ಗುರುವಾರ, ಆಗಸ್ಟ್ 10, 2017

ನ್ಯಾಯ ಸಿಗದು ಅಟ್ ಲೀಸ್ಟ್ ಸತ್ಯನಾದ್ರೂ ಹೊರಬರಲಿ


ಈಗಷ್ಟೇ ಅರಳುತ್ತಿದ ಮೊಗ್ಗು !ಆಶೆ ಆಕಾಂಕ್ಷೆಗಳು ಬೆಟ್ಟದಷ್ಟು ಕಟ್ಟಿಕೊಂಡಿದ್ದಳು !. ಈ ಪುಟ್ಟ ಬಾಲೆಯಲ್ಲಿ ಆದಾಗಲೇ ಅಗಾಧವಾದ ಪ್ರತಿಭೆ ತುಂಬಿ ತುಳುಕಾಡುತ್ತಿತ್ತು!, ರಾಷ್ಟ್ರಮಟ್ಟಕ್ಕೆ ಪಸರಿಸಿಯೂ ಆಗಿತ್ತು ..ಪ್ರೈಮರಿ ಶಾಲಾ ಜೀವನದಲ್ಲಿಯೇ ಬ್ಯಾಡ್ ಮಿಂಟನ್ ಎಂಬ ಅತೀ ಅಪುರೂಪದ ಕ್ರೀಡೆ ಈ ಗ್ರಾಮೀಣ ಪರಿಸರ ಬಡ ಕುಟುಂಬದಲ್ಲಿ ಜನ್ಮ ತಾಳಿದ ಕುಹರಿಯಲ್ಲಿ ಅಡಕವಾಗಿತ್ತು . ಸೂಕ್ತ ಪ್ರೋತ್ಸಾಹದ ಕೊರತೆಯ ನಡುವೆಯೂ ಸಹಾ ತನ್ನ ದಿಟ್ಟ ಛಲ ಕಠಿಣ ಪರಿಶ್ರಮದಿಂದ ಜಿಲ್ಲಾ ರಾಜ್ಯಾಮ ಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಬೆಳಗಿಸಿದಲ್ಲದೆ ರಾಷ್ಟ್ರ ಮಟ್ಟದಲ್ಲೂ ಶಟಲ್ ಕೊಕ್ ನ್ನು ಮೂಲೆ ಮೂಲೆಗೆ ಅಟ್ಟಿದ್ದ ಈ ಪುಟ್ಟ ಪೋರಿಯ ಸಾಧನೆ ಕಡಿಮೆಯೇನಲ್ಲ .ಮುಂದೊಂದು ದಿನ ಖಂಡಿತವಾಗಿಯೂ ಸೈನಾ ನೆಹವಾಲ್ ನ್ನು ಮೀರಿಸುತ್ತಿದಳೋ ಅಥವಾ ಅವರ ಸಾಲಿಗೆ ಏರುತ್ತಿದ್ದಳೋ ಏನೋ ?!ಆದರೆ ಹಾಗಾಗಲಿಲ್ಲ.. ವಿಧಿ ಬಿಡಲಿಲ್ಲ . ಅದೇನೋ ಕೋಪ ಅವಳ ಮೇಲಿತ್ತೋ ನಾ ಕಾಣೆ .. ಅವಳ ಎಲ್ಲಾ ಬವಿಷ್ಯದ ಬಯಕೆ ಗಳನ್ನು ಕಸಿದು ಕೊಂಡು ಬಿಟ್ಟ
