳಬೇಕು . ಅದಿಲ್ಲದಿದ್ದರೆ ದೇವರ ಸ್ವಂತ ನಾಡಿನಲ್ಲಿ ದೇವರಿಗೆ ಬೆಲೆ ನೆಲೆ ಇಲ್ಲದಂತಾಗುತ್ತದೆ ಇನ್ನು ಉಳಿದ ದೇಗುಲ ಸಹಾ ತೂಗುಯ್ಯಾಲೆಯಲ್ಲಿರುತ್ತವೆ ಕಲಿಯುಗದ ಬ್ರಹ್ಮಚಾರಿ ಮಾಣಿಕ೦ಟನಿಗೂ ಸಹಾ ಮುಂದೆ ಕಂಟಕ ತಪ್ಪಿದ್ದಲ್ಲ ಭಕ್ತರೆ ಎಚ್ಚೆತ್ತು ಕೊಳ್ಳಿ ಇದು ಕೇವಲ ಕೆರಳಿಗರಲ್ಲದೇ , ಭಾರತೀಯರಾದ ನಾವುಗಳು ದೇಗುಲದ ಸ್ಥಿತಿ ಅದೊಗತಿಗೆ ಬಾರದಂತೆ ಖಂಡಿಸಬೇಕು ,ಕೈ ಜೋಡಿಸಿ ದೇಗುಲಗಳ ಉದ್ದಾರಕ್ಕೆ ಪಣ ತೊಡಬೇಕಾಗಿದೆ .