ಶುಕ್ರವಾರ, ಡಿಸೆಂಬರ್ 16, 2016

ಮುಗಿಯಿತೇ ಜಯಮ್ಮ ನಿನ್ನ ಕಾಲ ?


ಯಾರೂ ಕೂಡಾ ಊಹಿಸಿರಲು ಸಾಧ್ಯವಿಲ್ಲ .ತಮಿಳುನಾಡಿನ ‘’ಪುರುಚ್ಚಿ ತಲೈವಿ’’ ಎಂದೇ ಖ್ಯಾತಿ ಪಡೆದ ಅಮ್ಮ ಅಂದೇ ದೇಶದಾದ್ಯಂತ ಜನಪ್ರೀಯರೂ ಆಗಿದ್ದ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ .ಎಲ್ಲವೂ ದಾಖಲೆಗಳು ! ಹುಟ್ಟಿನಿ೦ದ ಸಾವಿನ ತನಕವೂ ದಾಖಲೆಗಳ ಸರದಾರ್ತಿ. ಯಾರೂ ಕೂಡಾ ಅಂದಾಜಿಸಲಾಗದ ವಿಚಿತ್ರ ಸಂಗತಿಗಳು ಜಯಲಲಿತಾ ಸುತ್ತಾ ಇವೆ . ಕರ್ನಾಟಕದಲ್ಲಿ ಹುಟ್ಟಿ ತಮಿಳು ನಾಡಿನಲ್ಲಿ ಅನಭಿಷೆಕ್ತ ದೊರೆಯಾದ ಜಯಲಲಿತಾ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲವಂತೆ .ಬಾಲ್ಯದಲ್ಲೇ ಸಾಕಷ್ಟು ಕಷ್ಟಪಟ್ಟು ಶಾಲಾ ಜೀವನದಲ್ಲಿಯೇ ಉತ್ತಮವಾಗಿ ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೇ,ಯಾರೂ ಕೂಡಾ ಎಣಿಸಿರಲಿಕ್ಕಿಲ್ಲ ಜಯಲಲಿತ ಪೇಮಸ್ ಹಿರೋಯಿನ್ ಆಗ್ತಾಳೆ ಅಂತ , ಹೆಚ್ಚೇನು ಮುಖ್ಯಮಂತ್ರಿ ಸೀಟು ಸಹಾ ಅರಸಿಕೊಂಡು ಆರಿಸಿಕೊಂಡು ಬರಲಿಕ್ಕೆ ಜಾಸ್ತಿ ಸಮಯ ಬೇಕಾಗಿರಲಿಲ್ಲ. ತಾನು ಮುಟ್ಟಿದ್ದೆಲ್ಲಾ ಸಕ್ಸಸ್ ಆಗುತ್ತೆ ಅಂತ ಖುದ್ದು ಜಯಲಲಿತಾಗೂ ಕೂಡಾ ಗೊತ್ತಿರಲಿಕ್ಕಿಲ್ಲ .ರಾಜಕಾರಾಣಿಯಾಗಿ ಯಾರೂ ಮಾಡದ ಕಾರ್ಯದಲ್ಲಿ ಸಫಲರಾಗುತ್ತಾಳೆ . “ಜನ ಸೇವೆಯೇ ಜನಾರ್ಧನ ಸೇವೆ” ಎಂದು ಜನರನ್ನು ಪಾಲಿಸಿ ಪೋಷಿಸುತ್ತಾಳೆ , ಅಮ್ಮ ಎಂದೇ ಜನ ಜನಿ ಳಾಗುತ್ತಾಳೆ .
ಎಲ್ಲಾ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದು ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ . ತನ್ನ ಸಾವು ಕೂಡಾ ಒಂದು ದಾಖಲೆ ಆಗುತ್ತದೆ ಎಂದು ಸ್ವರ್ಗದಲ್ಲಿರುವ ಜಯಲಲಿತಾಗೆ ಗೊತ್ತಿರಲಿಕ್ಕಿಲ್ಲ !. ಎಲ್ಲವೂ ಸಾರ್ವಕಾಲಿಕ ದಾಖಲೆ !!!.