ಆ ಹೆತ್ತ ತಾಯಿಯ ಗೋಳು ಹೇಳತೀರದು ..ಅವಳ ಕುಟುಂಬವಲ್ಲದೇ, ಅವಳ ಊರು ಅಷ್ಟೇಕೆ ,ಇಡೀ ರಾಜ್ಯವೇ ಮರುಗುತ್ತಿವೆ . ಪ್ರತಿಬಾವಂತ ವಿಧ್ಯಾರ್ಥಿನಿ ಯಾವ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದಳು ?ಹಿಂದಿನ ದಿನವಷ್ಟೇ ತಾಯಿಯ ಜೊತೆಗೆ ಮಾತನಾಡಿದ್ದಾಳೆ .. ಆ ವೈರಲ್ ಆದ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸಂದೇಶವನ್ನು ಒಮ್ಮೆ ಕೇಳಿದರೆ ಎಂತವರಿಗೂ ಸಹಾ ಅರ್ಥವಾಗುತ್ತದೆ . ಇಷ್ಟೆಲ್ಲಾ ಚೆನ್ನಾಗಿ ಮಾತಾಡಿದ ಈಕೆ ಮರುದಿನ ನೇಣಿಗೆ ಕೊರಳು ಒಡ್ಡುತ್ತಾಳೆ ಅಂದರೆ ? ನಿಜಕ್ಕೂ ಇಲ್ಲ ..! ಏನೂ ನಿಗೂಢತೆ ಗೋಚರಿಸುತ್ತದೆ .!. ಸಾವಿನ ರಹಸ್ಯದಲ್ಲಿ ಏನೋ ಅಡಗಿದೆ ..ಆತ್ಮಹತ್ಯೇ ಮಾಡಿಕೊಳ್ಳುವ ಮನಸ್ತಿತಿ ಅವಳದಲ್ಲ .. ಯಾವ ನಿರ್ದಿಷ್ಟವಾದ ಕಾರಣವೂ ಇಲ್ಲ ಎನ್ನುವ ಅವಳ ಕುಟುಂಬಿಕರು ಬಿಡಿ ಇಂದಿನ ದಿನದ ಆ ರೆಕಾರ್ಡಿಂಗ್ ಅನ್ನು ಒಮ್ಮೆ ಆಲಿಸಿದರೆ ಸಾಕು ಯೆಂತಾವರೂ ಸಹಾ ಅರ್ಥೈಸಿ ಕೊಳ್ಳಬಲ್ಲರು.
ಆತ್ಮಹತ್ಯೆ ಮಾಡಿಕೊಂಡಳು ಅಂದರೆ ಅಲ್ಲಿ ಆ ದಿನ ಏನಾಗಿತ್ತು ? ಯಾವುದೋ ಬಲವಾದ ಕಾರಣ ಅವಳನ್ನು ಪ್ರಚೋದಿಸಿತ್ತೆ ?
ಇದು ಆತ್ಮಹತ್ಯೇ ಅಲ್ಲಾ ಇದು ಹತ್ಯೆ ಎಂದು ಹೆತ್ತ ಕರುಳು ಮೂಗಿನ ನೇರಕ್ಕೆ ಪ್ರಶ್ನೆ ಮಾಡುತ್ತಿದೆ ..ಒಕ್ಕೊಲೋರಿಂದ ಕರಾವಳಿ ದ್ವನಿಗಳು ಬೊಬ್ಬೆ ಹೊಡೆಯುತ್ತಿದೆ .ಸಾಮಾಜಿಕ ಜಾಲ ತಾಣಗಳು ಹಗಲು ರಾತ್ರಿ ಅರಚುತ್ತಿವೆ ..! ಇಲ್ಲ ಕಾನೂನು ಕೈಕಟ್ಟಿ ಕೂತಿದೆ .
,ಎಂದಿನಂತೆ ಕೆಲ ವಿದ್ಯಾ ಸಂಸ್ತೆಗಳು ಇದು ಆತ್ಮಹತ್ಯೆ ನಮಗೆ ಗೊತ್ತಿಲ್ಲ ಲವ್ ಕೇಸ್ ಇರಬಹುದು ಎಂದು ಯಾಕೆ ಏನು ಎಂಬ ಸತ್ತ ವಿದ್ಯಾರ್ಥಿ ಬಗ್ಗೆ ಕಿಂಚಿತ್ ಚಿಂತಿಸದೇ ಸೀದಾ ಚಿತೆಗೆ ದಾರಿ ತೋರಿಸುವಳ ರೆಡಿ ಮೆಡ್ ಉತ್ತರ ಖ೦ಡಿತವಾಗಿಯೂ ನಾವು ಅಪೇಕ್ಷಿಸುವುದು ಸರ್ವೇ ಸಾಮಾನ್ಯ ..ಸಮಾಜವೂ ಕೂಡಾ ಅಷ್ಟೇ ಇದು ಯಾವುದೊ ಲವ್ ಕೇಸ್ ಅಂತ ಹಿಂದೂ ಮುಂದೂ ಆಲೋಚಿಸದೇ ಡಿಕ್ಲೇರ್ ಮಾಡಿ ಬಿಡುತ್ತದೆ .ಆದರೆ ಇಲ್ಲಿ ಇವಳಿನ್ನೂ ಕಾಲೇಜು ಕನ್ಯಾ ಅಲ್ಲ .. ಜಸ್ಟ್ ಹತ್ತನೇ ತರಗತಿಗೆ ಸೇರಿ ಅದೂ ಹೊಸ ಸಂಸ್ಥೆ ಕೇವಲ ಒಂದು ತಿಂಗಳುಗಳು ಕಳೆದಿವೆ ಅಷ್ಟೇ .ಒಂದು ಕ್ರೀಡಾ ಪಟುವಾಗಿ ಡಬ್ಬಲ್ ಗುಂಡಿಗೆ ಯನ್ನು ಹೊಂದಿರುವವರು ಆತ್ಮಹತ್ಯೆಗೆ ಶರಣಾಗುವುದು ಕನಸ್ಸಿನ ಮಾತು ಎಂದು ಬಲ್ಲವರು ಹೇಳುತ್ತಾರೆ .ಜಲೈ೨೦ ರಂದು ಇಹಲೋಕ ತ್ಯಜಿಸಿದ್ದಾಳೆ .
ಘಟನೆ ಸಂಬವಿಸಿದ್ದು ಸಂಜೆಯ ಸಮಯದಲ್ಲಿ ಹಾಸ್ಟೆಲ್ ನಲ್ಲಿ ರೂಂಮೆಟ್ ಗಳು , ವಾರ್ಡನ್ ಸೆಕುರಿಟಿ ಗಾರ್ಡ್ಸ್ ಎಲ್ಲಾರೂ ಕೂಡಾ ಅಲ್ಲಿರುತ್ತಾರೆ . ಒಳ ರೂಮಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಬಿಡಿ ಆಲೋಚಿಸುವುದಕ್ಕೂ ಕಷ್ಟಕರವಾಗುತ್ತದೆ . ಈ ಹಿಂದೆ ಇದೇ ಸಂಸ್ತೆ ಯಲ್ಲಿ ಕೆಲವು ಘಟನೆಗಳು ನಡೆದು ಹೋಗಿದೆ . ಆತ್ಮಹತ್ಯೆ ಎಂದೇ ದಾಖಲಾದರೂ ಅದಕ್ಕೆ ಪುಷ್ಟಿ ನೀಡುವಂತ ,ಪೂರಕವೆಂಬಂತೆ ಕೆಲವು ಕುರುಹುಗಳು ಸಿಕ್ಕಿದ್ದವು , ಮಹಡಿ ಮೇಲಿಂದ ಹಾರಿ ಪ್ರಾಣ ಕಳೆದು ಕೊಂಡಿದ್ದು .ಡೆತ್ ನೋಟ್ ಬರೆದು ಇಟ್ಟಿದ್ದು ಇತ್ಯಾದಿ ಇತ್ಯಾದಿ .ಇದರ ಒಳ ನೋಟ ಏನೇ ಇದ್ರೂ ಆತ್ಮಹತ್ಯೆ ಎಂಬುದನ್ನು ನಾವು ಅರಗಿಸಿಕೊಳ್ಳಲೆ ಬೇಕಿತ್ತು !!..