74 ದಿನ ಆಸ್ಪತ್ರೆಯಲ್ಲಿದ್ದರೂ ಸಾಯುವಂತ ಕಾಯಿಲೆ ಖಂಡಿತವಾಗಿಯೂ ಬಾಧಿಸುತ್ತಿತ್ತೆ ?ಪ್ರಾಣಕ್ಕೆ ಕುತ್ತು ತರುತ್ತಿರುವ ಕಾಯಿಲೆ ಇದ್ದರೂ ಮೇಲ್ನೋಟಕ್ಕೆ ಪಬ್ಲಿಕ್ ಗೆ ಪಬ್ಲಿಕ್ ಆಗಿಲ್ಲ. ಸುಧಾರಿಸಿದ್ದಾರೆ ಅಂತದ್ದೇನೂ ಇಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿದ್ದೆ ಹೇಳಿದ್ದು ..ಇದು ನಿಜವೇ ? ಸಾವಿನ ದವದೆಯಲ್ಲಿದ್ದರೂ ವೈದ್ಯರು ಪ್ರಚಾರಿಸಿಲ್ಲ ಯಾಕೆ ? ಒಂದು ಪಕ್ಷದಲ್ಲಿ ಕಾಯಿಲೆ ಮಿತಿ ಮೀರಿದ್ದೆ ಯಾದರೇ ವಿದೇಶ ಆಸ್ಪತ್ರೆಯನ್ನು ಅವಲಂಬಿಸುವುದು ಸಾಮನ್ಯವಾಗಿ ಸೆಲೆಬ್ರೇಟ್ ಗಳು ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ ..ಆದರೆ ಅಲ್ಲಿಗೆ ರವಾನೆ ಆಗಿಲ್ಲ ಯಾಕೆ ? ಜಯ ಆಪ್ತರೇ ಜಯಲಿತರನ್ನು ಇಲ್ಲವಾಗಿಸಿ ಬಿಟ್ಟರೆ ?? ಎಲ್ಲವೂ ಪಿಸು ಪಿಸು !! ಒಟ್ಟಾರೆ ಗೊಂದಲದ ಗೂಡು ಆಷ್ಟೇ !..ಅನೀರಿಕ್ಷಿತವಾಗಿ ಅಮ್ಮ ಕಾಲವಾಗಿದ್ದಾರೆ . ಏನೇ ಇರಲಿ ಇಂತಹ ಅದ್ಭುತ ರಾಜಕಾರಣಿಯನ್ನು ದೇಶ ಅಗಲಿದೆ .
ಬಾಲ್ಯ ದಿಂದಲೂ ಹಿಡಿದ ಕಾರ್ಯವನ್ನೆಲ್ಲಾ ಸಕ್ಸಸ್ ನಲ್ಲಿ ಕಾಣುತ್ತಾ ಕಷ್ಟದಿಂದ ಬಂದು ಸುಖ ಸಂಸಾರ ಬೇಡ ವೆಂದು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ ತಮಿಳ ಪಾಲಿಗೆ ಅಮ್ಮನಾದ ಜಯಲಲಿತಾ ರಂತಹ ರಾಜಕಾರಿಣಿ ಭಾರತಕ್ಕೆ ಸಿಗುವುದು ಬಹಳ ಅಪೂರೂಪ. ಹಿಂದಿಲ್ಲ ಮುಂದೆ ಕೂಡಾ ಇ೦ತವರು ಕಾಣಸಿಗರು ಎಂದು ಎದೆ ತಟ್ಟಿ ಹೇಳಬಹುದು. ತಮಗೆ ಮಾತ್ರವಲ್ಲದೇ ಮರಿ ಮಕ್ಕಳವರೆಗೆ ಆಗುವಷ್ಟು ಸoಪತ್ತನ್ನು ಕೂಡಿಟ್ಟು ಅನೈತಿಕವಾಗಿ ರಾಜಕಾರಣ ಮಾಡುವ ಜನಪ್ರತಿನಿಧಿಗಳು ನಮ್ಮ ಮುಂದೆ ಸಹಸಾರು ಜನ ಇದ್ದಾರೆ ಆದರೆ ಅದ್ಯಾವುದೂ ಗೊಡವೆ ಇಲ್ಲದೇ ಜನಗಳೇ ನನ್ನ ಕುಟುಂಬದವರು ರೆಂದು ಕೇವಲ ಬಾಯಿ ಮಾತಿಗೆ ವೋಟ್ ಬೇಡಿಕೆಗೆ ಉಪಯೋಗಿಸದೇ ಪ್ರತ್ಯಕ್ಷವಾಗಿ ತೋರಿಸಿದ ದಿಟ್ಟ ಮಹಿಳೆ ಈಕೆ . ಅದೆಷ್ಟು ಸೌಲಭ್ಯ ಅದೆಷ್ಟು ಯೊಜನೆಗಳ ಮೂಲಕ ಬಡವರ ನಿರಾಶ್ರಿತರ ಪರವಾಗಿ ನಿಂತಾಕೆ . ಸ್ವಂತ ನೆಲ ಕರ್ನಾಟಕವಾದರೂ ನೀರಿಗಾಗಿ , ತಮ್ಮ ನೆಲದ ಜನಗಳಿಗಾಗಿ , ಕರ್ನಾಟಕದ ವಿರುದ್ಧ ತೊಡೆ ತಟ್ಟಿ ಕಾವೇರಿ ನೀರಿಗಾಗಿ ಸುಪ್ರ್ರಿಂ ಕೋರ್ಟ್ ಮೆಟ್ಟಿಲೇರಿ ಕರುನಾಡ ಜನರ ಹೆಗೆಗೆ ಒಳಗಾಗಿ ಕಾವೇರಿ ನೀರನ್ನು ತಮಿಳರಿಗೆ ಕುಡಿಸಿದಾಕೆ !!
ಮಹಿಳೆಯರು ಮಕ್ಕಳು ವ್ರದ್ಧರು ನಡೆಯಲಿಕ್ಕೆ ಸಾಧ್ಯವಾಗದವರೂ ಕೂಡಾ ಅಮ್ಮ ಅಮ್ಮ ಎಂದು ಅಮ್ಮನಿಗಾಗಿ ಎಳೆ ಮಗು ಗೋಳಿಡುವ ರೀತಿಯಲ್ಲಿ ರೋಧಿಸುವ ದ್ರಶ್ಯವೇ ಸಾರಿ ಹೇಳುತ್ತಿದೆ, ಅಮ್ಮನ ಕೀರ್ತಿಯೆಲ್ಲಿಯರೆಗೆ ಕೊಂಡು ಒಯಿದಿದೆ ಎಂದು . ಈ ಚಿತ್ರಣ ನಾವು ನಿನಿಮಾಗಳಲ್ಲಿ ಅಲ್ಲ ನೈಜ ಜೀವನದಲ್ಲಿ ಅಂದರೆ ಅರ್ಥವಾಗುತ್ತದೆ ಜಯಲಲಿತಾರ ಪಾರದರ್ಶಕ ಆಡಳಿತ ವ್ಯವಸ್ಥೆ ಅದೆಷ್ಟು ಜನಪೋಯೋಗಿ ಆಗಿತ್ತು ಎಂದು . ಇಂತಹ ಚಿತ್ರಣವನ್ನು ದೇಶದ ಯಾವುದೇ ಮೂಲೆಯಲ್ಲಿ ಸಹಾ ಕಾಣಲಿಕ್ಕೆ ಸಾಧ್ಯವಿಲ್ಲ . ಒಟ್ಟಾರೆ ಇದನ್ನೆಲ್ಲಾ ಇಷ್ಟು ದಿನ ಅನುಭವಿಸಿದ ತಮಿಳುರು ಅದೃಷ್ಟವಂತರು ಎಂದರೂ ಅತಿಶಯೋಕ್ತಿಯಾಗಲಾರದು .
ಒಂದು ಕಾಲದಲ್ಲಿ ಅಂದ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲೂ ಸಹಾ ಇಂಥದ್ದೇ ಒಂದು ಅಭಿಮಾನವನ್ನು ಅವರು ಸಂಪಾದಿಸಿದ್ದರು .. ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದರು. ತದನಂತರದ ಅಲ್ಲಿನ ರಾಜಕೀಯ ಬೆಳವಣಿಗೆ ಎಷ್ಟು ಕುಲಗೆಟ್ಟು ಹೋಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುವುದರ ಅಗತ್ಯವಿಲ್ಲ ಅದೆಷ್ಟು ನೀಚ ಮಟ್ಟಕ್ಕೆ ರಾಜಕೀಯ ಹೋಯಿತು ಅಂದ್ರೆ ,ಒಂದೇ ರಾಜ್ಯ ಎರಡು ಹೋಳುಗಳಾಗಿ ಪರಿವರ್ತನೆ ಗೊಂಡಿತು ಅ೦ತದ್ದೆ ಪರಿಸ್ತಿತಿ ತಮಿಳು ನಾಡಿಗೂ ಕೂಡಾ ದೂರವಿಲ್ಲ . ಗಟ್ಟಿತನ ರಾಜಕೀಯ ವ್ಯವಸ್ಥೆ ಕೈಕೊಟ್ಟಂತೆ ಇದೆ . ಅಮ್ಮನ ಕಾಲದಲ್ಲಿ ಸುಖಿಗಳಾಗಿದ್ದ ಪ್ರಜೆಗಳಿಗೆ ದುಖದ ದಿನ ದೂರವಿಲ್ಲ ಎನ್ನಬಹುದೇನೋ ?! ಕಾಲವೇ ಉತ್ತರ ಹೇಳಬೇಕು !
ಕೊನೆಯಾದಾಗಿ ಒಂದೇ ಮಾತು