ಆದರೆ ಇವತ್ತಿನದ್ದೂ ಪೂರ್ತಿ ದಿಪರೆಂಟ್ !..ಹಿಂದಿನ ದಿನ ಅದೆಷ್ಟು ಲವಲವಿಕೆ ಯಿಂದ ಮನೆಯವರೊಂದಿಗೆ ಮಾತಾಡಿದ್ದ ಕಾವ್ಯ ಮರುದಿನ ಅದು ಹೇಗೆ ನೇಣಿಗೆ ಕೊರಳು ಓಡ್ಡಿದ್ದಳು ? ಸಾಮಾಜೀಕ ಹಿತಾಸಕ್ತಿ ,ಕುಟುಂಬದವರ ರೋದನೆ ಬದಿಗಿರಿರಲಿ ಕೊಂಚ ಸೌಜನ್ಯತೆ ಗಾಗಿ ಆಥವಾ ತನ್ನ ಜವಾಬ್ದಾರಿಯುತ ಕರ್ತವ್ಯವೂ ಹೌದು ಎಂಬಂತೆ ತನಿಖೆ ಮಾಡಿಸಬಹುದಿತ್ತು ಸಂಸ್ತೆಯ ಸ್ಥಾಪಕ ಮೋಹನ್ ಆಳ್ವರವರು .ಅದು ಬದಿಗಿರಿ ತನಿಖೆ ನಡೆಸುತ್ತೇವೆ ಎಂಬ ಹಾರಿಕೆಯ ಮಾತನ್ನಾದರೂ ಹೇಳಬಹುದಿತ್ತು ..ಆದರೆ ಇಲ್ಲಿ ಎಲ್ಲವೂ ಉಲ್ಟಾ ಎಲ್ಲೋ ಎಸಿ ರೂಂ ನಲ್ಲಿ ಕೂತು “ಇಲ್ಲ ಇದು ಆತ್ಮಹತ್ಯೇ” ..ಎಂದು ಕಂಡೆಲೆಲ್ಲಾ ಹೇಳುತ್ತಿದ್ದ ಆಳ್ವರ ನಡವಳಿಕೆ ಎಷ್ಟು ಸರಿ ? ಅಲ್ಲಿ ಏನಾಗಿದೆ ?ಯಾಕಾಗಿದೆ ?ಎಂದು ಮುಂದಿನ ಸಂಸ್ಥೆ ಭವಿಷ್ಯಕ್ಕಾಗಿ ಹಾಗೂ ವ್ಯಾಸಂಗ ಮಾಡುತ್ತಿರುವ ೨೬೦೦೦ ವಿಧ್ಯಾರ್ಥಿಗಳ ಪೋಷಕರ ದೈರ್ಯಕ್ಕಾಗಿ ತಾವೇ ಈ ಘಟನೆಯ ವಿಚಾರದ ಬಗೆಗೆ ಮುಂದೆ ನಿಂತು ಖುದ್ದು ಬಗೆಹರಿಸಬಹುದಿತ್ತು. ಇದು ಆತ್ಮಹತ್ಯೆ ಎಂದು ಘಂಟಾ ಘೋಷವಾಗಿ ಹೇಳುವ ಬದಲು ,ಏನೂ ಅರಿಯದೇ ದುಖದಲ್ಲಿರುವ ಕಾವ್ಯಳ ತಂದೆ –ತಾಯಿಗೆ ದೈರ್ಯದ ಮಾತನ್ನು ಹೇಳಿ ತನಿಖೆಗೆ ಸಹಕರಿಸಿದ್ದರೆ ಇಂದು ಸಮಾಜದಲ್ಲಿ ಅವರೊಬ್ಬ ಹಿರೋ ಆಗ್ತಾ ಇದ್ದರು .! ಪಬ್ಲಿಕ್ ನಿಮ್ಮ ಮುಂದೆ ಶರಣಾಗುತ್ತಿತ್ತು “ನಾವೇಕೆ ಅವಳನ್ನು ಮರ್ಡರ್ ಮಾಡಬೇಕು ನಮಗೆ ಏನು ಲಾಭ ?” ಎಂದು ತಾವು ಹೇಳೋದು ಸರಿನೇ ಆದರೂ ಕೆಲಮೊಮ್ಮೆ ಮರ್ಡರ್ ತಮ್ಮಿಂದಲೇ ಆಗ್ಬೇಕು ಅಂತ ಇಲ್ಲಾ ಎಲ್ಲೋ ಅಚಾನಕ್ಕಾಗಿ ತಮಗೆ ಗೊತ್ತಿಲ್ಲದಂತೆಯೂ ಆಗಬಹುದಲ್ಲವೇ ? ಅಷ್ಟಕ್ಕೂ ತಮ್ಮ ಹತ್ತಿರ ಏನು ಸಾಕ್ಷಿ ಇದೇ ಇದು ಸುಸೈಡ್ ಯೇ ಅನ್ನಲಿಕ್ಕೆ ? ನಿಮ್ಮ ವೈರಿಗಳು ಯಾಕೆ ಹಾಸ್ಟೆಲ್ ಗೆ ನುಗ್ಗಿ ಕೊಲೆ ಮಾಡಿ ಅವಳನ್ನು ನೇಣಿಗೆ ಏರಿಸಿರಬಾರದು ನೀವೇ ಹೇಳಿದಂತೆ ಬಾಗಿಲು ಲಾಕ್ ಆಗಿತ್ತು ನಮ್ಮ ಹುಡುಗರು ಮೇಲೆ ಹಾರಿ ಕೆಳಗೆ ಇಳಿದು ಬಾಗಿಲನ್ನು ಓಪನ್ ಮಾಡಿದ್ದು ಅಂಥಾ! ಅದೇ ತರಹ ಕಾವ್ಯಳನ್ನು ಕೊಲೆ ಮಾಡಿ ಮಾಡಿ ತಪ್ಪಿತಸ್ತರು ಹಾಗೆ ಪರಾರಿಯಾಗಿರ ಬಾರದೇಕೆ ? ಒಟ್ಟಾರೆ ತಾವು ಮಾಡಿದ್ದೆಲ್ಲಾ ಸರಿ ಹೇಳಿದೆಲ್ಲವನ್ನೂ ಕೆಳುವುದಕ್ಕೆ ಪ್ರಜ್ಞಾವಂತರು ತಯಾರಿಲ್ಲ .
ಆತ್ಮಹತ್ಯೆ ಹೇಗೆ ಆಯಿತು ? ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೆಯಾದರೇ ಇದೇ ಕಾರಣವಾಗಿರಬಹುದೇ ? ಏನು ಎತ್ತ ಎಂದು ಅವಳ ಉತ್ತರ ಪತ್ರಿಕೆಯನ್ನು ಗಮನಿಸಿ ಪ್ರೋಗ್ರೆಸ್ ಮುಂದೆ ಇಡುಬಹುದಿತ್ತು ಆತ್ಮಾಹತ್ಯೆಗೆ ದೈಹಿಕ ಶಿಕ್ಷಕನೇ ಕಾರಣನಾಗಿರಬಹುದೇ ? ಎರಡರಲ್ಲಿ ಒಂದಂತೂ ಖಂಡಿತವಾಗಿಯೂ ಇದ್ದೆ ಇರುತ್ತದೆ ಇದನೆಲ್ಲವನ್ನೂ ಪರಿಶೀಲಿಸಿ ಸಾವಿನ ಅಂಶವನ್ನು ಪತ್ತೆಹಚ್ಚಿ ಗೊಂದಲಗಳಿಗೆ ತೆರೆ ಎಳೆಯಬೇಕಾದವರು ಇನ್ನಷ್ಟು ಗೋಜಲು ಗೋಜಲುಗಳನ್ನಾಗಿ ಮಾಡುತ್ತಿರುವವರ ಜವಾಬ್ದಾರಿನಾ ಇದು ? ಕ್ರೀಡಾ ಕೋಟದಲ್ಲಿ ತಮ್ಮ ಕಾಲೇಜಿಗೆ ತಾವುಗಳೇ ಒತ್ತಾಯ ಪೂರ್ವಕವಾಗಿ ಬರ ಹೇಳೀದ್ದು ,ಫ್ರೀಯಾಗಿ ಶಿಕ್ಷಣ ನೀಡುತ್ತೇವೆ ಎಂದು ಬಡಾಯಿ ಕೊಚ್ಚಿ ಕೊಳ್ಳುವುದನ್ನು ಬದಿಗಿಡಿ ..ಬಡವರ ಮನೆಯ ವಿಧ್ಯಾರ್ಥಿಗಳು ಎಂಬ ನಿರ್ಲಜ್ಜ ನಿರ್ಲಕ್ಷ ತನವೇಕೆ ?