ಮುಗಿಯತೇ ಜಯಮ್ಮ ನಿನ್ನ ಕಾಲ?

ಹುಟ್ಟಿದ್ದು ಕರುನಾಡಿನಲ್ಲಿ
ಹೆಸರುಗಳಿಸಿದ್ದು ತಮಿಳು ನಾಡಿನಲ್ಲಿ

ಜಾಣೆಯಾಗಿ ವಿದ್ಯಾಭ್ಯಾಸದಲ್ಲಿ ಎತ್ತಿದ ಕೈ
ಅಭಿನೇತ್ರಿಯಾಗಿಯೂ ಚಿತ್ರರಂಗದಲ್ಲಿ ಸೈ

ಕಷ್ಟದಲ್ಲಿ ನೀ ಎದ್ದು ಬಂದೆ
ಸಂಸಾರ ಸುಖ ಬೇಡ ವೆಂದೆ

ಜನ ಸೇವೆಗೆ ಬದುಕು ಮುಡುಪಾಗಿಟ್ಟೆ
ಜನ ಮಾನಸದಲ್ಲಿ ಆರಾಧ್ಯ ದೈವ ಆಗಿಬಿಟ್ಟೆ

ಹೆಸರಲ್ಲೇ ಇತ್ತು ಜಯ
ಅದಕ್ಕೇನೋ ಹಿಡಿದ ಕಾರ್ಯವೆಲ್ಲ ವಿಜಯ

ತಮಿಳಿನ ಪುರುಚ್ಚಿ ತಲೈವಿ ನೀನಾದೆ
ದೇಶದಾದ್ಯಂತ ಅಮ್ಮನಿಗೆ ಅನ್ವರ್ಥಳಾದೆ

ಮುಗಿಯತೇ ಜಯಮ್ಮ ನಿನ್ನ ಕಾಲ?
ಇನ್ನ್ಯಾರು ತಮಿಳರಿಗೆ ಅಭಯದ ಬಲ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