ಕಷ್ಟ ಪಟ್ಟು ಮಕ್ಕಳನ್ನು ಎಲ್ಲಿಂದಲೂ ಅವರ ಭವ್ಯ ಬವಿಷ್ಯಕ್ಕಾಗಿ ದೂರದ ವಿದ್ಯಾ ಸಂಸ್ಥೆಗೆ ಸೇರಿಸುತ್ತಾರೆ .. ಸೇರಿಸಿ ಕೊಳ್ಳುವವರ ಜವವ್ದಾರಿ ಅಷ್ಟೇ ಇರುತ್ತದೆ ತಮ್ಮ ಮಕ್ಕಳೆಂದೇ ಭಾವಿಸಬೇಕು ,ನಿಮ್ಮ ಮೇಲೆ ಜವಬ್ದಾರಿಯನ್ನು ಇರಿಸಿ ಕೊಂಡು ಇಷ್ಟು ದೂರ ಕಳಿಸಿದ್ದಾರೆ ಅವರನ್ನು ಉತ್ತಮ ರೀತಿಯಲ್ಲಿ ಮುತುವರ್ಜಿ ವಹಿಸಬೆಂಬ ಮನೋಬಾವನೆ ಬೆಳೆಯಬೇಕು .ಅದೇ ದಿಕ್ಕಿನಲ್ಲಿ ಕೊಂಚ ಗಮನ ಹರಿಸಬೇಕು ಅಲ್ಲವೇ ?. ತನ್ನ ಸಂಸ್ಥೆಗೆ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವಂತ ಕಾರ್ಯವಾಗುತ್ತಿದೆ ಎಂದೆನ್ನುವ ಆಳ್ವ ಅವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಇಲ್ಲಿ ಯಾರ ಮಾನ ಹರಾಜು ಆಗುತ್ತಿದ್ದೆ ಎಂದು ?” ಆತ್ಮತ್ಯೆಗೆ ಮಾಡಿಕೊಂಡಳು, ಇವರೆಲ್ಲ ಸ್ಪೋರ್ಟ್ಸ್ ಗೆ ಅನ್ಫಿಟ್” ಎಂದು ಕಂಡ- ಕಂಡಲ್ಲಿ ಉಸುರುತ್ತಿರುವ ಆಳ್ವರೇ ಇಲ್ಲಿ ಯಾರ ಮಾರ್ಯಾದೆ ಬೀದಿ ಪಾಲಾಗುತ್ತಿದೆ . ಸತ್ಯ ಗೊತ್ತಿಲ್ಲದ ನೀವು ಎಷ್ಟು ಸಹಜವಾಗಿ ಅವಳ ಮೇಲೆ ಗೂಬೆ ಕೂರುಸುತ್ತೀರಿ ..ರಾಷ್ಟ್ರ ಮಟ್ಟದಲ್ಲಿ ಆದಾಗಲೇ ಕೀರ್ತಿಯನ್ನು ಬೆಳಗಿಸಿದ ಕಾವ್ಯಳ ಎದುರು ನಿಮ್ಮದೇನು ಮಹಾ ?
ಕಾವ್ಯ ಮುಂಜಾನೆ ಪ್ರಾಕ್ಟಿಸ್ ಮಾಡಿದ್ದು ಕಾಲೇಜಿಗೆ ಹೋಗಿದ್ದು ಬಂದಿದ್ದು ಎಲ್ಲಾ ರೆಕಾರ್ಡ್ ಆದ ಸಿಸಿಟಿವಿಯೆ ಪೂಟೇಜ್ ಗಳು ಬಿಡುಗಡೆ ಗೊಂಡಿದೆ ಅದೇ ಅವಘಡ ಸಂಬವಿಸಿದ್ದರ ನೇಣಿನಿಂದ ಕುಣಿಕೆ ಸಡಿಲಿಸಿದ್ದೂ ,ನಾಲ್ಕನೇ ಪ್ಲ್ಲೋರಿಂದ ಆಸ್ಪತ್ರೆ ದಾಖಲಿಸಿದ್ದರ ಪೂಟೇಜ್ ಯಾಕೆ ಬಿಡುಗಡೆ ಗೊಂಡಿಲ್ಲ ? ಮೊದಲು ನೋಡಿದ ಅವಳ ಕ್ಲಾಸ್ ಮೇಟ್ ಗಳನ್ನು ಯಾಕೆ ಮಾಧ್ಯಮಗಳ ಮುಂದೆ ಕೂರಿಸಿಲ್ಲ . ? ಇನ್ನು ಬೆಳಿಗ್ಗೆ 4.15 ರಿಂದ ಪ್ರಾಕ್ಟಿಸ್ ಇರುತ್ತದೆ ಎಂದ ಕಾವ್ಯಾನ್ನು ಅಷ್ಟು ಬೇಗ ಕರೆದಿದ್ದರ ಉದ್ದೇಶ ಏನು ? ಇದಕ್ಕೆಲ್ಲಾ ಸೂತ್ರದಾರ ದೈಹಿಕ ಶಿಕ್ಷಕ ಇರಬಹುದೇ ? ಇಷ್ಟೆಲ್ಲಾ ಸಂದೇಹಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದರೂ ಯಾಕೆ ಇನ್ನೂ ದೈಹಿಕ ಶಿಕ್ಷಕನನ್ನು ಮಂಪರು ಪರೀಕ್ಷೆಗೆ ಒಳ ಪಡಿಸಲಿಲ್ಲ , ? ಎಲ್ಲಕ್ಕಿಂತ ಮೊದಲು ಈ ಕಾರ್ಯ ಆಗಬೇಕಿದೆ ಆಗ ನಿಖರವಾದ ಸತ್ಯ ಸಂಗತಿ ಹೊರಗೆ ಬೀಳ ಬಹುದೇನೋ ? ನ್ಯಾಯ ಸಿಗಬಹುದೇನೋ ?ಆದರೆ ಸತ್ತು ಸ್ವರ್ಗ ಸೇರಿದ ಕಾವ್ಯ ಇನ್ನೆಂದೂ ಬರಲಾರಳು !ಆ ಪುಟ್ಟ ಕೈಗಳಲ್ಲಿ ಬ್ಯಾಡ್ಮಿಂಟನ್ ನ್ನು ಆಸ್ಪಾದಿಸುವುದು ಅಸಾದ್ಯ ..ಆದರೆ ಈ ಹೋರಾಟಗಳು ಮುಂದೊಂದು ಕಾವ್ಯಳನ್ನು ಉಳಿಸಿ ಕೊಳ್ಳಲು ಮಾದರಿ ಯಾಗಬುಹುದು .
ಬುದ್ದಿವಂತರ ಜಿಲ್ಲೆ ಎಂದು ಕರೆಯಿಸಿ ಕೊಂಡ ಈ ನಾಡಿನಲ್ಲಿ ಅದೆಷ್ಟೋ ವಿಧ್ಯಾರ್ಥಿನಿಯರು ಹೇಳ ಹೆಸರಿಲ್ಲದಂತೆ ನಿಗೂಢವಾಗಿ ಸಾವಿನ ಕದ ತಟ್ಟಿದ್ದಾರೆ .. ವಂಶಿ ,ಸೌಜನ್ಯ ,ರತ್ನ ,ಅಕ್ಷತಾ ಇವರೆಲ್ಲಾ ಸಾವಿನ ಹಿಂದೆ ಇದೇ ರೀತಿಯ ಅನುಮಾನಗಳಿದ್ದವು ..ಪ್ರತಿಭಟನೆಗಳು ನಡೆದವು ,ಸಿಐಡಿ ,ಸಿಬಿಐ ನಂತಹ ದೊಡ್ಡ ದೊಡ್ಡ ಪೋಲಿಸ್ ಇಲಾಖೆಯ ಫೈಲ್ ಸೇರಿದ್ದವು. ಆದ್ರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ . ನ್ಯಾಯ ದೇವೆತೆ ಕಣ್ಣು ತೆರೆಯಲೇ ಇಲ್ಲ .....!ಇದಕ್ಕೆ ಇನ್ನೊಂದು ಸೇರ್ಪಡೆ ಕಾವ್ಯಾ ..! ಈ ಘಟನೆಗಳು ನಿತ್ಯ ನಿರಂತರವೇ ? ಇದಕ್ಕೆಲ್ಲಾ ಪುಲ್ ಸ್ಟಾಪ್ ಇಡುವವರು ಯಾರು ? ಎಲ್ಲವೂ ಉತ್ತರ ಇಲ್ಲದ ಯಕ್ಷ ಪ್ರಶ್ನೆ !!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